Tag: ವರುಣ

  • ಮುಡಾ ಹಣ ವರುಣ ಕ್ಷೇತ್ರಕ್ಕೆ – ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು

    ಮುಡಾ ಹಣ ವರುಣ ಕ್ಷೇತ್ರಕ್ಕೆ – ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು

    ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಮುಡಾ (MUDA Scam) ಸಂಕಷ್ಟ ನಿಲ್ಲುವಂತೆ ಕಾಣ್ತಿಲ್ಲ. ಮುಡಾ ಹಣವನ್ನು ವರುಣ ಕ್ಷೇತ್ರದ (Varuna Constituency) ಹಳ್ಳಿಗಳ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಆರೋಪ ಕೇಳಿ ಬಂದಿದೆ.

    ಸಿಎಂ ಮೌಖಿಕ ಆದೇಶದ ಮೇರೆಗೆ ಕಾನೂನು ಮೀರಿ ಮುಡಾ ಹಣವನ್ನು ವರುಣ ಕ್ಷೇತ್ರದ ಹಳ್ಳಿಗಳ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಮೈಸೂರು ಮೂಲದ ಪಿ.ಎಸ್. ನಟರಾಜು ದೂರುಕೊಟ್ಟಿದ್ದಾರೆ.  ಇದನ್ನೂ ಓದಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!

    ಪ್ರಾಧಿಕಾರದ ಸಭೆಯ ಕಡತದಲ್ಲೇ ಈ ವಿಚಾರ ಉಲ್ಲೇಖವಾಗಿದೆ. ಆರ್ಥಿಕವಾಗಿ ನಷ್ಟದಲ್ಲಿದ್ದರೂ ಮುಡಾದ 450 ಕೋಟಿ ರೂ. ಮೊತ್ತದ ಕಾಮಗಾರಿ ಕೈಗೊಂಡು ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಿಬಿಐ ತನಿಖೆಗೆ ಸೂಚಿಸಬೇಕೆಂದು ಎಂದು ನಟರಾಜ್ ಕೋರಿದ್ದಾರೆ.

    ದೂರಿನ ಹಿನ್ನೆಲೆಯಲ್ಲಿ ಸಂಬಂಧ ಅಗತ್ಯ ದಾಖಲೆಗಳೊಂದಿಗೆ ಶೀಘ್ರ ವರದಿ ಸಲ್ಲಿಸುವಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸೆ.5ರಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

  • ಸಿಎಂ ಪುತ್ರನ ಎಡವಟ್ಟು – ಯತೀಂದ್ರ ಹೇಳಿದ ಮಹದೇವ್ ಯಾರು?

    ಸಿಎಂ ಪುತ್ರನ ಎಡವಟ್ಟು – ಯತೀಂದ್ರ ಹೇಳಿದ ಮಹದೇವ್ ಯಾರು?

    ಬೆಂಗಳೂರು: ಪುತ್ರ ಯತೀಂದ್ರ (Yathindra) ತಂದೆ ಸಿದ್ದರಾಮಯ್ಯನವರ (Siddaramaiah) ಜೊತೆ ಮಾತನಾಡಿದಾಗ ಕೇಳಿ ಬಂದ ಮಹದೇವ್‌ (Mahadev) ಅವರು ಮುಖ್ಯಮಂತ್ರಿಯವರ ಹತ್ತಿರ ಸಂಬಂಧಿ ಆಗಿದ್ದಾರೆ.

    ಮೂಲತಃ ಸಬ್ ರಿಜಿಸ್ಟ್ರಾರ್ ಆಗಿರುವ ಮಹದೇವ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಕರ್ತವ್ಯಾಧಿಕಾರಿಯಾಗಿ ನಿಯೋಜನೆ ಆಗಿದ್ದಾರೆ.

    ಮಹದೇವ ಅವರು ಯತೀಂದ್ರ ಅವರ ಆಪ್ತರಾಗಿದ್ದು, ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ ಸಬ್ ರಿಜಿಸ್ಟ್ರಾರ್ ಮಹದೇವ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಯತೀಂದ್ರ ಅವರು ನೇಮಿಸಿದ್ದಾರೆ ಎನ್ನಲಾಗುತ್ತಿದೆ. ಈಗ ಮಹದೇವ್ ಎಂದು ಕರೆಯಲಾಗುತ್ತಿದ್ದರೂ ಅವರ ಮೂಲ ಹೆಸರು ಮಾದೇ ಸ್ವಾಮಿ.  ಇದನ್ನೂ ಓದಿ: ಹಳಿಯಲ್ಲಿ ಕಬ್ಬಿಣದ ರಾಡ್, ದೊಡ್ಡ ಮರದ ದಿಮ್ಮಿ – ಮೈಸೂರಿನಲ್ಲಿ ತಪ್ಪಿತು ಭಾರೀ ರೈಲು ದುರಂತ

     

    ಏನಿದು ವಿವಾದ?
    ಬುಧವಾರ ಯತೀಂದ್ರ ಅವರು ವರುಣ (Varuna) ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಚಟ್ನಹಳ್ಳಿಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಸಭೆ ನಡೆಸಿ ಗ್ರಾಮದ ಜನರ ಅಹವಾಲು ಸ್ವೀಕರಿಸುತ್ತಿದ್ದರು.

    ಈ ವೇಳೆ ಅವರು ತಂದೆಗೆ ಕರೆ ಮಾಡಿದ್ದಾರೆ. ಯಾವುದೋ ವಿಷಯವನ್ನು ಪ್ರಸ್ತಾಪ ಮಾಡಿದ ಅವರು, ನಾನು ನೀಡಿದ ಲಿಸ್ಟ್‌ನದ್ದು ಮಾತ್ರ ಮಾಡಿ ಎಂದು ಸಾರ್ವಜನಿಕರ ಮುಂದೆಯೇ ತಾನು ನೀಡಿದ ಪಟ್ಟಿಯ ಬಗ್ಗೆ ಮಾತುಕತೆ ಮಾಡಿದ್ದಾರೆ.

    ಆರಂಭದಲ್ಲಿ ಅಪ್ಪ ಹೇಳಿ ಅಂತಾ ಯತೀಂದ್ರ ಸಿದ್ದರಾಮಯ್ಯ ಮಾತು ಶುರುಮಾಡಿದ್ದಾರೆ. ಈ ವೇಳೆ “ವಿವೇಕಾನಂದ ಯಾರು?” ಎಂದು ಸಿಎಂ ಪ್ರಶ್ನೆ ಕೇಳಿದ್ದಾರೆ. ಆಗ ಯತೀಂದ್ರ, ಆ ಮಹದೇವ್‌ ಅವರಿಗೆ‌ ಪೋನ್ ನೀಡುವಂತೆ ಸಿಎಂಗೆ ಹೇಳುತ್ತಾರೆ.

    ಮಹದೇವ್‌ಗೆ ಫೋನ್ ಕೊಟ್ಟ ತಕ್ಷಣ ಅವರನ್ನು ತರಾಟೆ ತೆಗೆದುಕೊಂಡ ಯತೀಂದ್ರ, ನಾನು ಕೊಟ್ಟಿದ್ದು ಬಿಟ್ಟು ಬೇರೆ ಯಾವುದು ಅದು ಅಂತಾ ಪ್ರಶ್ನಿಸಿದ್ದಾರೆ. ನನಗೆ ಅದೆಲ್ಲಾ ಗೊತ್ತಿಲ್ಲ‌. ನಾನು ಕೊಟ್ಟಿರುವ ನಾಲ್ಕು, ಐದು ಮಾತ್ರ ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

    ಸಿಎಂ ಸಿದ್ದರಾಮಯ್ಯನವರ (CM Siddaramaiah) ಸರ್ಕಾರದಲ್ಲಿ ಪುತ್ರನ ಹಸ್ತಕ್ಷೇಪ ಹೆಚ್ಚಾಗಿದೆ, ವೈಎಸ್‌ಟಿ (YST) ಸಂಗ್ರಹಿಸುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪದ ಬೆನ್ನಲ್ಲೇ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತಂದೆಯ ಜೊತೆ ಮಾತನಾಡುತ್ತಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ಮತ್ತೆ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.

  • ಹಲೋ ಅಪ್ಪ, ನಾನು ಕೊಟ್ಟಿರೋದು ನಾಲ್ಕೋ ಐದೋ ಅಷ್ಟು ಮಾತ್ರ ಮಾಡಿ – ಯತೀಂದ್ರ ಮಾತಿನ ಮರ್ಮ ಏನು?

    ಹಲೋ ಅಪ್ಪ, ನಾನು ಕೊಟ್ಟಿರೋದು ನಾಲ್ಕೋ ಐದೋ ಅಷ್ಟು ಮಾತ್ರ ಮಾಡಿ – ಯತೀಂದ್ರ ಮಾತಿನ ಮರ್ಮ ಏನು?

    ಮೈಸೂರು: ಸಿಎಂ ಸಿದ್ದರಾಮಯ್ಯನವರ (CM Siddaramaiah) ಸರ್ಕಾರದಲ್ಲಿ ಪುತ್ರನ ಹಸ್ತಕ್ಷೇಪ ಹೆಚ್ಚಾಗಿದೆ, ವೈಎಸ್‌ಟಿ (YST) ಸಂಗ್ರಹಿಸುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪದ ಬೆನ್ನಲ್ಲೇ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತಂದೆಯ ಜೊತೆ ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಬುಧವಾರ ಯತೀಂದ್ರ ಅವರು ವರುಣ (Varuna) ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಚಟ್ನಹಳ್ಳಿಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಸಭೆ ನಡೆಸಿ ಗ್ರಾಮದ ಜನರ ಅಹವಾಲು ಸ್ವೀಕರಿಸುತ್ತಿದ್ದರು.

     

    ಈ ವೇಳೆ ಅವರು ತಂದೆಗೆ ಕರೆ ಮಾಡಿದ್ದಾರೆ. ಯಾವುದೋ ವಿಷಯವನ್ನು ಪ್ರಸ್ತಾಪ ಮಾಡಿದ ಅವರು, ನಾನು ನೀಡಿದ ಲಿಸ್ಟ್‌ನದ್ದು ಮಾತ್ರ ಮಾಡಿ ಎಂದು ಸಾರ್ವಜನಿಕರ ಮುಂದೆಯೇ ತಾನು ನೀಡಿದ ಪಟ್ಟಿಯ ಬಗ್ಗೆ ಮಾತುಕತೆ ಮಾಡಿದ್ದಾರೆ.

    ಆರಂಭದಲ್ಲಿ ಅಪ್ಪ ಹೇಳಿ ಅಂತಾ ಯತೀಂದ್ರ ಸಿದ್ದರಾಮಯ್ಯ ಮಾತು ಶುರುಮಾಡಿದ್ದಾರೆ. ಈ ವೇಳೆ “ವಿವೇಕಾನಂದ ಯಾರು?” ಎಂದು ಸಿಎಂ ಪ್ರಶ್ನೆ ಕೇಳಿದ್ದಾರೆ. ಆಗ ಯತೀಂದ್ರ, ಆ ಮಹದೇವ ಅವರಿಗೆ‌ ಪೋನ್ ನೀಡುವಂತೆ ಸಿಎಂಗೆ ಹೇಳುತ್ತಾರೆ.

    ಮಹದೇವ್‌ಗೆ ಫೋನ್ ಕೊಟ್ಟ ತಕ್ಷಣ ಅವರನ್ನು ತರಾಟೆ ತೆಗೆದುಕೊಂಡ ಯತೀಂದ್ರ, ನಾನು ಕೊಟ್ಟಿದ್ದು ಬಿಟ್ಟು ಬೇರೆ ಯಾವುದು ಅದು ಅಂತಾ ಪ್ರಶ್ನಿಸಿದ್ದಾರೆ. ನನಗೆ ಅದೆಲ್ಲಾ ಗೊತ್ತಿಲ್ಲ‌. ನಾನು ಕೊಟ್ಟಿರುವ ನಾಲ್ಕು, ಐದು ಮಾತ್ರ ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

    ಕಳೆದ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ನಿಂತು ಶಾಸಕರಾಗಿ ಆಯ್ಕೆ ಆಗಿದ್ದರು. ಆದರೆ ಈ ಬಾರಿ ಈ ಕ್ಷೇತ್ರವನ್ನು ತಂದೆಗೆ ಬಿಟ್ಟು ಕೊಟ್ಟಿದ್ದರು.

