Tag: ವರ್ಕ್ ಫ್ರಂ ಹೋಂ

  • ಪ್ರತಿ ಬುಧವಾರ ವರ್ಕ್ ಫ್ರಂ ಹೋಂ ಕೊಡಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ಟ್ರಾಫಿಕ್‌ ಪೊಲೀಸರ ಸಲಹೆ

    ಪ್ರತಿ ಬುಧವಾರ ವರ್ಕ್ ಫ್ರಂ ಹೋಂ ಕೊಡಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ಟ್ರಾಫಿಕ್‌ ಪೊಲೀಸರ ಸಲಹೆ

    ಬೆಂಗಳೂರು: ನಗರದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ನಿಯಂತ್ರಣಕ್ಕೆ (Traffic Jam) ಪೊಲೀಸ್ ಇಲಾಖೆ ಹೊಸ ಪ್ಲಾನ್ ಮಾಡಿದೆ. ಬೆಂಗಳೂರು ಟೆಕ್ಕಿಗಳಿಗೆ ಪ್ರತಿ ಬುಧವಾರದಂದು ವರ್ಕ್ ಫ್ರಂ ಹೋಂ (Work From Home) ಮಾಡುವಂತೆ ಐಟಿ ಕಂಪನಿಗಳಿಗೆ (IT Company) ಸಲಹೆ ನೀಡಿದೆ.

    ಐಟಿ ಕಂಪನಿಗಳು ಇರುವ ಪ್ರದೇಶಗಳು, ಅದರ ಸುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ವಿಪರೀತ ಆಗುತ್ತಿದೆ ಹೀಗಾಗಿ ಬುಧವಾರ ಒಂದು ದಿನ ವರ್ಕ್‌ ಫ್ರಂ ಹೋಂ ಮಾಡುವಂತೆ ಸೂಚನೆ ನೀಡಬೇಕೆಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಕಾರ್ತಿಕ್ ರೆಡ್ಡಿ ಸಲಹೆ ನೀಡಿದ್ದಾರೆ.  ಇದನ್ನೂ ಓದಿ: ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

    ಸಲಹೆ ಏನು?
    – ಪೀಕ್ ಅವರ್ ಬಿಟ್ಟು ಬೆಳಗ್ಗೆ 7:30 ಅಥವಾ 8 ಗಂಟೆಗೆ ಕಂಪನಿ ಆರಂಭಿಸಬೇಕು. ಇದನ್ನೂ ಓದಿ: ಬ್ರೇಕಪ್‌ ಕೊಲೆ ಕೇಸ್‌ಗೆ ಟ್ವಿಸ್ಟ್‌ – ಕೇವಲ 2 ಸಾವಿರಕ್ಕಾಗಿ ಬಿತ್ತು ಹೆಣ!
    – ಔಟರ್ ರಿಂಗ್ ರೋಡ್‌ನಲ್ಲಿ ಇರುವ ಕಂಪನಿಗಳ ಸಮಯ ಬದಲಾವಣೆ ಮಾಡಬೇಕು
    – ಪ್ರತಿ ಬುಧವಾರ ವರ್ಕ್ ಫ್ರಂ ಹೋಮ್‌ಗೆ ಸಲಹೆ, ಐಟಿ ಕಂಪನಿಗಳು ಬಿಎಂಟಿಸಿ ಜೊತೆ ಒಪ್ಪಂದ ಮಾಡಿಕೊಳ್ಳಿ
    – ಬಿಎಂಟಿಸಿ ಬಸ್‌ಗಳ ಮೂಲಕ ಪಿಕಪ್-ಡ್ರಾಪ್‌ಗೆ ಎಸಿ ಬಸ್ ಕೊಡೋದಕ್ಕೆ ಬಿಎಂಟಿಸಿ ಒಪ್ಪಿಗೆ ನೀಡಿದೆ
    – ಸಾರ್ವಜನಿಕರು ಸ್ವಂತ ವೆಹಿಕಲ್ ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಿ

    ಬುಧವಾರವೇ ಯಾಕೆ?
    ಬುಧವಾರ ವಾರದ ಮಧ್ಯದಲ್ಲಿ ಬರುವ ಕಾರಣ ಸಾಧಾರಣವಾಗಿ ಐಟಿ ಕಂಪನಿಗಳಲ್ಲಿ ಹೆಚ್ಚಾಗಿ ಯಾರೂ ರಜೆ ತೆಗೆದುಕೊಳ್ಳುವುದಿಲ್ಲ. ಸಾಧಾರಣವಾಗಿ ದೀರ್ಘ ರಜೆ ಹಾಕುವವರು ಸೋಮವಾರ, ಮಂಗಳವಾರ ಅಥವಾ ಗುರುವಾರ, ಶುಕ್ರವಾರ ಹಾಕುತ್ತಾರೆ. ಆಗ ಶನಿವಾರ, ಭಾನುವಾರ ಸೇರಿ 4 ದಿನ ಸಿಗುತ್ತದೆ. ಒಂದು ವೇಳೆ ಬುಧವಾರ ವರ್ಕ್‌ ಫ್ರಂ ಕೊಟ್ಟರೆ ಮನೆಯಲ್ಲೇ ಕೆಲಸ ಮಾಡಬಹುದು. ಜೊತೆ ಊರಿಗೆ ಹೋಗಿದ್ದವರು ಅಲ್ಲಿಯೇ ಕೆಲಸ ಮಾಡಬಹುದು. ಇದರಿಂದ ಸ್ವಲ್ಪ ಟ್ರಾಫಿಕ್‌ ನಿಯಂತ್ರಣಕ್ಕೆ ಬರುತ್ತದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

