Tag: ವರ್ತೂರು ಸಂತೋಷ್

  • ವರ್ತೂರಿನಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳ ರೀ-ಯೂನಿಯನ್‌

    ವರ್ತೂರಿನಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳ ರೀ-ಯೂನಿಯನ್‌

    ‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10)  ಮೂಲಕ ಗಮನ ಸೆಳೆದ ವರ್ತೂರು ಸಂತೋಷ್ (Varthur Santhosh) , ಸಿರಿ, ಅವಿನಾಶ್ ಶೆಟ್ಟಿ, ತನಿಷಾ ಕುಪ್ಪಂಡ ಬಹುದಿನಗಳ ನಂತರ ಭೇಟಿಯಾಗಿದ್ದಾರೆ. ವರ್ತೂರಿನಲ್ಲಿ ಒನ್ ಡೇ ಔಟಿಂಗ್ ಮಾಡಿದ್ದಾರೆ. ಸದ್ಯ ಮೀಟ್ ಆಗಿರುವ ‘ಬಿಗ್ ಬಾಸ್’ ತಾರೆಯರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವರ್ಷದ ಬಿಗ್ ಬಾಸ್ ಶೋ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಕಾರ್ಯಕ್ರಮ. ಗಲಾಟೆ, ಗದ್ದಲದ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೀಗ ಈ ಶೋ ಮುಗಿದ ‘ಬಿಗ್ ಬಾಸ್’ ಸ್ಪರ್ಧಿಗಳು ಒಬ್ಬರನ್ನೊಬ್ಬರು ಮರೆತ್ತಿಲ್ಲ. ಶೋ ನಂತರ ತಮ್ಮ ಸ್ನೇಹವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ಬೆಂಬಲಕ್ಕೆ ನಿಂತ ನಟ ಅಲ್ಲು ಅರ್ಜುನ್

    ಎಲ್ಲ ಸ್ಪರ್ಧಿಗಳ ಒಂದಲ್ಲ ಒಂದು ಕಾರಣಕ್ಕೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ, ಇನ್ನೊಬ್ಬರ ಪ್ರಾಜೆಕ್ಟ್‌ಗಳು, ಹೊಸ ಕಾರ್ಯಗಳಿಗೆ ಬೆಂಬಲಿಸುತ್ತಿದ್ದಾರೆ. ಇದೀಗ ಸಿರಿ, ತನಿಷಾ ಕುಪ್ಪಂಡ(Tanisha Kuppanda), ಅವಿನಾಶ್ ಶೆಟ್ಟಿ, ವರ್ತೂರು ಸಂತೋಷ್ ಅವರು ವರ್ತೂರಿನಲ್ಲಿ ಒಟ್ಟಾಗಿ ಊಟ ಮಾಡಿದ್ದಾರೆ. ಅಲ್ಲಿಯೇ ಇದ್ದ ತೋಟಕ್ಕೆ ಭೇಟಿ ನೀಡಿದ್ದಾರೆ. ಪ್ರಾಣಿ-ಪಕ್ಷಿಗಳ ಜೊತೆ ಸಮಯ ಕಳೆದಿದ್ದಾರೆ. ತೋಟದಲ್ಲಿದ್ದ ಹಣ್ಣುಗಳನ್ನು ಸವಿದು ಖುಷಿಪಟ್ಟಿದ್ದಾರೆ. ಒಟ್ನಲ್ಲಿ ಸತೋಷ್‌ ಅವರ ಊರಿನಲ್ಲಿ ಎಲ್ಲರೂ ಮಸ್ತ್‌ ಆಗಿ ಎಂಜಾಯ್‌ ಮಾಡಿದ್ದಾರೆ.

  • ತಾಯಿ ಊಟ ಮಾಡುತ್ತಿಲ್ಲ: ಕಣ್ಣೀರಿಟ್ಟ ವರ್ತೂರು ಸಂತೋಷ್

    ತಾಯಿ ಊಟ ಮಾಡುತ್ತಿಲ್ಲ: ಕಣ್ಣೀರಿಟ್ಟ ವರ್ತೂರು ಸಂತೋಷ್

    ನ್ನ ಮತ್ತು ತನ್ನ ತಾಯಿಯ ಬಗ್ಗೆ ಸಲ್ಲದ ಆರೋಪ ಮಾಡಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿ (Bigg Boss) ವರ್ತೂರು ಸಂತೋಷ್ (Varthur Santhosh) ಕಣ್ಣೀರಿಟ್ಟಿದ್ದಾರೆ. ತಂದೆ ನಿಧನದ ನಂತರ ತನ್ನನ್ನು ತಾಯಿ ಉತ್ತಮವಾಗಿಯೇ ಸಾಕಿದ್ದಾರೆ. ಆದರೆ, ಕೆಲವರು ಏನೇನೋ ಆರೋಪ ಮಾಡುತ್ತಿದ್ದಾರೆ ಎಂದು ವರ್ತೂರು ಸಂತೋಷ್ ಕಣ್ಣೀರು ಹಾಕಿದ್ದಾರೆ.

    ನಿಮ್ಮ ಮಾತುಗಳಿಂದ ನನ್ನ ತಾಯಿ ಸರಿಯಾಗಿ ಊಟ ಮಾಡುತ್ತಿಲ್ಲ. ಅವರು ಊಟವನ್ನೇ ಬಿಟ್ಟಿದ್ದಾರೆ. ನಾನು ಮತ್ತು ನನ್ನ ತಾಯಿ ತಪ್ಪು ಏನು ಮಾಡಿದ್ದೇವೆ ಎಂದು ತಿಳಿಸಿ. ನಮ್ಮ ತಪ್ಪನ್ನು ಸಾಬೀತು ಪಡಿಸಿದರೆ ಕ್ಷಮೆ ಕೇಳುತ್ತೇನೆ. ಆದರೆ, ಇಲ್ಲದೇ ಇರೋ ಆರೋಪದಿಂದಾಗಿ ನಾವು ನೊಂದಿದ್ದೇವೆ ಎಂದು ಸಂತೋಷ್ ಹೇಳಿಕೊಂಡಿದ್ದಾರೆ.

    ಬಿಗ್ ಬಾಸ್ ಮನೆಯಿಂದ ಬಂದ ನಂತರ ಸಂತೋಷ್ ಅವರಿಗೆ ತುಂಬಾನೇ ಅಭಿಮಾನಿಗಳು ಹುಟ್ಟಿದ್ದಾರೆ. ಅದನ್ನು ಸಹಿಸೋಕೆ ಆಗದೇ ಕೆಲವರು ಅಪಪ್ರಚಾರ ಮಾಡುತ್ತಿದ್ದಾರಂತೆ. ಅದರಿಂದಾಗಿ ಮನಸ್ಸಿಗೆ ತುಂಬಾನೇ ನೋವಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಅತ್ತಿದ್ದಾರೆ.

  • ವರ್ತೂರು ಸಂತೋಷ್ ಹೆಸರು ಹೇಳದೇ ಕ್ಷಮೆ ಕೇಳಿದ ಜಗ್ಗೇಶ್

    ವರ್ತೂರು ಸಂತೋಷ್ ಹೆಸರು ಹೇಳದೇ ಕ್ಷಮೆ ಕೇಳಿದ ಜಗ್ಗೇಶ್

    ವರಸನಾಯಕ ಜಗ್ಗೇಶ್ (Jaggesh) ಅವರಿಗೆ ಇಂದು (ಮಾ.17) ಹುಟ್ಟುಹಬ್ಬದ ಸಂಭ್ರಮ. ಅಪ್ಪು ಅಗಲಿಕೆಯ ನಂತರ ಜಗ್ಗೇಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ಮಂತ್ರಾಲಯದಲ್ಲಿ ರಾಯರ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಫೇಸ್‌ಬುಕ್ ಲೈವ್‌ಗೆ ಬಂದು ಅಭಿಮಾನಿಗಳು ಜೊತೆ ಜಗ್ಗೇಶ್ ಮಾತನಾಡಿದ್ದಾರೆ. ಈ ವೇಳೆ, ವರ್ತೂರು ಸಂತೋಷ್ ಹೆಸರು ಬಳಸದೇ ಅವರಿಗೆ ಜಗ್ಗೇಶ್ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿಯೇ ಚೊಚ್ಚಲ ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ

    JAGGESH

    ಲೈವ್‌ನಲ್ಲಿ ಜಗ್ಗೇಶ್, ನನ್ನ ಬೆಳವಣಿಗೆಗೆ ಮುಖ್ಯ ಕಾರಣ ನನ್ನ ಗುರುಗಳು ರಾಘವೇಂದ್ರ ಸ್ವಾಮಿಗಳು ಎಂದು ಹೇಳಿದರು. ಮುಖ್ಯ ವಿಚಾರಕ್ಕೆ ಬರುತ್ತೇನೆ ಎಂದ ಜಗ್ಗೇಶ್, ನಾನು ನೇರವಾಗಿ ಮಾತಾಡುವ ಮನುಷ್ಯ, ಹಳ್ಳಿಯ ಸೊಗಡಿನವನು, ನನ್ನ ಮಾತುಗಳಲ್ಲಿ ಹಳ್ಳಿ ಪದಗಳು ಬಂದು ಬಿಡುತ್ತವೆ ಎಂದಿದ್ದಾರೆ.

    ನಾನು ಎಂದಿಗೂ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಎಂದು ಮಾತನಾಡಿದ್ದಾರೆ. ಬಳಿಕ ಜಗ್ಗೇಶ್, ಮೈಕ್ ಹಿಡಿದ ಮಾತಾಡುವಾಗ ನನ್ನ ಮಾತಿನಿಂದ ಯಾರಿಗಾದ್ರೂ ಬೇಜಾರಾಗಿದ್ದರೆ ಕ್ಷಮಿಸಿಬಿಡಿ. ನಿಮ್ಮ ತಂದೆಯ ವಯಸ್ಸಿನವನು ಅಂದುಕೊಂಡು ಕ್ಷಮಿಸಿ ಎಂದು ಮಾತನಾಡಿದ್ದಾರೆ.