     

  • ಸಿಎಂ ಪುತ್ರ ಯತೀಂದ್ರಗೆ ವರುಣದಲ್ಲಿ ಫುಲ್ ಡಿಮ್ಯಾಂಡ್

    ಸಿಎಂ ಪುತ್ರ ಯತೀಂದ್ರಗೆ ವರುಣದಲ್ಲಿ ಫುಲ್ ಡಿಮ್ಯಾಂಡ್

    ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿನಿಧಿಸಿರುವ ವರುಣ (Varuna) ಕ್ಷೇತ್ರದಲ್ಲಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಫುಲ್ ಆಕ್ಟೀವ್ ಆಗಿದ್ದಾರೆ. ಸಿಎಂ ಪುತ್ರನಿಗೆ ಮನವಿ ಪತ್ರ ಕೊಡಲು ಜನ ಎಲ್ಲಾ ಕಡೆ ಮುಗಿಬೀಳುತ್ತಿದ್ದಾರೆ.

    ಸಿದ್ದರಾಮಯ್ಯ ಸಿಎಂ ಆದ ಬಳಿಕ ತಮ್ಮ ಕ್ಷೇತ್ರದ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಈಗ ಮೈಸೂರಿನಲ್ಲಿ (Mysuru) ಭಾರೀ ಡಿಮ್ಯಾಂಡ್ ವ್ಯಕ್ತವಾಗಿದೆ. ಇದನ್ನೂ ಓದಿ: ಪೊಲೀಸ್‌ ವರ್ಗಾವಣೆ ಸಭೆಯಲ್ಲಿ ವೈಎಸ್‌ಟಿ ಟ್ಯಾಕ್ಸ್‌ನವರಿಗೆ ಏನು ಕೆಲಸ? – ಹೆಚ್‌ಡಿಕೆಯಿಂದ ಮಿಡ್‌ನೈಟ್‌ ಬಾಂಬ್‌

    ಯತೀಂದ್ರ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಸುಮಾರು 3 ಗಂಟೆಗೂ ಹೆಚ್ಚು ಕಾಲ ವರುಣ ಕ್ಷೇತ್ರದ ಜನರ ಬಳಿ ಮನವಿ ಪತ್ರ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಭ್ರಷ್ಟರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಶಾಕ್- ಬೆಂಗಳೂರಿನ 45 ಕಡೆ ಏಕಕಾಲದಲ್ಲಿ ದಾಳಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ ಎಣಿಕೆ ಆರಂಭಕ್ಕೂ ಮುನ್ನ ನಾಡದೇವತೆ ಮೊರೆ ಹೋದ ಸೋಮಣ್ಣ

    ಮತ ಎಣಿಕೆ ಆರಂಭಕ್ಕೂ ಮುನ್ನ ನಾಡದೇವತೆ ಮೊರೆ ಹೋದ ಸೋಮಣ್ಣ

    ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ (Assembly Election Result) ಆರಂಭಕ್ಕೂ ಮುನ್ನ ಬೆಳ್ಳಂಬೆಳಗ್ಗೆ ಚಾಮರಾಜನಗರ (Chamarajanagar)  ಹಾಗೂ ವರುಣ (Varuna) ಕ್ಷೇತ್ರದ ಅಭ್ಯರ್ಥಿ ವಿ. ಸೋಮಣ್ಣ (V Somanna) ನಾಡದೇವತೆ ಮೊರೆ ಹೋಗಿದ್ದಾರೆ.

    ಮೈಸೂರಿನ (Mysuru) ಚಾಮುಂಡಿ ಬೆಟ್ಟಕ್ಕೆ (Chamundi Hill) ಭೇಟಿ ನೀಡಿದ ಸೋಮಣ್ಣ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಿಯ ಮೊದಲ ಪೂಜೆ ಕಾರ್ಯದಲ್ಲೇ ಸೋಮಣ್ಣ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಕಾಲಿಗೆ ಮೊಬೈಲ್‌ ಕಟ್ಟಿಕೊಂಡು, ಕೇಸರಿ ಶಾಲು ಹಾಕ್ಕೊಂಡು ಮತ ಎಣಿಕೆಗೆ ಬಂದಿದ್ದ ಏಜೆಂಟ್‌ ವಾಪಸ್‌

    ವರುಣ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದ್ದು, ಚಾಮರಾಜನಗರದ ಜೊತೆಗೆ ವರುಣ ಕ್ಷೇತ್ರವನ್ನೂ ಸೋಮಣ್ಣ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇದೀಗ ಮತ ಎಣಿಕೆ ಪ್ರಕ್ರಿಯೆಗೂ ಮುನ್ನ ನಾಡದೇವತೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: Karnataka Election 2023 Result – ರಾಜ್ಯಾದ್ಯಂತ ಮತ ಎಣಿಕೆ ಆರಂಭ LIVE Updates

  • ಒಂದು ಕೊಡ್ರಯ್ಯ ಅಂದ್ರೆ 2 ಕೊಟ್ಟವ್ರೆ; ಚಾಮರಾಜನಗರ ವೋಲ್ಟೇಜ್ ಆದ್ರೆ, ವರುಣಾ ಹೈವೋಲ್ಟೇಜ್: ಸೋಮಣ್ಣ

    ಒಂದು ಕೊಡ್ರಯ್ಯ ಅಂದ್ರೆ 2 ಕೊಟ್ಟವ್ರೆ; ಚಾಮರಾಜನಗರ ವೋಲ್ಟೇಜ್ ಆದ್ರೆ, ವರುಣಾ ಹೈವೋಲ್ಟೇಜ್: ಸೋಮಣ್ಣ

    ಚಾಮರಾಜನಗರ: ಒಂದು ಕೊಡ್ರಯ್ಯ ಅಂದ್ರೆ ಎರಡು ಕೊಟ್ಟವ್ರೆ, ಚಾಮರಾಜನಗರ (Chamarajanagar) ವೋಲ್ಟೇಜ್ ಆದ್ರೆ, ವರುಣಾ (Varuna) ಹೈ ವೋಲ್ಟೇಜ್ ಎಂದು ಸಚಿವ ವಿ.ಸೋಮಣ್ಣ (V Somanna) ಎರಡು ಕಡೆ ಸ್ಪರ್ಧಿಸಿರುವ ಬಗ್ಗೆ ಮಾರ್ಮಿಕವಾಗಿ ನುಡಿದರು.

    ಚಾಮರಾಜನಗರ ತಾಲೂಕು ಕೊತ್ತಲವಾಡಿಯಲ್ಲಿ ರೋಡ್ ಶೋ (Road Show) ವೇಳೆ ಮಾತನಾಡಿದ ಅವರು, ಎರಡು ಕಡೆ ಓಡಾಡುವುದು ಸುಲಭದ ಕೆಲಸ ಅಲ್ಲ, ವರುಣಾ ಹೈವೋಲ್ಟೇಜ್ ಅಂತ ಅವ್ರು ಹೇಳ್ತಿದ್ರು, ಆದ್ರೆ ಎಂಟೇ ದಿನಕ್ಕೆ ಹೈಯು ಇಲ್ಲ ಪೈಯು ಇಲ್ಲ ಆಗಿದೆ. ಇನ್ನೊಂದು ಮೂರು, ನಾಲ್ಕು ದಿನ ಹೋದ್ರೆ ಎಲ್ಲಾ ವೋಲ್ಟೇಜ್ ಹೋಗಿ ಅವರು ಏನಾಗುತ್ತಾರೆ ಅಂತ ನೀವೇ ನೋಡಿ ಎಂದು ವ್ಯಂಗ್ಯವಾಡಿದರು.

    ಗೋವಿಂದರಾಜನಗರ ತಬ್ಬಲಿ ಆಗಿದೆ, ನೂರಾರು ಜನ ಕಾರ್ಯಕರ್ತರು ಇಲ್ಲಿ ಬಂದು ಓಡಾಡುತ್ತಿದ್ದಾರೆ. ವರುಣಾದಲ್ಲಿ ಸಾವಿರಾರು ಜನರು ಬಂದು ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಸಿದ್ದರಾಮಯ್ಯ ಅವರು ನಾನು ನಾಮಪತ್ರ ಹಾಕಿದ್ರೆ ಮತ್ತೆ ವೋಟ್ ಹಾಕುವುದಕ್ಕೆ ಮಾತ್ರ ಬರುತ್ತೇನೆ ಎಂದು ಹೇಳಿದ್ದರು. ಆದರೆ ಅವರು ಸೋಮವಾರದಿಂದ ವರುಣಾದಲ್ಲೇ ಇರುತ್ತಾರಂತೆ. ಮುಂದಿನ ಸೋಮವಾರದಿಂದ ವರುಣಾದಲ್ಲೇರುತ್ತೇನೆ, ನನ್ನ ಕೈಲಿ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

    ಸಿದ್ದರಾಮಯ್ಯ (Siddaramaiah) ಅವರ ಕುಟುಂಬ ಯಾವತ್ತೂ ರೋಡ್‌ಗೆ ಹೋಗಿ ಒಂದು ವೋಟ್ ಕೇಳಿರಲಿಲ್ಲ. ಈಗ ಎಲ್ಲಾ ಕಡೆ ಕೇಳ್ತಿದ್ದಾರೆ. ಎಲ್ಲಾ ಹೈ ವೋಲ್ಟೇಜ್ ಪ್ರಭಾವ ಎಂದ ಅವರು, ವರುಣಾದಲ್ಲಿ ಒಂದು ದಿನ ಅಲ್ಲ, ದಿನವೂ ನಮ್ಮ ಪ್ರಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. ಈ ರಾಜ್ಯದ ಮಾಜಿ ಸಿಎಂಗೆ ಮುಜುಗರವಾಗಬಾರದೆಂದು ಸಹಿಸಿಕೊಂಡಿದ್ದೇನೆ. ಅರ್ಥ ಮಾಡಿಕೊಂಡಿಲ್ಲ ಅಂದ್ರೆ ಹೇಗೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೂವಿನಲ್ಲಿ ಕಲ್ಲು ಬಂದಿಲ್ಲ, ಯಾರೋ ದುಷ್ಕರ್ಮಿಗಳು ಎಸೆದಿದ್ದಾರೆ : ಪರಮೇಶ್ವರ್

    ಪ್ರತಾಪ್ ಸಿಂಹರಿಂದಲೇ ಗಲಾಟೆಯಾಗ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಪ್ರತಾಪ್ ಸಿಂಹ ಜವಾಬ್ದಾರಿಯುತ ಲೋಕಸಭಾ ಸದಸ್ಯ. ಆತ ನನಗೆ ಸಹೋದರ ಸಮಾನ, ಪಕ್ಷದ ಭವಿಷ್ಯದ ನಾಯಕ, ವಾಸ್ತವಾಂಶ ಇರೋದನ್ನು ಮಾತಾಡ್ತಾರೆ ಎಂದರು. ಇದನ್ನೂ ಓದಿ: ಮೋದಿ ರೋಡ್ ಶೋ- ಮದುಮಗ ಆಯ್ತು, ಈಗ ಮದುವೆಗೆ ಹೋಗಲು ಕಷ್ಟಪಟ್ಟ ವಧು

  • ಸೋಮಣ್ಣ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಲ್ಲು ತೂರಾಟ – ಓರ್ವನಿಗೆ ಗಾಯ

    ಸೋಮಣ್ಣ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಲ್ಲು ತೂರಾಟ – ಓರ್ವನಿಗೆ ಗಾಯ

    ಮೈಸೂರು: ಸಿದ್ದರಾಮನಹುಂಡಿಯಲ್ಲಿ ಸೋಮಣ್ಣ ಪ್ರಚಾರದ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ (BJP) ಪ್ರಚಾರ ರಥದ ಮೇಲೆ ಕಾಂಗ್ರೆಸ್ (Congress) ಕಾರ್ಯಕರ್ತರಿಂದ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿದೆ.

