Tag: ವರನಟ ಡಾ. ರಾಜ್ ಕುಮಾರ್

  • ಸೌತ್ ಸಿನಿಮಾ ರಂಗಕ್ಕೆ ಅಣ್ಣಾವ್ರ ಮೊಮ್ಮಗಳ ಎಂಟ್ರಿ

    ಸೌತ್ ಸಿನಿಮಾ ರಂಗಕ್ಕೆ ಅಣ್ಣಾವ್ರ ಮೊಮ್ಮಗಳ ಎಂಟ್ರಿ

    ಣ್ಣಾವ್ರ ಮೊಮ್ಮಕ್ಕಳು ಒಬ್ಬೊಬ್ಬರಾಗಿಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈಗಾಗಲೇ `ನಿನ್ನ ಸನಿಹಕೆ’ ಚಿತ್ರದ ಮೂಲಕ ಧನ್ಯಾ ರಾಮ್‌ಕುಮಾರ್ ಎಂಟ್ರಿ ಕೊಟ್ಟಾಗಿದೆ. ಸ್ಯಾಂಡಲ್‌ವುಡ್‌ನಲ್ಲೇ ಧನ್ಯಾಗೆ ಒಳ್ಳೆಯ ಅವಕಾಶಗಳು ಅರಸಿ ಬರುತ್ತಿರಬೇಕಾದರೆ, ತೆಲುಗು, ತಮಿಳು ಚಿತ್ರರಂಗದಿಂದ ನಟಿ ಧನ್ಯಾಗೆ ಬುಲಾವ್ ಬರುತ್ತಿದೆ.

    `ನಿನ್ನ ಸನಿಹಕೆ’ ಚಿತ್ರ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಗುರುತಿಸಿಕೊಂಡ ನಟಿ, ಮೊದಲ ಚಿತ್ರದಲ್ಲೇ ತಾನೆಂತಹ ಕಲಾವಿದೆ ಅಂತಾ ಪ್ರೂವ್ ಮಾಡಿದ್ದರು. ಈ ಚಿತ್ರದ ನಂತರ ಧನ್ಯಾಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಸಖತ್ ಚ್ಯೂಸಿಯಾಗಿ ಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ಕೊಡ್ತಿದ್ದಾರೆ. ತೆಲುಗು ಮತ್ತು ತಮಿಳಿನಲ್ಲೂ ಧನ್ಯಾ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸೌತ್ ಅಂಗಳದಲ್ಲೂ ತಾನು ಮಿಂಚಬೇಕು ಅಂತಾ ಧನ್ಯಾ ಕೂಡ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

    ಡಾ.ರಾಜ್ ಅವರ ಮೊಮ್ಮಗಳು ಧನ್ಯಾಗೆ ಸೌತ್ ಸಿನಿ ಇಂಡಸ್ಟ್ರಿಯಿಂದ ಸಿನಿಮಾ ಮಾಡಲು ಬುಲಾವ್ ಬಂದಿದೆ. ಅಳೆದು ತೂಗಿ ಕಥೆ ಕೇಳಿ ಒಂದಿಷ್ಟು ಚಿತ್ರಗಳಿಗೆ ಓಕೆ ಅಂದಿದ್ದಾರೆ. ತೆಲುಗು ಮತ್ತು ತಮಿಳು ಎರಡು ಭಾಷೆಯಲ್ಲೂ ಬೇರೆ ಬೇರೆ ಸಿನಿಮಾ ಮಾಡುತ್ತಿದ್ದು, ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ. ಅಧಿಕೃತ ಮಾಹಿತಿಯನ್ನು ಆಯಾ ಚಿತ್ರತಂಡದವರೇ ರಿವೀಲ್ ಮಾಡಲಿದ್ದಾರೆ. ಇದನ್ನೂ ಓದಿ:`ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    ಕನ್ನಡದ `ಕಾಲಾಪತ್ಥರ್’ ಚಿತ್ರದಲ್ಲೂ ನಟಿಸಿರುವ ಧನ್ಯಾ ಈಗ ದಕ್ಷಿಣ ಭಾರತದ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಒಂದೊಳ್ಳೆ ಸಿನಿಮಾದ ಮೂಲಕ ಧನ್ಯಾ ಸೌತ್ ಸಿನಿಪ್ರೇಕ್ಷಕರ ಮನ ಗೆಲ್ಲುತ್ತಾರಾ ಅಂತಾ ಕಾದುನೋಡಬೇಕಿದೆ.

