ಹಾಸನ: ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲು ಹೋಗಿ ವ್ಯಕ್ತಿ ದುರ್ಮರಣವನ್ನಪ್ಪಿದ ಘಟನೆ ಆಲೂರು ತಾಲೂಕಿನ ಬೆಳಮೆ ಗ್ರಾಮದಲ್ಲಿ ನಡೆದಿದೆ.
ರಾಮೇಶ್ವರ ಗ್ರಾಮದಲ್ಲಿ ವಾಸವಿದ್ದ ಬಿಕ್ಕೋಡು ಗ್ರಾಮದ ದೇವರಾಜ್ (38) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿ. ನಾಳೆ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ತಾವರೆ ಹೂವು ಕೀಳಲು ಕೆರೆಗೆ ಇಳಿದಿದ್ದ ದೇವರಾಜ್ ಅಲ್ಲೇ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಸತತ ಮೂರು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ ಅಗ್ನಿಶಾಮಕದಳದ ಸಿಬ್ಬಂದಿ ಮೃತದೇಹ ಮೇಲೆತ್ತಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ
ಬೆಂಗಳೂರು: ಶುಕ್ರವಾರ ರಾಜ್ಯದೆಲ್ಲೆಡೆ ವರಮಹಾಲಕ್ಷ್ಮಿ (Varamahalakshmi) ಹಬ್ಬದ ಪ್ರಯುಕ್ತ ಹಬ್ಬಕ್ಕೆ ಜನರ ತಯಾರಿ ಜೋರಾಗಿದೆ. ಹಣ್ಣು, ಹೂಗಳು, ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಳ್ಳೋಕೆ ಜನ ಮಾರ್ಕೆಟ್‌ಗಳತ್ತ ಮುಖ ಮಾಡಿದ್ದಾರೆ. ಹೂವು, ಹಣ್ಣಿನ ರೇಟ್ ಡಬಲ್ ಇದ್ರೂ ಜನರ ಖರೀದಿ ಭರಾಟೆ ಜೋರಾಗಿದೆ.
ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಜನರು ಸಾಲು ಸಾಲು ಹಬ್ಬಗಳ ಆಚರಣೆಯಲ್ಲಿ ಬ್ಯುಸಿಯಾಗುತ್ತಾರೆ. ಅದರಂತೆ ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಂದೂಗಳ ಪ್ರತಿಯೊಂದು ಮನೆಯಲ್ಲೂ ವರಮಹಾಲಕ್ಷ್ಮಿ ಕೂರಿಸಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಗ್ರಾಹಕರು ಬೆಂಗಳೂರಿನ (Bengaluru) ಕೆಆರ್ ಮಾರುಕಟ್ಟೆಯತ್ತ (KR Market) ಲಗ್ಗೆ ಇಡುತ್ತಿದ್ದಾರೆ. ಹಣ್ಣು, ತರಕಾರಿ ಮತ್ತು ಹೂವುಗಳ ಖರೀದಿಯಲ್ಲಿ ಜನರು ಬ್ಯುಸಿಯಾಗಿದ್ದಾರೆ. ಹೂವಿನಂಗಡಿ, ಹಣ್ಣಿನಂಗಡಿ, ತರಾಕಾರಿ ಅಂಗಡಿಗಳು, ಗ್ರಂಥಿಗೆ ಅಂಗಡಿಗಳಲ್ಲಿ ಜನರು ತುಂಬಿ ತುಳುಕುತಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಎಲ್ಲಾ ವಸ್ತುಗಳ ಬೆಲೆ ಮೊದಲಿಗಿಂತಲೂ ಡಬಲ್ ಆಗಿದೆ. ಸೇಬು, ದಾಳಿಂಬೆ, ಬಟಾಣಿ, ಹುರುಳಿಕಾಯಿ, ಮುಂತಾದ ವಸ್ತುಗಳ ಬೆಲೆಗಳು ಏರಿಕೆಯಾಗಿವೆ. ಹೂವುಗಳ ಬೆಲೆಯೂ ಅಧಿಕವಾಗಿದ್ದು, ಹೂವುಗಳನ್ನು ಕೊಳ್ಳೋ ಅಷ್ಟರಲ್ಲೇ ಜೇಬು ಖಾಲಿಯಾಗುತ್ತದೆ. ಕಳೆದ ವಾರದ ದರಕ್ಕೆ ಹೋಲಿಸಿದ್ರೆ ಈ ವಾರ ಎಲ್ಲಾ ವಸ್ತುಗಳ ರೇಟ್ ಡಬಲ್ ಆಗಿದೆ.
