ಹೊಸ ಪ್ರತಿಭೆಗಳ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಸಿನಿಮಾ ಥಿಯೇಟರ್ ನಲ್ಲಿ ಕಮಾಲ್ ಮಾಡಿತ್ತು. ಕಳೆದ ಜುಲೈ 21ರಂದು ಬಿಡುಗಡೆಯಾಗಿದ್ದ ಚಿತ್ರಕ್ಕೆ ಭರಪೂರ ಮೆಚ್ಚುಗೆ ಸಿಕ್ಕಿತ್ತು. ನಕ್ಕು ನಲಿಸಿದ್ದ ತುಂಗಾ ಹಾಸ್ಟೆಲ್ ಬಾಯ್ಸ್ ಒಟಿಟಿಯಲ್ಲಿ ಹವಾಳಿ ಶುರು ಮಾಡಿಕೊಂಡಿದ್ದಾರೆ. ಅಂದರೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಜೀ5 ಒಟಿಟಿಗೆ (OTT) ಎಂಟ್ರಿ ಕೊಟ್ಟಿದೆ.
ನಿತಿನ್ ಕೃಷ್ಣಮೂರ್ತಿ (Nitin Krishna) ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಇಡೀ ಸ್ಯಾಂಡಲ್ ವುಡ್ ಸಪೋರ್ಟ್ ಕೊಟ್ಟಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಗೆ ಚಾಲನೆ ನೀಡಿದ್ದರು. ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ಪವನ್ ಕುಮಾರ್ ಹಾಗೂ ರಮ್ಯಾ ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದರು. ಇಡೀ ಚಿತ್ರರಂಗ ಬೆಂಬಲ ಕೊಟ್ಟಿದ್ದ ತುಂಗಾ ಹಾಸ್ಟೆಲ್ ಬಾಯ್ಸ್ ಬೆಳ್ಳಿತೆರೆಯಲ್ಲಿ ಧಮಾಕ ಎಬ್ಬಿಸಿದ್ದರು. ಸಿನಿರಸಿಕರನ್ನು ಸಿನಿಮಾ ಥಿಯೇಟರ್ ನತ್ತ ಮುಖ ಮಾಡುವಂತೆ ಮಾಡಿ ಚಪ್ಪಾಳೆ ಪಡೆದಿದ್ದ ಈ ಸಿನಿಮಾ ತೆಲುಗು, ಹೊರ ದೇಶದಲ್ಲಿಯೂ ಭಾರೀ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದನ್ನೂ ಓದಿ:ಹಳದಿ ಸೀರೆಯುಟ್ಟು ಹಳದಿ ಕಂಗಳಿಗೆ ಉತ್ತರಿಸಿದ್ರಾ ಸೋನು ಗೌಡ
ವರುಣ್ ಗೌಡ, ನಿತಿನ್ ಕೃಷ್ಣಮೂರ್ತಿ, ಪ್ರಜ್ವಲ್ ಬಿ.ಪಿ, ಅರವಿಂದ್ ಎಸ್ ಕಶ್ಯಪ್ ಸಿನಿಮಾಗೆ ಬಂಡವಾಳ ಹೂಡಿದ್ದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್ ನಡಿ ಪ್ರೆಸೆಂಟ್ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಥಿಯೇಟರ್ ಅಂಗಳದಲ್ಲಿ ಮನರಂಜನೆ ರಸದೌತಣ ನೀಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಕಿರುಚಿತ್ರ ನಿರ್ದೇಶಿಸಲು ವಾರ್ಡನ್ ಸಪೋರ್ಟ್ ಕೊಟ್ಟಿದ್ದರು. ಸಿನಿಮಾ ಒಳಗೊಂದು ಕಿರುಚಿತ್ರ ಕಥೆ ಹೆಣೆಯಲಾಗಿತ್ತು. ಇದೀಗ ಜೀ5 ಅತ್ಯುತ್ತಮ ಕಿರುಚಿತ್ರ ನಿರ್ದೇಶಿಸಿದರಿಗೆ ಆಫರ್ ವೊಂದನ್ನು ಕೊಟ್ಟಿದೆ. ಶಾರ್ಟ್ ಫಿಲ್ಮಂ ಕಂಟೆಸ್ಟ್ ಚಾನ್ಸ್ ನೀಡಿದ್ದು, ಇದರಲ್ಲಿ ಅತ್ಯುತ್ತಮ ಎನಿಸಿದ್ದನ್ನು ಜೀ5 ಒಟಿಟಿಯಲ್ಲಿ ಪ್ರಸಾರ ಮಾಡಲಾಗುತ್ತದೆ.
ಹಳ್ಳಿ ಮೇಷ್ಟ್ರೇ.. ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ ಅಂತ ಬಿಂದಿಯಾ ಕರೆದಾಗ ನಮ್ ರವಿಮಾಮ ದಿಲ್ಲಿ ಮೇಡಂ ದಿಲ್ಲಿ ಮೇಡಂ ಸ್ಲೇಟು ಬಳಪ ತನ್ನಿ ಎಂದಿದ್ದು ನಿಮಗೆಲ್ಲ ಗೊತ್ತೆಯಿದೆ. ಈಗ ಹಳ್ಳಿಮೇಷ್ಟ್ರ ಹಾಡನ್ನ ನೆನಪು ಮಾಡಿಕೊಳ್ಳುವುದಕ್ಕೆ ಕಾರಣ ಹಾಸ್ಟೆಲ್ ಹುಡುಗರು. ಕಳೆದೊಂದು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಈ ಹಾಸ್ಟೆಲ್ ಹುಡುಗರ ಹಾವಳಿ ಜೋರಾಗಿದೆ. ಸಿನಿಮಾ ಲೋಕದಿಂದ ದೂರ ಉಳಿದು ಡೆಲ್ಲಿನಲ್ಲಿ ಕೂತಿದ್ದ ಪದ್ಮಾವತಿನಾ ವಾಪಾಸ್ ಗಾಂಧಿನಗರಕ್ಕೆ ಕರೆತಂದ ಹಾಸ್ಟೆಲ್ ಹುಡುಗರ ಮೇಲೆ ಅಭಿಮಾನವೂ ಹೆಚ್ಚಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಲೂಸಿಯಾ ಪವನ್, ದಿಗಂತ್, ಶೈನ್ ಶೆಟ್ಟಿನಾ ಒಟ್ಟಿಗೆ ಸೇರಿಸಿರೋದು ಕ್ಯೂರಿಯಾಸಿಟಿ ಮೂಡಿಸಿದೆ. ಹಾಸ್ಟೆಲ್ ಲೈಫ್ ಹೇಗಿರುತ್ತೆ, ಎಷ್ಟೆಲ್ಲಾ ಎಂಜಾಯ್ ಮಾಡ್ಬೋದು, ಏನೆನೆಲ್ಲಾ ಕಿತಾಪತಿ ಮಾಡ್ಬೋದು, ಕಿರಿಕ್ ಮಾಡುವ ವಾರ್ಡನ್‍ಗೆ ಹೇಗೆಲ್ಲಾ ಕಾಟ ಕೊಡ್ಬೋದು, ಯಾವ್ಯಾವ್ ರೀತಿ ರಾಜಕೀಯ ಮಾಡ್ಬೋದು ಅನ್ನೋದನ್ನ ತೋರಿಸುವುದಕ್ಕೆ ಬರುತ್ತಿರುವ ಹಾಸ್ಟೆಲ್ ಹುಡುಗರ ಮೇಲೆ ಕುತೂಹಲವೂ ದುಪ್ಪಟ್ಟಾಗಿದೆ. ಇದೆಲ್ಲದರ ಮಧ್ಯೆ ತಲೆಗೆ ಚಾಯ್ ಪೇ ಚರ್ಚೆಯಾಗಿರುವುದು `ದಿಲ್ಲಿ ಮೇಡಂ ದಿಲ್ಲಿ ಮೇಡಂ ಸ್ಲೇಟು ಬಳಪ ತನ್ನಿ ಎಂದರಾ ಈ ಹಾಸ್ಟೆಲ್ ಹುಡುಗರು ಅನ್ನೋದು.
`ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಚಿತ್ರದಲ್ಲಿ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ (Ramya,) ಬಣ್ಣ ಹಚ್ಚಿರುವುದು ಎಲ್ಲರಿಗೂ ತಿಳಿದಿದೆ. ನಾಗರಹಾವು ಸಿನಿಮಾ ನಂತರ ಬಣ್ಣದ ಜಗತ್ತಿನಿಂದ ಅಂತರಕಾಯ್ದುಕೊಂಡಿದ್ದ ಗೌರಮ್ಮ, ಹಾಸ್ಟೆಲ್ ಹುಡುಗರಿಗಾಗಿ ಮತ್ತೆ ಮುಖಕ್ಕೆ ಮೇಕಪ್ ಹಾಕ್ಕೊಂಡಿದ್ದಾರೆ. ಇದು ನನ್ನ ಕಂಬ್ಯಾಕ್ ಸಿನಿಮಾವಲ್ಲ ಬದಲಾಗಿ ಸೆಕೆಂಡ್ ಇನ್ನಿಂಗ್ಸ್‍ಗೆ ಟೀಸರ್ ಅಷ್ಟೇ ಎಂದಿರುವ ಲಕ್ಕಿಬೆಡಗಿ, `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಪಾತ್ರದ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಆದರೆ, ಟ್ರೈಲರ್ ನೋಡಿದಾಗ ದಿಲ್ಲಿ ಮೇಡಂ ಲೆಕ್ಚರರ್ ರೋಲ್ ಪ್ಲೇ ಮಾಡಿರಬಹುದು ಎನ್ನುವ ಅನುಮಾನ ಮೂಡುತ್ತೆ. ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿರುವ ಸ್ಯಾಂಡಲ್‍ವುಡ್ ಕ್ವೀನ್, ಕೆಮಿಸ್ಟ್ರಿ ಟೀಚರ್ರಾ? ಫಿಸಿಕ್ಸ್ ಲೆಕ್ಚರ್ರಾ ಅಥವಾ ಮ್ಯಾಥಾಮ್ಯಾಟಿಕ್ಸ್ ಹೇಳಿಕೊಡುವ ಮೇಡಂ ಹಾ ಹೀಗೊಂದು ಕುತೂಹಲದ ಪ್ರಶ್ನೆ ಎಲ್ಲರ ತಲೆಗೆ ಹುಳ ಬಿಟ್ಟಿದೆ. ಜೊತೆಗೆ ಈ ಹಾಸ್ಟೆಲ್ ಹುಡುಗರು `ದಿಲ್ಲಿ ಮೇಡಂಗೇನೆ ಸ್ಲೇಟು ಬಳಪ ತನ್ನಿ, ನಾವ್ ಪಾಠ ಮಾಡ್ತೀವಿ ಎಂದರಾ’? ಹೀಗೊಂದು ಸಂಶಯವೂ ಸಿನಿಮಾಪ್ರೇಮಿಗಳ ನಿದ್ದೆಗೆಡಿಸಿದೆ. ಇದಕ್ಕೆ ಏನ್ ಹೇಳ್ತೀರಿ ಅಂತ
ನಿರ್ದೇಶಕ ನಿತಿನ್ ಕೃಷ್ಣಮೂರ್ತಿಯವರನ್ನು ಸಂಪರ್ಕ ಮಾಡಿದರೆ, `ರಮ್ಯಾ ಲೆಕ್ಚರ್ರಾ ಅಥವಾ ಸ್ಟುಡೆಂಟಾ ಅನ್ನೋದು ನೀವು ಥಿಯೇಟರ್‍ಗೆ ಬಂದ್ಮೇಲೇನೆ ಗೊತ್ತಾಗೋದು. ಸಾಕಷ್ಟು ಸರ್ಪೈಸ್ ಎಲಿಮೆಂಟ್ಸ್‍ಗಳನ್ನ ಇಟ್ಟಿದ್ದೇವೆ, ಇದೇ ಜುಲೈ 21ನೇ ತಾರೀಖು ನಮ್ಮ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ. ಚಿತ್ರಮಂದಿರಕ್ಕೆ ಬಂದು ತಾವೆಲ್ಲರು ಸಿನಿಮಾ ನೋಡ್ಬೇಕು ಎಂದು ಕೇಳಿಕೊಂಡರು. ಇದನ್ನೂ ಓದಿ:ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ
ನಿರ್ದೇಶಕ ನಿತಿನ್ ಕೃಷ್ಣಮೂರ್ತಿಗೆ ಇದು ಡೆಬ್ಯೂ ಸಿನಿಮಾ. ಆದರೆ, ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಜೀ ಕನ್ನಡದ ಬಹುತೇಕ ಧಾರವಾಹಿ ಹಾಗೂ ರಿಯಾಲಿಟಿ ಶೋಗಳ ಪ್ರೋಮೋ ಡೈರೆಕ್ಷನ್ ಮಾಡುವ ನಿತಿನ್, ಕಿಚ್ಚ ಸುದೀಪ್ ನಿರ್ಮಾಣದ ವಾರಸ್ಧಾರ ಸೀರಿಯಲ್ ಪ್ರೋಮೋ ಡೈರೆಕ್ಟ್ ಮಾಡಿದ್ದರು. ಇಂಟ್ರೆಸ್ಟಿಂಗ್ ಅಂದರೆ ಬಾದ್ ಷಾ ಕಿಚ್ಚ ಕೈನಲ್ಲೇ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಪ್ರಮೋಷನಲ್ ಟೀಸರ್ ರಿಲೀಸ್ ಆಗಿದ್ದು. ಆಗ ತಾನೇ ವಿಕ್ರಾಂತ್ ರೋಣ ಸಿನಿಮಾ ಮುಗಿಸಿ ಬಿಗ್‍ಬಾಸ್‍ನಲ್ಲಿ ತೊಡಗಿಸಿಕೊಂಡಿದ್ದ ಕಿಚ್ಚ, ನಿರ್ದೇಶಕ ನಿತಿನ್ ಹಾಗೂ ನಿರ್ಮಾಪಕ ವರುಣ್‍ಗೆ ಕೈ ಜೋಡಿಸಿದರು. ಅಪ್ಪು ಫಸ್ಟ್ ಲುಕ್ ರಿಲೀಸ್ ಮಾಡಿ ಪವರ್ ತುಂಬಿದರೆ, ಕಿಚ್ಚ ಟೀಸರ್ ಅನಾವರಣ ಮಾಡಿಕೊಟ್ಟು ಹಾಸ್ಟೆಲ್ ಹುಡುಗರಿಗೆ ಬಲ ತುಂಬಿದರು. ಸುಮಾರು ವರ್ಷಗಳಿಂದ ನಿತಿನ್, ಪ್ರಜ್ವಲ್, ಅರವಿಂದ್, ರಾಕೇಶ್‍ನ ಹತ್ತಿರದಿಂದ ನೋಡಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಕ್ವಾಲಿಟಿ ಪ್ಲಸ್ ಕ್ವಾಂಟಿಟಿನಾ ನೋಡಿ ಕ್ಲೀನ್ ಬೋಲ್ಡ್ ಆದರು. ತಮ್ಮ ಪರಂವಃ ಬ್ಯಾನರ್ ಅಡಿಯಲ್ಲೇ ಸಿನಿಮಾನ ಪ್ರಸೆಂಟ್ ಮಾಡಲಿಕ್ಕೆ ಒಪ್ಪಿಕೊಂಡರು. ಅದ್ರಂತೆ, ಗ್ರ್ಯಾಂಡ್ ಆಗಿ ಸಿನಿಮಾನ ಬಿಡುಗಡೆ ಮಾಡ್ತಿದ್ದಾರೆ. 120ಕ್ಕಿಂತ ಅಧಿಕ ಚಿತ್ರಮಂದಿರಗಳಲ್ಲಿ ಕರುನಾಡಿನಾದ್ಯಂತ ತೆರೆಗೆ ತರುತ್ತಿದ್ದಾರೆ.
`ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸೆಟ್ಟೇರಿದಾಗಿನಿಂದಲೂ ಸ್ಯಾಂಡಲ್‍ವುಡ್‍ನಲ್ಲಿ ಸಾಕಷ್ಟು ಸೌಂಡ್ ಮಾಡ್ತಿರುವ ಸಿನಿಮಾ. ಅಪ್ಪು, ದೀಪು ಸಾಥ್ ಕೊಟ್ಟಿದ್ದರಿಂದ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಲೂಸಿಯಾ ಪವನ್, ದಿಗಂತ್, ಶೈನ್ ಶೆಟ್ಟಿ ಸ್ಪೆಷಲ್ ಅಪಿಯರೆನ್ಸ್ ನಲ್ಲಿ ಮಿಂಚಿದ್ದರಿಂದ ಸಿನಿಮಾಗೆ ಪ್ಲಸ್ ಆಗಿದ್ದೇನೋ ನಿಜ. ಆದರೆ, ಈ ಹಾಸ್ಟೆಲ್ ಹುಡುಗರು ಟೆಕ್ನಿಕಲಿ ಹೊಸ ಪ್ರಯೋಗ ಮಾಡಿದ್ದಾರೆ. ಸಿನಿಮಾ ವೆರೈಟ್ ಸ್ಟೈಲ್ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಕ್ಯಾಮೆರಾ ಹಾಗೂ ಸೌಂಡಿಂಗ್‍ನಲ್ಲಿ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇಡೀ ಕರ್ನಾಟಕ ತುಂಬೆಲ್ಲಾ ಸಂಚರಿಸಿ ಸುಮಾರು 6000 ಹುಡುಗರನ್ನ ಆಡಿಷನ್ ಮಾಡಿ, ಕೊನೆಗೆ 500 ಮಂದಿಯನ್ನ ಆಯ್ಕೆಮಾಡಿಕೊಂಡು `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಚಿತ್ರೀಕರಿಸಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳೇ ತುಂಬಿರುವ ಈ ಚಿತ್ರದಲ್ಲಿ ಪ್ರಜ್ವಲ್ ಎಂಬಾತ ಕಥೆನಾ ಡ್ರೈವ್ ಮಾಡ್ತಾನೆ. ರಾಕೇಶ್, ಶ್ರೀವತ್ಸ, ಮಂಜುನಾಥ್ ನಾಯಕ್, ನಿತಿನ್, ಅರವಿಂದ್, ಅಭಿಷೇಕ್ ದಾಸ್ ಸೇರಿದಂತೆ 40 ಮಂದಿ ಲೀಡ್ ರೋಲ್ನನಲ್ಲಿದ್ದಾರೆ. ಠಾಕೂರ್ ಪಾತ್ರದಲ್ಲಿ ರಿಷಬ್, ದ್ರಾಕ್ಷಿ ರೋಲ್‍ನಲ್ಲಿ ಪವನ್ ಕುಮಾರ್, ಕಬಾಬ್ ಕ್ಯಾರೆಕ್ಟರ್ ನಲ್ಲಿ ಶೈನ್ ಶೆಟ್ಟಿ, ಬಂಟಿಗೌಡನ ಅವತಾರದಲ್ಲಿ ದಿಗಂತ್ ಮಂಚಾಲೆ ಹೊಸ ಮೇನಿಯಾ ಸೃಷ್ಟಿಸಲಿದ್ದಾರೆ.
ಕ್ವಿರ್ಕಿ ಸ್ಟೈಲ್‍ನಲ್ಲಿ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಕ್ಯಾರಿ ಮಾಡಲಾಗಿದೆ. ಪಾಪ್ ಕಲ್ಚರ್ ಒಳಗೊಂಡಿರೋ ಈ ಸಿನಿಮಾ ಮಂಗಳೂರು ಹಾಗೂ ಬೆಂಗಳೂರು ಬ್ಯಾಕ್‍ಡ್ರಾಪ್‍ನಲ್ಲಿ ಶೂಟಿಂಗ್ ಮಾಡಲಾಗಿದೆ. ಟೋಟಲ್ 80 ರಿಂದ 100 ರಾತ್ರಿ ಹಾಸ್ಟೆಲ್ ನಲ್ಲೇ ಈ ಸಿನಿಮಾನ ಕ್ಯಾಪ್ಚರ್ ಮಾಡಲಾಗಿದೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್‍ಮೋಹರ್ ಫಿಲ್ಮಂಸ್ ಬ್ಯಾನರ್ ಅಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ. ಕಾಮಿಡಿ, ಥ್ರಿಲ್, ಸಸ್ಪೆನ್ಸ್ ಒಳಗೊಂಡಿರೋ ಈ ಸಿನಿಮಾ ಹಾಲಿವುಡ್ ಲೆವೆಲ್‍ನಲ್ಲಿ ನಿರ್ಮಾಣಗೊಂಡಿರುವುದು ಮತ್ತೊಂದು ವಿಶೇಷ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರದ ಶ್ರೀಮಂತಿಕೆ ಹೆಚ್ಚಿಸಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಪರಂವಃ ಬ್ಯಾನರ್ ಅಡಿ ಈ ಸಿನಿಮಾನ ಪ್ರಸೆಂಟ್ ಮಾಡಲಾಗ್ತಿದ್ದು, ಇದೇ ಜುಲೈ 21ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ತರಲಾಗ್ತಿದೆ.
ಸೆಟ್ಟೇರಿದ ದಿನದಿಂದಲೂ ಭಾರೀ ಕುತೂಹಲ ಹೆಚ್ಚಿಸಿರುವ ಹಾಸ್ಟೆಲ್ ಹುಡುಗರು (Hostel Hudugaru) ಸಿನಿಮಾದ ಮೊದಲ ನೋಟ ಬಿಡುಗಡೆಯಾಗಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಟ್ರೈಲರ್ (Trailer) ಲಾಂಚ್ ಮಾಡಲಾಯಿತು. ಅಶ್ವಿನಿ ಪುನೀತ್ ರಾಜ್‌ಕುಮಾರ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಪ್ರಮೋದ್ ಶೆಟ್ಟಿ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದರು.