  • ಗಾಜನೂರಿನಲ್ಲಿ ಅಣ್ಣಾವ್ರ ಮಕ್ಕಳ ಸಂಭ್ರಮ

    ಗಾಜನೂರಿನಲ್ಲಿ ಅಣ್ಣಾವ್ರ ಮಕ್ಕಳ ಸಂಭ್ರಮ

    ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಮಕ್ಕಳಾದ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಕುಟುಂಬ ಗಾಜನೂರಿಗೆ ಭೇಟಿ ಕೊಟ್ಟಿದೆ.

    ಹ್ಯಾಟ್ರಿಕ್ ಹೀರೋ ಹಾಗೂ ಪವರ್ ಸ್ಟಾರ್ ಕುಟುಂಬ ಗಾಜನೂರಿಗೆ ತೆರಳಿ ಒಂದು ದಿನ ಅಲ್ಲಿಯೇ ಕಳೆದಿದೆ. ಇತ್ತ ಹುಟ್ಟೂರಿಗೆ ಭೇಟಿ ಕೊಟ್ಟಿದ್ದರಿಂದ ಅಲ್ಲಿನ ಸ್ಥಳೀಯರ ಸಂಭ್ರಮ ಕೂಡ ಮುಗಿಲುಮುಟ್ಟಿತು.

    ರಾಜ್ ಕುಮಾರ್ ಪುತ್ರರನ್ನು ಬಹಳ ಹತ್ತಿರದಿಂದ ನೋಡಿ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಹಿರಿ ಜೀವಗಳಿಗೆ ಮಾತ್ರ ತಮ್ಮೂರಿನ ಮಕ್ಕಳು ಬಂದಿದ್ದಾರೆಂಬ ಖುಷಿ ಬೇರೆ. ಒಟ್ಟಿನಲ್ಲಿ ರಾಜ್ ಪುತ್ರರನ್ನು ಕಂಡ ಅವರ ಅಭಿಮಾನಿಗಳು ನಟರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಗನ ಜೊತೆಗಿನ ಕ್ಯೂಟ್ ಸೆಲ್ಫಿ ಶೇರ್ ಮಾಡಿದ ನಟಿ ಮೇಘನಾ

     

    View this post on Instagram

     

    A post shared by DrShivaRajkumar (@nimmashivarajkumar)

    ಶಿವರಾಜ್ ಕುಮಾರ್ ಅವರು ತಮ್ಮ ತಂದೆ ರಾಜ್ ಕುಮಾರ್ ಅವರ ಅಚ್ಚುಮೆಚ್ಚಿನ ಆಳದ ಮರದ ಕೆಳಗಡೆ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತ ಪವರ್ ಸ್ಟಾರ್ ಕೂಡ ತಮ್ಮ ಬಾಲ್ಯದ ಗೆಳೆಯರು ಹಾಗೂ ಅಲ್ಲಿನ ಹಿರಿಯರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟಿದ್ದಾರೆ.

    ಒಟ್ಟಿನಲ್ಲಿ ಗಾಜನೂರಿನಲ್ಲಿ ದೊಡ್ಮನೆ ಮಕ್ಕಳು ಇಡೀ ದಿನ ಕಳೆದಿದ್ದು, ಸಂಭ್ರಮ ಮನೆ ಮಾಡಿತ್ತು. ಶೀಟುಂಗ್ ಸಮಯದಲ್ಲಿ ಬಿಡುವಿನ ವೇಳೆ ಡಾ. ರಾಜ್ ಕುಮಾರ್ ಕೂಡ ಆಗಾಗ ಗಾಜನೂರಿಗೆ ತೆರಳಿ ವಿಶ್ರಾಂತಿ ಪಡೆದಿದ್ದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದಾಗಿದೆ.