Tag: ವರ

  • ಮದ್ವೆಗೆ ನಾಲ್ಕು ದಿನ ಇದ್ದಾಗ ದುಷ್ಕರ್ಮಿಗಳು ವರನ ಮರ್ಮಾಂಗ ಕತ್ತರಿಸಿ ತೆಗೆದುಕೊಂಡು ಹೋದ್ರು!

    ಮದ್ವೆಗೆ ನಾಲ್ಕು ದಿನ ಇದ್ದಾಗ ದುಷ್ಕರ್ಮಿಗಳು ವರನ ಮರ್ಮಾಂಗ ಕತ್ತರಿಸಿ ತೆಗೆದುಕೊಂಡು ಹೋದ್ರು!

    ಭೋಪಾಲ್: 25 ವರ್ಷದ ಯುವಕನೊಬ್ಬನ ಮರ್ಮಾಂಗವನ್ನ ದುಷ್ಕರ್ಮಿಗಳು ಕತ್ತರಿಸಿ ತೆಗೆದುಕೊಂಡು ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.

    ಫೆಬ್ರವರಿ 6ರಂದು 25 ವರ್ಷದ ಯುವಕನ ಮದುವೆ ನಿಶ್ಚಯವಾಗಿತ್ತು. ಫೆಬ್ರವರಿ 1ರಂದು ಯುವಕ ತಮ್ಮ ಮನೆಯ ಪಕ್ಕ ಇದ್ದ ನದಿಯ ಬಳಿ ಶೌಚಾಲಯಕ್ಕೆ ಹೋಗಿದ್ದಾನೆ. ಈ ವೇಳೆ ಯಾರೋ ಅಪರಿಚಿತ ವ್ಯಕ್ತಿಗಳಿಬ್ಬರು ಆತನ ಮೇಲೆ ದಾಳಿ ಮಾಡಿ ಆತನ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಬಳಿಕ ಕತ್ತರಿಸಿದ್ದ ಅಂಗವನ್ನು ತೆಗೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇದನ್ನು ಓದಿ: ಸೆಕ್ಸ್, ಮದುವೆಗೆ ನಿರಾಕರಿಸಿದ್ದಕ್ಕೆ ಪ್ರಿಯಕರನ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆಯ ಬಂಧನ

    ಯುವಕನನ್ನು ಸ್ಥಿತಿ ಗಂಭೀರವಾಗಿದ್ದು, ಗ್ರಾಮಸ್ಥರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಯುವಕ ಪ್ರಜ್ಞೆಹೀನಾ ಸ್ಥಿತಿಯಲ್ಲಿ ಇದ್ದಾನೆ. ಆದ್ದರಿಂದ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಸಾಧ್ಯವಾಗುತ್ತಿಲ್ಲ. ಕುಟುಂಬಸ್ಥರು ಕೂಡ ಕಾರಣವೇನು ಎಂಬುದನ್ನು ತಿಳಿದಿಲ್ಲ. ಕತ್ತರಿಸಲ್ಪಟ್ಟ ಅಂಗ ಸಿಕ್ಕಿದರೆ ಮರು ಜೋಡಣೆ ಮಾಡಬಹುದಿತ್ತು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸಬ್ ಇನ್ಸ ಪೆಕ್ಟರ್ ಅಮೀತ್ ಶರ್ಮಾ ತಿಳಿಸಿದ್ದಾರೆ. ಇದನ್ನು ಓದಿ: ಲಾಡ್ಜ್ ನಲ್ಲಿ ಜಗಳ: ಪ್ರೇಮಿಯ ಮರ್ಮಾಂಗವನ್ನು ಕತ್ತರಿಸಿದ್ಳು ಪ್ರೇಯಸಿ

    ಸಂತ್ರಸ್ತನ ಸಂಬಂಧಿಗಳು ಯಾರ ಮೇಲೆಯೂ ಶಂಕೆ ವ್ಯಕ್ತಪಡಿಸಿಲ್ಲ. ಆದ್ದರಿಂದ ನಾವು ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ. ಯುವಕನ ಹೇಳಿಕೆಗಾಗಿ ನಾನು ಕಾಯುತ್ತಿದ್ದೇವೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು. ಇದನ್ನು ಓದಿ: ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!

  • ಪ್ರೀ-ವೆಡ್ಡಿಂಗ್ ಶೂಟ್ ಗೆ ತೆರಳ್ತಿದ್ದಾಗ ಅಪಘಾತ – ವಧು, ವರ ಸಾವು

    ಪ್ರೀ-ವೆಡ್ಡಿಂಗ್ ಶೂಟ್ ಗೆ ತೆರಳ್ತಿದ್ದಾಗ ಅಪಘಾತ – ವಧು, ವರ ಸಾವು

    ಹಾಸನ: ಮದುವೆಯಾಗಿ ದಂಪತಿಯಾಗಬೇಕಿದ್ದ ವಧು ಮತ್ತು ವರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.

    ತುಮಕೂರು ಜಿಲ್ಲೆಯ ವಧು ರಾಧಿಕಾ(25) ವರ ಸುಪ್ರೀತ್(27) ಮತ್ತು ಮಾನಸಿಕ ಅಸ್ವಸ್ಥ ಮಹಿಳೆ ರತ್ನಮ್ಮ (40) ಮೃತಪಟ್ಟಿದ್ದಾರೆ. ಆಲೂರು ತಾಲೂಕಿನ ಪಾಳ್ಯ ಬಳಿ ಈ ಅಪಘಾತ ಸಂಭವಿಸಿ ರಾಧಿಕಾ ಮತ್ತು ರತ್ನಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವರ ಸುಪ್ರೀತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಅಪಘಾತ ಹೇಗಾಯ್ತು?
    ಫೆಬ್ರವರಿ 5 ರಂದು ಮದುವೆ ನಡೆಯಲಿರುವ ಹಿನ್ನೆಲೆಯಲ್ಲಿ ವಿವಾಹ ಪೂರ್ವ ಫೋಟೋ ಶೂಟ್ ಮಾಡಲು ರಾಧಿಕಾ, ಸುಪ್ರೀತ್ ಮತ್ತು ರಾಧಿಕಾ ತಾಯಿ  ಕಾರಿನಲ್ಲಿ ಹಾಸನದ ಶೆಟ್ಟಿಹಳ್ಳಿ ಚರ್ಚ್‍ನಲ್ಲಿ ಮುಗಿಸಿ ಮಂಜ್ರಾಬಾದ್ ಕೋರ್ಟ್ ಕಡೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅಸ್ವಸ್ಥ ಮಹಿಳೆ ಅಡ್ಡ ಬಂದಿದ್ದಾರೆ. ಆಕೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕ ಕಾರಿನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳದಲ್ಲಿಯೇ ವಧು ರಾಧಿಕ ಮತ್ತು ಅಸ್ವಸ್ಥ ಮಹಿಳೆ ಇಬ್ಬರು ಮೃತಪಟ್ಟಿದ್ದಾರೆ.

