Tag: ವರ

  • ತಾಳಿ ಕಟ್ಟಿದ ಬಳಿಕ ಅನಾರೋಗ್ಯ ಕಾರಣ ಕೊಟ್ಟು ವರ ಎಸ್ಕೇಪ್

    ತಾಳಿ ಕಟ್ಟಿದ ಬಳಿಕ ಅನಾರೋಗ್ಯ ಕಾರಣ ಕೊಟ್ಟು ವರ ಎಸ್ಕೇಪ್

    ಮಂಗಳೂರು: ತಾಳಿ ಕಟ್ಟಿದ ಬಳಿಕ ವರನೊಬ್ಬ ಅನಾರೋಗ್ಯ ಕಾರಣ ಕೊಟ್ಟು ಎಸ್ಕೇಪ್ ಆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಬೀರಿ ಬಳಿ ನಡೆದಿದೆ.

    ಕೇರಳದ (Kerala) ಕೊಝಿಕ್ಕೋಡ್ ಮೂಲದ ಅಕ್ಷಯ್ ಮದುವೆ ಮಂಗಳೂರು (Mangaluru) ಮೂಲದ ಯುವತಿ ಜೊತೆ ನಡೆಯಬೇಕಿತ್ತು. ಅಂತೆಯೇ ಯುವತಿ ಕರ್ನಾಟಕದ-ಕೇರಳ ಗಡಿಭಾಗ ಬೀರಿಯ ಖಾಸಗಿ ಹಾಲ್ ಗೆ ಬಂದಿದ್ದಾರೆ. ಆದರೆ ವರ ತಾಳಿ ಕಟ್ಟಿದ ಬಳಿಕ ಭಾರೀ ಹೈಡ್ರಾಮಾ ನಡೆಸಿದ್ದಾನೆ.

    ನಡೆದಿದ್ದೇನು..?: ಕಲ್ಯಾಣ ಮಂಟಪದಲ್ಲಿ ಅಕ್ಷಯ್ ಮಂಗಳೂರು ಮೂಲದ ಯುವತಿ ಜೊತೆ ಮದುವೆಯಾಗುತ್ತಿರುವ ವಿಚಾರ ಮಾಜಿ ಪ್ರೇಯಸಿ ಗಮನಕ್ಕೆ ಬಂದಿದೆ. ಹೀಗಾಗಿ ಮಾಜಿ ಪ್ರೇಯಸಿ ಕಲ್ಯಾಣಮಂಟಪಕ್ಕೆ ಬಂದು ಕ್ಯಾತೆ ತೆಗೆದಿದ್ದಾಳೆ. ಈ ಹಿನ್ನೆಲೆಯಲ್ಲಿ ವರ, ಅನಾರೋಗ್ಯ ಕಾರಣ ಮುಂದಿಟ್ಟಿದ್ದಾನೆ. ಮದುವೆಗೆ ಬಂದಿದ್ದ ಸಂಬಂಧಿಕರಿಗೆ ಕಿಡ್ನಿಯಲ್ಲಿ ಕಲ್ಲುಂಟಾಗಿ ಆಸ್ಪತ್ರೆಗೆ ದಾಖಲು ಆಗುತ್ತೇವೆ ಅಂತ ಹೇಳಿದ್ದಾನೆ. ಅಲ್ಲದೇ ಸಂಬಂಧಿಕರೇ ವರನನ್ನು ಕಲ್ಯಾಣ ಮಂಟಪದಿಂದ (Kalyana Mantapa) ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಚಿವರ ಡಿನ್ನರ್‌ ಪಾಲಿಟಿಕ್ಸ್‌ – ಒಂದೂವರೆಗೆ ಗಂಟೆ ಏನು ಚರ್ಚೆ ನಡೆದಿದೆ?

    ಅಕ್ಷಯ್ ಮದುವೆಗೆ ಮಾಜಿ ಪ್ರಿಯತಮೆ ವಿರೋಧ: ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಗೆ ಶಾದಿ ಡಾಟ್ ಕಾಮ್ ಮೂಲಕ ಅಕ್ಷಯ್ ಪರಿಚಯವಾಗಿದೆ. ಈ ಪರಿಚಯವು ಪ್ರೀತಿಗೆ ತಿರುಗಿ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ ಆರೋಪ ಕೇಳಿಬಂದಿದೆ. ಇದನ್ನೂ ಓದಿ; ಬಿಜೆಪಿ ನಾಯಕರ ‘ನನ್ನನ್ನೂ ಬಂಧಿಸಿ’ ಪೋಸ್ಟರ್‌ ಅಭಿಯಾನಕ್ಕೆ ಕಾಂಗ್ರೆಸ್‌ ಠಕ್ಕರ್‌

    ಈ ಸಂಬಂಧ ಯುವತಿಯು ಕೇರಳದ ಪೊಲೀಸ್ ಠಾಣೆಯಲ್ಲಿ ಡಿ.26ಕ್ಕೆ ಅತ್ಯಾಚಾರ ದೂರು ದಾಖಲಿಸಿದ್ದರು. ಆರೋಪಿ ಅಕ್ಷಯ್ ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಈ ನಡುವೆ ಮಂಗಳೂರಿನ ಯುವತಿ ಜೊತೆ ಅಕ್ಷಯ್ ಗೆ ವಿವಾಹ ನಿಶ್ಚಯವಾಗಿದೆ. ವಿಷಯ ತಿಳಿದು ಆಗಮಿಸಿದ ಮಾಜಿ ಪ್ರಿಯತಮೆ ಹಾಲ್ ಮುಂಭಾಗ ಹೈಡ್ರಾಮ ಮಾಡಿದ್ದಾಳೆ.

  • ಊಟದ ಮೆನುವಿನಲ್ಲಿ ಮಟನ್ ಕರ್ರಿ ಇಲ್ಲವೆಂದು ಮದುವೆ ಕ್ಯಾನ್ಸಲ್ ಮಾಡಿದ ವರ!

    ಊಟದ ಮೆನುವಿನಲ್ಲಿ ಮಟನ್ ಕರ್ರಿ ಇಲ್ಲವೆಂದು ಮದುವೆ ಕ್ಯಾನ್ಸಲ್ ಮಾಡಿದ ವರ!

    ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕ್ಲುಲ್ಲಕ ವಿಚಾರಕ್ಕಾಗಿ ಮದುವೆಗಳು (Marriage Cancel) ರದ್ದಾಗುವ ಪ್ರಕರಣಗಳು ಹೆಚ್ಚುತ್ತಿವೆ. ಅಂಥದ್ದೇ ಘಟನೆಯೊಂದು ನಡೆದು ಹೋಗಿರುವ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

    ಹೌದು. ವಧುವಿನ ಕಡೆಯವರು ಊಟದ ಮೆನುವಿನಲ್ಲಿ ಮಟನ್ ಬೋನ್ ಮ್ಯಾರೋ (Mutton Bone Marrow) ಸೇರಿಸಿಲ್ಲವೆಂದು ವರನ ಕಡೆಯವರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ನಿಜಾಮಾಬಾದ್‍ನ ವಧು ಹಾಗೂ ಜಗ್ತಿಯಾಳ್ ಮೂಲದ ವರನಿಗೂ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಕಳೆದ ನವೆಂಬರ್ ತಿಂಗಳಲ್ಲಿ ವಧುವಿನ ಮನೆಯಲ್ಲಿ ನೆರವೇರಿತ್ತು. ಆದರೆ ಇದೀಗ ಸಣ್ಣ ವಿಚಾರವೊಂದಕ್ಕೆ ಮದುವೆಯೇ ರದ್ದಾಗಿದೆ.

    ನಿಶ್ಚಿತಾರ್ಥದ (Engagement) ಬಳಿಕ ವಧುವಿನ ಮನೆಯವರು ತಮ್ಮ ಕುಟುಂಬ ಸದಸ್ಯರು ಮತ್ತು ವರನ ಸಂಬಂಧಿಕರು ಸೇರಿದಂತೆ ಅತಿಥಿಗಳಿಗಾಗಿ ಮಾಂಸಾಹಾರಿ ಮೆನುವನ್ನು ಏರ್ಪಡಿಸಿದ್ದರು. ಆದರೆ ಈ ಮೆನುವಿನಲ್ಲಿ ಮಟನ್ ಐಟಮ್ ಇರಲಿಲ್ಲ. ಇದನ್ನು ಗಮನಿಸಿದ ವರನ ಕಡೆಯವರು ಮಟನ್ ಬೇಕು ಎಂದು ಹಠಕ್ಕೆ ಬಿದ್ದರು. ಈ ಸಂಬಂಧ ಎರಡೂ ಮನೆಯವರಿಗೂ ಜಗಳ ಆರಂಭವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ ಪೊಲೀಸರು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ.

    ಘಟನಾ ಸ್ಥಳಕ್ಕೆ ಬಂದಿರುವ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ವರನ ಕುಟುಂಬದವರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ ವಧುವಿನ ಕಡೆಯವರು ನಮಗೆ ಅವಮಾನ ಮಾಡಿದರೆಂದು ಹೇಳಿ ವರನ ಕಡೆಯವರು ಆಕ್ರೋಶಗೊಂಡರು.

    ವಧುವಿನ ಕಡೆಯವರು ಉದ್ದೇಶಪೂರ್ವಕವಾಗಿಯೇ ಮಟನ್ ಕರ್ರಿ ಮಾಡಿಲ್ಲ ಎಂದು ವರನ ಕಡೆಯವರು ಆರೋಪಿಸಿದರು. ಈ ಜಗಳ ತಾರಕಕ್ಕೇರಿ ಕೊನೆಗೆ ಮದುವೆಯನ್ನೇ ರದ್ದು ಮಾಡುವುದಾಗಿ ನಿರ್ಧಾರ ಮಾಡಲಾಯಿತು.

  • ತಾಳಿ ದೂಡಿ ಮದುವೆ ಬೇಡವೆಂದ ಪ್ರಕರಣ- ನಾನಿನ್ನೂ ಓದಬೇಕೆಂದ ವಧು!

    ತಾಳಿ ದೂಡಿ ಮದುವೆ ಬೇಡವೆಂದ ಪ್ರಕರಣ- ನಾನಿನ್ನೂ ಓದಬೇಕೆಂದ ವಧು!

    ಚಿತ್ರದುರ್ಗ: ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಧು (Bride) ಕಾರಣ ನೀಡಿದ್ದಾಳೆ. ನಾನಿನ್ನೂ ಓದಬೇಕು. ಹೀಗಾಗಿ ಮದುವೆಗೆ ನನ್ನ ಒಪ್ಪಿಗೆ ಇಲ್ಲ ಎಂದು ತಿಳಿಸಿದ್ದಾಳೆ.

    ನಡೆದಿದ್ದೇನು..?: ಚಿತ್ರದುರ್ಗ (Chitradurga) ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದ ಮಂಜುನಾಥ್ ಹಾಗೂ ಚಳ್ಳಕೆರೆ ತಾಲೂಕಿನ ತಿಪ್ಪರೆಡ್ಡಿಹಳ್ಳಿಯ ಐಶ್ವರ್ಯಾ ಜೊತೆ ವಿವಾಹ ಫಿಕ್ಸ್ ಆಗಿತ್ತು. ಆದರೆ ಗುರುವಾರ ಬೆಳಗ್ಗೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಯ ಮುಹೂರ್ತ ನಡೆಯುವ ವೇಳೆ ವರನಿಗೆ ವಧು ಶಾಕ್ ನೀಡಿದ್ದಾಳೆ.

