Tag: ವರ್ಗಾವಣೆ ಪತ್ರ

  • ಫೀಸ್ ಕಟ್ಟದ್ದಕ್ಕೆ 150 ವಿದ್ಯಾರ್ಥಿಗಳಿಗೆ ಟಿಸಿಕೊಟ್ಟು ಮನೆಗೆ ಕಳುಸಿದ್ರು!

    ಫೀಸ್ ಕಟ್ಟದ್ದಕ್ಕೆ 150 ವಿದ್ಯಾರ್ಥಿಗಳಿಗೆ ಟಿಸಿಕೊಟ್ಟು ಮನೆಗೆ ಕಳುಸಿದ್ರು!

    ಮುಂಬೈ: ಶಾಲೆಯ ಶುಲ್ಕ (ಫೀಸ್) ಪಾವತಿಸದ 150 ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣಪತ್ರ (ಟಿಸಿ) ಕೊಟ್ಟು ಮನೆಗೆ ಕಳುಹಿಸಿದ ಅಮಾನವೀಯ ಘಟನೆಯು ಮಹಾರಾಷ್ಟ್ರದ ಪುಣೆಯ ಸಮೀಪದ ಹಿಂಗ್ಲೆಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

    ಝೀಲ್ ಶಿಕ್ಷಣ ಸಂಸ್ಥೆಯ ದ್ಯಾನಗಂಗಾ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಸಂಸ್ಥೆಯು ಹೆಚ್ಚು ಶುಲ್ಕವನ್ನು ನಮ್ಮಿಂದ ಪಡೆಯುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.

    ನಾವು ಈಗಾಗಲೇ 30 ಸಾವಿರ ರೂ. ಶುಲ್ಕ ಹಾಗೂ 10 ಸಾವಿರ ರೂ. ಠೇವಣಿ ನೀಡಿದ್ದೇವೆ. ಠೇವಣಿ ಹಣದಲ್ಲಿಯೇ ಶುಲ್ಕ ಹೊಂದಾಣಿಕೆ ಮಾಡಿಕೊಳ್ಳುವಂತೆ ಶಾಲೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ಇದನ್ನು ಒಪ್ಪಲಿಲ್ಲ ಎಂದು ಪೋಷಕರು ದೂರಿದ್ದಾರೆ.

    ಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರರಣದಲ್ಲಿ ಬಾಂಬೆ ಹೈಕೋರ್ಟ್ ಶಾಲೆಯ ಪರ ತೀರ್ಪು ನೀಡಿದ್ದು, ಶುಲ್ಕ ಪಾವತಿಸದ ಮಕ್ಕಳ ದಾಖಲೆಯನ್ನು ರದ್ದು ಪಡಿಸಿ ವರ್ಗಾವಣೆ ಪತ್ರ ನೀಡಬಹುದು ಆದೇಶಿಸಿತ್ತು.

    2016-17ರಲ್ಲಿ ವಿದ್ಯಾರ್ಥಿಗಳ ಪೋಷಕರು 30 ಸಾವಿರ ಶುಲ್ಕ ಪಾವತಿ ಮಾಡಿದ್ದರು. ಆದರೆ 2017-18ರ ಸಾಲಿನಲ್ಲಿ ಅಷ್ಟೇ ಮೊತ್ತದ ಶುಲ್ಕ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಹೈಕೋರ್ಟ್ ಶುಲ್ಕ ಪಾವತಿಸಲು ಆದೇಶ ನೀಡಿತ್ತು. ಅಲ್ಲದೇ ಶಿಕ್ಷಣ ಸಂಸ್ಥೆ ಶುಲ್ಕ ಪಾವತಿಗೆ ಏಳು ದಿನ ಅವಕಾಶ ನೀಡಿದ್ದರೂ ಪೋಷಕರು ಒಪ್ಪಲಿಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಿದೆ ಎಂದು ಸಂಸ್ಥೆಯ ಪರ ವಕೀಲ ವಿಕ್ರಂ ದೇಶಮುಖ್ ಹೇಳಿದ್ದಾರೆ.