Tag: ವರುಣ್ ಸಿಂಗ್

  • ಕುಟುಂಬದವರೊಂದಿಗೆ ಶೌರ್ಯ ಚಕ್ರ ಪ್ರಶಸ್ತಿ ಸಂಭ್ರಮಾಚರಿಸಿಕೊಳ್ಳಲು ಬಯಸಿದ್ರು ವರುಣ್‌ ಸಿಂಗ್‌!

    ಕುಟುಂಬದವರೊಂದಿಗೆ ಶೌರ್ಯ ಚಕ್ರ ಪ್ರಶಸ್ತಿ ಸಂಭ್ರಮಾಚರಿಸಿಕೊಳ್ಳಲು ಬಯಸಿದ್ರು ವರುಣ್‌ ಸಿಂಗ್‌!

    ನವದೆಹಲಿ: ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದ ಐಎಎಫ್‌ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರು, ತಾವು ಶೌರ್ಯ ಚಕ್ರ ಪ್ರಶಸ್ತಿ ಪಡೆದ ಸಂಭ್ರಮವನ್ನು ಇಂದೋರ್‌ನಲ್ಲಿ ಪತ್ನಿಯ ಕುಟುಂಬದವರೊಂದಿಗೆ ಆಚರಿಸಿಕೊಳ್ಳಲು ಬಯಸಿದ್ದರಂತೆ.

    ಇದೇ ಡಿಸೆಂಬರ್‌ ತಿಂಗಳ ಕೊನೆಯ ವಾರದಲ್ಲಿ ವರುಣ್‌ ಸಿಂಗ್‌ ಅವರು, ಇಂದೋರ್‌ನಲ್ಲಿರುವ ಪತ್ನಿ ಗೀತಾಂಜಲಿ ಅವರ ಪೋಷಕರ ಮನೆಗೆ ತೆರಳಿ ಸಂಭ್ರಮ ಕೂಟವನ್ನು ಏರ್ಪಡಿಸಲು ನಿರ್ಧರಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಶೌರ್ಯ, ಶೌರ್ಯೇತರ ಪ್ರಶಸ್ತಿ ಪಡೆದ ಯೋಧರ ಅನುದಾನ ಹೆಚ್ಚಳಕ್ಕೆ ಸಿಎಂ ಅಸ್ತು

    ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಈ ವರ್ಷದ ಸ್ವಾತಂತ್ರ್ಯ ದಿನದಂದು, 2020 ರಲ್ಲಿ ವೈಮಾನಿಕ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್‍ಸಿಎ ತೇಜಸ್ ಯುದ್ಧ ವಿಮಾನವನ್ನು ಸಮರ್ಥವಾಗಿ ಲ್ಯಾಂಡಿಂಗ್ ಮಾಡಿ ಅದರಲ್ಲಿದ್ದ ಯೋಧರ ಪ್ರಾಣ ಉಳಿಸಿದಕ್ಕಾಗಿ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು. ಲೈಟ್ ಕಾಂಬ್ಯಾಟ್ ಏರ್‍ಕ್ರಾಫ್ಟ್ ಸ್ಕ್ವಾಡ್ರನ್‍ನಲ್ಲಿ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ವರುಣ್ ಸಿಂಗ್, ಅವರ ಅಸಾಧಾರಣ ಶೌರ್ಯಕ್ಕಾಗಿ ಭಾರತದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ಈ ವರ್ಷದ ಆಗಸ್ಟ್ 15 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೀಡಿ ಗೌರವಿಸಿದ್ದರು.