ಯಾವುದರ ದರ ಎಷ್ಟಿದೆ? ತರಕಾರಿ – ಈಗಿನ ದರ – ಹಳೆ ದರ
ಹುರುಳಿಕಾಯಿ – 150 – 80
ಕ್ಯಾಪ್ಸಿಕಂ – 80 – 40
ಬೀನ್ಸ್ – 80 – 40
ಬದನೆಕಾಯಿ – 60 – 40
ಹೂಕೋಸು – 30 – 15
ತೊಂಡೆಕಾಯಿ – 45 – 30
ಹಣ್ಣುಗಳ ದರ ಎಷ್ಟಿದೆ? ಹಣ್ಣುಗಳು – ಈಗಿನ ದರ – ಹಳೆ ದರ
ಸೇಬು – 300 – 180
ದಾಳಿಂಬೆ – 280 – 150
ಕಿತ್ತಳೆ – 200 – 120
ಮೂಸಂಬಿ – 150 – 70
ಸಪೋಟ – 150 – 100
ದ್ರಾಕ್ಷಿ – 200 – 150
ಸೀತಾಫಲ – 200 – 60
ಕೆಆರ್ ಮಾರ್ಕೆಟ್ ರಸ್ತೆ ಸಂಪೂರ್ಣ ಬಂದ್:
ಇನ್ನು ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರಾಗಿದ್ದರಿಂದಾಗಿ ಸಂಚಾರಿ ಪೊಲೀಸರು ಕೆಆರ್ ಮಾರ್ಕೆಟ್ ರಸ್ತೆ ಸಂಪೂರ್ಣ ಕ್ಲೋಸ್ ಮಾಡಿದ್ದು, ಗ್ರಾಹಕರಿಗೆ ಅನೂಕೂಲ ಆಗುವಂತೆ ರಸ್ತೆ ಮಾರ್ಗ ಬದಲಿಸಿದ್ದಾರೆ. ಟೌನ್ ಹಾಲ್‌ನಿಂದ ಕೆಆರ್ ಮಾರ್ಕೆಟ್‌ಗೆ ಬರುವ ಮಾರ್ಗ, ಮೈಸೂರು ಸರ್ಕಲ್‌ನಿಂದ ಕೆಆರ್ ಮಾರ್ಕೆಟ್‌ಗೆ ಬರುವ ಮಾರ್ಗ ಬಂದ್ ಮಾಡಿದ್ದು, ಕೆಆರ್ ಮಾರ್ಕೆಟ್ ಫ್ಲೈಓವರ್ ಮೇಲೆ ಮಾತ್ರ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯದ ಮಹಿಳೆಯರಿಗೆ, ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣವನ್ನು ಅರ್ಹ ಫಲಾನುಭವಿಗಳ ಸರ್ಕಾರ (Karnataka Govt.) ಖಾತೆಗೆ ಜಮೆ ಮಾಡಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಕಳೆದ ಜೂನ್, ಜುಲೈ ತಿಂಗಳ ಗಣ ಬಂದಿರಲಿಲ್ಲ. ಇದೀಗಾ ಜೂನ್ ತಿಂಗಳ ಹಣ ಎರಡ್ಮೂರು ದಿನದಲ್ಲಿ DBT ಮೂಲಕ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಇನ್ನೂ ಜುಲೈ, ಆಗಸ್ಟ್ ತಿಂಗಳ ಹಣ ಮುಂದಿನ ತಿಂಗಳು ಬಿಡುಗಡೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ವರಮಹಾಲಕ್ಷ್ಮಿ ಹಬ್ಬಕ್ಕೂ (Varamahalakshmi Festival) ಮುನ್ನವೇ 2 ತಿಂಗಳ ಹಣ ಒಟ್ಟಿಗೇ ಬರುತ್ತೆ ಅಂದುಕೊಂಡಿದ್ದವ್ರಿಗೆ ಕೊಂಚ ನಿರಾಸೆಯಾಗಿದೆ. ಇದನ್ನೂ ಓದಿ: 100 ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣಕ್ಕೆ ಕತ್ತಲೆ ಭಾಗ್ಯ; ಟಾರ್ಚ್ ಬೆಳಕಲ್ಲೇ ವರ್ತಕರ ವಹಿವಾಟು
ಜೂನ್ ತಿಂಗಳ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕಿದ್ದು, 1.25 ಕೋಟಿ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಲಿದೆ. ಪ್ರತಿ ತಿಂಗಳಿಗೆ ಅಂದಾಜು 2,500 ಕೋಟಿ ರೂ. ಯೋಜನೆ ಮೂಲಕ ಫಲಾನುಭವಿಗಳಿಗೆ ತಲುಪುತಿತ್ತು. ಇದುವರೆಗೆ 10 ಕಂತುಗಳ ಹಣ ಬಿಡುಗಡೆಯಾಗಿದ್ದು, ಜೂನ್, ಜುಲೈ ತಿಂಗಳ ಹಣ ಬಾಕಿಯಿದೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಎರಡು ತಿಂಗಳು ಸ್ಥಗಿತಗೊಂಡಿದ್ದ ಹಣವನ್ನ ಫಲಾನುಭವಿಗಳಿಗೆ ನೀಡಲು ಸರ್ಕಾರ ಮುಂದಾಗಿದೆ.
