Tag: ವಲಸಿಗರು

  • 46 ಅಕ್ರಮ ವಲಸಿಗರ ಶವ ಟ್ರ್ಯಾಕ್ಟರ್‌ನಲ್ಲಿ ಪತ್ತೆ

    46 ಅಕ್ರಮ ವಲಸಿಗರ ಶವ ಟ್ರ್ಯಾಕ್ಟರ್‌ನಲ್ಲಿ ಪತ್ತೆ

    ವಾಷಿಂಗ್ಟನ್: ಟೆಕ್ಸಾಸ್‍ನ ನೈರುತ್ಯ ಸ್ಯಾನ್ ಆಂಟೋನಿಯೊದ ರಸ್ತೆಯಲ್ಲಿ ಮೆಕ್ಸಿಕೊದಿಂದ ಅಮೆರಿಕಕ್ಕೆ ನುಸುಳುತ್ತಿದ್ದ 46 ಅಕ್ರಮ ವಲಸಿಗರ ಶವ ನಿಂತಿದ್ದ ಟ್ರ್ಯಾಕ್ಟರ್ ಟ್ರೇಲರ್‌ನಲ್ಲಿ ಪತ್ತೆಯಾದ ಘಟನೆ ನಡೆದಿದೆ.

    ಈ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಲಸಿಗರ ತಂಡದಲ್ಲಿದ್ದ ನಾಲ್ವರು ಮಕ್ಕಳು ಸೇರಿದಂತೆ 16 ಮಂದಿಯನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ಸೇರಿಸಲಾಗಿದೆ. ಟ್ರೇಲರ್‌ನಲ್ಲಿರುವವರು ದಕ್ಷಿಣ ಟೆಕ್ಸಾಸ್‍ನಲ್ಲಿ ವಲಸಿಗರು ಅಮೆರಿಕಕ್ಕೆ ಅಕ್ರಮವಾಗಿ ಗಡಿ ಪ್ರವೇಶ ಮಾಡುವ ಪ್ರಯತ್ನದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಇವರೆಲ್ಲರೂ ಉಷ್ಣತೆ ಹಾಗೂ ನಿರ್ಜಲೀಕರಣಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದರು.

    ಘಟನೆಗೆ ಸಂಬಂಧಿಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಅವರು ಅಕ್ರಮವಾಗಿ ಗಡಿಯೊಳಗೆ ನುಗ್ಗುವವರ ಸಂಪರ್ಕ ಹೊಂದಿದ್ದಾರೆಯೇ ಎನ್ನುವುದು ಇನ್ನೂ ಪತ್ತೆ ಆಗಿಲ್ಲ. ಘಟನೆಗೆ ಸಂಬಂಧಿಸಿ ಯುಎಸ್ ಹೋಮ್‍ಲ್ಯಾಂಡ್ ಸೆಕ್ಯುರಿಟಿ ಇನ್ವೆಸ್ಟಿಗೇಷನ್ಸ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.  ಇದನ್ನೂ ಓದಿ: ಶಿಕ್ಷಣ ಇಲಾಖೆಗೆ ಹೊಸ ವೆಬ್‌ಸೈಟ್‌ – ಸಚಿವರಿಗೆ ನೀವೇ ದೂರು ಕೊಡಬಹುದು

    ಇತ್ತೀಚಿನ ದಶಕಗಳಲ್ಲಿ ಮೆಕ್ಸಿಕೋದಿಂದ ಅಮೆರಿಕ ಗಡಿಯನ್ನು ದಾಟಲು ಸಾವಿರಾರು ಮಂದಿ ಪ್ರಯತ್ನಿಸುತ್ತಿದ್ದಾರೆ. 2017ರಲ್ಲಿ ಸ್ಯಾನ್ ಆಂಟೋನಿಯೊದಲ್ಲಿನ ವಾಲ್‍ಮಾರ್ಟ್‍ನಲ್ಲಿ ನಿಲ್ಲಿಸಲಾಗಿದ್ದ ಟ್ರಕ್‍ನೊಳಗೆ ಹತ್ತು ವಲಸಿಗರು ಸಾವನ್ನಪ್ಪಿದರು. 2003ರಲ್ಲಿ 19 ವಲಸಿಗರ ಶವ ಸ್ಯಾನ್ ಆಂಟೋನಿಯೊದ ಆಗ್ನೇಯ ಟ್ರಕ್‍ನಲ್ಲಿ ಪತ್ತೆ ಆಗಿತ್ತು. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಹ್ವಾನಿಸಲು ಸಿದ್ದರಾಮಯ್ಯ ತೀರ್ಮಾನ