    ಈ ಸಂಭ್ರಮವನ್ನು ತನ್ನ ಪತ್ನಿಯೊಂದಿಗೆ ಅವರ ಪೋಷಕರ ಮನೆಗೆ ತೆರಳಿ ಆಚರಿಸಿಕೊಳ್ಳಲು ವರುಣ್‌ ಸಿಂಗ್‌ ನಿರ್ಧರಿಸಿದ್ದರು. ಆದರೆ ಡಿಸೆಂಬರ್‌ 8ರಂದು ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ವರುಣ್‌ ಸಿಂಗ್‌ ಗಂಭೀರ ಗಾಯಗೊಂಡು ಬೆಂಗಳೂರಿನ ಕಮಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ನಿಧನರಾದರು. ಇದನ್ನೂ ಓದಿ: ಕುಲ್ಗಾಮ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

    ವರುಣ್‌ ಸಿಂಗ್‌ 2008ರಲ್ಲಿ ಗೀತಾಂಜಲಿ ಅವರೊಂದಿಗೆ ವಿವಾಹವಾದರು. ಇವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.

  • ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ನಿಧನ

    ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ನಿಧನ

    ಬೆಂಗಳೂರು: ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಸೇನಾಧಿಕಾರಿ, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬೆಂಗಳೂರಿನ ಕಮಾಂಡ್‌ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ ನಿಧನರಾದರು.

    ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ದಂಡನಾಯಕರಾದ ಬಿಪಿನ್ ರಾವತ್ ಸೇರಿ 13 ಮಂದಿ ಮೃತಪಟ್ಟಿದ್ದರು. ಆದರೆ ಇದೇ ತಂಡದಲ್ಲಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ತೀವ್ರ ಗಾಯಗೊಂಡು ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಅವರನ್ನು ಬೆಂಗಳೂರಿನ ಕಮಾಂಡ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಜೀವನ್ಮರಣ ಹೋರಾಟ ನಡೆಸುತ್ತಿರುವ ವರುಣ್ ಸಿಂಗ್ ಬರೆದಿದ್ದ ಸ್ಫೂರ್ತಿದಾಯಕ ಪತ್ರ ವೈರಲ್

    ವರುಣ್ ಸಿಂಗ್ 95% ಕ್ಕೂ ಹೆಚ್ಚು ಸುಟ್ಟ ಗಾಯಗಳೊಂದಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವರುಣ್ ಸಿಂಗ್ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ‌ ಏರ್‌ಲಿಫ್ಟ್ ಮೂಲಕ ಅವರನ್ನು ಕರೆ ತರಲಾಗಿತ್ತು.

    ವರುಣ್‌ ಸಿಂಗ್‌ ಅವರ ನಿಧನಕ್ಕೆ ಭಾರತೀಯ ವಾಯುಪಡೆ ತೀವ್ರ ಸಂತಾಪ ಸೂಚಿಸಿದೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ – ಕ್ಯಾಪ್ಟನ್ ವರುಣ್ ಸಿಂಗ್‌ಗೆ ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ

    ಶೌರ್ಯ ಚಕ್ರ
    ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಈ ವರ್ಷದ ಸ್ವಾತಂತ್ರ್ಯ ದಿನದಂದು 2020 ರಲ್ಲಿ ವೈಮಾನಿಕ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್‍ಸಿಎ ತೇಜಸ್ ಯುದ್ಧ ವಿಮಾನವನ್ನು ಸಮರ್ಥವಾಗಿ ಲ್ಯಾಂಡಿಂಗ್ ಮಾಡಿ ಅದರಲ್ಲಿದ್ದ ಯೋಧರ ಪ್ರಾಣ ಉಳಿಸಿದಕ್ಕಾಗಿ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು. ಲೈಟ್ ಕಾಂಬ್ಯಾಟ್ ಏರ್‍ಕ್ರಾಫ್ಟ್ ಸ್ಕ್ವಾಡ್ರನ್‍ನಲ್ಲಿ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ವರುಣ್ ಸಿಂಗ್, ಅವರ ಅಸಾಧಾರಣ ಶೌರ್ಯಕ್ಕಾಗಿ ಭಾರತದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ಈ ವರ್ಷದ ಆಗಸ್ಟ್ 15 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೀಡಿ ಗೌರವಿಸಿದ್ದರು.

