Tag: ವರದಕ್ಷಿಣಿ

  • ಗಂಡನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ವರದಕ್ಷಿಣೆ ಕಿರುಕುಳ – ನೇಣಿಗೆ ಶರಣಾದ ಗೃಹಿಣಿ

    ಗಂಡನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ವರದಕ್ಷಿಣೆ ಕಿರುಕುಳ – ನೇಣಿಗೆ ಶರಣಾದ ಗೃಹಿಣಿ

    ಬೆಂಗಳೂರು: ವರದಕ್ಷಿಣೆ ಕಿರುಕುಳ (Dowry Harassment) ತಾಳಲಾರದೇ ಗೃಹಿಣಿಯೊಬ್ಬರು ನೇಣಿಗೆ (Suicide) ಶರಣಾದ ಘಟನೆ ಬೆಂಗಳೂರು (Bengaluru) ಹೊರವಲಯ ಟಿ.ದಾಸರಹಳ್ಳಿಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ನಡೆದಿದೆ.

    ಪೂಜಶ್ರೀ(28) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಈಗ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.

    ಮೂರು ವರ್ಷದ ಹಿಂದೆ ಮನೆಯವರ ನಿಶ್ಚಯದಂತೆ ಪೂಜಾಶ್ರೀ ಮತ್ತು ನಂದೀಶ್‌ ಮದುವೆಯಾಗಿದ್ದು ಹೆಣ್ಣು ಮಗುವಿದೆ. ದಂಪತಿ ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

    ಒಂದು ವರ್ಷದ ನಂತರ ನಂದೀಶ್‌ಗೆ ಅಕ್ರಮ ಸಂಬಂಧ ಇರುವ ವಿಚಾರ ಪೂಜಾಗೆ ಗೊತ್ತಾಗಿದೆ. ಇದೇ ವಿಚಾರಕ್ಕೆ ಪ್ರಶ್ನೆ ಮಾಡಿದ್ದಕ್ಕೆ ನಂದೀಶ್ ನಿಮ್ಮ ತಾಯಿ ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಹೇಳಿ ಜಗಳವಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಬೆಂಗಳೂರು | ಲೇಡಿಸ್ ಪಿಜಿಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ

    ಎರಡು ಮೂರು ಬಾರಿ ಹಿರಿಯರ ಸಮ್ಮುಖದಲ್ಲಿ ಇಬ್ಬರ ಮಧ್ಯೆ ರಾಜಿ ಪಂಚಾಯಿತಿ ನಡೆದಿತ್ತು. ಈ ವೇಳೆ ನಾನು ಪತ್ನಿಗೆ ಕಿರುಕುಳ ನೀಡುವುದಿಲ್ಲ ಎಂದು ನಂದೀಶ್‌ ಭರವಸೆ ನೀಡಿದ್ದ.

    ಮೂರು ದಿನಗಳ ಹಿಂದೆ ಇದೇ ರೀತಿ ಜಗಳ ಮಾಡಿ ನಂದೀಶ್ ಹಲ್ಲೆ ಮಾಡಿದ್ದ. ಪತಿಯ ಕಿರುಕುಳ ತಾಳಲಾರದೇ ಪೂಜಾಶ್ರೀ ತವರು ಮನೆಗೆ ಬಂದಿದ್ದರು. ಈ ವಿಚಾರ ತಿಳಿದು ನಂದೀಶ್‌ ಅತ್ತೆ ಮನೆಗೆ ಬಂದು ಕಥೆ ಕಟ್ಟಿ ಮತ್ತೆ ಪತ್ನಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆದರೆ ಭಾನುವಾರ ಬೆಳಗ್ಗೆ ಪೂಜಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ‌ ಪತ್ತೆಯಾಗಿದೆ.

    ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • Kolar | ಪತಿಯಿಂದ ವರದಕ್ಷಿಣೆ ಕಿರುಕುಳ – ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

    Kolar | ಪತಿಯಿಂದ ವರದಕ್ಷಿಣೆ ಕಿರುಕುಳ – ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

    ಕೋಲಾರ: ಪತಿ ಹಾಗೂ ಆತನ ಕುಟುಂಬಸ್ಥರಿಂದ ನಿರಂತರ ವರದಕ್ಷಿಣಿ ಕಿರುಕುಳದಿಂದಾಗಿ (Dowry Harassment) ಬೇಸತ್ತು ಮಹಿಳೆಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬಂಗಾರಪೇಟೆ ಪಟ್ಟಣದಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಕೆಜಿಎಫ್‌ನ ಕಂಗನಲ್ಲೂರು ಗ್ರಾಮದ ಸೌಮ್ಯ (25) ಎಂದು ಗುರುತಿಸಲಾಗಿದೆ. ಭಾನುವಾರ ಬಂಗಾರಪೇಟೆ ಪಟ್ಟಣದ ಅಮರಾವತಿ ಬಡಾವಣೆಯಲ್ಲಿರುವ ತಾಯಿಯ ಮನೆಗೆ ಬಂದಿದ್ದ ಸೌಮ್ಯ, ರಾತ್ರಿ ಮನೆಯಿಂದ ಹೊರ ಬಂದು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಎರಡು ವರ್ಷದ ಹಿಂದೆ ಸುನಿಲ್ ಕುಮಾರ್ ಎಂಬಾತನ ಜೊತೆ ಸೌಮ್ಯ ಮದುವೆಯಾಗಿದ್ದಳು. ಇದನ್ನೂ ಓದಿ: ವರದಕ್ಷಿಣೆ ತರದ್ದಕ್ಕೆ ಗೃಹಿಣಿಯ ಕತ್ತು ಹಿಸುಕಿ ಕೊಲೆ

    ಮೃತ ಮಹಿಳೆಯ ಪೋಷಕರು ಆಕೆಯ ಪತಿ ಸುನಿಲ್ ಕುಮಾರ್ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಸೌಮ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿ ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ಸಂಬಂಧ ಬಂಗಾರಪೇಟೆ ಪೊಲೀಸರು (Police) ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: Hassan | ಲಾಡ್ಜ್‌ನಲ್ಲಿ ನೇಣಿಗೆ ಶರಣಾದ ಸರ್ಕಾರಿ ಶಾಲೆ ಶಿಕ್ಷಕ – ಕಾರಣ ನಿಗೂಢ

  • 2 ವರ್ಷದ ಹಿಂದೆ ಅರ್ಧ ಕೆಜಿ ಚಿನ್ನ, 50 ಲಕ್ಷ ಕೊಟ್ಟು ಮದ್ವೆ- ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ

    2 ವರ್ಷದ ಹಿಂದೆ ಅರ್ಧ ಕೆಜಿ ಚಿನ್ನ, 50 ಲಕ್ಷ ಕೊಟ್ಟು ಮದ್ವೆ- ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ

    – ಪತಿಯ ಅಕ್ರಮ ಸಂಬಂಧಕ್ಕೆ ಮಗಳು ಬಲಿ -ಪೋಷಕರ ಆರೋಪದ
    – ಪತಿ ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನ

    ಬೆಂಗಳೂರು: ಗೃಹಿಣಿಯೊಬ್ಬರಯ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಬೆಂಗಳೂರಿನ (Bengaluru) ರಾಜಗೋಪಾಲನಗರದಲ್ಲಿ ನಡೆದಿದೆ.

