Tag: ವರಲಕ್ಷ್ಮಿ ಶರತ್‌ಕುಮಾರ್‌

  • ‘ಮಾಣಿಕ್ಯ’ ನಟಿಯ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ, ಮಗಳು ಭಾಗಿ

    ‘ಮಾಣಿಕ್ಯ’ ನಟಿಯ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ, ಮಗಳು ಭಾಗಿ

    ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್‌ಗೆ (Varalaxmi Sarathkumar) ಇಂದು ಹುಟ್ಟುಹಬ್ಬದ ಸಂಭ್ರಮ. ಅವರ ಬರ್ತ್‌ಡೇ ಪಾರ್ಟಿಯಲ್ಲಿ ಸುದೀಪ್ ಪತ್ನಿ ಪ್ರಿಯಾ (Priya) ಹಾಗೂ ಮಗಳು ಸಾನ್ವಿ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಅರಣ್ಯ ಭೂಮಿಯಲ್ಲಿ ಶೂಟಿಂಗ್ ನಡೆಸಿತ್ತಾ ತರುಣ್ ಸುಧೀರ್ ಚಿತ್ರತಂಡ?- ಅರಣ್ಯಾಧಿಕಾರಿ ಹೇಳೋದೇನು?

    ವರಲಕ್ಷ್ಮಿ ಅವರು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಹೋಟೆಲ್‌ವೊಂದರಲ್ಲಿ ಅದ್ಧೂರಿಯಾಗಿ ಬರ್ತ್‌ಡೇ ನಡೆದಿದ್ದು, ಕೇಕ್ ಕತ್ತರಿಸಿ ನಟಿ ಸಂಭ್ರಮಿಸಿದ್ದಾರೆ.  ಈ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಭಾಗಿಯಾಗಿ ನಟಿಗೆ ಶುಭಕೋರಿದ್ದಾರೆ.

    ಅಂದಹಾಗೆ, ಮಾಣಿಕ್ಯ, ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಜೊತೆ ನಟಿಸಿರೋ ವರಲಕ್ಷ್ಮಿಗೆ ನಟನ ಕುಟುಂಬದ ಜೊತೆ ಉತ್ತಮ ಒಡನಾಟವಿದೆ. ಕಳೆದ ವರ್ಷ ಹಸೆಮಣೆ ಏರಿದ ವರಲಕ್ಷ್ಮಿ ಮದುವೆಗೆ ಸುದೀಪ್ ಹಾಗೂ ಪತ್ನಿ ಹಾಜರಿ ಹಾಕಿದ್ದರು.

  • ಕೊನೆಗೂ ಹೊರಬಿತ್ತು ‌’ಮಾಣಿಕ್ಯ’ ನಟಿಯ ಮದುವೆ ಫೋಟೋಸ್

    ಕೊನೆಗೂ ಹೊರಬಿತ್ತು ‌’ಮಾಣಿಕ್ಯ’ ನಟಿಯ ಮದುವೆ ಫೋಟೋಸ್

    ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಇತ್ತೀಚೆಗೆ ಅದ್ಧೂರಿಯಾಗಿ ಥೈಲ್ಯಾಂಡ್‌ನಲ್ಲಿ ಮದುವೆಯಾಗಿದ್ದರು. ಬಳಿಕ ಚೆನ್ನೈನಲ್ಲಿ ಗ್ರ್ಯಾಂಡ್ ಆಗಿ ಆರತಕ್ಷತೆ ಆಯೋಜಿಸಿದ್ದರು. ಆದರೆ ಮದುವೆ ಫೋಟೋ ಮಾತ್ರ ಎಲ್ಲೂ ಶೇರ್ ಆಗಿರಲಿಲ್ಲ. ಇದೀಗ ನಟಿಯ ಮದುವೆಯ (Wedding) ಸುಂದರ ಫೋಟೋಗಳು ಹೊರಬಿದ್ದಿದೆ.

    ಮದುವೆಯಲ್ಲಿ ನಟಿ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ವರ ನಿಯೋಲಾಯ್ ಲೈಟ್ ಬಣ್ಣ ಶರ್ಟ್ ಮತ್ತು ಪಂಚೆ ಧರಿಸಿದ್ದಾರೆ. ಖುಷಿ ಖುಷಿಯಾಗಿ ಮದುವೆಯಾಗಿರುವ ನಟಿಯ ದಾಂಪತ್ಯಕ್ಕೆ ಈಗ ಫ್ಯಾನ್ಸ್ ಶುಭಕೋರುತ್ತಿದ್ದಾರೆ.