  • ಭಾರತ ನೋವಲ್ಲಿದೆ ಆದರೆ ಅಭಿವೃದ್ಧಿ ಕಾರ್ಯಗಳು ನಿಲ್ಲಲ್ಲ: ಮೋದಿ

    ಭಾರತ ನೋವಲ್ಲಿದೆ ಆದರೆ ಅಭಿವೃದ್ಧಿ ಕಾರ್ಯಗಳು ನಿಲ್ಲಲ್ಲ: ಮೋದಿ

    ಲಕ್ನೋ: ಉತ್ತರ ಪ್ರದೇಶದಲ್ಲಿ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಿ ಪ್ರಧಾನಿ ನರೇಂದ್ರ ಮೋದಿ, ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಹುತಾತ್ಮ ಯೋಧರನ್ನು ಸ್ಮರಿಸಿದ್ದಾರೆ. ಬಿಪಿನ್ ರಾವತ್ ಎಂದಿಗೂ ನಮ್ಮ ಮನಸ್ಸಿನಲ್ಲಿ ಇರುತ್ತಾರೆ. ಬದುಕುಳಿದಿರುವ ವರುಣ್ ಸಿಂಗ್ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಭಾರತ ನೋವಲ್ಲಿದೆ ಆದರೆ ಅಭಿವೃದ್ಧಿ ಕಾರ್ಯಗಳು ನಿಲ್ಲಲ್ಲ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

    ಉತ್ತರ ಪ್ರದೇಶ ಚುನಾವಣೆ ಸನಿಹದಲ್ಲಿ ಮೋದಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡೋದನ್ನು ಮುಂದುವರೆಸಿದ್ದಾರೆ. 4 ದಶಕಗಳಿಂದ ಆಮೆ ಗತಿಯಲ್ಲಿ ಸಾಗುತ್ತಿದ್ದ ಅತಿದೊಡ್ಡ ಸರಯೂ ನಹರ್ ರಾಷ್ಟ್ರೀಯ ಯೋಜನೆಗೆ ಪ್ರಧಾನಿ ಚಾಲನೆ ನೀಡಿದ್ದಾರೆ. ಬಲರಾಮ್‍ಪುರದಲ್ಲಿ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಅತಿ ದೊಡ್ಡ ನಾಲಾ ಯೋಜನೆಯನ್ನು ಮೋದಿ ಲೋಕಾರ್ಪಣೆ ಮಾಡಿದರು.
    ಸುಮಾರು 9,802 ಕೋಟಿ ವೆಚ್ಚದ ಈ ಯೋಜನೆಯಿಂದ ಉತ್ತರ ಪ್ರದೇಶದ 20-30 ಲಕ್ಷ ಮಂದಿ ರೈತರಿಗೆ ಅನುಕೂಲವಾಗಲಿದೆ. ಘಾರ್ಗ, ಸರಯೂ, ರಾಫ್ತಿ, ಬಗಂಗಾ ಸೇರಿ 5 ನದಿಗಳ ಜೋಡಣೆ ಯೋಜನೆ ಇದಾಗಿದೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕೇರಳದ ಖ್ಯಾತ ಸಿನಿಮಾ ನಿರ್ದೇಶಕ ಅಲಿ ಅಕ್ಬರ್