    Live Tv

  • ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ

    ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ

    ಮೆಕ್ಸಿಕೋ: ವಲಸಿಗರನ್ನು ಹೊತ್ತು ಸಾಗುತ್ತಿದ್ದ ಟ್ರಕ್ ಪಲ್ಟಿಯಾಗಿ 49 ಮಂದಿ ಸಾವನ್ನಪ್ಪಿದ್ದು, 58 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಮೆಕ್ಸಿಕೋದಲ್ಲಿ ನಡೆದಿದೆ.

    ಈ ಕುರಿತಂತೆ ರಾಜ್ಯ ನಾಗರಿಕ ರಕ್ಷಣಾ ಕಚೇರಿಯ ಮುಖ್ಯಸ್ಥ ಲೂಯಿಸ್ ಮ್ಯಾನುಯೆಲ್ ಮೊರೆನೊ ಅವರು, ಘಟನೆಯಲ್ಲಿ 49 ಮಂದಿ ಸಾವನ್ನಪ್ಪಿದ್ದು, 58 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿಯೂ 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾವತ್, ಸೇನಾಧಿಕಾರಿಗಳ ಮರಣ ಸಂಭ್ರಮಿಸಿದ ಕಿಡಿಗೇಡಿಗಳ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ

    ಮಧ್ಯ ಅಮೆರಿಕದಿಂದ ಬಂದ ವಲಸಿಗರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಟ್ರೈಲರ್ ಗುರುವಾರ ಚಿಯಾಪಾಸ್ ರಾಜ್ಯದ ರಾಜಧಾನಿ ಟಕ್ಸ್‌ಟ್ಲಾ ಗುಟೈರೆಜ್ ಕಡೆಗೆ ತೆರಳುವಾಗ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಆದರೆ ಮೃತರನ್ನು ತಮ್ಮ ರಾಷ್ಟ್ರದವರೆಂದು ಅಲ್ಲಿನ ಸರ್ಕಾರ ದೃಢಪಡಿಸಿಲ್ಲ. ಇನ್ನೂ ಅಪಘಾತದಲ್ಲಿ ಬದುಕುಳಿದಿರುವ ಕೆಲವರನ್ನು ನೆರೆಯ ದೇಶವಾದ ಗ್ವಾಟೆಮಾಲಾದಿಂದ ಬಂದವರು ಎಂದು ಮೊರೆನೊ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಯುವ ಮುಖಂಡನನ್ನು ಚಾಕುವಿನಿಂದ ಇರಿದು ಕೊಂದ್ರು!

    ಟ್ರಕ್‍ನಲ್ಲಿ ಬಹಳಷ್ಟು ಜನ ಇದ್ದಿದ್ದರಿಂದ ಹೆಚ್ಚಿನ ಭಾರವೇ ಅಪಘಾತಕ್ಕೆ ಕಾರಣವಾಗಿರಬಹುದು. ಇನ್ನೂ ಘಟನೆ ವೇಳೆ 107 ಮಂದಿ ಟ್ರಕ್‍ನಲ್ಲಿದ್ದರು. ದಕ್ಷಿಣ ಮೆಕ್ಸಿಕೋದಲ್ಲಿ ಸರಕು ಸಾಗಣೆ ಟ್ರಕ್‍ಗಳಲ್ಲಿ ವಲಸಿಗರ ಕಳ್ಳಸಾಗಣೆ ಸಾಮಾನ್ಯವಾಗಿದ್ದು, ಇದೇ ರೀತಿ ನಡೆದಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದ ವೇಳೆ ಸಾಕಷ್ಟು ಮಂದಿ ವಲಸಿಗರಿದ್ದರು. ಮತ್ತೆ ಕೆಲ ವಲಸಿಗರು ಬಂಧನ ಭೀತಿಯಿಂದ ಅಪಘಾತ ಸ್ಥಳದಿಂದ ಪರಾರಿಯಾಗಿದ್ದಾರೆ.

