Tag: ವರ್ಜೀನಿಯಾ ಬೀಚ್

  • ಸಹೋದ್ಯೋಗಿಗಳ ಮೇಲೆಯೇ ಏಕಾಏಕಿ ಗುಂಡಿನ ದಾಳಿ- 11 ಮಂದಿ ದಾರುಣ ಸಾವು

    ಸಹೋದ್ಯೋಗಿಗಳ ಮೇಲೆಯೇ ಏಕಾಏಕಿ ಗುಂಡಿನ ದಾಳಿ- 11 ಮಂದಿ ದಾರುಣ ಸಾವು

    ವಾಷಿಂಗ್ಟನ್: ಅಧಿಕಾರಿಯೊಬ್ಬ ಪುರಸಭೆ ಕೇಂದ್ರದಲ್ಲಿ ಗುಂಡಿನ ದಾಳಿ ಮಾಡಿದ ಪರಿಣಾಮ 12 ಮಂದಿ ಸಹೋದ್ಯೋಗಿಗಳು ಸ್ಥಳದಲ್ಲೇ ಮೃತಪಟ್ಟು ಹಲವಾರು ಮಂದಿ ಗಾಯಗೊಂಡ ಘಟನೆ ಅಮೆರಿಕದ ವರ್ಜೀನಿಯಾ ಬೀಚ್ ಪುರಸಭೆ ಕೇಂದ್ರದಲ್ಲಿ ನಡೆದಿದೆ.

    ಗುಂಡಿನ ದಾಳಿ ಮಾಡಿದ ಉದ್ಯೋಗಿಯನ್ನು ಪೊಲೀಸರು ಹೊಡೆದು ಹಾಕಿದ್ದಾರೆ. ಈ ಗುಂಡಿನ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸುಮಾರು 4 ಗಂಟೆಗೆ ಪುರಸಭೆಯ ಎರಡನೇ ಕಟ್ಟಡಕ್ಕೆ ಬಂದ ಉದ್ಯೋಗಿ, ಕೂಡಲೇ ಸಾಮೂಹಿಕವಾಗಿ ಗುಂಡಿನ ದಾಳಿ ಮಾಡಿದ್ದಾನೆ. ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದ ಸುಮಾರು 11 ಮಂದಿ ಸಹೋದ್ಯೋಗಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಹಲವು ಮಂದಿಗೆ ಗಾಯವಾಗಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ಘಟನೆಯ ಕುರಿತು ಮಾತನಾಡಿರುವ ಪೊಲೀಸ್ ಮುಖ್ಯಸ್ಥ ಜೇಮ್ಸ್ ಸೆರ್ವೆರಾ, ಘಟನೆ ನಡೆದ ತಕ್ಷಣವೇ ಆರೋಪಿಯನ್ನು ಕೊಂದಿದ್ದೇವೆ. ಈ ಘಟನೆ ಯಾವ ಕಾರಣಕ್ಕೆ ನಡೆಯಿತು. ಆತ ಗುಂಡಿನ ದಾಳಿ ನಡೆಸಲು ಕಾರಣ ಏನು ಎಂಬುದು ನಮಗೆ ತಿಳಿದು ಬಂದಿಲ್ಲ. ಆದರೆ ಇದರಲ್ಲಿ 11 ಮಂದಿ ಸಾವನ್ನಪ್ಪಿದ್ದು 6 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರ ಆಸ್ಪತ್ರೆಗೆ ದಾಖಲು ಮಾಡಿದ್ದು ಅವರ ಪರಿಸ್ಥಿತಿ ಬಗ್ಗೆ ತಕ್ಷಣ ಯಾವುದೇ ಮಾಹಿತಿ ನೀಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.

    ಇದರ ಬಗ್ಗೆ ಪ್ರತ್ಯಕ್ಷದರ್ಶಿಯಾದ ಮೇಗನ್ ಬ್ಲಾಂಟನ್ ಅವರು ಮಾತನಾಡಿ, ನಾನು ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಪುರಸಭೆ ಕಟ್ಟದಲ್ಲೇ ಇದ್ದೆ. ನಾನು ಆ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಸಹೋದ್ಯೋಗಿಗಳೊಂದಿಗೆ ಕಚೇರಿಯಲ್ಲಿ ಅವಿತುಗೊಂಡು ಮೇಜಿನ ಸಹಾಯದಿಂದ ಜೀವ ಉಳಿಸಿಕೊಂಡೆ ಎಂದು ಹೇಳಿದ್ದಾರೆ.

    ವಾಷಿಂಗ್ಟನ್‍ನ ವರ್ಜೀನಿಯಾ ಬೀಚ್ ಪುರಸಭೆ ವ್ಯಾಪ್ತಿಯಲ್ಲಿ ಗುಂಡಿನ ದಾಳಿಗಳು ಹೆಚ್ಚಾಗಿದ್ದು, ಇದು ಈ ವರ್ಷ ನಡೆಯುತ್ತಿರುವ 150ನೇ ಸಾಮೂಹಿಕ ಗುಂಡಿನ ದಾಳಿ ಎಂದು ಹೇಳಲಾಗಿದೆ.