    ವರ ತಾಳಿಕಟ್ಟುವ ವೇಳೆ ಮಂಜುನಾಥ್ ನನಗೆ ಇಷ್ಟ ಇಲ್ಲವೆಂದು ಹೇಳಿದ್ದಾಳೆ. ಯುವತಿ ನಡೆಗೆ ಯುವಕನ ಸಂಬಂಧಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಆಗ ಯುವತಿ ಮನೆಯವರು ಹಾಗೂ ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿತ್ತು.  ಇದನ್ನೂ ಓದಿ: ತಾಳಿ ಕಟ್ಟುವಾಗ್ಲೇ ಕೈ ಅಡ್ಡ ಹಿಡಿದ ವಧು- ಮುರಿದು ಬಿದ್ದ ಮದ್ವೆಯ ವೀಡಿಯೋ ವೈರಲ್

    ಡಿ.6ರಂದು ನಡೆದಿದ್ದ ಆರತಕ್ಷತೆ ನಡೆದಿತ್ತು. ಆವಾಗ ವಧು ಚೆನ್ನಾಗಿಯೇ ಇದ್ದಳು. ಆದರೆ ಡಿ.7 ರಂದು ನಡೆಯಬೇಕಿದ್ದ ಮುಹೂರ್ತದ ಸಂದರ್ಭದಲ್ಲಿ ವಧು ಉಲ್ಟಾ ಹೊಡೆದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವರನ ಸಹೋದರ ಹಾಗೂ ಸಂಬಂಧಿಗಳು ವಧುವಿನ ಕುಟುಂಬಸ್ಥರ ವಿರುದ್ಧ ಕಿಡಿಕಾರಿದ್ದರು.

  • ತಾಳಿ ಕಟ್ಟುವಾಗ್ಲೇ ಕೈ ಅಡ್ಡ ಹಿಡಿದ ವಧು- ಮುರಿದು ಬಿದ್ದ ಮದ್ವೆಯ ವೀಡಿಯೋ ವೈರಲ್

    ತಾಳಿ ಕಟ್ಟುವಾಗ್ಲೇ ಕೈ ಅಡ್ಡ ಹಿಡಿದ ವಧು- ಮುರಿದು ಬಿದ್ದ ಮದ್ವೆಯ ವೀಡಿಯೋ ವೈರಲ್

    ಚಿತ್ರದುರ್ಗ: ಹೆಣ್ಣು ನೋಡುವಲ್ಲಿಂದ ಹಿಡಿದು ಇನ್ನೇನು ತಾಳಿ ಕಟ್ಟುವವರೆಗಿನ ಎಲ್ಲಾ ಶಾಸ್ತ್ರ, ಸಿದ್ಧತೆಗಳು ನಡೆದ ಬಳಿಕ ಮಂಟಪದಲ್ಲಿಯೇ ಕೆಲವೊಂದು ಮದುವೆಗಳು ಮುರಿದುಬಿದ್ದ ಪ್ರಸಂಗಗಳನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಇದೀಗ ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಅಂಥದ್ದೇ ಘಟನೆಯೊಂದು ನಡೆದಿದೆ.

    ಹೌದು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (Hosadurga Taluku) ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ ಮದುವೆ ಕ್ಯಾನ್ಸಲ್ (Marriage Cancel) ಆಗಿದೆ. ವರ ತಾಳಿಕಟ್ಟುವಾಗ ವಧು ತಾಳಿಗೆ ಕೈ ಅಡ್ಡ ಹಿಡಿದು ತಡೆದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ನಡೆದಿದ್ದೇನು..?: ಚಿಕ್ಕಬ್ಯಾಲದಕೆರೆ ಗ್ರಾಮದ ಮಂಜುನಾಥ್ ಹಾಗೂ ಚಳ್ಳಕೆರೆ ತಾಲೂಕಿನ ತಿಪ್ಪರೆಡ್ಡಿಹಳ್ಳಿಯ ಐಶ್ವರ್ಯಾ ಜೊತೆ ವಿವಾಹ ಫಿಕ್ಸ್ ಆಗಿತ್ತು. ಆದರೆ ಗುರುವಾರ ಬೆಳಗ್ಗೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಯ ಮುಹೂರ್ತ ನಡೆಯುವ ವೇಳೆ ವರನಿಗೆ ವಧು ಶಾಕ್ ನೀಡಿದ್ದಾಳೆ. ವರ ತಾಳಿಕಟ್ಟುವ ವೇಳೆ ಮಂಜುನಾಥ್ ನನಗೆ ಇಷ್ಟ ಇಲ್ಲವೆಂದು ಹೇಳಿದ್ದಾಳೆ. ಯುವತಿ ನಡೆಗೆ ಯುವಕನ ಸಂಬಂಧಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಆಗ ಯುವತಿ ಮನೆಯವರು ಹಾಗೂ ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ: 4 ಲಕ್ಷ ರೂ.ಗೆ ತಾಯಿಯಿಂದ್ಲೇ ಮಗಳ ಮಾರಾಟ – ಖರೀದಿಸಿ ಮದ್ವೆಯಾದ ವ್ಯಕ್ತಿಯಿಂದ ಅನೈತಿಕ ಚಟುವಟಿಕೆಗೆ ಒತ್ತಾಯ

    ಈ ವೇಳೆ ಎರಡು ಕಡೆಯ ಸಂಬಂಧಿಗಳು ವಧುವಿನ ಮನವೊಲಿಸಲು ಯತ್ನಿಸಿದ್ರು ಕೂಡ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮದುವೆ ಮುರಿದುಬಿದ್ದಿದೆ. ಮದುವೆಗೆ ಆಗಮಿಸಿದ ಜನರು, ಸಂಬಂಧಿಗಳು ವಧುಗೆ ಹಿಡಿಶಾಪ ಹಾಕಿದ್ದಾರೆ. ವರನ ಕನಸು ನುಚ್ಚು ನೂರು ಮಾಡಿದಳು. ಮೊದಲೇ ತಿಳಿಸಿದ್ರೆ ಸಮಸ್ಯೆ ಎದುರಾಗ್ತಿರಲಿಲ್ಲ ಅಂತ ಹಿಡಿಶಾಪ ಹಾಕಿದ್ದಾರೆ.

    ಮದುವೆ ನಿರಾಕರಣೆಗೆ ಈವರೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಗೆ ಯುವತಿ ಸಮ್ಮತಿಸಿದ್ದು, ಆಕೆ ತಾಳಿಕಟ್ಟುವ ವೇಳೆ ಧೈರ್ಯ ಮಾಡಿ ವಿವಾಹ ನಿರಾಕರಿಸಿದ್ದಾಳೆಂಬ ಮಾತುಗಳು ಕೇಳಿಬಂದಿವೆ. ಸದ್ಯ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಮದುವೆಯ ಮರುದಿನವೇ 1.5 ಲಕ್ಷ ಹಣ, ಚಿನ್ನಾಭರಣಗಳೊಂದಿಗೆ ವಧು ಪರಾರಿ!

