Tag: ವರ್ಕೌಟ್

  • ವೈರಲ್ ಜ್ವರದ ನಂತರ ಮತ್ತೆ ವರ್ಕೌಟ್‍ಗೆ ಮರಳಿದ ಸಮಂತಾ

    ವೈರಲ್ ಜ್ವರದ ನಂತರ ಮತ್ತೆ ವರ್ಕೌಟ್‍ಗೆ ಮರಳಿದ ಸಮಂತಾ

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ವರ್ಕೌಟ್ ಪ್ರಿಯೆಯಾಗಿದ್ದು, ಇತ್ತೀಚೆಗೆ ಅವರಿಗೆ ವೈರಲ್ ಜ್ವರ ಕಾಣಿಸಿಕೊಂಡ ಕಾರಣ ವರ್ಕೌಟ್‍ಗೆ ಹೋಗಿರಲಿಲ್ಲ. ಆದರೆ 20 ದಿನಗಳ ನಂತರ ಮತ್ತೆ ಜಿಮ್ ನಲ್ಲಿ ವರ್ಕೌಟ್ ಮಾಡಲು ಅವರು ಪ್ರಾರಂಭಿಸಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ಇತ್ತೀಚೆಗೆ ರಿಲೀಸ್ ಆದ ‘ಪುಷ್ಪಾ’ ಸಿನಿಮಾದ ಐಟಂ ಡ್ಯಾನ್ಸ್ ‘ಊ ಅಂತಾವಾ ಮಾವ’ ಹಾಡಿನಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದು, ಎಲ್ಲರೂ ಅವರ ರಿಯಾಕ್ಷನ್ ಮತ್ತು ಫಿಟ್‍ನೆಸ್ ನೋಡಿ ಬೆರಗುಗೊಂಡಿದ್ದರು. ಅದರಂತೆ ಸಮಂತಾ ಯಾವಗಲೂ ತಮ್ಮ ಫಿಟ್‍ನೆಸ್ ಅನ್ನು ಕಾಪಾಡಿಕೊಳ್ಳಲು ಜಿಮ್‍ನಲ್ಲಿ ಸಖತ್ ಆಗಿ ಬೆವರನ್ನು ಇಳಿಸುತ್ತಾರೆ. ವರ್ಕೌಟ್ ವೀಡಿಯೋಗಳನ್ನು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದನ್ನೂ ಓದಿ:  ಒಂದು ದಿನದ ಬಂದ್ ಮಾಡಿದ್ರೆ ತಪ್ಪೇನು ಆಗಲ್ಲ: ಎಚ್‍ಕೆ ಕುಮಾರಸ್ವಾಮಿ

    ನಟಿಗೆ ವೈರಲ್ ಜ್ವರ ಕಾಣಿಸಿಕೊಂಡ 20 ದಿನಗಳ ನಂತರ ಮತ್ತೆ ಜಿಮ್‍ನಲ್ಲಿ ವರ್ಕೌಟ್ ಮಾಡಲು ಪ್ರಾರಂಭಿಸಿದ್ದಾರೆ. ಅವರ ವರ್ಕೌಟ್ ವೀಡಿಯೋವನ್ನು ಇನ್‍ಸ್ಟಾ ಸ್ಟೋರೀಸ್‍ನಲ್ಲಿ ಅಪ್‍ಲೋಡ್ ಸಹ ಮಾಡಿದ್ದಾರೆ. ಸಮಂತಾ ಅವರು ಹೊಸ ರೀತಿಯ ವರ್ಕೌಟ್‍ಗಳನ್ನು ಪ್ರಯತ್ನಿಸಲು ಯಾವಾಗಲೂ ಉತ್ಸುಕರಾಗಿರುತ್ತಾರೆ. ಅದು ಅಲ್ಲದೇ ಸೆಪ್ಟೆಂಬರ್‍ನಲ್ಲಿ ಸಮಂತಾ ತನ್ನ ಕೆಲವು ಸ್ನೇಹಿತರೊಂದಿಗೆ ಸೈಕ್ಲಿಂಗ್ ಮಾಡಿದ್ದು, ಆ ಫೋಟೋವನ್ನು ಹಂಚಿಕೊಂಡಿದ್ದರು.

     

    View this post on Instagram

     

    A post shared by Samantha (@samantharuthprabhuoffl)

    ವರ್ಕೌಟ್ ಬಗ್ಗೆ ಅವರು ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳುವುದು ಮಾತ್ರವಲ್ಲ, ತಮ್ಮ ಜೀವನದ ಕಹಿ ಘಟನೆಗಳನ್ನು ಮರೆಯಲು ಇದು ಸಹಾಯ ಮಾಡುತ್ತೆ ಎಂದು ಹೇಳಿದ್ದರು.

  • ಹೆರಿಗೆ ನಂತರ ತೂಕ ಇಳಿಸಿಕೊಳ್ಳೋದು ಸುಲಭ ಅಲ್ಲ: ಯುವರತ್ನ ನಟಿ 

    ಹೆರಿಗೆ ನಂತರ ತೂಕ ಇಳಿಸಿಕೊಳ್ಳೋದು ಸುಲಭ ಅಲ್ಲ: ಯುವರತ್ನ ನಟಿ 

    ಮುಂಬೈ: ನಟಿ ಸಾಯೇಷಾ ಸೈಗಲ್ ಅವರು ಮಗಳು ಹುಟ್ಟಿದ ನಂತರ ತೂಕ ಇಳಿಸಿಕೊಂಡಿದ್ದಾರೆ. ತಾವು ವೇಟ್‍ ಲಾಸ್ ಮಾಡಲು ಪಟ್ಟಿರುವ ಕಷ್ಟದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಹೆರಿಗೆ ನಂತರ ತೂಕ ಇಳಿಸಿಕೊಳ್ಳೋದು ಸುಲಭ ಅಲ್ಲ. ನೀವು ಸ್ಥಿರವಾಗಿದ್ದು, ಶ್ರದ್ಧೆಯಿಂದ ವರ್ಕೌಟ್‍ನತ್ತ ಗಮನ ಹರಿಸಿದ್ರೆ ತೂಕ ಇಳಿಸಿಕೊಳ್ಳಬಹುದು. ನೈಜತೆಗೆ ಹತ್ತಿರವಲ್ಲದ ಗುರಿಯನ್ನು ಇಟ್ಟುಕೊಳ್ಳಬಾರದು. ಪ್ರತಿ ಮಹಿಳೆಯು ಕೂಡ ಸುಂದರವಾಗಿರುತ್ತಾಳೆ. ಕೊಬ್ಬಿನಿಂದ ಕೂಡಿರುವ ನಮ್ಮ ದೇಹವನ್ನು ಸಣ್ಣವಾಗಿಸುವುದರ ಜೊತೆಗೆ ಆರೋಗ್ಯಕರವಾಗಿರೋದು ನಮ್ಮ ಟಾರ್ಗೆಟ್ ಆಗಿರಬೇಕು. ಸೆಲೆಬ್ರಿಟಿ ಅಂತ ನೋಡಬೇಡಿ, ನಿಮ್ಮ ಗುರಿ ನಿರ್ಧರಿಸಿ. ಪ್ರತಿಯೊಬ್ಬ ವ್ಯಕ್ತಿಯ ದೇಹ, ಆರೋಗ್ಯ ಸ್ಥಿತಿ ಕೂಡ ವಿಭಿನ್ನವಾಗಿರುತ್ತದೆ. ಈ ಫೋಟೋ ಫಿಟ್ನೆಸ್ ಮತ್ತು ನನ್ನ ಲೈಫ್‍ಸ್ಟೈಲ್‍ನನ್ನು ತೋರಿಸಿಕೊಡುತ್ತದೆ. ಇದು ನನಗೆ ಖುಷಿ ಕೊಡುತ್ತದೆ ಎಂದು ಸಾಯೇಷಾ ಸೈಗಲ್ ಇನ್‍ಸ್ಟಾಗ್ರಾಮ್‍ನಲ್ಲು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಕಪಿಲ್‌ ದೇವ್‌ ಆಗಲು ನಿತ್ಯ 4 ಗಂಟೆ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದ ರಣವೀರ್‌ ಸಿಂಗ್‌!

     

    View this post on Instagram

     

    A post shared by Sayyeshaa (@sayyeshaa)

    ಅನೇಕ ದಿನಗಳಿಂದ ಸಾಯೇಷಾ, ಆರ್ಯ ಪ್ರೀತಿ ಮಾಡುತ್ತಿದ್ದರು. ನಂತರ ಹಿರಿಯ ಆಶೀರ್ವಾದ ಪಡೆದು 2019ರ ಮಾರ್ಚ್‍ನಲ್ಲಿ ಆರ್ಯ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಕಳೆದ ಜುಲೈ 25ರಂದು ಸಾಯೇಷಾ ಸೈಗಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮನೆಗೆ ಹೊಸ ಸದಸ್ಯೆ ಎಂಟ್ರಿ ನೀಡಿದ್ದರ ಕುರಿತು ಆರ್ಯ ದಂಪತಿ ಮೊದಲು ಮಾಹಿತಿ ಹಂಚಿಕೊಂಡಿರಲಿಲ್ಲ. ಅವರ ಸಂಬಂಧಿಯೊಬ್ಬರು ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದೀಗ ಸಾಯೇಷಾ ಫಿಟ್ನೆಸ್ ಅತ್ತ ಗಮನ ಹರಿಸಿದ್ದಾರೆ. ಇದನ್ನೂ ಓದಿ: ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ: ಹೇಮಾಮಾಲಿನಿ

  • ಜಿಮ್‍ನಲ್ಲಿ ಕ್ರಂಚಸ್, ಸಿಟ್ ಅಪ್ – ಬೆಕ್ಕಿನ ವರ್ಕೌಟ್ ವೀಡಿಯೋ ವೈರಲ್

    ಜಿಮ್‍ನಲ್ಲಿ ಕ್ರಂಚಸ್, ಸಿಟ್ ಅಪ್ – ಬೆಕ್ಕಿನ ವರ್ಕೌಟ್ ವೀಡಿಯೋ ವೈರಲ್

    ನವದೆಹಲಿ: ಜಿಮ್‍ನಲ್ಲಿ ಬೆಕ್ಕು ವರ್ಕೌಟ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ.

