Tag: ವರ್ಕೌಟ್

  • ಪತ್ನಿ ಜೊತೆ ‘ಅಭಿಮನ್ಯು’ ನಿಖಿಲ್ ವರ್ಕೌಟ್ – ವಿಡಿಯೋ ವೈರಲ್

    ಪತ್ನಿ ಜೊತೆ ‘ಅಭಿಮನ್ಯು’ ನಿಖಿಲ್ ವರ್ಕೌಟ್ – ವಿಡಿಯೋ ವೈರಲ್

    ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ. ಆಗಾಗ ಪತ್ನಿ ಜೊತೆಗಿನ ಫೋಟೋ ಮತ್ತು ತಾವು ಮಾಡುತ್ತಿರುವ ಕೆಲಸಗಳ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಟ ನಿಖಿಲ್ ತಮ್ಮ ಪತ್ನಿ ರೇವತಿ ಜೊತೆ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ನಟಿ ನಿಖಿಲ್ ಲಾಕ್‍ಡೌನ್ ಸಂದರ್ಭದಲ್ಲಿ ಪತ್ನಿ ಮತ್ತು ಕುಟುಂಬದವರ ಜೊತೆ ಕಾಲಕಳೆಯುತ್ತಿದ್ದಾರೆ. ಜೊತೆಗೆ ಮನೆಯಲ್ಲಿದ್ದರೂ ಜಿಮ್ ಮಾಡುತ್ತಿದ್ದು, ಆಗಾಗ ತಾವು ವರ್ಕೌಟ್ ಮಾಡುತ್ತಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮೊದಲ ಬಾರಿಗೆ ಪತ್ನಿ ಜೊತೆಗೆ ವರ್ಕೌಟ್ ಮಾಡುತ್ತಿರುವ ಶೇರ್ ಮಾಡಿಕೊಂಡಿದ್ದಾರೆ.

    ವಿಡಿಯೋದಲ್ಲಿ ಪತ್ನಿ ರೇವತಿ ಜೊತೆ ವರ್ಕೌಟ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ರೇವತಿ ಅವರು ಸರಿಯಾಗಿ ಕಾಣುತ್ತಿಲ್ಲ. ಅವರ ಪಕ್ಕದಲ್ಲಿಯೇ ನಿಖಿತ್ ವರ್ಕೌಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ನಿಖಿಲ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    “ನಮಗೆ ಯಾವಾಗಲೂ ತರಬೇತಿ ನೀಡಲು ಜಿಮ್ ಅಗತ್ಯವಿಲ್ಲ. ಆದರೂ ನಮ್ಮ ಮನಸ್ಸಿಗೆ ಸ್ವಲ್ಪ ಪ್ರೇರಣೆ ಬೇಕು. ಹೀಗಾಗಿ ಪ್ರಕೃತಿಯ ಮಧ್ಯದಲ್ಲಿ ನನ್ನ ಸಂಗಾತಿಯೊಂದಿಗೆ ವರ್ಕೌಟ್ ಮಾಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

    https://www.instagram.com/p/CCQ7L-GpwbZ/?utm_source=ig_embed

    ಇತ್ತೀಚೆಗಷ್ಟೆ ನಿಖಿಲ್ ಕುಮಾರಸ್ವಾಮಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಅನ್ನದಾತರ ಬಗ್ಗೆ ಬರೆದುಕೊಂಡಿದ್ದರು. “ನಮ್ಮ ದೇಶ ಕೃಷಿ ಪ್ರಧಾನವಾದ ದೇಶವಾಗಿದ್ದು ರೈತ ಈ ದೇಶದ ಬೆನ್ನೆಲುಬು ಎಂದು ಗೌರವ ಸಲ್ಲಿಸುತ್ತೇವೆ. ಆದರೆ ರೈತರ ಮಕ್ಕಳು ರೈತರಾಗಿ ಅವರ ಕೃಷಿಭೂಮಿಯಲ್ಲಿ ದುಡಿಯಲು ಹಿಂಜರಿದು ನಗರದ ಕಡೆಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳಲು ಹವಣಿಸುವವರ ಸಂಖ್ಯೆಯೇ ಹೆಚ್ಚು. ತಾವು ಕಲಿತ ವಿದ್ಯಾಭ್ಯಾಸದ ಆಧಾರದ ಮೇಲೆ ನಗರಗಳಲ್ಲಿ ಕೆಲಸವೊಂದನ್ನು ಸಂಪಾದಿಸಿ ಜೀವನ ನಡೆಸುವವರು ಒಂದು ಕಡೆಯಾದರೆ, ಕೆಲವರು ಸ್ವಂತ ಉದ್ಯೋಗ ಅಥವಾ ಕೂಲಿ ಕೆಲಸವನ್ನಾದರೂ ನಗರದಲ್ಲಿ ಮಾಡಿಕೊಂಡು ಜೀವನ ನಡೆಸಲು ನಗರಗಳ ಕಡೆಗೆ ಮುಖಮಾಡುವವರು ಇನ್ನೊಂದು ಕಡೆ. ಇದರ ಪರಿಣಾಮವಾಗಿ ಹಳ್ಳಿಗಳಲ್ಲಿರುವ ಕೃಷಿಭೂಮಿಗಳು ಪಾಲು ಬೀಳುತ್ತಿವೆ. ನಗರದಲ್ಲಿ ವೃತ್ತಿ ಸ್ಪರ್ಧೆ ತಾರಕಕ್ಕೇರಿದೆ” ಎಂದು ಹೇಳಿದ್ದರು.