    ಮದುವೆಯ ಮರುದಿನವೇ 1.5 ಲಕ್ಷ ಹಣ, ಚಿನ್ನಾಭರಣಗಳೊಂದಿಗೆ ವಧು ಪರಾರಿ!

    ಚಂಡೀಗಢ: ಮದುವೆಯಾದ ಮರುದಿನವೇ 1.5 ಲಕ್ಷ ಹಣ ಹಾಗೂ ಚಿನ್ನಾಭರಣಗಳೊಂದಿಗೆ ಅತ್ತೆ ಮನೆಯಿಂದ ವಧು ಪರಾರಿಯಾದ (Bride Escape With Gold And Jewellery) ಘಟನೆ ಗುರುಗ್ರಾಮದ ಬಿಲಾಸ್ಪುರ ಪ್ರದೇಶದಲ್ಲಿ ನಡೆದಿದೆ.

    ಈ ಸಂಬಂಧ ವರನ ತಂದೆ ಅಶೋಕ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ತನ್ನ ಕಿರಿಯ ಮಗನಿಗೆ ಮದುವೆಯಾಗಬೇಕು. ಹೀಗಾಗಿ ಹುಡುಗಿ ಹುಡುಕುವಂತೆ ಸಂಬಂಧಿಕರ ಬಳಿ ಹೇಳಿದ್ದೆ. ಅಂತೆಯೇ ಸಂಬಂಧಿಕ ಮನಿಶ್ ಎಂಬಾತ ಮಂಜುವನ್ನು ಪರಿಚಯ ಮಾಡಿಕೊಟ್ಟಿದ್ದು, ಆತ ಒಬ್ಬಳು ಹುಡುಗಿಯನ್ನು ತೋರಿಸಿದ್ದಾನೆ. ನಿಮ್ಮ ಮಗನಿಗೆ ಈಕೆ ಸರಿಯಾದ ಜೋಡಿಯಾಗುತ್ತಾಳೆ ಎಂದು ತಿಳಿಸಿದ್ದಾನೆ ಎಂದು ಹೇಳಿದರು.

    ಅಲ್ಲದೆ ಯುವತಿ ಕುಟುಂಬ ಬಡತನದಿಂದ ಕೂಡಿದ್ದು, ಅವರ ಬಳಿ ಹಣವಿಲ್ಲ ಎಂದು ಮಂಜು ಮತ್ತು ಆತನ ಸಹಚರರು ತಿಳಿಸಿದ್ದಾರೆ. ಇದಕ್ಕೆ ಅಶೋಕ್ ಕುಮಾರ್ ತನ್ನ ಕುಟುಂಬಕ್ಕೆ ವರದಕ್ಷಿಣೆ ಬೇಡ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಅತ್ತೆ ಕೊಂದಿದ್ದ ಸೊಸೆ ಅರೆಸ್ಟ್

    ಪ್ರೀತಿ ನನ್ನ ಮನೆಯವರಿಗೆ ಇಷ್ಟವಾದ ನಂತರ ನಾನು ಆಕೆಯ ಕುಟುಂಬಕ್ಕೆ 1 ಲಕ್ಷ ಮತ್ತು ಕೆಲವು ಬಟ್ಟೆಗಳನ್ನು ನೀಡಿದ್ದೇನೆ. ಮದುವೆಯ ನಂತರ ಮನೆಯಲ್ಲಿ ತಡರಾತ್ರಿಯವರೆಗೂ ಸಂಭ್ರಮಾಚರಣೆ ಇತ್ತು. ಎಂದಿನಂತೆ ಮರುದಿನ ಬೆಳಗ್ಗೆ ಮಗ ಕೆಲಸಕ್ಕೆ ತೆರಳಿದ್ದಾನೆ. ಈ ವೇಳೆ ಸೊಸೆ ಪ್ರೀತಿ ನಾಪತ್ತೆಯಾಗಿದ್ದಾಳೆ ಎಂದು ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದರು.

    ಸೊಸೆ ಕಾಣೆಯಾದ ಬಳಿಕ ಮನೆ ಪರಿಶೀಲನೆ ನಡೆಸಿದೆವು. ಈ ವೇಳೆ 1.5 ಲಕ್ಷ ನಗದು ಹಾಗೂ ಚಿನ್ನಾಭರಣಗಳು ಕೂಡ ಕಾಣೆಯಾಗಿದ್ದು, ಪ್ರೀತಿ ಅದರೊಂದಿಗೆ ಓಡಿ ಹೋಗಿರುವುದು ಬಯಲಾಯಿತು. ಇತ್ತ ಸಂಬಂಧ ಮಾಡಿದ್ದ ಮಂಜುಗೆ ಈ ವಿಚಾರ ತಿಳಿಸಲಾಯಿತು. ಆದರೆ ಆತ ಕೊಲೆ ಬೆದರಿಕೆ ಹಾಕಿದ ಎಂದು ಪೊಲೀಸರಿಗೆ ಆಶೋಕ್ ಕುಮಾರ್ ತಿಳಿಸಿದ್ದಾರೆ.

    ಘಟನೆ ಬಳಿಕ ಪ್ರೀತಿ, ಮಂಜು ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಬಿಲಾಸ್‍ಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಬಂಧಿಕರ ಮನೆಗೆ ಬಂದಿದ್ದ ನೂತನ ವಧು-ವರ ದುರ್ಮರಣ!

    ಸಂಬಂಧಿಕರ ಮನೆಗೆ ಬಂದಿದ್ದ ನೂತನ ವಧು-ವರ ದುರ್ಮರಣ!

    ತಿರುವನಂತಪುರಂ: ಸಂಬಂಧಿಕರ ಮನೆಗೆ ಫೋಟೋಶೂಟ್ (Photoshoot) ವೇಳೆ ನೂತನ ವಧು-ವರ (Bride- Groom) ಸೇರಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ.