    ಇತ್ತೀಚಿನ ದಿನಗಳಲ್ಲಿ ಜನರಿಗೆ ಆರೋಗ್ಯದ ಮೇಲೆ ಕಾಳಜಿ ಹೆಚ್ಚಾಗಿದ್ದು ಜಿಮ್ ಗೆ ಹೋಗಿ ಬೆವರಿಳಿಸುತ್ತಿದ್ದಾರೆ. ಆದರೆ ಇಲ್ಲೊಂದು ಬೆಕ್ಕು ಜಿಮ್ ಗೆ ಹೋಗಿ ಸಖತ್ ಆಗಿ ವರ್ಕೌಟ್ ಮಾಡಿದೆ. ಈ ವೀಡಿಯೋ ನೋಡಿ ಎಷ್ಟೋ ಜನರು ಸ್ಫೂರ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಈ ವೀಡಿಯೋದಲ್ಲಿ, ಬೆಕ್ಕು ಹೊಟ್ಟೆಯನ್ನು ಕಡಿಮೆ ಮಾಡಲು ಜಿಮ್‍ನಲ್ಲಿ ಕ್ರಂಚಸ್ ಮತ್ತು ಸಿಟ್-ಅಪ್‍ಗಳನ್ನು ಮಾಡಿದೆ. ಮನುಷ್ಯರಂತೆ ಈ ಬೆಕ್ಕು ಜಿಮ್‍ನಲ್ಲಿ ವರ್ಕ್‍ಬೆಂಚ್‍ನ ಪಕ್ಕದಲ್ಲಿ ಕ್ರಂಚ್‍ಗಳನ್ನು ಮಾಡುತ್ತಿದ್ದು, ಮ್ಯೂಸಿಕ್ ಜೊತೆಗೆ ವರ್ಕೌಟ್ ಮಾಡಿದೆ. ಈ ವೀಡಿಯೋ ಚೀನಾದ ಜಿನಿಂಗ್ ನಗರದಲ್ಲಿ ಈ ಕ್ರೇಜಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವೆಡ್ಡಿಂಗ್ ಕೇಕ್ ಬೀಳಿಸಿ ದಂಪತಿಗೆ ಶಾಕ್ ಕೊಟ್ಟ ಸಪ್ಲೈಯರ್

    ಈ ವೀಡಿಯೋವನ್ನು ಟ್ವಟ್ಟರ್ ನಲ್ಲಿ ‘ಅನು2181’ ಹೆಸರಿನವರು ಟ್ವೀಟ್ ಮಾಡಿದ್ದು, ನಾನು ನನ್ನ ಕನಸಿನಲ್ಲಿ ಹೀಗೆ ಮಾಡುತ್ತೇನೆ ಎಂಬ ರೀತಿ ಬರೆದು ಟ್ವೀಟ್ ಮಾಡಲಾಗಿದೆ. ಪ್ರಸ್ತುತ ಈ ವೀಡಿಯೋ ಸೋಶಿಯಲ್ ವೀಡಿಯೋದಲ್ಲಿ ವೈರಲ್ ಆಗಿದ್ದು, ಜನರಲ್ಲಿ ಕ್ರೇಜ್ ಮೂಡಿಸಿದೆ. ಈ ವೀಡಿಯೋ ನೋಡಿದವರು ನಗುವಿನ ಎಮೋಜಿಗಳು ಮತ್ತು ಕಮೆಂಟ್‍ಗಳನ್ನು ಮಾಡುತ್ತಿದ್ದಾರೆ. ಇದನ್ನು ನೋಡಿದ ನೆಟ್ಟಿಗರು, ಕಿಟ್ಟಿ ಕ್ಯಾಟ್ ಮಸ್ಸೆಲ್ಸ್ ಬಿಲ್ಡ್ ಮಾಡಲು ಬಯಸುತ್ತಿದೆ. ಇದು ತುಂಬಾ ತಮಾಷೆಯಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

  • ಮದುವೆಗೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡಿದ ವಧು – ವೀಡಿಯೋ ವೈರಲ್

    ಮದುವೆಗೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡಿದ ವಧು – ವೀಡಿಯೋ ವೈರಲ್

    ದುವೆಗೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡಿ ಬೆವರಿಳಿಸಿರುವ ವಧುವಿನ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಪ್ರಸ್ತುತ ಮದುವೆ ಸೀಸನ್ ಆಗಿದ್ದು, ನವೆಂಬರ್, ಡಿಸೆಂಬರ್‍ನಲ್ಲಿ ಹೆಚ್ಚಾಗಿ ಮದುವೆ ಸಮಾರಂಭಗಳು ನಡೆಯುವುದನ್ನು ಕಾಣಬಹುದಾಗಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಸಹ ಇಳಿಮುಖಗೊಂಡಿದ್ದು, ಜನ ಕೂಡ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಶುರು ಮಾಡಿದ್ದಾರೆ. ಇನ್ನೂ ಮದುವೆ ಸಂದರ್ಭದಲ್ಲಿ ನಡೆಯುವ ಕೆಲವು ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ.

    ಸದ್ಯ ಮದುವೆಗೂ ಮುನ್ನ ವಧು ಜಿಮ್‍ಗೆ ತೆರಳಿ ವರ್ಕೌಟ್ ಮಾಡುತ್ತಾ ಫೋಟೋ ಶೂಟ್ ಮಾಡಿಸಿಕೊಂಡಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ವಧು ಆರೆಂಜ್ ಹಾಗೂ ಕೆಂಪು ಬಣ್ಣದ ಸೀರೆಯುಟ್ಟು, ಮುಖಕ್ಕೆ ಮೇಕಪ್ ಮಾಡಿಕೊಂಡು, ನೆತ್ತಿ ಮೇಲೆ ಬೈ ತಲೆ ಬೊಟ್ಟು ಮತ್ತು ಕೂದಲಿಗೆ ಹೂ ಮುಡಿದುಕೊಂಡು ಡಂಬಲ್ಸ್ ಎತ್ತಿ ವರ್ಕೌಟ್ ಮಾಡುತ್ತಾ ಪೋಸ್ ನೀಡುತ್ತಿದ್ದರೆ, ಕ್ಯಾಮೆರಾ ಮ್ಯಾನ್ ಫೋಟೋ ಕ್ಲಿಕ್ಕಿಸುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ನಾನು ಅಧಿಕಾರ ಬಯಸಿಲ್ಲ, ಜನ ಸೇವೆಯೇ ಗುರಿ: ಮೋದಿ

     