ರಿಷಬ್ ಶೆಟ್ಟಿ (Rishabh Shetty) ಮಾತನಾಡಿ, ‘ನನ್ನ ಶಿಷ್ಯದಿಂದರೇ ಮಾಡಿರುವ ಸಿನಿಮಾ. ಅರವಿಂದ್, ಪ್ರಜ್ವಲ್ ಇವರೆಲ್ಲರನ್ನೂ ಲೂಸಿಯಾ ಸಮಯದಿಂದಲೂ ನೋಡಿಕೊಂಡು ಬರುತ್ತಿದ್ದೇನೆ. ತುಂಬಾ ಅದ್ಭುತ ಟೆಕ್ನಿಷಿಯನ್ಸ್. ಒಂದು ಸಿನಿಮಾದ ಕಥೆ ಇದೆ ಗೆಸ್ಟ್ ಅಪಿಯರೆನ್ಸ್ ಮಾಡ್ತೀರಾ ಅಂತಾ ಕೇಳಿದರು. ಕಥೆ ಏನೂ ಕೇಳಿಲ್ಲ. ಒಂದು ರಾತ್ರಿಯಷ್ಟೇ ಪಾತ್ರವನ್ನು ಚಿತ್ರೀಕರಿಸಲಾಯಿತು. ಪವನ್ ಇದ್ದರು. ಶೈನ್ ಇದ್ದರು, ಬಹಳ ಅದ್ಭುತವಾಗಿ ಶೂಟಿಂಗ್ ಅನುಭವ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಒಂದು ಅದ್ಭುತ ತಂಡ. ಬೆಳೆಯುತ್ತಾ ಬೆಳೆಯುತ್ತಾ ಸಿನಿಮಾ ದೊಡ್ಡ ಸ್ಕೆಲ್ ಆಯ್ತು. 500 ಜನ ಕಲಾವಿದರನ್ನು ಕಂಪ್ಲೀಟ್ ನೈಟ್ ಸೀಕ್ವೆಲ್ ನಲ್ಲಿ ಶೂಟ್ ಮಾಡುವುದು ತುಂಬಾ ಚಾಲೆಂಜಿಂಗ್. ಇದೇ 21ಕ್ಕೆ ಸಿನಿಮಾ ಬರ್ತಿದೆ, ಥಿಯೇಟರ್ ಗೆ ಬಂದು ಸಿನಿಮಾ ನೋಡಿ. ನೀವು ಖಂಡಿತ ಎಂಜಾಯ್ ಮಾಡ್ತೀರ. ಅದ್ಭುತ ಸಿನಿಮಾ ಮಾಡಿದ್ದಾರೆ ‘ಎಂದರು.
ಧ್ರುವ ಸರ್ಜಾ (Dhruv Sarja) ಮಾತನಾಡಿ, ‘ಒಬ್ಬ ಪ್ರೇಕ್ಷಕನಾಗಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನೋಡಿದ್ದೇನೆ. ಈ ಸಿನಿಮಾ ನೋಡಿದಾಗ ನಾನು ನನ್ನ ಅಣ್ಣನನ್ನು ಮಿಸ್ ಮಾಡಿಕೊಂಡೆ. ಏಳೆಂಟು ವರ್ಷ ನಾವು ಹಾಸ್ಟೆಲ್ ನಲ್ಲಿ ಇದ್ದೆವು. ಅದನ್ನು ನೋಡಿದ ತಕ್ಷಣ ನಾವು ಹೀಗೆ ಇದ್ವಲ್ಲಾ ಅನಿಸಿತು. ನಿತಿನ್ ಅವರು ತುಂಬಾ ಚೆನ್ನಾಗಿ ಸಿನಿಮಾ ಶೂಟ್ ಮಾಡಿದ್ದಾರೆ. ನಾನು ನೋಡಿದಾಗ ರೀ ರೆಕಾರ್ಡಿಂಗ್ ಆಗಿರಲಿಲ್ಲ. ರೀ ರೆಕಾರ್ಡಿಂಗ್ ಆದ್ಮೇಲೆ ನೋಡಬೇಕೆಂಬ ಕುತೂಹಲವಿದೆ. ನಾನು ಪ್ರೀಮಿಯರ್ ಶೋ ನೋಡಲ್ಲ. ನಾನು ಫಸ್ಟ್ ಡೇ ಫಸ್ಟ್ ಶೋ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡುತ್ತೇನೆ. ಕಿರಿಕ್ ಪಾರ್ಟಿಯಂತೆ ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಲಿ’ ಎಂದು ಶುಭ ಹಾರೈಸಿದರು.
ರಕ್ಷಿತ್ ಶೆಟ್ಟಿ (Rakshit Shetty) ಮಾತನಾಡಿ, ‘ನಾನು ಈ ಪ್ರೋಗ್ರಾಂಗೆ ಗೆಸ್ಟ್ ಆಗಿ ಬಂದಿಲ್ಲ. ಯಾಕೆಂದ್ರೆ ನಾನು ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದೇನೆ. ಅಪ್ಪು ಸರ್ ಏನೇ ಶುರು ಮಾಡಿದರು. ಅದ್ಭುತ ರಿಸ್ಟಲ್ ಕೊಡುತ್ತದೆ ಎಂಬ ನಂಬಿಕೆ. ನಮ್ಮ ಪರವಃ ಸ್ಟುಡಿಯೋಸ್ ನಮ್ಮ ಆಫೀಸ್ ಅನ್ನು ಅವರೇ ಉದ್ಘಾಟಿಸಿದ್ದರು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಫಸ್ಟ್ ಪೋಸ್ಟರ್ ಅವರೇ ಲಾಂಚ್ ಮಾಡಿದ್ದರು. ಈ ಸಿನಿಮಾವನ್ನು ನಾನು ಪ್ರೆಸೆಂಟ್ ಮಾಡಲು ತುಂಬಾ ಕಾರಣವಿದೆ. ನಾನು ಈ ಚಿತ್ರವನ್ನು ಎರಡು ಬಾರಿ ನೋಡಿದ್ದೇನೆ. 2 ಸಲ ನೋಡುವಾಗಲೂ ಅಷ್ಟೇ ಎಂಜಾಯ್ ಮಾಡಿದ್ದೇನೆ. ಸಿನಿಮಾವನ್ನು ಹಾಲಿವುಡ್ ರೇಂಜ್ ಗೆ ಶೂಟ್ ಮಾಡಲಾಗಿದೆ’ ಎಂದರು.
ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಮಾತನಾಡಿ, ‘ಅಪ್ಪು ಸರ್ ಪೋಸ್ಟರ್ ಲಾಂಚ್ ಮಾಡಿಕೊಟ್ಟಿದ್ದರು. ಅಲ್ಲಿಂದಲೇ ಜರ್ನಿ ಶುರುವಾಗಿದ್ದು, ಈ ವೇದಿಕೆ ಹತ್ತಿದ್ದೇನೆ. ಆದ್ರೆ ಕೆಲಸ ಮಾಡಲು. ನಾನು ಟಿವಿ ಮಾಧ್ಯಮದಲ್ಲಿ ಕೆಲಸ ಮಾಡಿದವನು. ಈ ಚಿತ್ರ ಮಾಡಲು ಎರಡು ವರ್ಷ ಬೇಕಾಯ್ತು. ಮಳೆ, ಲಾಕ್ ಡೌನ್ ನಿಂದ ಸ್ವಲ್ಪ ಲೇಟ್ ಆಯ್ತು. ಇಷ್ಟು ದಿನ ಪ್ರೋಮೋ ಬಿಟ್ಟಿದ್ದೇವೆ. ಈಗ ಟ್ರೇಲರ್ ಬಂದಿದೆ. ಈ ಮೂವೀಗೆ 1000 ಜನ ರಂಗಭೂಮಿ ಕಲಾವಿದರನ್ನು ಬಿಟ್ಟು ಸ್ಯಾಂಡಲ್ ವುಡ್ ಇಂಡಸ್ಟ್ರೀ ಸಾಥ್ ಕೊಟ್ಟಿದೆ’ ಎಂದು ಸಂತಸ ಹಂಚಿಕೊಂಡರು.