    ಉತ್ತರ ಪ್ರದೇಶದ ಬಲರಾಮ್ ಪುರದಲ್ಲಿಂದು ಸರಯೂ ನಹರ್ ರಾಷ್ಟ್ರೀಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ವರುಣ್ ಸಿಂಗ್ ಅವರ ಜೀವ ಉಳಿಸಲು ಪತೇಶ್ವರಿ ದೇವಿಯಲ್ಲಿ ಪ್ರಾರ್ಥಿಸುತ್ತೇನೆ. ಇಡೀ ದೇಶ ವರುಣ್ ಸಿಂಗ್ ಕುಟುಂಬ ಮತ್ತು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ವೀರ ಯೋಧರ ಕುಟುಂಬದೊಂದಿಗೆ ಇದೆ. ದೇಶವನ್ನು ಮತ್ತಷ್ಟು ಬಲಿಷ್ಠವನ್ನಾಗಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲೆ ಇದೆ. ದೇಶ ದುಃಖದಲ್ಲಿದೆ ಆದರೆ ಈ ನೋವಿನ ನಡುವೆ ನಮ್ಮ ಅಭಿವೃದ್ಧಿ ಕಾರ್ಯ ನಿಲ್ಲಲ್ಲ. ಭಾರತೀಯರಾದ ನಾವು ದಕ್ಷತೆಯಿಂದ ಕೆಲಸ ಮಾಡಬೇಕು ಮತ್ತು ದೇಶದ ಒಳಗೆ ಹಾಗೂ ಹೊರಗಿನ ಪ್ರತಿಯೊಂದು ಸವಾಲನ್ನು ಮೆಟ್ಟಿನಿಲ್ಲಬೇಕು. ಸಿಡಿಎಸ್ ಬಿಪಿನ್ ರಾವತ್ ಮುಂದಿನ ಜನ್ಮದಲ್ಲಿ ಬಂದರೆ, ಹೊಸ ಸುಧಾರಣೆಯೊಂದಿಗೆ ದೇಶ ಮುನ್ನಡೆಯುತ್ತಿರುವುದನ್ನು ಅವರು ನೋಡಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಪತಿಗೆ ಡೈವೋರ್ಸ್ ಕೊಡು, ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸ್ತೀನಿ – ನೂರ್ ಜಹಾನ್ ಅರೆಸ್ಟ್

     

     

  • ಜೀವನ್ಮರಣ ಹೋರಾಟ ನಡೆಸುತ್ತಿರುವ ವರುಣ್ ಸಿಂಗ್ ಬರೆದಿದ್ದ ಸ್ಫೂರ್ತಿದಾಯಕ ಪತ್ರ ವೈರಲ್

    ಜೀವನ್ಮರಣ ಹೋರಾಟ ನಡೆಸುತ್ತಿರುವ ವರುಣ್ ಸಿಂಗ್ ಬರೆದಿದ್ದ ಸ್ಫೂರ್ತಿದಾಯಕ ಪತ್ರ ವೈರಲ್

    ನವದೆಹಲಿ: ತಮಿಳುನಾಡಿನ ಕೂನೂರು ಬಳಿಕಯ ಅರಣ್ಯ ಪ್ರದೇಶದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಏಕೈಕ ಸೇನಾಧಿಕಾರಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಈ ವರ್ಷ 2021ರ ಸೆಪ್ಟೆಂಬರ್‌ನಲ್ಲಿ ಈ ಹಿಂದೆ ತಾವು ಓದಿದ ಹರಿಯಾಣದ ಚಂಡೀಮಂದಿರ್ ಆರ್ಮಿ ಸ್ಕೂಲ್‍ನ ಪ್ರಾಂಶುಪಾಲರಿಗೆ ಪತ್ರವೊಂದನ್ನು ಬರೆದಿದ್ದರು. ಮಕ್ಕಳನ್ನು ಉದ್ದೇಶಿಸಿ ವರುಣ್ ಸಿಂಗ್ ಬರೆದಿದ್ದ ಪತ್ರ, ಎಂಥವರಿಗೂ ಸ್ಫೂರ್ತಿ ತುಂಬುವಂತಿದೆ.

