Tag: ವರ್ಷಿಣಿ

  • ಮಿಸ್ ಧಾರವಾಡ ವರ್ಷಿಣಿ ಈಗ ಮಿಸ್ ಊರ್ವಶಿ

    ಮಿಸ್ ಧಾರವಾಡ ವರ್ಷಿಣಿ ಈಗ ಮಿಸ್ ಊರ್ವಶಿ

    ಧಾರವಾಡ: ವಿದ್ಯಾಕಾಶಿಯ ಸುಂದರಿ ಮಿಸ್ ಧಾರವಾಡ (Dharwad) ವರ್ಷಿಣಿ ರಾಮಡಗಿ(Varshini Ramadagi) ಈಗ ಮಿಸ್ ಊರ್ವಶಿ(Miss Urvashi) ಎನ್ನುವ ಅತ್ಯಾಕರ್ಷಕ ಕಿರೀಟ ಧರಿಸುವುದರೊಂದಿಗೆ ದೇಶದ ನವ ಸುಂದರಿಯ ಪಟ್ಟ ಅಲಂಕರಿದ್ದಾರೆ.

    ಈಗಷ್ಟೇ 20 ಈ ನವತರುಣಿಯಾಗಿರುವ ವರ್ಷಿಣಿ(Varshini), ಧಾರವಾಡದ ಕೆಸಿಡಿ ಕಾಲೇಜ್‍ನಲ್ಲಿ ಟ್ರಾವೆಲ್ ಆ್ಯಂಡ್ ಟೂರಿಸಂ ಕೋರ್ಸ್‍ನಲ್ಲಿ(Travel and Tourism Course) 2ನೇ ವರ್ಷದಲ್ಲಿ ಓದುತ್ತಿದ್ದಾರೆ. ಇತ್ತೀಚೆಗೆ ಜೈಪುರದಲ್ಲಿ(Jaipura) ಮಿಸ್ ಇಂಟರ್ ಕ್ವಾಂಟಿನೇಂಟಲ್ ಹಾಗೂ ಎಲೀಟ್ ಫೌಂಡೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ (Beauty Pageants) ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಅಲ್ಲದೇ ಅಲ್ಲಿ ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಮಿಸ್ ಊರ್ವಶಿ ಕಿರೀಟವನ್ನು(Crown) ಮುಡಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಸೀಟ್ ಬೆಲ್ಟ್ ಕಡ್ಡಾಯ – ಧರಿಸದಿದ್ದರೆ 1,000ರೂ. ದಂಡ

    ಇತ್ತೀಚೆಗೆ ಕರ್ನಾಟಕದಲ್ಲಿ ಆಡಿಷನ್(Audition) ನಡೆಸಿ ಕರ್ನಾಟಕದಿಂದ ವರ್ಷಿಣಿ ಈ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಒಟ್ಟು 25 ರಾಜ್ಯಗಳಿಂದ 18 ರಿಂದ 25 ವರ್ಷದೊಳಗಿನ 25 ಮಾಡೆಲ್‍ಗಳು(Models) ಈ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು. ಈ ಮೂಲಕ ಮಿಸ್ ಊರ್ವಶಿ ಕಿರೀಟವನ್ನು ಕರ್ನಾಟಕಕ್ಕೆ(Karnataka) ತಂದು ಕೊಡುವುದರ ಜೊತೆಗೆ ಮುಂದೆ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ(International Computation) ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದನ್ನೂ ಓದಿ: 5.47 ಕೋಟಿ ಮೌಲ್ಯದ 2.43 ಲಕ್ಷ ಎಣ್ಣೆ ಬಾಟ್ಲಿಗಳ ಮೇಲೆ ಹರಿಯಿತು ರೋಡ್ ರೋಲರ್!

    ವಿದ್ಯಾಭ್ಯಾಸದ ಜೊತೆಗೆ ಸೌಂದರ್ಯ ಸ್ಪರ್ಧೆಯಲ್ಲಿ ಮೊದಲಿನಿಂದಲೂ ತನ್ನ ಪ್ರತಿಭೆ ತೋರಿಸುವಲ್ಲಿ ಪರಿಣಿತರಾಗಿರುವ ವರ್ಷಿಣಿ ಈಗಾಗಲೇ ಎರಡು ಸಲ ಮಿಸ್ ಧಾರವಾಡ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಧಾರವಾಡ ಗ್ಲ್ಯಾಮ್ ಬ್ಯೂಟಿ ಆಗಿಯೂ ವಿಜೇತರಾಗಿದ್ದರು. 2019ರಲ್ಲಿ ಮಿಸ್ ಕರ್ನಾಟಕ ಫೈನಲಿಸ್ಟ್ ಆಗಿದ್ದರು. ಸದ್ಯ ಈ ಕಿರೀಟ ಗೆದ್ದ ನಂತರ ಸಂತಸ ವ್ಯಕ್ತಪಡಿಸಿದ ವರ್ಷಿಣಿ, ಮುಂದೆ ಯಾವುದೇ ಸೌಂದರ್ಯ ಸ್ಪರ್ಧೆ ಇದ್ದರೆ ಭಾಗವಹಿಸಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜೈಲಿನಿಂದ್ಲೇ ಪೋಷಕರಿಗೆ ಪತ್ರ ಬರೆದ ವರ್ಷಿಣಿ