    ಕಾವ್ಯ ಮೃತ ಗೃಹಿಣಿ. ಮಗಳು ನೇಣಿಗೆ ಶರಣಾಗಲು ಪತಿಯ ಅಕ್ರಮ ಸಂಬಂಧವೇ (Illicit Relationship) ಕಾರಣ ಎಂದು ಕಾವ್ಯ ಪೋಷಕರು ಆರೋಪಿಸಿದ್ದಾರೆ. ಪತಿ ಪ್ರವೀಣ್ ಸೇರಿ ನಾಲ್ವರ ವಿರುದ್ಧ ದೂರು ನೀಡಿರುವ ಪೋಷಕರು ಅಳಿಯನನ್ನ ನಮಗೆ ಒಪ್ಪಿಸುವಂತೆ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಿಯರು ಭಾರತದ ಅತಿದೊಡ್ಡ ಆಸ್ತಿ – ಕಾಂಗ್ರೆಸ್‌ ಮಾಜಿ ಸಚಿವ

    ಪೋಷಕರು ಹೇಳಿದ್ದು ಏನು?
    ಎರಡು ವರ್ಷದ ಹಿಂದೆ ಅರ್ಧಕೆಜಿ ಚಿನ್ನಕೊಟ್ಟು, 50 ಲಕ್ಷ ಖರ್ಚು ಮಾಡಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದೆವು. ಇತ್ತಿಚೇಗೆ ಮೊಮ್ಮಗನ ಹುಟ್ಟುಹಬ್ಬ ನಡೆದಿತ್ತು.

    ಮೃತ ಕಾವ್ಯಳ ಪತಿ ಪ್ರವೀಣ್, ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ. ಆದರೆ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರೆ ಅಳಿಯನ ಜೊತೆ ಹುಡುಗಿಯೊಬ್ಬಳ ಅಕ್ರಮ ಸಂಬಂಧವಿತ್ತು. ಹೆಂಡತಿ, ಮಗುವಿಗಿಂತ ಅವಳೇ ಅಳಿಯನಿಗೆ ಹೆಚ್ಚಾಗಿದ್ದಳು. ಈ ಬಗ್ಗೆ ಪ್ರಶ್ನೆ ಮಾಡಿದರೆ ತಂಗಿ ಎಂದು ಹೇಳಿದ್ದ. ಕುಟುಂಬಸ್ಥರೇ ಮೃತದೇಹವನ್ನು ಕೆಳಗಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಮೃತ ಕಾವ್ಯಳ ಪತಿ, ಅತ್ತೆ, ಮಾವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಜೀಪ್ ಹತ್ತುತ್ತಿದ್ದ ವೇಳೆ, ಕಾವ್ಯಳ ಪತಿ, ಅತ್ತೆ, ಮಾವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.

  • ಸಹೋದರನ ಜೊತೆ ಅತ್ತಿಗೆಯನ್ನು ಕೊಂದ ಅಪ್ರಾಪ್ತ ನಾದಿನಿ ಅರೆಸ್ಟ್: ಈಗ ಪೊಲೀಸರ ವಿರುದ್ಧ ದೂರು

    ಸಹೋದರನ ಜೊತೆ ಅತ್ತಿಗೆಯನ್ನು ಕೊಂದ ಅಪ್ರಾಪ್ತ ನಾದಿನಿ ಅರೆಸ್ಟ್: ಈಗ ಪೊಲೀಸರ ವಿರುದ್ಧ ದೂರು

    ಲಕ್ನೋ: ಸಹೋದರನ ಜೊತೆ ಸೇರಿಕೊಂಡು ಅತ್ತಿಗೆಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಸಹೋದರಿಯನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಆದರೆ ಈಗ ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧವೇ ದೂರು ದಾಖಲಾಗಿದೆ.

    ಬಂಧನಕ್ಕೆ ಒಳಗಾದವಳು ಈಗ ಅಪ್ರಾಪ್ತೆ ಹೌದೋ ಅಲ್ಲವೋ ಎನ್ನುವ ಬಗ್ಗೆ ವಿವಾದ ಎದ್ದಿದ್ದು ಪೊಲೀಸರು ಆಕೆ ಅಪ್ರಾಪ್ತೆಯಲ್ಲ ಎಂದು ಹೇಳಿದರೆ, ಆರ್‍ಟಿಐ ಕಾರ್ಯಕರ್ತರೊಬ್ಬರು ಆಕೆ ಅಪ್ರಾಪ್ತೆ ಎಂದು ಹೇಳಿ ಪೊಲೀಸರ ವಿರುದ್ಧವೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

    ಏನಿದು ಪ್ರಕರಣ?
    ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪೋಷಕರು ಪತಿ ಮತ್ತು ಆತನ ಸಹೋದರಿಯ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಬಂಧಿಸಿದ ಬಳಿಕ ಪತಿಯ ಸಹೋದರಿಯನ್ನು ಪೊಲೀಸರು 12 ದಿನಗಳ ಕಾಲ ತಮ್ಮ ವಶದಲ್ಲಿ ಇಟ್ಟುಕೊಂಡು ಸೋಮವಾರ ಕೋರ್ಟ್ ಗೆ ಹಾಜರು ಪಡಿಸಿ ಜೈಲಿಗೆ ಅಟ್ಟಿದ್ದಾರೆ.

    ವಿವಾದ ಆಗಿದ್ದು ಯಾಕೆ?
    ಅಪ್ರಾಪ್ತ ವಯಸ್ಸಿನವರು ಅಪರಾಧಗಳನ್ನು ಎಸಗಿದರೆ ಅವರನ್ನು ಪೊಲೀಸರು 24 ಗಂಟೆಗಿಂತ ಹೆಚ್ಚು ಹೊತ್ತು ಲಾಕಪ್ ನಲ್ಲಿ ಇರಿಸುವಂತಿಲ್ಲ. ಬಾಲನ್ಯಾಯ ಕಾಯ್ದೆಯ ಪ್ರಕಾರ ಅಪ್ರಾಪ್ತರನ್ನು ಬಂಧಿಸಿ ಅವರನ್ನು ಬಾಲಾಪರಾಧಿ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಬೇಕು. ಅದರಲ್ಲೂ ಬಾಲಕಿ ಆಗಿದ್ದರೆ, ಆಕೆಯನ್ನು ನಾರಿ ನಿಕೇತನ್ ಕೇಂದ್ರಕ್ಕೆ ಕಳುಹಿಸಬೇಕು. ಆದರೆ ಪೊಲೀಸರು ಅಪ್ರಾಪ್ತೆಯನ್ನು ತಮ್ಮ ವಶದಲ್ಲಿ 12 ದಿನಗಳ ಕಾಲ ಇಟ್ಟುಕೊಂಡು ಈಗ ಜೈಲಿಗೆ ಕಳುಹಿಸಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

    ಬಂಧನಕ್ಕೆ ಒಳಗಾದ ಬಾಲಕಿಗೆ 15 ವರ್ಷವಾಗಿದ್ದು ಆಕೆಯನ್ನು ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಂಡಿರುವುದು ಬಾಲನ್ಯಾಯ ಕಾಯ್ದೆಯ ಪ್ರಕಾರ ಅಪರಾಧ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಕೀಲ ಮತ್ತು ಆರ್‍ಟಿಐ ಕಾರ್ಯಕರ್ತ ಪ್ರತೀಕ್ ಚೌಧರಿ ಎಂಬವರು ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

    ಪೊಲೀಸರು ಹೇಳೋದು ಏನು?
    ಆಕೆಗೆ 15 ವರ್ಷವಲ್ಲ, ಪ್ರಾಪ್ತ ವಯಸ್ಸಾಗಿದ್ದು ನಾವು ಯಾವುದೇ ಲೋಪ ಎಸಗಿಲ್ಲ. ಪ್ರಾಪ್ತಳಾಗಿರುವ ಕಾರಣ ಆಕೆಯನ್ನು ನಾವು ಜೈಲಿಗೆ ಕಳುಹಿಸಿದ್ದೇವೆ. ಒಂದು ವೇಳೆ ಆಕೆ ಅಪ್ರಾಪ್ತಳು ಎಂದು ಕೋರ್ಟ್ ನಲ್ಲಿ ಸಾಬೀತಾದರೆ ಆಕೆ ಕಾನೂನಿನ ಲಾಭವನ್ನು ಪಡೆದುಕೊಳ್ಳುತ್ತಾಳೆ ