Tag: ವರಮಹಾಲಕ್ಷ್ಮೀ

  • ವರಮಹಾಲಕ್ಷ್ಮೀ ಹಬ್ಬದ ಚೀಟಿ ಹೆಸರಿನಲ್ಲಿ ಐದು ಕೋಟಿಗೂ ಹೆಚ್ಚು ವಂಚಿಸಿ ಪರಾರಿ

    ವರಮಹಾಲಕ್ಷ್ಮೀ ಹಬ್ಬದ ಚೀಟಿ ಹೆಸರಿನಲ್ಲಿ ಐದು ಕೋಟಿಗೂ ಹೆಚ್ಚು ವಂಚಿಸಿ ಪರಾರಿ

    ಆನೇಕಲ್: ವರಮಹಾಲಕ್ಷ್ಮೀ (Varamahalakshmi Festival) ಹಬ್ಬದ ಚೀಟಿ ಹೆಸರಿನಲ್ಲಿ ಐದು ಕೋಟಿಗೂ ಹೆಚ್ಚು ವಂಚಿಸಿ (Fraud) ಮಾಲೀಕ ಪರಾರಿಯಾದ ಘಟನೆ ಆನೇಕಲ್ (Anekal) ತಾಲೂಕಿನ ಕಾಚನಾಯಕನಹಳ್ಳಿಯಲ್ಲಿ ನಡೆದಿದೆ.

    ಚಿನ್ನ ಕೊಡುತ್ತೇನೆ ಎಂದು ಹಣ ಕಟ್ಟಿಸಿಕೊಂಡು ಸೇಟು ವಂಚನೆ ಮಾಡಿದ್ದಾನೆ. ಲಕ್ಷಾಂತರ ರೂ. ಸಾಲ ಮಾಡಿ ಮಹಿಳೆಯರು (Woman) ಹಣ ಕಟ್ಟಿದ್ದರು. ಇದೀಗ ಚಿನ್ನ ಅಡವಿಟ್ಟು ಮನೆ ಖಾಲಿ ಮಾಡಿಕೊಂಡು ಸೇಟು ಎಸ್ಕೇಪ್ ಆಗಿದ್ದಾನೆ. ಮುನಾರಾಮ್ ಎಂಬ ರಾಜಸ್ಥಾನಿ ಮೂಲದ ಮಾರ್ವಾಡಿ ಆನಂದ್ ಜ್ಯುವೆಲರ್ಸ್ ಅಂಡ್ ಕೇಸರ್ ಬ್ಯಾಂಕರ್ಸ್‌ನ ಮಾಲೀಕನಾಗಿದ್ದು, ಹತ್ತು ವರ್ಷಕ್ಕೂ ಹೆಚ್ಚು ದಿನದಿಂದ ಇಲ್ಲೇ ವಾಸವಿದ್ದ. ಈತ 150ಕ್ಕೂ ಹೆಚ್ಚು ಜನರಿಂದ ಚೀಟಿ ಹಾಕಿಸಿಕೊಂಡು ಚಿನ್ನ ಅಡಮಾನ ಇಟ್ಟುಕೊಂಡಿದ್ದ. ಹಬ್ಬ ಎಂದು ಚೀಟಿ ಹಾಕಿದ್ದವರು ಚಿನ್ನ ಬಿಡಿಸಿಕೊಂಡು ಬರಲು ಹೋದಾಗ ವಂಚನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮ್ಯಾನ್ ಪೋರ್ಟಬಲ್ ಆಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿಯ ಯಶಸ್ವಿ ಪ್ರಯೋಗ ನಡೆಸಿದ ಡಿಆರ್‌ಡಿಒ

    ಚಿನ್ನದ ಅಂಗಡಿ ಮಾಲೀಕ ಅಂಗಡಿ ಹಾಗೂ ಮನೆ ಖಾಲಿ ಮಾಡಿಕೊಂಡು ಎಸ್ಕೇಪ್ ಆಗಿದ್ದು ಕಂಡು ಆತಂಕಕ್ಕೊಳಗಾದ ಗ್ರಾಮಸ್ಥರು ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ. ಸೇಟು ಇಂದ ವಂಚನೆಗೊಳಗಾದವರು ಸೂರ್ಯ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬ ಎಂದು ಹಣ ಕಟ್ಟಿದವರು ಈಗ ಬೀದಿಗೆ ಬಿದ್ದಿದ್ದಾರೆ. ಇತ್ತ ಹಬ್ಬವೂ ಇಲ್ಲ, ಅತ್ತ ಹಣವೂ ಇಲ್ಲ, ಹಣ ಕಟ್ಟಿಸಿಕೊಂಡವನು ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆ ಕುರಿತು ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಕುರಿತು ದೆಹಲಿ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ: ವಿಜಯೇಂದ್ರ