  • ವಲಸಿಗರ ಟೆಸ್ಟಿಂಗ್ ಗೆ ಬಿಗಿ ಕ್ರಮ – ಅರುಣ್ ಸಿಂಗ್ ಸಭೆಗೆ ಸಂಪೂರ್ಣ ಸಹಕಾರ – ಸಿಎಂ ಯಡಿಯೂರಪ್ಪ

    ವಲಸಿಗರ ಟೆಸ್ಟಿಂಗ್ ಗೆ ಬಿಗಿ ಕ್ರಮ – ಅರುಣ್ ಸಿಂಗ್ ಸಭೆಗೆ ಸಂಪೂರ್ಣ ಸಹಕಾರ – ಸಿಎಂ ಯಡಿಯೂರಪ್ಪ

    ಬೆಂಗಳೂರು: ಎರಡು ದಿನಗಳ ಹಾಸನ, ಶಿವಮೊಗ್ಗ ಜಿಲ್ಲೆಗಳ ಪ್ರವಾಸ ಮುಗಿಸಿ ಸಿಎಂ ಯಡಿಯೂರಪ್ಪ ಇಂದು ಮಧ್ಯಾಹ್ನ ಬೆಂಗಳೂರಿಗೆ ವಾಪಸಾದರು. ಈ ಸಂದರ್ಭದಲ್ಲಿ ಕಾವೇರಿ ನಿವಾಸದೆದುರು ಮಾತಾಡಿದ ಸಿಎಂ, ಬೆಂಗಳೂರಿಗೆ ಮರಳುತ್ತಿರುವ ವಲಸಿ ಕಾರ್ಮಿಕರು, ಉದ್ಯೋಗಿಗಳಿಗೆ ಟೆಸ್ಟಿಂಗ್ ಮಾಡಲು ಬಿಗಿ ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಮಾಧ್ಯಮದವರ ಸಲಹೆಯನ್ನು ಪಾಲಿಸಲಿದ್ದು, ಬಿಗಿ ಟೆಸ್ಟಿಂಗ್ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ಕೊಟ್ಟರು.

    ಇನ್ನು ಮಾತು ಮುಂದುವರೆಸಿದ ಸಿಎಂ, ಮುಂದಿನ ವಾರ ಮುಂದಿನ ವಾರ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅರುಣ್ ಸಿಂಗ್ ಎರಡು ಮೂರು ದಿನ ರಾಜ್ಯದಲ್ಲಿದ್ದು,ಶಾಸಕರು, ಸಚಿವರು, ಸಂಸದರ ಜತೆ ಚರ್ಚೆ ಮಾಡ್ತಾರೆ. ಆ ಮೂಲಕ ರಾಜ್ಯದ ಸ್ಥಿತಿಗತಿ ಬಗ್ಗೆ ಅರುಣ್ ಸಿಂಗ್ ಚರ್ಚೆ ಮಾಡ್ತಾರೆ. ಅರುಣ್ ಸಿಂಗ್ ರವರು ಬಂದಾಗ ನಾನು ಪೂರ್ಣವಾಗಿ ಸಹಕರಿಸ್ತೇನೆ ಅಂತ ಇದೇ ವೇಳೆ ತಿಳಿಸಿದರು.

    ಶಾಲಾ ಶುಲ್ಕ ಬಗ್ಗೆ ಚರ್ಚಿಸಿ ತೀರ್ಮಾನ
    ಖಾಸಗಿ ಶಾಲೆಗಳ ಶುಲ್ಕ ಗೊಂದಲದ ಬಗ್ಗೆ ಮಾತಾಡಿದ ಸಿಎಂ, ಶುಲ್ಕದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರ ಜತೆ ಚರ್ಚೆ ಮಾಡ್ತೇನೆ. ಖಾಸಗಿ ಶಾಲೆಗಳ ಕಷ್ಟ ಸುಖ ಏನಿದೆ ಅಂತ ನೋಡ್ಕೊಂಡು ಕಾನೂನು ಚೌಕಟ್ಟಿನಲ್ಲಿ ತೀರ್ಮಾನ ಮಾಡ್ತೇವೆ ಅಂತ ಸಿಎಂ ಯಡಿಯೂರಪ್ಪ ಭರವಸೆ ನೀಡಿದರು. ಇದನ್ನೂ ಓದಿ: ನಾಳೆಯಿಂದ ದೆಹಲಿಯಲ್ಲಿ ಅನ್‍ಲಾಕ್ – ಹೋಟೆಲ್‍ಗಳಲ್ಲಿ ಶೇ.50, ಮಾಲ್ ಫುಲ್ ಓಪನ್