    ವರಲಕ್ಷ್ಮಿ ಮತ್ತು ನಿಕೊಲಾಯ್ (Nicholai) ಹಿಂದೂ ಮತ್ತು ಕ್ರೈಸ್ತ ಎರಡು ಧರ್ಮದ ಪ್ರಕಾರ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತದೆ: ಸೃಜನ್ ಲೋಕೇಶ್

    ಅಂದಹಾಗೆ, ಜುಲೈ 3ರಂದು ಚೆನ್ನೈನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ಕನ್ನಡದ ನಟ ಸುದೀಪ್ ಭಾಗಿಯಾಗಿದ್ದರು. ಸುದೀಪ್ ಜೊತೆ ಪತ್ನಿ ಪ್ರಿಯಾ, ಮಗಳು ಸಾನ್ವಿ ಕೂಡ ಭಾಗಿಯಾಗಿದ್ದರು. ಸುದೀಪ್ ಕುಟುಂಬದ ಜೊತೆ ವರಲಕ್ಷ್ಮಿ ಉತ್ತಮ ಒಡನಾಟ ಹೊಂದಿದ್ದಾರೆ.

    ನಟಿಯ ಆತರಕ್ಷತೆಯಲ್ಲಿ ತಮಿಳು ನಟ ಸಿದ್ಧಾರ್ಥ್, ಬಾಲಯ್ಯ, ನಟಿ ತ್ರಿಷಾ ಸೇರಿದಂತೆ ಅನೇಕರು ಭಾಗಿಯಾಗಿ ಹೊಸ ಜೋಡಿಗೆ ಶುಭಕೋರಿದ್ದಾರೆ.

    ಇನ್ನೂ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.

  • ಪಿಎಂ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ನೀಡಿದ ‘ಮಾಣಿಕ್ಯ’ ನಟಿ

    ಪಿಎಂ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ನೀಡಿದ ‘ಮಾಣಿಕ್ಯ’ ನಟಿ

    ನ್ನಡದ ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಸದ್ಯ ಮದುವೆಯ ಸಂಭ್ರಮದಲ್ಲಿದ್ದಾರೆ. ಸೌತ್‌ನ ಸ್ಟಾರ್ ನಟ, ನಟಿಯರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡೋದ್ರಲ್ಲಿ ಬ್ಯುಸಿಯಿದ್ದ ನಟಿ ಈಗ ಕುಟುಂಬ ಸಮೇತ ಪಿಎಂ ಆಫೀಸ್‌ಗೆ ಭೇಟಿ ನೀಡಿ ನರೇಂದ್ರ ಮೋದಿಗೆ (Narendra Modi) ಮದುವೆ ಆಮಂತ್ರಣ (Wedding Invite) ಪತ್ರಿಕೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಟಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಗೆಳೆಯನ ದ್ರೋಹದ ಬಗ್ಗೆ ನೋವಿನ ಸಂಗತಿ ಬಿಚ್ಚಿಟ್ಟ ನಿವೇತಾ ಪೇತುರಾಜ್

    ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು ಭೇಟಿ ಮಾಡಿ ನಮ್ಮ ಮದುವೆಗೆ ಅವರನ್ನು ಆಹ್ವಾನಿಸಿದ್ದು ಎಂತಹ ಸೌಭಾಗ್ಯ. ಧನ್ಯವಾದಗಳು ತುಂಬಾ ಆತ್ಮೀಯ ಮತ್ತು ಸ್ವಾಗತಾರ್ಹ ಎಂದು ನಟಿ ಬರೆದುಕೊಂಡಿದ್ದಾರೆ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ನಿಮ್ಮ ಅಮೂಲ್ಯ ಸಮಯವನ್ನು ನಮ್ಮೊಂದಿಗೆ ಕಳೆದಿದ್ದೀರಿ. ನಿಜವಾಗಿಯೂ ನಿಮ್ಮ ಬಗ್ಗೆ ಹೆಚ್ಚು ಗೌರವವಿದೆ. ಇಂತಹ ಕ್ಷಣ ಸಾಧ್ಯ ಮಾಡಿದ ಅಪ್ಪ ಶರತ್ ಕುಮಾರ್ ಮತ್ತು ಅಮ್ಮ ರಾಧಿಕಾ ಶರತ್ ಕುಮಾರ್‌ಗೆ ಧನ್ಯವಾದಗಳು ಎಂದು ಮಾಣಿಕ್ಯ ನಟಿ ವರಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

    ವರಲಕ್ಷ್ಮಿ ಮತ್ತು ಉದ್ಯಮಿ ನಿಕೋಲಾಯ್ ಮದುವೆ ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ನಟಿಯ ನಿವಾಸದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿದೆ. ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಟಾರ್ ನಟಿ ನಯನತಾರಾ ದಂಪತಿ, ರವಿತೇಜ, ತಮಿಳು ನಟ ಸಿದ್ಧಾರ್ಥ್, ಎ.ಆರ್ ಮುರುಗದಾಸ್, ಮುರಳಿ ಶರ್ಮಾ, ಸಮಂತಾ, ಕನ್ನಡದ ನಟ ಸುದೀಪ್ ಸೇರಿದಂತೆ ಅನೇಕರಿಗೆ ನಟಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

    ಅಂದಹಾಗೆ, ಮಾಣಿಕ್ಯ ನಟಿ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ನಿಶ್ಚಿತಾರ್ಥ ಅದ್ಧೂರಿಯಾಗಿ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.