  • ಆಫೀಸ್‌ಗೆ ಬರದೇ ಹೋದ್ರೆ ಕೆಲ್ಸದಿಂದ ವಜಾ – ಉದ್ಯೋಗಿಗಳಿಗೆ ಖಡಕ್ ವಾರ್ನಿಗ್ ಕೊಟ್ಟ ಮೆಟಾ

    ಆಫೀಸ್‌ಗೆ ಬರದೇ ಹೋದ್ರೆ ಕೆಲ್ಸದಿಂದ ವಜಾ – ಉದ್ಯೋಗಿಗಳಿಗೆ ಖಡಕ್ ವಾರ್ನಿಗ್ ಕೊಟ್ಟ ಮೆಟಾ

    ವಾಷಿಂಗ್ಟನ್: ಫೇಸ್‌ಬುಕ್ (Facebook) ಮಾತೃಸಂಸ್ಥೆ ಮೆಟಾ (Meta) ತನ್ನ ಉದ್ಯೋಗಿಗಳಿಗೆ ಆಫೀಸ್‌ಗೆ (Office) ಮರಳುವಂತೆ ಸೂಚಿಸಿದ್ದು, ಮರಳದೇ ಇದ್ದಲ್ಲಿ ಉದ್ಯೋಗಿಗಳನ್ನು ಕೆಲಸದಿಂದಲೇ ಕಿತ್ತು ಹಾಕುವುದಾಗಿ ಮೆಟಾ ಖಡಕ್ ಎಚ್ಚರಿಕೆಯನ್ನು ನೀಡಿದೆ.

    ಕೋವಿಡ್ ಬಳಿಕ ಮೆಟಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅನ್ನು ಕೊನೆಗೊಳಿಸಿ ಆಫೀಸ್‌ಗೆ ಮರಳುವಂತೆ ತಿಳಿಸಿತ್ತು. ಆದರೆ ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸವನ್ನು ಮುಂದುವರಿಸಲು ಆದ್ಯತೆ ನೀಡಿದ್ದಾರೆ. ಇದೀಗ ರಿಟರ್ನ್ ಟು ಆಫೀಸ್ (RTO) ನೀತಿಯ ಮೇಲೆ ಮೆಟಾ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ.

    ಈ ಬಗ್ಗೆ ಮೆಟಾದ ಮಾನವ ಸಂಪನ್ಮೂಲ ಮುಖ್ಯಸ್ಥರಾದ ಲೋರಿ ಗೋಲರ್ ಕಂಪನಿಯಲ್ಲಿ ಆರ್‌ಟಿಒ ಕುರಿತಾಗಿ ಉದ್ಯೋಗಳಿಗೆ ಇ-ಮೇಲ್ ಕಳುಹಿಸಿದ್ದಾರೆ. ಹೊಸ ನೀತಿಯಂತೆ ಕಂಪನಿಯ ಉದ್ಯೋಗಿಗಳು ನಿಯೋಜಿಸಲಾದ ಕಚೇರಿಯಿಂದಲೇ ಕೆಲಸ ಮಾಡಬೇಕು ಅಥವಾ ವಾರಕ್ಕೆ ಕನಿಷ್ಠ 3 ದಿನವಾದರೂ ಕಚೇರಿಯಲ್ಲಿ ಹಾಜರಿರಬೇಕು. ಆದರೆ ಈಗಾಗಲೇ ಮನೆಯಿಂದ ಕೆಲಸ ಮಾಡಲು ಅನುಮೋದನೆ ನೀಡಲಾಗಿರುವ ಉದ್ಯೋಗಿಗಳಿಗೆ ಈ ನೀತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೇಡ್‌ ಇನ್‌ ಚೈನಾಗೆ ಭಾರತ ಶಾಕ್‌!

    ಆರ್‌ಟಿಒ ನೀತಿ ಸೆಪ್ಟೆಂಬರ್ 5 ರಿಂದ ಜಾರಿಗೆ ಬರಲಿದೆ. ಇತರ ಕಂಪನಿಗಳಂತೆ ಈ ನೀತಿಯನ್ನು ಉದ್ಯೋಗಿಗಳು ಉಲ್ಲಂಘನೆ ಮಾಡಿದ್ದಲ್ಲಿ ಅವರ ಮೇಲೆ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಕಂಪನಿಯ ಕೆಲಸವೂ ಕೂಡಾ ಭವಿಷ್ಯದಲ್ಲಿ ತಂತ್ರಜ್ಞಾನ ಬೆಳೆದಂತೆ ಸುಧಾರಿಸುತ್ತದೆ ಎಂಬ ಭರವಸೆಯಿದೆ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.