    ಜೈಲಿನಿಂದ್ಲೇ ಪೋಷಕರಿಗೆ ಪತ್ರ ಬರೆದ ವರ್ಷಿಣಿ

    ಬೆಂಗಳೂರು: ರೌಡಿಶೀಟರ್ ಲಕ್ಷ್ಮಣನ ಕೊಲೆ ಕೇಸಿನಲ್ಲಿ ಜೈಲು ಶಿಕ್ಷೆಯಲ್ಲಿರುವ ವರ್ಷಿಣಿ ತಮ್ಮ ತಂದೆ-ತಾಯಿಗೆ ಪತ್ರವೊಂದನ್ನು ಬರೆದಿದ್ದಾಳೆ.

    ವರ್ಷಿಣಿಗೆ ತಾನು ಮಾಡಿದ್ದ ತಪ್ಪಿನ ಬಗ್ಗೆ ಜ್ಞಾನೋದಯವಾದಂತಿದೆ. ಪತ್ರದಲ್ಲಿ ಪೋಷಕರಲ್ಲಿ ವರ್ಷಿಣಿ ಕ್ಷಮೆ ಕೇಳಿದ್ದಾಳೆ. ಜೂನ್ 4 ರಂದು ಆರೋಪಿ ವರ್ಷಿಣಿಯ ಹುಟ್ಟು ಹಬ್ಬವಿತ್ತು. ಅದೇ ದಿನ ವರ್ಷಿಣಿ ಜೈಲಿನಿಂದ ಪೋಷಕರಿಗೆ ಪತ್ರ ಬರೆದಿದ್ದಾಳೆ. ತನ್ನ ತಾಯಿ ಪದ್ಮ ಜೈಲಿಗೆ ಮಗಳನ್ನ ನೋಡಿಕೊಂಡು ಬರುವುದಕ್ಕೆ ಹೋದಾಗ ತಾಯಿ ಕೈಯಲ್ಲಿ ಪತ್ರ ಕಳಿಸಿಕೊಟ್ಟಿದ್ದಾಳೆ ಎನ್ನಲಾಗಿದೆ. ಇದನ್ನೂ ಓದಿ: ರೌಡಿ ಲಕ್ಷ್ಮಣ್ ಕೊಲೆ ಆರೋಪಿ ವರ್ಷಿಣಿ ಮೇಲೆ ಕೋಕಾ ಕಾಯ್ದೆ ಪ್ರಯೋಗ!

    ಪತ್ರದಲ್ಲಿ ಏನಿದೆ?
    ಐ ಲವ್ ಯೂ ಅಪ್ಪ, ಅಮ್ಮ Sorry..sorry.sorry… ಹಲೋ ಮಮ್ಮಿ ಡ್ಯಾಡಿ ಎಲ್ಲರೂ ಹೇಗಿದ್ದೀರಾ. ನನಗೆ ಜೈಲಿನಲ್ಲಿರುವುದಕ್ಕೆ ಹಿಂಸೆ ಆಗುತ್ತಿದೆ. ಅಮ್ಮ-ಅಪ್ಪ ನೀವೆಲ್ಲ ತುಂಬಾನೇ ಒಳ್ಳೆಯವರು, ನಾನು ಕೆಟ್ಟವಳು. ನಾನು ಕೆಟ್ಟ ಹುಡುಗಿ, ನನ್ನಿಂದ ನಿಮಗೆ ತುಂಬಾ ತೊಂದರೆಯಾಗಿದೆ. ನನ್ನನ್ನು ಜೈಲಿನಿಂದ ಹೊರಗಡೆ ಕರೆದುಕೊಂಡು ಹೋಗಿ. ಜೈಲಿನಲ್ಲಿ ಇರುವುದಕ್ಕೆ ರೋದನೆ ಆಗುತ್ತಿದೆ. ಈ ರೀತಿ ಮನಶಾಂತಿ ಬೇಕೆಂದು ಪೋಷಕರ ಬಳಿ ಆರೋಪಿ ವರ್ಷಿಣಿ ತನ್ನ ಅಳಲನ್ನ ತೋಡಿಕೊಂಡಿದ್ದಾಳೆ. ಇದನ್ನೂ ಓದಿ: ಕೊನೆಗೂ ರೌಡಿ ಲಕ್ಷ್ಮಣ್ ಕೊಲೆ ಹಿಂದಿನ ರಹಸ್ಯ ಬಯಲು – ಮೂರು ಕಾರಣಕ್ಕೆ ಹತ್ಯೆಯ ಸ್ಕೆಚ್