  • ಹಾರ್ದಿಕ್ ಪಾಂಡ್ಯ ವರ್ಕೌಟ್ ವಿಡಿಯೋಗೆ ಬಾಲಿವುಡ್ ನಟಿಯರು ಫಿದಾ!

    ಹಾರ್ದಿಕ್ ಪಾಂಡ್ಯ ವರ್ಕೌಟ್ ವಿಡಿಯೋಗೆ ಬಾಲಿವುಡ್ ನಟಿಯರು ಫಿದಾ!

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಆಟಗಾರರಲ್ಲಿ ನಾಯಕ ವಿರಾಟ್ ಕೊಹ್ಲಿ ಸ್ಫೂರ್ತಿ ತುಂಬಿ, ಫಿಟ್ನೆಸ್ ಕಾಯ್ದುಕೊಳ್ಳುವಂತೆ ಮಾಡಿದ್ದರು. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮನೀಶ್ ಪಾಂಡೆ, ಶಮಿ ಸೇರಿದಂತೆ ಹಲವು ಆಟಗಾರರು ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಸದ್ಯ ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿದಿರುವ ಆಟಗಾರರು ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಮನೆಯಲ್ಲೇ ವರ್ಕೌಟ್ ಮಾಡಿ ಆ ವಿಡಿಯೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

    ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಫಿಟ್ನೆಸ್ ಕುರಿತು ಹೆಚ್ಚಿನ ಶ್ರದ್ಧೆ ನೀಡುತ್ತಾರೆ. ಹಲವು ಬಾರಿ ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರ ಕೂಡ ಕೂಡ ಪಾಂಡ್ಯ ತಮ್ಮ ಇನ್‍ಸ್ಟಾದಲ್ಲಿ ವರ್ಕೌಟ್ ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಪಾಂಡ್ಯ ದೇಹವನ್ನು ದಂಡಿಸುತ್ತಿರುವುದನ್ನು ಕಾಣಬಹುದಾಗಿದೆ. ಪುಶ್ ಅಪ್ ಮಾಡುವುದಲ್ಲದೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಿಗಿಯುತ್ತಾ ಸಾಗುವುದು ಅವರ ಫಿಟ್ನೆಸ್ ಬಲವನ್ನು ಸಾಬೀತು ಪಡಿಸಿತ್ತು.

    ವಿಡಿಯೋ ಪೋಸ್ಟ್ ಮಾಡಿದ್ದ ಹಾರ್ದಿಕ್ ಪಾಂಡ್ಯ ತಮ್ಮ ಸಹೋದರ ಕೃನಾಲ್ ಪಾಂಡ್ಯಗೂ ಸವಾಲು ಎಸೆದಿದ್ದರು. ‘ಸ್ಟ್ರಾಂಗರ್, ಫಿಟ್ಟರ್. ಇನ್ನು ನಿರ್ಮಾಣದ ಹಂತದಲ್ಲಿದೆ ಬಾಯ್, ಇದಕ್ಕಿಂತ ಉತ್ತಮವಾಗಿ ವರ್ಕೌಟ್ ಮಾಡಬೇಕು’ ಎಂದು ಸವಾಲು ಮಾಡುತ್ತಿರುವುದಾಗಿ ಹಾರ್ದಿಕ್ ಪಾಂಡ್ಯ ಸಹೋದರನಿಗೆ ಹೇಳಿದ್ದರು.

    ಹಾರ್ದಿಕ್ ಪಾಂಡ್ಯ ವರ್ಕೌಟ್ ವಿಡಿಯೋ ನೋಡಿದ ಬಾಲಿವುಡ್ ನಟಿಯರಾದ ಸೈಯಾಮಿ ಖೇರ್, ಕರಿಷ್ಮಾ ತನ್ನಾ ಫಿದಾ ಆಗಿದ್ದು, ಇದು ಭಯಾನಕ ಹುಚ್ಚು, ಹೇಗೆ ಮಾಡಿದೆ? ಎಂದು ಕಾಮೆಂಟ್ ಮಾಡಿದ್ದಾರೆ. ಇತ್ತ ಹಾರ್ದಿಕ್ ಪಾಂಡ್ಯ ಪತ್ನಿ ಎಮೋಜಿ ಪೋಸ್ಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

     

    View this post on Instagram

     

    My strong gym buddies ????????

    A post shared by Hardik Pandya (@hardikpandya93) on

    ಕಳೆದ ವರ್ಷ ಬೆನ್ನು ನೋವಿನ ಸಮಸ್ಯೆಯಿಂದ ಹಾರ್ದಿಕ್ ಪಾಂಡ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಚೇತರಿಕೊಂಡು ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಟೂರ್ನಿಗೆ ಆಯ್ಕೆಯಾಗಿದ್ದರು. ಆದರೆ ಕೊರೊನಾ ಕಾರಣದಿಂದ ಟೂರ್ನಿ ರದ್ದಾಗಿತ್ತು. ಟೀಂ ಇಂಡಿಯಾ ಆಟಗಾರರು ಫಿಟ್ನೆಸ್ ಮೇಲೆ ಹೆಚ್ಚು ಗಮನಹರಿಸಿ ಆಟಗಾರರಲ್ಲಿ ಬದಲಾವಣೆಗೆ ಕಾರಣವಾಗಿದ್ದ ಹೆಗ್ಗಳಿಕೆ ಫಿಟ್ನೆಸ್ ತರಬೇತುದಾರ ಶಂಕರ್ ಬಸು ಅವರಿಗೆ ಲಭಿಸುತ್ತದೆ. ಕೊಹ್ಲಿ, ಬುಮ್ರಾ, ಪಾಂಡ್ಯ, ಜಡೇಜಾ ಸೇರಿದಂತೆ ಹಲವು ಆಟಗಾರರನ್ನು ಫಿಟ್ನೆಸ್ ಲೆವೆಲ್‍ನಲ್ಲಿ ಟಾಪ್ ಸ್ಥಾನನಲ್ಲಿ ನಿಲ್ಲುವಂತೆ ಮಾಡಿದ್ದರು. ಕಳೆದ ವರ್ಷ ಏಕದಿನ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಸೆಮಿಸ್‍ನಲ್ಲಿಯೇ ಹೋರಾಟ ಅಂತ್ಯಗೊಳಿಸಿ ವಾಪಾಸ್ ಆದ ಬಳಿಕ ಶಂಕರ್ ತಂಡದ ಫಿಟ್ನೆಸ್ ತರಬೇತಿ ಸ್ಥಾನದಿಂದ ಕೆಳಗಿಳಿದಿದ್ದರು. ಬಿಸಿಸಿಐನೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಅಂತ್ಯವಾದ ಕಾರಣದಿಂದ ಶಂಕರ್ ಮತ್ತೆ ಆ ಸ್ಥಾನ ಪಡೆಯದೆ ಮರಳಿದ್ದರು.

     

    View this post on Instagram

     

    Great guy and a knockout punch

    A post shared by Basu Shanker (@basushanker) on

  • 77ರ ವಯಸ್ಸಲ್ಲೂ ಮೊಮ್ಮಗನ ಜೊತೆ ಬಿಗ್ ಬಿ ವರ್ಕೌಟ್

    77ರ ವಯಸ್ಸಲ್ಲೂ ಮೊಮ್ಮಗನ ಜೊತೆ ಬಿಗ್ ಬಿ ವರ್ಕೌಟ್

    ಮುಂಬೈ: ಬಿಗ್ ಬಿ ಅಮಿತಾಬ್ ಬಚ್ಚನ್ ಅಂದ್ರೆನೇ ಬಾಲಿವುಡ್ ಅಲ್ಲಿ ಒಂದು ಹವಾ ಇದೆ. ಬಿಟೌನ್ ಲೆಜೆಂಡರಿ ಆ್ಯಕ್ಟರ್ ಅಮಿತಾಬ್ ಸದ್ಯ ಲಾಕ್‍ಡೌನ್ ಸಮಯದಲ್ಲಿ ಮೊಮ್ಮಗನ ಜೊತೆ ವರ್ಕೌಟ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.