    View this post on Instagram

     

    A post shared by LBB Delhi NCR (@lbbdelhincr)

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಇಲ್ಲಿಯವರೆಗೂ 2,300ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕ ಕಾಮೆಂಟ್‍ಗಳೂ ಹರಿದುಬಂದಿದೆ. ಇದನ್ನೂ ಓದಿ: ಪಿಎಂ, ಸಿಎಂ ಸ್ಥಾನ ಇರೋದೇ ಜನ ಸೇವೆಗೆ, ಮೋದಿಗೆ ಈಗ ಅದು ಜ್ಞಾನೋದಯವಾಗಿದೆ: ಸಿದ್ದು ವ್ಯಂಗ್ಯ

  • ಹಲವು ತಿಂಗಳ ಬಳಿಕ ಜಿಮ್‍ನತ್ತ ಕಿಚ್ಚ – ಸುದೀಪ್ ವಕೌರ್ಟ್ ಫೋಟೋ ವೈರಲ್

    ಹಲವು ತಿಂಗಳ ಬಳಿಕ ಜಿಮ್‍ನತ್ತ ಕಿಚ್ಚ – ಸುದೀಪ್ ವಕೌರ್ಟ್ ಫೋಟೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಕಿಚ್ಚ ಸುದೀಪ್ ಜೀಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಲವು ದಿನಗಳ ಬಳಿಕ ಮತ್ತೆ ವರ್ಕೌಟ್ ಶುರು ಮಾಡುತ್ತಿರುವ ಕಿಚ್ಚ ಫೋಟೋದಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

    ಪೈಲ್ವಾನ್ ಚಿತ್ರದ ಮೂಲಕ ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಸಿಕ್ಸ್ ಪ್ಯಾಕ್‍ನಲ್ಲಿ ಮಿಂಚಿದ್ದ ಸುದೀಪ್, ಅಂದಿನಿಂದ ತಮ್ಮ ಫಿಟ್‍ನೆಸ್‍ನನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಸಮಯ ಸಿಕ್ಕಗಲೆಲ್ಲಾ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದ ಸುದೀಪ್ ಕೆಲವು ತಿಂಗಳ ಹಿಂದೆ ಅನಾರೋಗ್ಯ ಕಾರಣ ಜೀಮ್‍ನಿಂದ ದೂರ ಸರಿದಿದ್ದರು. ಇದೀಗ ಸುದೀಪ್ ಮತ್ತೆ ವರ್ಕೌಟ್‍ನತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಭಾರತಾಂಬೆಯ ದೇಗುಲ- ಮಕ್ಕಳಲ್ಲಿ ದೇಶಾಭಿಮಾನ ತುಂಬುವ ಕೆಲಸ

    sudeep

    ಸುದೀಪ್ ಜೀಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ತಮ್ಮ ಬೈಸೆಪ್ಸ್‌ನನ್ನು ತೋರಿಸುತ್ತಾ, ಖಡಕ್ ಲುಕ್ ನೀಡಿದ್ದಾರೆ. ಅಲ್ಲದೇ ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಕೂಡ ಖಂಡಿತ ಅದು ಹೆಚ್ಚು ತಿಂಗಳ ಕಾಲ ಪರಿಣಾಮ ಬೀರುತ್ತದೆ. ವರ್ಕೌಟ್‍ನಿಂದ ನಾನು ಪಡೆದ ಸಂತೋಷವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ನನ್ನ ದಿನಚರಿಯನ್ನು ಪುನಾರಂಭಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನನ್ನ ಅಗತ್ಯದ ಸಮಯದಲ್ಲಿ ಸಹಾಯ ಮಾಡಿದ ವೈದ್ಯರು, ತರಬೇತುದಾರರಿಗೆ, ಕುಟುಂಬವರಿಗೆ ಮತ್ತು ನನ್ನ ಸ್ನೇಹಿತರಿಗೆ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮುಳ್ಳಯ್ಯನಗಿರಿಯಲ್ಲಿ ಜನಜಾತ್ರೆ- ಫುಲ್ ಟ್ರಾಫಿಕ್, ಪೊಲೀಸರ ಜೊತೆ ಪ್ರವಾಸಿಗರ ವಾಗ್ವಾದ

    ಇತ್ತೀಚೆಗಷ್ಟೇ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಟೀಸರ್‍ನನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಟೀಸರ್‌ನಲ್ಲಿ ಸುದೀಪ್ ಬ್ಲಾಕ್ ಕಲರ್ ಲಾಂಗ್ ಜಾಕೆಟ್ ಹಾಗೂ ಕ್ಯಾಪ್ ತೊಟ್ಟು ಮಳೆಯಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಸದ್ಯ ಈ ಟೀಸರ್ ಕಿಚ್ಚ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಬಿಗ್ ಸ್ಕ್ರೀನ್‍ನಲ್ಲಿ ಸುದೀಪ್‍ರನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

  • ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?

    ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?