ರಾಮನಗರ: ವರಮಹಾಲಕ್ಷ್ಮಿ ಹಬ್ಬವನ್ನು (Kabbalamma Temple) ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕನಕಪುರದ (Kanakapura) ಕಬ್ಬಾಳಮ್ಮ ದೇವಿಗೆ (Kabbalamma Temple) ವಿವಿಧ ನೋಟುಗಳಿಂದ (Note) ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಬೆಂಗಳೂರು: ಎಲ್ಲೆಡೆ ವರಮಹಾಲಕ್ಷ್ಮಿ (Varamahalakshmi Festival) ಹಬ್ಬದ ಸಂಭ್ರಮ ಮನೆ ಮಾಡಿದೆ. ಶುಭ ಶುಕ್ರವಾರದ ದಿನ ಇಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಬರುವ ಮಹಿಳಾ ಭಕ್ತರಿಗೆ ವಿಶೇಷ ಹಬ್ಬದ ಉಡುಗೊರೆಯೊಂದು ಕಾದಿದೆ.
ಇಂದು ಲಕ್ಷ್ಮಿ ದೇವಿಯನ್ನು ಆರಾಧಿಸುವ ಮುತ್ತೈದೆಯರೇ ಆಚರಿಸುವ ವಿಶೇಷವಾದ ವೃತ ವರಮಹಾಲಕ್ಷ್ಮಿ ಹಬ್ಬದ ಸಡಗರ. ಮನೆ ಮನೆಯಲ್ಲಿ ಸುಮಂಗಲಿಯರ ಸಡಗರ, ಸಂಪತ್ತಿನ ಅಧಿದೇವತೆ ದರ್ಶನಕ್ಕಾಗಿ ಹೋಗುವ ಮಹಿಳಾ ಭಕ್ತರಿಗೆ ದೇಗುಲದಲ್ಲಿ ವಿಶೇಷ ಉಡುಗೊರೆ ಸಿಗಲಿದೆ. ಹೌದು, ಇಂದು ರಾಜ್ಯದ ಎಲ್ಲಾ ಮುಜರಾಯಿ ದೇಗುಲದಲ್ಲಿಯೂ ಮಹಿಳಾ ಭಕ್ತರಿಗಾಗಿ ಅರಿಶಿನ, ಕುಂಕುಮ, ಬಳೆ, ಕಣವನ್ನು ಕೊಡಲಾಗುತ್ತದೆ. ಮುಜರಾಯಿ ಇಲಾಖೆ ಈಗಾಗಲೇ ಈ ಬಗ್ಗೆ ಸುತ್ತೋಲೆ ಕೂಡ ಹೊರಡಿಸಿದೆ. ಇದನ್ನೂ ಓದಿ: ಬೆಂಗಳೂರಿಗೆ ಮೋದಿ ಆಗಮನ ಹಿನ್ನೆಲೆ ಸಂಚಾರದಲ್ಲಿ ಬದಲಾವಣೆ
ಈಗಾಗಲೇ ಬೆಂಗಳೂರಿನ ಬನಶಂಕರಿ ದೇಗುಲ ಸೇರಿದಂತೆ ಮುಜರಾಯಿ ದೇಗುಲದಲ್ಲಿ ಇಂದು ಪೂಜೆಗೆ ಎಲ್ಲಾ ಸಿದ್ಧತೆ ಮಾಡಲಾಗಿದ್ದು, ಮಹಿಳಾ ಭಕ್ತರಿಗೆ ಕೊಡುವ ಎಲ್ಲಾ ಅರಿಶಿನ, ಕುಂಕುಮ, ಬಳೆಗಳ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಬರುವಂತಹ ಭಕ್ತರಿಗೆ ಇದನ್ನು ವಿತರಣೆ ಮಾಡಲಾಗುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೆ ದೇಗುಲಕ್ಕೆ ಬರುವ ಮಹಿಳಾ ಭಕ್ತರಿಗೆ ಉಡುಗೊರೆ ಕೊಡಲಾಗುತ್ತದೆ.