    ಲಾಕ್‍ಡೌನ್‍ನಲ್ಲಿ ಮನೆಯಲ್ಲೇ ಇರುವ ಬಿಗ್ ಬಿ ಮೊಮ್ಮಗ ಅಗಸ್ತ್ಯ ನಂದಾ ಜೊತೆ ಜಿಮ್‍ನಲ್ಲಿ ವರ್ಕೌಟ್ ಮಾಡಿದ್ದಾರೆ. ಅಜ್ಜ, ಮೊಮ್ಮಗ ಇಬ್ಬರೂ ಡಂಬಲ್‍ಗಳನ್ನು ಹಿಡಿದು, ಫುಲ್ ಜೋಷ್‍ನಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿ ಅಮಿತಾಬ್ ಖುಷಿಪಟ್ಟಿದ್ದಾರೆ. 77ರ ವಯಸ್ಸಿನಲ್ಲೂ ಇಷ್ಟು ಜೋಷ್‍ನಲ್ಲಿ ಇರುವ ಬಿಗ್ ಬಿ ಅವರನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

    https://www.instagram.com/p/CAcCOFyBHTg/

    ಅಮಿತಾಬ್ ಬಚ್ಚನ್ ಅವರಿಗೆ ವಯಸ್ಸಾಗಿರಬಹುದು, ಆದ್ರೆ ಅವರ ಕಲೆಗೆ, ಪ್ರತಿಭೆಗೆ ವಯಸ್ಸಾಗಿಲ್ಲ. ಈಗಲೂ ಯುವ ನಟರಂತೆ ಹುಮ್ಮಸ್ಸಿನಿಂದ ಜೋಷ್‍ನಲ್ಲಿ ಸಿನಿಮಾಗಳನ್ನು ಬಿಗ್ ಬಿ ಮಾಡುತ್ತಾರೆ. ಕಳೆದ ವರ್ಷ ‘ಬದ್ಲಾ’ ಹಾಗೂ ‘ಸೈರಾ ನರಸಿಂಹರೆಡ್ಡಿ’ ಸಿನಿಮಾಗಳಲ್ಲಿ ನಟಿಸಿದ್ದ ಬಿಗ್ ಬಿ ಈ ವರ್ಷವೂ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈವರೆಗೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ 5 ರಾಷ್ಟ್ರಪ್ರಶಸ್ತಿಗಳು, 10 ಫಿಲ್ಮ್ ಫೇರ್ ಸೇರಿದಂತೆ ಹತ್ತು ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಕಲಾಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

    ಸದ್ಯ ಅಮಿತಾಬ್ ಹಾಗೂ ಆಯುಷ್ಮಾನ್ ಖುರಾನಾ ಲೀಡ್ ರೋಲ್‍ನಲ್ಲಿ ಕಾಣಿಸಿಕೊಂಡಿರುವ ‘ಗುಲಾಬೊ ಸಿತಾಬೊ’ ಸಿನಿಮಾ ಕೆಲವೇ ದಿನಗಳಲ್ಲಿ ಓಟಿಟಿ ಪ್ಲ್ಯಾಟ್‍ಫಾರ್ಮ್ ಅಮೆಜಾನ್ ಪ್ರೈಮ್‍ನಲ್ಲಿ ರಿಲೀಸ್ ಆಗಲಿದೆ. ಇದು ಥಿಯೇಟರ್‍ನಲ್ಲಿ ರಿಲೀಸ್ ಆಗದೇ ನೇರವಾಗಿ ಡಿಜಿಟಲ್ ಪ್ಲ್ಯಾಟ್‍ಫಾರ್ಮ್‍ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಬಾಲಿವುಡ್ ಕಮರ್ಷಿಯಲ್ ಸಿನಿಮಾ ಎಂಬ ಹೆಗ್ಗಳಿಕೆ ಪಡೆಯಲಿದೆ.

    ಇತ್ತ ಝುಂಡ್, ಚೆಹ್ರೇ, ಬ್ರಹ್ಮಾಸ್ತ್ರ ಸಿನಿಮಾಗಳು ಕೂಡ ರಿಲೀಸ್ ತೆರೆಕಾಣಲು ಸಜ್ಜಾಗಿದ್ದು, ‘ಕೌನ್ ಬನೇಗಾ ಕರೋಡ್‍ಪತಿ’ ರಿಯಾಲಿಟಿ ಶೋನಲ್ಲಿ ಬಿಗ್ ಬಿ ಕಮಾಲ್ ಮಾಡಲು ತಯಾರಿ ನಡೆಸಿದ್ದಾರೆ. ಹೀಗೆ ಈ ಇಳಿ ವಯಸ್ಸಿನಲ್ಲೂ ಬಾಲಿವುಡ್‍ನ ಬ್ಯುಸಿಯೆಸ್ಟ್ ಸೂಪರ್ ಸ್ಟಾರ್ ಆಗಿ ಕಲಾ ಸೇವೆ ಮುಂದುವರೆಸಿದ್ದಾರೆ.

  • ಸಲ್ಮಾನ್ ವರ್ಕೌಟ್‍ಗೆ ಅಭಿಮಾನಿಯ ಪ್ರಶ್ನೆ

    ಸಲ್ಮಾನ್ ವರ್ಕೌಟ್‍ಗೆ ಅಭಿಮಾನಿಯ ಪ್ರಶ್ನೆ

    ನವದೆಹಲಿ: ಲಾಕ್‍ಡೌನ್ ಹಿನ್ನೆಲೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ತಮ್ಮ ಪನ್ವೇಲ್ ಫಾರ್ಮ್‍ಹೌಸ್‍ನಲ್ಲೇ ಲಾಕ್ ಆಗಿದ್ದು, ಎಲ್ಲಿಯೂ ಹೋಗದಂತಾಗಿದೆ. ಆದರೂ ಹತಾಶೆಗೊಳಗಾಗದೇ ಸಲ್ಮಾನ್ ಫಾರ್ಮ್ ಹೌಸ್‍ನಲ್ಲಿ ಭರ್ಜರಿ ತಯಾರಿ ನಡೆಸಿದ್ದು, ಮುಂದಿನ ಸಿನಿಮಾಗೆ ಈಗಿನಿಂದಲೇ ತಯಾರಿ ನಡಸಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ.

    ದಬಾಂಗ್ ಭಾಯ್ ಫಾರ್ಮ್ ಹೌಸ್‍ನಲ್ಲೇ ವೆಲ್ ಫರ್ನಿಶ್ಡ್ ಜಿಮ್ ಹೊಂದಿದ್ದು, ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಈ ಚಿತ್ರಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಫುಲ್ ಮಜಲ್ ತೋರಿಸಿದ್ದಾರೆ. ಅಲ್ಲದೆ ಗಡ್ಡವನ್ನು ಸಹ ಬೆಳೆಸಿದ್ದಾರೆ. ಸಲ್ಮಾನ್ ಖಾನ್ ಅವರ ಈ ಲುಕ್ ನೋಡಿದ ಅಭಿಮಾನಿಗಳು, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದು, ಎಕ್ ಥಾ ಟೈಗರ್ ಬಳಿಕ ಇದರ ಸೀಕ್ವೆಲ್‍ಗೆ ಈಗಿನಿಂದಲೇ ತಯಾರಿ ನಡೆಸಿದ್ದೀರಾ, ಇದಕ್ಕಾಗಿಯೇ ವರ್ಕೌಟ್ ಮಾಡಿ ಮಸಲ್ ಮ್ಯಾನ್ ಆಗುತ್ತಿದ್ದಾರಾ ಏನು ಕಥೆ ಎಂದು ಪ್ರಶ್ನಿಸುತ್ತಿದ್ದಾರೆ.

     

    View this post on Instagram

     

    Jacky got caught taking a pic chori chori Chupke chupke… she took one more after that which she will post on her own! @jacquelinef143

    A post shared by Salman Khan (@beingsalmankhan) on

    ಸದ್ಯ ಸಲ್ಲು ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ಶೂಟಿಂಗ್ ಪೂರ್ಣಗೊಂಡ ಬಳಿಕ ಟೈಗರ್ ಸೀಕ್ವೆಲ್‍ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ಸಹ ಈ ಚಿತ್ರಗಳನ್ನು ಹಂಚಿಕೊಂಡಿದ್ದು, ಮನೆಯಲ್ಲಿ ಕೆಲಸ ಮಾಡಲು ಇದು ನಿಮ್ಮನ್ನು ಖಂಡಿತವಾಗಿಯೂ ಪ್ರೇರೇಪಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

    ಸಲ್ಮಾನ್ ಖಾನ್ ರಾಧೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವಾಗಲೇ ಲಾಕ್‍ಡೌನ್ ಘೋಷಣೆಯಾಗಿದ್ದು, ಕ್ಲೈಮ್ಯಾಕ್ಸ್ ಸೀನ್ ಗಾಗಿ ಸಲ್ಮಾನ್ ಸಿದ್ಧತೆ ನಡೆಸಿದ್ದಾರೆ. ಈ ಸಿನಿಮಾಗೆ ಡ್ಯಾನ್ಸರ್ ಹಾಗೂ ನಿರ್ದೇಶಕ ಪ್ರಭುದೇವ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಲ್ಮಾನ್ ಖಾನ್ ತಮ್ಮ ತೂಕವನ್ನು ಹತೋಟಿಯಲ್ಲಿಟ್ಟಯಕೊಳ್ಳಲು ದೇಹ ದಂಡನೆ ಮಾಡುತ್ತಿದ್ದಾರೆ. ಲಾಕ್‍ಡೌನ್ ಮುಗಿಯುತ್ತಿದ್ದಂತೆ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ. ಕಾರ್ ಚೇಸ್ ಮಾಡುವ ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಇದನ್ನು ಪೂರ್ಣಗೊಳಿಸಲಿದ್ದಾರೆ ಎನ್ನಲಾಗಿದೆ.

  • ವರ್ಕೌಟ್‍ನಲ್ಲಿ ತೊಡಗಿದ್ದಾರೆ ಕೆಜಿಎಫ್-2 ಅಧೀರ

    ವರ್ಕೌಟ್‍ನಲ್ಲಿ ತೊಡಗಿದ್ದಾರೆ ಕೆಜಿಎಫ್-2 ಅಧೀರ

    ಮುಂಬೈ: ಸ್ಯಾಂಡಲ್‍ವುಡ್ ಮಾತ್ರವಲ್ಲ ಭಾರತೀಯ ಚಿತ್ರರಂಗಲ್ಲೇ ಭಾರೀ ಕುತೂಹಲ ಮೂಡಿಸಿರುವ ಕೆಜಿಎಫ್-2 ಸಿನಿಮಾ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಕೊನೆಯ ಹಂತದ ಚಿತ್ರೀಕರಣ ಮಾತ್ರ ಬಾಕಿ ಇದೆ ಎನ್ನಲಾಗಿದೆ. ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಈಗಾಗಲೇ ಘೋಷಿಸಿರುವುದು ತಿಳಿದೇ ಇದೆ. ಆದರೆ ನಟ ನಟಿಯರು ತಮ್ಮದೇಯಾದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

    ಚಿತ್ರದಲ್ಲಿ ಬಹುತಾರಾಗಣವಿದ್ದು, ಬಾಲಿವುಡ್‍ನ ಸಂಜಯ್ ದತ್, ರವೀನಾ ಟಂಡನ್ ಸಹ ನಟಿಸಿದ್ದಾರೆ ಎಂಬುದು ತಿಳಿದಿರುವ ವಿಚಾರ. ಎಲ್ಲರೂ ಅವರವರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ನಾಯಕ ನಟ ಯಶ್ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದು, ಇತ್ತ ನಿರ್ದೇಶಕ ಪ್ರಶಾಂತ್ ನೀಲ್ ಸಹ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಆದರೆ ಚಿತ್ರದಲ್ಲಿ ಅಧೀರನ ಪಾತ್ರ ನಿರ್ವಹಿಸುತ್ತಿರುವ ಸಂಜಯ್ ದತ್ ಮಾತ್ರ ವರ್ಕೌಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. 60ರ ಇಳಿ ವಯಸ್ಸಿನಲ್ಲಿಯೂ ಆಕ್ಟಿವ್ ಆಗಿರುವ ಅವರು ವರ್ಕೌಟ್ ಮಾಡುತ್ತಲೇ ಇರುತ್ತಾರೆ. ಚಿತ್ರಕ್ಕಾಗಿ ಇನ್ನೂ ಹೆಚ್ಚಿನ ವರ್ಕೌಟ್ ಮಾಡುತ್ತಾರೆ.

    ಕೆಜಿಎಫ್-2 ಚಿತ್ರದಲ್ಲಿ ಸಂಜಯ್ ದತ್ ಅವರದ್ದು ಕೊನೆಯ ಹಂತದ ಚಿತ್ರೀಕರಣವಿದ್ದು, ಇದಕ್ಕಾಗಿ ಸಂಜಯ್ ದತ್ ಅವರು ಲಾಕ್‍ಡೌನ್ ಸಮಯದಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಈ ಮೂಲಕ ಲಾಕ್‍ಡೌನ್ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಕೊರೊನಾ ವೈರಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಸಂಜಯ್ ಹಾಕಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