    ಅಪಘಾತದಿಂದ ಕಾರಿನಲ್ಲಿದ್ದ ಕ್ಯಾಮೆರಾಮನ್‍ಗೆ ಮತ್ತು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸುಪ್ರೀತ್ ಮತ್ತು ರಾಧಿಕ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವರ ಸುಪ್ರೀತ್ ಕೂಡ ಮೃತಪಟ್ಟಿದ್ದಾರೆ.

    ಕ್ಯಾಮೆರಾ ಮನ್ ಮತ್ತು ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 2ನೇ ಮದ್ವೆಯಲ್ಲಿ ಮೊದಲ ಮದ್ವೆಯ ಡ್ರೆಸ್ ಧರಿಸಿ ಸಿಕ್ಕಿ ಬಿದ್ದ ವರ!

    2ನೇ ಮದ್ವೆಯಲ್ಲಿ ಮೊದಲ ಮದ್ವೆಯ ಡ್ರೆಸ್ ಧರಿಸಿ ಸಿಕ್ಕಿ ಬಿದ್ದ ವರ!

    ಮುಂಬೈ: ವರನೊಬ್ಬ ಮೊದಲ ಮದುವೆಯಲ್ಲಿ ಧರಿಸಿದ್ದ ಬಟ್ಟೆಯನ್ನೇ, ತನ್ನ ಎರಡನೇ ಮದುವೆಯಲ್ಲಿಯೂ ಧರಿಸುವ ಮೂಲಕ ಸಿಕ್ಕಿಬಿದ್ದಿರುವ ಘಟನೆ ನಗರದ ಮಲ್ವಾನಿಯಲ್ಲಿ ಶುಕ್ರವಾರ ನಡೆದಿದೆ.

    26 ವರ್ಷದ ಸೊಹೈಲ್ ಸೈಯದ್ ಎಂಬಾತನೇ ತನ್ನ ಎರಡನೇ ಮದುವೆಯಲ್ಲಿ ಸಿಕ್ಕಿ ಬಿದ್ದಿರುವ ವರ. ಸೊಹೈಲ್ ಆರು ತಿಂಗಳ ಹಿಂದೆಯೇ ತಾನು ಪ್ರೀತಿಸಿದ್ದ ಯುವತಿಯೊಂದಿಗೆ ಮದುವೆ ಆಗಿದ್ದನು. ಸೊಹೈಲ್ ಪ್ರೀತಿಸಿರುವ ಹುಡುಗಿಯನ್ನು ಆತನ ಪೋಷಕರು ಒಪ್ಪಿರದ ಕಾರಣ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮದುವೆ ಆಗಿದ್ದನು.

    ಇತ್ತ ಸೊಹೈಲ್ ಪೋಷಕರು ತಮ್ಮ ಏರಿಯಾದಲ್ಲಿ ವಾಸವಾಗಿರುವ ಯುವತಿಯೊಂದಿಗೆ ಶುಕ್ರವಾರ ಮದುವೆ ನಿಶ್ಚಯ ಮಾಡಿದ್ರು. ಪೋಷಕರು ನೋಡಿರುವ ಹುಡುಗಿಯನ್ನು ಮದುವೆಯಾಗಲು ಸೊಹೈಲ್ ಒಪ್ಪಿಕೊಂಡಿದ್ದರಿಂದ ಎರಡು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಶುಕ್ರವಾರ ರಾತ್ರಿ ಮದುವೆ ನಡೆದಿದೆ. ಬಿದಾಯಿ (ವಧುವನ್ನು ಗಂಡನ ಮನೆಗೆ ಕಳುಹಿಸುವ ಸಮಯ) ವೇಳೆ ವಧುವಿನ ತಂದೆಯ ಮೊಬೈಲ್‍ಗೆ ಫೋಟೋವೊಂದನ್ನು ಕಳುಹಿಸಿದ್ದಾರೆ.

    ಒಂದೇ ಡ್ರೆಸ್: ಮೊಬೈಲಿಗೆ ಬಂದ ಫೋಟೋವನ್ನು ಡೌನ್‍ಲೋಡ್ ಮಾಡಿ ನೋಡಿದ್ರೆ ಅಳಿಯ ಬೇರೆ ಯುವತಿಯೊಂದಿಗೆ ಮದುವೆ ಆಗಿರುವ ಫೋಟೋ. ಅಳಿಯ ಸೊಹೈಲ್ ಧರಿಸಿರುವ ಡ್ರೆಸ್ ಮತ್ತು ಫೋಟೋದಲ್ಲಿ ಹಾಕಿರುವ ಶೇರ್ವಾನಿ ಎರಡೂ ಒಂದೇ ಆಗಿದ್ದರಿಂದ ವಧುವಿನ ತಂದೆಗೆ ಸಂಶಯ ಹುಟ್ಟಿಕೊಂಡಿದೆ.