    ಮುಂಬೈ: ಬಾಲಿವುಡ್, ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇಷ್ಟು ಫಿಟ್, ವರ್ಕೌಟ್ ಮಾಡಿಕೊಂಡಿದ್ದ ಸಿದ್ಧಾರ್ಥ್ ಶುಕ್ಲಾಗೆ ಹೃದಯಾಘಾತ ಆಗಿದ್ದೇಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಸಿದ್ಧಾರ್ಥ್ ಸಾವಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯದ ವರದಿಗಳ ಪ್ರಕಾರ ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    ಹೃದಯಾಘಾತಕ್ಕೆ ಕಾರಣವೇನು?:
    ಸೆಲೆಬ್ರಿಟಿಗಳು ಫಿಟ್ ಆಗಿ ಕಾಣಲು ಜಿಮ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಹೆಚ್ಚು ವರ್ಕೌಟ್ ಮಾಡೋದರಿಂದ ವ್ಯಕ್ತಿಯ ಎನರ್ಜಿ ನಿರಂತರವಾಗಿ ನಷ್ಟವಾಗಿರುತ್ತದೆ. ಯಾವುದೇ ವರ್ಕೌಟ್ ಗಳು ನಿಯಮಿತವಾಗಿರಬೇಕು ಅನ್ನೋದನ್ನು ಮರೆಯುತ್ತಾರೆ. ಇನ್ನು ಶುಕ್ಲಾ ಆಪ್ತರ ಪ್ರಕಾರ, ನಟ ಕಡಿಮೆ ನಿದ್ದೆ ಮಾಡುತ್ತಿದ್ದರು ಎಂದು ಹೇಳುತ್ತಾರೆ. ಇದು ತುಂಬಾನೇ ಅಪಾಯಕಾರಿ ಎಂಬುವುದು ಕೆಲ ವೈದ್ಯರ ಅಭಿಪ್ರಾಯ.

    ಬ್ಯುಸಿ ಲೈಫ್ ನಲ್ಲಿ ಕೆಲವರು ಮಾದಕ ವಸ್ತುಗಳಿಗೆ ದಾಸರಾಗುತ್ತಾರೆ. ಕೆಲ ಕ್ಷಣದ ನೆಮ್ಮದಿ ಅಥವಾ ನಿದ್ದೆಗಾಗಿ ಡ್ರಗ್ಸ್ ನಂತಹ ಉತ್ಪನ್ನಗಳ ಸೇವನೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ವರ್ಕೌಟ್ ಮಾಡುತ್ತಿದ್ರೂ ಇಂತಹ ಅಭ್ಯಾಸಗಳು ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ. 30 ವರ್ಷದ ಆಸುಪಾಸಿನ ಯುವ ಜನತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಕೆಲವೊಮ್ಮೆ ಅನುವಂಶಿಕ ರೋಗ ಲಕ್ಷಣಗಳು ಕಂಡು ಬಂದ್ರೆ ಶೀಘ್ರವೇ ಚಿಕಿತ್ಸೆ ಪಡೆದುಕೊಳ್ಳಲು ಸಹಾಯವಾಗುತ್ತದೆ. ಆದ್ರೆ ಶುಕ್ಲಾ ನಿಧನ ನಿಖರವಾಗಿ ಇದೇ ಕಾರಣಕ್ಕೆ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಮರಣೋತ್ತರ ಶವ ಪರೀಕ್ಷೆ ವರದಿ ಪ್ರಕಾರ ಸಾವಿನ ಕಾರಣಗಳನ್ನು ಅಂದಾಜಿಸಬಹುದು ಎಂದು ಏಮ್ಸ್ ಹಿರಿಯ ವೈದ್ಯ ನರೇಶ್ ರೋಹನ್ ಹೇಳುತ್ತಾರೆ. ಇದನ್ನೂ ಓದಿ: ಬೇಗ ಪಯಣ ಮುಗಿಸಿದೆ – ಸಿದ್ಧಾರ್ಥ್ ನಿಧನಕ್ಕೆ ಸಲ್ಮಾನ್ ಕಂಬನಿ

  • ಪವರ್ ಸ್ಟಾರ್ ಪವರ್ ಫುಲ್ ವರ್ಕೌಟ್ – ಅಭಿಮಾನಿಗಳಿಗೆ ವಿಭಿನ್ನವಾಗಿ ವಿಶ್

    ಪವರ್ ಸ್ಟಾರ್ ಪವರ್ ಫುಲ್ ವರ್ಕೌಟ್ – ಅಭಿಮಾನಿಗಳಿಗೆ ವಿಭಿನ್ನವಾಗಿ ವಿಶ್

    ಬೆಂಗಳೂರು: ಇಂದು ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರು ವರ್ಕೌಟ್ ಮಾಡುತ್ತಿರುವ ಪವರ್ ಫುಲ್ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ವಿಭಿನ್ನವಾಗಿ ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

    ಚಂದನವನದಲ್ಲಿ ತಮ್ಮದೇ ಆದ ಅಭಿನಯ, ಡ್ಯಾನ್ಸ್ ಹಾಗೂ ಸ್ಟಂಟ್ಸ್ ಮೂಲಕವೇ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಪುನೀತ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಯಾವುದೇ ಕಷ್ಟಕರ ಪಾತ್ರ ಕೊಟ್ಟರೂ ಸುಲಭವಾಗಿ ನಟಿಸಿ ಸೈ ಎನಿಸಿಕೊಳ್ಳುವ ಪುನೀತ್ ಮೊದಲಿನಿಂದಲೂ ಸಖತ್ ಫಿಟ್ ಹಾಗೂ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಪುನೀತ್ ತಮ್ಮ ಮನೆಯಲ್ಲಿರುವ ಜಿಮ್‍ನಲ್ಲಿ ಸಖತ್ ವರ್ಕೌಟ್ ಮಾಡಿದ್ದು, ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದ್ವಿತ್ವ ಸಿನಿಮಾಗೆ ಪುನೀತ್ ರಾಜ್‍ಕುಮಾರ್ ಜೋಡಿಯಾದ ತ್ರಿಷಾ ಕೃಷ್ಣ

    ವೀಡಿಯೋದಲ್ಲಿ ಪುನೀತ್ ಹಸಿರು ಕಲರ್ ಟಿ-ಶರ್ಟ್ ಹಾಗೂ ಶಾರ್ಟ್ಸ್ ಧರಿಸಿ ಕಿಕ್ ಬಾಕ್ಸಿಂಗ್ ಬ್ಯಾಗ್‍ಗೆ ಒದೆಯುತ್ತಿರುವುದನ್ನು ಕಾಣಬಹುದಾಗಿದೆ. ವೀಡಿಯೋ ಜೊತೆಗೆ ಆರೋಗ್ಯವೇ ನಿಜವಾದ ಸಂಪತ್ತು ಎಂಬುವುದನ್ನು ನಾವು ಅರಿತುಕೊಳ್ಳೋಣ. ಹ್ಯಾಪಿ ವರಮಹಾಲಕ್ಷ್ಮೀ ಎಂದು ಎಂದು ವಿಶ್ ಮಾಡಿದ್ದಾರೆ.