    ಸಿನಿಮಾವೊಂದರ ಪ್ರಚಾರದ ವೇಳೆ, ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುತ್ತಾ, ಬಿಗ್ ಬಾಸ್ ಸ್ಪರ್ಧಿ (Bigg Boss Kannada 10) ವರ್ತೂರು ಸಂತೋಷ್ ಅವರನ್ನು ‘ಕಿತ್ತೋದ್ ನನ್ ಮಗ’ ಎಂಬ ಪದ ಬಳಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ಜಗ್ಗೇಶ್, ವರ್ತೂರು ಸಂತೋಷ್ (Varthur Santhosh) ಹೆಸರು ಹೇಳದೇ ಕ್ಷಮೆ ಕೇಳಿದ್ದಾರೆ.

  • ವರ್ತೂ.. ದೂರದಿಂದ ಕೂಗಿ ಹೇಳೋ ಆಸೆ: ಮನ ಬಿಚ್ಚಿದ ನಟಿ ತನಿಷಾ ಕುಪ್ಪಂಡ

    ವರ್ತೂ.. ದೂರದಿಂದ ಕೂಗಿ ಹೇಳೋ ಆಸೆ: ಮನ ಬಿಚ್ಚಿದ ನಟಿ ತನಿಷಾ ಕುಪ್ಪಂಡ

    ಬಿಗ್ ಬಾಸ್ (Bigg Boss) ಮನೆಯಲ್ಲಿ ವರ್ತೂರು ಸಂತೋಷ್ (Varthuru Santhosh) ಮತ್ತು ಬೆಂಕಿ ತನಿಷಾ ಕುಪ್ಪಂಡ (Tanisha Kuppanda) ಮಧ್ಯ ಏನೋ ನೆಡೀತಾ ಇದೆ ಎನ್ನುವುದು ಪಕ್ಕಾ ಆಗಿತ್ತು. ಆದರೆ, ಎಲ್ಲಿಯೂ ಅವರು ಅನುಮಾನ ಬರುವ ರೀತಿಯಲ್ಲಿ ನಡೆದುಕೊಳ್ಳಲಿಲ್ಲ. ಮನೆಯಿಂದ ಆಚೆ ಬಂದ ಮೇಲೂ ಅವರು ಹಾಗಿಲ್ಲ. ಆದರೆ, ಅವರ ನಡವಳಿಕೆ ಮಾತ್ರ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿವೆ. ಹಾಗಾಗಿ ವರ್ತೂರು ಹೆಸರು ಕೇಳಿ ಬಂದಾಗೆಲ್ಲ ತನಿಷಾ ಹೆಸರು ತಳುಕು ಹಾಕಿಕೊಳ್ಳುತ್ತೆ.

    ಇಂತಹ ಫ್ರೆಂಡ್ ಶಿಪ್ ಬಗ್ಗೆ ಮತ್ತೆ ನೆನಪಿಸಿದ್ದಾರೆ ನಟಿ ತನಿಷಾ, ಇಂದು ವರ್ತೂರು ಸಂತೋಷ್ ಅವರ ಹುಟ್ಟು ಹಬ್ಬ (Birthday). ಅವರ ಹುಟ್ಟು ಹಬ್ಬಕ್ಕಾಗಿ ಸ್ಪೆಷಲ್ ಆಗಿಯೇ ತನಿಷಾ ವಿಶ್ ಮಾಡಿದ್ದಾರೆ. ನನ್ನ ಅಭಿಮಾನಿಗಳಲ್ಲಿ ನಾನೂ ಒಬ್ಬಳು. ಆ ಸಾಲಿನಲ್ಲಿ ನಿಂತು ದೂರದಿಂದ ನಿಮ್ಮ ಹುಟ್ಟು ಹಬ್ಬಕ್ಕೆ ಜೋರಾಗಿ ಕೂಗಿ ವಿಶ್ ಮಾಡುವ ಆಸೆ  ಎಂಬುದನ್ನು ಬರೆದುಕೊಂಡಿದ್ದಾರೆ. ವರ್ತೂರು ಜೊತೆಗಿರೋ ಫೋಟೋ ಹಂಚಿಕೊಂಡು, ಹಾರ್ಟ್ ಸಿಂಬಲ್ ಕೂಡ ಹಾಕಿದ್ದಾರೆ.

    ನಿನ್ನೆ ರಾತ್ರಿಯಿಂದಲೇ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಂತೋಷ್ ಮನೆಮುಂದೆ ಮಧ್ಯೆ ರಾತ್ರಿಯಿಂದಲೇ ಅಭಿಮಾನಿಗಳು ಜಮಾಯಿಸಿದ್ದರು. ನೆಚ್ಚಿನ ಸ್ಪರ್ಧಿಯ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.