ನಿರ್ಮಾಪಕ ವರುಣ್ ಗೌಡ (Varun) ಮಾತನಾಡಿ, ಜುಲೈ 21ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ದಯವಿಟ್ಟು ಎಲ್ಲರೂ ಸಪೋರ್ಟ್ ಮಾಡಿ. ಇಷ್ಟು ದಿನ ಬೆಂಬಲ ಕೊಟ್ಟ ರೀತಿ ಮುಂದೆಯೂ ನಿಮ್ಮ ಬೆಂಬಲವಿರಲಿ ಎಂದರು. ಕಿರಿಕ್ ಮಾಡುವ ವಾರ್ಡನ್ ಕಾಟದಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್ ಹುಡುಗರು ಏನೆಲ್ಲಾ ಮಾಡುತ್ತಾರೆ. ಅದರಿಂದ ಮುಂದೆ ಏನು ಸಮಸ್ಯೆ ಅನುಭವಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಮೋಹಕತಾರೆ ರಮ್ಯಾ ಲೆಕ್ಚರರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ ಹಾಗೂ ದಿಗಂತ್ ಕೂಡ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್ ಸಾಥ್ ಕೊಟ್ಟಿರುವ ಈ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಜ್ವಲ್ ಬಿಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕಶ್ಯಪ್ ಹಾಗೂ ಇನ್ನಿತರರು ಜೊತೆಗೆ ಸೇರಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದು, ಇದೇ 21 ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಸಿನಿಮಾ ಮಾಡುವುದೇ ಒಂದು ಸಾಹಸ. ಸಿನಿಮಾ ಮಾಡಿ ಜನರಿಗೆ ತಲುಪಿಸುವುದು ಇನ್ನೂ ದೊಡ್ಡ ಸಾಹಸ. ಅದಕ್ಕೆ ಸರಿಯಾದ ರೀತಿಯ ಪ್ರಚಾರದ ಅವಶ್ಯಕತೆ ಬಹುಮುಖ್ಯ. ವಿಶೇಷ ರೀತಿಯ ಚಿತ್ರಕ್ಕೆ ವಿಶಿಷ್ಟ ಪ್ರಕಾರದ ಪ್ರಚಾರ ಬೇಕು. ವಿಶಿಷ್ಟ ರೀತಿಯಲ್ಲಿ ಪ್ರಚಾರ ನಡೆಸುತ್ತಿರುವುದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾತಂಡ.
ಆರಂಭದ ದಿನದಿಂದಲೂ ನಾನಾ ಬಗೆಯಲ್ಲಿ ಚಿತ್ರಪ್ರೇಮಿಗಳನ್ನು ಸೆಳೆಯುತ್ತಿರುವ ಈ ಚಿತ್ರಕ್ಕೀಗ ಮತ್ತೊಬ್ಬ ಸ್ಟಾರ್ ಸಾಥ್ ಕೊಟ್ಟಿದ್ದಾರೆ. ಹಾಸ್ಟೆಲ್ ಹುಡುಗರಿಗೆ ದೂದ್ ಪೇಡಾ ಸಿಹಿ ಸಿಕ್ಕಿದೆ. ಅಂದರೆ ದೂದ್ ಪೇಡಾ ದಿಗಂತ್ (Digant) ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ಹೊಸ ತಂಡದ ‘ಅಗ್ರಸೇನಾ’ ಪ್ರಯತ್ನಕ್ಕೆ ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ
ಪುನೀತ್ ರಾಜಕುಮಾರ್, ರಮ್ಯಾ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶೈನ್ ಶೆಟ್ಟಿ, ಪವನ್ ಕುಮಾರ್ ಬೆಂಬಲ ಕೊಟ್ಟಿರುವ ಈ ಚಿತ್ರದಲ್ಲಿ ದಿಗ್ಗಿ ಬಣ್ಣ ಹಚ್ಚಿದ್ದಾರೆ. ಆದರೆ ಅವರ ಪಾತ್ರವೇನೆಂಬುದನ್ನು ಚಿತ್ರತಂಡ ಸಸ್ಪೆನ್ಸ್ ಆಗಿ ಇಟ್ಟಿದೆ. ಜುಲೈ 7ಕ್ಕೆ ದಿಗಂತ್ ಲುಕ್ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದ್ದಾರೆ.
ಯೂತ್ ಸಬ್ಜೆಕ್ಟ್ ಕಥೆಯನ್ನೊಳಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ (Nitin Krishnamurthy) ಕಥೆ ಬರೆದು ನಿರ್ದೇಶಿಸಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳು ನಟಿಸಿರುವ ಈ ಚಿತ್ರವನ್ನು ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲ್ಮಂಸ್ ಬ್ಯಾನರ್ ನಡಿ ಪ್ರಜ್ವಲ್ ಬಿ.ಪಿ. ವರುಣ್ ಕುಮಾರ್ ಗೌಡ (Varun), ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ.
ಪ್ರತಿ ಬಾರಿ ಯುನಿಕ್ ಕಾನ್ಸೆಪ್ಟ್ ಮೂಲಕ ಪ್ರಚಾರ ಮಾಡುತ್ತಿರುವ ಹಾಸ್ಟೆಲ್ ಹುಡುಗರನು ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಅರವಿಂದ್ ಛಾಯಾಗ್ರಹಣ, ಸುರೇಶ್ ಸಂಕಲನವಿರುವ ಸಿನಿಮಾ ಜುಲೈನಲ್ಲಿ ತೆರೆಗೆ ಬರಲಿದೆ.
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ಕಾವ್ಯ ಶಾ (Kavya Shah) ತುಂಬಾ ದಿನಗಳ ನಂತರ ಹೊಸ ಫೋಟೋ ಶೂಟ್ (Photoshoot) ಮಾಡಿಸಿಕೊಂಡಿದ್ದಾರೆ. ಮದುವೆಯ ನಂತರದ ಮೊದಲ ಫೋಟೋ ಶೂಟ್ ಇದಾಗಿದ್ದು, ಆ ಫೋಟೋಗಳಲ್ಲಿ ಅವರು ಮಿರಿ ಮಿರಿ ಮಿಂಚಿದ್ದಾರೆ.
ಕನ್ನಡ, ತಮಿಳು ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳನ್ನು ಮಾಡಿರುವ ಕಾವ್ಯ ಶಾ ಬಂಗಾರ, ಚಿ.ಸೌ ಸಾವಿತ್ರಿ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಅಲ್ಲದೇ ಹಲವು ಮನರಂಜನೆ ವಾಹಿನಿಗಳಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ.
ಕಳೆದ ವರ್ಷವಷ್ಟೇ ಕಾವ್ಯ ಶಾ ಮದುವೆಯಾಗಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲೇ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ವರುಣ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ವರುಣ್ ಅವರಿಗೆ ಕನ್ನಡದ ಬಹುತೇಕ ಸ್ಟಾರ್ ನಟರ ಜತೆ ಒಡನಾಟವಿದೆ. ಜೀ ಕನ್ನಡ ವಾಹಿನಿ ಸೇರಿದಂತೆ ಕನ್ನಡದ ನಾನಾ ವಾಹಿನಿಗಳ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ ವರುಣ್.
ಕಾವ್ಯ ಶಾ ಮತ್ತು ವರುಣ್ (Varun) ಭೇಟಿಯಾಗಿದ್ದು ಹತ್ತು ವರ್ಷಗಳ ಹಿಂದೆ ನಡೆದ ಫ್ಯಾಶನ್ ಶೋನಲ್ಲಿ. ಆಗ ಕಾವ್ಯ ಆ ಶೋ ಸ್ಪರ್ಧಿ. ಅಲ್ಲಿಂದ ಶುರುವಾದ ಇಬ್ಬರ ಸ್ನೇಹ, ಆನಂತರ ಪ್ರೇಮಕ್ಕೆ ತಿರುಗಿದೆ. ಆನಂತರ ಎರಡು ಕುಟುಂಬಗಳು ಒಂದಾಗಿ ಮದುವೆ ಮಾಡಿವೆ.
ಮದುವೆ ಸಂದರ್ಭದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಕಾವ್ಯ ಶಾ, “ಹಲವು ವರ್ಷಗಳಿಂದ ನಾವಿಬ್ಬರೂ ಗೆಳೆಯರು. ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಂಡಿದ್ದೇವೆ. ಕುಟುಂಬದ ಒಪ್ಪಿಗೆ ಪಡೆದುಕೊಂಡು ಮದುವೆ ಆಗುತ್ತಿದ್ದೇವೆ. ಇದೊಂದು ರೀತಿಯಲ್ಲಿ ಲವ್ ಕಂ ಅರೇಂಜ್ಡ್ ಮದುವೆ’ ಎಂದಿದ್ದರು.
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮೂಕಜ್ಜಿಯ ಕನಸು, ತಮಿಳಿನ ತಾರೈ ತಪ್ಪಟ್ಟೈ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಕಾವ್ಯ, ಫಿಟ್ ನೆಸ್ ಬಗ್ಗೆ ತಮ್ಮದೇ ಆದ ಸ್ಟುಡಿಯೋ ಹೊಂದಿದ್ದಾರೆ. ಈ ಮೂಲಕ ಫಿಟ್ನೆಸ್ ಮಂತ್ರವನ್ನೂ ಅವರು ಅಭಿಮಾನಿಗಳ ಜತೆ ಸದಾ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಹಾಸ್ಟೆಲ್ ಹುಡುಗರೆಲ್ಲ (Hostel Boys) ಸೇರಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ (Ajanish Loknath) ರನ್ನು ಕಿಡ್ನಾಪ್ (Kidnap) ಮಾಡಿದ್ದಾರೆ. ಎರಡು ವಾರವಾದ್ರು ಇನ್ನೂ ಬಿಡುಗಡೆ ಮಾಡಿಲ್ಲ. ಇಷ್ಟು ದಿನ ಹಾಡು ಬಿಡುಗಡೆ ಮಾಡಿ ಎಂದು ಬೇಡಿಕೆ ಇಟ್ಟಿದ್ದ ಹುಡುಗರು ಈಗ ಬಿಡುಗಡೆಯಾಗಿರುವ ಹಾಡು ಹತ್ತು ಮಿಲಿಯನ್ ವೀವ್ಸ್ ಪಡೆದ ಮೇಲೆ ಬಿಡುಗಡೆ ಮಾಡುತ್ತೇವೆ ಎಂದು ಹಿಂಸೆ ನೀಡುತ್ತಿದ್ದಾರೆ ಎಂದು ಅಜನೀಶ್ ಲೋಕನಾಥ್ ಅಳಲು ತೋಡಿಕೊಂಡಿದ್ದಾರೆ. ಬಿಡುಗಡೆಯಾಗಿರುವ ‘ಪ್ರೊಟೆಸ್ಟ್ ಸಾಂಗ್’ ಹತ್ತು ಮಿಲಿಯನ್ ವೀವ್ಸ್ ಪಡೆಯಲು ಸಹಕರಿಸಿ ಎಂದು ಕರ್ನಾಟಕ ಜನತೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಅಜನೀಶ್. ಆದ್ರೆ ಇದೆಲ್ಲ ರಿಯಲ್ ಅಲ್ಲ ರೀಲ್ ಅನ್ನೋದು ಮರೆಯೋ ಹಾಗಿಲ್ಲ. ಹೌದು, ಇದು ಬಿಡುಗಡೆಗೆ ಸಜ್ಜಾಗಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಪ್ರಮೋಶನ್ ತಂತ್ರ.
ಸಖತ್ ಕ್ರಿಯೇಟಿವ್ ಆಗಿ ಸಿನಿಮಾ ಪ್ರಮೋಷನ್ ಮಾಡುತ್ತ ಕಲಾರಸಿಕರುನ್ನು ತನ್ನತ್ತ ಸೆಳೆಯುತ್ತಿರುವ, ಕುತೂಹಲ ಹುಟ್ಟು ಹಾಕಿರುವ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಕಳೆದ ವಾರ ಚಿತ್ರತಂಡ ‘ಪ್ರೊಟೆಸ್ಟ್ ಸಾಂಗ್’ ಬಿಡುಗಡೆ ಮಾಡಿತ್ತು. ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್ಗೂ ಅಧಿಕ ವೀವ್ಸ್ ಪಡೆದುಕೊಂಡಿತ್ತು. ಯೋಗರಾಜ್ ಭಟ್ ಕ್ಯಾಚಿ ಲಿರಿಕ್ಸ್, ಅಜನೀಶ್ ಲೋಕನಾಥ್ ಕಿಕ್ ಕೊಡೋ ಮ್ಯೂಸಿಕ್ ಹಾಗೂ ಹಾಡು ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಇದೀಗ ಈ ಹಾಡು ಹತ್ತು ಮಿಲಿಯನ್ ವೀವ್ಸ್ ಕಾಣಬೇಕೆಂಬುದು ಹಾಸ್ಟೆಲ್ ಹುಡುಗರ ಮಹದಾಸೆ. ಅದಕ್ಕೆಂದೇ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರಿಂದ ಪತ್ರ ಬರೆಸಿ ಮನವಿ ಮಾಡಿದೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಬಾಲಿವುಡ್ ಸಿನಿಮಾದಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ
ಯೂತ್ ಸಬ್ಜೆಕ್ಟ್ ಒಳಗೊಂಡ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ತಾರಾಗಣದಲ್ಲಿರುವ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಇರಲಿದೆ. ಪುನೀತ್ ರಾಜ್ ಕುಮಾರ್, ಸುದೀಪ್, ರಮ್ಯಾ, ರಕ್ಷಿತ್ ಶೆಟ್ಟಿ ಹೀಗೆ ಸ್ಟಾರ್ ನಟ ನಟಿಯರು ಈ ಸಿನಿಮಾಗೆ ಸಾಥ್ ನೀಡಿದ್ದಾರೆ. ಯೂನೀಕ್ ಕಾನ್ಸೆಪ್ಟ್ ಮೂಲಕ ಚಿತ್ರದ ಪ್ರಚಾರ ಕಾರ್ಯ ಮಾಡಿ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಪರಂವಃ ಪಿಕ್ಚರ್ಸ್ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನವಿದೆ.
Live Tv
[brid partner=56869869 player=32851 video=960834 autoplay=true]
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಜನೀಶ್ ಲೋಕನಾಥ್ ರನ್ನು ಥಳಿಸಿ, ಕೈ ಕಟ್ಟಿ ಗನ್ ಹಿಡಿದು ನಿಂತ ಉಗ್ರರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ಅಜನೀಶ್ ಲೋಕನಾಥ್ ಕಿಡ್ನ್ಯಾಪ್ ಆದ್ರಾ ಎಂದು ಎಲ್ಲರು ಮಾತನಾಡೋಕೆ ಆರಂಭಿಸಿದ್ದಾರೆ.