    ವರ್ಷಿಣಿ ವಿರುದ್ಧ ಪೊಲೀಸರು ಕೋಕಾ ಆ್ಯಕ್ಟ್ ಕೂಡ ಜಾರಿ ಮಾಡಿದ್ದಾರೆ. ಕೊಕಾ ಆ್ಯಕ್ಟ್ ಭೇದಿಸಿಕೊಂಡು ಹೊರಗಡೆ ಬರುವುದಕ್ಕೆ ಆರೋಪಿ ವರ್ಷಿಣಿಗೆ ವರ್ಷಗಳೇ ಕಳೆದು ಹೋಗುತ್ತದೆ. ಹಾಗಾಗಿ ವರ್ಷಿಣಿಗೆ ಲಕ್ಷ್ಮಣನ ಕೊಲೆ ಕೇಸ್ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದು, ಜೈಲಿನಿಂದ ಪತ್ರ ಬರೆದು ತನ್ನ ಅಳಲನ್ನ ತೋಡಿಕೊಂಡಿದ್ದಾಳೆ.

  • ರೌಡಿ ಲಕ್ಷ್ಮಣ್ ಕೊಲೆ ಆರೋಪಿ ವರ್ಷಿಣಿ ಮೇಲೆ ಕೋಕಾ ಕಾಯ್ದೆ ಪ್ರಯೋಗ!

    ರೌಡಿ ಲಕ್ಷ್ಮಣ್ ಕೊಲೆ ಆರೋಪಿ ವರ್ಷಿಣಿ ಮೇಲೆ ಕೋಕಾ ಕಾಯ್ದೆ ಪ್ರಯೋಗ!

    ಬೆಂಗಳೂರು: ಮೃತ ರೌಡಿ ಲಕ್ಷ್ಮಣ್ ಪ್ರೇಯಸಿ, ಜೈಲಿನಲ್ಲಿರುವ ವರ್ಷಣಿ ವಿರುದ್ಧ ಕೋಕಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

    ಹೌದು. ವರ್ಷಿಣಿ ಅಪರಾಧ ಚಟುವಟಿಕೆಯಲ್ಲಿ ಹಾಗೂ ನಟೋರಿಯಸ್ ರೌಡಿ ಶೀಟರ್ ಹತ್ಯೆಯ ಪ್ರಮುಖ ಆರೋಪಿಯಾಗಿ ಜೈಲಿನಲ್ಲಿದ್ದಾಳೆ. ಇದೀಗ ಈಕೆಯ ಮೇಲೆ ಸಿಸಿಬಿ ಅಧಿಕಾರಿಗಳು ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಕೋಕಾ ಅಂದ್ರೆ ಏನು?:
    ಕೋಕಾ ಅಂದ್ರೆ ಸಂಘಟಿತ ಅಪರಾಧಗಳ ತಡೆ ಕಾಯ್ದೆ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಜಿಸ್ಡ್ ಕ್ರೈಮ್ಸ್ ಆಕ್ಟ್). ಸಂಘಟಿತರಾಗಿ ಅಪರಾಧ ಕೃತ್ಯ ಎಸಗಿ, ವ್ಯಕ್ತಿಯ ಸಾವಿಗೆ ಕಾರಣರಾಗುವವರಿಗೆ ಗರಿಷ್ಠ ಗಲ್ಲು ಶಿಕ್ಷೆ ಅಥವಾ ಜೀವನ ಪರ್ಯಂತ ಜೈಲು ಶಿಕ್ಷೆ ಜತೆಗೆ 1 ಲಕ್ಷ ರೂ.ಗೆ ಕಡಿಮೆ ಇಲ್ಲದಂತೆ 5 ಲಕ್ಷ ರೂ.ವರೆಗೂ ದಂಡ ವಿಧಿಸಲು ಈ ಕಾಯ್ದೆಯ ಅಡಿ ಅವಕಾಶವಿದೆ. ಆರೋಪಿಗಳಿಗೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವ್ಯಕ್ತಿಯ ಸಾವಿಗೆ ಕಾರಣರಾಗುವವರಿಗೆ ಗರಿಷ್ಠ ಗಲ್ಲು ಶಿಕ್ಷೆಯನ್ನೂ ವಿಧಿಸಬಹುದು.

    ಗೌರಿ ಹತ್ಯೆ ಪ್ರಕರಣವನ್ನು ನಡೆಸಿದ್ದ ವಿಶೇಷ ತನಿಖಾ ತಂಡ ಆರೋಪಿಗಳ ಮೇಲೆ ಕೋಕಾ ಕಾಯ್ದೆಯನ್ನು ಪ್ರಯೋಗಿಸಿದೆ. ಈ ಹಿಂದೆ ಪಿಯುಸಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ 2019ರ ಪರೀಕ್ಷೆಯ ವೇಳೆ ಯಾರಾದರೂ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಲ್ಲಿ ಅವರ ವಿರುದ್ಧ ಕೋಕಾ ಕಾಯ್ದೆಯನ್ನು ಹಾಕಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಕೊನೆಗೂ ರೌಡಿ ಲಕ್ಷ್ಮಣ್ ಕೊಲೆ ಹಿಂದಿನ ರಹಸ್ಯ ಬಯಲು – ಮೂರು ಕಾರಣಕ್ಕೆ ಹತ್ಯೆಯ ಸ್ಕೆಚ್

