Tag: ವರದಾ ನದಿ

  • ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ರಿಡ್ಜ್ ಕಂ ಬ್ಯಾರೇಜ್‌ನ 98 ಗೇಟ್ ಕದ್ದ ಖದೀಮರು

    ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ರಿಡ್ಜ್ ಕಂ ಬ್ಯಾರೇಜ್‌ನ 98 ಗೇಟ್ ಕದ್ದ ಖದೀಮರು

    ಹಾವೇರಿ: ವರದಾ ನದಿಗೆ (Varada River) ಅಡ್ಡಲಾಗಿ ನಿರ್ಮಿಸಿದ್ದ ಸುಮಾರು 14ಕ್ಕೂ ಅಧಿಕ ಬ್ರಿಡ್ಜ್ ಕಂ ಬ್ಯಾರೇಜ್‌ನ 98 ಗೇಟ್‌ಗಳನ್ನು ಕಳ್ಳರು ಕಳ್ಳತನ ಮಾಡಿರುವ ಘಟನೆ ಹಾವೇರಿ (Haveri) ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.

    ವರದಾ ನದಿಗೆ ಅಡ್ಡಲಾಗಿ ಸುಮಾರು 14ಕ್ಕೂ ಅಧಿಕ ಬ್ರಿಡ್ಜ್ ಕಂ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಕಳೆದ 6 ತಿಂಗಳಿನಿAದ ನಿರಂತರವಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‌ಗಳನ್ನು ಖದೀಮರು ಕಳ್ಳತನ ಮಾಡುತ್ತಿದ್ದಾರೆ. ಈ ಬಾರಿ ಸುಮಾರು ಒಂದುವರೆ ಲಕ್ಷ ಮೌಲ್ಯದ ಗೇಟ್‌ಗಳನ್ನ ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: Uttar Pradesh | ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಇಬ್ಬರು ದುರ್ಮರಣ, ಐವರಿಗೆ ಗಾಯ

    ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಅಳವಡಿಸಿದ್ದ ಗೇಟ್‌ಗಳನ್ನ ಗೋದಾಮಿನಲ್ಲಿ ಇಡುತ್ತಿದ್ದರು. ಈ ಬಾರಿಯೂ ಇದೇ ರೀತಿ ಇಟ್ಟಿದ್ದರು. ಆದರೆ ಈಗ ಖದೀಮರ ಗ್ಯಾಂಗೊಂದು ರಾತ್ರೋರಾತ್ರಿ ಗೋದಾಮಿನಲ್ಲಿದ್ದ ಒಂದುವರೆ ಲಕ್ಷ ಮೌಲ್ಯದ 98 ಗೇಟ್‌ಗಳನ್ನು ಕದ್ದು ಪರಾರಿಯಾಗಿದೆ. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ – ವ್ಯಕ್ತಿ ಸಾವು

    ಕಳೆದ ಆರೇಳು ತಿಂಗಳಿನಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ ಮೂರು ಕಡೆ ಬ್ಯಾರೇಜ್ ಗೇಟ್ ಕಳ್ಳತನ ಆಗಿವೆ. ಕೂಸನೂರು, ಶೇಷಗಿರಿ ಸೇರಿದಂತೆ ಹಲವು ಕಡೆಯ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‌ಗಳನ್ನ ಖದೀಮರು ಕಳ್ಳತನ ಮಾಡಿದ್ದಾರೆ. ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಗೋದಾಮನ್ನು ಕಾಯುಲು ಯಾರನ್ನಾದರು ನೇಮಕ ಮಾಡಬೇಕು. ಅಲ್ಲದೇ ಕೂಡಲೇ ಪೊಲೀಸರು ಖದೀಮರನ್ನ ಪತ್ತೆ ಹಚ್ಚಬೇಕು. ಇಲ್ಲಾವಾದರೆ ಬೇಸಿಗೆಯಲ್ಲಿ ರೈತರಿಗೆ ಸಮಸ್ಯೆಯಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

  • ಹಾವೇರಿ | ವರದಾ ನದಿಗೆ ಬಿದ್ದ ಟ್ರ್ಯಾಕ್ಟರ್ ಕೊನೆಗೂ ಮೇಲೆ ಬಂತು!