    ಇನ್ನೂ ‘ಮಾಣಿಕ್ಯ’ ಸಿನಿಮಾದ ನಂತರ ಮತ್ತೆ ಸುದೀಪ್ ಜೊತೆ ನಟಿ ಕೈಜೋಡಿಸಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

  • ಚಿತ್ರರಂಗದ ದಿಗ್ಗಜರಿಗೆ ಮದುವೆ ಆಮಂತ್ರಣ ನೀಡಿದ ಕನ್ನಡದ ‘ಮಾಣಿಕ್ಯ’ ನಟಿ

    ಚಿತ್ರರಂಗದ ದಿಗ್ಗಜರಿಗೆ ಮದುವೆ ಆಮಂತ್ರಣ ನೀಡಿದ ಕನ್ನಡದ ‘ಮಾಣಿಕ್ಯ’ ನಟಿ

    ಕಾಲಿವುಡ್ ನಟ ಶರತ್ ಕುಮಾರ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಪುತ್ರಿ ವರಲಕ್ಷ್ಮಿ (Varalaxmi Sarathkumar) ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಜೊತೆಗೆ ಸೌತ್‌ನ ನಟ- ನಟಿಯರಿಗೆ ಶರತ್‌ಕುಮಾರ್ ಕುಟುಂಬ ಮದುವೆ ಆಮಂತ್ರಣ ನೀಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ನಟಿ ನಯನತಾರಾ, ಮಾಸ್ ಮಹಾರಾಜ ರವಿತೇಜ ಸೇರಿದಂತೆ ಅನೇಕರಿಗೆ ವರಲಕ್ಷ್ಮಿ ಮದುವೆ (Wedding) ಪತ್ರಿಕೆ ನೀಡಿದ್ದಾರೆ.

    ವರಲಕ್ಷ್ಮಿ ಮತ್ತು ಉದ್ಯಮಿ ನಿಕೋಲಾಯ್ ಮದುವೆ ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಟಾರ್ ನಟಿ ನಯನತಾರಾ (Nayanathara) ದಂಪತಿ, ರವಿತೇಜ (Ravi Teja), ತಮಿಳು ನಟ ಸಿದ್ಧಾರ್ಥ್ (Siddarth), ಎ.ಆರ್ ಮುರುಗದಾಸ್, ಮುರಳಿ ಶರ್ಮಾ, ಗೋಪಿ ಚಂದ ಸೇರಿದಂತೆ ಅನೇಕರಿಗೆ ನಟಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ:ಕಲ್ಕಿ ಪ್ರಭಾಸ್‌ಗೆ ಜೊತೆಯಾದ ವಿಜಯ್ ದೇವರಕೊಂಡ

    ಅಂದಹಾಗೆ, ಮಾಣಿಕ್ಯ ನಟಿ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ನಿಶ್ಚಿತಾರ್ಥ ಅದ್ಧೂರಿಯಾಗಿ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.

    ಇನ್ನೂ ‘ಮಾಣಿಕ್ಯ’ ಸಿನಿಮಾದ ನಂತರ ಮತ್ತೆ ಸುದೀಪ್ ಜೊತೆ ನಟಿ ಕೈಜೋಡಿಸಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

  • ಭಾವಿ ಪತಿಯನ್ನು ಟ್ರೋಲ್ ಮಾಡಿದ್ದಕ್ಕೆ ‘ಮಾಣಿಕ್ಯ’ ನಟಿ ತಿರುಗೇಟು

    ಭಾವಿ ಪತಿಯನ್ನು ಟ್ರೋಲ್ ಮಾಡಿದ್ದಕ್ಕೆ ‘ಮಾಣಿಕ್ಯ’ ನಟಿ ತಿರುಗೇಟು

    ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar)  ಅವರು ಸಿನಿಮಾಗಿಂತ ವೈಯಕ್ತಿಕ ಕಾರಣಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಅದ್ಧೂರಿಯಾಗಿ ನಿಕೋಲಾಯ್ ಜೊತೆ ಎಂಗೇಜ್‌ಮೆಂಟ್ ಆಗಿತ್ತು. ಈ ಬೆನ್ನಲ್ಲೇ ನಟಿಯ ಭಾವಿ ಪತಿ ನೆಗೆಟಿವ್ ಆಗಿ ಟ್ರೋಲ್ ಕೂಡ ಆಗಿತ್ತು. ಈ ವಿಚಾರವಾಗಿ ನಟಿ ಪ್ರತಿಕ್ರಿಯೆ ನೀಡಿದ್ದಾರೆ.

    ಡಿವೋರ್ಸ್ ಆಗಿರುವ ನಿಕೋಲಾಯ್ ಸಚ್‌ದೇವ್ (Nicholai Sachdev) ಜೊತೆ ವರಲಕ್ಷ್ಮಿ 2ನೇ ಮದುವೆ ಆಗಲು ಸಜ್ಜಾಗಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ನಟಿ ಮಾತನಾಡಿದ್ದಾರೆ. ನನ್ನ ತಂದೆ (Sarathkumar) ಕೂಡ 2ನೇ ಮದುವೆ ಆದರು. ಅದರಲ್ಲಿ ಯಾವ ತಪ್ಪು ಇಲ್ಲ. ನನ್ನ ಕಣ್ಣಿಗೆ ನಿಕ್ ಅವರು ಹ್ಯಾಂಡ್ಸಮ್ ಆಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ನೆಗೆಟಿವ್ ಆಗಿ ಮಾತನಾಡುವವರ ಬಗ್ಗೆ ನಾನು ಎಂದೂ ಕೇರ್ ಮಾಡುವುದಿಲ್ಲ ಹೇಳಿದ್ದಾರೆ.‌ ಇದನ್ನೂ ಓದಿ:ಕಾಮಾಕ್ಯ ದೇವಿಯ ದರ್ಶನ ಪಡೆದ ‘ಗಾಳಿಪಟ 2’ ನಟಿ

    ಬೇರೆಯವರಿಗೆ ನಾನು ಯಾಕೆ ಉತ್ತರ ಕೊಡಬೇಕು. ನಿಕ್ ತಂದೆ-ತಾಯಿ ಒಂದು ಆರ್ಟ್ ಗ್ಯಾಲರಿ ನಡೆಸುತ್ತಾರೆ. ನಿಕ್ ಮತ್ತು ಅವರ ಪುತ್ರಿ ಪವರ್ ಲಿಫ್ಟಿಂಗ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಅವರ ಮಾಜಿ ಪತ್ನಿ ಜೊತೆಗೂ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ. ನಮ್ಮ ನಡುವೆ ಎಲ್ಲವೂ ಚೆನ್ನಾಗಿದೆ ಎಂದಿದ್ದಾರೆ.

    ಅಂದಹಾಗೆ, ‘ಮಾಣಿಕ್ಯ’ ಸಿನಿಮಾದ ಬಳಿಕ ಮತ್ತೆ ವರಲಕ್ಷ್ಮಿ ಸುದೀಪ್ ಜೊತೆ ಕೈಜೋಡಿಸಿದ್ದಾರೆ. ಮಾಕ್ಸ್ ಸಿನಿಮಾದಲ್ಲಿ ಅವರು ನಟಿಸಿದ್ದಾರೆ.

  • ವರಲಕ್ಷ್ಮಿ ಶರತ್‌ಕುಮಾರ್ ಜೋಡಿಯನ್ನು ಭೇಟಿಯಾದ ಕಿಚ್ಚ ಫ್ಯಾಮಿಲಿ

    ವರಲಕ್ಷ್ಮಿ ಶರತ್‌ಕುಮಾರ್ ಜೋಡಿಯನ್ನು ಭೇಟಿಯಾದ ಕಿಚ್ಚ ಫ್ಯಾಮಿಲಿ

    ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಇತ್ತೀಚೆಗೆ ಗ್ರ್ಯಾಂಡ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಇದೀಗ ವರಲಕ್ಷ್ಮಿ ಮತ್ತು ನಿಕೋಲೈ ಸಚ್‌ದೇವ್ ಜೋಡಿಯನ್ನು ಕಿಚ್ಚ ಸುದೀಪ್ (Sudeep) ಫ್ಯಾಮಿಲಿ ಭೇಟಿ ಮಾಡಿದೆ. ಮೀಟ್ ಆಗಿರುವ ಸುಂದರ ಫೋಟೋಗಳು ಸಾಮಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ವರಲಕ್ಷ್ಮಿ, ನಿಕೋಲೈ ಜೋಡಿಯನ್ನು ಸುದೀಪ್, ಪ್ರಿಯಾ ಸುದೀಪ್ (Priya Sudeep), ಪುತ್ರಿ ಸಾನ್ವಿ, ಸೋದರಳಿಯ ಸಂಚಿತ್ ಸಂಜೀವ್ ಕೂಡ ಭೇಟಿಯಾಗಿದ್ದಾರೆ. ಉತ್ತಮ ಸಮಯ ಕಳೆದಿದ್ದಾರೆ. ಇದನ್ನೂ ಓದಿ:ಅಮೆರಿಕಾದಲ್ಲಿ ಭೂಕಂಪ: ನಟ ನಿರೂಪ್ ಭಂಡಾರಿ ಬಿಚ್ಚಿಟ್ಟ ಅನುಭವ

    ಮಾರ್ಚ್ 1ರಂದು ಮುಂಬೈನಲ್ಲಿ ವರಲಕ್ಷ್ಮಿ, ನಿಕೋಲೈ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಕುಟುಂಬಸ್ಥರು, ಆಪ್ತರು ಅಷ್ಟೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವರ್ಷದ ಅಂತ್ಯದಲ್ಲಿ ನಟಿಯ ಮದುವೆ ಫಿಕ್ಸ್ ಆಗಿದೆ.

    ಸುದೀಪ್ ಜೊತೆ ವರಲಕ್ಷ್ಮಿ ಮಾಣಿಕ್ಯ (Maanikya Film), ರನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಿನಿಂದ ಸುದೀಪ್ ಮತ್ತು ಅವರ ಕುಟುಂಬದ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದಲ್ಲಿಯೂ ವರಲಕ್ಷ್ಮಿ ನಟಿಸಿದ್ದಾರೆ ಎನ್ನಲಾಗಿದೆ.

  • ವರಲಕ್ಷ್ಮಿ ಭಾವಿ ಪತಿಗೆ ಇದು 2ನೇ ಮದುವೆ- ಮೊದಲ ಪತ್ನಿ ಯಾರು?

    ವರಲಕ್ಷ್ಮಿ ಭಾವಿ ಪತಿಗೆ ಇದು 2ನೇ ಮದುವೆ- ಮೊದಲ ಪತ್ನಿ ಯಾರು?

    ಹುಭಾಷಾ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಮದುವೆ ನಿಶ್ಚಿತಾರ್ಥವಾಗಿದೆ. ನಿಕೋಲಾಯ್ ಸಚ್‌ದೇವ್ (Nicholai Sachdev) ಎಂಬುವರ ಜೊತೆ ಮದುವೆ ನಿಶ್ಚಯವಾಗಿದೆ. ಇವರು ಅಥ್ಲೆಟ್ ಆಗಿದ್ದು ವೇಟ್‌ಲಿಫ್ಟಿಂಗ್‌ನಲ್ಲಿ ಹೆಸರು ಮಾಡಿದ್ದಾರೆ. ಈಗಾಗಲೇ ಅವರಿಗೆ ಮದುವೆಯಾಗಿದ್ದು, 15 ವರ್ಷದ ಮಗಳಿದ್ದಾಳೆ ಎನ್ನಲಾಗ್ತಿದೆ. ಇವರ ಜೊತೆ ವರಲಕ್ಷ್ಮಿ ನಿಶ್ಚಿತಾರ್ಥ ಹಲವು ಚರ್ಚೆಗೆ ಕಾರಣವಾಗಿದೆ.

    ನಿಕೋಲಾಯ್ ಅವರು ಖ್ಯಾತ ಮಾಡೆಲ್ ಕವಿತಾ (Kavitha) ಅವರನ್ನು ಮದುವೆಯಾಗಿದ್ದರು. ಅವರಿಗೆ 15 ವರ್ಷದ ಮಗಳೂ ಸಹ ಇದ್ದಾರೆ ಎನ್ನಲಾಗಿದೆ. ಈ ಜೋಡಿಗೆ ಮದುವೆ ಬಳಿಕ ಹೊಂದಾಣಿಕೆ ಸಮಸ್ಯೆ ಎದುರಾಗಿತ್ತು. ಹೀಗಾಗಿ ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆ ಬಳಿಕ ವರಲಕ್ಷ್ಮಿ ಜೊತೆ ಎಂಗೇಜ್ ಆದರು. ನಿಕೋಲಾಯ್ ಹಾಗೂ ಕವಿತಾ ಡಿವೋರ್ಸ್ ಬಳಿಕವಷ್ಟೇ ವರಲಕ್ಷ್ಮಿ ಜೊತೆ ಡೇಟಿಂಗ್ ಶುರುವಾಗಿತ್ತು ಎಂದು ವರದಿಯಾಗಿವೆ. ಇದನ್ನೂ ಓದಿ:ನಟಿ ವೈಜಯಂತಿ ಮಾಲಾರನ್ನು ಭೇಟಿಯಾಗಿ ನಮಿಸಿದ ನರೇಂದ್ರ ಮೋದಿ

    ವರಲಕ್ಷ್ಮಿ ಶರತ್‌ಕುಮಾರ್ ತಮ್ಮ ಅಭಿಮಾನಿಗಳಿಗೆ ಮಾರ್ಚ್ 1ರಂದು ಗುಡ್ ನ್ಯೂಸ್ ಕೊಟ್ಟಿದ್ದರು. ಆಪ್ತರ ಸಮ್ಮುಖದಲ್ಲಿ ನಟಿ ಬಹುಕಾಲದ ಗೆಳೆಯನ ಜೊತೆ ಎಂಗೇಜ್ ಆದರು. ಎಂಗೇಜ್‌ಮೆಂಟ್‌ನ ಸುಂದರ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ವರಲಕ್ಷ್ಮಿ ಅವರು ಆರ್ಟ್ ಗ್ಯಾಲರಿ ಮಾಲೀಕ ನಿಕೋಲಾಯ್ ಸಚ್‌ದೇವ್ ಜೊತೆ ಎಂಗೇಜ್ ಆಗಿದ್ದಾರೆ. ಅಂದಹಾಗೆ, ಕಳೆದ 14 ವರ್ಷದಿಂದ ನಿಕೋಲಾಯ್ ಪರಿಚಯವಿತ್ತು. ಮುಂಬೈನ ಖಾಸಗಿ ರೆಸಾರ್ಟ್‌ವೊಂದರಲ್ಲಿ ವರಲಕ್ಷ್ಮಿ ನಿಶ್ಚಿತಾರ್ಥ ಸಮಾರಂಭ ಜರುಗಿದೆ.

    ಈ ವರ್ಷದ ಅಂತ್ಯದಲ್ಲಿ ವರಲಕ್ಷ್ಮಿ ಮದುವೆ ಸಮಾರಂಭ ನಡೆಯಲಿದೆ. ತಮಿಳಿನ ಹಿರಿಯ ನಟ ಶರತ್ ಕುಮಾರ್ ಅವರ ಪುತ್ರಿಯಾಗಿದ್ದು, ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಸದ್ಯ ಧನುಷ್ ನಟನೆಯ ‘ರಾಯನ್’ (Raayan) ಚಿತ್ರದಲ್ಲಿ ವರಲಕ್ಷ್ಮಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ.

    ಸುದೀಪ್ ಜೊತೆ ‘ಮಾಣಿಕ್ಯ’ ಮಾತ್ರವಲ್ಲ, ರನ್ನ ಸಿನಿಮಾದಲ್ಲೂ ವರಲಕ್ಷ್ಮಿ ಶರತ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಇವಿಷ್ಟು ಮಾತ್ರವಲ್ಲದೆ ಕನ್ನಡದ ವಿಸ್ಮಯ, ರಣಂ ಚಿತ್ರದಲ್ಲಿ ನಟಿಸಿದ್ದಾರೆ.

  • ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು ‘ಮಾಣಿಕ್ಯ’ ನಟಿ ಎಂಗೇಜ್‌ಮೆಂಟ್

    ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು ‘ಮಾಣಿಕ್ಯ’ ನಟಿ ಎಂಗೇಜ್‌ಮೆಂಟ್

    ನ್ನಡದ ‘ಮಾಣಿಕ್ಯ’ (Maanikya) ಚಿತ್ರ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalakshmi Sarathkumar) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆಪ್ತರ ಸಮ್ಮುಖದಲ್ಲಿ ನಟಿ ಬಹುಕಾಲದ ಗೆಳೆಯನ ಜೊತೆ ಎಂಗೇಜ್ ಆಗಿದ್ದಾರೆ. ಎಂಗೇಜ್‌ಮೆಂಟ್‌ನ ಸುಂದರ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ನಟಿ ವರಲಕ್ಷ್ಮಿ ಅವರು ಆರ್ಟ್ ಗ್ಯಾಲರಿ ಮಾಲೀಕ ನಿಕೋಲಾಯ್ ಸಚ್‌ದೇವ್ (Nicholai Sachdev) ಜೊತೆ ಎಂಗೇಜ್ ಆಗಿದ್ದಾರೆ. ಅಂದಹಾಗೆ, ಕಳೆದ 14 ವರ್ಷದಿಂದ ನಿಕೋಲಾಯ್ ಪರಿಚಯವಿತ್ತು. ಮಾರ್ಚ್ 1ರಂದು ಮುಂಬೈನ ಖಾಸಗಿ ರೆಸಾರ್ಟ್‌ವೊಂದರಲ್ಲಿ ವರಲಕ್ಷ್ಮಿ ನಿಶ್ಚಿತಾರ್ಥ ಸಮಾರಂಭ ಜರುಗಿದೆ.