    ಸಂತೋಷ್ ಹುಟ್ಟು ಹಬ್ಬಕ್ಕೆಂದು ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಬಂದಿದ್ದು, ಅವರಿಗಾಗಿ ಊಟದ ವ್ಯವಸ್ಥೆಯನ್ನು ಸಂತೋಷ್ ಮಾಡಿದ್ದರು. ನಾಲ್ಕು ಬಗೆಯ ಆಹಾರವನ್ನು ನಾಲ್ಕು ಸಾವಿರ ಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಾರ, ತುರಾಯಿ ಹಿಡಿದುಕೊಂಡು ಬಂದಿದ್ದ ಅಭಿಮಾನಿಗಳು ಭರ್ಜರಿ ಊಟ ಸವಿದರು.

    ಬಿಗ್ ಬಾಸ್ ಸ್ಪರ್ಧಿಗಳು ಕೂಡ ವರ್ತೂರು ಸಂತೋಷ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಅನೇಕರು ಕರೆ ಮಾಡಿ ವಿಶ್ ಮಾಡಿದ್ದರೆ, ಇನ್ನೂ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. ಕೆಲವರು ಇಂದು ನೇರವಾಗಿ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

  • ವರ್ತೂರು ಸಂತೋಷ್ ಹುಟ್ಟುಹಬ್ಬ: ನಾಲ್ಕು ಸಾವಿರ ಮಂದಿಗೆ ಊಟದ ವ್ಯವಸ್ಥೆ

    ನಿನ್ನೆ ರಾತ್ರಿಯಿಂದಲೇ ಬಿಗ್ ಬಾಸ್ (Bigg Boss) ಸ್ಪರ್ಧಿ ವರ್ತೂರು ಸಂತೋಷ್ (Varthur Santhosh) ಅವರ ಹುಟ್ಟು ಹಬ್ಬವನ್ನು (Birthday) ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಂತೋಷ್ ಮನೆಮುಂದೆ ಮಧ್ಯೆ ರಾತ್ರಿಯಿಂದಲೇ ಅಭಿಮಾನಿಗಳು ಜಮಾಯಿಸಿದ್ದರು. ನೆಚ್ಚಿನ ಸ್ಪರ್ಧಿಯ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.

    ಸಂತೋಷ್ ಹುಟ್ಟು ಹಬ್ಬಕ್ಕೆಂದು ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಬಂದಿದ್ದು, ಅವರಿಗಾಗಿ ಊಟದ ವ್ಯವಸ್ಥೆಯನ್ನು ಸಂತೋಷ್ ಮಾಡಿದ್ದರು. ನಾಲ್ಕು ಬಗೆಯ ಆಹಾರವನ್ನು ನಾಲ್ಕು ಸಾವಿರ ಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಾರ, ತುರಾಯಿ ಹಿಡಿದುಕೊಂಡು ಬಂದಿದ್ದ ಅಭಿಮಾನಿಗಳು ಭರ್ಜರಿ ಊಟ ಸವಿದರು.

    ಬಿಗ್ ಬಾಸ್ ಸ್ಪರ್ಧಿಗಳು ಕೂಡ ವರ್ತೂರು ಸಂತೋಷ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಅನೇಕರು ಕರೆ ಮಾಡಿ ವಿಶ್ ಮಾಡಿದ್ದರೆ, ಇನ್ನೂ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. ಕೆಲವರು ಇಂದು ನೇರವಾಗಿ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

  • ತನಿಷಾ ಜೊತೆಗಿನ ಸಿನಿಮಾ ಬಗ್ಗೆ ವರ್ತೂರು ಸಂತೋಷ್ ಪ್ರತಿಕ್ರಿಯೆ

    ತನಿಷಾ ಜೊತೆಗಿನ ಸಿನಿಮಾ ಬಗ್ಗೆ ವರ್ತೂರು ಸಂತೋಷ್ ಪ್ರತಿಕ್ರಿಯೆ

    ‘ಬಿಗ್ ಬಾಸ್ ಸೀಸನ್ 10’ರ (Bigg Boss kannada 10) ಬಳಿಕ ವರ್ತೂರು ಸಂತೋಷ್ (Varthur Santhosh) ಸಖತ್ ಬ್ಯುಸಿಯಾಗಿದ್ದಾರೆ. ಹಳ್ಳಿಕಾರ್ ರೇಸ್ ಸಿದ್ಧತೆಯಲ್ಲಿ ಸಂತೋಷ್ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ತನಿಷಾ (Tanisha Kuppanda) ಜೊತೆಗಿನ ಸಿನಿಮಾ ಮಾಡ್ತಾರಾ? ಮಾತುಕತೆ ಆಗಿದ್ಯಾ ಎಂಬುದರ ಬಗ್ಗೆ ಸಂತೋಷ್ ಪ್ರತಿಕ್ರಿಯೆ ನೀಡಿದ್ದಾರೆ.

    ವರ್ತೂರು ಸಂತೋಷ್ ಜೊತೆ ಸಿನಿಮಾ ಮಾಡ್ತೀನಿ. ಆ ಚಿತ್ರವನ್ನು ನಾನೇ ನಿರ್ಮಾಣ ಮಾಡ್ತೀನಿ ಅಂತ ತನಿಷಾ ಕುಪ್ಪಂಡ ಮಾಧ್ಯಮಕ್ಕೆ ಕೆಲ ದಿನಗಳ ಹಿಂದೆ ಮಾತನಾಡಿದ್ದರು. ಹಾಗಾಗಿ ತನಿಷಾ ಜೊತೆ ಸಿನಿಮಾ ಮಾಡ್ತೀರಾ ಎಂದು ವರ್ತೂರುಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಲಾಯಿತು.