    ಮದುವೆ ಮನೆಯಿಂದ ಪೊಲೀಸ್ ಠಾಣೆಗೆ: ಇತ್ತ ಅಳಿಯ ಸೊಹೈಲ್ ಮೊದಲ ಮದುವೆ ವಿಚಾರ ತಿಳಿದ ವಧುವಿನ ಪೋಷಕರು ಮಲ್ವಾನಿ ಠಾಣೆಗೆ ತೆರಳಿದ್ದಾರೆ. ಪೊಲೀಸರು ಮಾತ್ರ ಇದೊಂದು ಗಂಭೀರವಲ್ಲದ ಪ್ರಕರಣ ಅಂತಾ ಹೇಳಿ ಎಫ್‍ಐಆರ್ ದಾಖಲಿಸಿಕೊಳ್ಳಲಿಲ್ಲ. ಠಾಣೆಯಲ್ಲಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಸುನಿತಾ ಕದಮ್ ಎಫ್‍ಐಆರ್ ದಾಖಲಿಸದೇ ಎನ್‍ಸಿಆರತ್ ಅಂತಾ ಹಾಕಿದ್ದರು ಅಂತಾ ವಧುವಿನ ಕುಟುಂಬಸ್ಥರಾದ ಶಮಿಮ್ ಭಾಯ್ ಆರೋಪಿಸಿದ್ದಾರೆ.

    ಮಂಟಪದಿಂದ ಕಾಲ್ಕಿತ್ತ ಸೊಹೈಲ್ ಪೋಷಕರು: ವಧುವಿನ ಪೋಷಕರಿಂದ ಆಕ್ರೋಶ ವ್ಯಕ್ತವಾದ ಕೂಡಲೇ ಪೊಲೀಸರು ಶನಿವಾರ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಆದ್ರೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದಂತೆ ವರ ಮತ್ತು ಆತನ ಪೋಷಕರು ನಾಪತ್ತೆಯಾಗಿದ್ದಾರೆ.

    ಶನಿವಾರ ಸೊಹೈಲ್ ಕಿರಿಯ ಸಹೋದರನ ಆರತಕ್ಷತೆಯ ಕಾರ್ಯಕ್ರಮಕ್ಕೆ ತೆರಳಿ ಆತನ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಸೊಹೈಲ್ ವಿರುದ್ಧ ಐಪಿಸಿ ಸೆಕ್ಷನ್ 420, 406, 495 ಅಡಿ ದೂರು ದಾಖಲಿಸಿಕೊಂಡಿದೆ. ಕಾಣೆಯಾಗಿರುವ ಸೊಹೈಲ್ ಪತ್ತೆಗಾಗಿ ವಿಶೇಷ ಜಾಲ ಬೀಸಲಾಗಿದೆ ಎಂದು ಮಲ್ವಾನಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

  • 60 ವರ್ಷದ ವ್ಯಕ್ತಿಯೊಂದಿಗೆ ಮದ್ವೆಯಾದ್ಳು -ಆರೇ ದಿನಕ್ಕೆ ಬಯಲಾಯ್ತು ವಧುವಿನ ನಿಜ ರೂಪ

    60 ವರ್ಷದ ವ್ಯಕ್ತಿಯೊಂದಿಗೆ ಮದ್ವೆಯಾದ್ಳು -ಆರೇ ದಿನಕ್ಕೆ ಬಯಲಾಯ್ತು ವಧುವಿನ ನಿಜ ರೂಪ

    ಇಂದೋರ್: ನಗರದ 60 ವರ್ಷದ ನಿವೃತ್ತ ಸರ್ಕಾರಿ ನೌಕರನೊಬ್ಬರನ್ನು ಮದುವೆಯಾಗಿದ್ದ ಮಹಿಳೆ ಆರೇ ದಿನದಲ್ಲಿ ಮನೆಯಲ್ಲಿ ಚಿನ್ನಾಭರಣ ಮತ್ತು ನಗದಿನೊಂದಿಗೆ ಪರಾರಿಯಾಗಿದ್ದಳು. ಈ ಕುರಿತು ಬರೋಬ್ಬರಿ 45 ದಿನಗಳ ಬಳಿಕ ಪೊಲೀಸರು ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಗರದ ಮಂದಸೌರ ನಿವಾಸಿ 60 ವರ್ಷದ ರೂಪ್ ದಾಸ್ ಮೋಸಕ್ಕೊಳಗಾದ ವ್ಯಕ್ತಿ. ಪೂಜಾ ಅಲಿಯಾಸ್ ಹೇಮಾ ಬಂಧಿತ ಆರೋಪಿ. ರೂಪ್ ದಾಸ್ ವಿದ್ಯುತ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ನಿವೃತ್ತಿಯ ನಂತರ ರೂಪ್ ದಾಸ್ ಎರಡನೇ ಮದುವೆಯಾಗಲು ಇಚ್ಛಿಸಿದ್ದರು. ರೂಪ್ ದಾಸ್ ಮೊದಲ ಪತ್ನಿ 1992ರಲ್ಲಿ ನಿಧನ ಹೊಂದಿದ್ದು, ಮಕ್ಕಳನ್ನು ಸಹ ಹೊಂದಿಲ್ಲ. ನಿವೃತ್ತಿವರೆಗೂ ರೂಪ್ ದಾಸ್ ಏಕಾಂಗಿ ಜೀವನ ನಡೆಸಿಕೊಂಡು ಬಂದಿದ್ದರು. ವೃದ್ಧಾಪ್ಯದಲ್ಲಿ ಯಾರಾದರೂ ಜೊತೆಗೆ ಇರಬೇಕೆಂದು ಸ್ನೇಹಿತರು ಹಾಗು ಕುಟುಂಬಸ್ಥರ ಸಲಹೆಯ ಮೇರೆಗೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು.