    ಕೆಜಿಎಫ್ ಚಾಪ್ಟರ್-1 ನಂತರ ಚಾಪ್ಟರ್-2 ತೀವ್ರ ಕುತೂಹಲ ಕೆರಳಿಸಿದ್ದು, ಚಿತ್ರ ತಂಡ ಸಹ ಅಷ್ಟೇ ಆಸಕ್ತಿ ವಹಿಸಿ ಚಿತ್ರೀಕರಣ ಮಾಡಿದೆ. ಭಾರೀ ನಿರೀಕ್ಷೆಯಲ್ಲಿರುವ ಪ್ರೇಕ್ಷಕರಿಗೆ ಅವರ ನಿರೀಕ್ಷೆಗೂ ಮೀರಿ ಚಿತ್ರವನ್ನು ನೀಡಲು ತಂಡ ಮುಂದಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ಫೈನಲ್ ಹಂತ ತಲುಪಿದೆ. ಕೊನೆಯ ಭಾಗದಲ್ಲಿ ಯಶ್ ಹಾಗೂ ಸಂಜಯ್ ದತ್ ಅವರ ಕಾಳಗದ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

    ಚಿತ್ರ ಅಕ್ಟೋಬರ್ 23ರಂದು ತೆರೆಗೆ ಬರಲಿದೆ ಎಂದು ಈಗಾಗಲೇ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಬಹಿರಂಗಪಡಿಸಿದೆ. ದಿನಾಂಕ ತಿಳಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದು, ಚಿತ್ರ ವೀಕ್ಷಣೆಗೆ ಬೆರಗುಗಣ್ಣಿನಿಂದ ಕಾಯುತ್ತಿದ್ದಾರೆ.

  • ಜಿಮ್‍ನಲ್ಲಿ ಕಠಿಣ ವರ್ಕೌಟ್- 22 ಕೆಜಿ ತೂಕ ಇಳಿಸಿದ 73ರ ಅಜ್ಜಿ

    ಜಿಮ್‍ನಲ್ಲಿ ಕಠಿಣ ವರ್ಕೌಟ್- 22 ಕೆಜಿ ತೂಕ ಇಳಿಸಿದ 73ರ ಅಜ್ಜಿ

    ಒಟ್ಟಾವಾ: ಜಿಮ್‍ನಲ್ಲಿ ಕಠಿಣ ವರ್ಕೌಟ್ ಮಾಡುವ ಮೂಲಕ 73 ವರ್ಷದ ಅಜ್ಜಿಯೊಬ್ಬರು 22 ಕೆಜಿ ತೂಕ ಇಳಿಸಿದ್ದಾರೆ.

    ಕೆನಡಾ ರಾಜಧಾನಿ ಒಟ್ಟಾವಾದ 73 ವರ್ಷದ ಜಾನ್ ಮೆಕೆಡೊನಾಲ್ಡ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಇನ್‍ಸ್ಟಾಗ್ರಾಮ್ ಖಾತೆ ಟ್ರೈನ್ ವಿಥ್‍ಜಾನ್ ಅನ್ನು 5 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

    https://www.instagram.com/p/B6RWQdwjTJS/?utm_source=ig_embed

    ಜಾನ್ ಮೆಕೆಡೊನಾಲ್ಡ್ ಅವರು ಮೂರು ವರ್ಷಗಳ ಹಿಂದೆ ವಯೋಸಹಜ ಕಾಯಿಲೆ ಸೇರಿದಂತೆ ಅಧಿಕ ತೂಕ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹೀಗಾಗಿ 5.3 ಅಡಿ ಎತ್ತರ, 90 ಕೆಜಿ ತೂಕದ ಜಾನ್ ಜಿಮ್‍ಗೆ ಹೋಗಲು ಪ್ರಾರಂಭಿಸಿದರು. ಕಠಿಣ ವರ್ಕೌಟ್ ಮಾಡುವ ಮೂಲಕ 22 ಕೆಜಿಗಿಂತ ಹೆಚ್ಚು ತೂಕವನ್ನು ಕಡಿಮೆ ಮಾಡಿದ್ದಾರೆ. ಜೊತೆಗೆ ಜಾನ್ ಅವರ ದೇಹದ ಸ್ನಾಯುಗಳು ಬಲವಾಗಿವೆ.

