Tag: ವರ

  • ಮದ್ವೆಯಾಗಿ ಗಂಡನ ಮನೆಗೆ ಹೋಗ್ತಿದ್ದಂತೆ ಬಯಲಾಯ್ತು ವಧುವಿನ ರಹಸ್ಯ!

    ಮದ್ವೆಯಾಗಿ ಗಂಡನ ಮನೆಗೆ ಹೋಗ್ತಿದ್ದಂತೆ ಬಯಲಾಯ್ತು ವಧುವಿನ ರಹಸ್ಯ!

    ಇಂದೋರ್: ಮದುವೆಯಾಗಿ ಗಂಡನ ಮನೆಗೆ ಬರುತ್ತಿದ್ದಂತೆ ವಧು ವಾಂತಿ ಮಾಡಿದ್ದು, ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪತ್ನಿ ಆರು ವಾರದ ಗರ್ಭಿಣಿ ಎನ್ನುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

    ಕೆಂಟ್ ರೋಡ್ ನಿವಾಸಿಯಾದ ಸಿದ್ಧಾರ್ಥ್ (ಹೆಸರು ಬದಲಾಯಿಸಲಾಗಿದೆ) ಮತ್ತು ಜಾರ್ಖಂಡ್‍ನ ರಾಮ್‍ಗಡ್‍ನಲ್ಲಿರುವ ಪೂಜಾ (ಹೆಸರು ಬದಲಾಯಿಸಲಾಗಿದೆ) ಜೊತೆ ಮದುವೆ ನಡೆದಿತ್ತು. ಮದುವೆಯಾಗಿ ಇಂದೋರ್ ನಲ್ಲಿರುವ ತನ್ನ ಗಂಡನ ಮನೆಗೆ ಬರುತ್ತಿದ್ದಂತೆ ವಧು ವಾಂತಿ ಮಾಡಲು ಶುರು ಮಾಡಿದ್ದಾಳೆ.

    ನಂತರ ಸಿದ್ಧಾರ್ಥ್ ವಧು ಪೂಜಾಳನ್ನು ಮಹಿಳಾ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಆಗ ಪೂಜಾ 6 ವಾರದ ಗರ್ಭಿಣಿ ಎಂಬ ವಿಷಯ ತಿಳಿದು ಬಂದಿದೆ. ನಂತರ ಸಿದ್ಧಾರ್ಥ್ ಈ ವಿಷಯದ ಬಗ್ಗೆ ಪೂಜಾಳ ಹತ್ತಿರ ಕೇಳಿದ್ದಾರೆ. ಆಗ ಪೂಜಾ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.

    ಮದುವೆಯಾಗುವ ಮುಂಚೆ ನಾನು ನನ್ನ ಸಂಬಂಧಿಕನ ಜೊತೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದೆ. ಹಾಗಾಗಿ ನಾನು ಈಗ ಗರ್ಭಿಣಿ ಆಗಿದ್ದೀನಿ ಎಂದು ಪೂಜಾ ಒಪ್ಪಿಕೊಂಡಿದ್ದಾಳೆ. ಪೂಜಾ ಸತ್ಯವನ್ನು ಒಪ್ಪಿಕೊಂಡ ಬಳಿಕ 100 ರೂ. ಸ್ಯ್ಟಾಂಪ್ ಮೇಲೂ ಬರೆದಿದ್ದಾಳೆ.

    ಮದುವೆಯಾಗಿ ಮೋಸ ಹೋದ ಸಿದ್ಧಾರ್ಥ್ ಕೋರ್ಟ್ ನ ಮೊರೆ ಹೋಗಿದ್ದಾರೆ. ನಂತರ ಕೋರ್ಟ್ ಪೂಜಾಳನ್ನು ಕರೆದು ವಿಚಾರಿಸಿದಾಗ ನಾನು ಈ ಮೊದಲು ನನ್ನ ಸಂಬಂಧಿಕನ ಜೊತೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದೆ ಎಂದು ಪೂಜಾ ಕೋರ್ಟ್‍ನಲ್ಲೂ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.

    ಒಂದು ಬಾರಿ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಮತ್ತೊಂದು ದಿನಾಂಕಕ್ಕೆ ವರ ಹಾಗೂ ವಧುವಿಗೆ ಬರಲು ಹೇಳಿದ್ದರು. ಆದರೆ ವಧು ಕೋರ್ಟ್ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ಈ ಮದುವೆಯನ್ನು ಕಾನೂನು ಸಮ್ಮತವಾದ ಮದುವೆ ಅಲ್ಲ ಎಂದು ಆದೇಶ ನೀಡಿದೆ.

  • ಕೊಹ್ಲಿ ಗಡ್ಡ ಬಿಟ್ಟು ಮದುವೆಯಾದಾಗ ನಾನು ಯಾಕೆ ಆಗಬಾರದು- ಮದುವೆ ಮನೆಯಲ್ಲಿ ಹೈಡ್ರಾಮ

    ಕೊಹ್ಲಿ ಗಡ್ಡ ಬಿಟ್ಟು ಮದುವೆಯಾದಾಗ ನಾನು ಯಾಕೆ ಆಗಬಾರದು- ಮದುವೆ ಮನೆಯಲ್ಲಿ ಹೈಡ್ರಾಮ

    ಭೋಪಾಲ್: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗಡ್ಡ ಬಿಟ್ಟು ಮದುವೆಯಾದಾಗ ನಾನೇಕೆ ಮದುವೆಯಾಗಬಾರದು ಎಂದು ವರ ಹೇಳಿದ್ದಕ್ಕೆ ಮದುವೆ ಮನೆಯಲ್ಲಿ ಹೈಡ್ರಾಮಾ ನಡೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಭೋಪಾಲ್‍ನಿಂದ 270 ಕಿ.ಮೀ ದೂರದಲ್ಲಿರುವ ಖಾಂಡ್ವಾ ಜಿಲ್ಲೆಯ ಅಜಂತಿ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ವಾದ-ವಿವಾದ ನಡೆದಿದ್ದು, ಮಂಗಳವಾರ ಬೆಳಗಿನ ಜಾವದವರೆಗೂ ನಡೆದಿದೆ.