    ಆವತ್ತು ಪರಿಚಯವಾಗಿದ್ದೇ ಪೂಜಾ: 18 ನವೆಂಬರ್ 2017ರಂದು ಸ್ನೇಹಿತ ಅಶೋಕ್ ಕುಮಾರ್ ಗೆ ಬ್ರಾಹ್ಮಣ ಸಮುದಾಯದ 40 ರಿಂದ 50 ವಯಸ್ಸಿನ ವಿಧವೆಯನ್ನು ತೋರಿಸುವಂತೆ ಹೇಳಿದ್ದರು. ಕೆಲವು ದಿನಗಳ ಬಳಿಕ ಅಶೋಕ್ ಕುಮಾರ್ ಪೂಜಾ ಎಂಬ ಮಹಿಳೆಯನ್ನು ಪರಿಚಯ ಮಾಡಿಸಿದ್ದಾನೆ. ನನಗೆ ಮಹಿಳೆಯ ಕುಟುಂಬ ಮತ್ತು ಆಕೆಯ ಹಿನ್ನೆಲೆಯ ಬಗ್ಗೆ ಚೆನ್ನಾಗಿ ಗೊತ್ತಿದ್ದು, ಚಿಂತೆ ಮಾಡುವ ಅಗತ್ಯವಿಲ್ಲ ಅಂತ ತಿಳಿಸಿದ್ದಾನೆ. ಪೂಜಾ ಜೊತೆಗೆ ಸಹೋದರ ಎಂದು ಹೇಳಿಕೊಂಡು ಜಿತೇಂದ್ರ ಎಂಬ ವ್ಯಕ್ತಿಯನ್ನು ಪರಿಚಯ ಮಾಡಿಸಿದ್ದನು.

    ದೇವಸ್ಥಾನದಲ್ಲಿ ಮದುವೆ: 22 ನವೆಂಬರ್ 2017ರಂದು ಅಶೋಕ್ ಮತ್ತು ಜಿತೇಂದ್ರ ಸಮ್ಮುಖದಲ್ಲಿ ನಗರದ ಸಂತೋಷಿ ಮಾ ದೇವಸ್ಥಾನದಲ್ಲಿ ರೂಪ್ ದಾಸ್ ಮತ್ತು ಪೂಜಾ ಇಬ್ಬರ ಮದುವೆ ನಡೆದಿದೆ. ಮದುವೆ ಬಳಿಕ ರೂಪ್ ದಾಸ್ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆಯ ಎಲ್ಲ ಜವಾಬ್ದಾರಿಗಳನ್ನು ನೋಡಿಕೊಳ್ಳುವಂತೆ ತಿಳಿಸಿ ತಿಜೋರಿಯ ಬೀಗದ ಕೈಯನ್ನು ನೀಡಿದ್ದಾರೆ.

    ನವೆಂಬರ್ 29ರಂದು ರೂಪ್ ದಾಸ್ ಎರಡನೇ ಮಹಡಿಯನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಸಹಾಯಕ್ಕಾಗಿ ಪತ್ನಿ ಪೂಜಾಳನ್ನು ಕರೆದಿದ್ದಾರೆ. ರೂಪ್ ದಾಸ್ ಕೂಗಿದ್ದಕ್ಕೆ ಉತ್ತರ ನೀಡದೇ ಇರುವುದರಿಂದ ಕೆಳಗೆ ಬಂದು ನೋಡಿದ್ರೆ ತಿಜೋರಿಯ ಬಾಗಿಲು ತೆರೆದಿದ್ದು, ಗೃಹ ಪ್ರವೇಶಕ್ಕೆ ಅಂತ ಇರಿಸಿದ್ದ 3 ಲಕ್ಷ ರೂ. ಹಣ ಮತ್ತು ಚಿನ್ನ, ಬೆಳ್ಳಿ ಆಭರಣಗಳೊಂದಿಗೆ ಪೂಜಾ ಎಸ್ಕೇಪ್ ಆಗಿದ್ದಾಳೆ.

    ಮನೆಯಿಂದ ಪೂಜಾ ನಾಪತ್ತೆಯಾಗಿದ್ದನ್ನು ಕಂಡ ರೂಪ್ ದಾಸ್ ಕೂಡಲೇ ಮದುವೆ ಮಾಡಿಸಿದ್ದ ಅಶೋಕ್‍ಕುಮಾರ್ ಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ನನ್ನ ಹಣ ಮತ್ತು ಆಭರಣಗಳನ್ನು ಹಿಂದುರುಗಿಸಿ ಕೊಡುವಂತೆ ಹೇಳಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಿಕ್ಕಿದ್ದು ಹೀಗೆ: ಪೊಲೀಸರು ಅಶೋಕ್ ಕುಮಾರ್‍ನನ್ನು ಕರೆದು ವಿಚಾರಣೆ ನಡೆಸಿದಾಗ ಕಾಣೆಯಾಗಿರುವ ಪೂಜಾಳ ವಿಳಾಸ ಗೊತ್ತಿಲ್ಲ. ಕೇವಲ ಫೋನ್ ನಂಬರ್ ನಿಂದಲೇ ಸಂಪರ್ಕಿಸಿ ಇಬ್ಬರ ಮದುವೆ ಮಾಡಿಸಲಾಗಿತ್ತು ಅಂತ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಪೊಲೀಸರು ಆಶೋಕ್‍ಕುಮಾರ್ ಪತ್ನಿಯಿಂದ ಪೂಜಾಳ ನಂಬರ್ ಗೆ ಕರೆ ಮಾಡಿಸಿ, ತನ್ನ ಪತಿಗೆ ಆರೋಗ್ಯ ಸರಿಯಿಲ್ಲ, ಬಂದು ಭೇಟಿಯಾಗಿ ಅಂತ ಹೇಳಿಸಿದ್ದಾರೆ. ಅಶೋಕ್ ಕುಮಾರ್ ಪತ್ನಿಯ ಮಾತು ನಂಬಿ ಮನೆಗೆ ಬಂದ ಪೂಜಾಳನ್ನು ಪೊಲೀಸರು ಬಂಧಿಸಿದ್ದಾರೆ.