    ಇತ್ತೀಚೆಗಷ್ಟೇ ನಗರದ ಖಾಸಗಿ ಹೋಟೆಲ್‍ನಲ್ಲಿ ಡಾ. ರಾಜ್ ಕುಮಾರ್ ಅಕಾಡೆಮಿಯಿಂದ ಡಾ. ರಾಜ್‍ಕುಮಾರ್ ಲರ್ನಿಂಗ್ ಆ್ಯಪ್‍ನನ್ನು ಲೋಕಾರ್ಪಣೆ ಸಮಾರಂಭ ನಡೆಯಿತು. ಪುನೀತ್ ರಾಜ್‌ಕುಮಾರ್‌ರವರು ಈ ಆ್ಯಪ್‍ನ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿಯವರು ಅಪ್ಪು ನೀವು ಫಾರ್ಮಲ್ ಎಜುಕೇಶನ್ ಬಗ್ಗೆ ಕಲಿಯಲಿಲ್ಲ ಅಂದರೂ ಪರವಾಗಿಲ್ಲ. ಫಾರ್ಮಲ್ ಎಜುಕೇಶನ್ ಮುಖ್ಯವಲ್ಲ. ಜ್ಞಾನ ಬಹಳ ಮುಖ್ಯ. ಜ್ಞಾನದಿಂದಲೇ ವಿದ್ಯೆ. ನೀವೊಬ್ಬರು ಐಕಾನ್ ಎಂದು ಹಾಡಿ ಹೊಗಳಿದ್ದರು.  ಇದನ್ನೂ ಓದಿ:ಅಪ್ಪು ಡೋಂಟ್‍ವರಿ, ನೀವು ಓದಿಲ್ಲ ಆದ್ರೂ ನೀವೊಬ್ಬರು ಐಕಾನ್: ಬೊಮ್ಮಾಯಿ

  • ‘ಆರ್‌ಆರ್‌ಆರ್’ ಸೆಟ್‍ನಲ್ಲಿ ಆಲಿಯಾ ವರ್ಕೌಟ್

    ‘ಆರ್‌ಆರ್‌ಆರ್’ ಸೆಟ್‍ನಲ್ಲಿ ಆಲಿಯಾ ವರ್ಕೌಟ್

    ಹೈದರಾಬಾದ್: ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಮುಂದಿನ ಸಿನಿಮಾ ಆರ್‌ಆರ್‌ಆರ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಈ ಮಧ್ಯೆ ತಮ್ಮ ದಿನನಿತ್ಯದ ವರ್ಕೌಟ್ ಮಾತ್ರ ಮಿಸ್ ಮಾಡದೇ ಮಾಡುತ್ತಿದ್ದಾರೆ. ಸದ್ಯ ಜಿಮ್‍ನಲ್ಲಿ ಕ್ಲಿಕ್ಕಿಸಿಕೊಂಡ ಸೆಲ್ಫಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬುಧವಾರ ಬೆಳಗ್ಗೆ ಆಲಿಯಾ ಭಟ್ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣಕ್ಕಾಗಿ ಚಿತ್ರತಂಡವನ್ನು ಸೇರಿದ್ದಾರೆ. ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡುವ ಮೂಲಕ ಬೆವರಿಳಿಸಿದ್ದಾರೆ.

    ಇದಕ್ಕೂ ಮುನ್ನ ಆರ್‌ಆರ್‌ಆರ್ ಸೆಟ್‍ನಲ್ಲಿ ಡ್ರೆಸ್ಸಿಂಗ್ ರೂಮ್‍ನ ಕನ್ನಡಿ ಮುಂದೆ ಕುಳಿತು ರೆಡಿಯಾಗುತ್ತಿರುವ ಫೋಟೋವನ್ನು ಆಲಿಯಾ ಭಟ್ ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ರೈಸ್ ಮತ್ತು ಶೈನ್, ಬೆಳಗ್ಗೆ 6.41ಕ್ಕೆ ಎಂದು ಟೈಮ್ ಸ್ಟ್ಯಾಂಪ್‍ನಲ್ಲಿ ಹಾಕಿದ್ದಾರೆ.