ಆದ್ರೆ ಈ ಫೋಟೋ ಅಸಲಿಯತ್ತು ಬೇರೆನೇ ಇದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಪ್ರಮೋಷನ್ ಫೋಟೋ ಇದು. ಅಜನೀಶ್ ಲೋಕನಾಥ್ ಸ್ಯಾಂಡಲ್ ವುಡ್ ಅಂಗಳದಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಅದರ ಪ್ರಮೋಷನ್ ಗಾಗಿ ತೆಗೆದ ಫೋಟೋ ಇದಾಗಿದೆ. ವಿಭಿನ್ನ ಹಾಗೂ ವಿಶಿಷ್ಟ ರೀತಿಯ ಪ್ರಮೋಷನ್ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಸ್ಯಾಂಡಲ್ ವುಡ್ ಸ್ಟಾರ್ ತಾರೆಯರು ಈ ಚಿತ್ರಕ್ಕೆ ಸಾಥ್ ನೀಡ್ತಿದ್ದಾರೆ. ಇತ್ತೀಚೆಗೆ ಮೋಹಕ ತಾರೆ ರಮ್ಯಾ ಕೂಡ ಸಾಥ್ ನೀಡಿದ ವೀಡಿಯೋ ಟೀಸರ್ ಸಖತ್ ವೈರಲ್ ಆಗಿ ಗಮನ ಸೆಳೆದಿತ್ತು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸುದೀಪ್, ರಮ್ಯಾ ಕೂಡ ಈ ಸಿನಿಮಾಗೆ ಸಾಥ್ ನೀಡಿದ್ದಾರೆ, ಚಿತ್ರದ ವಿಭಿನ್ನ ಪ್ರಮೋಷನ್ ಟೀಸರ್ ನಲ್ಲಿ ಅಭಿನಯಿಸಿದ್ದಾರೆ. ಆ ಸಾಲಿಗೆ ಅಜನೀಶ್ ಲೋಕನಾಥ್ ಸೇರ್ಪಡೆಯಾಗಿದ್ದಾರೆ. ಈ ಚಿತ್ರದ ಸಂಗೀತ ನಿರ್ದೇಶನ ಕೂಡ ಇವರದ್ದೇ. ವರುಣ್ ಸ್ಟುಡಿಯೋಸ್ ಹಾಗೂ ಪ್ರಜ್ವಲ್ ಬಿ. ಪಿ ಅವರ ‘ಗುಲ್ ಮೋಹರ್ ಫಿಲಂಸ್’ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಸಿನಿಮಾವಿದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಶೀರ್ವಾದದೊಂದಿಗೆ ಆರಂಭವಾದ ಈ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ:ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ
ಯೂತ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಹಲವು ರಂಗಭೂಮಿ ಪ್ರತಿಭೆಗಳು ನಟಿಸಿದ್ದಾರೆ. ಇವರ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಚಿತ್ರದಲ್ಲಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಜನವರಿಯಲ್ಲಿ ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್ವುಡ್ ನಟಿ ಕಾವ್ಯ ಶಾ ಕೊನೆಗೂ ಹಸೆಮಣೆ ಏರಿದ್ದಾರೆ. ಇಂದು ಗುರುಹಿರಿಯರ ಸಮ್ಮುಖದಲ್ಲಿ ಕಾವ್ಯ ಶಾ ಮತ್ತು ವರುಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾವಿ ಪತಿ ತಂದೆಯ ಅಕಾಲಿಕ ಮರಣದಿಂದ ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಈ ಜೋಡಿ ಹಸೆಮಣೆ ಏರಿದ್ದಾರೆ. ಈ ಸಂಭ್ರಮಕ್ಕೆ ಮೋಹಕತಾರೆ ರಮ್ಯಾ ಸಾಕ್ಷಿಯಾಗಿದ್ದಾರೆ.
ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ ಕಾವ್ಯ ಶಾ ಮತ್ತು ಸ್ಯಾಂಡಲ್‌ವುಡ್ ನಿರ್ಮಾಪಕ ವರುಣ್ ಇಂದು ಹಸೆಮಣೆ ಏರಿದ್ದಾರೆ. ವರುಣ್ ತಂದೆ ಅಕಾಲಿಕ ನಿಧನದಿಂದ ಮದುವೆ ಮುಂದೂಡಲಾಗಿತ್ತು. ಇಂದು ಗುರು ಹಿರಿಯರ ಸಮ್ಮುಖದಲ್ಲಿ ಹೊಸ ಬಾಳಿಗೆ ಈ ಜೋಡಿ ಕಾಲಿಟ್ಟಿದ್ದಾರೆ. ಈ ಜೋಡಿ ಶುಭಹಾರೈಸಲು ರಮ್ಯಾ ಕೂಡ ಬಂದಿದ್ದಾರೆ. ನವಜೋಡಿ ಶುಭ ಹಾರೈಸಿ ಬಂದಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾವ್ಯ ಶಾ-ನಿರ್ಮಾಪಕ ವರುಣ್
ಕಾವ್ಯ ಶಾ ಮತ್ತು ನಿರ್ಮಾಪಕ ವರುಣ್ ಇಂದು (ಜೂ.9) ಬೆಂಗಳೂರಿನ ನಂದಿ ಗ್ರೌಂಡ್ಸ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಆಗಿದ್ದಾರೆ. ಮದುವೆಗೆ ಲೂಸ್ ಮಾದ ಯೋಗಿ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಬಂದು ಶುಭ ಹಾರೈಸಿದ್ದಾರೆ. ವರುಣ್ ಮತ್ತು ರಮ್ಯಾ ಸಾಕಷ್ಟು ವರ್ಷಗಳಿಂದ ಪರಿಚಿಯವಿದ್ದು, ಸ್ನೇಹಿತನ ಮದುವೆಗೆ ಬಂದು ರಮ್ಯಾ ಶುಭ ಹಾರೈಸಿದ್ದರೆ. ಈ ವೇಳೆ ಸಾಕಷ್ಟು ಅಭಿಮಾನಿಗಳು ರಮ್ಯಾ ಜತೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.