    ಸಿದ್ದರಾಮಯ್ಯ (Siddaramaiah) ಅವರ ಅಣ್ಣನ ಮನೆ ಮುಂದೆ ಪ್ರಚಾರ ಮಾಡುವಾಗ ಈ ಘಟನೆ ನಡೆದಿದೆ. ಘಟನೆ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ನಡೆದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

    ಘಟನೆಯೇನು?: ಪ್ರಚಾರಕ್ಕಾಗಿ ಬಿಜೆಪಿ ನಾಯಕರು ಸಿದ್ದರಾಮಯ್ಯನಹುಂಡಿಗೆ ಎಂಟ್ರಿ ಆಗುತ್ತಿದ್ದಂತೆ ಸ್ಥಳೀಯರಿಂದ ಕಿರಿಕ್ ನಡೆದಿರುವ ಆರೋಪ ಕೇಳಿ ಬಂದಿದೆ. ಗ್ರಾಮಕ್ಕೆ ಬಿಜೆಪಿ ನಾಯಕರು ಎಂಟ್ರಿ ಆಗುತ್ತಿದ್ದ ಕಾರುಗಳನ್ನು ತಡೆದು ಗಲಾಟೆ ನಡೆಸಿದ್ದಾರೆ. ಈ ವೇಳೆ ಕಾರಿನಿಂದ ಇಳಿದು ಯುವಕ ನಾಗೇಶ್ ಪ್ರಶ್ನೆ ಮಾಡಿದ್ದಾನೆ. ನಾಗೇಶ್ ಪ್ರಶ್ನೆ ಮಾಡುತ್ತಿದ್ದಂತೆ 30ಕ್ಕೂ ಹೆಚ್ಚು ಜನರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಕನಸು ನನಸು – ನೂತನ ಮನೆಯ ಗೃಹ ಪ್ರವೇಶ, ಸ್ಮಾರಕ ಲೋಕಾರ್ಪಣೆ

    ಪ್ರಚಾರ ರಥದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ (V Somanna), ಸಂಸದ ಪ್ರತಾಪ್ ಸಿಂಹ (Pratap Simha) ಇದ್ದರು. ಸ್ವಲ್ಪದರ  ಅಂತದರಲ್ಲೇ ಅಭ್ಯರ್ಥಿ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಘಟನೆಯಿಂದ ಪಾರಾಗಿದ್ದಾರೆ. ಘಟನೆ ಕುರಿತು ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯಾವ್ಯಾವ ಮತಗಟ್ಟೆಗಳನ್ನು ಸೂಕ್ಷ್ಮ, ಅತಿಸೂಕ್ಷ್ಮ ಘೋಷಿಸಬೇಕು – ಮಾಹಿತಿ ಕೋರಿ ಏಜೆಂಟ್‌ಗಳಿಗೆ ಕರಂದ್ಲಾಜೆ ಪತ್ರ

  • ಸಿದ್ದರಾಮಯ್ಯಗೆ ರೆಡ್ ಸಿಗ್ನಲ್ – ಕೋಲಾರ ಕಾಂಗ್ರೆಸ್‌ನಲ್ಲಿ ಮತ್ತೆ ಆರಂಭವಾಯ್ತು ಗುಂಪುಗಾರಿಕೆ

    ಸಿದ್ದರಾಮಯ್ಯಗೆ ರೆಡ್ ಸಿಗ್ನಲ್ – ಕೋಲಾರ ಕಾಂಗ್ರೆಸ್‌ನಲ್ಲಿ ಮತ್ತೆ ಆರಂಭವಾಯ್ತು ಗುಂಪುಗಾರಿಕೆ

    ಕೋಲಾರ : ಕೋಲಾರ ಸ್ಪರ್ಧೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಹಿಂದೆ ಸರಿಯುವ ಸೂಚನೆ ನೀಡಿರುವ ಹಿನ್ನಲೆಯಲ್ಲಿ, ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೋಲಾರದಲ್ಲಿ ಸಿದ್ದು ಬದಲಿಗೆ ಕಾಂಗ್ರೆಸ್‌ನಿಂದ (Congress) ಅಭ್ಯರ್ಥಿ ಯಾರು ಎನ್ನುವ ಕುರಿತು ಚರ್ಚೆ‌ ಜೋರಾಗಿದ್ದು, ಮತ್ತೊಮ್ಮೆ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಬಣ ರಾಜಕೀಯ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದೆ.

    ವಿಪಕ್ಷ ನಾಯಕ‌ ಸಿದ್ದರಾಮಯ್ಯ (Siddaramaiah) ಕೋಲಾರ (Kolar) ಕ್ಷೇತ್ರದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಕೋಲಾರ ಕಾಂಗ್ರೆಸ್ ವಲಯದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿದೆ. ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತವನ್ನು ಜ.9ರಂದು‌ ಕೋಲಾರದಲ್ಲಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಕೋಲಾರದಲ್ಲಿ ಸಿದ್ದು ಸ್ಪರ್ಧೆಗೆ ಪೂರ್ವ‌ ತಯಾರಿಯನ್ನು ಮಾಡಲಾಯಿತು.

    ವಾರ್ಡ್ ಸಭೆಗಳು, ಗ್ರಾಮಾಂತರ‌ ಸಭೆಗಳು ಸೇರಿದಂತೆ‌ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಹೈಕಮಾಂಡ್ ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರ ಅಷ್ಟೊಂದು ಸೇಫ್ ಅಲ್ಲ, ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದೆ ಎನ್ನಲಾಗಿದೆ. ಇದರಿಂದ ಸಿದ್ದರಾಮಯ್ಯ ಕೋಲಾರದಿಂದ ಯೂಟರ್ನ್ ಹೊಡೆದ ಮೇಲೆ ಕೋಲಾರದ ಕಾಂಗ್ರೆಸ್ ವಲಯದಲ್ಲಿ ಸಿದ್ದು ಬದಲಿಗೆ ಯಾರು ಕಾಂಗ್ರೆಸ್ ಅಭ್ಯರ್ಥಿ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ಜೊತೆಗೆ ಕೆ.ಹೆಚ್​.ಮುನಿಯಪ್ಪ ಮತ್ತು ರಮೇಶ್​ ಕುಮಾರ್​ ಬಣಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಲು ಮತ್ತೆ ಸಕ್ರಿಯವಾಗಿವೆ.