    ಈ ಹಿಂದೆ ಟ್ವಿಟ್ಟರ್ ಸೇರಿದಂತೆ ಹಲವು ಕಂಪನಿಗಳು ಕೂಡಾ ತನ್ನ ಉದ್ಯೋಗಿಗಳನ್ನು ಕಚೇರಿಗಳಿಗೆ ಮರಳುವಂತೆ ಎಚ್ಚರಿಕೆಯನ್ನು ನೀಡಿದ್ದವು. ಈಗ ಎಕ್ಸ್ ಆಗಿ ಬದಲಾಗಿರುವ ಟ್ವಿಟ್ಟರ್ ಅನ್ನು ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಂಡ ಬಳಿಕ ಉದ್ಯೋಗಿಗಳಿಗೆ ವಾರಕ್ಕೆ 40 ಗಂಟೆ ಕಚೇರಿಯಲ್ಲಿ ಹಾಜರಿರುವಂತೆ ತಿಳಿಸಲಾಗಿತ್ತು. ಒಂದು ವೇಳೆ ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಕೊನೆಗೊಳಿಸಿ ಕಚೇರಿಗೆ ಮರಳಲು ಇಷ್ಟಪಡದೇ ಹೋದರೆ ಅವರು ದಾರಾಳವಾಗಿ ರಾಜೀನಾಮೆ ಸಲ್ಲಿಸಬಹುದು ಎಂದು ಮಸ್ಕ್ ಹೇಳಿದ್ದರು. ಇದನ್ನೂ ಓದಿ: ಸಿಮ್‌ ಕಾರ್ಡ್‌ ಡೀಲರ್‌ಗಳ ಪೊಲೀಸ್‌ ಪರಿಶೀಲನೆ ಕಡ್ಡಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರ್ಕ್ ಫ್ರಂ ಹೋಮ್ ಸಾಕು, ಆಫೀಸಿಗೆ ಬನ್ನಿ ಎಂದಿದ್ದಕ್ಕೆ ಮಹಿಳಾ ಟೆಕ್ಕಿಗಳು ಸಾಮೂಹಿಕ ರಾಜೀನಾಮೆ!

    ವರ್ಕ್ ಫ್ರಂ ಹೋಮ್ ಸಾಕು, ಆಫೀಸಿಗೆ ಬನ್ನಿ ಎಂದಿದ್ದಕ್ಕೆ ಮಹಿಳಾ ಟೆಕ್ಕಿಗಳು ಸಾಮೂಹಿಕ ರಾಜೀನಾಮೆ!

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ (Corona Virus) ನಿಂದಾಗಿ ದೇಶಾದ್ಯಂತ ವರ್ಕ್ ಫ್ರಂ ಹೋಮ್ ಜಾರಿಗೆ ತರಲಾಗಿತ್ತು. ಇದೀಗ ಕಂಪನಿಯೊಂದು ವರ್ಕ್ ಫ್ರಂ ಹೋಂ ಸಾಕು, ಆಫೀಸಿಗೆ ಬಂದು ಕೆಲಸ ಮಾಡಿ ಎಂದು ಸೂಚನೆ ನೀಡಿದೆ. ಈ ಬೆನ್ನಲ್ಲೇ ಮಹಿಳಾ ಟೆಕ್ಕಿಗಳು (Women Techies) ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿರುವ ವಿಚಾರವೊಂದು ಬೆಳಕಿಗೆ ಬಂದಿದೆ.

    ಹೌದು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಂಪನಿಯು ಆಫೀಸಿಗೆ ಬಂದು ಕೆಲಸ ಮಾಡುವಂತೆ ತನ್ನ ಉದ್ಯೋಗಿಗಳಿಗೆ ಸೂಚನೆ ನೀಡಿದೆ. ಕಳೆದ ಮೂರು ವರ್ಷಗಳಿಂದ ಮನೆಯಿಂದ ಕಲಸ ಮಾಡುತ್ತಿದ್ದೀರ. ಇನ್ಮೇಲೆ ಕಡ್ಡಾಯವಾಗಿ ಆಫೀಸಿಗೆ ಬಂದು ಕೆಲಸ ಮಾಡುವಂತೆ ಕಂಪನಿ ಹೇಳಿದೆ. ಈ ಸೂಚನೆ ಹೊರ ಬೀಳುತ್ತಿದ್ದಂತೆಯೇ ಮಹಿಳಾ ಟೆಕ್ಕಿಗಳು ಇಂತಹ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿಯಾಗಿದೆ.

    ಈ ಸಂಬಂಧ ಟಿಸಿಎಸ್ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಡ್ (Milind Lakkad) ಮಾತನಾಡಿ, ಕಂಪನಿಯು ಮನೆಯಿಂದಲೇ ಕೆಲಸ ಮಾಡಿದ್ದು ಸಾಕು, ಕಚೇರಿಗೆ ಬಂದು ಕಾರ್ಯ ನಿರ್ವಹಿಸಿ ಎಂದು ಹೇಳಿದ ನಂತರ ಅನೇಕ ಮಂದಿ ಉದ್ಯೋಗಿಗಳಿಂದ ರಾಜೀನಾಮೆ ಪತ್ರಗಳು ಬಂದವು. ಅದರಲ್ಲಿ ಹೆಚ್ಚಿನದ್ದು ಮಹಿಳೆಯರ ರಾಜೀನಾಮೆ ಪತ್ರಗಳೇ ಆಗಿವೆ. ಆದರೆ ಈ ಮಹಿಳಾ ಉದ್ಯೋಗಿಗಳ ರಾಜೀನಾಮೆ (Women Employees Resign) ಯು ತಾರತಮ್ಯದಿಂದ ಪ್ರೇರಿತವಾಗಿಲ್ಲ. ಸಾಮಾನ್ಯವಾಗಿ ಟಿಸಿಎಸ್ ಕಂಪನಿಯಲ್ಲಿ ಹಿಂದೆಲ್ಲ ಪುರುಷರಿಗಿಂತ ಮಹಿಳೆಯರು ರಾಜೀನಾಮೆ ನೀಡುವ ಪ್ರಮಾಣ ಕಡಿಮೆ ಇತ್ತು. ಆದರೆ ಈ ಬಾರಿ ಮಾತ್ರ ಪುರುಷರಿಗಿಂತ ಮಹಿಳೆಯರೇ ಹೆಚ್ಚು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆಗೆ ಬೇರೆ ಬೇರೆ ಕಾರಣಗಳಿರಬಹುದಾದರೂ ಪ್ರಮುಖ ಕಾರಣ ಮಾತ್ರ ವರ್ಕ್ ಫ್ರಂ ಹೋಮ್ (Work From Home) ರದ್ದತಿ ಎಂಬುದು ಹೇಳಿದ್ದಾರೆ.

    ಟಿಸಿಎಸ್ ನಲ್ಲಿ 6,00,000 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಾರೆ. ಅದರಲ್ಲಿ 35% ಮಹಿಳಾ ಉದ್ಯೋಗಿಗಳಿದ್ದಾರೆ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಕಂಪನಿ ನಿಲ್ಲಿಸಿದ ನಂತರ ಮಹಿಳಾ ಟೆಕ್ಕಿಗಳು ಹೆಚ್ಚಾಗಿ ರಾಜೀನಾಮೆಗಳನ್ನು ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: 1 ಷೇರಿನ ಬೆಲೆ 1 ಲಕ್ಷ – ಭಾರತದಲ್ಲಿ ದಾಖಲೆ ಬರೆದ ಎಂಆರ್‌ಎಫ್‌: ಯಾವ ವರ್ಷ ಎಷ್ಟಿತ್ತು?

    ಒಟ್ಟಿನಲ್ಲಿ ಕೋವಿಡ್ ಕಾರಣಕ್ಕೆ ಉದ್ಯೋಗಿಗಳಿಗೆ ಪ್ರಪಂಚದಾದ್ಯಂತ ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡಲಾಗಿತ್ತು. ಹಲವು ಸಮೀಕ್ಷೆಗ ಪ್ರಕಾರ, ಈ ಸೌಲಭ್ಯದಿಂದಾಗಿ ಕೆಲಸದ ಔಟ್‍ಪು‌ಟ್ ಹೆಚ್ಚಾಗಿದೆ. ಕಂಪನಿಗಳಿಗೂ ಕೆಲವೊಂದಿಷ್ಟು ಆಡಳಿತಾತ್ಮಕ ವೆಚ್ಚ ತಗ್ಗಿದೆ ಎನ್ನಲಾಗಿತ್ತು. ಆದರೆ ಮನೆಯಿಂದ ಕೆಲಸ ಮಾಡಿದರೆ ತಂಡಗಳನ್ನು ನಿರ್ವಹಿಸುವುದು ಕಷ್ಟ ಎಂಬುದು ಕೆಲ ಕಂಪನಿಗಳ ಮ್ಯಾನೇಜ್ಮೆಂಟ್ ವಾದವಾಗಿತ್ತು. ಆದರೆ ಹೆಚ್ಚಿನ ಉದ್ಯೋಗಿಗಳು ಈಗಲೂ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನೇ ಇಷ್ಟಪಡುತ್ತಾ ಇದ್ದಾರಂತೆ. ಮ್ಯಾನೇಜ್ಮೆಂಟ್ ಬಲವಂತಕ್ಕೆ ಕಚೇರಿಗೆ ಬರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಕೆಲ ಸಮೀಕ್ಷೆಗಳು ಹೇಳಿವೆ.

  • ಆಫೀಸ್‌ಗೆ ಬನ್ನಿ – ಉದ್ಯೋಗಿಗಳಿಗೆ ಇನ್ಫೋಸಿಸ್‌ ಆದೇಶ

    ಆಫೀಸ್‌ಗೆ ಬನ್ನಿ – ಉದ್ಯೋಗಿಗಳಿಗೆ ಇನ್ಫೋಸಿಸ್‌ ಆದೇಶ

    ಬೆಂಗಳೂರು: ಟಿಸಿಎಸ್‌(TCS) ಬಳಿಕ ಇನ್ಫೋಸಿಸ್‌(Infosys) ಈಗ ಉದ್ಯೋಗಿಗಳಿಗೆ ಕಚೇರಿಗೆ ಬರುವಂತೆ ಆದೇಶಿಸಿದೆ.