    ಮಂಗಲ್ ಚೌಹಾಣ್ ತನ್ನ ಮದುವೆಗೆ ಸಿದ್ಧರಾಗಿ ಬಂಧುಗಳ ಜೊತೆ ಮೆರವಣಿಗೆ ಮೂಲಕ ಮದುವೆ ಮಂಟಪಕ್ಕೆ ಬಂದಿದ್ದಾರೆ. ಆಗ ವಧುವಿನ ತಂದೆ ರಾಧೇಶ್ಯಾಮ್ ಜಾಧವ್ ವರ ಹಾಗೂ ಅವರ ಸಂಬಂಧಿಕರನ್ನು ಸ್ವಾಗತಿಸಲೆಂದು ಹೋದಾಗ ಮಂಗಲ್ ಚೌಹಾನ್ ಗಡ್ಡ ಬಿಟ್ಟಿರುವುದನ್ನು ಗಮನಿಸಿದ್ದಾರೆ.

    ಮದುವೆಯ ಮಾತುಕತೆ ವೇಳೆ ನೀನು ಗಡ್ಡ ಬಿಟ್ಟಿರಲಿಲ್ಲ. ಆದರೆ ಈಗ ಗಡ್ಡ ಬಿಟ್ಟಿದ್ದೀಯ. ನೀನು ಶೇವ್ ಮಾಡಿಕೊಂಡು ಬರುವವರೆಗೂ ನನ್ನ ಮಗಳು ರೂಪಾಲಿಯನ್ನು ನಿನಗೆ ಕೊಟ್ಟು ಮದುವೆ ಮಾಡಿಸಿಕೊಡುವುದಿಲ್ಲ ಎಂದು ವಧುವಿನ ತಂದೆ ರಾಧೇಶ್ಯಾಮ್ ಹಠ ಹಿಡಿದಿದ್ದಾರೆ.

    ವಧುವಿನ ತಂದೆಯ ಹಠಕ್ಕೆ ವರ ಮಂಗಲ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ಗಡ್ಡ ಬಿಟ್ಟುಕೊಂಡು ಅನುಷ್ಕಾ ಶರ್ಮಾ ಜೊತೆ ಮದುವೆಯಾದಾಗ ನಾನು ಯಾಕೆ ಗಡ್ಡ ಬಿಟ್ಟುಕೊಂಡು ಮದುವೆಯಾಗಬಾರದು ಎಂದು ಪ್ರಶ್ನಿಸಿ ವರ ತನ್ನ ವಾದವನ್ನು ಮಂಡಿಸಿದ್ದಾನೆ.

    ವಧುವಿನ ತಂದೆ ಹಾಗೂ ವರನ ಮಧ್ಯೆ ಗಡ್ಡದ ವಿಷಯಕ್ಕೆ ರಾತ್ರಿಯಿಡಿ ವಾದ-ವಿವಾದ ನಡೆದರೂ ಅವರ ಸಮಸ್ಯೆ ಬಗೆಹರಿಯಲಿಲ್ಲ. ಆಗ ವರನ ಸಂಬಂಧಿಕರು ನೀವು ಈ ರೀತಿ ವಾದ ಮಾಡಿದರೆ ನಮಗೆ ಈ ಮದುವೆ ಬೇಡ ಎಂದು ಹೇಳಿ ಎಚ್ಚರಿಕೆ ನೀಡಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ವಧುವಿನ ಸಂಬಂಧಿಕರೊಬ್ಬರು ಮೊಗತ್ ರೋಡ್ ಪೊಲೀಸ್ ಠಾಣೆಯ ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

    ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ, ಗಡ್ಡ ಬಿಡುವುದು ಈಗಿನ ಕಾಲದ ಫ್ಯಾಷನ್ ಎಂದು ರಾಧೇಶ್ಯಾಮ್ ಅವರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಪೊಲೀಸರು ಹೇಳಿದರೂ ರಾಧೇಶ್ಯಾಮ್ ಮಾತ್ರ ತನ್ನ ಹಠವನ್ನು ಬಿಡಲೇ ಇಲ್ಲ. ಕೊನೆಗೆ ವರ ಮಂಗಲ್ ನನ್ನು ಪೊಲೀಸರು ಮನವೊಲಿಸಿ ಶೇವ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಬಗ್ಗೆ ವರ ಅಥವಾ ವಧುವಿನ ಕಡೆಯವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ವರದಿಯಾಗಿದೆ.

  • ಮರಕ್ಕೆ ಡಿಕ್ಕಿ ಹೊಡೆದ ಕಾರು – ವರ ಸೇರಿ ಐವರ ದುರ್ಮರಣ

    ಮರಕ್ಕೆ ಡಿಕ್ಕಿ ಹೊಡೆದ ಕಾರು – ವರ ಸೇರಿ ಐವರ ದುರ್ಮರಣ

    ಹೈದರಾಬಾದ್: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವರ ಸೇರಿ ಐವರು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಪಲ್ಲಿಪಾಡು ಬಳಿ ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವರನ ಕುಟುಂಬುದವರು ವರಾಂಗಲ್ ಜಿಲ್ಲೆಯ ತಮ್ಮ ಮನೆಯಿಂದ ಆಂಧ್ರ ಪ್ರದೇಶದ ತಡೆಪಲ್ಲಿಗುಡೆಮ್ ನ ವಧುವಿನ ನಿವಾಸಕ್ಕೆ ಕಾರಿನಲ್ಲಿ ಹೋಗುತ್ತಿದ್ದರು. ಕಾರು ಪಲ್ಲಿಪಾಡುಗೆ ತಲುಪಿದೆ. ಈ ಸಂದರ್ಭದಲ್ಲಿ ಚಾಲಕನಿಗೆ ಕಾರಿನ ಸ್ಟೇರಿಂಗ್ ಮೇಲೆ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ.