    ತನಿಖೆ ವೇಳೆ ಪೂಜಾ ತನ್ನ ಮೂಲ ಹೆಸರು ಹೇಮಾ ಎಂದು ತಿಳಿಸಿದ್ದಾಳೆ. ಪೂಜಾ ಮತ್ತು ಅಶೋಕ್‍ಕುಮಾರ್ ಇಬ್ಬರ ಬಳಿ ತಲಾ 5 ಸಾವಿರ ರೂ.ಹಣ ದೊರೆಕಿದೆ. ಪ್ರಕರಣ ಸಂಬಂಧ ಪೊಲೀಸರು ಅಶೋಕ್ ಕುಮಾರ್ ಮತ್ತು ಪೂಜಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನೂ ಮದುವೆ ವೇಳೆ ಪೂಜಾಳ ಅಣ್ಣ ಅಂತಾ ಹೇಳಿಕೊಂಡಿದ್ದ ಜಿತೇಂದ್ರ ನಾಪತ್ತೆಯಾಗಿದ್ದು, ಆತನ ಬಲೆಗಾಗಿ ಪೊಲೀಸರು ವಿಶೇಷ ಜಾಲ ಬೀಸಿದ್ದಾರೆ.

  • ಸಂಗೀತ್ ಕಾರ್ಯಕ್ರಮದ ಆಚರಣೆ ವೇಳೆ ಗುಂಡು ತಾಗಿ ವರ ಸಾವು

    ಸಂಗೀತ್ ಕಾರ್ಯಕ್ರಮದ ಆಚರಣೆ ವೇಳೆ ಗುಂಡು ತಾಗಿ ವರ ಸಾವು

    ಚಂಢೀಘಢ: ಮದುವೆ ಮನೆಯಲ್ಲಿ ಸಂಭ್ರಮಾಚರಣೆ ನಡೆಸುವಾಗ ಗಾಳಿಯಲ್ಲಿ ಹಾರಿಸಿದ ಗುಂಡು ಅಚಾನಕ್ ಆಗಿ ಮಧುಮಗನಿಗೆ ತಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವರ ಸಾವನ್ನಪ್ಪಿದ್ದ ಘಟನೆ ಶನಿವಾರ ಹರಿಯಾಣಾದ ಕೈತಲ್ ನಲ್ಲಿ ನಡೆದಿದೆ.

    ವಿಕ್ರಮ್ ವೋಹರಾ (36) ಸಾವನ್ನಪ್ಪಿದ್ದ ವರ. ವಿಕ್ರಮ್ 12 ವರ್ಷದಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ವಿಕ್ರಮ್ ಸಂಗೀತ್ ಕಾರ್ಯಕ್ರಮದಲ್ಲಿ ತನ್ನ ಸಂಬಂಧಿಕರ ಜೊತೆ ಕುಣಿಯುತ್ತಿದ್ದರು. ಆಗ ಆತನ ಕುಟುಂಬದವರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಕಸ್ಮಿಕವಾಗಿ ಗುಂಡು ವರನಿಗೆ ತಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವಿಕ್ರಮ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ವಿಕ್ರಮ್ ಸಾವನ್ನಪ್ಪಿದ್ದಾರೆ.

    ವರನ ಸಂಬಂಧಿ ನವತೇಜ್ ಸಿಂಗ್ ಗೆ ಕೂಡ ಗಾಯವಾಗಿದ್ದು ಅವರನ್ನು ಚಂಢೀಘಢ್‍ನ ಪಿಜಿಐಗೆ ರವಾನಿಸಲಾಗಿದೆ.

    ಘಟನೆ ಬಗ್ಗೆ ಮಾತನಾಡಿದ ಕೈತಲ್ ನ ಎಸ್‍ಪಿ ಅಸ್ತಾ ಮೋದಿ, ನಾವು ಈ ಘಟನೆ ಬಗ್ಗೆ ತನಿಖೆ ಶುರು ಮಾಡಿದ್ದೇವೆ ಹಾಗೂ ಗುಂಡು ಹಾರಿಸಿದ್ದು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ. ಕಾರ್ಯಕ್ರಮದ ವಿಡಿಯೋಗಳನ್ನು ಪರಿಶೀಲಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ 304 ಹಾಗೂ ಸೆಕ್ಷನ್ 308 ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಎಸ್‍ಪಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದ ನಂತರ ವರನ ದೇಹವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ

    ಭಾನುವಾರದಂದು ವಿಕ್ರಮ್ ಮದುವೆ ನಡೆಯಬೇಕಿತ್ತು.

  • ಕಲ್ಯಾಣ ಮಂಟಪದಲ್ಲೇ ಬೆಂಗ್ಳೂರು ವರನಿಗೆ ಗೆಟ್ ಔಟ್ ಎಂದ ವಧು!

    ಕಲ್ಯಾಣ ಮಂಟಪದಲ್ಲೇ ಬೆಂಗ್ಳೂರು ವರನಿಗೆ ಗೆಟ್ ಔಟ್ ಎಂದ ವಧು!

    ಛತ್ತೀಸ್‍ಗಢ: ಮದುವೆ ಮುನ್ನ ಕಲ್ಯಾಣ ಮಂಟಪದಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ ವರನ ಜೊತೆ ವಧು ಮದುವೆ ನಿರಾಕರಿಸಿರುವ ಘಟನೆ ಛತ್ತೀಸ್‍ಗಢದ ಮುರಾದಾಬಾದ್ ಜಿಲ್ಲೆಯ ಪಾರ್ಕ್ ಸ್ಕ್ವೈರ್ ಹೋಟೆಲ್ ನಲ್ಲಿ ನಡೆದಿದೆ.

    ಜ್ಯೋತಿ ಎಂಬವರೇ ಕಲ್ಯಾಣ ಮಂಟಪದಿಂದ ವರನ ಕುಟುಂಬ ಹೊರ ನಡೆಯಲು ಸೂಚಿಸಿದ ವಧುವಾಗಿದ್ದಾರೆ. ಜ್ಯೋತಿಯವರ ಪೋಷಕರು ತಮ್ಮ ಮಗಳ ಮದುವೆ ಮಾಡಲು ವೆಬ್ ಸೈಟ್‍ಯೊಂದರಲ್ಲಿ ವಿವರಗಳನ್ನು ದಾಖಲಿಸಿದ್ದರು. ಇದರಂತೆ ಬೆಂಗಳೂರು ಮೂಲದ ಇಂಟೀರಿಯರ್ ಡಿಸೈನರ್ ಅಶೀಶ್ ಎಂಬವರ ಜೊತೆ ಡಿಸೆಂಬರ್ 14 ರಂದು ಮದುವೆ ನಿರ್ಣಯಿಸಲಾಗಿತ್ತು.