    ಹಂತ ಹಂತವಾಗಿ ಉದ್ಯೋಗಿಗಳು ಕಚೇರಿ ಬರುವಂತೆ ಮಾನವ ಸಂಪನ್ಮೂಲ ವಿಭಾಗ ಉದ್ಯೋಗಿಗಳಿಗೆ ಇಮೇಲ್‌ ಕಳುಹಿಸಿದೆ.

    ಆರಂಭದಲ್ಲಿ ವಾರದ ಎರಡು ದಿನ ಕಚೇರಿಗೆ ಬರುವಂತೆ ಸೂಚಿಸಲಾಗಿದೆ. ಎರಡನೇ ಹಂತದಲ್ಲಿ ಉದ್ಯೋಗಿಗಳಿಗೆ ಅವರ ಆಯ್ಕೆಯ ಸ್ಥಳಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಇದನ್ನೂ ಓದಿ: ವಾರಕ್ಕೆ 80 ಗಂಟೆ ಕೆಲಸ, ಉಚಿತ ಆಹಾರ ಕಡಿತ, WFH ಕ್ಯಾನ್ಸಲ್ – ಟ್ವಿಟ್ಟರ್ ಉದ್ಯೋಗಿಗಳಿಗೆ ಮಸ್ಕ್ ಟಫ್ ರೂಲ್ಸ್


    ಕೊನೆಯ ಹಂತದಲ್ಲಿ ಮೊದಲ ಮತ್ತು ಎರಡು ಹಂತದ ಬಗ್ಗೆ ಉದ್ಯೋಗಿಗಳಿಗೆ ಪ್ರತಿಕ್ರಿಯೆ ಪಡೆದು ನಿರ್ಧಾರ ತೆಗೆದುಕೊಳ್ಳಲಿದೆ. ಇನ್ಫೋಸಿಸ್‌ ಕಂಪನಿ ವಿಶ್ವದ 54 ದೇಶಗಳ 247 ಸ್ಥಳಗಳಲ್ಲಿ ತನ್ನ ಕಚೇರಿಯನ್ನು ಹೊಂದಿದೆ.

    ಕೊರೊನಾ ಹಿನ್ನೆಲೆಯಲ್ಲಿ ಐಟಿ ಕಂಪನಿಗಳು ಮನೆಯಿಂದಲೇ ಉದ್ಯೋಗ ಮಾಡಲು ಅನುಮತಿ ನೀಡಿದ್ದವು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ವರ್ಕ್‌ ಫ್ರಂ ಹೋಂ(WFH) ಆಯ್ಕೆಯನ್ನು ಹಂತ ಹಂತವಾಗಿ ಕೊನೆಗಾಣಿಸಲು ಮುಂದಾಗಿವೆ.

    Live Tv
    [brid partner=56869869 player=32851 video=960834 autoplay=true]

  • ವಾರಕ್ಕೆ 80 ಗಂಟೆ ಕೆಲಸ, ಉಚಿತ ಆಹಾರ ಕಡಿತ, WFH ಕ್ಯಾನ್ಸಲ್ – ಟ್ವಿಟ್ಟರ್ ಉದ್ಯೋಗಿಗಳಿಗೆ ಮಸ್ಕ್ ಟಫ್ ರೂಲ್ಸ್

    ವಾರಕ್ಕೆ 80 ಗಂಟೆ ಕೆಲಸ, ಉಚಿತ ಆಹಾರ ಕಡಿತ, WFH ಕ್ಯಾನ್ಸಲ್ – ಟ್ವಿಟ್ಟರ್ ಉದ್ಯೋಗಿಗಳಿಗೆ ಮಸ್ಕ್ ಟಫ್ ರೂಲ್ಸ್

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ (Twitter) ಅನ್ನು ಖರೀದಿಸಿದ ಬಳಿಕ ಅದರ ಉದ್ಯೋಗಿಗಳ (Employees) ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಈಗಾಗಲೇ ಪ್ರಾರಂಭಿಸಿದ್ದಾರೆ. ಕಂಪನಿಯ ಹೆಚ್ಚುವರಿ ಉದ್ಯೋಗಿಗಳನ್ನು ಕಡಿತಗೊಳಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಕಂಪನಿಯನ್ನು ಇನ್ನಷ್ಟು ಲಾಭದಾಯಕಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಸ್ಕ್ ಮಾಡುತ್ತಿದ್ದಾರೆ.

    ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ 2 ವಾರಗಳೊಳಗೆ ಕಂಪನಿಯ ಅರ್ಧದಷ್ಟು ಉದ್ಯೋಗಿಗನ್ನು ವಜಾಗೊಳಿಸಿದ್ದಾರೆ (Layoff). ಅದರಲ್ಲೂ ಹೆಚ್ಚಾಗಿ ಉನ್ನತ ಕಾರ್ಯನಿರ್ವಾಹಕರನ್ನೇ ಹೊರದಬ್ಬಿದ್ದಾರೆ. ಇದರೊಂದಿಗೆ ಉದ್ಯೋಗಳು ಇನ್ನು ಮನೆಯಿಂದ ಕೆಲಸ ಮಾಡುವುದನ್ನು ಬಿಟ್ಟು, ಕಚೇರಿಗೆ ಮರಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.