    ಅಸಲಿಗೆ ಶೋರೂಂ ಫೋಟೋವನ್ನು ಪ್ರಿಯಕರ ರೂಪೇಶ್ ವರ್ಷಿಣಿಗೆ ಕಳುಹಿಸಿ ಕೊಲೆ ಮಾಡಲು ಸಿದ್ಧವಾಗಿದ್ದನು. ಗೆಳತಿ ಶೋರೂಂ ಬಳಿ ತನಗಾಗಿ ಕಾಯುತ್ತಿದ್ದಾಳೆ ಎಂದು ತಿಳಿದು ಲಕ್ಷ್ಮಣ್ ವರ್ಷಿಣಿ ತಿಳಿಸಿದ ಸ್ಥಳಕ್ಕೆ ಬಂದಿದ್ದನು. ಶೋರೂಂ ಬಳಿ ಲಕ್ಷ್ಮಣ್ ಬಂದ ಕೂಡಲೇ ರೌಡಿಗಳು ಆತನ ಮೇಲೆ ಮುಗಿಬಿದ್ದು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಹಲವು ಟ್ವಿಸ್ಟ್ ಸಿಕ್ಕಿದ್ದು, ಸದ್ಯ ಪ್ರಮುಖ ಆರೋಪಿಯಾಗಿರುವ ವರ್ಷಿಣಿ ಜೈಲಿನಲ್ಲಿದ್ದಾಳೆ.

  • ಲಕ್ಷ್ಮಣನ ಜೊತೆ ಡಿಂಗ್‍ಡಾಂಗ್, ರೂಪೇಶ್ ಜೊತೆ ಲವ್ವಿಡವ್ವಿ – ವರ್ಷಿಣಿಯ ಡಬಲ್ ರೋಲ್‍ನಿಂದ ಪ್ರಿಯಕರ ಬಕ್ರಾ!

    ಲಕ್ಷ್ಮಣನ ಜೊತೆ ಡಿಂಗ್‍ಡಾಂಗ್, ರೂಪೇಶ್ ಜೊತೆ ಲವ್ವಿಡವ್ವಿ – ವರ್ಷಿಣಿಯ ಡಬಲ್ ರೋಲ್‍ನಿಂದ ಪ್ರಿಯಕರ ಬಕ್ರಾ!

    ಬೆಂಗಳೂರು: ರೌಡಿ ಲಕ್ಷ್ಮಣ್ ಕೊಲೆ ಪ್ರಕರಣದ ತನಿಖೆ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗ ಆರೋಪಿ ವರ್ಷಿಣಿ ಮೃತ ಇತ್ತ ಲಕ್ಷ್ಮಣನ ಜೊತೆಯೂ ಪ್ರೀತಿ ಅತ್ತ ರೂಪೇಶನ ಜೊತೆ ಲವ್ವಿಡವ್ವಿ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

    ಆರೋಪಿ ವರ್ಷಿಣಿಯ ಈ ಡಬಲ್ ರೋಲ್ ಬಗ್ಗೆ ತಿಳಿಯದೆ ಪ್ರಿಯಕರ ರೂಪೇಶ್ ಬಕ್ರವಾಗಿದ್ದು, ತನ್ನ ಪ್ರೀತಿಗೆ ಅಡ್ಡವಾಗಿದ್ದಾನೆ ಎಂದು ರೌಡಿ ಲಕ್ಷ್ಮಣನನ್ನು ಕೊಲೆ ಮಾಡಿದ್ದಾನೆ. ಆರೋಪಿ ವರ್ಷಿಣಿ ಮತ್ತು ಲಕ್ಷ್ಮಣನ ಪ್ರೀತಿ ವಿಚಾರ ಅಸಲಿಗೆ ರೂಪೇಶನಿಗೆ ಗೊತ್ತೇ ಇರಲಿಲ್ಲ. ರೂಪೇಶನ ಲವ್ ಮಾಡುವುದರ ಜೊತೆಗೆ ಲಕ್ಷ್ಮಣನ ಜೊತೆಯೂ ಲವ್ವಿಡವ್ವಿ ಆಡುತ್ತಿದ್ದಳು. ವರ್ಷಣಿಯ ಅಸಲಿ ಬಣ್ಣ ಗೊತ್ತಾಗದೇ ಆರೋಪಿ ರೂಪೇಶ್ ಲಕ್ಷ್ಮಣನ ಮರ್ಡರ್ ಗೆ ಕೈ ಹಾಕಿದ್ದನು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ:  ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ


    ರೂಪೇಶ್ ತನ್ನ ಪ್ರೀತಿಗೆ ಅಡ್ಡಿಯಾಗುತ್ತಿದ್ದನು ಎಂದು ಹತ್ಯೆಗೆ ಪ್ಲಾನ್ ಮಾಡಿದ್ದನು. ಈ ಹತ್ಯೆಗೆ ಆರೋಪಿ ವರ್ಷಿಣಿ ಸಹಕರಿಸಿದ್ದಳು. ಆರೋಪಿ ವರ್ಷಿಣಿ ಮೋಜು ಮಸ್ತಿಗೆ ಲಕ್ಷ್ಮಣನ ದುಡ್ಡು ಬೇಕಿತ್ತು. ಎಂಜಾಯ್ ಮೆಂಟ್‍ಗೆ ರೂಪೇಶ್ ನ ಜೊತೆ ಸುತ್ತಾಡುತ್ತಿದ್ದಳು. ಹಲವು ಬಾರಿ ಲಕ್ಷ್ಮಣ್‍ ವರ್ಷಿಣಿಯ ಖಾತೆಗೆ ದುಡ್ಡು ಹಾಕಿದ್ದವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಾಯುವ ಕೊನೆ ಘಳಿಗೆಯಲ್ಲಿ ಮಾಸ್ಟರ್ ಪ್ಲಾನ್ ಮಾಡಿದ್ದ ರೌಡಿ ಲಕ್ಷ್ಮಣ್

    ಹತ್ಯೆಯ ಪ್ಲಾನ್:
    ವರ್ಷಿಣಿ ಬೆಂಗಳೂರಿನಲ್ಲಿದ್ದಾಳೆ ಎಂದು ತಿಳಿದು ಲಕ್ಷ್ಮಣ್‍ ಆರ್.ಜಿ.ರಾಯಲ್ಸ್ ಹೋಟೆಲ್ ನಲ್ಲಿ ಕೊಠಡಿ ಬುಕ್ ಮಾಡಿದ್ದ. ಕೊಠಡಿ ಬುಕ್ ಮಾಡಿದ ಬಳಿಕ ವರ್ಷಿಣಿ ಬಾರದೇ ಇರುವುದನ್ನು ಕಂಡು ವಾಟ್ಸಪ್ ಮೂಲಕ ಕರೆ ಮಾಡಿದ್ದನು. ಈ ಸಮಯದಲ್ಲಿ ವರ್ಷಿಣಿ ಇಸ್ಕಾನ್ ಎದುರಿನ ಟೊಯೋಟಾ ಶೋರೂಂ ಬಳಿ ಇದ್ದೇನೆ. ಈ ಸ್ಥಳಕ್ಕೆ ಬಂದು ಕರೆದುಕೊಂಡು ಹೋಗು ಎಂದು ಶೋರೂಂ ಫೋಟೋ ಕಳುಹಿಸಿದ್ದಾಳೆ. ಈ ಫೋಟೋ ನೋಡಿ ಸ್ಥಳಕ್ಕೆ ಬಂದಿದ್ದ ಲಕ್ಷ್ಮಣ್‍ನನ್ನು ಕೆಲವೇ ಕ್ಷಣಗಳಲ್ಲಿ ರೌಡಿಗಳು ಕೊಲೆ ಮಾಡಿದ್ದರು. ವರ್ಷಿಣಿ ಕೊಲೆಯಾದ ಮರುದಿನ ಲಂಡನ್‍ನಿಂದ ಬೆಂಗಳೂರಿಗೆ ಮರಳಿದ್ದಳು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ

    ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ

    – ಲಂಡನಿನಲ್ಲೇ ಕುಳಿತು ಕೊಲೆಗೆ ವರ್ಷಿಣಿ ಸ್ಕೆಚ್
    – ಕಾಲ್ಸ್ ವಿವರಗಳ ಮೂಲಕ ಹತ್ಯೆಯ ರಹಸ್ಯ ಪತ್ತೆ

    ಬೆಂಗಳೂರು: ವಾಟ್ಸಪ್‍ಗೆ ಗೆಳತಿ ವರ್ಷಿಣಿ ಕಳುಹಿಸಿದ ಫೋಟೋ ನೋಡಿ ಹೋಟೆಲ್‍ನಿಂದ ಹೊರ ಬಂದು ರೌಡಿ ಲಕ್ಷ್ಮಣ್ ಕೊಲೆಯಾಗಿದ್ದಾನೆ.

    ವರ್ಷಿಣಿ ಬೆಂಗಳೂರಿನಲ್ಲಿದ್ದಾಳೆ ಎಂದು ತಿಳಿದು ಲಕ್ಷ್ಮಣ ಆರ್.ಜಿ.ರಾಯಲ್ಸ್ ಹೋಟೆಲ್ ನಲ್ಲಿ ಕೊಠಡಿ ಬುಕ್ ಮಾಡಿದ್ದ. ಕೊಠಡಿ ಬುಕ್ ಮಾಡಿದ ಬಳಿಕ ವರ್ಷಿಣಿ ಬಾರದೇ ಇರುವುದನ್ನು ಕಂಡು ವಾಟ್ಸಪ್ ಮೂಲಕ ಕರೆ ಮಾಡಿದ್ದಾನೆ.

    ಈ ಸಮಯದಲ್ಲಿ ವರ್ಷಿಣಿ ಇಸ್ಕಾನ್ ಎದುರಿನ ಟೊಯೋಟಾ ಶೋರೂಂ ಬಳಿ ಇದ್ದೇನೆ. ಈ ಸ್ಥಳಕ್ಕೆ ಬಂದು ಕರೆದುಕೊಂಡು ಹೋಗು ಎಂದು ಶೋರೂಂ ಫೋಟೋ ಕಳುಹಿಸಿದ್ದಾಳೆ. ಈ ಫೋಟೋ ನೋಡಿ ಸ್ಥಳಕ್ಕೆ ಬಂದಿದ್ದ ಲಕ್ಷ್ಮಣ ಕೆಲವೇ ಕ್ಷಣಗಳಲ್ಲಿ ಕೊಲೆಯಾಗಿ ಹೋಗಿದ್ದ.

    ಅಸಲಿಗೆ ಶೋರೂಂ ಫೋಟೋವನ್ನು ಪ್ರಿಯಕರ ರೂಪೇಶ್ ವರ್ಷಿಣಿಗೆ ಕಳುಹಿಸಿ ಕೊಲೆ ಮಾಡಲು ಸಿದ್ಧವಾಗಿದ್ದ. ಗೆಳತಿ ಶೋರೂಂ ಬಳಿ ತನಗಾಗಿ ಕಾಯುತ್ತಿದ್ದಾಳೆ ಎಂದು ತಿಳಿದು ಲಕ್ಷ್ಮಣ್ ವರ್ಷಿಣಿ ತಿಳಿಸಿದ ಸ್ಥಳಕ್ಕೆ ಬಂದಿದ್ದಾನೆ. ಶೋರೂಂ ಬಳಿ ಲಕ್ಷ್ಮಣ್ ಬಂದ ಕೂಡಲೇ ರೌಡಿಗಳು ಆತನ ಮೇಲೆ ಮುಗಿಬಿದ್ದು ಹತ್ಯೆ ಮಾಡಿದ್ದಾರೆ. ವರ್ಷಿಣಿ ಕೊಲೆಯಾದ ಮರುದಿನ ಲಂಡನ್‍ನಿಂದ ಬೆಂಗಳೂರಿಗೆ ಮರಳಿದ್ದಳು.

    ರೂಮ್‍ಬುಕ್ ಏಕೆ?
    ಆರೋಪಿ ವರ್ಷಿಣಿ ಹೋಟೆಲ್ ಬುಕ್ ಮಾಡು ನಿನ್ನ ಜೊತೆ ಎರಡು ದಿನ ಇರುತ್ತೇನೆ ಎಂದು ಲಕ್ಷ್ಮಣ್‍ಗೆ ಹೇಳಿದ್ದಳು. ನಮ್ಮ ಅಪ್ಪ-ಅಮ್ಮನದು ಮದುವೆ ವಾರ್ಷಿಕೋತ್ಸವ ಇದೆ. ನಿನ್ನ ಜೊತೆ ಎರಡು ದಿನ ಇದ್ದು ಬಳಿಕ ಮನೆಗೆ ಹೋಗಿ ಸರ್ಪ್ರೈಸ್ ಗಿಫ್ಟ್ ಕೊಡುತ್ತೇನೆ ಎಂದಿದ್ದಳು. ಅಷ್ಟೇ ಅಲ್ಲದೇ ಆರ್.ಆರ್.ನಗರ ಅಥವಾ ಬೆಂಗಳೂರು ಹೊರವಲಯದಲ್ಲಿ ರೂಮ್ ಮಾಡುವಂತೆ ಹೇಳಿದ್ದಳು. ಆಗ ಲಕ್ಷ್ಮಣ್ ಆ ಭಾಗದಲ್ಲಿ ನನಗೆ ಪರಿಚಯದವರು ಇದ್ದಾರೆ ಎಂದು ಅಲ್ಲಿ ರೂಮ್‍ಬುಕ್ ಮಾಡಲು ಒಪ್ಪಲಿಲ್ಲ. ಕೊನೆಗೆ ಮಾರ್ಚ್ 6ರಂದು ಆರ್.ಜಿ ರಾಯಲ್ಸ್ ಹೋಟೆಲ್‍ಗೆ ಲಕ್ಷ್ಮಣ್ ಹೋಗಿದ್ದಾನೆ. ಆದರೆ ಅಂದು ರೂಮ್ ಸಿಗದೇ ಇದ್ದ ಕಾರಣ ವಾಪಸ್ ಹೋಗಿದ್ದಾನೆ. ಬಳಿಕ ಮಾರನೇ ದಿನ ಬಂದು ರೂಮ್ ಬುಕ್ ಮಾಡಿ ಹೋಟೆಲ್‍ನಲ್ಲೇ ಉಳಿದುಕೊಂಡಿದ್ದ.

