Tag: ವರ್ಕೌಟ್

  • ಪತ್ನಿ ಜೊತೆ  ವರ್ಕೌಟ್ ಮಾಡುತ್ತಿರುವ ನಟ ಸೂರ್ಯ ವಿಡಿಯೋ ವೈರಲ್

    ಪತ್ನಿ ಜೊತೆ ವರ್ಕೌಟ್ ಮಾಡುತ್ತಿರುವ ನಟ ಸೂರ್ಯ ವಿಡಿಯೋ ವೈರಲ್

    ತ್ನಿ ಜ್ಯೋತಿಕಾ (Jyotika) ಜೊತೆ ಜೀಮ್ (Gym) ನಲ್ಲಿ ವರ್ಕೌಟ್ ಮಾಡುತ್ತಿರುವ ಸೂರ್ಯ (Surya) ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೂರ್ಯ ಮತ್ತು ಜ್ಯೋತಿಕಾ ಈ ವಯಸ್ಸಲ್ಲೂ ಯಾಕಿಷ್ಟೊಂದು ಯಂಗ್ ಆಗಿ ಕಾಣುತ್ತಾರೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಜೀಮ್ ನಲ್ಲಿ ಬೆವರು ಹರಿಸುತ್ತಲೇ ಹೊಸ ಹೊಸ ಸಿನಿಮಾಗಳನ್ನೂ ಸೂರ್ಯ ಘೋಷಣೆ ಮಾಡುತ್ತಿದ್ದಾರೆ.

    ಸೂರ್ಯ ಇದೀಗ ಮತ್ತೊಂದು ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಇದು ಇವರ 44ನೇ ಚಿತ್ರವಾಗಿದ್ದು, ಹೆಸರಾಂತ ನಟರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಸ್ಟಾರ್ ಡೈರೆಕ್ಟರ್ ಕಾರ್ತಿಕ್ ಸುಬ್ಬರಾಜು (Karthik Subbaraju) ಈ ಸಿನಿಮಾದ ನಿರ್ದೇಶಕರು. ಸೂರ್ಯ ಅವರ ಕಂಗುವ ಸಿನಿಮಾ ರಿಲೀಸ್ ಮುನ್ನವೇ ಈ ಹೊಸ ಚಿತ್ರವನ್ನು ಸೂರ್ಯ ಸೋಷಿಯಲ್ ಮೀಡಿಯಾ ಮೂಲಕ ಘೋಷಣೆ ಮಾಡಿದ್ದಾರೆ.

    ಕಂಗುವ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಮೊನ್ನೆಯಷ್ಟೇ ‘ಕಂಗುವ’ (Kanguva) ಸಿನಿಮಾದ ಟೀಸರ್ (Teaser) ಬಿಡುಗಡೆ ಆಗಿದ್ದು ಅದ್ಧೂರಿ ತನದ ಮೇಕಿಂಗ್, ಕಲಾವಿದ ಆರ್ಭಟ. ದೃಶ್ಯ ವೈಭವ ಹಾಗೂ ಹಿನ್ನೆಲೆ ಸಂಗೀತದಿಂದಾಗಿ ಟೀಸರ್ ಮತ್ತೊಮ್ಮೆ ನೋಡಬೇಕು ಅನಿಸುತ್ತಿದೆ. ಹೊಡೆದಾಟ, ರಕ್ತದೋಕುಳಿ, ಹೊಸ ಬಗೆಯ ಆಯುಧ, ರಾಕ್ಷಸರು ಹೀಗೆ ನಾನಾ ರೀತಿಯ ದೃಶ್ಯಗಳನ್ನು ಜೋಡಿಸಿಕೊಂಡು ಈ ಟೀಸರ್ ಕಟ್ಟಲಾಗಿದೆ. ಟೀಸರ್ ಕುರಿತಂತೆ ಅಕ್ಷರಗಳಲ್ಲಿ ಓದುವುದಕ್ಕಿಂತ ನೋಡುವುದೇ ಒಂದು ಅನುಭವ.