    ಹಾವೇರಿ | ವರದಾ ನದಿಗೆ ಬಿದ್ದ ಟ್ರ್ಯಾಕ್ಟರ್ ಕೊನೆಗೂ ಮೇಲೆ ಬಂತು!

    ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ವರದಾ ನದಿಗೆ (Varada River) ಬಿದ್ದಿದ್ದ ಟ್ರ್ಯಾಕ್ಟರನ್ನು ಕ್ರೇನ್ ಮೂಲಕ ಮೇಲೆತ್ತುವ ಕಾರ್ಯ ಮಾಡಲಾಗಿದೆ.

    ಹಾವೇರಿ (Haveri) ತಾಲೂಕಿನ ಮರಡೂರು ಗ್ರಾಮದಲ್ಲಿರುವ ವರದಾ ನದಿಗೆ ಮಂಗಳವಾರ ಟ್ರ್ಯಾಕ್ಟರ್ ಬಿದ್ದಿತ್ತು. ಈ ಟ್ರ್ಯಾಕ್ಟರ್ ಕ್ರೇನ್ ಮೂಲಕ ಈಜುತಜ್ಞರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸಹಾಯದಿಂದ ಮೇಲೆತ್ತಲಾಗಿದೆ. ಇದನ್ನೂ ಓದಿ: ಮನೆ ಬಳಿಯೇ ಸೈಲೆಂಟಾಗಿ ನಿಂತಿದ್ದ ಕಾಡಾನೆ – ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ!

    ಗ್ರಾಮದ ಸುರೇಶ ದೊಡ್ಡಗೌಡರ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಜಮೀನಿನಿಂದ ಮೆಣಸಿನಕಾಯಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿತ್ತು.  ಟ್ರ್ಯಾಕ್ಟರ್‌ನಲ್ಲಿದ್ದ ಮೂವರನ್ನ ಸ್ಥಳೀಯರು ರಕ್ಷಣೆ ಮಾಡಿದ್ದರು.

    ಇದೀಗ ಸತತ 5 ಗಂಟೆಗಳ ಕಾರ್ಯಚರಣೆ ನಡೆಸಿ ಟ್ರ್ಯಾಕ್ಟರ್ ಮೇಲೆತ್ತಲಾಗಿದೆ. ವರದಾ ನದಿಗೆ ಇರುವ ಬ್ರಿಜ್ಡ್ ಕಂ ಬ್ಯಾರೇಜ್‌ಗೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • Haveri | ವರದಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು

    Haveri | ವರದಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು

    ಹಾವೇರಿ: ನದಿಗೆ ಈಜಲು ತೆರಳಿದ್ದ ಯುವಕನೋರ್ವ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾವೇರಿ (Haveri) ತಾಲೂಕಿನ ಕರ್ಜಗಿ (Karjagi) ಗ್ರಾಮದ ಬಳಿಯ ವರದಾ ನದಿಯಲ್ಲಿ  (Varada River) ನಡೆದಿದೆ.

    ಮೃತ ಯುವಕನನ್ನು ಕಾರ್ತಿಕ್ (18) ಎಂದು ಗುರುತಿಸಲಾಗಿದೆ. ವರದಾ ನದಿಗೆ ಈಜಲು ತೆರಳಿದ್ದ ವೇಳೆ ನದಿಯಲ್ಲಿದ್ದ ಮುಳ್ಳುಕಂಟೆಗೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜು ತಜ್ಞ ಸಿದ್ದು ಚರಂತಿಮಠ ನಿರಂತರವಾಗಿ ಹನ್ನೆರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ನೀಡಿ ಇತಿಹಾಸ ಸೃಷ್ಟಿಸಿದ ಕರ್ನಾಟಕ ಹೈಕೋರ್ಟ್

    ಬುಧವಾರ ಮಧ್ಯಾಹ್ನ ನದಿಗೆ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ನಿರಂತರ ಕಾರ್ಯಾಚರಣೆ ನಡೆಸಿ ಗುರುವಾರ ಸಂಜೆ ಯುವಕನ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ದಾಖಲಿಸಲಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ

  • ಆಕಳು ಮೈ ತೊಳೆಯಲು ನದಿಗೆ ಹೋಗಿದ್ದ ಯುವಕ ನೀರುಪಾಲು

    ಆಕಳು ಮೈ ತೊಳೆಯಲು ನದಿಗೆ ಹೋಗಿದ್ದ ಯುವಕ ನೀರುಪಾಲು

    ಹಾವೇರಿ: ಆಕಳು (Cow) ಮೈ ತೊಳೆಯಲು ಹೋಗಿದ್ದ ವೇಳೆ ಯುವಕನೋರ್ವ ವರದಾ ನದಿಯಲ್ಲಿ (River) ನೀರು ಪಾಲಾದ ಘಟನೆ ಹಾವೇರಿ (Haveri) ತಾಲೂಕಿನ ಹಂದಿಗನೂರು (Handiganur) ಗ್ರಾಮದ ಬಳಿ ನಡೆದಿದೆ.

    ನೀರು ಪಾಲಾದ ಯುವಕನನ್ನು ಗಾಳೆಪ್ಪ ಮೇಲಿನಮನಿ (24) ಎಂದು ಗುರುತಿಸಲಾಗಿದೆ. ಗಾಳೆಪ್ಪ ಆಕಳು ಮೇಯಿಸಿಕೊಂಡು ನಂತರ ಆಕಳಿನ ಮೈ ತೊಳೆಯಲು ನದಿಗೆ ಬಂದಿದ್ದ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನೂ ಓದಿ: ಗ್ಯಾರಂಟಿಗೆ 65 ಸಾವಿರ ಕೋಟಿ ಹಣ ಬೇಕು, ಅಭಿವೃದ್ಧಿಗೆ ಹಣ ಇಲ್ಲ – ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ

    ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನೀರು ಪಾಲಾದ ಗಾಳೆಪ್ಪನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: Champions Trophy 2025: ಭಾರತ ಕ್ರಿಕೆಟ್‌ ತಂಡವು ಪಾಕ್‌ಗೆ ಹೋಗಲ್ಲ – ಬಿಸಿಸಿಐ ಖಡಕ್‌ ನಿರ್ಧಾರ!

    ಘಟನಾ ಸ್ಥಳದಲ್ಲಿ ಗಾಳೆಪ್ಪನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ‘ಕಾವೇರಿ’ ಶಾಕ್‌ – ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಸೂಚನೆ

  • ಹಾವೇರಿಯ ಜೀವನಾಡಿ ವರದಾ ನದಿ ಖಾಲಿ; ಜನ-ಜಾನುವಾರುಗಳ ಪರದಾಟ

    ಹಾವೇರಿಯ ಜೀವನಾಡಿ ವರದಾ ನದಿ ಖಾಲಿ; ಜನ-ಜಾನುವಾರುಗಳ ಪರದಾಟ

    ಹಾವೇರಿ: ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಿಂದಾಗಿ ಹಲವಾರು ಜಿಲ್ಲೆಗಳಲ್ಲಿ ಬರಗಾಲದ ಛಾಯೆ ಆವರಿಸಿದೆ. ಇನ್ನೂ ಹಾವೇರಿ (Haveri) ಜಿಲ್ಲೆಯ ಜೀವನದಿ ವರದಾ ನದಿಯ (Varada River) ಒಡಲು ಬರಿದಾಗುತ್ತಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ ಪರದಾಡುವ (Drinking Water Problem) ಪರಿಸ್ಥಿತಿ ನಿರ್ಮಾಣವಾಗಿದೆ.

    ವರದಾ ನದಿಗೆ ನಿರ್ಮಿಸಲಾಗಿದ್ದ ಚೆಕ್ ಡ್ಯಾಂಗಳಲ್ಲೂ ನೀರು ಖಾಲಿಯಾಗಿದೆ. ಜಿಲ್ಲೆಯ 15 ಕ್ಕೂ ಅಧಿಕ ಚೆಕ್ ಡ್ಯಾಂಗಳು ನೀರಿಲ್ಲದೆ ಬರಿದಾಗಿವೆ. ವರದಾ ನದಿಯಿಂದ ದೇವಗಿರಿ, ಯಲ್ಲಾಪುರ ಮನ್ನಂಗಿ ಮತ್ತು ಮೇಳಗಟ್ಟಿಗೆ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆ ಮೂಲಕ ನೀರನ್ನು ಗ್ರಾಮಗಳಿಗೆ ಒದಗಿಸಲಾಗುತ್ತಿತ್ತು. ಈಗ ವರದಾ ನದಿ ಸಂಪೂರ್ಣವಾಗಿ ಖಾಲಿಯಾಗಿದ್ದು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇದನ್ನೂ ಓದಿ: ಮಸೀದಿ ಬಳಿಯಿರುವ ಭಗವಾಧ್ವಜ ತೆರವುಗೊಳಿಸಲು ಪ್ಲ್ಯಾನ್ ಆರೋಪ; ಮಾಜಿ ಶಾಸಕನ ವಿರುದ್ಧ ಕೇಸ್