  • ಸ್ಯಾಂಡಲ್‍ವುಡ್‍ನ ವರಮಹಾಲಕ್ಷ್ಮಿ ಹಬ್ಬ ಸಖತ್ ಗ್ರ್ಯಾಂಡ್

    ಸ್ಯಾಂಡಲ್‍ವುಡ್‍ನ ವರಮಹಾಲಕ್ಷ್ಮಿ ಹಬ್ಬ ಸಖತ್ ಗ್ರ್ಯಾಂಡ್

    ಬೆಂಗಳೂರು: ಸ್ಯಾಂಡಲ್‍ವುಡ್ ಅನೇಕ ತಾರೆಗಳ ಮನೆಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಅದ್ದೂರಿ ಹಬ್ಬಗಳ ಆಚರಣೆಗೆ ಇದು ಒಳ್ಳೆ ಸಮಯ ಇದಲ್ಲ. ಆದರೆ ಪದ್ಧತಿ ಬಿಡಲಾದೀತೇ, ಹೀಗಂದುಕೊಂಡೇ ಸ್ಯಾಂಡಲ್‍ವುಡ್ ಮಂದಿ ವರಮಹಾಲಕ್ಷ್ಮಿ ಹಬ್ಬವನ್ನ ಸರಳವಾಗಿ ಮನೆಯಲ್ಲೇ ಆಚರಿಸಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಪ್ರತಿವರ್ಷದಂತೆಯೇ ಈ ಸಲವೂ ವರಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಲಾಗಿದೆ. ಮನೆಯಲ್ಲಿ ಲಕ್ಷ್ಮಿ ಪ್ರತಿಷ್ಠಾಪನೆ ಮಾಡಿರುವ ಈ ಸೆಲೆಬ್ರಿಟಿ ಜೋಡಿ ಬೆಳಿಗ್ಗೆಯೇ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನೂರಾರು ಮುತೈದೆಯರನ್ನ ಕರೆದು ಬಾಗಿನ ಕೊಡುತ್ತಿದ್ದ ನಟಿ ಪ್ರಿಯಾಂಕ ಉಪೇಂದ್ರ ಈ ಬಾರಿ ಸರಳವಾಗಿ ಕೆಲವೇ ಕೆಲವರನ್ನ ಕರೆದು ಹಬ್ಬ ಆಚರಿಸಿದ್ದಾರೆ.ಪೂಜೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ.

     

    View this post on Instagram

     

    A post shared by priyanka upendra (@priyanka_upendra)

    ತಂದೆಯಾಗುತ್ತಿರೋ ಖುಷಿಯಲ್ಲಿರೋ ನಿಖಿಲ್ ಕುಮಾರಸ್ವಾಮಿ, ಕುಟುಂಬದ ಜೊತೆ ವರಮಹಾಲಕ್ಷ್ಮೀ ಹಬ್ಬ ಆಚರಿಸಿದ್ದಾರೆ. ಪತ್ನಿ ರೇವತಿ ವರಮಹಾಲಕ್ಷ್ಮಿ ಪೂಜೆ ಮಾಡಿದ್ದಾರೆ. ನಿಖಿಲ್ ಪೂಜೆಯಲ್ಲಿ ಪಾಲ್ಗೊಂಡು ಖುಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಧರೆಗಿಳಿದ ದೇವತೆಯಾದ ದಿಯಾ ಖ್ಯಾತಿಯ ನಟಿ ಖುಷಿ

    ಮದುವೆಗೂ ಮುನ್ನ ಸದಾ ಶೂಟಿಂಗ್‍ನಲ್ಲಿ ಬ್ಯುಸಿ ಇರುತ್ತಿದ್ದ ನಟಿ ಪ್ರಣೀತ ಮದುವೆಯಾದ ಬಳಿಕ ಮೊದಲ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ಪೂಜೆಯ ಬಳಿಕ ತಮ್ಮಭಿಮಾನಿಗಳಿಗೆ ಶುಭಾಷಯ ಕೋರಿದ್ದಾರೆ.