    ಆರೋಪಿಗಳು ತಪ್ಪೊಪ್ಪಿಗೆ:
    ನಾನು 10 ಲಕ್ಷ ಹಣ ಕಳ್ಳತನ ಮಾಡಿದ್ದೇನೆ ಎಂದು ಆರೋಪಿಸಿ ನನ್ನ ಮೇಲೆ ಕೇಸ್ ದಾಖಲಿಸಿ ಲಕ್ಷ್ಮಣ್ ಜೈಲಿಗೆ ಕಳುಹಿಸಿದ್ದ. ನಂತರ ವರ್ಷಿಣಿ ವಿಚಾರಕ್ಕೆ ಪೊಲೀಸ್ ಠಾಣೆಗೆ ಬಂದು ಅವಾಜ್ ಕೂಡ ಹಾಕಿದ್ದನು. ಇದರಿಂದ ಜೈಲಿಗೆ ಹೋದಾಗ ಅಲ್ಲಿಯೇ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಸ್ಕೆಚ್ ಮಾಡಿದ್ದೆ. ಅಷ್ಟೇ ಅಲ್ಲದೆ ಲಕ್ಷ್ಮಣ್ ನಮ್ಮ ಲವ್ ಬ್ರೇಕ್ ಮಾಡಲು ಪ್ರಯತ್ನ ಮಾಡಿದ್ದನು. ನಾನು ಜೈಲಿನಿಂದ ಹೊರಗಡೆ ಬಂದಾಗ ಮತ್ತೆ ವರ್ಷಿಣಿಯ ಫೋನ್ ನಂಬರ್ ತೆಗೆದುಕೊಂಡು ಕಾಲ್ ಮಾಡಿದ್ದೆ. ಆಗ ವರ್ಷಿಣಿ ಲಂಡನ್‍ನಲ್ಲಿದ್ದಳು. ನಾನ್ ಫೋನ್ ಮಾಡಿ ಮಾತನಾಡಿದ್ದೆ.

    ನಮ್ಮ ಲವ್ ಬ್ರೇಕ್‍ಅಪ್ ಆಗಿದ್ದಕ್ಕೆ ಅವಳು ಬೇಜಾರ್ ಮಾಡಿಕೊಂಡಿರಲಿಲ್ಲ. ಈ ವೇಳೆ ಅವಳು ಏನಾದರೂ ಮಾಡಿ ಲಕ್ಷ್ಮಣ್ ಗೆ ಬುದ್ಧಿ ಕಲಿಸಬೇಕು ಎಂದು ಹೇಳಿದ್ದಳು. ಅವಳಿಗೂ ಲಕ್ಷ್ಮಣನ ಮೇಲೆ ಕೋಪ ಇತ್ತು. ಅದಕ್ಕೆ ನನಗೆ ಸಪೋರ್ಟ್ ಮಾಡಿದ್ದಳು. ಇತ್ತ ನನಗೆ ಲಕ್ಷ್ಮಣ್ ಕೊಟ್ಟಿದ್ದ ಟಾರ್ಚರ್ ನಿಂದ ನಾನು ಕೊಲೆಗೆ ಸ್ಕೆಚ್ ಹಾಕಿದ್ದೆ. ನಾನು ವರ್ಷಿಣಿಗೆ ಫೋನಿನಲ್ಲೆ ಪ್ಲಾನ್ ಬಗ್ಗೆ ತಿಳಿಸಿದ್ದೆ ಎಂದು ಸಿಸಿಬಿ ಪೊಲೀಸರ ಬಳಿ ಎ1 ಆರೋಪಿ ರೂಪೇಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಕಾಲ್ ರೆಕಾರ್ಡಿಂಗ್ ಪತ್ತೆ:
    ರೂಪೇಶ್ ಮತ್ತು ವರ್ಷಿಣಿ ಸಂಭಾಷಣೆಯ ಫೋನ್ ಕಾಲ್ಸ್ ಪತ್ತೆಯಾಗಿದ್ದು, ಇಬ್ಬರು ಲಕ್ಷ್ಮಣ್‍ನ ಹತ್ಯೆ ಬಗ್ಗೆ ಮಾತನಾಡಿರುವುದು ರೆಕಾರ್ಡ್ ಆಗಿದೆ. ವಾಟ್ಸಪ್ ಕಾಲ್ ಹಾಗೂ ನಾರ್ಮಲ್ ಕಾಲ್ ವಿವರಗಳ ಮೂಲಕ ಕೊಲೆಯ ರಹಸ್ಯ ಪತ್ತೆಯಾಗಿದೆ. ವರ್ಷಿಣಿಯನ್ನ ಮುಂದೆ ಬಿಟ್ಟು ಕೊಲೆ ಮಾಡಿದ್ದ ಸಂಚು ಆಡಿಯೋದಲ್ಲಿ ಬಹಿರಂಗವಾಗಿದೆ. ಸದ್ಯಕ್ಕೆ ಪೊಲೀಸರು ಕಾಲ್ ಡಿಟೇಲ್ಸ್ ಇಟ್ಟುಕೊಂಡು ತನಿಖೆ ಮುಂದುವರಿಸಿದ್ದಾರೆ .

    ನಾನು ಲಂಡನ್‍ಗೆ ಬಂದ ನಂತರ ರೂಪೇಶ್ ಕರೆ ಮಾಡಿದ್ದನು. ಲಕ್ಷ್ಮಣ್ ಮುಗಿಸುವ ಬಗ್ಗೆ ಪ್ರಸ್ತಾಪಿಸಿದ್ದನು. ಲಂಡನ್‍ನಲ್ಲಿ ಇದ್ದುಕೊಂಡೆ ನಾನು ಹೇಳಿದ್ದಂತೆ ಮಾಡಬೇಕು ಎಂದಿದ್ದನು ಎಂದು ಸಿಸಿಬಿ ಮುಂದೆ ಆರೋಪಿ ವರ್ಷಿಣಿ ಕೊಲೆಗೆ ಸಹಕಾರ ನೀಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮುಂದೆ ಸಿಎ ಮಾಡ್ತೀನಿ, ಜಾಸ್ತಿ ತಲೆಕೆಡಿಸಿಕೊಂಡಿಲ್ಲ: ವಾಣಿಜ್ಯ ಟಾಪರ್ ವರ್ಷಿಣಿ

    ಮುಂದೆ ಸಿಎ ಮಾಡ್ತೀನಿ, ಜಾಸ್ತಿ ತಲೆಕೆಡಿಸಿಕೊಂಡಿಲ್ಲ: ವಾಣಿಜ್ಯ ಟಾಪರ್ ವರ್ಷಿಣಿ

    ಬೆಂಗಳೂರು: ಪಿಯು ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು ಟಾಪರ್ ಆಗಿದ್ದಾರೆ. ಮಲ್ಲೇಶ್ವರಂ ವಿದ್ಯಾಮಂದಿರ ಕಾಲೇಜಿನ ವರ್ಷಿಣಿ. ಎಂ ಭಟ್ ಮತ್ತು ರಾಜಾಜಿನಗರ ಎಎಸ್‍ಸಿ ಪಿಯು ಕಾಲೇಜಿನ ಅಮೃತಾ ಎಸ್‍ಆರ್ 595 ಅಂಕಗಳನ್ನು ಗಳಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ವಾಣಿಜ್ಯ ವಿಭಾಗದ ಟಾಪರ್ ವರ್ಷಿಣಿ ಪಬ್ಲಿಕ್ ಟಿವಿಯಂದಿಗೆ ಮಾತನಾಡಿ, ನನಗೆ ತುಂಬಾ ಖುಷಿಯಾಗುತ್ತಿದೆ. ಪ್ರತಿ ವರ್ಷ ಪರೀಕ್ಷೆ ಫಲಿತಾಂಶ ಬಂದಾಗ ನಾನು ಸುದ್ದಿ ವಾಹಿನಿಗಳಲ್ಲಿ ಯಾರೂ ಟಾಪ್ ಬರುತ್ತಾರೆಂದು ನೋಡುತ್ತಿದೆ. ಆದರೆ ಈಗ ನಾನು ಆ ಸ್ಥಾನದಲ್ಲಿರುವುದು ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ.

    ದ್ವಿತೀಯ ಪಿಯುಸಿ ಶುರುವಾದ ಬಳಿಕ ದಿನ 4ರಿಂದ 5 ಗಂಟೆಗಳವರೆಗೂ ಓದುತ್ತಿದೆ. ನಾನು ತುಂಬಾ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಪರಿಶ್ರಮ, ಶಿಕ್ಷಕರ, ಪ್ರಿನ್ಸಿಪಲ್ ಹಾಗೂ ನನ್ನ ಪೋಷಕರ ಸಪೋರ್ಟ್ ಮಾಡಿದ್ದಾರೆ.

    ನಾನು ಈಗ ಸಿಎ ಮಾಡಬೇಕೆಂದುಕೊಂಡಿದ್ದೇನೆ. ಈಗಾಗಲೇ ಸಿಎ ಕೋಚಿಂಗ್ ಕ್ಲಾಸ್‍ಗೆ ಸೇರಿಕೊಂಡಿದ್ದೀನಿ. ನನ್ನ ಫಲಿತಾಂಶ ಬಂದಾಗ ನನ್ನ ತಾಯಿ ನಂಬಲೇ ಇಲ್ಲ, ಅವರಿಗೆ ತುಂಬಾ ಖುಷಿಯಾಗಿದೆ. ನನ್ನ ತಂದೆ ಊರಿನಿಂದ ಹೊರ ಹೋಗಿದ್ದು, ಕರೆ ಮಾಡಿ ತಿಳಿಸಬೇಕೆಂದು ವಾಣಿಜ್ಯ ವಿಭಾಗದ ಟಾಪರ್ ವರ್ಷಿಣಿ ತಿಳಿಸಿದ್ದಾರೆ.

    ವರ್ಷಿಣಿ ಒಟ್ಟು 595 ಅಂಕಗಳನ್ನು ಪಡೆದಿದ್ದು, ಸಂಸ್ಕೃತ, ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಇನ್ನೂ ಅಕೌಂಟ್ಸ್‍ನಲ್ಲಿ 99, ಆಂಗ್ಲ ಭಾಷೆಯಲ್ಲಿ 100ಕ್ಕೆ 96 ಅಂಕಗಳನ್ನು ಪಡೆದು ವಾಣಿಜ್ಯ ಭಾಗದ ಟಾಪರ್ ಆಗಿದ್ದಾರೆ.