    ಇನ್ನೂ ರೈತರು ಕೃಷಿಗಾಗಿ ಪಂಪ್‍ಗಳನ್ನು ಬಳಸಿ ಇರುವ ನೀರನ್ನೂ ಖಾಲಿ ಮಾಡುತ್ತಿದ್ದಾರೆ. ಈಗಾಗಲೇ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಹನಿ ನೀರಿಗೂ ಪದದಾಡುವ ಪರಸ್ಥಿತಿ ನಿರ್ಮಾಣವಾಗುವ ಭೀತಿ ಕಾಡುತ್ತಿದೆ. ಇದನ್ನೂ ಓದಿ: ಸೋಮವಾರ ಕಲಬುರಗಿಗೆ ಅಶೋಕ್ – ಹತ್ಯೆಗೊಳಗಾದ ಬಿಜೆಪಿ ಮುಖಂಡರ ಕುಟುಂಬ ಸದಸ್ಯರ ಭೇಟಿ

  • ವಿಜಯದಶಮಿಯಂದು ನದಿಯಲ್ಲಿ ಈಜಲು ಹೋಗಿದ್ದ 17ರ ಹುಡುಗ ಸಾವು

    ವಿಜಯದಶಮಿಯಂದು ನದಿಯಲ್ಲಿ ಈಜಲು ಹೋಗಿದ್ದ 17ರ ಹುಡುಗ ಸಾವು

    ಹಾವೇರಿ: ವಿಜಯದಶಮಿ (Vijayadashami) ದಿನದಂದು ಇಲ್ಲಿನ ವರದಾ ನದಿಯಲ್ಲಿ (Varada River) ಈಜಲು ಹೋಗಿದ್ದ 17 ವರ್ಷದ ಹುಡುಗ ಸಾವನ್ನಪ್ಪಿರುವ ಘಟನೆ ಹಾವೇರಿ (Haveri) ಜಿಲ್ಲೆ ಸವಣೂರು ತಾಲ್ಲೂಕಿನ ಕಳಸೂರು ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕನನ್ನ ಅಮೋಘ್‌ ಹೊಸಮನಿ (17) ಎಂದು ಗುರುತಿಸಲಾಗಿದೆ. ಹಬ್ಬದ (Festival) ಹಿನ್ನೆಲೆ ಅಮೋಘ್‌ ಸ್ನೇಹಿತರೊಂದಿಗೆ ವರದಾ ನದಿಗೆ ಸ್ನಾನಕ್ಕೆ ಬಂದಿದ್ದ. ಈ ವೇಳೆ ನದಿ ಮಧ್ಯ ಭಾಗಕ್ಕೆ ಹೋಗಿದ್ದು, ಈಜು ಬಾರದೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಕಾಗೇರಿಗೊಂದು ನ್ಯಾಯ ಹೆಬ್ಬಾರ್‌ಗೊಂದು ನ್ಯಾಯ- ಸಿಡಿದೆದ್ದ ಹೆಬ್ಬಾರ್ ಅಭಿಮಾನಿಗಳು?

    ಸ್ಥಳಕ್ಕೆ ಧಾವಿಸಿದ ಹಾವೇರಿ ಮತ್ತು ಸವಣೂರು ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಹುಡುಗನ ಮೃತದೇಹವನ್ನು ನದಿಯಿಂದ ಹೊರ ತೆಗೆದಿದ್ದಾರೆ. ಹುಡುಗನ ಮೃತದೇಹ ನೋಡುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲುಮಟ್ಟಿದೆ. ಸದ್ಯ ಸವಣೂರು ಪೊಲೀಸ್ (Savanur Police) ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಸರಾ ಜಂಬೂ ಸವಾರಿಗೆ ಮೆರಗು ನೀಡಲಿವೆ 49 ವಿಶೇಷ ಸ್ತಬ್ಧ ಚಿತ್ರಗಳು – ಯಾವ್ಯಾವ ಜಿಲ್ಲೆಯಿಂದ ಏನೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವರದಾ ನದಿಯಲ್ಲಿ ಮುಳುಗಿ ಯುವಕ ಸಾವು

    ವರದಾ ನದಿಯಲ್ಲಿ ಮುಳುಗಿ ಯುವಕ ಸಾವು

    ಹಾವೇರಿ : ವರದಾ ನದಿಯಲ್ಲಿ ತಾಡಪತ್ರೆಗಳನ್ನು ತೊಳೆಯಲು ಹೋದ ಯುವಕ ಈಜು ಬಾರದೆ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರ ಗ್ರಾಮದ ಬಳಿ ಇರುವ ವರದಾ ನದಿಯಲ್ಲಿ (River) ನಡೆದಿದೆ.

    ಮೃತ ಯುವಕನನ್ನು ಹಾವೇರಿ (Haveri) ತಾಲೂಕಿನ ದೇವಗಿರಿ ಗ್ರಾಮದ ಟಿಪ್ಪುಸುಲ್ತಾನ್‌ ಮೇಡ್ಲೇರಿ (23) ಎಂದು ಗುರುತಿಸಲಾಗಿದೆ. ಯುವಕ ಟಿಪ್ಪುಸುಲ್ತಾನ್ ತಾಡಪತ್ರೆಗಳನ್ನು ತೊಳೆಯಲು ವರದಾ ನದಿಯ ಕಳಸೂರ ಗ್ರಾಮದ ಬಳಿ ಇರುಬ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ತೆರಳಿದ್ದ. ನದಿಯ ನೀರಿನಲ್ಲಿ ತಾಡಪತ್ರೆ ತೊಳೆಯುತ್ತಿದ್ದ ವೇಳೆ ಪಕ್ಕದಲ್ಲಿದ್ದ ಬಕೆಟ್ ನದಿಯಲ್ಲಿ ತೇಲಿ ಹೋಗುತ್ತಿದ್ದನ್ನು ಕಂಡು, ಅದನ್ನು ಹಿಡಿಯಲು ಹೋಗಿದ್ದಾನೆ. ಆದರೆ ಈಜು ಬಾರದೆ ನದಿಯ‌ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಬಾಂಬ್ ಬೆದರಿಕೆ – ಮಾಸ್ಕೋದಿಂದ ಗೋವಾ ಬರಬೇಕಿದ್ದ ವಿಮಾನ ಉಜ್ಬೇಕಿಸ್ತಾನದಲ್ಲಿ ಲ್ಯಾಂಡ್

    ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ನದಿಯಲ್ಲಿ ಕಾರ್ಯಾಚರಣೆ ನಡೆಸಿ, ಮೃತ ಟಿಪ್ಪುಸುಲ್ತಾನನ ಮೃತದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯದ ಜನರ ವಿಶ್ವಾಸ ಸಂಪಾದನೆ ಮಾಡುವಲ್ಲಿ ಪಕ್ಷ ಯಶಸ್ಸು ಕಂಡಿದೆ: ಅಶ್ವಥ್ ನಾರಾಯಣ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯ ಸರ್ಕಾರದ ನದಿ ಜೋಡಣೆ ವಿರೋಧಿಸಿ ಸಮಾವೇಶ : ಸ್ವರ್ಣವಲ್ಲಿ ಶ್ರೀ

    ರಾಜ್ಯ ಸರ್ಕಾರದ ನದಿ ಜೋಡಣೆ ವಿರೋಧಿಸಿ ಸಮಾವೇಶ : ಸ್ವರ್ಣವಲ್ಲಿ ಶ್ರೀ

    ಕಾರವಾರ : ರಾಜ್ಯ ಸರ್ಕಾರ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಕೈ ಬಿಡಬೇಕು. ಈ ನಿಟ್ಟಿನಲ್ಲಿ ಒತ್ತಡ ಹೇರಲು ಜೂನ್ ಮೊದಲ ವಾರ ಜನ ಸಮಾವೇಶ ನಡೆಸಲಾಗುವುದು ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

    ಶಿರಸಿ ತಾಲೂಕಿನ ಸೋಂದಾದ ಸ್ವರ್ಣವಲ್ಲಿ ಮಠದ ಸಭಾಂಗಣದಲ್ಲಿ ಬೇಡ್ತಿ ಅಘನಾಶಿನಿಕೊಳ್ಳ ಸಂರಕ್ಷಣಾ ಸಮಿತಿಯ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಾಂದೋಲನದ ಮೂಲಕ ಯೋಜನೆಯ ವಿರುದ್ಧ ಅಭಿಪ್ರಾಯ ಸಂಗ್ರಹವಾಗಬೇಕು. ಜನ ಜಾಗೃತಿ ಕಾರ್ಯಗಳ ಮೂಲಕ ಬೇಡ್ತಿ ಕಣಿವೆ ಸಂರಕ್ಷಣೆಗೆ ಮುಂದಾಗಬೇಕು ಎಂದರು.
    ಇದನ್ನೂ ಓದಿ: ಕೇಂದ್ರದ ಮರು ಪರಿಶೀಲನೆ ಪೂರ್ಣಗೊಳ್ಳುವವರೆಗೂ ದೇಶದ್ರೋಹ ಕೇಸ್‌ ದಾಖಲಿಸುವಂತಿಲ್ಲ: ಸುಪ್ರೀಂ

    ಸಮಿತಿಯ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ, ನದಿ ಜೋಡಣೆ ಯೋಜನೆಯ ವಿಸ್ತೃತ ಯೋಜನಾ ವರದಿಯಲ್ಲಿ ಹಲವು ಲೋಪದೋಷಗಳಿವೆ. ಸಮೀಕ್ಷೆ ನಡೆಸದೇ ವಿವರ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು ಸರ್ಕಾರ ಡಿಪಿಆರ್(ಸಮಗ್ರ ಯೋಜನಾ ವರದಿ) ರದ್ದು ಮಾಡಬೇಕು ಎಂದು ಒತ್ತಾಯಿಸಿದರು.  ಇದನ್ನೂ ಓದಿ: ಕಾಂಗ್ರೆಸ್ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ? ಡಿಕೆಶಿಗೆ ನಟಿ ರಮ್ಯಾ ಪ್ರಶ್ನೆ

    ಭೂ ವಿಜ್ಞಾನಿ ಡಾ.ಜಿ.ವಿ. ಹೆಗಡೆ ಮಾತನಾಡಿ, ಶಾಲ್ಮಲಾ ಮತ್ತು ಬೇಡ್ತಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬೇಡ್ತಿ, ವರದಾ ಯೋಜನೆ ಜಾರಿ ಸಾಧ್ಯವಾಗದು. ಇದರಿಂದ ಅಪಾರ ಅರಣ್ಯ ನಾಶವಾಗಲಿದೆ ಎಂದರು.

  • ವರದಾ ನದಿಯ ಬ್ರಿಡ್ಜ್ ಮೇಲಿನಿಂದ ಜಿಗಿದು ಈಜಾಡಿ ಯುವಕನ ಹುಚ್ಚಾಟ

    ವರದಾ ನದಿಯ ಬ್ರಿಡ್ಜ್ ಮೇಲಿನಿಂದ ಜಿಗಿದು ಈಜಾಡಿ ಯುವಕನ ಹುಚ್ಚಾಟ

    ಹಾವೇರಿ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ ಕೂಡ ಕಾರವಾರ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ವರದಾ ನದಿಯ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಈ ನಡುವೆ ಭರಪೂರ ತುಂಬಿ ಹರಿಯುತ್ತಿರುವ ವರದಾ ನದಿ ನೀರಿನಲ್ಲಿ ಯುವಕನೋರ್ವ ಈಜಾಡಿ ಹುಚ್ಚಾಟ ಪ್ರದರ್ಶಿಸಿದ್ದಾನೆ.

    ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಬಳಿ ವರದಾ ನದಿಯ ಬ್ರಿಡ್ಜ್ ಮೇಲಿನಿಂದ ಯುವಕನೋರ್ವ ಜಿಗಿದು ಭರಪೂರ ಹರಿಯೋ ನೀರಿನಲ್ಲಿ ಈಜಾಡಿ ಹುಚ್ಚಾಟ ಮೆರೆದಿದ್ದಾನೆ. ಸ್ಥಳೀಯರಿಗೆ ಈಗಾಗಲೇ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ಕೂಡ ಯುವಕರ ಈ ವರ್ತನೆ ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವರದಾ ನದಿ ಪ್ರವಾಹದಲ್ಲಿ ವಾನರಸೇನೆ ಸಿಲುಕಿ ಪರದಾಟ

    ಯುವಕ ನದಿಯಲ್ಲಿ ಈಜಾಡುತ್ತಿರುವ ವೀಡಿಯೋ ಮಾಡಿರುವ ಸ್ಥಳೀಯರು ಸಾಮಾಜಿಕ ಜಾಲತಾನದಲ್ಲಿ ಹರಿಬಿಟ್ಟಿದ್ದಾರೆ. ಬ್ರಿಡ್ಜ್ ಮೇಲಿನಿಂದ ಜಿಗಿದು ಈಜಿಕೊಂಡು ಬಂದ ಯುವಕ ಕೊನೆಯಲ್ಲಿ ಧೀರೇಂದ್ರ ಮಠದ ಹತ್ತಿರ ದಡ ಸೇರಿದ್ದಾನೆ. ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯ ಬಗ್ಗೆ ಜಿಲ್ಲಾಡಳಿತ ಸ್ಥಳೀಯ ಯುವಕರಲ್ಲಿ ಹಲವು ಬಾರಿ ಎಚ್ಚರಿಕೆ ನೀಡಿದೆ ಆದರು ಯುವಕರು ಮಾತ್ರ ತಮ್ಮ ಹುಚ್ಚಾಟ ಕೊನೆಗೊಳಿಸುತ್ತಿಲ್ಲ.

  • ವರದಾ ನದಿ ಪ್ರವಾಹದಲ್ಲಿ ವಾನರಸೇನೆ ಸಿಲುಕಿ ಪರದಾಟ

    ವರದಾ ನದಿ ಪ್ರವಾಹದಲ್ಲಿ ವಾನರಸೇನೆ ಸಿಲುಕಿ ಪರದಾಟ

    – ಮಾವಿನ ಮರವೇರಿ ಕುಳಿತ ಮಂಗಗಳು

    ಹಾವೇರಿ: ಜಿಲ್ಲೆಯಲ್ಲಿ ಮಳೆ ನಿಂತರೂ, ನೀರಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ವರದಾ ನದಿಯ ಪ್ರವಾಹದಲ್ಲಿ ವಾನರಸೇನೆ ಸಿಲುಕಿ ಪರದಾಡುತ್ತಿರುವ ಘಟನೆ ಹಾವೇರಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದಿದೆ.

    ಮರದ ಸುತ್ತ ನೀರು ಆವರಿಸಿರುವುದರಿಂದ ಮರದಲ್ಲಿ ಸಿಲುಕಿಕೊಂಡು ಮಂಗಗಳು ಪರದಾಡುತ್ತಿವೆ. ಗ್ರಾಮದ ಬಳಿ ಇರುವ ಮಾವಿನ ಮರದಲ್ಲಿ ವಾನರಸೇನೆ ಬಿಡಾರ ಹೂಡಿದ್ದ ವೇಳೆ ಏಕಾಏಕಿ ವರದಾ ನದಿ ಪ್ರವಾಹ ಉಂಟಾಗಿದೆ.

    ಮರದ ಸುತ್ತ ನೀರು ಆವರಿಸಿದ್ದರಿಂದ ಮರದಲ್ಲಿ ಸಿಲುಕಿ 10ಕ್ಕೂ ಅಧಿಕ ಮಂಗಗಳು ಪರದಾಡುತ್ತಿವೆ. ನೀರಿನ ಹರಿವು ಹೆಚ್ಚಾಗಿದ್ದರಿಂದ ಮರದ ಬಳಿ ತೆರಳಿ ಮಂಗಗಳಿಗೆ ಹಣ್ಣು ಹಂಪಲು ವಿತರಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ದಿಕ್ಕು ತೋಚದೆ ಮರದಲ್ಲಿನ ಮಾವಿನ ಸೊಪ್ಪು ತಿಂದು ಮಂಗಗಳು ಕಾಲ ಕಳೆಯುತ್ತಿವೆ.