    ಪತ್ರದಲ್ಲಿ ಏನಿದೆ?:

    ನಮಸ್ಕಾರ ಮೇಡಂ,
    ಈ ಹೈಪರ್ ಕಾಂಪಿಟೇಟೀವ್ ಪ್ರಪಂಚದಲ್ಲಿ ಮುಂದುವರೆಯುವ ಸಲುವಾಗಿ ಓದಿನಲ್ಲಿ, ಕ್ರೀಡೆಯಲ್ಲಿ ಸಾಮಾನ್ಯರಾಗಿರುವ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಬಹುದು ಎಂದು ನಾನು ಭಾವಿಸಿರುವೆ. ಅದಕ್ಕಾಗಿಯೇ ನಾನು ನನ್ನ ಜೀವನದ ಆಲೋಚನೆಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುವೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ – ಕ್ಯಾಪ್ಟನ್ ವರುಣ್ ಸಿಂಗ್‌ಗೆ ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ

    ನಾನು 12ನೇ ತರಗತಿಯಲ್ಲಿ ಇದ್ದಾಗ ಓದು, ಕ್ರೀಡೆಯಲ್ಲಿ average student. ಆದರೆ, ನನಗೆ ವಿಮಾನಯಾನದ ಬಗ್ಗೆ ಅಪರಿಮಿತ ಆಸಕ್ತಿ ಇತ್ತು. ಅದೇ ನನ್ನನ್ನು ಈ ಮಟ್ಟಕ್ಕೆ ತಂದಿದೆ. ನೀವೀಗ ಸಾಮಾನ್ಯ ವಿದ್ಯಾರ್ಥಿ ಆಗಿರಬಹುದು. ಆದರೆ, ಭವಿಷ್ಯದ ಜೀವನ ಇದೇ ರೀತಿ ಇರಲ್ಲ. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಒಂದೇ ರೀತಿ ಇರುವುದಿಲ್ಲ. ಎಲ್ಲರೂ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆಯಲು ಸಾಧ್ಯವಿಲ್ಲ. ನೀವು ಓದುವುದರಲ್ಲಿ, ಕ್ರೀಡೆಯಲ್ಲಿ ಸಾಮಾನ್ಯ ವಿದ್ಯಾರ್ಥಿ ಆಗಿದ್ದರೂ ಪರವಾಗಿಲ್ಲ. ನಿಮ್ಮನ್ನು ನೀವು ಕೀಳರಿಮೆಯಿಂದ ನೋಡಿಕೊಳ್ಳಬೇಡಿ. ಎಂದಿಗೂ ನಂಬಿಕೆ, ಭರವಸೆಗಳನ್ನು ಕಳೆದುಕೊಳ್ಳಬೇಡಿ.

    ಜೀವನದಲ್ಲಿ ಯಾವುದೂ ಸಲಭವಾಗಿ ಸಿಗುವುದಿಲ್ಲ. ಪ್ರಯತ್ನ ಮಾಡಲೇಬೇಕು, ಅದಕ್ಕೆ ಸಮಯ ಮತ್ತು ಪ್ರಯತ್ನದ ತ್ಯಾಗ ಬೇಕು. ಯಾವತ್ತೂ ಯಾವುದೂ ನಿಮ್ಮಿಂದ ಅಸಾಧ್ಯ ಎಂದು ಭಾವಿಸಬೇಡಿ. ಆದರೆ, ಅದು ಸಾಧ್ಯವಾಗದಿದ್ದರೇ ಬೇಸರಿಸಿಕೊಳ್ಳದಿರಿ. ಬದುಕಿನಲ್ಲಿ ಇದೊಂದೇ ಮುಖ್ಯವಾಗಿರುವುದಿಲ್ಲ. ನೀವೆಲ್ಲರೂ ನಿಮ್ಮ ಮನಸ್ಸಿನ ಮಾತನ್ನು ಕೇಳಿ. ನೀವು ಯಾವುದೇ ಒಂದು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು. ಅದು ಕಲೆ ಆಗಿರಬಹುದು, ಸಂಗೀತವಾಗಿರಬಹುದು, ಗ್ರಾಫಿಕ್ಸ್ ವಿನ್ಯಾಸವಾಗಿರಬಹುದು, ಸಾಹಿತ್ಯವಾಗಿರಬಹುದು ನೀವು ಮಾಡುವ ಯಾವುದೇ ಕೆಲಸದಲ್ಲಿ ಸಾರ್ಥಕ ಭಾವ ಇರಲಿ. ನಿಮ್ಮ ಕೈಲಾಗಿದ್ದನ್ನು ಮಾಡಿ. ಏನಾದರೂ ಮಾಡಲು ಹೊರಟಾಗ ನಿಮ್ಮ ಕೈಯಲ್ಲಿ ಆಗುತ್ತಿಲ್ಲ ಎಂದು ಹಿಂದೆ ಸರಿಯಬೇಡಿ. ಸದಾ ಜಾಗೃತರಾಗಿರಿ. ಪ್ರಯತ್ನ ಚಿಂತನೆಗೆ ದೂಡುವಂತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್