    ಮಸ್ಕ್ ತನ್ನ ಉದ್ಯೋಗಿಗಳಿಗೆ ಹೊಸ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದ್ದಾರೆ. ಅದರಲ್ಲಿ ತನ್ನ ಉದ್ಯೋಗಿಗಳು ವಾರಕ್ಕೆ 80 ಗಂಟೆ ಕೆಲಸ ಮಾಡಬೇಕು. ಕಂಪನಿಯಲ್ಲಿ ಸಿಗುವ ಉಚಿತ ಆಹಾರವನ್ನು ಕಡಿತಗೊಳಿಸಲಾಗುವುದು ಮಾತ್ರವಲ್ಲದೇ ಇನ್ನು ಕೂಡಾ ವರ್ಕ್ ಫ್ರಂ ಹೋಂ (WFH) ಮಾಡುತ್ತಿರುವವರು ಕಡ್ಡಾಯವಾಗಿ ಕಚೇರಿಗೆ ಮರಳುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾಟಿಂಗ್‍ನಲ್ಲಿ ಅಟ್ಟರ್ ಫ್ಲಾಪ್‌ – ರೋಹಿತ್ ಪ್ರದರ್ಶನಕ್ಕೆ ಅಭಿಮಾನಿಗಳು ಗರಂ

    Elon Musk twitter 1

    ಇನ್ನು ಮುಂದೆ ಉದ್ಯೋಗಿಗಳು ಕಂಪನಿಗಾಗಿ ಹೆಚ್ಚು ಶ್ರಮವಹಿಸಬೇಕು. ಕೊರೊನಾ ಕಳೆದಿದ್ದು, ಇನ್ನು ಕೂಡಾ ಕಂಪನಿಗೆ ಮರಳಲು ಬಯಸದೇ ಮನೆಯಲ್ಲೇ ಕೆಲಸ ಮಾಡುತ್ತಿರುವವರು ಕಂಪನಿಯನ್ನೇ ತೊರೆದಿರುವಂತೆ ಪರಿಗಣಿಸಲಾಗುವುದು ಎಂದು ಮಸ್ಕ್ ಉದ್ಯೋಗಿಗಳಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಬೀದಿ-ಬೀದಿಗಳನ್ನು ಸ್ವಚ್ಛಗೊಳಿಸ್ತೀವಿ – ಕೇಜ್ರಿವಾಲ್ ಭರವಸೆ

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕರಿಗೆ ವರ್ಕ್ ಫ್ರಮ್ ಹೋಂ ಮುಂದುವರಿಸಿ – ಸರ್ಕಾರಕ್ಕೆ ಶಿಕ್ಷಕರ ಸಂಘ ಪತ್ರ

    ಶಿಕ್ಷಕರಿಗೆ ವರ್ಕ್ ಫ್ರಮ್ ಹೋಂ ಮುಂದುವರಿಸಿ – ಸರ್ಕಾರಕ್ಕೆ ಶಿಕ್ಷಕರ ಸಂಘ ಪತ್ರ

    ಬೆಂಗಳೂರು: ಸೋಮವಾರದಿಂದ ರಾಜ್ಯ ಸರ್ಕಾರ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುತ್ತಿದೆ. 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಯಥಾಸ್ಥಿತಿ ಮುಂದುವರಿಸುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಗೊಂದಲಕ್ಕೆ ಸಿಲುಕಿದೆ. ಹೀಗಾಗಿ ಜೂನ್ 20 ವರೆಗೂ ಶಿಕ್ಷಕರಿಗೆ ವರ್ಕ್ ಫ್ರಮ್ ಹೋಂ ವ್ಯವಸ್ಥೆ ಮುಂದುವರಿಸಿ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಶಿಕ್ಷಕರ ಸಂಘ ಪತ್ರ ಬರೆದು ಮನವಿ ಮಾಡಿದೆ.

    ರಾಜ್ಯ ಸರ್ಕಾರ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದಲ್ಲದೆ ರಾಜ್ಯಾದ್ಯಂತ ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ. ಸೇವೆಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: 25 ದಿನಗಳ ನಂತರ ಸಾರ್ವಜನಿಕ ಸಂಚಾರಕ್ಕೆ ಸಿಎಂ ನಿವಾಸದ ಬಳಿ ರಸ್ತೆ ಓಪನ್

    ಹೀಗಾಗಿ ಲಾಕ್ ಡೌನ್ ಅವಧಿಯು ಮುಗಿಯೋವರೆಗೂ ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟು ಆದೇಶ ಹೊರಡಿಸಬೇಕು ಅಂತ ಕರ್ನಾಟಕ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಮನವಿ ಮಾಡಿಕೊಂಡಿದೆ.