    ಈ ವರ್ಷದ ಅಂತ್ಯದಲ್ಲಿ ವರಲಕ್ಷ್ಮಿ ಮದುವೆ ಸಮಾರಂಭ ನಡೆಯಲಿದೆ. ತಮಿಳಿನ ಹಿರಿಯ ನಟ ಶರತ್ ಕುಮಾರ್ ಅವರ ಪುತ್ರಿಯಾಗಿದ್ದು, ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಸದ್ಯ ಧನುಷ್ ನಟನೆಯ ‘ರಾಯನ್’ ಚಿತ್ರದಲ್ಲಿ ವರಲಕ್ಷ್ಮಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಇದನ್ನೂ ಓದಿ:ಕರಿಮಣಿ ಮಾಲೀಕನನ್ನು ಪರಿಚಯಿಸಿದ ದೀಪಿಕಾ ದಾಸ್

    ಸುದೀಪ್ (Sudeep) ಜೊತೆ ‘ಮಾಣಿಕ್ಯ’ ಮಾತ್ರವಲ್ಲ, ರನ್ನ ಸಿನಿಮಾದಲ್ಲೂ ವರಲಕ್ಷ್ಮಿ ಶರತ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಇವಿಷ್ಟು ಮಾತ್ರವಲ್ಲದೆ ಕನ್ನಡದ ವಿಸ್ಮಯ, ರಣಂ ಚಿತ್ರದಲ್ಲಿ ನಟಿಸಿದ್ದಾರೆ.

  • 8 ವರ್ಷಗಳ ನಂತರ ಸುದೀಪ್‌ಗೆ ಜೊತೆಯಾದ ‘ಮಾಣಿಕ್ಯ’ ಚೆಲುವೆ

    8 ವರ್ಷಗಳ ನಂತರ ಸುದೀಪ್‌ಗೆ ಜೊತೆಯಾದ ‘ಮಾಣಿಕ್ಯ’ ಚೆಲುವೆ

    ಕಿಚ್ಚ ಸುದೀಪ್ ಸದ್ಯ ‘ಮ್ಯಾಕ್ಸ್’ (Max Film) ಸಿನಿಮಾದ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಕಿಚ್ಚನ ಅಡ್ಡಾದಿಂದ ಹೊಸ ಸುದ್ದಿಯೊಂದು ಸಿಕ್ಕಿದೆ. 8 ವರ್ಷಗಳ ನಂತರ ಮ್ಯಾಕ್ಸ್ ಸುದೀಪ್‌ಗಾಗಿ ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalakshmi Sarath Kumar) ಸಾಥ್ ನೀಡಿದ್ದಾರೆ. ಮಾಣಿಕ್ಯನಿಗೆ ನಟಿ ಜೊತೆಯಾಗಿದ್ದಾರೆ. ಇದನ್ನೂ ಓದಿ:ಬೆಂಗಳೂರು ಏರ್‌ಪೋರ್ಟ್‌ಗೆ ಮಾಧವನ್‌ ಮೆಚ್ಚುಗೆ- ನರೇಂದ್ರ ಮೋದಿ ಪ್ರತಿಕ್ರಿಯೆ

    ವಿಜಯ್ ಕಾರ್ತಿಕೇಯನ್ (Vijay Karthikeyan) ನಿರ್ದೇಶನದ ಮ್ಯಾಕ್ಸ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಹಿಂದೆ ಮಾಣಿಕ್ಯ (Maanikya) ಸಿನಿಮಾದಲ್ಲಿ ಕಿಚ್ಚನಿಗೆ ನಾಯಕಿಯಾಗಿ ಮೋಡಿ ಮಾಡಿದ್ದ ಚೆಲುವೆ ವರಲಕ್ಷ್ಮಿ ಶರತ್‌ಕುಮಾರ್ ಈಗ ‘ಮ್ಯಾಕ್ಸ್’ ಸಿನಿಮಾದಲ್ಲೂ ನಟಿಸಿದ್ದಾರೆ ಎನ್ನಲಾಗುತ್ತಿದೆ.