    ಆದರೆ ಮದುವೆ ಮುನ್ನ ದಿನ ಆರತಕ್ಷತೆ ಸಮಾರಂಭದ ವೇಳೆ ಅಶೀಶ್ ತಂದೆ, ಜ್ಯೋತಿ ತಂದೆಯವರ ಜೊತೆ ವರದಕ್ಷಿಣೆಯಾಗಿ ಸೆಡನ್ ಕಾರು ಹಾಗೂ 15 ಲಕ್ಷ ರೂ. ಹಣ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಜ್ಯೋತಿ ಆಶೀಶ್ ನೊಂದಿಗೆ ಮಾತನಾಡಿ ಇಬ್ಬರು ವಿದ್ಯಾವಂತರಾಗಿದ್ದು, ಉತ್ತಮ ಕೆಲಸದಲ್ಲಿ ಇದ್ದೇವೆ, ಮದುವೆ ನಂತರ ಹಣ ಸಂಪಾದನೆ ಮಾಡಲು ಸಾಧ್ಯವಿಲ್ಲವೇ ಎಂದು ತಿಳಿಹೇಳಲು ಪ್ರಯತ್ನಿಸಿದ್ದಾರೆ. ಆದರೆ ಇವರು ಮಾತನ್ನು ಕೇಳದ ಆಶೀಶ್ ಕುಟುಂಬದವರು ವರದಕ್ಷಿಣೆ ನೀಡಿದರೆ ಮಾತ್ರ ಮದುವೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.

    ಈ ವೇಳೆ ಇತರರ ಮುಂದೆ ತನ್ನ ತಂದೆ ಅವಮಾನಪಡುವುದನ್ನು ಸಹಿಸಲಾರದೇ ವಧು ಜ್ಯೋತಿ ಮದುವೆ ನಿರಾಕರಿಸಿ ಆಶೀಶ್ ಹಾಗೂ ಅವರ ಕುಟುಂಬವನ್ನು ಕಲ್ಯಾಣ ಮಂಟಪದಿಂದ ಹೊರ ನಡೆಯುವಂತೆ ಸೂಚಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಜ್ಯೋತಿ, ಅಶೀಶ್ ಹಾಗೂ ಆತನ ತಂದೆ ನರೇಶ್ ಸೇರಿದಂತೆ ಮೂವರ ವಿರುದ್ಧ ಮಝೋಲಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

    ವರನ ತಂದೆ ಮದುವೆ ಸಂದರ್ಭದಲ್ಲಿ ನನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇಟ್ಟರು, ನಾನು ಅವರಿಗೆ ತಿಳಿಹೇಳಲು ಪ್ರಯತ್ನಿಸಿದೆ, ಆದರೆ ನನ್ನ ಮಗಳೇ ಮದುವೆಯನ್ನು ನಿರಾಕರಿಸಿದಳು. ನನ್ನ ಮಗಳ ನಿರ್ಣಯಕ್ಕೆ ನಾನು ಹಾಗೂ ನನ್ನ ಕುಟುಂಬ ಬೆಂಬಲ ಸೂಚಿಸಿದ್ದೇವೆ ಎಂದು ಜ್ಯೋತಿ ಅವರ ತಂದೆ ಕಮಲ್ ಸಿಂಗ್ ಹೇಳಿದ್ದಾರೆ.

    ಜ್ಯೋತಿ ಅವರ ಹೇಳಿಕೆ ಪಡೆದಿರುವ ಪೊಲೀಸರು ವರನ ಕುಟುಂಬದ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಅಂದಹಾಗೇ ಜ್ಯೋತಿ ಅವರು ಛತ್ತೀಸ್‍ಗಢ ಸರ್ಕಾರಿ ಕಾಲೇಜಿನಲ್ಲಿ ಬಂಗಾರ ಪದಕದೊಂದಿಗೆ ಎಂ. ಟೆಕ್ ಪದವಿಯನ್ನು ಪಡೆದಿದ್ದಾರೆ.

  • ಮದುವೆಯಾದ ಮರುರಾತ್ರಿ ಲಾಕಪ್‍ನಲ್ಲಿ ಕಾಲ ಕಳೆದ ವರ

    ಮದುವೆಯಾದ ಮರುರಾತ್ರಿ ಲಾಕಪ್‍ನಲ್ಲಿ ಕಾಲ ಕಳೆದ ವರ

    ಕೌಲಾಲಂಪುರ್: ಮದುವೆ ಆದ ಕೆಲವೇ ಗಂಟೆಗಳಲ್ಲಿ ವರನೊಬ್ಬ ಲಾಕಪ್‍ನಲ್ಲಿ ಕಂಬಿ ಎಣಿಸಿದ ಘಟನೆ ಮಲೇಷ್ಯಾದಲ್ಲಿ ನಡೆದಿದೆ.

    ಮದುವೆಗೆ ಬಂದಿದ್ದ ಅತಿಥಿಯನ್ನ ಪೊಲೀಸರು ಅರೆಸ್ಟ್ ಮಾಡಲು ಬಂದಾಗ ಅವರೊಂದಿಗೆ ಜಗಳವಾಡಿದ ಕಾರಣ ಪೊಲೀಸರು ವರನನ್ನೇ ಕರೆದೊಯ್ದಿದ್ದಾರೆ.

    ಇಲ್ಲಿನ ಅಲೋರ್ ಸೆಟಾರ್‍ನ ನಾರ್ಥನ್ ಸಿಟಿಯಲ್ಲಿ ಮದುವೆ ನಡೆಯುತ್ತಿತ್ತು. ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸಲು ಭಾನುವಾರ ಸಂಜೆ ಮದುವೆ ಸಮಾರಂಭ ನಡೆಯುತ್ತಿದ್ದ ಹೋಟೆಲ್‍ಗೆ ಪೊಲೀಸರು ಬಂದಿದ್ದರು. ಆದ್ರೆ 35 ವರ್ಷದ ವರ ಸೇರಿದಂತೆ ಸುಮಾರು 40 ಜನ ಶಂಕಿತನನ್ನು ಪೊಲೀಸರು ಬಂಧಿಸದಂತೆ ತಡೆದಿದ್ದಾರೆ.