  • ಡಿಸೆಂಬರ್ 31ರವರೆಗೆ ವರ್ಕ್ ಫ್ರಂ ಹೋಂ ಮುಂದುವರಿಸಿ

    ಡಿಸೆಂಬರ್ 31ರವರೆಗೆ ವರ್ಕ್ ಫ್ರಂ ಹೋಂ ಮುಂದುವರಿಸಿ

    ನವದೆಹಲಿ: ಡಿಸೆಂಬರ್ 31ರವರೆಗೆ ವರ್ಕ್ ಫ್ರಂ ಹೋಂ ಮುಂದುವರಿಸುವಂತೆ ಖಾಸಗಿ ಕಂಪನಿಗಳಿಗೆ ಸರ್ಕಾರ ತಿಳಿಸಿದೆ.

    ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಳವಾಗ್ತಿದ್ದಂತೆ ಸರ್ಕಾರದ ಸಲಹೆ ಮೇರೆಗೆ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ತಿಳಿಸಿದ್ದವು. ಐಟಿ ಕಂಪನಿಗಳ ಶೇ.85 ರಷ್ಟು ಉದ್ಯೋಗಿಗಳು ಸದ್ಯ ಮನೆಯಿಂದ ಕೆಲಸ ಮಾಡುತ್ತಿದ್ದಾರೆ.

    ದೇಶವು ಅನ್‍ಲಾಕ್ ಆಗಿದ್ದರೂ ಕೊರೊನಾ ಆತಂಕ ಮಾತ್ರ ಕಡಿಮೆಯಾಗಿಲ್ಲ. ಸರ್ಕಾರ ಜನದಟ್ಟಣೆ ತಡೆಯುವ ಉದ್ದೇಶದಿಂದ ಐಟಿ, ಬಿಪಿಓ ಸೇರಿದಂತೆ ಖಾಸಗಿ ಕಂಪನಿಗಳು ಸಾಧ್ಯವಾದಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿ ಎಂದು ಹೇಳಿದೆ. ಮೊದಲಿಗೆ ಜುಲೈ 31ರವರೆಗೆ ಮಾತ್ರ ವರ್ಕ್ ಫ್ರಂ ಹೋಂಗೆ ಸರ್ಕಾರ ಸೂಚಿಸಿತ್ತು. ಇದೀಗ ಡಿಸೆಂಬರ್ 31ರವರೆಗೆ ಮನೆಯಿಂದ ಕೆಲಸ ಮಾಡಲು ಸರ್ಕಾರ ಹೇಳಿದೆ.

  • ಶೆಟ್ರು ಮನೇಲಿ ‘ವರ್ಕ್ ಫ್ರಂ ಹೋಂ’ ಬಲು ಜೋರು – ಎಲ್ಲಾ ಕೊರೊನಾ ಮಹಿಮೆ

    ಶೆಟ್ರು ಮನೇಲಿ ‘ವರ್ಕ್ ಫ್ರಂ ಹೋಂ’ ಬಲು ಜೋರು – ಎಲ್ಲಾ ಕೊರೊನಾ ಮಹಿಮೆ

    ಬೆಂಗಳೂರು: ಕೊರೊನಾ ವೈರಸ್ ಪರಿಣಾಮ ಬಹುತೇಕ ಮಂದಿ ‘ವರ್ಕ್ ಫ್ರಂ ಹೋಂ’ ಮೊರೆ ಹೋಗಿದ್ದಾರೆ. ಹೀಗಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನೆಯಲ್ಲೂ ಕೂಡ ‘ವರ್ಕ್ ಫ್ರಂ ಹೋಂ’ ಬಲು ಜೋರಾಗಿದ್ದು, ಮಗನೊಂದಿಗೆ ಸಮಯ ಕಳೆಯೋದ್ರಲ್ಲಿ ಶೆಟ್ರು ಫುಲ್ ಬ್ಯುಸಿಯಾಗಿದ್ದಾರೆ.

    ಹೌದು. ಹೆಚ್ಚಾಗಿ ಸಿನಿಮಾ ಕೆಲಸದಲ್ಲಿ ಬ್ಯುಸಿ ಇರುತ್ತಿದ್ದ ರಿಷಬ್ ಅವರಿಗೆ ಸದ್ಯ ಕೊರೊನಾ ಎಫೆಕ್ಟ್ ನಿಂದ ಕೊಂಚ ಬ್ರೇಕ್ ಸಿಕ್ಕಿದೆ. ಆದ್ದರಿಂದ ತಮ್ಮ ಹುಟ್ಟೂರಿನಲ್ಲಿ ಕುಟುಂಬದ ಜೊತೆ ರಿಷಬ್ ಖುಷಿಯಿಂದ ಸಮಯ ಕಳೆಯುತ್ತಿದ್ದು, ತಮ್ಮ ಮಗ ರಣ್ವಿತ್‍ಗೆ ಸ್ನಾನ ಮಾಡಿಸುವ ಮುನ್ನ ಎಣ್ಣೆ ಹಚ್ಚುತ್ತಿರುವ ಕ್ಯೂಟ್ ಫೋಟೋವೊಂದನ್ನು ರಿಷಬ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    https://twitter.com/shetty_rishab/status/1240672139495108613