    ಬಿಗ್‍ಬಾಸ್ ಮುಗಿಸಿ ಮನೆಗೆ ಬಂದಿರುವ ಶುಭಾ ಪೂಂಜಾ ಕೂಡ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನ ಆಚರಿಸಿದ್ದಾರೆ. ಲಕ್ಷ್ಮಿದೇವಿಗೆ ಪೂಜೆ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ. ಲಕ್ಷ್ಮಿ ಪೂಜೆ ಮಾಡಿರುವ ನಟಿ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಮಗಳ ಜೊತೆ ಸಂದರ್ಭಕ್ಕೆ ತಕ್ಕಂತೆ ಫೋಟೋಶೂಟ್ ಮಾಡಿಸಿದ ಸುದ್ದಿಯಾಗುವ ಶ್ವೇತಾ ಶ್ರೀವಾತ್ಸವ್ ಕೂಡ ಹಬ್ಬ ಆಚರಿಸಿದ್ದಾರೆ. ಕೆಂಪು ಹಸಿರು ದಿರಿಸು ಧರಿಸಿ ಮಗಳೊಂದಿಗೆ ಫೋಟೋಶೂಟ್ ಮಾಡಿಸಿದ್ದಾರೆ. ಮನೆಯಲ್ಲಿ ಶೃದ್ಧಾ ಭಕ್ತಿಯಿಂದ ಪೂಜೆ ಮಾಡಿದ್ದಾರೆ.

     

    View this post on Instagram

     

    A post shared by Shwetha Srivatsav (@shwethasrivatsav)

    ಹಬ್ಬದ ದಿನವೆಂದರೆ ಹೆಣ್ಮಕ್ಕಳಿಗಂತೂ ಖುಷಿಯೋ ಖುಷಿ. ಹೀಗಾಗಿ ಹರ್ಷಿಕಾ ಪೂಣಚ್ಚ, ಮಾನ್ವಿತಾ ಹರೀಶ್, ಕಾರುಣ್ಯ ರಾಮ್ ಸೇರಿದಂತೆ ಹಲವರು ಹಬ್ಬ ಮುಗಿಸಿ ಫೋಟೋ ಹಂಚಿಕೊಂಡಿದ್ದಾರೆ. ಸರಳವಾಗಿ ಮನೆಯಲ್ಲಿ ಸುಮಲತಾ ಅಂಬರೀಶ್ ಕೂಡ ವರಮಹಾಲಕ್ಷ್ಮಿ ಪೂಜೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ಸಾಂಪ್ರದಾಯಿಕವಾಗಿ ವರಮಹಾಲಕ್ಷ್ಮೀಯ ಪೂಜೆ ಮಾಡಿದ್ದಾರೆ.

  • ವರಮಹಾಲಕ್ಷ್ಮಿ ಹಬ್ಬ- ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

    ವರಮಹಾಲಕ್ಷ್ಮಿ ಹಬ್ಬ- ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

    ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತುಮಕೂರು ಜಿಲ್ಲೆಯ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದೆ. ಪ್ರಾತಃ ಕಾಲದಿಂದಲೇ ಅಭಿಷೇಕಾಧಿಗಳು, ಪೂಜೆಗಳು ನೇರವೇರುತಿದೆ.

    ನೂರಾರು ಭಕ್ತಾಧಿಗಳು ಸರದಿ ಸಾಲಿನಲ್ಲಿ ನಿಂತು ಶ್ರೀ ಮಹಾಲಕ್ಷ್ಮಿ ದರ್ಶನ ಪಡೆಯುತ್ತಿದ್ದಾರೆ. ಬೆಳಗ್ಗೆ ಮಹಾಮಂಗಳಾರತಿ ನೇರವೇರಲಿದ್ದು, ಪೂಜಾ ತಯಾರಿ ನಡೆಯುತ್ತಿದೆ. ಕಳೆದ ಎರಡು ವರ್ಷದಿಂದ ದೇವಸ್ಥಾನ ಸರ್ಕಾರದ ಸುಪರ್ದಿಗೆ ಹೋಗಿದ್ದರಿಂದ ಭಕ್ತಾಧಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಪೂಜೆಗೆ ಹೂ ಖರೀದಿಗೆ ಬಂದು ಹಣ್ಣಿನ ವ್ಯಾಪಾರಿ ಜೊತೆಗೆ ಜಗಳ

    ಹತ್ತಾರು ಸಾವಿರ ಸಂಖ್ಯೆಯಲ್ಲಿ ಭಕ್ತಾಧಿಗಳಿಂದ ತುಂಬಿ ಥುಳುಕುತ್ತಿದ್ದ ಗೋರವನಹಳ್ಳಿ ಲಕ್ಷಿ ದೇವಾಲಯದ ಆವರಣದಲ್ಲಿ ಭಕ್ತಾಧಿಗಳ ಬರುವಿಕೆಯಲ್ಲಿ ಇಳಿಮುಖ ಕಂಡುಬರುತ್ತಿದೆ. ಸರಿಯಾದ ಪ್ರಚಾರ, ಮೂಲ ಸೌಲಭ್ಯ ಇಲ್ಲದೆ ಇದ್ದುದರಿಂದ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ ಹೂವಿನ ಬೆಲೆ- ಯಾವ ಹೂವಿಗೆ ಎಷ್ಟು ಬೆಲೆ, ಇಲ್ಲಿದೆ ಮಾಹಿತಿ

    ವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ ಹೂವಿನ ಬೆಲೆ- ಯಾವ ಹೂವಿಗೆ ಎಷ್ಟು ಬೆಲೆ, ಇಲ್ಲಿದೆ ಮಾಹಿತಿ

    ಬೆಂಗಳೂರು: ವರಗಳ ನೀಡೋ ವರಮಹಾಲಕ್ಷ್ಮಿ ದೇವಿ ಆರಾಧನೆಗೆ ಎರಡು ದಿನ ಬಾಕಿ ಇರುವಾಗ್ಲೇ ಸಿಲಿಕಾನ್ ಸಿಟಿ ಹೆಂಗೆಳೆಯರು ಶಾಪಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಬೆಲೆ ಜಾಸ್ತಿಯಾಗಿ ಹೂ ಭಾರವಾದ್ರೂ, ಲಕ್ಷ್ಮೀ ಅಲಂಕಾರಕ್ಕೆ ಖರೀದಿಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಗಳಲ್ಲಂತು ಹೂ, ಹಣ್ಣು ಕಾಯಿಗಳ ಬೆಲೆ ದುಪ್ಪಟ್ಟಾಗಿದ್ರೂ ಶಾಪಿಂಗ್ ಭರಾಟೆ ಜೋರಾಗಿದೆ.

    ಯಾವ ಹೂವಿಗೆ ಎಷ್ಟು ಬೆಲೆ?

    ಕನಕಾಂಬರ-  1000 ರೂ. ಕೆಜಿಗೆ
    ಮಲ್ಲಿಗೆ-  1000 ರೂ. ಕೆಜಿಗೆ
    ಸೆವಂತಿಗೆ-  800 ರೂ. ಕೆಜಿಗೆ
    ಮಲ್ಲಿಗೆ ದಿಂಡು-  100 ರೂ. 1ಕ್ಕೆ
    ಮಲ್ಲಿಗೆ ಹಾರ- 500 ರೂ.
    ಸುಗಂಧ ರಾಜಾ – 600 ರೂ.
    ಕಮಲದ ಹೂ-  50 ರೂ. 1ಕ್ಕೆ
    ವಿಳ್ಯದ ಎಲೆ-  100  ರೂ. 1ಕಟ್ಟು

    ಕನಕಾಂಬರ ಹಾಗೂ ಮಲ್ಲಿಗೆ ಕೆಜಿಗೆ 1,000 ರೂ. ಇದೆ. ಸೇವಂತಿಗೆ ಕೆಜಿಗೆ 800 ರೂ. ಇದೆ. ಮಲ್ಲಿಗೆ ದಿಂಡು 1ಕ್ಕೆ 100 ರೂ. ಇದೆ. ಮಲ್ಲಿಗೆ ಹಾರ 500 ರೂ. ಇದರೆ, ಸುಗಂಧ ರಾಜಾ 600 ರೂ. ಮುಟ್ಟಿದೆ. 1 ಕಮಲದ ಹೂ ಕೊಳ್ಳಬೇಕಂದ್ರೆ 50 ಕೊಡಬೇಕು. 1 ಕಟ್ಟು ವಿಳ್ಯದ ಎಲೆ ಬೆಲೆ 100 ರೂ. ತಲುಪಿದೆ.