    ಆರ್‌ಆರ್‌ಆರ್ ಸ್ವಾತಂತ್ರ್ಯ ಪೂರ್ವ ಯುಗದಲ್ಲಿ ನಡೆದ ಕಥಾ ಹಂದರವಾಗಿದ್ದು, ಜ್ಯೂನಿಯರ್ ಎನ್‍ಟಿಆರ್ ಸ್ವಾತಂತ್ರ್ಯ ಹೋರಾಟಗಾರ ಕೋಮರಮ್ ಭೀಮ್ ಮತ್ತು ರಾಮ್‍ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ರಾಮ್ ಚರಣ್‍ಗೆ ಜೋಡಿಯಾಗಿ ಸೀತಾ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 13ರಂದು ಆರ್‌ಆರ್‌ಆರ್ ಬೆಳ್ಳಿ ಪರದೆ ಮೇಲೆ ತೆರೆ ಕಾಣಲಿದೆ. ಇದನ್ನೂ ಓದಿ:ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ: ಶಿಲ್ಪಾ ಶೆಟ್ಟಿ

  • ಟೊಮೆಟೋ ರೀತಿ ಕೆಂಪಾಯ್ತು ಸನ್ನಿ ಕೆನ್ನೆ

    ಟೊಮೆಟೋ ರೀತಿ ಕೆಂಪಾಯ್ತು ಸನ್ನಿ ಕೆನ್ನೆ

    – ಬೇಬಿ ಡಾಲ್ ವಿಡಿಯೋ ವೈರಲ್

    ಲಾಸ್ ಎಂಜಲೀಸ್: ಮಾದಕ ಚೆಲುವೆ ಸನ್ನಿ ಲಿಯೋನ್ ಲಾಕ್‍ಡೌನ್ ದಿನಗಳಲ್ಲಿ ವಿವಿಧ ರೀತಿಯ ವಿಡಿಯೋ ಮಾಡುವ ಮೂಲಕ ಮನರಂಜನೆ ಜೊತೆಗೆ ಹಲವು ವಿಚಾರಗಳನ್ನು ತಿಳಿಸಿದ್ದರು. ಇದೀಗ ಅವರು ಯೋಗ ಹಾಗೂ ಬಾಕ್ಸಿಂಗ್ ಮಾಡುವುದರಲ್ಲಿ ಸಖತ್ ಬ್ಯುಸಿಯಾಗಿದ್ದು, ಬಾಕ್ಸಿಂಗ್ ಮಾಡಿ ದಣಿದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಇನ್‍ಸ್ಟಾದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಬೇಬಿ ಡಾಲ್, ಲಾಕ್‍ಡೌನ್ ವೇಳೆ ಮಕ್ಕಳೊಂದಿಗೆ ಕಾಲ ಕಳೆಯುತ್ತಲೇ ವಿವಿಧ ವಿಡಿಯೋಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರು. ಮಗಳು ನಿಶಾ ಜೊತೆಗೆ ಪೇಂಟಿಂಗ್ ಸೆಷನ್ ನಡೆಸಿ ಎಂಜಾಯ್ ಮಾಡುತ್ತಿದ್ದರು. ಈಗ ಫಿಟ್ನೆಸ್, ಯೋಗ ಹಾಗೂ ಬಾಕ್ಸಿಂಗ್‍ನತ್ತ ಒಲವು ತೋರಿದ್ದು, ಕೆಲ ದಿನಗಳಿಂದ ಬಾಕ್ಸಿಂಗ್ ಮಾಡುತ್ತಿರುವುದಾಗಿ ಹೇಳಿದ್ದಾರೆ.

     

    View this post on Instagram

     

    Day 2 @fitboxworkout got my a*% kicked! Dying while working out with a mask on. Geez!!! New Norm! F%*k COVID!

    A post shared by Sunny Leone (@sunnyleone) on

    ಮೂರು ಮಕ್ಕಳ ತಾಯಿಯಾಗಿರುವ ಸನ್ನಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದು, ಬಾಕ್ಸಿಂಗ್ ಸೆಷನ್‍ನ ಎರಡನೇ ದಿನದ ಅನುಭವವನ್ನು ಹಂಚಿಕೊಂಡಿದ್ದಾರೆ. ಹೇ ಗಾಯ್ಸ್, ಎರಡನೇ ದಿನದ ಬಾಕ್ಸಿಂಗ್ ಮುಗಿಯಿತು ಎಂದು ಹೇಳಿದ್ದಾರೆ. ಅಲ್ಲದೆ ಬಾಕ್ಸಿಂಗ್‍ನಿಂದ ಮುಖ ಹೇಗೆ ಕೆಂಪಾಗಿದೆ ಎಂದು ಸಹ ತೋರಿಸಿದ್ದಾರೆ.

     

    View this post on Instagram

     

    Who said trying new things was easy!! I’ll get it…you’ll see… lol now stop laughing at me ????????????????????

    A post shared by Sunny Leone (@sunnyleone) on


    ಮೊದಲ ದಿನ ಬಾಕ್ಸಿಂಗ್‍ಗೆ ತೆರಳಿದ ಚಿತ್ರವನ್ನು ಸಹ ಅವರು ಹಂಚಿಕೊಂಡಿದ್ದು, ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಮೊದಲ ದಿನದ ಬಾಕ್ಸಿಂಗ್ ಬಿಫೋರ್ ಆ್ಯಂಡ್ ಆಫ್ಟರ್. ಟೊಮೆಟೊ ರೀತಿ ನನ್ನ ಮುಖ ಕೆಂಪಾಗಿದೆ. ಈ ಚಿತ್ರಹಿಂಸೆ ಬಳಿಕವೂ ಮತ್ತೆ ಅದನ್ನೇ ಮಾಡಲು ಬಯಸಿದ್ದೇನೆ ಎಂದು ಹೇಳಿದ್ದರು. ನಿತ್ಯ ವರ್ಕೌಟ್ ಮಾಡುವ ಹಲವು ಚಿತ್ರಗಳನ್ನು ಸನ್ನಿ ಹಂಚಿಕೊಳ್ಳುತ್ತಿದ್ದಾರೆ.

     

    View this post on Instagram

     

    First day of boxing!! Before and after lol. My face is red like a tomato. After this torture I’ve decided to do it again.