    ಈಗಾಗಲೇ ಕೋಲಾರದ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳ ಲಿಸ್ಟ್‌ನಲ್ಲಿ ಎ.ಶ್ರೀನಿವಾಸ್​, ಎಲ್​.ಎ.ಮಂಜುನಾಥ್​, ಬ್ಯಾಲಹಳ್ಳಿ ಗೋವಿಂದಗೌಡ, ಊರುಬಾಗಿಲು ಶ್ರೀನಿವಾಸ್​, ಚಿಕ್ಕರಾಯಪ್ಪ, ಕೊತ್ತೂರು ಮಂಜುನಾಥ್​, ವಿ.ಆರ್​ ಸುದರ್ಶನ್​ ಸೇರಿ ಹಲವು ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇವೆಲ್ಲವನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಕೋಲಾರದ ಬಣ ರಾಜಕೀಯಕ್ಕೆ ತಿಲಾಂಜಲಿ‌‌ ಇಡಲು ಕೆ.ಎಚ್.ಬಣ ಮತ್ತು ರಮೇಶ್ ಕುಮಾರ್ ಬಣ ಎರಡರಲ್ಲೂ ಗುರುತಿಸಿಕೊಂಡಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಜೊತೆ ಡಿಕೆಶಿ ಮಾತುಕತೆ ನಡೆಸಿ ಚುನಾವಣೆಗೆ ಸಜ್ಜಾಗುವಂತೆ‌ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಗೋವಿಂದಗೌಡ ಹೇಳೋದೆ ಬೇರೆ. ಸಿದ್ದರಾಮಯ್ಯ ಬರದೆ, ಹೈಕಮಾಂಡ್​ ಸೂಚನೆ ಕೊಟ್ಟರೆ ತಾವು ಸ್ಪರ್ಧೆಗೆ ಸಿದ್ಧ ಎಂದಿದ್ದಾರೆ.

    ಸಿದ್ದರಾಮಯ್ಯ ಕೋಲಾರದಿಂದ ಹಿಂದೆ ಸರಿದ‌ ಹಿನ್ನೆಲೆಯಲ್ಲಿ ಮತ್ತೆ ಜಿಲ್ಲೆಯ ಬಣ ರಾಜಕೀಯಗಳು ಮುನ್ನೆಲೆಗೆ ಬರುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಇಷ್ಟು ದಿನ ಸಿದ್ದರಾಮಯ್ಯ ಬರ್ತಾರೆ ಎನ್ನುವ ಕಾರಣಕ್ಕೆ ಬೂದಿ ಮುಚ್ಚಿದ ಕೆಂಡದಂತಿದ್ದ ನಾಯಕರ ಮುನಿಸು ಹಾಗೂ ಬಣ ರಾಜಕೀಯ ಮತ್ತೆ ಮುನ್ನೆಲೆಗೆ ಬಂದು ಕೆ.ಹೆಚ್​ ಮುನಿಯಪ್ಪ ತಮ್ಮ ಸೋಲಿನ ಸೇಡು ತೀರಿಸಿಕೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಇನ್ನು ಸಿದ್ದು ಕೋಲಾರಕ್ಕೆ ಬರುವುದಿಲ್ಲ ಅಂದರೆ ಕಾಂಗ್ರೆಸ್​ ಪಕ್ಷಕ್ಕೂ ಕೂಡಾ ಜಿಲ್ಲೆಯಲ್ಲಿ ಹಿನ್ನೆಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.

    ಹಾಗಾಗಿ ಈ ಎಲ್ಲಾ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಡಿ.ಕೆ ಶಿವಕುಮಾರ್ ಕಾಂಗ್ರೆಸ್​ ಪಕ್ಷವನ್ನು ಉಳಿಸಿ, ಎಲ್ಲರನ್ನು ಸರಿದೂಗಿಸಿಕೊಂಡು ಹೋಗಬಲ್ಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಅಭ್ಯರ್ಥಿ ಫೈನಲ್​ ಆಗುತ್ತಿದ್ದಂತೆ ಸಿದ್ದರಾಮಯ್ಯ ಕೋಲಾರಕ್ಕೆ ಬರುವುದಿಲ್ಲ ಎನ್ನುವುದನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅದಕ್ಕೆ ಪೂರಕ ಎಂಬಂತೆ ಈಗಾಗಲೇ ಸಿದ್ದರಾಮಯ್ಯರನ್ನು ಭಾನುವಾರ ಭೇಟಿ ಮಾಡಿದ್ದ ನಾಯಕರು ಕೋಲಾರ ಹಾಗೂ ವರುಣ 2 ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವಂತೆಯೂ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಜ್ಯಕ್ಕೆ ಬರಲಿರುವ ರಾಹುಲ್​ ಗಾಂಧಿ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಅವರನ್ನು ಕೋಲಾರದಲ್ಲಿ ಸ್ಪರ್ಧೆ ಮಾಡಲು ಕಳಿಸುವಂತೆ ಮನವಿ ಮಾಡಲಿದ್ದಾರೆ. ಈ ಕುರಿತು ಈಗಾಗಲೇ ದಲಿತ ಮುಖಂಡರು ಹಾಗೂ ಕಾಂಗ್ರೆಸ್​ ಮುಖಂಡರು ಸಭೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾರತ ಧ್ವಜ ಕೆಳಗಿಳಿಸಿ ಖಲಿಸ್ತಾನ್‌ ಧ್ವಜ ಹಾರಿಸಿದ ಪ್ರತ್ಯೇಕತಾವಾದಿಗಳು – ಭಾರತ ಸರ್ಕಾರ ಬೇಸರ

    ಒಟ್ಟಿನಲ್ಲಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆಯಿಂದ ತಣ್ಣಗಾಗಿದ್ದ ಬಣ ರಾಜಕೀಯ, ಸಿದ್ದು ಯೂ ಟರ್ನ್ ನಂತರ ಬಣ ರಾಜಕೀಯ ಆರಂಭವಾಗುವ ಜೊತೆಗೆ ಮುಂದೆ‌‌ ಕಾಂಗ್ರೆಸ್‌ನಿಂದ ಅಭ್ಯರ್ಥಿ ಯಾರು ಅನ್ನುವ ಕುತೂಹಲ ಮತ್ತು ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಜೊತೆಗೆ ಸಿದ್ದರಾಮಯ್ಯ ಅವರನ್ನು ಇಲ್ಲಿಗೆ ಕರೆತರಬೇಕು ಎನ್ನುವ ಪ್ರಯತ್ನಗಳು ನಡೆಯುತ್ತಿರುವುದಂತು ಸುಳ್ಳಲ್ಲ. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಇಂದು ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಆಟೋ ಮುಷ್ಕರ