ಮಾರುಕಟ್ಟೆಯಲ್ಲಿ ಖರೀದಿ ಜೋರು
ಸಾಮಾನ್ಯವಾಗಿ ಹಬ್ಬದ ದಿನಗಳಂದು ಖರೀದಿ ಭರಾಟೆ ಜೋರಾಗಿರುತ್ತದೆ. ಅಲ್ಲದೇ ಹೂ, ಹಣ್ಣು ಅಗತ್ಯ ವಸ್ತುಗಳ ಬೆಲೆಯಲ್ಲಿ ದುಪ್ಪಟ್ಟಾಗಿರುತ್ತದೆ. ಅಂತೆಯೇ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆ ಹೂ, ಹಣ್ಣು ಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ಯಾವುದು, ಎಷ್ಟು ದರ?
ಕನಕಾಂಬರ – 10 ಮೊಳ (ಒಂದು ಕುಚ್ಚು) 400 ರೂ., ಮಲ್ಲಿಗೆ ಕುಚ್ಚು- 500 ರಿಂದ 600 ರೂ., ಗುಲಾಬಿ- 150 ರಿಂದ 200 ರೂ., ಚಿಕ್ಕ ಹೂವಿನ ಹಾರ- 200 ರೂ., ದೊಡ್ಡ ಹೂವಿನ ಹಾರ- 400 ರಿಂದ 500 ರೂ., ತಾವರೆ ಹೂ- ಜೋಡಿಗೆ 50 ರಿಂದ 100 ರೂ., ಚೆಂಡುಹೂ- ಒಂದು ಕುಚ್ಚು 200 ರೂ., ತೋಮಾಲೆ- 1000 ರೂ., ಚೆಂಡು ಹೂವಿನ ಚಿಕ್ಕ ಹಾರ- 100 ರೂ., ಮಲ್ಲಿಗೆ ಹಾರ- 200 ರಿಂದ 400 ರೂ.
ಶ್ರಾವಣವು ಹಬ್ಬಗಳ ಮಾಸವಾಗಿದೆ. ಮೊನ್ನೆಯಷ್ಟೇ ಮೊದಲ ಹಬ್ಬವಾಗಿ ನಾಗರಪಂಚಮಿಯನ್ನು ಅತ್ಯಂತ ಸಡಗರ- ಸಂಭ್ರಮದಿಂದ ಆಚರಿಸಿದ್ದೇವೆ. ಇದೀಗ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ವರಮಹಾಲಕ್ಷ್ಮಿ ಹಬ್ಬವನ್ನು ಕೂಡ ಸಂಭ್ರಮದಿಂದಲೇ ಬರಮಾಡಿಕೊಳ್ಳುತ್ತಿದ್ದೇವೆ. ವರಮಹಾಲಕ್ಷ್ಮಿ (Varamahalakshmi) ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ.
ಪುರಾಣ ಏನು ಹೇಳುತ್ತೆ..?: ಚಾರುಮತಿ ಎಂಬ ಸ್ತ್ರೀ ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ, ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ ಚಾರುಮತಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ವರಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾಳೆ.
ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಕಥೆಯಿದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದಾರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಲಕ್ಷ್ಮಿ ಉದ್ಭವಿಸುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮಿಯ ಆರಾಧನೆಗಾಗಿ ಈ ಹಬ್ಬವಾಗಿದೆ. ಪ್ರತಿವರ್ಷವೂ ಲಕ್ಷ್ಮಿಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬದ ಎಫೆಕ್ಟ್ – ಹೂ, ಹಣ್ಣಿನ ದರ ಭಾರೀ ಏರಿಕೆ
ವ್ರತ ಹೇಗೆ ಮಾಡಬೇಕು?: ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತವಾಗಿದೆ. ಹೀಗಾಗಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ. ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಲಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ ಅಲಂಕರಿಸುತ್ತಾರೆ. ಜೊತೆ ಒಡವೆಗಳನ್ನು ಹಾಕಿ ಸಿಂಗಾರಗೊಳಿಸುತ್ತಾರೆ.