    ಜಾನ್ ಅವರು ದೈಹಿಕವಾಗಿ ಭಾರೀ ಬದಲಾಗಿದ್ದಾರೆ. ಅವರು ಆಹಾರ ಪದ್ಧತಿ ಬದಲಾವಣೆ ತಂದು, ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿದರು. ಈ ಮೂಲಕ ಅವರು ವೇಟ್ ಲಿಫ್ಟಿಂಗ್ ಹಾಗೂ ಬಾಡಿಬಿಲ್ಡರ್ ಆಗಿದ್ದಾರೆ ಎಂದು ಕೆನಡಾ ಮಾಧ್ಯಮಗಳು ವರದಿ ಮಾಡಿವೆ.

    https://www.instagram.com/p/B9ecp-0Dh7g/

  • ನಾಯಿ ವರ್ಕೌಟ್ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ?- ಈ ವೈರಲ್ ವಿಡಿಯೋ ನೋಡಿ

    ನಾಯಿ ವರ್ಕೌಟ್ ಮಾಡೋದನ್ನ ಎಲ್ಲಾದ್ರೂ ನೋಡಿದ್ದೀರಾ?- ಈ ವೈರಲ್ ವಿಡಿಯೋ ನೋಡಿ

    ವಾಷಿಂಗ್ಟನ್: ಸಾಮಾನ್ಯವಾಗಿ ನಾಯಿಗಳು ಮಾಲೀಕರು ಹೇಳಿದಂತೆ ಕೈ ಮುಗಿಯೋದು, ಕೇಳಿದ ವಸ್ತುಗಳನ್ನ ತೆಗೆದುಕೊಡೋದು ಹೀಗೆ ಮುಂತಾದ ಕೆಲಸಗಳನ್ನ ಮಾಡೋದನ್ನ ನೋಡಿರ್ತೀರ. ಆದ್ರೆ ಎಲ್ಲಾದ್ರೂ ನಾಯಿ ವರ್ಕೌಟ್ ಮಾಡೋದನ್ನ ನೋಡಿದ್ದೀರಾ?

    ಹಾಗಿದ್ರೆ ಇಲ್ನೋಡಿ. ಪೊಲೀಸ್ ನಾಯಿಯೊಂದು ಅಧಿಕಾರಿಗಳ ಜೊತೆಗೂಡಿ ಪುಶ್ ಅಪ್ಸ್ ಮಾಡಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಇಬ್ಬರು ಅಧಿಕಾರಿಗಳು ಪುಶ್ ಅಪ್ಸ್ ಮಾಡ್ತಿದ್ರೆ ನಾಯಿ ಕೂಡ ಅವರ ಮಧ್ಯೆ ಕುಳಿತು ಪುಶ್ ಅಪ್ಸ್ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ಹಿಟ್ ಆಗಿದೆ.

    ಸ್ಥಳೀಯ ಮಾಧ್ಯಮವೊಂದರ ವರದಿಯ ಪ್ರಕಾರ ಈ ನಾಯಿಯ ಹೆಸರು ನಿತ್ರೋ. 2 ವರ್ಷದ ಈ ಡಚ್ ಶೆಫರ್ಡ್ ನಾಯಿ ಇದೇ ವರ್ಷ ಅಲಬಾಮಾದ ಗಲ್ಫ್ ಶೋರ್ಸ್ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ಸೇರ್ಪಡೆಯಾಗಿದೆ.

    ಅಧಿಕಾರಿ ಕೋವನ್ ಹಾಗೂ ಹ್ಯಾನ್‍ಕಾಕ್ ಅವರೊಂದಿಗೆ ಕೆ9 ನಿತ್ರೋ ಕೂಡ ಕಾನೂನು ಉಲ್ಲಂಘಿಸೋ ಕಿಡಿಗೇಡಿಗಳನ್ನ ಮಟ್ಟ ಹಾಕಲು ರೆಡಿಯಾಗ್ತಿದೆ ಅಂತ ಪೊಲೀಸ್ ಇಲಾಖೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಈ ವಿಡಿಯೋವನ್ನ ಹಂಚಿಕೊಂಡಿದೆ.

    ಭಾನುವಾರದಂದು ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದ್ದು ಈವರೆಗೆ 9 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 31 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ವಿಡಿಯೋ ನೋಡಿದವರು ನಾಯಿಯ ವರ್ಕೌಟ್ ಕಂಡು ಹುಬ್ಬೇರಿಸಿದ್ದಾರೆ. ಅಧಿಕಾರಿಗಳೇ ನೀವಿನ್ನೂ ಇಂಪ್ರೂವ್ ಆಗ್ಬೇಕು. ನಾಯಿ ಚಲಿಸುತ್ತಾ ಪುಶ್ ಅಪ್ಸ್ ಮಾಡ್ತಿರೋದು ಕಾಣ್ತಿಲ್ವಾ ಅಂತ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

    https://www.facebook.com/gulfshorespolice/videos/1725293160814732/