    ತಿರುವನಂತಪುರಂನಲ್ಲಿರುವ ಪಲ್ಲಿಕಲ್ ನದಿಯಲ್ಲಿ (Pallikal River) ಈ ಅವಘಡ ಸಂಭವಿಸಿದೆ. ನೂತನ ವಧು-ವರ ಬಂಡೆ ಮೇಲೆ ನಿಂತು ಫೋಟೋಶೂಟ್ ಮಾಡಿಸುತ್ತಿದ್ದರು. ಈ ವೇಳೆ ಆಯತಪ್ಪಿ ಇಬ್ಬರೂ ನೀರಿಗೆ ಬಿದ್ದಿದ್ದಾರೆ. ಇವರಿಬ್ಬರನ್ನು ರಕ್ಷಿಸಲು ಸಂಬಂಧಿಕರೊಬ್ಬರು ನೀರಿಗೆ ಹಾರಿದ್ದು, ಅವರು ಕೂಡ ದಾರುಣವಾಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮತ್ತೊಂದು ಬಸ್ ಡೋರ್ ಮುರಿದ ನಾರಿಶಕ್ತಿ

    ಮೃತರನ್ನು ಸಿದ್ದಿಕ್, ನೌಫಿ ಹಾಗೂ ಅನ್ಸಿಲ್ ಎಂದು ಗುರುತಿಸಲಾಗಿದೆ. ಇವರೆಲ್ಲ ಕೊಲ್ಲಂ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಘಟನೆ ನಡೆದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಈ ವೇಳೆ ಸಂಂಬಧಿಕರ ಮೃತದೇಹ ಪತ್ತೆಯಾಯಿತು. ಇನ್ನು ಘಟನೆ ನಡೆದ ಒಂದು ದಿನದ ಬಳಿಕ ವಧು ಹಾಗೂ ವರನ ಶವ ಪತ್ತೆಯಾಗಿದೆ. ನಂತರ ಮೂವರ ಮೃತದೇಹವನ್ನು ಕೊಲ್ಲಂ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.

    ವಧು ಹಾಗೂ ವರ ನೀರಿಗೆ ಬೀಳುತ್ತಿದ್ದಂತೆಯೇ ಅವರ ರಕ್ಷಣೆ ಮಾಡುವ ಸಲುವಾಗಿ ಅನ್ಸಿಲ್ ನೀರಿಗೆ ಧುಮುಕಿದ್ದಾರೆ. ಆದರೆ ಅವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಾರದ ಹಿಂದೆಯಷ್ಟೇ ಜೋಡಿಗೆ ಮದುವೆಯಾಗಿದ್ದು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಅವರು ಅನ್ಸಿಲ್ ಮನೆಗೆ ಬಂದಿದ್ದರು. ಅಂತೆಯೇ ಮೂವರು ಅನ್ಸಿಲ್ ಮನೆ ಪಕ್ಕದಲ್ಲಿರುವ ನದಿ ಬದಿಗೆ ಫೋಟೋಶೂಟ್‍ಗಾಗಿ ತೆರಳಿದ್ದರು. ಈ ವೇಳೆ ಬಂಡೆ ಮೇಲಿನಿಂದ ಆಯತಪ್ಪಿ ನದಿಗೆ ಬಿದ್ದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರದಕ್ಷಿಣೆ ಕೇಳಿದ್ದಕ್ಕೆ ವರನನ್ನೇ ಮರಕ್ಕೆ ಕಟ್ಟಿ ಹಾಕಿದ ವಧುವಿನ ಕಡೆಯವ್ರು

    ವರದಕ್ಷಿಣೆ ಕೇಳಿದ್ದಕ್ಕೆ ವರನನ್ನೇ ಮರಕ್ಕೆ ಕಟ್ಟಿ ಹಾಕಿದ ವಧುವಿನ ಕಡೆಯವ್ರು

    ಲಕ್ನೋ: ಮದುವೆ (Marriage) ಸಮಾರಂಭದಲ್ಲಿ ವರದಕ್ಷಿಣೆ (Dowry) ಕೇಳಿದ್ದಕ್ಕೆ ವಧುವಿನ ಕಡೆಯವರು ವರನನ್ನೇ (Groom) ಕಟ್ಟಿಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವಧು-ವರ ಹೂ ಮಾಲೆಗಳನ್ನು ಬದಲಿಸಿಕೊಳ್ಳುವುದಕ್ಕೂ ಮೊದಲು ವರ ವಧುವಿನ ಕುಟುಂಬಕ್ಕೆ ವರದಕ್ಷಿಣೆಯ ಬೇಡಿಕೆ ಇಟ್ಟಿದ್ದ. ಇದರಿಂದ ಕೆಂಡಾಮಂಡಲವಾದ ವಧುವಿನ ಕುಟುಂಬದವರು ವರನನ್ನು ಮರಕ್ಕೆ ಕಟ್ಟಿ ಹಾಕಿದ್ದಾಗಿ ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

    ವೈರಲ್ ಆಗಿರುವ ವೀಡಿಯೋದಲ್ಲಿ ವಧುವಿನ ಕುಟುಂಬದವರು ವರನನ್ನು ಮರಕ್ಕೆ ಕಟ್ಟಿಹಾಕುವುದು ಮಾತ್ರವಲ್ಲದೇ ಅವಾಚ್ಯವಾಗಿ ನಿಂದಿಸುವುದನ್ನು ಕೇಳಬಹುದು. ಆದರೂ ವಧುವಿನಕಡೆಯವರ ವರ್ತನೆಯನ್ನು ವರ ವಿರೋಧಿಸದೇ ಮೌನವಾಗಿ ನಿಂತಿರುವುದು ಕಾಣಿಸಿಕೊಂಡಿದೆ. ಇದನ್ನೂ ಓದಿ: ಮಲಗಿದ್ದ ಪತಿಯ ಗುಪ್ತಾಂಗಕ್ಕೆ ಮಧ್ಯರಾತ್ರಿ ಕಾದ ಎಣ್ಣೆ ಎರಚಿ ಪತ್ನಿ ಎಸ್ಕೇಪ್!

    ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಮಾಂಧಾಟ ಪೊಲೀಸ್ ಠಾಣೆಯ ಪೊಲೀಸರು ವರನನ್ನು ಬಿಡುಗಡೆಗೊಳಿಸಿ ಬಳಿಕ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಧು ಹಾಗೂ ವರನ ಕಡೆಯವರು ಬಳಿಕ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಆದರೆ ಎರಡೂ ಕಡೆಯವರು ರಾಜಿ ಮಾಡಿಕೊಳ್ಳಲು ಮುಂದಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೃಹತ್‌ ಗಾತ್ರದ ಕಡಿದ ಮರ ತಬ್ಬಿಕೊಂಡು ಸೆಕ್ಸ್‌ – ವಿಕೃತ ಕಾಮಿ ಅರೆಸ್ಟ್‌

  • ಪಶ್ಚಿಮ ಬಂಗಾಳ ಮೂಲದ ಅಂಧೆಗೆ ಬಾಳು ಕೊಟ್ಟ ಕೊಪ್ಪಳದ ಯುವಕ

    ಪಶ್ಚಿಮ ಬಂಗಾಳ ಮೂಲದ ಅಂಧೆಗೆ ಬಾಳು ಕೊಟ್ಟ ಕೊಪ್ಪಳದ ಯುವಕ

    ಕೊಪ್ಪಳ: ಇಲ್ಲಿ ನಡಿತಾ ಇರೋ ಮದುವೆಯ ವಧು (Bride) ಶ್ಚಿಮ ಬಂಗಾಳ ಮೂಲದ ಪೂಜಾ. 4 ವರ್ಷದ ಹಿಂದೆ ಟ್ಯೂಮರ್ ರೋಗಕ್ಕೆ ತುತ್ತಾಗಿ ತನ್ನ ಎರಡು ಕಣ್ಣುಗಳ ದೃಷ್ಠಿಯನ್ನೇ ಕಳೆದುಕೊಂಡಿದ್ದಾಳೆ. ಹೆತ್ತ ತಂದೆಯನ್ನು ಕಳೆದುಕೊಂಡ ಈ ಪೂಜಾಳ ಬಾಳು ಸಹ ಟ್ಯೂಮರ್ ರೋಗದಿಂದ ಕತ್ತಲಾಗಿ ಬಿಟ್ಟಿದೆ. ಸದ್ಯ ಈ ಕತ್ತಲೆಯ ಜೀವನದಲ್ಲಿ ಕೈ ಹಿಡಿದು ನಡೆಸಲು ಆಕೆಯ ಬಾಳಿಗೆ ದೀಪವಾಗಿ ಬಂದಿರುವ ಕನ್ನಡದ ಯುವಕ ಕೊಪ್ಪಳ (Koppala) ನಿವಾಸಿ ಮಂಜುನಾಥ್ ಶೆಟ್ಟಿ.

    ಕೊಪ್ಪಳದ ಮಂಜುನಾಥ್ ಶೆಟ್ಟಿ ಹಾಗೂ ಅಂಧ (Blind) ಯುವತಿ ಪೂಜಾ (ಶಿವಾನಿ) ಸದ್ಯ ಒಂದಾಗಿ ಬಾಳ ಪಯಣ ಶುರು ಮಾಡಿದ್ದಾರೆ. ಗುರುವಾರ ಕೊಪ್ಪಳದ ವಾಸವಿ ಕಲ್ಯಾಣ ಮಂಟಪದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಣ್ಣಿಲ್ಲದ ಕತ್ತಲಲ್ಲಿ ಇದ್ದ ತನ್ನ ಜೀವನಕ್ಕೊಂದು ಅರ್ಥ ಸಿಕ್ಕಿದೆ. ಈಗ ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಶಿವಾನಿ ಭಾವುಕಳಾಗಿದ್ದಾಳೆ.

    ಮಂಜುನಾಥ್ ಶೆಟ್ಟಿ ಕೊಪ್ಪಳದಲ್ಲಿ ಸಣ್ಣ ಉದ್ಯಮಿ. ಸಿಸಿಟಿವಿ ಇನ್‌ಸ್ಟಾಲೇಶನ್, ಎಣ್ಣೆ ಗಾಣದ ಉದ್ಯಮ ನಡೆಸುತ್ತಾನೆ. ಮದುವೆಯಾದರೆ ಅದಕ್ಕೊಂದು ಅರ್ಥ ಇರಬೇಕು, ವಿಕಲಚೇತನ ವಧುವಿಗೆ ಬಾಳು ಕೊಡಬೇಕು ಎನ್ನುವ ಯೋಚನೆಯಲ್ಲಿ ಮಂಜುನಾಥ್ ಇದ್ದ. ಇದನ್ನೂ ಓದಿ: ಡಾ. ವಿಷ್ಣುವರ್ಧನ್ ಹೆಸರಿನಲ್ಲಿ ಮತ್ತೊಂದು ದಾಖಲೆ

    ಇದೇ ವೇಳೆ ಮಂಜುನಾಥ್‌ಗೆ ಪಶ್ಚಿಮ ಬಂಗಾಳದ ಯುವತಿ ಪೂಜಾ ಮದುವೆ ಆ್ಯಪ್ ಒಂದರಲ್ಲಿ ಪರಿಚಯವಾಗಿತ್ತು. ಸದ್ಯ ಎರಡು ಕುಟುಂಬಗಳು ಪರಸ್ಪರ ಒಪ್ಪಿಗೆ ಪಡೆದು ಬಾಳು ಬಂಡಿ ಸಾಗಿಸಲು ತಯಾರಾಗಿ, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕಲ್ಯಾಣ ಕಾರ್ಯದಲ್ಲಿ ಬಂದು ಮಿತ್ರರು ಭಾಗವಹಿಸಿ ನವ ದಂಪತಿಗೆ ಶುಭ ಕೋರಿದ್ದಾರೆ. ಇದನ್ನೂ ಓದಿ: ತೆಲಂಗಾಣದಲ್ಲಿ ವಿಶ್ವದ ಮೊದಲ 3ಡಿ ಪ್ರಿಂಟ್ ದೇವಾಲಯ ನಿರ್ಮಾಣ

  • ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ಗಟ್ಟಿಗಿತ್ತಿ ವಧು!

    ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ಗಟ್ಟಿಗಿತ್ತಿ ವಧು!

    ಲಕ್ನೋ: ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ವಧು ಮಂಟಪಕ್ಕೆ ಕರೆತಂದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ಹೌದು. ಎರಡು ವರ್ಷ ಪ್ರೀತಿಸಿ (Love) ಇನ್ನೇನು ತಾಳಿ ಕಟ್ಟಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ವರ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗೆ ವರ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆಯೇ ವಧು (Bride) 20 ಕಿ.ಮೀ ಚೇಸ್ ಮಾಡಿ ವರ (Groom) ನನ್ನು ಮಂಟಪಕ್ಕೆ ಕರೆತರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.

    ಏನಿದು ಘಟನೆ..?: ಯುವತಿ ಹಾಗೂ ಬದೌನ್ ಜಿಲ್ಲೆಯ ನಿವಾಸಿ ಕಳೆದ ಎರಡೂವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೊನೆಗೆ ಎರಡೂ ಕುಟುಂಬಗಳ ನಡುವೆ ಸಾಕಷ್ಟು ಮಾತುಕತೆಯ ನಂತರ ಮದುವೆಯ ದಿನಾಂಕವನ್ನು ನಿಗದಿಪಡಿಸಲಾಯಿತು. ಅಂತೆಯೇ ಭಾನುವಾರ ಭೂತೇಶ್ವರನಾಥ ದೇವಾಲಯದಲ್ಲಿ ಮದುವೆ ಮಾಡುವುದಾಗಿ ನಿರ್ಧರಿಸಲಾಯಿತು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಭೂಕಂಪ ಆಗ್ತಿದೆ, ಏನಾದ್ರೂ ಮಾಡಿಕೊಳ್ಳಲಿ `ಗ್ಯಾರಂಟಿ’ಗಳನ್ನ ಈಡೇರಿಸಲಿ – ಸಿ.ಟಿ ರವಿ

    ಇತ್ತ ವಧು ಕಡೆಯವರು ಹಾಗೂ ಅತಿಥಿಗಳು ಎಲ್ಲರೂ ಮಂಟಪಕ್ಕೆ ಹಾಜರಾಗಿದ್ದಾರೆ. ವಧು ಕೂಡ ರೆಡಿಯಾಗಿ ಕುಳಿತಿದ್ದಳು. ಆದರೆ ವರ ಮಾತ್ರ ಮಂಟಪಕ್ಕೆ ಬಾರದೇ ಇರುವುದರಿಂದ ಕೆಲವೊಂದು ಅನುಮಾನಗಳು ಹುಟ್ಟಿಕೊಂಡವು. ಬಂದವರೆಲ್ಲ ಗುಸುಗುಸು ಮಾತನಾಡಲು ಆರಂಭಿಸಿದರು. ಈ ವೇಳೆ ವರನಿಗೆ ಕರೆ ಮಾಡಿ ಮಂಟಪಕ್ಕೆ ಬರುವಂತೆ ವಧು ಹೇಳಿದ್ದಾಳೆ. ಈ ವೇಳೆ ವರ, ತನ್ನ ತಾಯಿಯನ್ನು ಕರೆದುಕೊಂಡು ಹೋಗಲು ಬುಡೌನ್‍ಗೆ ಹೋಗುತ್ತಿದ್ದೇನೆ ಎಂದು ಕ್ಷಮಿಸಿ ಎಂದು ಹೇಳಿದ್ದಾನೆ.

    ಇದನ್ನು ಕೇಳಿದ ತಕ್ಷಣ ಯುವತಿಗೆ ಮತ್ತಷ್ಟು ಅನುಮಾನ ಬಂದಿದ್ದು, ವರ ಮದುವೆಯಾಗದೇ ಓಡಿಹೋಗಲು ಮುಂದಾಗಿದ್ದಾನೆ ಎಂಬುದು ಆಕೆಗೆ ಅರಿವಾಯಿತು. ಹೀಗಾಗಿ ಒಂದು ಕ್ಷಣವೂ ವ್ಯರ್ಥ ಮಾಡದೆ, ಬರೇಲಿಯಿಂದ ಸುಮಾರು 20 ಕಿಮೀ ದೂರದ ಭೀಮೋರಾ ಪೊಲೀಸ್ ಠಾಣೆ ಬಳಿ ಬಸ್ ಹತ್ತುವಾಗ ಆತನನ್ನು ಹಿಂಬಾಲಿಸಿ ಹಿಡಿಯುವಲ್ಲಿ ಯಶಸ್ವಿಯಾದಳು. ದಂಪತಿ ದೇವಸ್ಥಾನಕ್ಕೆ ಹಿಂದಿರುಗುವ ಮೊದಲು ಮತ್ತು ಮದುವೆ ವಿಚಾರವಾಗಿ ದಾರಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಇಬ್ಬರ ಮದುವೆ ಭೀಮೋರ ದೇವಸ್ಥಾನದಲ್ಲಿ ಎರಡೂ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

  • ವರ ಕಪ್ಪಗಿದ್ದಾನೆ, ನನಗಿಂತ ತುಂಬಾ ವಯಸ್ಸಾಗಿದೆ- ಮಂಟಪದಲ್ಲೇ ಮದ್ವೆ ಕ್ಯಾನ್ಸಲ್ ಮಾಡಿದ ವಧು

    ವರ ಕಪ್ಪಗಿದ್ದಾನೆ, ನನಗಿಂತ ತುಂಬಾ ವಯಸ್ಸಾಗಿದೆ- ಮಂಟಪದಲ್ಲೇ ಮದ್ವೆ ಕ್ಯಾನ್ಸಲ್ ಮಾಡಿದ ವಧು

    ಪಾಟ್ನಾ: ಇತ್ತೀಚೆಗೆ ಚಿಕ್ಕ-ಪುಟ್ಟ ವಿಷಯಗಳಿಗೆ ಮದುವೆ ಕ್ಯಾನ್ಸಲ್ (Marriage Cancel) ಆಗುತ್ತಿರುವುದು ಹೆಚ್ಚಾಗಿದೆ. ಅಂತೆಯೇ ಇಲ್ಲೊಬ್ಬ ವಧು, ಇನ್ನೇನು ಹಾರ ಬದಲಾಯಿಸಬೇಕು ಎನ್ನುವಷ್ಟರಲ್ಲಿ ವರ ಬೇಡವೆಂದು ಹಠಕ್ಕೆ ಬಿದ್ದು ಮದುವೆ ಕ್ಯಾನ್ಸಲ್ ಮಾಡಿಕೊಂಡ ಪ್ರಸಂಗ ನಡೆದಿದೆ.