    ತಮ್ಮ ಹಾಸನ, ಶಿವಮೊಗ್ಗ ಜಿಲ್ಲೆಗಳ ಪ್ರವಾಸದ ಬಗ್ಗೆ ಹೇಳಿದ ಸಿಎಂ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಬರ್ತಿದ್ದೇನೆ. ಇನ್ಮುಂದೆ ವಾರಕ್ಕೊಮ್ಮೆ ಜಿಲ್ಲೆಗಳಿಗೆ ಪ್ರವಾಸ ಮಾಡ್ತೇನೆ. ಆ ಮೂಲಕ ಜಿಲ್ಲೆಗಳಲ್ಲಿ ಕೋವಿಡ್, ಅಭಿವೃದ್ಧಿ ಪರಿಶೀಲನೆ ಮಾಡ್ತೇನೆ ಅಂದ್ರು. ಹಾಸನದಲ್ಲಿ ಏರ್ ಪೋರ್ಟ್ ನಿರ್ಮಾಣ ಕೆಲಸ ನಡೀತಿದೆ. ಶಿವಮೊಗ್ಗ ಏಜೆನ್ಸಿಯವ್ರಿಗೆ ಕಾಮಗಾರಿ ಕೊಟ್ಟು ಬೇಗ ಮುಗಿಸಲು ತಿಳಿಸಿದ್ದೇವೆ. ಶೀಘ್ರದಲ್ಲೇ ನಾನು ಮತ್ತು ದೇವೇಗೌಡರು ಅಲ್ಲಿಗೆ ತೆರಳಿ ಶಂಕುಸ್ಥಾಪನೆ ಮಾಡ್ತೇವೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ತಿಳಿಸಿದರು. ಇದನ್ನೂ ಓದಿ: ಗಂಡ ಹೆಂಡತಿ ಮಧ್ಯೆಯೇ ಅಸಮಾಧಾನ ಇರುತ್ತೆ, ಅಂಥಾದ್ರಲ್ಲಿ ಇಷ್ಟು ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಾಮಾನ್ಯ – ಸುಧಾಕರ್

    ದಿಗ್ವಿಜಯ ಸಿಂಗ್ ರ ಆರ್ಟಿಕಲ್ 370 ಮರು ಪರಿಶೀಲನೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ತಿರುಕನ ಕನಸು ಕಾಣುವವರಿಗೆ ನಾನು ಏನೂ ಹೇಳೋದಿಲ್ಲ. ಅವರ ನಾಯಕತ್ವದ ಕೊರತೆಯಿಂದ ಅವರ ಪಕ್ಷ ಎಲ್ಲಿದೆ ಅನ್ನೋದು ಗೊತ್ತಿದೆ. ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ಅನ್ನೋದು ಎಲ್ಲರೂ ಗಮನಿಸಿದ್ದಾರೆ ಅಂತ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ರು. ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಕೆ ಮಾಡ್ತೀರಾ ಎಂಬ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ಕೊಡದೇ ಕೈ ಮುಗಿದು ಹೊರಟರು.