    ‘ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ. ಒಟ್ಟಾರೆ ಎಲ್ಲರ ತರ ನಮ್ದೂ `ವರ್ಕ್ ಫ್ರಂ ಹೋಂ’ ಜೋರಾಗ್ ನಡೀತಿದೆ’ ಎಂದು ಬರೆದು ಮಗನಿಗೆ ಎಣ್ಣೆ ಹಚ್ಚುತ್ತಿರುವ ಫೋಟೋವನ್ನು ರಿಷಬ್ ಟ್ವೀಟ್ ಮಾಡಿದ್ದಾರೆ.

    https://twitter.com/rakshitshetty/status/1240653722989899776

    ಈ ಟ್ವೀಟ್ ನೋಡಿದ ನೆಟ್ಟಿಗರು ಅಪ್ಪ, ಮಗನ ಕ್ಯೂಟ್ ಫೋಟೋಗೆ ಫಿದಾ ಆಗಿದ್ದಾರೆ. ಕೆಲವರು ತಮಾಷೆಯಾಗಿ ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಕಮೆಂಟ್‍ನಲ್ಲೇ ಅಪ್ಪ, ಮಗನ ಕ್ಯೂಟ್ ಫೋಟೋ ಬಗ್ಗೆ ಕವನ ಬರೆದಿದ್ದಾರೆ. ಇತ್ತ ಗೆಳೆಯನ ಟ್ವೀಟ್ ನೋಡಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಒಂದು ಕವನ ಬರೆದು ಟ್ವೀಟ್ ಮಾಡಿದ್ದಾರೆ.

    ‘ರಿಷಬ್ ಇದು ನಿನಗಾಗಿ, ನನ್ನ ಮುಗ್ಧತೆಯ ಅರಿವು ನನಗಿಲ್ಲ. ನನ್ನ ಹೆತ್ತವನೊಮ್ಮೆ ನೋಡು, ಅವನ ಮುಗ್ಧತೆಯಲ್ಲವೆ ನನಗೆಲ್ಲ’ ಎಂದು ಕವನ ಹೆಣೆದು ರಿಷಬ್ ಹಾಗೂ ರಣ್ವಿತ್‍ನ ಮುದ್ದಾದ ಫೋಟೋವನ್ನು ರಕ್ಷಿತ್ ವರ್ಣಿಸಿದ್ದಾರೆ.

    ರಿಷಬ್, ರಣ್ವಿತ್ ಫೋಟೋಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಮಗನಿಗೆ ಸ್ನಾನ ಮಾಡಿಸೋದ್ರಲ್ಲಿ ತಂದೆಗೆ ಸಿಗೋ ಖುಷಿನೇ ಬೇರೆ, ಮಗ ದೊಡ್ಡವನಾದ ಮೇಲೆ ನಿಮ್ಮ ಮೇಲೆ ಮಾನನಷ್ಟ ಕೇಸ್ ಹಾಕದಿದ್ದರೆ ಸಾಕು ಎಂದು ನೆಟ್ಟಿಗರೊಬ್ಬರು ರಿಷಬ್ ಕಾಲೆಳೆದಿದ್ದಾರೆ. ಇನ್ನೊಬ್ಬರು ಕಮೆಂಟ್‍ನಲ್ಲಿ, ಕೊರೊನಾ ತಂದ ಸೌಭಾಗ್ಯ ಈಗ. ರಿಷಬ್ ಅಣ್ಣನ ಪುತ್ರಮಜ್ಜನ ಯಾಗ. ವಕ್ ಫ್ರಂ ಹೋಮ್ ಲೋಕ ಕಲ್ಯಾಣಕ್ಕೆ. ಗೋ ಬ್ಯಾಕ್ ಟು ಹೋಮ್ ನೆಮ್ಮದಿಯ ತಾಣಕ್ಕೆ ಎಂದು ಕವನ ಬರೆದಿದ್ದಾರೆ. ಮತ್ತೊಬ್ಬರು ಕಮೆಂಟ್‍ನಲ್ಲಿ ಶೆಟ್ರೆ ನೀವು ನಿಜವಾದ ಸುಖ ಅನುಭವಿಸುತ್ತಿದ್ದೀರಿ, ಈ ಅವಕಾಶ ಕಲ್ಪಿಸಿಕೊಟ್ಟ ಕೊರೊನಾಗೆ ಥ್ಯಾಂಕ್ಸ್ ಹೇಳಿ ಎಂದಿದ್ದಾರೆ.

    ಒಟ್ಟಾರೆ ಕೊರೊನಾ ಭೀತಿಗೆ ಬ್ಯುಸಿ ಶೂಟಿಂಗ್ ಕೆಲಸದಿಂದ ರೆಸ್ಟ್ ಪಡೆದಿರುವ ರಿಷಬ್ ಮಾತ್ರ ಮನೆಯಲ್ಲಿ ಕುಟುಂಬದ ಜೊತೆ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಅಪ್ಪ, ಮಗನ ಈ ಕ್ಯೂಟ್ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.