    ಮರಕ್ಕೆ ಹೊಡೆದ ರಭಸಕ್ಕೆ ವರ ಸೇರಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಅತಿಥಿ ಹಾರಿಸಿದ ಗುಂಡಿಗೆ ಮದುಮಗನ ಪ್ರಾಣವೇ ಹೋಯ್ತು!

    ಅತಿಥಿ ಹಾರಿಸಿದ ಗುಂಡಿಗೆ ಮದುಮಗನ ಪ್ರಾಣವೇ ಹೋಯ್ತು!

    ನವದೆಹಲಿ: ವಿವಾಹ ಸಮಾರಂಭದ ಸಂಭ್ರಮದಲ್ಲಿ ಗುಂಡು ಹಾರಿಸುವ ಪದ್ದತಿ ವಿವಿಧೆಡೆ ಚಾಲ್ತಿಯಲ್ಲಿದೆ. ಈ ಸಂಭ್ರಮವೇ ಸಾವಿಗೆ ಕಾರಣವಾಗುತ್ತಿದ್ದು, ಈಗ ಮತ್ತೊಂದು ಅಂತಹುದೇ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಈಶಾನ್ಯ ದೆಹಲಿಯ ಸೀಮಾಪುರಿಯಲ್ಲಿ ಮಂಗಳವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಮದುವೆ ಮೆರವಣಿಗೆಯಲ್ಲಿ ಬರುತ್ತಿದ್ದ ಮದುಮಗ ದೀಪಕ್ ಕುಮಾರ್ (21) ಸಂಭ್ರಮಾಚರಣೆಯ ಫೈರಿಂಗ್ ಗೆ ಬಲಿಯಾಗಿದ್ದಾನೆ.

    ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ಸೀಮಪುರಿಯಲ್ಲಿ ಮನೆಯಿಂದ ಮದುವೆಯ ಮೆರವಣಿಗೆ ಹೊರಟಿತ್ತು. ಮದುವೆಯ ಮೆರವಣಿಗೆಯ ಸಂದರ್ಭದಲ್ಲಿ ಕುಡುಕನೊಬ್ಬ ಎರಡು ಗುಂಡು ಹಾರಿಸಿದ್ದಾನೆ. ಒಂದು ಗುಂಡು ವರ ದೀಪಕ್ ತಲೆಯ ಹಿಂಭಾಗಕ್ಕೆ ಬಿದ್ದಿದೆ. ತಕ್ಷಣ ದೀಪಕ್ ಕುಮಾರ್ ಕುದುರೆಯಿಂದ ಕೆಳಗೆ ಕುಸಿದು ಬಿದ್ದಿದ್ದಾನೆ. ನಂತರ ಆತನನ್ನು ಗುರುತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸುಮಾರು 2 ಸಾವನ್ನಪ್ಪಿದ್ದಾನೆ.

    ಆರೋಪಿಯನ್ನು ಪೂರ್ವ ದೆಹಲಿಯ ಶಹೀದ್ ನಗರ ನಿವಾಸಿ ಆದಿಲ್ ಎಂದು ಗುರುತಿಸಲಾಗಿದೆ. ಆದಿಲ್ ಮದುವೆ ಅತಿಥಿಯಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಕುಟುಂಬದ ಸದಸ್ಯರು ದೀಪಕ್ ಕುಮಾರ್ ನನ್ನು ಕೊಲೆ ಮಾಡಲಾಗಿದೆ. ಈ ಕೃತ್ಯದಲ್ಲಿ ನೆರೆಮನೆಯವರ ಪಾತ್ರ ಇದೆ ಎಂದು ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ನಪುರ್ ಪ್ರಸಾದ್ ತಿಳಿಸಿದ್ದಾರೆ.

    ಈ ಅವಘಡದಲ್ಲಿ ಇನ್ನೊಂದು ಗುಂಡು ಕುದುರೆಯ ಮೇಲೆ ಕುಳಿತ್ತಿದ್ದ ಮಗುವಿಗೆ ಬಿದ್ದಿದೆ. ಆದರೆ ಅದೃಷ್ಟವಶಾತ್ ಮಗು ಪಾರಾಗಿದೆ. ಕುಟುಂಬ ಸದಸ್ಯರು ನೆರೆಮನೆಯ ಮುಂದೆ ರಸ್ತೆಯ ಮೇಲೆ ದೇಹವನ್ನು ಇಟ್ಟು ಪ್ರತಿಭಟನೆ ನಡೆಸುತ್ತಿದ್ದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಮದುಮಗ ಆನಂದ್ ವಿಹಾರ್ ನಲ್ಲಿರುವ ಖಾಸಗಿ ಬಸ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಈತ ತಾಯಿ ರಾಧಾ ದೇವಿ, ಸಹೋದರ ಶಿವ ಮತ್ತು ಅವರ ಪತ್ನಿ, ಮತ್ತು ಇಬ್ಬರು ವಿವಾಹಿತ ಸಹೋದರಿಯಾದ ಸೋನಮ್ ಮತ್ತು ಮೀನಾಕ್ಷಿ ಜೊತೆ ವಾಸಿಸುತ್ತಿದ್ದನು. ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ಭಾವಿ ಪತಿ ಬಾಲ್ಡ್ ಆಗ್ತಿದ್ದಾನೆಂದು ಗೊತ್ತಾಗಿ ಸ್ಥಳದಲ್ಲೇ ಮದ್ವೆ ಕ್ಯಾನ್ಸಲ್ ಮಾಡಿದ ವಧು