  • 11 ಪಾಕ್ ಹಿಂದೂ ವಲಸಿಗರ ಶವ ರಾಜಸ್ಥಾನದಲ್ಲಿ ಪತ್ತೆ

    11 ಪಾಕ್ ಹಿಂದೂ ವಲಸಿಗರ ಶವ ರಾಜಸ್ಥಾನದಲ್ಲಿ ಪತ್ತೆ

    ಜೈಪುರ: 11 ಪಾಕ್ ಹಿಂದೂ ವಲಸಿಗರ ಮೃತದೇಹ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿವೆ. ಈ ಎಲ್ಲ 11 ಜನರು ಜೋಧಪುರ ನಗರದಿಂದ 100 ಕಿಲೋ ಮೀಟರ್ ದೂರದಲ್ಲಿರುವ ಲೊಡ್ತಾ ಗ್ರಾಮದ ಹೊರ ವಲಯದಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದರು. ಇಬ್ಬರು ಪುರುಷರು, ನಾಲ್ವರು ಮಹಿಳೆಯರು ಮತ್ತು ಐದು ಮಕ್ಕಳು ಸಾವನ್ನಪ್ಪಿದ್ದಾರೆ.

    11 ಜನರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶನಿವಾರ ರಾತ್ರಿ ಎಲ್ಲರ ಸಾವು ಆಗಿದೆ. ರಾತ್ರಿ ಕೆಮಿಕಲ್ ಸೇವಿಸಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಗಳು ಮೇಲ್ನೋಟಕ್ಕೆ ಕಂಡು ಬಂದಿವೆ. ಘಟನಾ ಸ್ಥಳದಲ್ಲಿ ಅಂದ್ರೆ ಗುಡಿಸಲಿನಲ್ಲಿ ಕೆಲ ಕೆಮಿಕಲ್ ಬಾಟಲ್ ಗಳು ಲಭ್ಯವಾಗಿವೆ ಎಂದು ಎಸ್.ಪಿ. ರಾಹುಲ್ ಬಾರ್ತಾ ಹೇಳಿದ್ದಾರೆ.

    ಮೃತರೆಲ್ಲರೂ ಬಿಹಲ್ ಸಮುದಾಯಕ್ಕೆ ಸೇರಿದವರಾಗಿದ್ದು, 2015ರಲ್ಲಿ ದೀರ್ಘಾವಧಿಯ ವೀಸಾ ಪಡೆದು ಪಾಕಿಸ್ತಾನ ಸಿಂಧ್ ಪ್ರಾಂತ್ಯದಿಂದ ರಾಜಸ್ಥಾನಕ್ಕೆ ಬಂದಿದ್ದರು. ಕಳೆದ ಆರು ತಿಂಗಳಿನಿಂದ ಲೋಡ್ತಾ ಗ್ರಾಮದಲ್ಲಿ ವಾಸವಾಗಿ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು.

    ಶನಿವಾರ ರಾತ್ರಿ ಈ 11 ಜನರ ನಡುವೆ ಗಲಾಟೆ ನಡೆದಿರಬಹುದು. ಹಾಗಾಗಿ ಎಲ್ಲರೂ ಸಾಮೂಹಿಕ ಆತ್ಮಹತ್ಯೆ ಶರಣಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಎಲ್ಲ ಶವಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ಲಭ್ಯವಾಗಿರು ರಾಸಾಯನಿಕ ಮಾದರಿಯನ್ನು ಫೊರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ರಾಹುಲ್ ಬಾರ್ತಾ ಮಾಹಿತಿ ನೀಡಿದ್ದಾರೆ.

    ಶನಿವಾರ ರಾತ್ರಿ 9 ಗಂಟೆಗೆ ಎಲ್ಲರೂ ಊಟ ಮಾಡಿದ್ರು. ನಾನು 10 ಗಂಟೆಗೆ ಬೆಳೆಯ ಕಾವಲು ಕಾಯುದಕ್ಕಾಗಿ ತೋಟಕ್ಕೆ ಹೋದೆ. ಬೆಳಗ್ಗೆ ಬರೋಷ್ಟರಲ್ಲಿ ಎಲ್ಲರೂ ಸಾವನ್ನಪ್ಪಿದ್ರು, ಕೂಡಲೇ ಸಂಬಂಧಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಆತ ಕೆಲ ಗ್ರಾಮಸ್ಥರೊಂದಿಗೆ ಬಂದನು. ಹಾಗೆ ಪೊಲೀಸರಿಸಗೂ ವಿಷಯ ತಿಳಿಸಲಾಯ್ತು ಎಂದು ಈ ಜನರೊಂದಿಗೆ ವಾಸವಾಗಿದ್ದ ಕೆವಲ್ ರಾಮ್ ಹೇಳಿದ್ದಾರೆ.