  • ಬೆಂಗ್ಳೂರು ಮಳೆಗೆ 2 ಮನೆ ಕುಸಿತ- ಹಬ್ಬಕ್ಕೆ ಊರಿಗೆ ಹೊರಟು ರಸ್ತೆಯಲ್ಲೇ ರಾತ್ರಿ ಕಳೆದ ಜನ

    ಬೆಂಗ್ಳೂರು ಮಳೆಗೆ 2 ಮನೆ ಕುಸಿತ- ಹಬ್ಬಕ್ಕೆ ಊರಿಗೆ ಹೊರಟು ರಸ್ತೆಯಲ್ಲೇ ರಾತ್ರಿ ಕಳೆದ ಜನ

    ಬೆಂಗಳೂರು: ನಗರದಲ್ಲಿ ಮತ್ತೆ ಗುರುವಾರದಿಂದ ವರುಣ ಆರ್ಭಟಿಸಿದ್ದಾನೆ. ಗಣೇಶ ಹಬ್ಬದ ಖುಷಿಯಲ್ಲಿ ಶಾಪಿಂಗ್ ಮಾಡೋಕೆ ಬಂದವರಿಗೆ ವರುಣ ನಿರಾಸೆ ಮೂಡಿಸಿದ್ದಾನೆ.

    ಎಡಬಿಡದೇ ಸುರಿದ ಮಳೆಯಿಂದಾಗಿ ಬಾಳೆಕಂದುಗಳನ್ನ ವ್ಯಾಪಾರಸ್ಥರು ರಸ್ತೆಯಲ್ಲೇ ಬಿಟ್ಟು ಹೋಗುವಂತಾಯ್ತು. ಮಳೆಯ ಆರ್ಭಟದಿಂದ ವ್ಯಾಪಾರ ಡಲ್ಲಾಗಿತ್ತು. ಮೆಜೆಸ್ಟಿಕ್ ಸುತ್ತಮುತ್ತ, ಗಾಂಧಿಬಜಾರ್, ಶಾಂತಿನಗರ, ಗಿರಿನಗರ, ಆಶ್ರಮ, ಕತ್ರಿಗುಪ್ಪೆ, ಚಿಕ್ಕಪೇಟೆ, ಜಯನಗರ, ಮಾರುತಿನಗರ ಮುಂತಾದ ಪ್ರಮುಖ ಶಾಪಿಂಗ್ ಪಾಯಿಂಟ್ ಗಳಲ್ಲಿ ಭಾರೀ ಮಳೆಯಾಗಿತ್ತು.

    ಮಳೆಯ ಕಣ್ಣಮುಚ್ಚಾಲೆಯಾಟಕ್ಕೆ ಹಬ್ಬಕ್ಕೆಂದು ದೂರದೂರುಗಳಿಗೆ ತೆರಳಲು ಕಾಯುತ್ತಿದ್ದ ಪ್ರಯಾಣಿಕರು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪರದಾಡುವಂತಾಯ್ತು. ಮಳೆಯ ಮಧ್ಯೆ ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ನಿಯಂತ್ರಿಸಲು ಸಂಚಾರಿ ಪೊಲೀಸ್, ಕೆಎಸ್‍ಆರ್‍ಟಿಸಿ ಸಿಬ್ಬಂದಿ, ಹಿರಿಯ ಅಧಿಕಾರಿಗಳು ರಾತ್ರಿ ಸುಮಾರು 3 ಗಂಟೆವರೆಗೂ ರೋಡ್‍ನಲ್ಲೆ ನಿಲ್ಲಬೇಕಾಯ್ತು. ಯಶವಂತಪುರದ ಗೋವರ್ಧನ ಚಿತ್ರಮಂದಿರದ ಮುಂಭಾಗ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಗಂಟೆಗಟ್ಟಲೇ ಕಾಯುವಂತಾಯ್ತು. ಕೆಎಸ್‍ಆರ್‍ಟಿಸಿ ವಿರುದ್ಧ ಪ್ರಯಾಣಿಕರು ವಾಗ್ದಾಳಿ ನಡೆಸಿದ್ರು.

    ಮಳೆಯ ಅಬ್ಬರಕ್ಕೆ ನಾಗಸಂದ್ರ ಕಾಲೋನಿಯಲ್ಲಿ 2 ಮನೆ ಕುಸಿದಿವೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳೀಯರೇ ಟಾರ್ಪಲ್ ಕಟ್ಟಿಕೊಟ್ಟು ಮಳೆ ಸಂತ್ರಸ್ತರಿಗೆ ನೆರವಾಗಿದ್ದಾರೆ.

    ಇನ್ನು ಗಣಪತಿ ಹಬ್ಬ, ವೀಕೆಂಡ್ ಮತ್ತು ಭಾರೀ ಮಳೆ ಹಿನ್ನೆಲೆಯಲ್ಲಿ ಊರಿಗೆ ಹೊರಟ ಸಾವಿರ ಸಾವಿರ ಬೆಂಗಳೂರಿಗರು ರಾತ್ರಿಯಿಡೀ ನಡುರಸ್ತೆಯಲ್ಲೇ ರಾತ್ರಿ ಕಳೆದಿದ್ದಾರೆ. ಕಾರಣ ಎಲ್ಲೆಲ್ಲೂ ಟ್ರಾಫಿಕ್ ಜಾಮ್. ಅದ್ರಲ್ಲೂ ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ನಸುಕಿನ ಜಾವ 2 ಗಂಟೆ ಕಳೆದ್ರೂ ವಾಹನ ದಟ್ಟಣೆಯಿತ್ತು. ಮೆಜೆಸ್ಟಿಕ್‍ನಿಂದ ಹಿಡಿದು ನೆಲಮಂಗಲದವರೆಗೂ ರಸ್ತೆಯುದ್ದಕ್ಕೂ ವಾಹನಗಳು ನಿಂತಿದ್ದು ಕಂಡು ಬಂತು. ಇನ್ನು ತಮ್ಮೂರಿನ ಬಸ್ ಹಿಡಿಯಲು ಚಿಕ್ಕಮಕ್ಕಳನ್ನು ಕಟ್ಟಿಕೊಂಡ ಜನ ಚಳಿಯಲ್ಲೇ ರಸ್ತೆ ಬದಿ ನಿಂತಿದ್ದು ಕಂಡುಬಂದಿತ್ತು.