ಅಂದುಕೊಂಡಂತೆ ಆಗಿದ್ದರೆ ಇಂದು (ಏ.18) ನಟಿ ಕಾವ್ಯ ಶಾ ಮತ್ತು ಬಹುಕಾಲದ ಸ್ನೇಹಿತ ವರುಣ್ ವಿವಾಹ ಮಹೋತ್ಸವ ಇಂದು ನಡೆಯಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ನಂದಿ ಗ್ರೌಂಡ್ಸ್ ಸಿದ್ಧಗೊಂಡಿತ್ತು. ಆದರೆ, ರವಿವಾರ ರಾತ್ರಿ ಭಾವಿ ಮಾವ ಅಕಾಲಿಕ ಮರಣ ಹೊಂದಿದ್ದಾರೆ. ಹಾಗಾಗಿ ಕಾವ್ಯ ಶಾ ಅವರ ಮದುವೆಯನ್ನು ಮುಂದೂಡಲಾಗಿದೆ. ಇದನ್ನೂ ಓದಿ : ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್
ವರುಣ್ ಮತ್ತು ಕಾವ್ಯ ಶಾ ಈ ಹಿಂದೆಯೇ ಹಸೆಮಣೆ ಏರಬೇಕಿತ್ತು. ಆರು ತಿಂಗಳ ಹಿಂದೆಯೇ ಮನೆಯಲ್ಲಿ ಮದುವೆ ನಿಶ್ಚಿಯವಾಗಿತ್ತು. ಆ ವೇಳೆಯಲ್ಲಿ ಪುನೀತ್ ರಾಜ್ ಕುಮಾರ್ ನಿಧನರಾದರು. ಪುನೀತ್ ಅವರಿಗೆ ಆಪ್ತರಾಗಿದ್ದ ವರುಣ್, ಆ ನೋವಿನಲ್ಲಿ ಮದುವೆ ಮಾಡಿಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಅಂದು ಕೂಡ ಈ ಜೋಡಿಯ ಮದುವೆ ಮುಂದೂಡಲಾಗಿತ್ತು. ಇದನ್ನೂ ಓದಿ : ‘ದಿ ಡೆಲ್ಲಿ ಫೈಲ್ಸ್’ : 1984ರ ಗಲಭೆಯೇ ಕಥಾವಸ್ತು ಎಂದ ವಿವೇಕ್ ಅಗ್ನಿಹೋತ್ರಿ
ವರುಣ್ ಮತ್ತು ಮತ್ತು ಕಾವ್ಯ ಶಾ ಆತ್ಮಿಯ ಸ್ನೇಹಿತರು. ಸ್ನೇಹವೇ ಪ್ರೀತಿಗೆ ತಿರುಗಿತ್ತು. ಹಲವು ವರ್ಷಗಳ ಕಾಲ ಪ್ರೇಮಿಗಳಾಗಿದ್ದವರು ಇದೀಗ ಸಪ್ತಪದಿ ತುಳಿಯಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ವಿಧಿಯಾಟ ಬೇರೆಯೇ ಆಟವಾಡಿದೆ. ಸಂಭ್ರಮ ತುಂಬಿದ್ದ ಮನೆಗಳಲ್ಲಿ ಶೋಕ ಆವರಿಸಿಕೊಂಡಿದೆ. ಇದನ್ನೂ ಓದಿ : ಅಜ್ಞಾತವಾಸಿಯಾದ ರಂಗಾಯಣ ರಘು ಮತ್ತು ಪಾವನಾ
ಇಂದು ವರುಣ್ ಅವರ ತಂದೆಯ ಅಂತ್ಯಕ್ರಿಯೆ ನಡೆಯಲಿದ್ದು, ನಂತರದ ದಿನಗಳಲ್ಲಿ ಮದುವೆ ದಿನಾಂಕವನ್ನು ತಿಳಿಸುವುದಾಗಿ ಕಾವ್ಯ ಶಾ ಮತ್ತು ವರುಣ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಲು ಅವರು ಮನವಿ ಮಾಡಿಕೊಂಡಿದ್ದಾರೆ.
ಕನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಕಾವ್ಯ ಶಾ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯನನ್ನೇ ಅವರು ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಇದನ್ನೂ ಓದಿ : ಬೆಳಗಾವಿ ಭಾಗದ ದಿಟ್ಟ ಅಧಿಕಾರಿಯ ಪಾತ್ರದಲ್ಲಿ ಧನಂಜಯ್
ಕಾವ್ಯ ಶಾ ಮದುವೆ ಆಗುತ್ತಿರುವ ಹುಡುಗ ವರುಣ್. ಮಾಧ್ಯಮ ಕ್ಷೇತ್ರದಲ್ಲೇ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಜತೆಗೆ ಕನ್ನಡದ ಬಹುತೇಕ ಸ್ಟಾರ್ ನಟರ ಜತೆ ಇವರಿಗೆ ಒಡನಾಟವಿದೆ. ಜೀ ಕನ್ನಡ ವಾಹಿನಿ ಸೇರಿದಂತೆ ಕನ್ನಡದ ನಾನಾ ವಾಹಿನಿಗಳ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ ವರುಣ್. ಇದನ್ನೂ ಓದಿ : Exclusive – ಸಿನಿಮಾವಾಗ್ತಿದೆ ಮಾಜಿ ಡಾನ್, ಹಾಲಿ ಕನ್ನಡಪರ ಹೋರಾಟಗಾರನ ಜೀವನ ಕಥೆ
ಕಾವ್ಯ ಶಾ ಮತ್ತು ವರುಣ್ ಭೇಟಿಯಾಗಿದ್ದು ಹತ್ತು ವರ್ಷಗಳ ಹಿಂದೆ ನಡೆದ ಫ್ಯಾಶನ್ ಶೋನಲ್ಲಿ. ಆಗ ಕಾವ್ಯ ಆ ಶೋ ಸ್ಪರ್ಧಿ. ಅಲ್ಲಿಂದ ಶುರುವಾದ ಇಬ್ಬರ ಸ್ನೇಹ, ಆನಂತರ ಪ್ರೇಮಕ್ಕೆ ತಿರುಗಿದೆ. ಈಗ ಜತೆಯಾಗಿ ಬದುಕು ನಡೆಸಲು ಹೊರಟಿದೆ ಜೋಡಿ. ಇದನ್ನೂ ಓದಿ : ನನ್ನ ಮುಗಿಸ್ಬಿಡ್ತೀನಿ ಅಂತಾನೆ: ಗಂಭೀರ ಆರೋಪ ಮಾಡಿದ ನಟಿ ಸಂಜನಾ
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕಾವ್ಯ ಶಾ, “ಹಲವು ವರ್ಷಗಳಿಂದ ನಾವಿಬ್ಬರೂ ಗೆಳೆಯರು. ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಂಡಿದ್ದೇವೆ. ಕುಟುಂಬದ ಒಪ್ಪಿಗೆ ಪಡೆದುಕೊಂಡು ಮದುವೆ ಆಗುತ್ತಿದ್ದೇವೆ. ಇದೊಂದು ರೀತಿಯಲ್ಲಿ ಲವ್ ಕಂ ಅರೇಂಜ್ಡ್ ಮದುವೆ’ ಎಂದರು. ಇದನ್ನೂ ನೋಡಿ : ನಟ ಚೇತನ್‌ಗೆ ನೀಡಿದ್ದ ಗನ್ ಮ್ಯಾನ್ ಹಿಂಪಡೆದ ಸರ್ಕಾರ
ಈಗಾಗಲೇ ಮದುವೆಗೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರಂತೆ ಕಾವ್ಯ. ಸದ್ಯದಲ್ಲಿಯೇ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ಸಿಲಿಬ್ರಿಟಿಗಳ ಕೈಗೆ ಇವರ ಮದುವೆ ಆಹ್ವಾನ ಪತ್ರಿಕೆ ಕೈ ಸೇರಲಿದೆ. ಇದನ್ನೂ ಓದಿ : ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮೂಕಜ್ಜಿಯ ಕನಸು, ತಮಿಳಿನ ತಾರೈ ತಪ್ಪಟ್ಟೈ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಕಾವ್ಯ, ಫಿಟ್ ನೆಸ್ ಬಗ್ಗೆ ತಮ್ಮದೇ ಆದ ಸ್ಟುಡಿಯೋ ಹೊಂದಿದ್ದಾರೆ. ಈ ಮೂಲಕ ಫಿಟ್ನೆಸ್ ಮಂತ್ರವನ್ನೂ ಅವರು ಅಭಿಮಾನಿಗಳ ಜತೆ ಸದಾ ಹಂಚಿಕೊಳ್ಳುತ್ತಲೇ ಇರುತ್ತಾರೆ.