    ಈ ಘಟನೆ ಬಿಹಾರದ ಭಾಗಲ್ಪುರದಲ್ಲಿ ಜಿಲ್ಲೆಯಲ್ಲಿ ನಡೆದಿದೆ. ರಾಸಲ್‍ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಹಲ್‍ಗಾಂವ್ ನಿವಾಸಿಯಾಗಿರುವ ವಧುವಿನ ವಿವಾಹವನ್ನು ಮೇ 15 (ಸೋಮವಾರ) ರಂದು ಧನೌರಾ ಮೂಲದ ವರನೊಂದಿಗೆ ನಿಗದಿಪಡಿಸಲಾಗಿತ್ತು. ಇದನ್ನೂ ಓದಿಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅನುಮತಿ

    ಅಂತೆಯೇ ಮದುವೆ ದಿನದಂದು ವರ, ವಧುವಿನ ಮನೆಗೆ ಬಂದಿದ್ದಾನೆ. ವಧು-ವರರು ಹಾರ ಬದಲಾಯಿಸುವವರೆಗೆ ಎಲ್ಲಾ ಕಾರ್ಯಗಳು ಸುಸೂತ್ರವಾಗಿಯೇ ನಡೆಯುತ್ತಿತ್ತು. ಆದರೆ ಇನ್ನೇನೋ ಹಾರ ಬದಲಾಯಿಸಬೇಕು ಎನ್ನುವಷ್ಟರಲ್ಲಿ ವಧು, ವರನ ಮುಖ ನೋಡಿದ್ದಾಳೆ. ಕೂಡಲೇ ಸಿಟ್ಟುಗೊಂಡ ವಧು, ವರನ ಕೊರಳಿಗೆ ಹಾರ ಹಾಗೂ ಹಣೆಗೆ ತಿಲಕ ಇಡಲು ಹಿಂಜರಿದಿದ್ದಾಳೆ.

    ಇಷ್ಟು ಮಾತ್ರವಲ್ಲದೇ ನಿಂತ ಸ್ಥಳದಲ್ಲಿಯೇ ನನಗೆ ಈ ಮದುವೆ ಇಷ್ಟವಿಲ್ಲ. ನಾನು ಈತನನ್ನು ಮದುವೆಯಾಗಲ್ಲ ಎಂದು ನೇರವಾಗಿಯೇ ಹೇಳಿದ್ದಾಳೆ. ಕೂಡಲೇ ವಧುವಿನ ಕುಟುಂಬಸ್ಥರು ಆಕೆಯನ್ನು ಸಮಾಧಾನ ಮಾಡಲು ಯತ್ನಿಸಿದ್ದಾರೆ. ಆದರೆ ವಧು ಮಾತ್ರ ಯಾವುದೇ ಕಾರಣಕ್ಕೂ ಮದುವೆಗೆ ಒಪ್ಪಲಿಲ್ಲ. ಮದುವೆ ಮಂಟಪದಿಂದ ನೇರವಾಗಿ ಡ್ರೆಸ್ಸಿಂಗ್ ರೂಮಿಗೆ ತೆರಳಿ ಮದುವೆಯಾಗಲ್ಲ ಎಂದು ಹಠದಿಂದ ಕುಳಿತಿದ್ದಾಳೆ.

    ನಂತರ ಯಾಕೆ ಈ ಮದುವೆ ಇಷ್ಟವಿಲ್ಲ ಎಂದು ಕೇಳಿದಾಗ, ವರ ತುಂಬಾ ಕಪ್ಪಗಿದ್ದಾನೆ. ಅಲ್ಲದೆ ಆತನಿಗೆ ತುಂಬಾ ವಯಸ್ಸಾಗಿದೆ ಎಂದು ಹೇಳಿದ್ದಾಳೆ. ಈ ವೇಳೆ ನೆರೆದ ಅತಿಥಿಗಳು ಕೂಡ ವಧುವನ್ನು ಸಮಾಧಾನಪಡಿಸಲು ಯತ್ನಿಸಿದರೂ, ಯಾವುದೇ ಪ್ರಯೋಜವಾಗಿಲ್ಲ. ವರನ ತಂದೆ ಕೂಡ ಹೇಗಾದ್ರು ಮಾಡಿ ಮದುವೆ ನಿಲ್ಲಿಸದಂತೆ ವಧು ಮನವೊಲಿಸಲು ಯತ್ನಿಸಿದ್ದಾರೆ. ವಧು ಮಾತ್ರ ಯಾರ ಮಾತಿಗೂ ಕಿಮ್ಮತ್ತು ಕೊಡದೇ ತನ್ನ ನಿರ್ಧಾರಕ್ಕೆ ಬದ್ಧಳಾದಳು.

    ಗಂಟೆಗಟ್ಟಲೆ ಮನವೊಲಿಸಿದರೂ ವರನನ್ನು ಮದುವೆಯಾಗಲು ವಧು ಒಪ್ಪದ ಕಾರಣ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಬೇಕಾಯಿತು. ಇತ್ತ ವಧುವಿನ ತಂದೆ ತನ್ನ ಮಗಳು ಯಾಕೆ ಈ ರೀತಿ ಮಾಡಲು ಎಂಬುದು ತಿಳಿಯುತ್ತಿಲ್ಲ ಎಂದಿದ್ದಾರೆ.