  • 1,200 ವಲಸಿಗರನ್ನ ಹೊತ್ತು ಪ್ರಯಾಣ ಆರಂಭಿಸಿದ ರೈಲು

    1,200 ವಲಸಿಗರನ್ನ ಹೊತ್ತು ಪ್ರಯಾಣ ಆರಂಭಿಸಿದ ರೈಲು

    ಹೈದರಾಬಾದ್: ವಿಶೇಷ ರೈಲು 1,200 ವಲಸಿಗರನ್ನು ಹೊತ್ತು ತೆಲಂಗಾಣದಿಂದ ಪ್ರಯಾಣ ಆರಂಭಿಸಿದೆ.

    ಕೋವಿಡ್-19 ಲಾಕ್‍ಡೌನ್‍ನಿಂದಾಗಿ ದೇಶಾದ್ಯಂತ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ಸೇರಿದಂತೆ ಅನೇಕರು ವಿವಿಧ ನಗರಗಳಲ್ಲಿ ಸಿಲುಕಿದ್ದರು. ಅವರ ಸಂಚಾರಕ್ಕೆ ಈಗಾಗಲೇ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಹೀಗಾಗಿ ತೆಲಂಗಾಣದಿಂದ ಜಾರ್ಖಂಡ್‍ಗೆ ವಲಸಿಗರನ್ನು ಹೊತ್ತು ರೈಲು ಶುಕ್ರವಾರ ಪ್ರಯಾಣ ಬೆಳೆಸಿದೆ.

    ಸುಮಾರು 1,200 ವಲಸಿಗರನ್ನು ಕರೆದೊಯ್ಯುವ ರೈಲು ತೆಲಂಗಾಣದ ಲಿಂಗಂಪಲ್ಲಿಯಿಂದ ಜಾರ್ಖಂಡ್‍ನ ಹತಿಯಾಗೆ ಹೊರಟಿದೆ. ಬೆಳಗ್ಗೆ 4:50ಕ್ಕೆ ರೈಲು ಪ್ರಯಾಣ ಆರಂಭಿಸಿದೆ. ಈ ರೈಲು 24 ಬೋಗಿಗಳನ್ನು ಹೊಂದಿದ್ದು, ಇದೂವರೆಗೆ ವಲಸಿಗರನ್ನು ಕರೆದೊಯ್ಯಲು ನಿಯೋಜಿಸಿದ ಏಕೈಕ ರೈಲು ಇದಾಗಿದೆ ಎಂದು ರೈಲ್ವೆ ಸಂರಕ್ಷಣಾ ಪಡೆ  ಮಹಾನಿರ್ದೇಶಕರು ತಿಳಿಸಿದ್ದಾರೆ.

    ತೆಲಂಗಾಣ ಸರ್ಕಾರದ ಕೋರಿಕೆ ಮತ್ತು ರೈಲ್ವೆ ಸಚಿವಾಲಯದ ನಿರ್ದೇಶನದ ಮೇರೆಗೆ ಹೈದರಾಬಾದ್‍ನ ಲಿಂಗಂಪಳ್ಳಿಯಿಂದ ಜಾರ್ಖಂಡ್‍ನ ಹತಿಯಾಗೆ ವಿಶೇಷ ರೈಲು ಓಡಿಸಲಾಗಿದೆ.