    ನಿನ್ನೆ ವರುಣ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಿಂದ ಏರ್‌ಲಿಫ್ಟ್ ಮೂಲಕ ಬೆಂಗಳೂರಿನ ಏರ್‌ಫೋರ್ಸ್ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವರುಣ್ ಸಿಂಗ್ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ ಬಗ್ಗೆ ಊಹಾಪೋಹ ನಿಲ್ಲಿಸಿ: ಐಎಎಫ್

  • ಹೆಲಿಕಾಪ್ಟರ್ ದುರಂತ –  ಕ್ಯಾಪ್ಟನ್ ವರುಣ್ ಸಿಂಗ್‌ಗೆ ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ

    ಹೆಲಿಕಾಪ್ಟರ್ ದುರಂತ – ಕ್ಯಾಪ್ಟನ್ ವರುಣ್ ಸಿಂಗ್‌ಗೆ ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ

    ಬೆಂಗಳೂರು: ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಏಕೈಕ ಸೇನಾಧಿಕಾರಿ, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ತೀವ್ರ ಗಾಯಗಳೊಂದಿಗೆ ವೆಲ್ಲಿಂಗ್ಟನ್‍ನ ಸೇನಾಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದೀಗ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗುತ್ತಿದೆ.

    ನಿನ್ನೆ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ದಂಡನಾಯಕರಾದ ಬಿಪಿನ್ ರಾವತ್ ಸೇರಿ 13 ಮಂದಿ ಮೃತಪಟ್ಟಿದ್ದರು. ಆದರೆ ಇದೇ ತಂಡದಲ್ಲಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ತೀವ್ರ ಗಾಯಗೊಂಡು ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವರುಣ್ ಸಿಂಗ್ 95% ಕ್ಕೂ ಹೆಚ್ಚು ಸುಟ್ಟ ಗಾಯಗಳೊಂದಿಗೆ ಸದ್ಯ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರುಣ್ ಸಿಂಗ್ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಆದರೂ ಅವರ ಆರೋಗ್ಯ ಸ್ಥಿರವಾಗಿದೆ. ಅವರನ್ನು ಪಾಡಿಕೊಳ್ಳಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಗತ್ಯಬಿದ್ದರೇ ಹೆಚ್ಚಿನ ಚಿಕಿತ್ಸೆಗಾಗಿ ವರುಣ್ ಸಿಂಗ್‍ರನ್ನು ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲು ಕೂಡ ಸೇನೆ ಚಿಂತನೆ ನಡೆಸಿದೆ ಎಂದು ಸಂಸತ್ತಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ಹಂಚಿಕೊಂಡಿದ್ದರು. ಇದೀಗ ವರುಣ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ‌ ಏರ್‌ಲಿಫ್ಟ್ ಮೂಲಕ ಕರೆತರಲಾಗುತ್ತಿದೆ. ಇದನ್ನೂ ಓದಿ: ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್‌ ಅಪಘಾತ!