    ಈ ವೇಳೆ ಜಗಳವಾಗಿದ್ದು, ವರ ನಮ್ಮವರ ಮೇಲೆ ಗ್ಲಾಸ್ ಎಸೆದ. ಇದರಿಂದ ಅಧಿಕಾರಿಯೊಬ್ಬರ ಎಡಗೈಗೆ ಗಾಯವಾಯಿತು ಅಂತ ಸ್ಥಳೀಯ ಪೊಲೀಸ್ ಅಧಿಕಾರಿ ಮೊಹಮ್ಮದ್ ರೋಜಿ ಹೇಳಿದ್ದಾರೆ.

    ಇತ್ತ ಇವರೆಲ್ಲಾ ಪೊಲೀಸರೊಂದಿಗೆ ಜಗಳವಾಡ್ತಿದ್ರೆ 38 ವರ್ಷದ ಆರೋಪಿ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದಾನೆ. ಮರುದಿನ ಪೊಲೀಸ್ ಅಧಿಕಾರಿಗಳು ವರನ ಮನೆಗೆ ಹೋಗಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆಯೂ ಜಗಳ ನಡೆದಿದೆ ಎಂದು ವರದಿಯಾಗಿದೆ.

  • ಮದುವೆ ಮಂಟಪಕ್ಕೆ ಹೆಲಿಕಾಪ್ಟರ್ ಏರಿ ಬಂದ ಮದುಮಗ!

    ಮದುವೆ ಮಂಟಪಕ್ಕೆ ಹೆಲಿಕಾಪ್ಟರ್ ಏರಿ ಬಂದ ಮದುಮಗ!

    ಲಕ್ನೋ: ಮದುವೆಯಾಗುವ ವೇಳೆ ವರ ಕುದುರೆ, ಬೈಕ್ ಅಥವಾ ಐಶಾರಾಮಿ ಕಾರುಗಳಲ್ಲಿ ಬರುವುನ್ನು ನೋಡಿರುತ್ತಿರಿ ಆದರೆ ಇಲ್ಲೊಬ್ಬ ವರ ತನ್ನ ಮದುವೆ ನಡೆಯುವ ಕಲ್ಯಾಣ ಮಂಟಪಕ್ಕೆ ಹೆಲಿಕಾಪ್ಟರ್ ಏರಿ ಬಂದಿದ್ದಾರೆ.

    ಮೂಲತಃ ರಾಜಸ್ಥಾನದ ಜೈಪುರದ ನಿವಾಸಿಯಾಗಿರುವ ಶಾರೂಖ್ ಖಾನ್ ಎಂಬ ಮದುಮಗನನೇ ತನ್ನ ಮದುವೆಗೆ ಹೆಲಿಪಾಪ್ಟರ್ ಏರಿ ಬಂದಿದ್ದು, ಉತ್ತರಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ.

    ಇದನ್ನೂ ಓದಿ: ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್

    ಈ ಕುರಿತು ಮಾತನಾಡಿರುವ ಶಾರುಕ್ ಖಾನ್ ತನಗೇ ಚಿಕ್ಕವನಿಂದಾಗಿನಿಂದಲೂ ಮದುವೆಯಾಗುವಾಗ ಹೆಲಿಕಾಪ್ಟರ್‍ನಲ್ಲಿ ಬರಬೇಕು ಎಂದು ಕನಸು ಕಂಡಿದ್ದೆ. ಆದರಂತೆ ಇಂದು ಹೆಲಿಪಾಪ್ಟರ್‍ನಲ್ಲಿ ಬಂದಿದ್ದೇನೆ, ನನ್ನ ಕನಸು ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವರ ಶಾರುಕ್ ಖಾನ್ ಹಿರಿಯ ಸಹೋದರನ ಮದುವೆ ಸಮಾರಂಭದಲ್ಲಿ ಇದೇ ರೀತಿ ಬರಲು ಪ್ಲಾನ್ ಮಾಡಿದರಂತೆ, ಆದರೆ ಅಧಿಕಾರಿಗಳಿಂದ ಅನುಮತಿ ಪಡೆಯಲು ಸಾಧ್ಯವಾಗದೆ ಅದನ್ನು ಕೈಬಿಟ್ಟಿದ್ದೇವು ಎಂದು ಹೇಳಿದ್ದಾರೆ.

    ಭಾವಿ ಪತಿ ಕನಸು ಕುರಿತು ಮಾತನಾಡಿದ ವಧು, ಗಂಡನ ಕನಸು ನನಸಾಗಿದ್ದು, ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

     

    https://www.youtube.com/watch?v=E6REmaOxs30

  • ಪೊಲೀಸರನ್ನು ನೋಡಿ ಮದುವೆ ಮಂಟಪದಿಂದ ಕಾಲ್ಕಿತ್ತ ವರ

    ಪೊಲೀಸರನ್ನು ನೋಡಿ ಮದುವೆ ಮಂಟಪದಿಂದ ಕಾಲ್ಕಿತ್ತ ವರ

    ಪಾಟ್ನಾ: ಮದುವೆಗೆ ಆಗಮಿಸಿದ ಪೊಲೀಸರನ್ನು ಕಂಡ ಕೂಡಲೇ ವರನೊಬ್ಬ ಪರಾರಿಯಾಗಿರುವ ಘಟನೆ ಬಿಹಾರ ರಾಜ್ಯದ ಪ್ರವಾಹ ಉಪವಿಭಾಗದ ಅನುಮಂಡಲ ಎಂಬಲ್ಲಿ ನಡೆದಿದೆ.