    ಭಾವಿ ಪತಿ ಬಾಲ್ಡ್ ಆಗ್ತಿದ್ದಾನೆಂದು ಗೊತ್ತಾಗಿ ಸ್ಥಳದಲ್ಲೇ ಮದ್ವೆ ಕ್ಯಾನ್ಸಲ್ ಮಾಡಿದ ವಧು

    – ತರಕಾರಿ ವ್ಯಾಪರಿಯ ಮಗಳೊಂದಿಗೆ ವಿವಾಹವಾದ ಡಾಕ್ಟರ್ ವರ

    ಪಾಟ್ನಾ: ವರ ಬೋಳುಮಂಡೆಯವನಾಗ್ತಿದ್ದಾನೆಂದು ಗೊತ್ತಾಗಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ವರ ರವಿ ಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ತಾನು ಭೇಟಿಯೇ ಆಗದ ಯುವತಿಯೊಂದಿಗೆ ಮದುವೆಯಾಗಲು ದೆಹಲಿಯಿಂದ 1 ಸಾವಿರ ಕಿ.ಮೀ ದೂರದಲ್ಲಿರುವ ಬಿಹಾರದ ಸುಗೌಲಿ ಗ್ರಾಮಕ್ಕೆ ಬಂದಿದ್ದರು.

    ವಧುವಿನ ತಂದೆ ವರ ರವಿಕುಮಾರ್ ಅವರ ತಂದೆಯ ಮನೆಯಲ್ಲಿ ಮೂರು ಬಾರಿ ಉಳಿದುಕೊಂಡಿದ್ದ ಬಳಿಕ 1 ವರ್ಷ ಮುಂಚಿತವಾಗಿಯೇ ಕುಟುಂಬಸ್ಥರು ಮದುವೆಯನ್ನ ನಿಶ್ಚಯಿಸಿದ್ದರು.

    ನಿಗದಿಪಡಿಸಿದಂತೆ ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಅತಿಥಿಗಳು ಮದುವೆ ತಯಾರಿಯಲ್ಲಿ ತೊಡಗಿ, ಊಟೋಪಚಾರವೂ ನಡೆದಿತ್ತು. ವಧು ವರ ಹೂಮಾಲೆ ಬದಲಾಯಿಸಿಕೊಳ್ಳುವ ಶಾಸ್ತ್ರವನ್ನೂ ಮುಗಿಸಿದ್ದರು. ಆದ್ರೆ ಮತ್ತೊಂದು ಶಾಸ್ತ್ರ ಮಾಡುವಾಗ ವರ ರವಿಕುಮಾರ್ ತನ್ನ ಪೇಟವನ್ನು ತೆಗೆಯಬೇಕಿತ್ತು. ಹೀಗಾಗಿ ಅವರು ಪೇಟ ತೆಗೆದಿದ್ದು, ಮುಂದೆ ನಿಂತಿದ್ದ ವಧುಗೆ ಶಾಕ್ ಆಗಿತ್ತು. ತಾನು ಮದುವೆಯಾಗ್ತಿರೋ ಹುಡುಗ ಬಾಲ್ಡ್ ಆಗ್ತಿದ್ದಾನೆ ಎಂದು ಆಗಲೇ ವಧುವಿಗೆ ಗೊತ್ತಾಗಿದ್ದು. ಯಾಕಂದ್ರೆ ಅಲ್ಲಿಯವರೆಗೆ ಆಕೆ ರವಿಕುಮಾರ್ ಅವರನ್ನ ಫೋಟೋಗಳಲ್ಲಿ ಮಾತ್ರ ನೋಡಿದ್ದಳು.

    ವರನ ಕೂದಲ ಉದುರುವಿಕೆಯನ್ನೇ ದೊಡ್ಡದಾಗಿ ಪರಿಗಣಿಸಿದ ವಧು ಸ್ಥಳದಲ್ಲೇ ಮದುವೆ ಕ್ಯಾನ್ಸಲ್ ಮಾಡಿದ್ದು, ಕುಟುಂಬಸ್ಥರು ಹಾಗೂ ಮದುವೆಗೆ ಬಂದಿದ್ದ ಅತಿಥಿಗಳು ಬೆರಗಾಗುವಂತೆ ಮಾಡಿದ್ದಾಳೆ.

    ಎರಡೂ ಕುಟುಂಬದವರು ಎಷ್ಟೇ ಹೇಳಿದ್ರೂ ವಧು ತನ್ನ ನಿರ್ಧಾರ ಬದಲಾಯಿಸಲು ಸಿದ್ಧಳಿರಲಿಲ್ಲ. ಆದ್ರೆ ವರ ರವಿಕುಮಾರ್ ಅಷ್ಟು ದೂರದಿಂದ ಬಂದು, ಮದುವೆಯಾಗಿಯೇ ಮನೆಗೆ ಹಿಂದಿರುಗಬೇಕು ಎಂದು ಸಂಕಲ್ಪ ಮಾಡಿದ್ದರು. ಹೀಗಾಗಿ ರವಿಕುಮಾರ್ ಕುಟುಂಬದವರು ಗ್ರಾಮ ಪಂಚಾಯ್ತಿಯ ಮೊರೆ ಹೋದ್ರು. ಅವರು ಗ್ರಾಮದ ಬಡ ತರಕಾರಿ ವ್ಯಾಪಾರಿಯ ಮಗಳಾದ ನೇಹಾ ಕುಮಾರಿಯನ್ನು ಮದುವೆಯಾಗುವಂತೆ ಸೂಚಿಸಿದ್ದರು.

    ಹೀಗಾಗಿ ಮದುವೆ ಮುರಿದು ಬಿದ್ದ ಎರಡು ದಿನಗಳ ಬಳಿಕ ರವಿಕುಮಾರ್‍ ದೇವಸ್ಥಾನವೊಂದರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನೇಹಾ ಕುಮಾರಿ ಜೊತೆ ಮದುವೆ ಆಗಿದ್ದಾರೆ.

  • ಆರತಕ್ಷತೆಯಲ್ಲಿ ಸೊಸೆಗೆ ಲಿಪ್ ಟು ಲಿಪ್ ಕಿಸ್ ಕೊಟ್ಟ ಕಿಲಾಡಿ ಮಾವ!