     

    ಇತ್ತೀಚೆಗಷ್ಟೇ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್ ನಲ್ಲಿ ಸೂರ್ಯ ಸಖತ್ ಮಿಂಚಿದ್ದರು. ಪೋಸ್ಟರ್ ಕಂಡು ಅಭಿಮಾನಿಗಳು ಫಿದಾ ಆಗಿದ್ದರು.  ಜೊತೆಗೆ ಈ ಸಿನಿಮಾವನ್ನು ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಜೊತೆಗೆ 3 ಡಿ ತಂತ್ರಜ್ಞಾನದಲ್ಲೂ ಈ ಸಿನಿಮಾವನ್ನು ನೋಡಬಹುದಾಗಿದೆ. ಸಿನಮಾ ಬಿಡುಗಡೆಗೂ ಮುನ್ನವೇ ಭರ್ಜರಿ ವ್ಯಾಪಾರ ಕೂಡ ಆರಂಭಿಸಿದೆ.  ಭಾರೀ ಮೊತ್ತಕ್ಕೆ ಓಟಿಟಿಗೆ ಸೇಲ್ ಆಗುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

  • ವರ್ಕೌಟ್ ಸಕ್ಸಸ್, ಸ್ಲಿಮ್ ಆದ ಮೋಹಕ ತಾರೆ ರಮ್ಯಾ

    ವರ್ಕೌಟ್ ಸಕ್ಸಸ್, ಸ್ಲಿಮ್ ಆದ ಮೋಹಕ ತಾರೆ ರಮ್ಯಾ

    ಮೋಹಕ ತಾರೆ ರಮ್ಯಾ (Ramya) ಮತ್ತೆ ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ. ಆ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ನೆಚ್ಚಿನ ತಾರೆಯ ವರ್ಕೌಟ್ (Workout) ವಿಡಿಯೋ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ರಮ್ಯಾ ಫಿಟ್ನೆಸ್ (Fitness)ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಸಿನಿಮಾ ರಂಗದಿಂದ ದೂರವಾಗಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು ರಮ್ಯಾ. ನಂತರ ಅಲ್ಲಿಂದನೂ ದೂರವಾಗಿ ಅಜ್ಞಾತವಾಸದಲ್ಲಿ ಇದ್ದರು. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದಿದ್ದಾರೆ. ಇದೀಗ ನಾಯಕಿಯಾಗಿಯೂ ಮತ್ತೆ ಕಮ್ ಬ್ಯಾಕ್ ಆಗಲಿದ್ದಾರೆ.

    ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಪ್ತಮಿ ಗೌಡ ಕೂಡ ನಟಿಸುತ್ತಿದ್ದಾರೆ. ಇದೇ ಸಿನಿಮಾಗಾಗಿಯೇ ರಮ್ಯಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆ ವಿಡಿಯೋವನ್ನು ಹಂಚಿಕೊಂಡು ತಮ್ಮ ತಯಾರಿಯನ್ನೂ ಸಾಬೀತು ಪಡಿಸಿದ್ದಾರೆ.

     

    ಅಂದುಕೊಂಡಂತೆ ಆಗಿದ್ದರೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ರಮ್ಯಾ ನಾಯಕಿಯಾಗಬೇಕಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಆ ಚಿತ್ರದಿಂದ ರಮ್ಯಾ ಹಿಂದೆ ಸರಿದರು. ಕೇವಲ ನಿರ್ಮಾಪಕಿಯಾಗಿ ಮುಂದುವರೆದರು.

  • ಅಪ್ಪು ಸ್ಟೈಲಿನಲ್ಲಿ ಅಶ್ವಿನಿ ಭರ್ಜರಿ ವರ್ಕೌಟ್

    ಅಪ್ಪು ಸ್ಟೈಲಿನಲ್ಲಿ ಅಶ್ವಿನಿ ಭರ್ಜರಿ ವರ್ಕೌಟ್

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಪತ್ನಿ ಅಶ್ವಿನಿ (Ashwini) ಅವರು ಇದೀಗ ಪುನೀತ್ ಹಾದಿಯಲ್ಲೇ ಹೆಜ್ಜೆ ಇಡುತ್ತಿದ್ದಾರೆ. ಅಪ್ಪು ಸ್ಟೈಲಿನಲ್ಲಿಯೇ ಜಿಮ್ ವರ್ಕೌಟ್ (Workout)  ಮಾಡುತ್ತಾ ಬೆವರಿಳಿಸುತ್ತಿದ್ದಾರೆ. ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    Ashwini Puneeth Rajkumar

    ಅಪ್ಪು (Appu) ಅಗಲಿಕೆ ನಂತರ ಮನೆಯ ಜವಾಬ್ದಾರಿಯನ್ನ ಅಶ್ವಿನಿ ಕೈಗೆತ್ತಿಕೊಂಡಿದ್ದಾರೆ. ಮುದ್ದು ಮಕ್ಕಳ ಪಾಲನೆಯ ಜೊತೆ ಪಿಆರ್‌ಕೆ ಸಂಸ್ಥೆಯನ್ನ ಮುನ್ನಡೆಸುತ್ತಿದ್ದಾರೆ. ಹೊಸ ಸಿನಿಮಾಗೆ(Film) ಬೆಂಬಲ(Support) ಸೂಚಿಸುವ ಮೂಲಕ ಚಿತ್ರರಂಗದಲ್ಲೂ ಆಕ್ಟೀವ್ ಆಗಿದ್ದಾರೆ.