ಲಕ್ಷ್ಮಿಗೆ ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವು ಹಾಗೂ ಬಿಲ್ವಪತ್ರೆ ಎಂದರೆ ಲಕ್ಷ್ಮಿಗೆ ತುಂಬಾ ಪ್ರೀತಿ. ಹೀಗಾಗಿ ವ್ರತ ಮಾಡುವವರು ಈ ಹೂವನ್ನು ತಪ್ಪದೆ ತಾಯಿಯ ಬಳಿಯಿಟ್ಟು ಪೂಜೆ ಮಾಡುತ್ತಾರೆ. ಲಕ್ಷ್ಮಿ ಮುಂದೆ ಹಣ, ಚಿನ್ನ, ಬಳೆ, ಹಣ್ಣು, ಸ್ವೀಟ್, ಅರಿಶಿಣ, ಕುಂಕುಮ, ಎಲ್ಲವನ್ನೂ ಇಡುತ್ತಾರೆ. ಬಿಲ್ವ ವೃಕ್ಷದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬುದು ನಂಬಿಕೆಯಾಗಿದೆ. ಹೀಗಾಗಿ ಬಿಲ್ವ ಪತ್ರೆಯಿಂದ ಪೂಜೆ ಮಾಡಿದರೆ ತಾಯಿ ಒಲಿಯುವಳೆಂಬ ಪ್ರತೀತಿಯೂ ಇದೆ. ವರಲಕ್ಷ್ಮಿ ಎಂದರೆ ವರಗಳನ್ನು ಕೊಡುವವಳು ಎಂದು ಕೂಡ ಹೇಳುತ್ತಾರೆ. ಸಾಮಾನ್ಯವಾಗಿ ಲಕ್ಷ್ಮಿ ಪೂಜೆಯನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಶ್ರೇಷ್ಠ. ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ ಹಾಗೂ ಎಲ್ಲಾ ಕೆಲಸದಲ್ಲಿ ಏಳಿಗೆ ಆಗುತ್ತದೆಂಬ ನಂಬಿಕೆಯೂ ಇದೆ. ಹೀಗಾಗಿ ನಮ್ಮ ಪೂರ್ವಿಕರು ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮಿಯು ನೆಲೆಸುತ್ತಾಳೆ ಎಂಬ ನಂಬಿಕೆಯನ್ನು ಹೊಂದಿದ್ದರು.
ಲಕ್ಷ್ಮಿಗೆ ಪ್ರಿಯವಾದ ಧಾನ್ಯವೆಂದರೆ ಕಡಲೆಬೇಳೆ. ಆದ್ದರಿಂದ ವರಮಹಾಲಕ್ಷ್ಮಿ ಹಬ್ಬದ ದಿನದಂದು ನೈವ್ಯೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ ಪಾಯಸ, ಹೋಳಿಗೆ ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸುತ್ತಾರೆ. ವ್ರತದ ನೇಮದ ಪ್ರಕಾರ ಪೂಜೆಯ ಸಿದ್ಧತೆಗಳೆಲ್ಲ ಆದ ನಂತರ ಮೊದಲು ವಿಘ್ನನಿವಾರಕ ಗಣಪತಿಯನ್ನು ಪೂಜಿಸಿ ನಂತರ ಯಮುನಾ ಪೂಜೆ ಅಂದರೆ ಶ್ರೇಷ್ಠವಾದ ನದಿಯ ನೀರನ್ನು ತಂದು ಪೂಜೆ ಮಾಡುತ್ತಾರೆ. ಇದಾದ ಮೇಲೆ ವರಲಕ್ಷ್ಮಿ ವ್ರತವನ್ನು ಆರಂಭಿಸುತ್ತಾರೆ. ಮನೆಗೆ ಮುತ್ತೈದೆಯರನ್ನು ಕರೆದು ಅರಿಶಿಣ, ಕುಂಕುಮ, ಸಿಹಿ ಕೊಡುತ್ತಾರೆ. ಇದೇ ರೀತಿ ಮದುವೆಯಾದ ಹೆಣ್ಣು ಮಕ್ಕಳು ಮೊದಲನೇ ವರ್ಷದಿಂದ ಒಂಬತ್ತು ವರ್ಷದವರೆಗೆ ಶ್ರದ್ಧೆಯಿಂದ ವ್ರತವನ್ನಾಚರಿಸಿ ಒಂಬತ್ತನೇ ವರ್ಷ ವ್ರತವನ್ನು ಮುಗಿಸುತ್ತಾರೆ.
ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ (Varamahalakshmi Festival) ಹಿನ್ನೆಲೆಯಲ್ಲಿ ಹಣ್ಣು ಹಾಗೂ ಹೂವಿನ ಬೆಲೆಯಲ್ಲಿ ಭಾರೀ ಏರಿಕೆ (Price Hike) ಕಂಡಿದೆ. ಇದರ ನಡುವೆಯೇ ಗ್ರಾಹಕರು ಕೆ.ಆರ್.ಮಾರ್ಕೆಟ್‍ನಲ್ಲಿ ಹಬ್ಬದ ಖರೀದಿಯನ್ನು ಮುಂದುವರೆಸಿದ್ದಾರೆ.
ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ಹೂ ಹಾಗೂ ಹಣ್ಣುಗಳ ದರದಲ್ಲಿ ಏರಿಕೆಯಾಗಿರುವುದು ಹಬ್ಬದ ಸಂಭ್ರಮದಲ್ಲಿದ್ದವರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಬೆಲೆ ದುಬಾರಿಯಾದರೂ ಗ್ರಾಹಕರು ಖರೀದಿಯಲ್ಲಿ ಹಿಂದೆ ಬಿದ್ದಿಲ್ಲ. ಶುಕ್ರವಾರ ನಡೆಯಲಿರುವ ಹಬ್ಬಕ್ಕೆ ಜನ ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ಭಾರತದ ಮುದ್ರೆ – ಚಂದ್ರಯಾನ 3 ಸಕ್ಸಸ್ ಮುಂದೇನು?
ಹೂವಿನ ದರ ಎಷ್ಟಿದೆ?
ಕನಕಾಂಬರ ಕೆಜಿಗೆ 1,200 – 1,500
ಮಲ್ಲಿಗೆ ಕೆಜಿಗೆ 600 – 800 ರೂ.
ಗುಲಾಬಿ 150 – 200 ರೂ.
ಚಿಕ್ಕ ಹೂವಿನ ಹಾರ 150 – 200 ರೂ.
ದೊಡ್ಡ ಹೂವಿನ ಹಾರ 300 – 500 ರೂ.
ಸೇವಂತಿಗೆ 250 – 300 ರೂ.
ತಾವರೆ ಹೂ ಜೋಡಿ 50 – 100 ರೂ.
ಕೊಪ್ಪಳ: ಹಿಂದೂ ಮತ್ತು ಮುಸ್ಲಿಂ ಸಾಮರಸ್ಯಕ್ಕೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಮುಸ್ಲಿಂ ಕುಟುಂಬ ಸಾಕ್ಷ್ಯಿಯಾಗಿದೆ.
ಶುಕ್ರವಾರ ಹಿಂದೂ ಸಂಸ್ಕøತಿಯ ವರಮಹಾಲಕ್ಷ್ಮಿ ಹಬ್ಬವನ್ನು ನೆರವೇರಿಸುವ ಭಾವೈಕ್ಯತೆಯನ್ನು ಅಳವಂಡಿ ಗ್ರಾಮದ ನಜೀರುದ್ದಿನ್ ಕುಟುಂಬ ಸಾರಿದೆ. ಧಾರ್ಮಿಕ ಆಚರಣೆಗಳನ್ನು ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಆಚರಿಸುತ್ತಾ ಬಂದಿದ್ದಾರೆ. ಪ್ರತಿಯೊಂದು ಧಾರ್ಮಿಕ ಆಚರಣೆಗಳನ್ನು ಒಗ್ಗಟ್ಟಾಗಿ ಆಚರಿಸುತ್ತಾರೆ. ಅದರಂತೆ ಮುಸ್ಲಿಂ ಸಮುದಾಯದ ಕುಟುಂಬವೊಂದು ಕಳೆದ ಮೂರು ವರ್ಷಗಳಿಂದ ತಮ್ಮ ಹಬ್ಬಗಳನ್ನು ಆಚರಿಸುವ ರೀತಿಯಲ್ಲಿಯೇ ಸಂಪ್ರದಾಯ ಬದ್ಧವಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಇದನ್ನೂ ಓದಿ: ನನ್ನ ಪತ್ನಿ ಜೊತೆ ಮಾತನಾಡಬೇಡ ಅಂದಿದ್ದಕ್ಕೆ ಕ್ರಿಕೆಟ್ ಬ್ಯಾಟ್, ವಿಕೆಟ್‌ನಿಂದ ಹೊಡೆದು ಕೊಲೆಗೈದ್ರು
ಅಳವಂಡಿ ಗ್ರಾಮದ ನಜುರುದ್ದೀನ್ ಬಿಸರಳ್ಳಿ ಅವರು ಮುಸ್ಲಿಂ ಕುಟುಂಬದ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಮನೆತನದ ಹಬ್ಬದ ರೀತಿ ಆಚರಿಸುತ್ತಿದ್ದಾರೆ. ಹಬ್ಬದ ಪ್ರಯುಕ್ತ ಮನೆಯನ್ನು ದೀಪಾಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ನೆರವೇರಿಸಿದ್ದಾರೆ. ಹೋಳಿಗೆ ನೈವೇದ್ಯ, ವಿವಿಧ ತರಹದ ಹಣ್ಣುಗಳು ಸಮರ್ಪಿಸಿ, ಹಣತೆ ಹಚ್ಚಿ ಭಾವೈಕ್ಯತೆ ಮೆರೆದಿದ್ದಾರೆ.