    ವರುಣ್ ಸಿಂಗ್ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವರುಣ್ ಸಿಂಗ್ ಅವರ ಪಕ್ಕದ ಮನೆಯಲ್ಲೇ ವಾಸವಾಗಿರುವ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಇಶಾನ್, ಘಟನೆ ನಡೆದಾಗ ವರುಣ್ ಸಿಂಗ್ ತಂದೆ ಕೆ.ಪಿ.ಸಿಂಗ್ ಮತ್ತು ಅವರ ಪತ್ನಿ ಇಬ್ಬರೂ ಮುಂಬೈನಲ್ಲಿ ತಮ್ಮ ಕಿರಿಯ ಮಗ ತನುಜ್ ಮನೆಯಲ್ಲಿ ಇದ್ದರು. ತನುಜ್ ಕೂಡ ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ದೂರವಾಣಿ ಮೂಲಕ ಕೆ.ಪಿ.ಸಿಂಗ್ ಬಳಿ ಮಾತನಾಡಿದ್ದೇನೆ. ಕೆ.ಪಿ.ಸಿಂಗ್ ಅವರಿಗೆ ವರುಣ್ ಸಿಂಗ್ ಬಗ್ಗೆ ಹೆಮ್ಮೆಯಿದೆ. ಆತ ಫೈಟರ್, ಜೀವನ್ಮರಣದ ಹೋರಾಟದಲ್ಲೂ ಗೆದ್ದು ಬರುತ್ತಾನೆ ಎಂಬ ನಂಬಿಕೆಯಿದೆ ಎಂದು ಅವರು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕೆ.ಪಿ. ಸಿಂಗ್ ಕೂಡ ನಿವೃತ್ತ ಕರ್ನಲ್ ಆಗಿದ್ದು ತಮ್ಮ ಮಗ ಮತ್ತೆ ಬರುತ್ತಾನೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್

    ಶೌರ್ಯ ಚಕ್ರ
    14 ಮಂದಿಯಲ್ಲಿ ಬದುಕುಳಿದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಈ ವರ್ಷದ ಸ್ವಾತಂತ್ರ್ಯ ದಿನದಂದು 2020 ರಲ್ಲಿ ವೈಮಾನಿಕ ತುರ್ತು ಪರಿಸ್ಥಿಸಿ ಸಂದರ್ಭದಲ್ಲಿ ಎಲ್‍ಸಿಎ ತೇಜಸ್ ಯುದ್ಧ ವಿಮಾನವನ್ನು ಸಮರ್ಥವಾಗಿ ಲ್ಯಾಂಡಿಂಗ್ ಮಾಡಿ ಅದರಲ್ಲಿದ್ದ ಯೋಧರ ಪ್ರಾಣ ಉಳಿಸಿದಕ್ಕಾಗಿ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು. ಲೈಟ್ ಕಾಂಬ್ಯಾಟ್ ಏರ್‍ಕ್ರಾಫ್ಟ್ ಸ್ಕ್ವಾಡ್ರನ್‍ನಲ್ಲಿ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ವರುಣ್ ಸಿಂಗ್, ಅವರ ಅಸಾಧಾರಣ ಶೌರ್ಯಕ್ಕಾಗಿ ಭಾರತದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ಈ ವರ್ಷದ ಆಗಸ್ಟ್ 15 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೀಡಿ ಗೌರವಿಸಿದ್ದರು. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಬಿಪಿನ್‌ ರಾವತ್‌ ಕುಡಿಯಲು ನೀರು ಕೇಳಿದ್ದರು- ಪ್ರತ್ಯಕ್ಷದರ್ಶಿ ಮಾತು

  • ಸೇನಾ ಹೆಲಿಕಾಪ್ಟರ್ ಪತನ – ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಯಾರು ಗೊತ್ತಾ?

    ಸೇನಾ ಹೆಲಿಕಾಪ್ಟರ್ ಪತನ – ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಯಾರು ಗೊತ್ತಾ?