    ಆರತಕ್ಷತೆಯಲ್ಲಿ ಸೊಸೆಗೆ ಲಿಪ್ ಟು ಲಿಪ್ ಕಿಸ್ ಕೊಟ್ಟ ಕಿಲಾಡಿ ಮಾವ!

    ಬೀಜಿಂಗ್: ಮಾವನೊಬ್ಬ ಆರತಕ್ಷತೆಯಲ್ಲಿ ಸೊಸೆಗೆ ಲಿಪ್‍ಟುಲಿಪ್ ಕಿಸ್ ನೀಡಿರುವ ಘಟನೆ ಚೀನಾದ ಜಿಂಗಸು ಪ್ರಾಂತ್ಯದ ಪೂರ್ವ ಯಾಂಚೆಂಗ್ ನಲ್ಲಿ ನಡೆದಿದೆ.

    ಆರತಕ್ಷತೆಯಲ್ಲಿ ಮಧು ಮಗಳನ್ನು ಮಾವ ವೇದಿಕೆಯತ್ತ ಕರೆದುಕೊಂಡು ಬರುವುದು ಚೀನಾದ ಪದ್ಧತಿ. ಈ ವೇಳೆ ವಧುವನ್ನು ಕರೆದುಕೊಂಡು ಬರುವಾಗ ಮಾವ ಆಕೆಯ ಹಣೆಗೆ ಮುತ್ತಿಟ್ಟು ಹಾರೈಸುವುದು ಸಾಮಾನ್ಯ. ಆದ್ರೆ ಈ ವ್ಯಕ್ತಿ ಮಗನ ಪತ್ನಿಯನ್ನು ವೇದಿಕೆಯತ್ತ ಕರೆತರುತ್ತಾ, ಮದುವೆ ಸಭಾಂಗಣದಲ್ಲಿ ಕುಳಿತಿದ್ದ ನೂರಾರು ಜನರು ಮುಂದೆಯೇ ಲಿಪ್ ಟು ಲಿಪ್ ಕಿಸ್ ಮಾಡಿದ್ದಾನೆ. ಈ ಎಲ್ಲ ದೃಶ್ಯಗಳು ಸಂಬಂಧಿಕರ ಮೊಬೈಲ್ ನಲ್ಲಿ ಸೆರೆಯಾಗಿವೆ.

    ಮಾವ ತನ್ನ ಸೊಸೆಯಾಗುವವಳನ್ನು ವೇದಿಕೆಯತ್ತ ಕರೆತರುವಾಗಲೇ ಈ ರೀತಿ ವರ್ತನೆ ತೋರಿದ್ದರಿಂದ ವಧು ಹಾಗೂ ನೆರೆದವರಲ್ಲಿ ಇರಿಸು ಮುರಿಸು ಉಂಟುಮಾಡಿದೆ. ಇತ್ತ ವಧುವಿಗೆ ಬಲವಂತವಾಗಿ ಕಿಸ್ ನೀಡುತ್ತಲೇ ಎರಡು ಕುಟುಂಸ್ಥರ ನಡುವೆ ಗಲಾಟೆ ಆರಂಭವಾಗಿದೆ. ಈ ಜಗಳ ತಾರಕ್ಕೇರಿ ಕೆಲವರು ಡೆಕೋರೇಶನ್ ಸಾಮಾಗ್ರಿಗಳನ್ನು ಬಿಸಾಕಿದ್ದಾರೆ. ಈ ಎಲ್ಲಾ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಕುಟುಂಬಸ್ಥರು, ಸದ್ಯ ಎರಡು ಕುಟುಂಬಗಳ ನಡುವಿನ ಮುನಿಸು ಬಗೆಹರಿದಿದೆ. ಆರತಕ್ಷತೆಯಲ್ಲಿ ವರನ ತಂದೆ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ದರಿಂದ ಈ ಘಟನೆ ನಡೆದಿದೆ. ಈ ರೀತಿ ಮಾಡುವ ಮೂಲಕ ಪ್ರಚಾರ ಪಡೆದುಕೊಳ್ಳವವರು ನಾವಲ್ಲ. ಈ ಘಟನೆಯಿಂದಾಗಿ ನಮಗೆ ತೀವ್ರ ಮುಜುಗರ ಉಂಟಾಗಿದೆ ಅಂತಾ ಹೇಳಿಕೊಂಡಿದ್ದಾರೆ.

  • ಶೌಚಕ್ಕೆಂದು ಹೋದ ವಧು ನಾಪತ್ತೆ-ಮದುವೆ ಮಂಟಪದಲ್ಲಿ ಕಾಯುತ್ತಾ ಕುಳಿತ ವರ

    ಶೌಚಕ್ಕೆಂದು ಹೋದ ವಧು ನಾಪತ್ತೆ-ಮದುವೆ ಮಂಟಪದಲ್ಲಿ ಕಾಯುತ್ತಾ ಕುಳಿತ ವರ

    ಲಕ್ನೋ: ಶೌಚಕ್ಕೆ ತೆರಳುವುದಾಗಿ ಹೇಳಿ ಪ್ರಿಯಕರನ ಜೊತೆ ವಧು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಕೊತವಾಲಿ ಕ್ಷೇತ್ರದ ಗುರಖಶ್‍ಗಂಜ್ ಎಂಬಲ್ಲಿ ನಡೆದಿದೆ.

    ಸಂಜೆ ವರನ ಕಡೆಯವರು ಮದುವೆ ಮನೆಗೆ ಆಗಮಿಸಿದ್ದಾರೆ. ವರ ಬಂದ ಕೂಡಲೇ ವಧುವಿನ ಪೋಷಕರು ಸಂಭ್ರಮದಿಂದ ಎಲ್ಲರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ. ಸ್ವಾಗತದ ಬಳಿಕ ಮದುವೆಯ ಶಾಸ್ತ್ರಗಳು ಕೂಡ ಆರಂಭವಾಗಿದ್ದವು. ವಧು-ವರ ಇಬ್ಬರು ಸಹ ಹಾರ ಬದಲಾಯಿಸಿಕೊಂಡಿದ್ದಾರೆ. ಇನ್ನೇನು ಸಪ್ತಪದಿ ತುಳಿಯುವ ಮುನ್ನ ವಧು ಶೌಚದ ನೆಪ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

     

    ವಧುವಿನ ಮನೆಗೆ ಬಂದಿದ್ದ ವರ ಮಂಟಪದಲ್ಲಿ ಕಾಯುತ್ತಾ ಕುಳಿತಿದ್ದಾನೆ. ವರನೊಂದಿಗೆ ಹಾರ ಬದಲಾಯಿಸಿಕೊಂಡ ವಧು ಶೌಚಕ್ಕೆ ಹೋಗಬೇಕೆಂದು ಅಲ್ಲಿಯ ಚಿಕ್ಕ ಹೆಣ್ಣು ಮಕ್ಕಳ ಜೊತೆ ತೆರಳಿದ್ದಾಳೆ. ಕೆಲವು ಸಮಯದ ಬಳಿಕ ಮಕ್ಕಳು ವಾಪಸ್ಸಾದ್ರೆ ವಧು ಅಲ್ಲಿಂದಲೇ ತನ್ನ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ಇತ್ತ ವಧು ನಾಪತ್ತೆ ವಿಷಯ ತಿಳಿದ ಕೂಡಲೇ ಆಕೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗ್ರಾಮದ ಇಬ್ಬರು ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ. ವರನ ಕಡೆಯವರು ವಧು ಪರಾರಿಯಾಗಿದ್ದರಿಂದ ಮದುವೆ ಕ್ಯಾನ್ಸಲ್ ಮಾಡಿ ಹಿಂದಿರುಗಿದ್ದಾರೆ.

    ಯುವತಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಯುವತಿಗೆ ಆಕೆಯ ಪೋಷಕರು ಬಲವಂತವಾಗಿ ಮದುವೆ ಮಾಡಿಸಲು ಮುಂದಾಗಿದ್ದಾರೆ. ವರನ ಪೋಷಕರು ಬೆಳಗ್ಗೆವರೆಗೂ ಕಾದು ತಮ್ಮ ಊರಿಗೆ ಮರಳಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

  • 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿದ್ದಕ್ಕೆ ಮದುವೆಯನ್ನು ಮುರಿದ ವರ!

    50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿದ್ದಕ್ಕೆ ಮದುವೆಯನ್ನು ಮುರಿದ ವರ!

    ಬೀಜಿಂಗ್: 26 ವರ್ಷದ ಯುವತಿಯೊಬ್ಬಳು ತನ್ನ ಮದುವೆಯಲ್ಲಿ ಗಂಡನನ್ನು ತಮಾಷೆ ಮಾಡಲೆಂದು 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿಕೊಂಡು ಬಂದಿದ್ದಕ್ಕೆ ಆಕೆಯ ಮದುವೆಯೇ ಮುರಿದುಬಿದ್ದ ಘಟನೆ ಚೀನಾದಲ್ಲಿ ನಡೆದಿದೆ.

    ಕ್ವಿಂಗ್ ಕಾವೋ (26) 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾಳೆ. ಕ್ವಿಂಗ್ ತನ್ನ ತಲೆ ಕೂದಲಿಗೆ ಬೂದಿ ಬಣ್ಣ ಹಾಗೂ ಬಿಳಿ ಬಣ್ಣದ ಗೆರೆಗಳನ್ನು ಹಾಕಿಕೊಂಡು 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿದ್ದಾಳೆ.

    ತನಗೆ ವಯಸ್ಸಾದರೂ ನನ್ನ ಗಂಡ ನನ್ನನ್ನು ಪ್ರೀತಿಸುತ್ತಾನಾ ಎಂಬುದನ್ನು ಪರೀಕ್ಷಿಸಲು ಕ್ವಿಂಗ್ ಕಾವೋ ಈ ರೀತಿ ಮಾಡಿದ್ದಳು. ಆದರೆ ಮದುವೆ ಗಂಡು ಗುವೊ ಚಿಯನ್ ಇದನ್ನು ತಮಾಷೆಯಾಗಿ ತೆಗೆದುಕೊಳ್ಳದೇ ಗಂಭೀರವಾಗಿ ತೆಗೆದುಕೊಂಡಿದ್ದಾನೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ನಡುರಸ್ತೆಯಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಇಬ್ಬರ ಜಗಳದಿಂದ ಕೆಲವರಿಗೆ ತೊಂದರೆಯಾದರೆ, ಇನ್ನೂ ಕೆಲವರಿಗೆ ಮನರಂಜನೆ ನೀಡುತ್ತಿತ್ತು. ಅವರಿಬ್ಬರು ಜಗಳವಾಡುತ್ತಿದ್ದಾಗ ಕೆಲವರು ಫೋಟೋ, ವಿಡಿಯೋವನ್ನು ತೆಗೆದಿದ್ದಾರೆ.

    ಕ್ವಿಂಗ್‍ನ ಮೇಕಪ್ ತೆರೆಯಲು ಗುವೊ ಹೇಳಿದ್ದಾನೆ. ಆದರೆ ಕ್ವಿಂಗ್ ಇದಕ್ಕೆ ನಿರಾಕರಿಸಿದ್ದಾಳೆ. ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ನನ್ನ ಮೇಕಪ್‍ನಿಂದ ನಿನಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಕ್ವಿಂಗ್ ಪ್ರತಿಕ್ರಿಯೆ ನೀಡಿದ್ದಾಳೆ.

    ತಾನು ಎಷ್ಟು ಹೇಳಿದರೂ ಪತ್ನಿ ಕೇಳದ್ದಕ್ಕೆ ಸಿಟ್ಟಾದ ಗುವೋ ತನ್ನ ಕನ್ನಡಕವನ್ನು ಎಸೆದು, ಟ್ಯಾಕ್ಸಿ ಹಿಡಿದು ಅಲ್ಲಿಂದ ಹೊರಟು ಹೋಗಿದ್ದಾನೆ. ಆದರೆ ಕ್ವಿಂಗ್ ಅಳುತ್ತಾ ಅಲ್ಲಿಯೇ ಕುಳಿತು ಆತನಿಗಾಗಿ ಕಾದಿದ್ದಾಳೆ. ಆದರೆ ಗುವೋ ಮಾತ್ರ ಮತ್ತೆ ಹಿಂತಿರುಗಲಿಲ್ಲ. ನಂತರ ಕ್ವಿಂಗ್ ಕೂಡ ಟ್ಯಾಕ್ಸಿ ಹಿಡಿದು ಅಲ್ಲಿಂದ ಹೊರಟು ಹೋಗಿದ್ದಾಳೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

  • ಪ್ರೀತಿಸಿ ಮದ್ವೆಯಾಗಿ ಪತಿ ಮನೆಗೆ ತೆರಳ್ತಿದ್ದಾಗ ಕಾರಿನಿಂದ ಜಿಗಿದು ಪೊಲೀಸ್ ಠಾಣೆಗೆ ಓಡಿದ ವಧು!

    ಪ್ರೀತಿಸಿ ಮದ್ವೆಯಾಗಿ ಪತಿ ಮನೆಗೆ ತೆರಳ್ತಿದ್ದಾಗ ಕಾರಿನಿಂದ ಜಿಗಿದು ಪೊಲೀಸ್ ಠಾಣೆಗೆ ಓಡಿದ ವಧು!

    ಪಾಟ್ನಾ: ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗಿ ಆತನ ಮನೆಗೆ ಹೋಗುವಾಗ ವಧು ಕಾರಿನಿಂದ ಜಿಗಿದು ವರನ ವಿರುದ್ಧ ಅತ್ಯಾಚಾರದ ದೂರನ್ನು ದಾಖಲಿಸಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ವರದಿಗಳ ಪ್ರಕಾರ ವಧು-ವರ ಇಬ್ಬರೂ ಬಾಲ್ಯ ಸ್ನೇಹಿತರಾಗಿದ್ದು, 2012ರಿಂದ ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದರು. ನಂತರ ಫೆಬ್ರವರಿ 9ರಂದು ಸಂಪ್ರದಾಯದಂತೆ ಮದುವೆಯಾಗಿದ್ದರು. ಮದುವೆ ಆದ ಮಾರನೇ ದಿನ ವಧು ತನ್ನ ಪತಿ ಹಾಗೂ ಕುಟುಂಬದ ವಿರುದ್ಧ ಅತ್ಯಾಚಾರ ಹಾಗೂ ವರದಕ್ಷಿಣೆ ಕೇಸನ್ನು ದಾಖಲಿಸಿದ್ದಾಳೆ.

     ಫೆಬ್ರವರಿ 9ರ ರಾತ್ರಿ ಮದುವೆ ನಡೆದಿದ್ದು, ಮಾರನೇ ದಿನ ಪತಿ, ಪತ್ನಿಯ ತವರು ಮನೆಯಿಂದ ತನ್ನ ಮನೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ದಾರಿ ಮಧ್ಯೆದಲ್ಲಿ ವಧು ಕಾರಿನಿಂದ ಜಿಗಿದು ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಪೊಲೀಸ್ ಠಾಣೆಗೆ ಹೋದ ನಂತರ ತನ್ನ ಪತಿ ವೈಭವ್, ಆತನ ಸಹೋದರ ಸೌರಬ್ ಆನಂದ್, ತಂದೆ ಅಲೋಕ್ ಕುಮಾರ್ ಹಾಗೂ ವರನ ಮಾವ ವಿರುದ್ಧ ದೂರು ನೀಡಿ ಕೇಸ್ ದಾಖಲಿಸಿದ್ದಾಳೆ.

    ಮದುವೆಯಾಗಿ ಗಂಡನ ಮನೆಗೆ ಹೋಗುತ್ತಿರುವಾಗ ಕಾರಿನಲ್ಲಿ ಪತಿ ಹಾಗೂ ನನ್ನ ನಡುವೆ ಜಗಳವಾಗಿತ್ತು. ಆಗ ವೈಭವ್‍ನನ್ನ ಕುತ್ತಿಗೆ ಬಿಗಿದು ಕೊಲ್ಲಲು ಯತ್ನಿಸಿದ್ದನು. ನಾನು ಜಿಗಿದು ಓಡಿ ಹೋಗಲು ಪ್ರಯತ್ನಿಸುವಾಗ ಕಾರು ಚಲಾಯಿಸುತ್ತಿದ್ದ ವೈಭವ್‍ನ ಮಾವ ಲಾಕ್ ಮಾಡಲು ಪ್ರಯತ್ನಿಸಿದ್ದ. ಅಷ್ಟೇ ಅಲ್ಲದೇ ನನ್ನ ಮೈಮೇಲೆ ಇರುವ ಚಿನ್ನಾಭರಣವನ್ನು ದೋಚಲು ಪ್ರಯತ್ನಿಸಿದ್ದರು ಎಂದು ವಧು ಆರೋಪಿಸಿದ್ದಾಳೆ.