    ಗ್ರಾಹಕರು ಹೂ ಹಣ್ಣಿನ ಬೆಲೆ ಕೇಳಿ ಫುಲ್ ಶಾಕ್ ಆಗುತ್ತಿದ್ದಾರೆ. ಆದರೂ ಬೆಲೆ ದುಪ್ಪಟ್ಟಾಗಿದ್ರು ಲಕ್ಷ್ಮಿ ಹೂವಿನ ಅಲಂಕಾರ ಮಿಸ್ ಮಾಡೋಕ್ಕಾಗುತ್ತ. ಲಕ್ಷ್ಮಿಗೆ ಎಲ್ಲಾ ತರಹದ ನೈವೇದ್ಯ ಮಾಡಬೇಕು ಅಂತಾ ಸ್ವಲ್ಪ ಜಾಸ್ತಿನೇ ದುಡ್ಡು ತೆತ್ತು ಹೆಣ್ಣು ಮಕ್ಕಳು ಹೂವಿನ ಖರೀದಿಯಲ್ಲಿ ತೊಡಗಿದ್ದಾರೆ.

    ಒಟ್ಟಿನಲ್ಲಿ ಬೆಲೆ ಏರಿಕೆ ನಡುವೆಯೂ ಲಕ್ಷ್ಮಿ ಹಬ್ಬದ ಸಂಭ್ರಮ ಮಾರ್ಕೆಟ್‍ನಲ್ಲಿ ಕಾಣಿಸುತ್ತಿದೆ. ಜನ ರೇಟ್‍ಗೆ ಚಿಂತಿಸದೆ, ಆಯಸ್ಸು, ಆರೋಗ್ಯ, ಐಶ್ವರ್ಯ, ಸಮೃದ್ಧಿ ಕೊಡುವ ಲಕ್ಷ್ಮಿಯನ್ನು ಆರಾಧಿಸೋಕೆ ಹೂವು ಹಣ್ಣು ಖರೀದಿ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯದೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ- ಗೋರವನಹಳ್ಳಿ ದೇಗುಲದಲ್ಲಿ ಮೊದಲ ಪೂಜೆ

    ರಾಜ್ಯದೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ- ಗೋರವನಹಳ್ಳಿ ದೇಗುಲದಲ್ಲಿ ಮೊದಲ ಪೂಜೆ

    ಬೆಂಗಳೂರು: ಇಂದು ರಾಜ್ಯಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಡಗರ. ಮಹಿಳೆಯರು ಮುಂಜಾನೆಯೇ ಎದ್ದು ವರಮಹಾಲಕ್ಷ್ಮಿಯ ಆರಾಧನೆಯಲ್ಲಿ ತೊಡಗಿದ್ದಾರೆ

    ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲದಲ್ಲಿ ದೇವಿಗೆ ಮೊದಲ ಪೂಜೆ ನಡೆಯುತ್ತಿದೆ. ಸಾವಿರಾರು ಭಕ್ತರು ಮೊದಲ ಪೂಜೆಯಲ್ಲಿ ಪಾಲ್ಗೊಂಡು, ದೇವಿಯನ್ನ ದರ್ಶಿಸಿ ಪುನೀತರಾಗುತ್ತಿದ್ದಾರೆ.

    ಗೊರವನಹಳ್ಳಿ ಸುಕ್ಷೇತ್ರದಲ್ಲಿ ಸಾಕ್ಷತ್ ಮಹಾಲಕ್ಷ್ಮಿಯೇ ನೆಲೆಸಿದ್ದಾಳೆ ಎಂಬ ನಂಬಿಕೆಯಿದೆ.