    ಸಿನಿಮಾ ಕುರಿತು ತನಿಷಾ ನನ್ನ ಜೊತೆ ಮಾತನಾಡಿಲ್ಲ. ಆದರೆ ಅವರು ಕೇಳೋದು ಹೆಚ್ಚಾ, ನಾನು ಮಾಡೋದು ಹೆಚ್ಚಾ ಎಂದಿದ್ದಾರೆ.  ಖಂಡಿತಾ ಅವರ ಜೊತೆ ಸಿನಿಮಾ ಮಾಡ್ತೀನಿ ಎಂದು ವರ್ತೂರು ಸಂತೋಷ್ ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರಣಿತಾ ನಟನೆಯ ಮಲಯಾಳಂ ಚಿತ್ರದ ಲುಕ್ ರಿವೀಲ್

    ಅಭಿಮಾನಿಗಳ ಆಸೆಯಂತೆ ‘ಹಳ್ಳಿಕಾರ್’ ಕುರಿತು ಸಿನಿಮಾ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ನಿರ್ಮಾಪಕರ ಜೊತೆ ಮಾತುಕತೆ ಆಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ.

    ನಿಮಗೆ ಜನರ ಬೆಂಬಲವಿದೆ. ರಾಜಕೀಯಕ್ಕೆ ಬರುತ್ತೀರಾ ಎಂದು ಸಂತೋಷ್‌ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಪ್ರತಿಕ್ರಿಯಿಸಿ, ನಾನು ರಾಜಕೀಯಕ್ಕೆ ಬರಲ್ಲ. ಯಾವುದೇ ಪಕ್ಷ, ಸಂಘದ ಜೊತೆ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಜನರ ಸೇವೆ ಮಾಡಲು ರಾಜಕೀಯವೇ ಬೇಕೆಂದು ಇಲ್ಲ. ದೇವರ ಆಶೀರ್ವಾದ ಇದ್ದರೆ ಸಾಕು ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.

  • ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ವರ್ತೂರು ಸಂತೋಷ್?

    ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ವರ್ತೂರು ಸಂತೋಷ್?

    ಳ್ಳಿಕಾರ್ ಸಂತೋಷ್ ಆಗಿದ್ದವರು ಈಗ ಬಿಗ್ ಬಾಸ್ (Bigg Boss Kannada 10) ವರ್ತೂರು ಸಂತೋಷ್ (Varthur Santhosh) ಆಗಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಸಾಲು ಸಾಲು ಕಾರ್ಯಕ್ರಮಗಳಿಗೆ ಗೆಸ್ಟ್ ಆಗಿ ವರ್ತೂರು ಸಂತೋಷ್ ಭಾಗಿಯಾಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಅವರಿಗೆ ರಾಜಕೀಯ ಎಂಟ್ರಿ ಬಗ್ಗೆ ಕೇಳಲಾಗಿದೆ.

    ಬಿಗ್ ಬಾಸ್ ಫಿನಾಲೆ ತನಕ ಟಫ್ ಪೈಟ್ ಕೊಟ್ಟು ಜನರ ಪ್ರೀತಿ ಗೆದ್ದ ವರ್ತೂರುಗೆ ಸಿಕ್ಕಾಪಟ್ಟೆ ಜನ ಬೆಂಬಲವಿದೆ. ಹಾಗಾಗಿಯೇ ರಾಜಕೀಯಕ್ಕೆ ಬರುತ್ತಾರಾ ಎಂಬ ಪ್ರಶ್ನೆಗೆ ವರ್ತೂರು ನೋ ಎಂದಿದ್ದಾರೆ. ಇದನ್ನೂ ಓದಿ:ಗಾಸಿಪ್‌ಗೆಲ್ಲಾ ಬ್ರೇಕ್, ‘ಅನಿಮಲ್’ ಸಕ್ಸಸ್ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

    ನಾನು ರಾಜಕೀಯಕ್ಕೆ (Politics) ಬರಲ್ಲ. ಯಾವುದೇ ಪಕ್ಷ, ಸಂಘದ ಜೊತೆ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಜನರ ಸೇವೆ ಮಾಡಲು ರಾಜಕೀಯವೇ ಬೇಕೆಂದು ಇಲ್ಲ. ದೇವರ ಆಶೀರ್ವಾದ ಇದ್ದರೆ ಸಾಕು ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.