    ಸೋಮವಾರ ಗ್ರಾಮದ ಉಮಾನಾಥ ದೇವಸ್ಥಾನದಲ್ಲಿ ಚಿನ್ನೈ ಗ್ರಾಮದ ಯುವಕ ಮತ್ತು ಮೊಕಾಮ್ ಗ್ರಾಮದ ಯುವತಿಯ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಮದುವೆ ಮಂಟಪದಲ್ಲಿ ಅರಿಶಿಣ ಶಾಸ್ತ್ರ ನಡೆಯುವಾಗ ದೇವಸ್ಥಾನಕ್ಕೆ ಪೊಲೀಸರು ಆಗಮಿಸಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ಕೂತಿದ್ದ ಸ್ಥಳದಿಂದ ಎದ್ದು ನಿಂತ ವರ ಕೆಲವೇ ಕ್ಷಣಗಳಲ್ಲಿ ಪರಾರಿಯಾಗಿದ್ದಾನೆ.

    ಇದನ್ನೂ ಓದಿ: ಕಾಫಿನಾಡಿನಲ್ಲೊಂದು ವಿಶೇಷ ಮದುವೆ- 3 ಅಡಿ ವರ, 3 ಅಡಿ ವಧು..!

    ಮದುವೆ ಬಿಟ್ಟು ವರ ಪರಾರಿಯಾಗಿದ್ದನ್ನು ಕಂಡ ವಧುವಿನ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ವಧುವಿನ ಪೋಷಕರು ದೂರು ದಾಖಲಿಸುತ್ತಿದ್ದಂತೆ ಠಾಣೆಗೆ ಬಂದ ವರನೂ ಸಹ ದೂರು ದಾಖಲಿಸಿದ್ದಾನೆ.

    ಮದುವೆ ಮಂಟಪದಲ್ಲಿ ನನ್ನ ಬಳಗದವರು ಯಾರು ಇರಲಿಲ್ಲ. ಬಲವಂತವಾಗಿ ನನಗೆ ಈ ಮದುವೆ ಮಾಡಲಾಗುತ್ತಿತ್ತು. ಹಾಗಾಗಿ ನಾನು ಮದುವೆ ಮಂಟಪದಿಂದ ಹೊರ ಬಂದಿದ್ದೇನೆ ಎಂದು ಹೇಳಿದ್ದಾನೆ.

    ಇದನ್ನೂ ಓದಿ: ಆರತಕ್ಷತೆಯಲ್ಲಿದ್ದ ವಧು ರಾತ್ರೋರಾತ್ರಿ ನಾಪತ್ತೆ..!

    ಪೊಲೀಸರು ವರ ಮತ್ತು ವಧುವಿನ ಕಡೆಯವರ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈ ಮದುವೆ ಬಗ್ಗೆ ಗ್ರಾಮದ ತುಂಬೆಲ್ಲಾ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ.

    ಇದನ್ನೂ ಓದಿ:  ಎಂಜಿನಿಯರ್ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡ ಲೇಡಿ ಡಾಕ್ಟರ್ ಬಸ್ ಕಂಡಕ್ಟರನ್ನ ಮದುವೆಯಾದ್ಳು!

    ಇದನ್ನೂ ಓದಿ: ಮೊಗ್ಗಿನ ಜಡೆ ವಿಚಾರಕ್ಕೆ ಮುರಿದು ಬಿತ್ತು ಮದುವೆ!

     

  • ಆರತಕ್ಷತೆಯಲ್ಲಿ ನಗ್ತಿದ್ದ ವಧು ಧಾರೆಗೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ಆರತಕ್ಷತೆಯಲ್ಲಿ ನಗ್ತಿದ್ದ ವಧು ಧಾರೆಗೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ತುಮಕೂರು: ಮದುವೆ ಮಂಟಪದಿಂದಲೇ ವಧು ಓಡಿಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರನ ಟಿಟಿ ವಾಹನದಲ್ಲಿ ಬಂದಿದ್ದ ವಧು ಅದೇ ಟಿಟಿಯ ಡ್ರೈವರ್ ರಮೇಶ್ ಜೊತೆ ಓಡಿ ಹೋಗಿದ್ದಾಳೆ.

    ಮಧ್ಯರಾತ್ರಿಯೇ ತಾವು ಬಂದಿದ್ದ ಟಿಟಿಯಲ್ಲೇ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಭಾನುವಾರ ರಾತ್ರಿ ಆರತಕ್ಷತೆಯಲ್ಲಿ  ನಗುನಗುತ್ತಾ ಇದ್ದ ವಧು  ಬೆಳಗ್ಗೆ ನೋಡಿದ್ರೆ ನಾಪತ್ತೆಯಾಗಿದ್ದಾಳೆ.

    ಇಂದು ಬೆಳಗ್ಗೆ 9.30ಕ್ಕೆ ಹಸೆಮಣೆ ಏರಬೇಕಿದ್ದ ಯುವತಿ ನಾಪತ್ತೆಯಾಗಿರೋದನ್ನು ನೋಡಿ ವರನ ಕಡೆಯವರು ಫುಲ್ ಶಾಕ್ ಆಗಿದ್ದರು. ತುಮಕೂರು ಜಿಲ್ಲೆಯ ಯಡಿಯೂರು ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಯುವತಿಗೆ ಯಡಿಯೂರಿನ ಆಟೋ ಡ್ರೈವರ್ ರಾಮಕೃಷ್ಣನನ್ನು ಇಂದು ಮದುವೆ ಆಗಬೇಕಿತ್ತು. ಹೀಗಾಗಿ ನಿನ್ನೆ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.

    ಯುವತಿ ಓಡಿಹೋಗಿರೋ ಕಾರಣ ಇದೀಗ ಮದುವೆ ನಿಂತಿದೆ. ಆಕೆ ಯಾಕೆ ಗಾಯಬ್ ಆದ್ಲು ಅಂತಾ ಗೊತ್ತಿಲ್ಲ. ಯುವತಿ ಕಡೆಯವರು ಮದುವೆ ಹೆಸರಲ್ಲಿ ದುಡ್ಡು ತಗೊಂಡು ಮೋಸ ಮಾಡೋದೇ ದಂಧೆ ಮಾಡ್ಕೊಂಡಿದ್ದಾರೆ ಅಂತಾ ವರನ ಕಡೆಯವರು ಆರೋಪಿಸಿದ್ದಾರೆ.