    Appu wife Ashwini

    ಪುನೀತ್ ಅವರಿಗೆ ಜಿಮ್, ವರ್ಕೌಟ್ ಎಂದರೆ ತುಂಬಾ ಇಷ್ಟ. ಪ್ರತಿದಿನ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದರು. ಆದರೀಗ ಅಪ್ಪು ನೆನಪು ಮಾತ್ರ. ಆದರೆ ಅವರ ಪತ್ನಿ ಅಶ್ವಿನಿ ಈಗ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಪವರ್‌ಸ್ಟಾರ್ ಹಾಗೆ ಅಶ್ವಿನಿ ಕೂಡ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ. ಅಶ್ವಿನಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಶ್ವಿನಿ ಫಿಟ್ ಆಗಲು ವರ್ಕೌಟ್ ಪ್ರಾರಂಭಿಸಿದ್ದಾರೆ.

    ಇನ್ನೂ ತಮ್ಮ ಸಂಸ್ಥೆ ಪಿಆರ್‌ಕೆ (Prk Productions) ಕಡೆಯಿಂದ ಹೊಸ ಸಿನಿಮಾ ನಿರ್ಮಾಣದತ್ತ ಅಶ್ವಿನಿ ಬ್ಯುಸಿಯಾಗಿದ್ದಾರೆ. ಹೊಸ ಬಗೆಯ ಕಥೆಗಳನ್ನ ಅಶ್ವಿನಿ ಕೇಳುತ್ತಿದ್ದಾರೆ. ಅಪ್ಪು (Appu) ಕನಸಿನ (Dreams) ಹಾದಿಯಲ್ಲಿ ಪತ್ನಿ ಅಶ್ವಿನಿ ಸಾಗುತ್ತಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಕೊಡಗಿನ ಬೆಡಗಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಒಂದರ ಹಿಂದೆ ಒಂದು ಸಿನಿಮಾಗಳ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುತ್ತಲೇ ಇದ್ದಾರೆ. ಈ ಮಧ್ಯೆ ಅವರು ಫಿಟ್ನೆಸ್ ಕಡೆಗೂ ಹೆಚ್ಚು ಗಮನ ಕೊಡುತ್ತಾರೆ. ತಾವು ಜಿಮ್ ನಲ್ಲಿ ಕಳೆದ ಕ್ಷಣಗಳ ವೀಡಿಯೋ, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೂ ಆರೋಗ್ಯದ ಬಗ್ಗೆ ಟಿಪ್ಸ್ ಕೊಡುತ್ತಾರೆ.

    ರಶ್ಮಿಕಾ ಹೊಸದೊಂದು ವೀಡಿಯೋ ಹಾಕಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಶ್ಮಿಕಾ ವರ್ಕೌಟ್ ಮಾಡುವುದನ್ನು ನೋಡಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ನಟ, ನಟಿಯರಿಗೂ ಫಿಟ್ನೆಸ್ ತುಂಬಾ ಮುಖ್ಯ. ಬೇಸಿಗೆಯಲ್ಲಿ ಸಿನಿಮಂದಿ ಹೆಚ್ಚು ವರ್ಕೌಟ್ ಮಾಡುವುದು ಸಾಮಾನ್ಯ. ಅದೇ ರೀತಿ ರಶ್ಮಿಕಾ ಸಹ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೋ, ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ವೀಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಅಭಿಮಾನಿಗಳು 6 ಸಾವಿರಕ್ಕೂ ಹೆಚ್ಚು ಕಾಮೆಂಟ್ ಮಾಡಿದ್ದಾರೆ.

    ಈ ವೀಡಿಯೋಗೆ ರಶ್ಮಿಕಾ, ನಿಮಗೆ ಈ ವೀಡಿಯೋ ಇಷ್ಟವಾಗಿದ್ರೆ ಬೈಸೆಪ್ಸ್ ಇಮೋಜಿ ಕಳುಹಿಸಿ ಎಂದು ಬರೆದುಕೊಂಡಿದ್ದಾರೆ. ಕಳೆದ ಬಾರಿಯೂ ಈ ನಟಿ ವರ್ಕೌಟ್ ವೀಡಿಯೋ ಶೇರ್ ಮಾಡಿದ್ದರು. ಪ್ರಸ್ತುತ ಬಾಲಿವುಡ್, ಟಾಲಿವುಡ್ ಎಂದು ಬ್ಯುಸಿಯಾಗಿರುವ ಈ ನಟಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ಮಿಡಲ್ ಫಿಂಗರ್ ತೋರಿಸಿದ ಪೂನಂ: ಕೈಯನ್ನ ತುಂಡು ತುಂಡಾಗಿ ಕತ್ತರಿಸ್ತೀನಿ ಎಂದ ನಟ ಆಲಿ 

  • ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಲೇ ಕುಸಿದು ಮಹಿಳೆ ಸಾವು

    ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಲೇ ಕುಸಿದು ಮಹಿಳೆ ಸಾವು

    ಬೆಂಗಳೂರು: ಜಿಮ್‍ನಲ್ಲಿ ವರ್ಕೌಟ್‍ ಮಾಡುತ್ತಿರುವಾಗ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ.

    ವಿನಯಾಕುಮಾರಿ(44) ಜಿಮ್‍ನಲ್ಲಿ ಕುಸಿದು ಸಾವನ್ನಪ್ಪಿದ ಮಹಿಳೆ. ವಿನಯಾಕುಮಾರಿಗೆ ಮದುವೆ ಆಗಿರಲಿಲ್ಲ. ಜಿಮ್, ಡ್ಯಾನ್ಸ್ ಮಾಡ್ಕೊಂಡಿದ್ದರು. ಅವರು ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮಲ್ಲೇಶ್ ಪಾಳ್ಯದಲ್ಲಿರುವ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಕುಸಿದು ಬಿದ್ದಿದ್ದಾರೆ. ಇದನ್ನೂ ಓದಿ: ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ, ಸಿದ್ದರಾಮಯ್ಯ ಧೋರಣೆ- ಬಿಜೆಪಿ ತಿರುಗೇಟು

    ತಕ್ಷಣ ಅಲ್ಲಿದ್ದ ಸ್ಥಳೀಯರು ವಿನಯಾಕುಮಾರಿ ಅವರನ್ನು ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧಿಸಿ ಬೈಯ್ಯಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ – ಹೆಸರು ಬದಲಾಯಿಸುವಂತೆ ಕೊಲ್ಲೂರು ದೇವಾಲಯಕ್ಕೆ ಮನವಿ

  • ವರ್ಕೌಟ್‌ನಲ್ಲಿ ಬ್ಯುಸಿಯಾದ ವರದನಾಯಕನ ರಾಣಿ

    ವರ್ಕೌಟ್‌ನಲ್ಲಿ ಬ್ಯುಸಿಯಾದ ವರದನಾಯಕನ ರಾಣಿ

    ಚಂದನವನದ ಅಭಿನಯ ಚಕ್ರವರ್ತಿ ಸುದೀಪ್ ಜೊತೆ ನಟಿಸಿ ಕನ್ನಡಿಗರಿಗೆ ಪರಿಚಯವಾಗಿರುವ ಸಮೀರಾ ರೆಡ್ಡಿ ವರ್ಕೌಟ್ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
    ತಾಯಿಯಾದ ನಂತರ ಅವರು ಸಿನಿರಂಗದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರು. ಆದರೂ ತಮ್ಮ ಫಿಟ್‍ನೆಸ್‍ ಕಡೆ ಗಮನ ಕೊಡುವುದನ್ನು ಅವರು ಮರೆತಿಲ್ಲ. ಸಮೀರಾ ಫಿಟ್‍ನೆಸ್‍ಗಾಗಿ ವರ್ಕೌಟ್ ಮಾಡುತ್ತಿರುತ್ತಾರೆ.

    Romance Between Sudeep and Sameera Reddy | Kannada Junction - YouTube

    ಇಂದು ತಮ್ಮ ವರ್ಕೌಟ್ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಫಿಟ್ನೆಸ್ಗಾಗಿ ಆಸೆ ಪಡುವ ಎಲ್ಲ ತಾಯಂದಿರಿಗೆ ಈ ವೀಡಿಯೋ ಸ್ಫೂರ್ತಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ವೀಡಿಯೋದಲ್ಲಿ ಸಮೀರಾ ಜೋಶ್ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಇದನ್ನೂ ಓದಿ: ತೆಲುಗಿಗೆ ಎಂಟ್ರಿ ಕೊಟ್ಟ ಸಲಗನ ಸಂಗಾತಿ ಸಂಜನಾ 

     

    View this post on Instagram

     

    A post shared by Sameera Reddy (@reddysameera)

    ಸಮೀರಾ ರೆಡ್ಡಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಎರಡು ಮಕ್ಕಳ ತಾಯಿಯಾದರೂ ಫಿಟ್‍ನೆಸ್‍ಗೆ ಹೆಚ್ಚು ಒತ್ತು ನೀಡುವುದರಲ್ಲಿ ಎಲ್ಲರಿಗೂ ಸ್ಫೂರ್ತಿ ಆಗಿದ್ದಾರೆ. ಇನ್ಸ್ಟಾದಲ್ಲಿ ಈ ನಟಿ ತಮ್ಮ ವರ್ಕೌಟ್ ವೀಡಿಯೋ ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಸಮೀರಾ ಮಗಳ ಜೊತೆ ಆಟವಾಡಿಕೊಂಡೇ ವರ್ಕೌಟ್ ಹೇಗೆ ಮಾಡಬಹುದು ಎಂದು ಅಭಿಮಾನಿಗಳಿಗೆ ಹೇಳಿಕೊಟ್ಟಿದ್ದಾರೆ. ತಮ್ಮ ಮಗಳು ನೈರಾ ಜೊತೆ ಆಟವಾಡುವುದರ ಜೊತೆಗೆ ಏಕಕಾಲದಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ತಾಯಂದಿರಿಗೆ ಈ ರೀತಿಯ ಐಡಿಯಾ ಯೂಸ್ ಆಗುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    Weighed 105 kgs, even as I held my gorgeous son, didn't feel happy: Sameera Reddy on postpartum depression

    ವೀಡಿಯೋ ಪೊಸ್ಟ್ ಮಾಡಿದ ಅವರು, “ನಿಮ್ಮ ದೊಡ್ಡ ಬಂಡವಾಳ ನೀವೇ. ನಾನು ನನ್ನ ಆರೋಗ್ಯ, ದೇಹ, ಸಂತೋಷ, ಮನಸ್ಸನ್ನು ಹೂಡಿಕೆ ಮಾಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಿಮ್ಮ ಸಂತೋಷಕ್ಕೆ ನೀವೇ ಬಂಡವಾಳ ಅಂದರೆ ಕಾರಣರಾಗಬೇಕು ಎಂದು ಬರೆದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

  • ಪ್ರೆಗ್ನೆನ್ಸಿ ವೇಳೆ ಕಾಜಲ್ ಅಗರ್‌ವಾಲ್ ವರ್ಕೌಟ್ – ವೀಡಿಯೋ ವೈರಲ್

    ಪ್ರೆಗ್ನೆನ್ಸಿ ವೇಳೆ ಕಾಜಲ್ ಅಗರ್‌ವಾಲ್ ವರ್ಕೌಟ್ – ವೀಡಿಯೋ ವೈರಲ್

    ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್‌ವಾಲ್ ಫಿಟ್‍ನೆಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಏನೇ ಮಿಸ್ ಆದರೂ ಪ್ರತಿನಿತ್ಯ ವರ್ಕೌಟ್ ಮಾಡುವುದನ್ನು ಮಾತ್ರ ತಪ್ಪಿಸುವುದಿಲ್ಲ. ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾಜಲ್ ಗರ್ಭಿಣಿಯರು ಮಾಡುವಂತಹ ವ್ಯಾಯಾಮ ಮಾಡುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಕಾಜಲ್ ಅಗರ್‌ವಾಲ್ ಅವರು ಪ್ರೆಗ್ನೆನ್ಸಿ ವೇಳೆ ಪ್ರತಿನಿತ್ಯ ವರ್ಕೌಟ್ ಮಾಡುತ್ತಿರುವ ಪುಟ್ಟ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಕಾಜಲ್ ಲ್ಯಾವೆಂಡರ್-ಹ್ಯೂಡ್ ಸ್ಪೋಟ್ರ್ಸ್ ಬ್ರಾ ಧರಿಸಿ ಮತ್ತು ಲೂಸ್ ಜಾಕೆಟ್ ಧರಿಸಿ ವಿವಿಧ ರೀತಿಯಲ್ಲಿ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ಗರ್ಭಿಣಿಯರಿಗೆ ಏರೋಬಿಕ್ಸ್ ಮತ್ತು ವ್ಯಾಯಾಮ ಬಹಳ ಮುಖ್ಯ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್

    ನಾನು ಯಾವಾಗಲೂ ತುಂಬಾ ಆ್ಯಕ್ಟೀವ್ ಆಗಿರುತ್ತೇನೆ ಮತ್ತು ನನ್ನ ಇಡೀ ಜೀವನ ಕೆಲಸ ಮಾಡಿದ್ದೇನೆ. ಪ್ರೆಗ್ನೆನ್ಸಿ ವೇಳೆ ಯಾವುದೇ ಸಮಸ್ಯೆಗಳಿಲ್ಲದೆ ಇರಬೇಕೆಂದರೆ, ಎಲ್ಲಾ ಗರ್ಭಿಣಿಯರು ಆರೋಗ್ಯಕರವಾಗಿರಲು ಏರೋಬಿಕ್ ಮತ್ತು ಸ್ಟ್ರೆಂತ್ ಕಂಡೀಷನಿಂಗ್ ವ್ಯಾಯಾಮಗಳನ್ನು ಮಾಡಲು ಪ್ರೋತ್ಸಾಹಿಸಬೇಕು ಎಂದಿದ್ದಾರೆ.

    ಟ್ರೈನರ್ ನನ್ನ ಪ್ರೆಗ್ನೆನ್ಸಿ ವೇಳೆ ನನ್ನ ದೇಹ ಫಿಟ್ ಆಗಿರಲು ಸಹಾಯ ಮಾಡುತ್ತಿದ್ದಾರೆ. ಈ ವ್ಯಾಯಮಗಳು ನನಗೆ ಸ್ಟ್ರಾಂಗ್, ಲಾಂಗ್ ಮತ್ತು ತೆಳ್ಳಗಿರುವ ಫೀಲ್ ನೀಡುತ್ತಿದೆ. ಪ್ರೆಗ್ನೆನ್ಸಿ ವೇಳೆ ಏರೋಬಿಕ್ ನಮ್ಮ ದೇಹ ಫಿಟ್ ಆಗಿರಲು ಸಹಾಯವಾಗಿದೆ. ನಾವು ಕೂಡ ಫಿಟ್‍ನೆಸ್ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    2022ರ ಹೊಸ ವರ್ಷದಂದು, ಕಾಜಲ್ ಅಗರ್‌ವಾಲ್ ಮತ್ತು ಗೌತಮ್ ಕಿಚ್ಲು ಅಪ್ಪ-ಅಮ್ಮ ಆಗುತ್ತಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಅಲ್ಲದೇ ಇತ್ತೀಚೆಗಷ್ಟೆ ಸೀಮಂತ ಸಮಾರಂಭದ ಫೋಟೋವನ್ನು ಕಾಜಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

  • ವರ್ಕೌಟ್ ವೇಳೆ ವೃದ್ಧ ದಂಪತಿ ಕಿಸ್ಸಿಂಗ್ ವೀಡಿಯೋ ವೈರಲ್

    ವರ್ಕೌಟ್ ವೇಳೆ ವೃದ್ಧ ದಂಪತಿ ಕಿಸ್ಸಿಂಗ್ ವೀಡಿಯೋ ವೈರಲ್

    ರ್ಕೌಟ್ ವೇಳೆ ವೃದ್ಧ ದಂಪತಿ ಚುಂಬಿಸುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    old couple

    ಸಾಮಾನ್ಯವಾಗಿ ಜನರು ವಕೌರ್ಟ್ ಮಾಡುವುದಕ್ಕೆ ಹರಸಹಾಸ ಮಾಡುತ್ತಾರೆ. ಆದರೆ ಇಲ್ಲೋರ್ವ ವೃದ್ಧ ದಂಪತಿ ಪುಲ್-ಅಪ್ ಬಾರ್ ವ್ಯಾಯಾಮ ಮಾಡುತ್ತಿರುವುದರ ಜೊತೆಗೆ ಕಿಸ್ ಮಾಡಿದ್ದಾರೆ. ಇನ್ನೂ ಈ ವೀಡಿಯೋವನ್ನು ಗುಡ್ ನ್ಯೂಸ್ ಮೂವ್‍ಮೆಂಟ್ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಇಲ್ಲಿಯವರೆಗೂ ಸುಮಾರು 1.4 ಮಿಲಿಯನ್‍ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ

    ವೀಡಿಯೋದಲ್ಲಿ ವೃದ್ಧ ದಂಪತಿ ಸಖತ್ ಬ್ಯಾಲೆನ್ಸಿಂಗ್ ಆಗಿ ಪುಲ್ ಅಪ್ ಮಾಡುತ್ತಾ ಒಬ್ಬರಿಗೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಚುಂಬಿಸುತ್ತಿರುವುದನ್ನು ನೋಡಬಹುದಾಗಿದೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ಒಟ್ಟಿಗೆ ವರ್ಕೌಟ್ ಮಾಡುವ ದಂಪತಿ ಸದಾ ಒಟ್ಟಿಗೆ ಇರುತ್ತಾರೆ ಎಂದು ಬರೆಯಲಾಗಿದೆ. ಇನ್ನೂ ಈ ವೀಡಿಯೋ ನೋಡಿ ನೆಟ್ಟಿಗರು ವೃದ್ಧ ದಂಪತಿಗಳ ಪ್ರೀತಿಗೆ ಫಿದಾ ಆಗಿದ್ದು, ಕೆಲವರು ಇಬ್ಬರ ನಡುವಿನ ಭಾಂದವ್ಯವನ್ನು ಮೆಚ್ಚಿದರೆ, ಇನ್ನೂ ಕೆಲವರು ಅವರ ಶಕ್ತಿಯನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ರಾಮನಗರದಿಂದ ಮಾಜಿ ಸಿಎಂ ಹರೀಶ್ ರಾವತ್ ಕಣಕ್ಕೆ

  • 68ರ ಹರೆಯದಲ್ಲಿ ಹೃತಿಕ್ ತಾಯಿಯ ವರ್ಕೌಟ್ – ವೀಡಿಯೋ ವೈರಲ್

    68ರ ಹರೆಯದಲ್ಲಿ ಹೃತಿಕ್ ತಾಯಿಯ ವರ್ಕೌಟ್ – ವೀಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ತಮ್ಮ ತಾಯಿ ಪಿಂಕಿ ಅವರ ವರ್ಕೌಟ್ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಹೃತಿಕ್ ರೋಷನ್ ಅವರು ತಮ್ಮ 68 ವರ್ಷದ ತಾಯಿ ಫಾರ್ಮ್‍ಹೌಸ್‍ನಲ್ಲಿ ಕಷ್ಟಕರವಾದ ವ್ಯಾಯಾಮಾಗಳನ್ನು ಮಾಡಲು ಪ್ರಯತ್ನಿಸುತ್ತಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ 68ನೇ ವಯಸ್ಸಿನಲ್ಲಿಯೂ ಅವರು ಫಿಟ್‍ನೆಸ್ ಹಾಗೂ ಆರೋಗ್ಯಕ್ಕಾಗಿ ಎಲ್ಲವನ್ನು ಮಾಡುತ್ತಿರುವುದನ್ನು ನೋಡಿದರೆ, ನಾವು ಕೂಡ ಇದನ್ನು ಮುಂದುವರೆಸಿದರೆ ಆರೋಗ್ಯವಾಗಿರುವುದರಲ್ಲಿ ಅನುಮಾನವೇ ಇಲ್ಲ. ಅವರು ಜಿಮ್‍ಗೆ ಹೋಗಿ ವ್ಯಾಯಾಮ ಮಾಡಲು ಎಷ್ಟು ಕಷ್ಟಪಡುತ್ತಾರೆ ಎಂದು ನನಗೆ ತಿಳಿದಿದೆ. ಆದರೂ ಎಚ್ಚರಿಕೆಯಿಂದ ವ್ಯಾಯಾಮ ಮಾಡುತ್ತಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಈ ವೀಡಿಯೋವನ್ನು ಶೇರ್ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳು. ನಮಗೆ ಬೆಂಬಲ ಹಾಗೂ ಪ್ರೀತಿ ನೀಡುತ್ತಿರುವ, ನಮಗಾಗಿ ಪ್ರಾರ್ಥಿಸುತ್ತಿರುವ ಸ್ನೇಹಿತರು ಮತ್ತು ಕುಟುಂಬದವರಿಗೆ ನನ್ನ ಪ್ರೀತಿಯ ಧನ್ಯವಾದಗಳು. ಇದನ್ನೂ ಓದಿ: ಮಗನ ಬಂಧನದ ಬಳಿಕ ಜೊತೆಯಾಗಿ ಕಾಣಿಸಿಕೊಂಡ ಶಾರೂಖ್ ದಂಪತಿ

     

    View this post on Instagram

     

    A post shared by Hrithik Roshan (@hrithikroshan)

    ನನ್ನ ತಾಯಿ 58ನೇ ವಯಸ್ಸಿನಲ್ಲಿ ವರ್ಕೌಟ್ ಆರಂಭಿಸಿದರು. ಬೇರೆ ಪೋಷಕರು ವ್ಯಾಯಾಮ ಮಾಡುವ ವಯಸ್ಸು ಮೀರಿದೆ ಎಂದು ಭಾವಿಸುತ್ತಾರೆ. ಅಂತವರಿಗೆ ವ್ಯಾಯಾಮ ಮಾಡಲು ಎಂದಿಗೂ ತಡವಾಗಿಲ್ಲ ಎಂದು ಹೇಳುತ್ತೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Hrithik Roshan (@hrithikroshan)