  • ಮಡಿಕೇರಿಯಲ್ಲಿ ಅಕ್ರಮ ವಲಸಿಗರ ವಾಸ್ತವ್ಯ ಶಂಕೆ

    ಮಡಿಕೇರಿಯಲ್ಲಿ ಅಕ್ರಮ ವಲಸಿಗರ ವಾಸ್ತವ್ಯ ಶಂಕೆ

    ಮಡಿಕೇರಿ: ಕೊಡಗು ಜಿಲ್ಲೆ ಸೌಂದರ್ಯಕ್ಕೆ ಹೆಸರುವಾಸಿ. ಅದರ ಸೌಂದರ್ಯ ಹೆಚ್ಚುತ್ತಿರುವುದು ಕಾಫಿ ತೋಟದಿಂದಲೇ ಎಂದರೆ ತಪ್ಪಾಗಲಾರದು. ಆದರೆ ಇಲ್ಲಿನ ಬಹುತೇಕ ಕಾಫಿ ತೋಟಗಳಲ್ಲಿ ಕಾರ್ಮಿಕರ ಕೊರತೆ ಹೆಚ್ಚಿದೆ. ಆದ್ದರಿಂದ ಮಧ್ಯವರ್ತಿಗಳು ಕಡಿಮೆ ಕೂಲಿ ನೀಡಿ ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳದಿಂದ ಭಾರೀ ಪ್ರಮಾಣದಲ್ಲಿ ಕಾರ್ಮಿಕರನ್ನು ತಂದು ಬಿಡುತ್ತಿದ್ದಾರೆ. ಈಗ ಕೊಡಗಿನಲ್ಲಿ ಉತ್ತರ ಭಾರತದ ಮಂದಿಯೇ ತುಂಬಿಕೊಂಡಿದ್ದು, ಇವರ ಹಾವಳಿಯಿಂದಾಗಿ ಸ್ಥಳೀಯರು ಸಮಸ್ಯೆ ಅನುಭವಿಸುತ್ತಿದ್ದಾರೆ.

    ಕೊಡಗಿನಲ್ಲಿ ಬಾಂಗ್ಲಾದ ಅಕ್ರಮ ನಿವಾಸಿಗಳು ವಾಸವಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಕೊಡಗಿನ ವಿರಾಜಪೇಟೆಯಲ್ಲಿ ಅಕ್ರಮ ಬಾಂಗ್ಲಾ ಪ್ರಜೆಯನ್ನು 2018ರಲ್ಲಿ ಬಂಧಿಸಲಾಗಿತ್ತು. ಈಗ ಮತ್ತದೇ ಗುಮಾನಿ ಹುಟ್ಟಿಕೊಂಡಿದ್ದು, ಹೊರರಾಜ್ಯದ ಕಾರ್ಮಿಕರ ಜೊತೆ ಬಾಂಗ್ಲಾ ವಲಸಿಗರೂ ಸೇರಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಇತ್ತೀಚೆಗಷ್ಟೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಹೊರರಾಜ್ಯದ ಕಾರ್ಮಿಕರ ವಿರುದ್ಧ ದೂರು ನೀಡುತ್ತಿದ್ದಂತೆ ಅವರು ನಾಪತ್ತೆಯಾಗಿದ್ದಾರೆ.

    ಕಡಿಮೆ ಕೂಲಿಗೆ ಹೊರರಾಜ್ಯದ ಕಾರ್ಮಿಕರು ಬರುತ್ತಿರುವುದರಿಂದ ಅವರನ್ನೇ ಹೆಚ್ಚಿನ ಪ್ರಮಾಣದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ. ಈ ವಲಸಿಗರಿಂದ ಜಿಲ್ಲೆಯಲ್ಲಿ ಅತೀ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಜಿಲ್ಲೆಯ ಕಾಫಿತೋಟಗಳಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯದ ಕಾರ್ಮಿಕರ ಬಳಿ ದೇಶದ ಪ್ರಜೆಗಳೇ ಎಂಬುದಕ್ಕೆ ಸೂಕ್ತ ದಾಖಲೆಗಳು ಇವೆಯೇ ಎಂಬುದನ್ನು ಪರೀಕ್ಷಿಸಬೇಕಾಗಿದೆ.

    ಒಟ್ಟಿನಲ್ಲಿ ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ಅರಸಿ ಬರುತ್ತಿರೋ ಹೊರರಾಜ್ಯದ ಕಾರ್ಮಿಕರಲ್ಲಿ ಬಾಂಗ್ಲಾ ವಲಸಿಗರು ಇದ್ದಾರೆ ಅನ್ನೋ ದಟ್ಟ ಅನುಮಾನಗಳಿವೆ. ಕಾರ್ಮಿಕರ ಐಡೆಂಟಿಟಿಗೆ ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುತ್ತಾ ಕಾದು ನೋಡಬೇಕಿದೆ.