  • ಮಳೆಗಾಗಿ ಗೊಂಬೆಗಳ ಮದುವೆ ಮಾಡಿಸಿದ್ರು ವಿಜಯಪುರ ಗ್ರಾಮದ ಜನತೆ

    ಮಳೆಗಾಗಿ ಗೊಂಬೆಗಳ ಮದುವೆ ಮಾಡಿಸಿದ್ರು ವಿಜಯಪುರ ಗ್ರಾಮದ ಜನತೆ

    ವಿಜಯಪುರ: ಅಲ್ಲಿ ಸುಂದರವಾಗಿ ಮದುವೆ ಸಮಾರಂಭ ಏರ್ಪಟ್ಟಿತ್ತು. ವಧುವರರ ಬಂಧುಗಳು, ವಾಲಗದವರು ರಾಗ ತಾಳದಲ್ಲಿ ತಲ್ಲಿನರಾಗಿ ಗಟ್ಟಿಮೇಳ ಬಾರಿಸುತ್ತಿದ್ದರೆ, ಬಾಣಸಿಗರು ನಾನಾ ಭಕ್ಷ್ಯಗಳ ತಯಾರಿಕೆಯಲ್ಲಿ ತೊಡಗಿದ್ದರು. ಹಿರಿಯರು ಇತರರ ಆಗಮನಕ್ಕಾಗಿ ಕೈಮುಗಿದು ಕರೆಯುತ್ತಿದ್ದರು. ಇಷ್ಟೆಲ್ಲಾ ನಡೆದಿದ್ದು ಗೊಂಬೆಗಳ ಮದುವೆ ಸಮಾರಂಭದಲ್ಲಿ.

    ಹೌದು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ಗ್ರಾಮದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಸಡಗರ ಸಂಭ್ರಮದಿಂದ ಗೊಂಬೆಗಳ ಮದುವೆ ಮಾಡಿ ವರುಣ ದೇವನಲ್ಲಿ ಸಮೃದ್ಧವಾಗಿ ಮಳೆ ಸುರಿಯಲಿ ಎಂದು ಬೇಡಿಕೊಂಡರು.

    ನಿಜವಾದ ಮದುವೆ ಸಮಾರಂಭ ಹೇಗೆ ನಡೆಯುತ್ತೋ ಹಾಗೆ ಇಲ್ಲಿಯೂ ನಡೆಯಿತು. ಆ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಎದಿರುಗೊಳ್ಳುವ ಶಾಸ್ತ್ರ ಮುಗಿದು ಮೆರವಣಿಗೆ ಮೂಲಕ ವಧುವನ್ನು ರಾಮಲಿಂಗೇಶ್ವರ ದೇವಸ್ಥಾನಕ್ಕೆ ತಂದು ವಧುವರರ ಅರಿಷಿನ ಹಚ್ಚುವ, ಸುರಿಗೆ ಸುತ್ತುವ ಕಾರ್ಯ ನಡೆಯಿತು. ನಂತರ ಗರ್ಭ ಗುಡಿಯಲ್ಲಿ ದೇವರ ಅಕ್ಷತಾ ಕಾರ್ಯ ನಂತರ ದೇವಸ್ಥಾನದ ಹೊರ ಪ್ರದೇಶದಲ್ಲಿ ದೈವದ ಅಕ್ಷತಾ ಕಾರ್ಯ ನೆರವೇರಿತು.

    ನಂತರ ಮದುವೆಗೆಂದು ಬಂದವೆರೆಲ್ಲ ಹುಗ್ಗಿ ಅನ್ನ ಸಾರು ಭೋಜನ ಸವಿದರು. ಮದುವೆಗೆ ಮಂಗಳ ಹಾಡಿದರು. ಅಶೋಕ ಬಾಲಪ್ಪಗೋಳ ವಧುವಿನ ತಂಡದ ಮುಖ್ಯಸ್ಥನಾಗಿದ್ದರೆ, ನೀಲಪ್ಪ ವರನ ತಂಡದ ಮುಖ್ಯಸ್ಥರಾಗಿದ್ದರು.

    ಗ್ರಾಮೀಣ ಪ್ರದೇಶದಲ್ಲಿ ಗೊಂಬೆ ಮದುವೆ ಸೇರಿದಂತೆ ಕತ್ತೆ, ಕಪ್ಪೆ, ಪನ್ನೊಳಿಗೆ, ಚಿಕ್ಕ ಮಕ್ಕಳ ಮದುವೆ ಹೀಗೆ ನಾನಾ ತರದಲ್ಲಿ ಮದುವೆಗಳನ್ನು ಮಾಡುತ್ತಾರಂತೆ.

    ಹೀಗೆ ಕೆಲ ಗ್ರಾಮಗಳಲ್ಲಿ ಸುಮಾರು ವರ್ಷಗಳವರೆಗೆ ಮಳೆ ಬೀಳದಿದ್ದರೆ ಎಷ್ಟು ವರ್ಷಗಳಿಂದ ಮಳೆ ಬಿದ್ದಿರುವುದಿಲ್ಲವೋ ಅಷ್ಟು ವರ್ಷಗಳವರೆಗೆ ಮರಣ ಹೊಂದಿದವರ ಶವಗಳಿಗೆ ನೀರುಣಿಸುವ ಪದ್ದತಿ ಇದೆ ಎಂದು ಗ್ರಾಮದ ಕೆಲ ಹಿರಿಯರು ಹೇಳಿದ್ದಾರೆ.

    ಗ್ರಾಮೀಣರ ನಾನಾ ಆಚರಣೆಗಳು ಇಂದಿಗೂ ಜೀವಂತಿಕೆ ಉಳಿಸಿಕೊಂಡಿವೆ ಎಂಬುದು ಹುಲ್ಲೂರು ಗ್ರಾಮದಲ್ಲಿ ಜರುಗಿದ ಗೊಂಬೆಗಳ ಮದುವೆ ಸಾಕ್ಷಿಯಾಗಿದೆ.