    ಸದ್ಯ ಅವರ ಗಮನ ಇರೋದು ಹಳ್ಳಿಕಾರ್ ರೇಸ್ ಬಗ್ಗೆ ಇದು ಮಾರ್ಚ್‌ನಲ್ಲಿ ನಡೆಯಲಿದೆ. ಸುದೀಪ್, ಧ್ರುವ ಸರ್ಜಾ ಸೇರಿದಂತೆ ಬಿಗ್‌ ಬಾಸ್‌ ಕನ್ನಡ 10ರ ಸ್ಪರ್ಧಿಗಳು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಇದನ್ನೂ ಓದಿ:ದೇಹದ ತೂಕ ಇಳಿಸಿಕೊಂಡು ಸ್ಲಿಮ್ ಆದ ಸಪ್ತಮಿ

    ಈ ವೇಳೆ ಜಗ್ಗೇಶ್‌ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಅದೆಲ್ಲಾ ಮುಗಿದು ಹೋದ ಕತೆ ಬಿಡಿ ಎಂದು ವರ್ತೂರು ಸಂತೋಷ್‌ ಮಾತನಾಡಿದ್ದಾರೆ. ವಿವಾದದ ಬಗ್ಗೆ ಏನೂ ಉತ್ತರಿಸದೇ, ಈ ವಿಚಾರ ಇಲ್ಲಿಗೆ ಬಿಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  • ವರ್ತೂರು ಸಂತೋಷ್ ಟೀಮ್ ವಿರುದ್ಧ ಜಗ್ಗೇಶ್ ದೂರು

    ವರ್ತೂರು ಸಂತೋಷ್ ಟೀಮ್ ವಿರುದ್ಧ ಜಗ್ಗೇಶ್ ದೂರು

    ಹುಲಿ ಉಗುರು  (Tiger Claw) ವಿಷಯಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಅವರು ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ನಿಂದಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಜಗ್ಗೇಶ್ ವಿರುದ್ಧ ವರ್ತೂರು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಜಗ್ಗೇಶ್ ಅವರನ್ನು ನಿಂದಿಸುವಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಜಗ್ಗೇಶ್ ಮನೆಗೆ ಮುತ್ತಿಗೆ ಹಾಕುವ ಬೆದರಿಕೆಯನ್ನೂ ಹಾಕಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಗ್ಗೇಶ್ ದೂರು ನೀಡಿದ್ದಾರೆ.

    ರಂಗನಾಯಕ ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ರಿಯಲ್ ಹುಲಿ ಉಗುರು ಪೆಂಡೆಂಟ್ ಧರಿಸಿದ್ದಕ್ಕಾಗಿ ವರ್ತೂರು ಸಂತೋಷ್‌ಗೆ ಜಗ್ಗೇಶ್ (Jaggesh) ‘ಕಿತ್ತೋದ್ ನನ್ಮಗ’ ಎಂದು ಅಸಮಾಧಾನ ಹೊರಹಾಕಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.  ‘ಬಿಗ್‌ ಬಾಸ್‌ ಕನ್ನಡ 10’ರ ಸ್ಪರ್ಧಿ (Bigg Boss Kannada 10) ವರ್ತೂರು ಸಂತೋಷ್ (Varthur Santhosh) ಗಮನಕ್ಕೂ ಬಂದಿದೆ. ಜಗ್ಗೇಶ್‌ ಮಾತಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಬಿಡಿ ಅವರು ದೊಡ್ಡವರು. ನಾನು ಹೇಳುವುದು ಇಷ್ಟೆ, ಕಾಲಾಯ ತಸ್ಮೈ ನಮಃ ಅಷ್ಟೆ. ಎಲ್ಲದಕ್ಕೂ ಉತ್ತರ ಕೊಡಲೇ ಬೇಕು ಅಂತೇನೂ ಇಲ್ಲ. ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಮೌನವಾಗಿದ್ದರೆ ಸಾಕು ಉತ್ತರ ಸಿಗುತ್ತದೆ ಎಂದು ಜಗ್ಗೇಶ್ ಮಾತಿಗೆ ವರ್ತೂರು ಉತ್ತರ ನೀಡಿದ್ದಾರೆ. ಬಳಿಕ ಸುದೀಪಣ್ಣನ ಬಳಿ ನಾನು ಕೆಲವೊಂದು ವಿಚಾರಗಳನ್ನು ಕಲಿತಿದ್ದೀನಿ. ಸುದೀಪಣ್ಣ ಸದಾ ಒಂದು ಮಾತು ಹೇಳ್ತಾರೆ. ವರ್ತೂರು ಅವರೇ ಎಲ್ಲಾ ಜಾಗದಲ್ಲೂ ಮಾತನಾಡಬೇಕು ಅಂತಿಲ್ಲ. ಕೆಲವೊಮ್ಮೆ ಮಾತನಾಡದೇ ಸುಮ್ಮನಿದ್ದರೆ ಆ ಸೈಲೆಂಟ್ ಉತ್ತರ ಕೊಡುತ್ತೆ ಅಂತ. ತೂಕದ ಜೊತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕು ಎಂದು ಮಾತನಾಡಿದ್ದಾರೆ.

    ‘ರಂಗನಾಯಕ’ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಾನು ಹುಲಿ ತರ ಬದುಕಬೇಕು ಅಂತ ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ ಬಳಿಕ ದೊಡ್ಡ ಸುದ್ದಿ ಆಯಿತು ಎಂದು ಜಗ್ಗೇಶ್ ಮಾತನಾಡಿದ್ದರು.