ಮನೆಯನ್ನು ವಿದ್ಯುತ್ ದೀಪ ಹಾಗೂ ತೋರಣ ಕಟ್ಟಿ ಸಿಂಗರಿಸಲಾಗಿತ್ತು. ನಜುರುದ್ದೀನ್ ಬಿಸರಳ್ಳಿ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸರ್ವ ಧರ್ಮದ ಸ್ನೇಹಿತರನ್ನು ಆಹ್ವಾನಿಸಿ ಸತ್ಕರಿಸಿದರು.
ನಜುರುದ್ದೀನ್ ಬಿಸರಳ್ಳಿ ಈ ಕುರಿತು ಮಾತನಾಡಿದ್ದು, ಕಳೆದ ಮೂರು ವರ್ಷದ ಹಿಂದೆ ವರಮಹಾಲಕ್ಷ್ಮಿ ಹಬ್ಬದ ದಿನದಂದು, ನನ್ನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಡೆಯಿತು. ಅದರಂತೆ ಪ್ರತಿವರ್ಷ ಹಿಂದೂ ಸಂಪ್ರದಾಯದಂತೆ ವರಮಹಾಲಕ್ಷ್ಮಿ ಹಬ್ಬ ಮಾಡುತ್ತಾ ಬಂದಿದ್ದೇನೆ. ಇದರಿಂದ ಒಳ್ಳೆಯದು ಆಗಿದೆ. ನಾನು ಕೂಡ ಗ್ರಾಮದಲ್ಲಿ ಪ್ರತಿಯೊಂದು ಧಾರ್ಮಿಕ ಆಚರಣೆಗಳನ್ನು ಪಾಲ್ಗೋಳ್ಳುತ್ತೇನೆ ಎಂದರು. ಇದನ್ನೂ ಓದಿ: ‘ಇಂಡಿಯಾ ಕಿ ಉಡಾನ್’ ಮೂಲಕ ಸ್ವಾತಂತ್ರ್ಯ ನಂತರದ ದಿನ ನೆನಪಿಸಲಿರುವ ಗೂಗಲ್
Live Tv
[brid partner=56869869 player=32851 video=960834 autoplay=true]
ವರಮಹಾಲಕ್ಷ್ಮಿ ಹಬ್ಬದ ಎಂದಾಕ್ಷಣ ನಮಗೆ ಅಡುಗೆಯಲ್ಲಿ ನೆನಪಾಗುವುದೇ ‘ಹೋಳಿಗೆ’. ಎಲ್ಲರೂ ಇಷ್ಟಪಟ್ಟು ತಿನ್ನುವ ಸಿಹಿ ತಿಂಡಿಯಲ್ಲಿ ಹೋಳಿಗೆ ಆಗ್ರಸ್ಥಾನದಲ್ಲಿದೆ. ಅದರಲ್ಲಿಯೂ ಈ ವರಮಹಾಲಕ್ಷ್ಮಿ ಹಬ್ಬದಲ್ಲಿ ‘ಹೋಳಿಗೆ’ ವಿಶೇಷ ರೆಸಿಪಿಯಾಗಿರುತ್ತೆ. ಅದಕ್ಕೆ ಇಂದು ನೀವು ಸುಲಭವಾಗಿ ಮತ್ತು ಬೇಗ ಹೇಗೆ ‘ಹೋಳಿಗೆ’ ಮಾಡಬಹುದು ಎಂದು ಹೇಳಿಕೊಡುತ್ತೇವೆ.
ಬೇಕಾಗಿರುವ ಪದಾರ್ಥಗಳು:
* ಮೈದಾ – 1 ಕಪ್
* ಕಡ್ಲೆ ಬೇಳೆ – 1 ಕಪ್
* ಅರಿಶಿನ – 2 ಟೀಸ್ಪೂನ್
* ಉಪ್ಪು – 1 ಟೀಸ್ಪೂನ್
* ನೀರು – ಅರ್ಧ ಕಪ್
* ಎಣ್ಣೆ – ಅರ್ಧ ಕಪ್
* ಬೆಲ್ಲ – 1 ಕಪ್
* ಏಲಕ್ಕಿ ಪುಡಿ / ಎಲಾಚಿ ಪು – 1 ಟೀಸ್ಪೂನ್
* ಬೇಕಾಗಿರುವಷ್ಟು ತುಪ್ಪ
ಮಾಡುವ ವಿಧಾನ:
* ಮೊದಲನೆಯದಾಗಿ, ದೊಡ್ಡ ಮಿಕ್ಸಿಂಗ್ ಬೌಲ್‍ನಲ್ಲಿ 1 ಕಪ್ ಮೈದಾ, 1 ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ ಹಿಟ್ಟನ್ನು ತಯಾರಿಸಿ.