    ಸದ್ಯ ಹೃತಿಕ್ ರೋಷನ್ ಅವರು ವಿಕ್ರಮ್ ವೇದ ಹಿಂದಿ ರಿಮೇಕ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಹೃತಿಕ್ ರೋಷನ್ ಹಾಗೂ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ವಿಕ್ರಂ ವೇದ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಪುಷ್ಕರ್ ಮತ್ತು ಗಾಯತ್ರಿ ಅವರೇ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಮಂಗಳಸೂತ್ರ ಧರಿಸಿದಾಗ ಆದ ಅನುಭವ ಹಂಚಿಕೊಂಡ ಪ್ರಿಯಾಂಕಾ

     

  • ನಾನು ಸ್ವಲ್ಪ ಸೈಕೊ- ರಶ್ಮಿಕಾ ಮಂದಣ್ಣ

    ನಾನು ಸ್ವಲ್ಪ ಸೈಕೊ- ರಶ್ಮಿಕಾ ಮಂದಣ್ಣ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಅವರು ಒಂದಲ್ಲಾ ಒಂದು ವಿಚಾರವಾಗಿ ಸಖತ್ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗೆ ನೀಡಿರುವ ಕ್ಯಾಪ್ಷನ್‌ ಅಭಿಮಾನಿಗಳ ತಲೆಯಲ್ಲಿ ಹುಳು ಬಿಟ್ಟಂತಾಗಿದೆ.

    ನಾನು ಜಿಮ್‍ನಲ್ಲಿಯೇ ಜೀವಿಸುವ ಸೈಕೊ ಅಂತ ಸಾಬೀತಾಯ್ತು ಎಂದು ಅವರು ಕ್ಯಾಪ್ಷನ್ ನೀಡಿದ್ದು, ಜಿಮ್‍ನಲ್ಲಿ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ರಶ್ಮಿಕಾ ಅವರ ಫೋಟೋಕ್ಕಿಂತ ಅವರು ನೀಡಿರುವ ಕ್ಯಾಪ್ಷನ್ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ನೀವು ಸಖತ್ ಕ್ಯೂಟ್ ಆಗಿದ್ದೀರ ಎಂದೆಲ್ಲಾ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ:  ಮಿಸ್ ಬಿಕಿನಿ ಇಂಡಿಯಾ ಅರ್ಚನಾ ಕಾಂಗ್ರೆಸ್‍ನಿಂದ ಚುನಾವಣಾ ಅಭ್ಯರ್ಥಿ- ರಾಜಕೀಯಕ್ಕೆ ನನ್ನ ವೃತ್ತಿ ಬೆಸೆಯಬೇಡಿ

    ಪುಷ್ಪ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಸದ್ಯಕ್ಕಂತೂ ಬಹುಬೇಡಿಕೆಯ ನಟಿಯರ ಸಾಲಿನಲ್ಲಿ ರಶ್ಮಿಕಾ ಕೂಡಾ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಫಿಟ್ನೆಸ್ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾರೆ. ಸಮಯ ಸಿಕ್ಕಾಗಲೆಲ್ಲ ಜಿಮ್‍ನಲ್ಲಿ ಕಸರತ್ತು ನಡೆಸುತ್ತಾರೆ. ಆ ಕಾರಣದಿಂದಲೇ ಅವರು ಈ ರೀತಿ ಕ್ಯಾಪ್ಷನ್ ನೀಡಿದ್ದಾರೆ. ಇದನ್ನೂ ಓದಿ: ಸಂಕ್ರಾಂತಿಗೆ ಅಮೂಲ್ಯ ಮನೆಗೆ ಗಂಗೆ, ದ್ರೌಪದಿ ಆಗಮನ

    ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವರ್ಕೌಟ್ ವೀಡಿಯೋಗಳನ್ನು ರಶ್ಮಿಕಾ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೇ ಈ ಬಾರಿಯೂ ವೀಕೆಂಡ್‍ನ್ನು ಜಿಮ್‍ನಲ್ಲಿ ಕಳೆದಿದ್ದಾರೆ. ರಶ್ಮಿಕಾ ಅವರು ಶೇ. 50 ರಷ್ಟು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಪುಷ್ಪ ಸಿನಿಮಾದ ಸಕ್ಸಸ್ ನಂತರ ಅವರಿಗೆ ಸಾಕಷ್ಟು ಸಿನಿಮಾಗಳ ಆಫರ್ ಬರುತ್ತಿವೆ.