    ಸಂತೋಷ್ ಬಗ್ಗೆ ಜಗ್ಗೇಶ್ ಈ ರೀತಿ ಹೇಳಿದ್ದಾರೆ, ಜಗ್ಗೇಶ್ ಅಂತಹವರು ‘ಕಿತ್ತೋದ್ ನನ್ಮಗ’ ಎಂಬ ಪದ ಬಳಕೆ ಮಾಡಿದ್ದು ಸರಿಯಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಹಿರಿಯ ನಟ ಜಗ್ಗೇಶ್ ಬಗ್ಗೆ ಪರ ಮತ್ತು ವಿರೋಧವಾಗಿ ಚರ್ಚೆ ಶುರುವಾಗಿತ್ತು.

    ಮೂರು ತಿಂಗಳ ಹಿಂದೆ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು. ಅದರಿಂದ ಜೈಲಿಗೆ ಕೂಡ ಹೋಗಿದ್ದರು. ಆನಂತರ ಜಾಮೀನು ಪಡೆದು ಮತ್ತೆ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಆ ಸಂದರ್ಭದಲ್ಲಿ ಅನೇಕರಿಗೆ ಸಂಕಷ್ಟ ಎದುರಾಗಿತ್ತು. ಹುಲಿ ಉಗುರಿನ ವಿವಾದ ಜಗ್ಗೇಶ್ ಅವರಿಗೂ ಬಿಸಿ ಮುಟ್ಟಿಸಿತ್ತು.

  • ಜಗ್ಗೇಶ್ ಕ್ಷಮೆ ಕೇಳದೇ ಇದ್ದರೆ, ಮನೆಗೆ ಮುತ್ತಿಗೆ: ವರ್ತೂರ್ ಪರ ಬ್ಯಾಟಿಂಗ್

    ಜಗ್ಗೇಶ್ ಕ್ಷಮೆ ಕೇಳದೇ ಇದ್ದರೆ, ಮನೆಗೆ ಮುತ್ತಿಗೆ: ವರ್ತೂರ್ ಪರ ಬ್ಯಾಟಿಂಗ್

    ಹುಲಿ ಉಗುರು ಪೆಂಡೆಂಟ್ ಗೆ ಸಂಬಂಧಿಸಿದಂತೆ ಜಗ್ಗೇಶ್ ಆಡಲಾದ ಮಾತಿಗೆ ಕ್ಷಮೆ ಕೇಳಬೇಕು ಎಂದು ವರ್ತೂರು ಸಂತೋಷ್ ಪರ ಆಪ್ತರು ಆಗ್ರಹಿಸಿದ್ದಾರೆ. ಜಗ್ಗೇಶ್ ಕ್ಷಮೆ ಕೇಳದೇ ಇದ್ದರೆ, ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಆಪ್ತರು ವಿಡಿಯೋ ಹರಿಬಿಟ್ಟಿದ್ದಾರೆ. ಅಲ್ಲಿಗೆ ಹುಲಿ ಉಗುರು ಮತ್ತೊಂದು ಬಾರಿ ಸದ್ದು ಮಾಡುತ್ತಿದೆ.

    ರಿಯಲ್ ಹುಲಿ ಉಗುರು ಪೆಂಡೆಂಟ್ ಧರಿಸಿದ್ದಕ್ಕಾಗಿ ವರ್ತೂರು ಸಂತೋಷ್‌ಗೆ ಜಗ್ಗೇಶ್ (Jaggesh) ‘ಕಿತ್ತೋದ್ ನನ್ಮಗ’ ಎಂದು ಅಸಮಾಧಾನ ಹೊರಹಾಕಿದ್ದರು. ಈ ವಿಚಾರ ‘ಬಿಗ್‌ ಬಾಸ್‌ ಕನ್ನಡ 10’ರ ಸ್ಪರ್ಧಿ (Bigg Boss Kannada 10) ವರ್ತೂರು ಸಂತೋಷ್ (Varthur Santhosh) ಗಮನಕ್ಕೂ ಬಂದಿದೆ. ಜಗ್ಗೇಶ್‌ ಮಾತಿಗೆ ಅವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

    ಬಿಡಿ ಅವರು ದೊಡ್ಡವರು. ನಾನು ಹೇಳುವುದು ಇಷ್ಟೆ, ಕಾಲಾಯ ತಸ್ಮೈ ನಮಃ ಅಷ್ಟೆ. ಎಲ್ಲದಕ್ಕೂ ಉತ್ತರ ಕೊಡಲೇ ಬೇಕು ಅಂತೇನೂ ಇಲ್ಲ. ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಮೌನವಾಗಿದ್ದರೆ ಸಾಕು ಉತ್ತರ ಸಿಗುತ್ತದೆ ಎಂದು ಜಗ್ಗೇಶ್ ಮಾತಿಗೆ ವರ್ತೂರು ಉತ್ತರ ನೀಡಿದ್ದಾರೆ.

    ಬಳಿಕ ಸುದೀಪಣ್ಣನ ಬಳಿ ನಾನು ಕೆಲವೊಂದು ವಿಚಾರಗಳನ್ನು ಕಲಿತಿದ್ದೀನಿ. ಸುದೀಪಣ್ಣ ಸದಾ ಒಂದು ಮಾತು ಹೇಳ್ತಾರೆ. ವರ್ತೂರು ಅವರೇ ಎಲ್ಲಾ ಜಾಗದಲ್ಲೂ ಮಾತನಾಡಬೇಕು ಅಂತಿಲ್ಲ. ಕೆಲವೊಮ್ಮೆ ಮಾತನಾಡದೇ ಸುಮ್ಮನಿದ್ದರೆ ಆ ಸೈಲೆಂಟ್ ಉತ್ತರ ಕೊಡುತ್ತೆ ಅಂತ. ತೂಕದ ಜೊತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕು ಎಂದು ಮಾತನಾಡಿದ್ದಾರೆ.

    ‘ರಂಗನಾಯಕ’ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಾನು ಹುಲಿ ತರ ಬದುಕಬೇಕು ಅಂತ ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ ಬಳಿಕ ದೊಡ್ಡ ಸುದ್ದಿ ಆಯಿತು ಎಂದು ಜಗ್ಗೇಶ್ ಮಾತನಾಡಿದ್ದರು.

    ಸಂತೋಷ್ ಬಗ್ಗೆ ಜಗ್ಗೇಶ್ ಈ ರೀತಿ ಹೇಳಿದ್ದಾರೆ, ಜಗ್ಗೇಶ್ ಅಂತಹವರು ‘ಕಿತ್ತೋದ್ ನನ್ಮಗ’ ಎಂಬ ಪದ ಬಳಕೆ ಮಾಡಿದ್ದು ಸರಿಯಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಹಿರಿಯ ನಟ ಜಗ್ಗೇಶ್ ಬಗ್ಗೆ ಪರ ಮತ್ತು ವಿರೋಧವಾಗಿ ಚರ್ಚೆ ಶುರುವಾಗಿತ್ತು.

    ಮೂರು ತಿಂಗಳ ಹಿಂದೆ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು. ಅದರಿಂದ ಜೈಲಿಗೆ ಕೂಡ ಹೋಗಿದ್ದರು. ಆನಂತರ ಜಾಮೀನು ಪಡೆದು ಮತ್ತೆ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಆ ಸಂದರ್ಭದಲ್ಲಿ ಅನೇಕರಿಗೆ ಸಂಕಷ್ಟ ಎದುರಾಗಿತ್ತು. ಹುಲಿ ಉಗುರಿನ ವಿವಾದ ಜಗ್ಗೇಶ್ ಅವರಿಗೂ ಬಿಸಿ ಮುಟ್ಟಿಸಿತ್ತು.

  • ಕುಟುಕಿದ ಜಗ್ಗೇಶ್‌ಗೆ ಕಾಲಾಯ ತಸ್ಮೈ ನಮಃ ಎಂದ ವರ್ತೂರು ಸಂತೋಷ್‌

    ಕುಟುಕಿದ ಜಗ್ಗೇಶ್‌ಗೆ ಕಾಲಾಯ ತಸ್ಮೈ ನಮಃ ಎಂದ ವರ್ತೂರು ಸಂತೋಷ್‌

    ಹುಲಿ ಉಗುರಿನ ಪೆಂಡೆಂಟ್ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ರಿಯಲ್ ಹುಲಿ ಉಗುರು ಪೆಂಡೆಂಟ್ ಧರಿಸಿದ್ದಕ್ಕಾಗಿ ವರ್ತೂರು ಸಂತೋಷ್‌ಗೆ ಜಗ್ಗೇಶ್ (Jaggesh) ‘ಕಿತ್ತೋದ್ ನನ್ಮಗ’ ಎಂದು ಅಸಮಾಧಾನ ಹೊರಹಾಕಿದ್ದರು. ಈ ವಿಚಾರ ‘ಬಿಗ್‌ ಬಾಸ್‌ ಕನ್ನಡ 10’ರ ಸ್ಪರ್ಧಿ (Bigg Boss Kannada 10) ವರ್ತೂರು ಸಂತೋಷ್ (Varthur Santhosh) ಗಮನಕ್ಕೂ ಬಂದಿದೆ. ಜಗ್ಗೇಶ್‌ ಮಾತಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಬಿಡಿ ಅವರು ದೊಡ್ಡವರು. ನಾನು ಹೇಳುವುದು ಇಷ್ಟೆ, ಕಾಲಾಯ ತಸ್ಮೈ ನಮಃ ಅಷ್ಟೆ. ಎಲ್ಲದಕ್ಕೂ ಉತ್ತರ ಕೊಡಲೇ ಬೇಕು ಅಂತೇನೂ ಇಲ್ಲ. ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಮೌನವಾಗಿದ್ದರೆ ಸಾಕು ಉತ್ತರ ಸಿಗುತ್ತದೆ ಎಂದು ಜಗ್ಗೇಶ್ ಮಾತಿಗೆ ವರ್ತೂರು ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಬೆನ್ನಲ್ಲೇ ರಾಜಕೀಯದತ್ತ ಹೇಮಾ ಮಾಲಿನಿ ಪುತ್ರಿ