* ಹಿಟ್ಟಿಗೆ ಹೆಚ್ಚು ಎಣ್ಣೆಯನ್ನು ಹಾಕಿ ಮೃದುವಾಗಿ ಕಲಸಿ. ಕನಿಷ್ಠ 3 ಗಂಟೆಗಳ ಕಾಲ ಮುಚ್ಚಿ ಇಡಿ.
* ಪ್ರೆಶರ್ ಕುಕ್ಕರ್‍ನಲ್ಲಿ ಕಡ್ಲೆ ಬೇಳೆ, 1 ಕಪ್ ನೀರು ,1 ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ 2 ಸೀಟಿಗಳಿಗೆ ಬೇಯಿಸಿರಿ.
* 10 ನಿಮಿಷಗಳ ಕಾಲ ಹಾಗೆ ಇಡಿ, ಇದರಿಂದ ನೀರನ್ನು ಹೊರಹಾಕಿ. ಅದಕ್ಕೆ 1 ಕಪ್ ಬೆಲ್ಲವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಕರಗುವ ತನಕ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಬೇಯಿಸಿ.
* ಹೆಚ್ಚುವರಿಯಾಗಿ 1 ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ, 5 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.
* ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಹೆಚ್ಚು ನುಣ್ಣಗೆ ರುಬ್ಬಿಕೊಳ್ಳಬೇಡಿ. ಇಲ್ಲಿಗೆ ನಿಮ್ಮ ಹೋಳಿಗೆ ಮಿಶ್ರಣ ರೆಡಿ.
* ಹಿಟ್ಟಿನ ಮಿಶ್ರಣವನ್ನು ಸಣ್ಣ ಚೆಂಡಿನ ಗಾತ್ರ ಮಾಡಿ ಅದನ್ನು ಚಪ್ಪಟೆಯಾಕಾರದಲ್ಲಿ ತಟ್ಟಿ ನಂತರ ಹೋಳಿಗೆ ಮಿಶ್ರಣವನ್ನು ಮಧ್ಯದಲ್ಲಿ ಇಟ್ಟು ಜೋಳದ ರೊಟ್ಟಿಯಂತೆ ತಟ್ಟಿ.
* ಇತ್ತ ಮೊದಲೇ ಗ್ಯಾಸ್ ಆನ್ ಮಾಡಿಟ್ಟುಕೊಂಡು ಹೋಳಿಗೆ ತಟ್ಟಿದ ತಕ್ಷಣ ತವಾದ ಮೇಲೆ ಹಾಕಿ ಬೇಯಿಸಿ. ಅದರ ಮೇಲೆ ತುಪ್ಪ ಹಾಕಿ.
* ಎರಡು ಬದಿಯು ಚೆನ್ನಾಗಿ ಬೇಯಿಸಿ.
– ಅಂತಿಮವಾಗಿ, ತುಪ್ಪ / ತೆಂಗಿನ ಹಾಲು / ಮಾವಿನ ರಸಾಯನದೊಂದಿಗೆ ಹೋಳಿಗೆ / ಒಬ್ಬಟ್ಟು ಬಡಿಸಿ.
Live Tv
[brid partner=56869869 player=32851 video=960834 autoplay=true]
ಬಳ್ಳಾರಿ: ಕಳೆದ ಹತ್ತು ವರ್ಷಗಳ ಬಳಿಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ಗಣಿ ನಾಡು ಬಳ್ಳಾರಿಗೆ ಆಗಮಿಸಿದ್ದಾರೆ. ಬಳ್ಳಾರಿಗೆ ಬಂದ ಖುಷಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿ ಜಾಮೀನು ಪಡೆದರು ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ಬರುವ ಭಾಗ್ಯ ಮಾತ್ರ ದೊರೆತಿರಲಿಲ್ಲ. ಆದರೆ ಈಗ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಷರತ್ತು ಬದ್ಧ ಜಾಮೀನಿನ ಷರತ್ತುಗಳನ್ನು ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ 10 ವರ್ಷಗಳ ಬಳಿಕ ರೆಡ್ಡಿ ಅವರು ಹುಟ್ಟೂರಿಗೆ ಬರುವಂತಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಂತೋಷದ ಕ್ಷಣಗಳನ್ನು ರೆಡ್ಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.