    A post shared by Sunny Leone (@sunnyleone) on

    ಸನ್ನಿ ಲಿಯೋನ್ ಸದ್ಯ ತಮಿಳಿನ ವೀರಮಾದೇವಿ, ಮಲಯಾಳಂನ ರಂಗೀಲಾ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಹಿನ್ನೆಲೆ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದದೆ. ಇದೀಗ ಲಾಸ್ ಎಂಜಲೀಸ್‍ನಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

     

    View this post on Instagram

     

    From the time I woke up till now I have walked 14km. Lol and this hike was a part of it. #nofilter corona virus sucks big time!

    A post shared by Sunny Leone (@sunnyleone) on

  • ಸಿಸಿಬಿ ಕಚೇರಿ ಸೆಲ್ ಒಳಗೂ ಡ್ರಗ್ ಪೆಡ್ಲರ್ ಖನ್ನಾ ವರ್ಕೌಟ್

    ಸಿಸಿಬಿ ಕಚೇರಿ ಸೆಲ್ ಒಳಗೂ ಡ್ರಗ್ ಪೆಡ್ಲರ್ ಖನ್ನಾ ವರ್ಕೌಟ್

    – ದಿನಕ್ಕೆ ಮೂರು ಗಂಟೆ ಪ್ರತಿನಿತ್ಯ ಯೋಗ, ಧ್ಯಾನ

    ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ವೀರೇನ್ ಖನ್ನಾ ಸಿಸಿಬಿ ಕಚೇರಿಯ ಸೆಲ್ ಒಳಗೂ ಪ್ರತಿನಿತ್ಯ ವರ್ಕೌಟ್ ಮಾಡುತ್ತಿದ್ದಾನೆ.

    ಕಳೆದ ಸೆಪ್ಟಂಬರ್ 6ರಂದು ಡ್ರಗ್ ದಂಧೆಯ ಕಿಂಗ್‍ಪಿನ್ ಆಗಿರುವ ವೀರೇನ್ ಖನ್ನಾನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ದೆಹಲಿಯಲ್ಲಿ ಇದ್ದುಕೊಂಡೆ ಬೆಂಗಳೂರಿನಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿದ್ದ ಖನ್ನಾ, ವೃತ್ತಿಯಲ್ಲಿ ಓರ್ವ ಟೆಕ್ಕಿಯಾಗಿದ್ದ. ಸದ್ಯ ಸಿಸಿಬಿ ಪೊಲೀಸರ ವಶದಲ್ಲಿ ಇದ್ದಾನೆ.

    ಈ ವೇಳೆ ಆತ ಸೆಲ್ ಒಳಗೆ ಇದ್ದುಕೊಂಡೆ ದಿನ ವರ್ಕೌಟ್ ಮಾಡುತ್ತಿದ್ದಾನೆ. ಬೆಳಗ್ಗೆ ಮತ್ತು ಸಂಜೆ ಮಿಸ್ ಮಾಡದೇ ಯೋಗ, ಧ್ಯಾನ ಮತ್ತು ನಾರ್ಮಲ್ ಆಗಿ ವರ್ಕೌಟ್ ಮಾಡುತ್ತಿದ್ದಾನೆ. ಬೆಳಗ್ಗೆ ಒಂದೂವರೆ ಗಂಟೆ ಹಾಗೂ ಸಂಜೆ ಒಂದೂವರೆಗಂಟೆ ಪ್ರತಿನಿತ್ಯ ವೀರೇನ್ ಖನ್ನಾ ಸೆಲ್ ಒಳಗೆ ವರ್ಕೌಟ್ ಮಾಡುತ್ತಿದ್ದಾನೆ. ಈ ವೇಳೆ ಆತ ಯಾರ ಜೊತೆಯೂ ಮಾತನಾಡುತ್ತಿಲ್ಲ. ವಿಚಾರಣೆ ವೇಳೆ ಮಾತನಾಡಿ ಮತ್ತೆ ಸೆಲ್ ಒಳಗೆ ಹೋಗುತ್ತಾನೆ ಎಂದು ಮಾಹಿತಿ ಲಭಿಸಿದೆ.

    ವೃತ್ತಿಯಲ್ಲಿ ಟೆಕ್ಕಿಯಾಗಿರುವ ಆರೋಪಿ ಖನ್ನಾ ದೊಡ್ಡ ಪಾರ್ಟಿ ಆರೆಂಜ್ ಮಾಡುತ್ತಿದ್ದ. ಅರೆಸ್ಟ್ ಆಗುವ ಮುನ್ನ ಬೆಂಗಳೂರಿನಲ್ಲಿ ದೊಡ್ಡ ಪಾರ್ಟಿ ನಡೆಸಲು ವೇದಿಕೆ ಸಿದ್ಧ ಮಾಡಿದ್ದ. ಈ ಪಾರ್ಟಿಗೆ ಸಂಬಂಧಿಸಿದ ಫೋಟೋವನ್ನು ಬಿಡುಗಡೆ ಮಾಡಿದ್ದ. ಖನ್ನಾ ಮೂಲತಃ ಬೆಂಗಳೂರಿನ ನಿವಾಸಿಯೇ ಆಗಿದ್ದು, ದೆಹಲಿಯ ಮಥೂರ ರಸ್ತೆಯ ನಿವಾಸಿದಲ್ಲಿದ್ದುಕೊಂಡೇ ಬೇರೆ ಬೇರೆ ಪಾರ್ಟಿಗಳನ್ನು ಏರ್ಪಡಿಸಲು ಸಿದ್ಧತೆ ನಡೆಸುತ್ತಿದ್ದ. ಇಂತಹ ಪಾರ್ಟಿಗಳಿಗೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡುತ್ತಿದ್ದ.