    ಸದ್ಯಕ್ಕಂತೂ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅಲ್ಲದೇ, ವರಲಕ್ಷ್ಮಿ ಸೇರ್ಪಡೆ ಬಗ್ಗೆಯೂ ಅಧಿಕೃತ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ, ವರಲಕ್ಷ್ಮಿ ಶರತ್‌ಕುಮಾರ್ ಅವರಿಗೆ ಈ ಸಿನಿಮಾದಲ್ಲಿ ಪ್ರಧಾನ ಪಾತ್ರವಿದ್ದು, ಈಗಾಗಲೇ ಅವರು ಮಹತ್ವದ ದೃಶ್ಯಗಳ ಚಿತ್ರೀಕರಣವನ್ನೂ ಕೂಡ ಮುಗಿಸಿದ್ದಾರಂತೆ. ಇನ್ನು, ಈ ಸಿನಿಮಾದಲ್ಲಿ ಸುದೀಪ್ ಜೊತೆಗೆ ಸಂಯುಕ್ತಾ ಹೊರನಾಡು, ಅನಿರುದ್ಧ್ ಭಟ್, ಸುಕೃತಾ ವಾಘ್ಳೆ ಮುಂತಾದವರು ನಟಿಸುತ್ತಿದ್ದಾರೆ.

    ಇತ್ತೀಚಿಗೆ ರಿಲೀಸ್ ಆಗಿದ್ದ ಮ್ಯಾಕ್ಸ್ (Max Film) ಸಿನಿಮಾದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಿಚ್ಚನ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಕೈತುಂಬಾ ಸಿನಿಮಾಗಳ ನಡುವೆ ಬಿಗ್ ಬಾಸ್ ಶೋಗೂ (Bigg Boss Kannada) ತೆರೆಮರೆಯಲ್ಲಿ ಸಖತ್ ತಯಾರಿ ನಡೆಯುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿರಿಯ ನಟ ಶರತ್‌ಕುಮಾರ್‌ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

    ಹಿರಿಯ ನಟ ಶರತ್‌ಕುಮಾರ್‌ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

    ನ್ನಡದ `ರಾಜಕುಮಾರ’, `ಜೇಮ್ಸ್’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟ ಶರತ್‌ಕುಮಾರ್ (Actor Sarathkumar) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಡಯಾರಿಯಾ, ಡಿಹೈಡ್ರೇಷನ್‌ನಿಂದ ಬಳಲುತ್ತಿದ್ದಾರೆ.

    68ನೇ ವರ್ಷ ವಯಸ್ಸಿನ ನಟ ಶರತ್‌ಕುಮಾರ್ ಅವರನ್ನು ಅನಾರೋಗ್ಯದ ಹಿನ್ನೆಯಲ್ಲಿ ಭಾನುವಾರ (ಡಿ.11) ಆಸ್ಪತ್ರೆಗೆ ದಾಖಲಿಸಲಾಗಿದೆ. ಶರತ್ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆಯೇ ತಕ್ಷಣವೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶರತ್‌ಕುಮಾರ್ ಅವರ ಪತ್ನಿ ರಾಧಿಕಾ ಶರತ್ ಕುಮಾರ್ (Radhika Sarathkumar) ಮತ್ತು ಪುತ್ರಿ ವರಲಕ್ಷ್ಮೀ (Varalakshmi) ಅವರು ಈಗಾಗಲೇ ಆಸ್ಪತ್ರೆಗೆ ಆಗಮಿಸಿದ್ದಾರೆ. ಇದನ್ನೂ ಓದಿ: 5 ವರ್ಷದ ಪ್ರೀತಿಗೆ ಉಂಗುರದ ಮುದ್ರೆ – ಅಭಿಷೇಕ್‌, ಅವಿವಾ ಲವ್ ಕಹಾನಿ ಶುರುವಾಗಿದ್ದು ಹೇಗೆ?

    ಸದ್ಯ ಶರತ್ ಕುಮಾರ್ ಅವರ ಆರೋಗ್ಯ ಸ್ಥಿತಿಯ ಕುರಿತು ಅವರ ಕುಟುಂಬದವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅತ್ತ ಆಸ್ಪತ್ರೆ ಕಡೆಯಿಂದಲೂ ಯಾವುದೇ ಹೆಲ್ತ್ ಬುಲೆಟಿನ್ ಕೂಡ ರಿಲೀಸ್ ಆಗಿಲ್ಲ. ಈ ಹಿಂದೆ ಶರತ್‌ಕುಮಾರ್ ಅವರಿಗೆ ಕೊರೊನಾ ವೈರಸ್ ತಗುಲಿತ್ತು. ಇದೀಗ ಮತ್ತೊಂದು ಗಂಭೀರ ಆರೋಗ್ಯ ಸಮಸ್ಯೆಯಿಂದ ಶರತ್‌ಕುಮಾರ್ ಬಳಲುತ್ತಿದ್ದು, ಶೀಘ್ರವೇ ಅವರು ಗುಣಮುಖರಾಗಲಿ ಎಂದು ಅವರ ಆಪ್ತರು, ಸ್ನೇಹಿತರು, ಅಭಿಮಾನಿಗಳು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]