    ಮದುವೆಯ ವೇಳೆ ದುಬಾರಿ ಕಾರನ್ನು ವರದಕ್ಷಿಣೆಯಾಗಿ ನೀಡಲು ಹೇಳಿದ್ದರು. ಅಷ್ಟೇ ಅಲ್ಲದೇ ಜಾತಿಯ ಬಗ್ಗೆ ನಿಂದಿಸಿದ್ದರು. 25ಲಕ್ಷ ರೂ. ಗಿಫ್ಟ್ ಆಗಿ ನೀಡಲು ಹೇಳಿದ್ದರು. ಆದರೆ ನಾವು ವರದಕ್ಷಿಣೆ ನೀಡಲು ನಿರಾಕರಿಸಿದ್ವಿ. ಇದರಿಂದ ವರ ಹಸಮಣೆಯಿಂದ ಓಡಿ ಹೋಗಲು ಪ್ರಯತ್ನಿಸುತ್ತಿದ್ದ. ಹಾಗಾಗಿ ಆತನ ವಿರುದ್ಧ ಅತ್ಯಾಚಾರದ ಆರೋಪವನ್ನು ವದು ನೀಡಿದ್ದಾಳೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ವರ ಹಾಗೂ ವಧು ಇಬ್ಬರೂ ಒಪ್ಪಿಕೊಂಡು 2012ರಲ್ಲೇ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಹೀಗಿರುವಾಗ ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿದ್ದಾಳೆ ಎಂದು ವೈಭವ್ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಇಬ್ಬರೂ ಶಾಲಾ ದಿನಗಳಿಂದ ಸ್ನೇಹಿತರು. ವೈಭವ್ ಮಧ್ಯಮ ವರ್ಗದ ಕುಟುಂಬದವನಾಗಿದ್ದರೆ, ಹುಡುಗಿ ಹೈ ಪ್ರೊಫೈಲ್ ಕುಟುಂಬದವಳು ಎಂದು ವರದಿಯಾಗಿದೆ.

    ವೈಭವ್ ದೆಹಲಿಯ ಏರ್ ಲೈನ್ಸ್ ಕಂಪನಿಯಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದು, 2012ರಲ್ಲಿ ಇಬ್ಬರೂ ಒಪ್ಪಿಕೊಂಡು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಂತರ ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದರು. ಫೆ. 09 ರಂದು ಇಬ್ಬರ ಕುಟುಂಬದವರ ಒಪ್ಪಿಗೆ ಪಡೆದು ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿದ್ದರು.

  • ಮದುವೆಯಲ್ಲಿ ನಾಪತ್ತೆಯಾಗಿದ್ದ ವಧು-ವರ ಪ್ರಕರಣಕ್ಕೆ ಟ್ವಿಸ್ಟ್-ಬೇರೊಂದು ಯುವತಿಯೊಂದಿಗೆ ಸಪ್ತಪದಿ ತುಳಿದ ವರ

    ಮದುವೆಯಲ್ಲಿ ನಾಪತ್ತೆಯಾಗಿದ್ದ ವಧು-ವರ ಪ್ರಕರಣಕ್ಕೆ ಟ್ವಿಸ್ಟ್-ಬೇರೊಂದು ಯುವತಿಯೊಂದಿಗೆ ಸಪ್ತಪದಿ ತುಳಿದ ವರ

    ಕೋಲಾರ: ಕಳೆದ ಕೆಲ ದಿನಗಳ ಹಿಂದೆ ಮದುವೆ ಮಂಟಪದಲ್ಲಿ ನಾಪತ್ತೆಯಾಗಿದ್ದ ವಧು-ವರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮದುವೆ ವೇಳೆ ನಾಪತ್ತೆಯಾಗಿದ್ದ ವರ ಗುರೇಶ್ ಇಂದು ಸಂಬಂಧಿ ಮಾನಸ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯೊಂದಿಗೆ ರಹಸ್ಯವಾಗಿ ಮದುವೆಯಾಗಿದ್ದಾರೆ.

    ಇಬ್ಬರ ವಿವಾಹ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಳಿಯ ಕೈವಾರ ಕ್ಷೇತ್ರದಲ್ಲಿ ನಡೆದಿದೆ. ಇದರೊಂದಿಗೆ ಮದುವೆ ಸಂಬಂಧ ನಡೆದ ಹೈಡ್ರಾಮದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ.

    ಏನಿದು ಘಟನೆ?: ಕಳೆದ ಜನವರಿ 26 ರಂದು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಮಾಲೂರು ತಾಲೂಕಿನ ಚನ್ನಕಲ್ಲು ಗ್ರಾಮದ ಗುರೇಶ್ ಜೊತೆ ಬಂಗಾರಪೇಟೆ ತಾಲೂಕಿನ ನರ್ನಹಳ್ಳಿ ಗ್ರಾಮದ ಚೈತ್ರ (ಹೆಸರು ಬದಲಾಯಿಸಲಾಗಿದೆ) ಜೊತೆ ಮದುವೆ ನಡೆಯಬೇಕಿತ್ತು. ಆದರೆ ಮದುವೆ ಮುನ್ನ ಆರಕ್ಷರತೆ ದಿನದಂದು ವಧು ನಾಪತ್ತೆಯಾಗಿದ್ದಳು. ನಂತರದಲ್ಲಿ ವರ ಗುರೇಶ್ ಮದುವೆಯನ್ನು ಕುಟುಂಬದ ಮತ್ತೊಂದು ಹುಡುಗಿಯ ಜೊತೆ ಮದುವೆ ನಿಶ್ಚಯಿಸಿದ್ದರು.

    ಆದರೆ ಮದುವೆ ದಿನ ಮುನ್ನ ಮುಂಜಾನೆ ವರ ಗುರೇಶ್ ಮದುವೆ ಮಂಟಪದಿಂದ ನಾಪತ್ತೆಯಾಗಿದ್ದ, ಇದರೊಂದಿಗೆ ಮದುವೆ ಮುರಿದು ಬಿದ್ದಿತ್ತು. ಮದುವೆ ಮನೆಯಲ್ಲಿ ನಡೆದ ವರ-ವಧು ನಾಪತ್ತೆಯ ದೊಡ್ಡ ಹೈ-ಡ್ರಾಮಾ ರಾಜ್ಯದೆಲ್ಲೆಡೆ ಸುದ್ದಿಯಾಗಿತ್ತು.