    ಚೆನ್ನೈ: ಭಾರತದ ಸೇನಾ ಪಡೆಗಳ ದಂಡನಾಯಕರಾಗಿದ್ದ ಬಿಪಿನ್ ರಾವತ್ ಸೇರಿ 13 ಮಂದಿ Mi-17V5 ಸೇನಾ ಹೆಲಿಕಾಪ್ಟರ್ ಪತನಗೊಂಡು ಹುತಾತ್ಮರಾಗಿದ್ದಾರೆ. ಆದರೆ ಅದೇ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗಂಭೀರವಾಗಿ ಗಾಯಗೊಂಡಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‍ಗೆ ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ಯಾಪ್ಟನ್ ವರುಣ್ ಸಿಂಗ್ ಶೇಕಡಾ 95%ಕ್ಕೂ ಹೆಚ್ಚು ಸುಟ್ಟ ಗಾಯಗಳೊಂದಿಗೆ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಸಿಡಿಎಸ್ ರಾವತ್ ಸೇರಿ 13 ಮಂದಿ ಹುತಾತ್ಮ – ಬೆಳಗ್ಗೆಯಿಂದ ಏನೇನಾಯ್ತು?

    ಶೌರ್ಯ ಚಕ್ರ
    14 ಮಂದಿಯಲ್ಲಿ ಬದುಕುಳಿದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಈ ವರ್ಷದ ಸ್ವಾತಂತ್ರ್ಯ ದಿನದಂದು 2020 ರಲ್ಲಿ ವೈಮಾನಿಕ ತುರ್ತು ಪರಿಸ್ಥಿಸಿ ಸಂದರ್ಭದಲ್ಲಿ ಎಲ್‍ಸಿಎ ತೇಜಸ್ ಯುದ್ಧ ವಿಮಾನವನ್ನು ಸಮರ್ಥವಾಗಿ ಲ್ಯಾಂಡಿಂಗ್ ಮಾಡಿ ಅದರಲ್ಲಿದ್ದ ಯೋಧರ ಪ್ರಾಣ ಉಳಿಸಿದಕ್ಕಾಗಿ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು. ಲೈಟ್ ಕಾಂಬ್ಯಾಟ್ ಏರ್‍ಕ್ರಾಫ್ಟ್ ಸ್ಕ್ವಾಡ್ರನ್‍ನಲ್ಲಿ ಪೈಲಟ್ ಆಗಿದ್ದ ವಿಂಗ್ ಕಮಾಂಡರ್ ವರುಣ್ ಸಿಂಗ್, ಅವರ ಅಸಾಧಾರಣ ಶೌರ್ಯಕ್ಕಾಗಿ ಭಾರತದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ಈ ವರ್ಷದ ಆಗಸ್ಟ್ 15 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೀಡಿ ಗೌರವಿಸಿದ್ದರು. ಇದನ್ನೂ ಓದಿ: 2015ರಲ್ಲಿ ಹೆಲಿಕಾಪ್ಟರ್ ಪತನಗೊಂಡಾಗ ಪಾರಾಗಿದ್ದರು ಬಿಪಿನ್ ರಾವತ್

    ಹುತಾತ್ಮರಾದವರು:
    ಬಿಪಿನ್ ರಾವತ್ ಸಿಡಿಎಸ್, ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್‍ಎಸ್ ಲಿದ್ದರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿತೇಜಾ, ಹವಾಲ್ದಾರ್ ಸತ್ಪಾಲ್ ಸಿಂಗ್, ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್, ಪೈಲಟ್ ಮತ್ತು ಸೂಳೂರಿನ ಇಬ್ಬರು ಅಧಿಕಾರಿಗಳು.  ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಜ್ವಾಲೆ ಕಾಣಿಸಿತು – ಬಳಿಕ ಮತ್ತೊಂದು ಮರಕ್ಕೆ ಡಿಕ್ಕಿ ಹೊಡೆಯಿತು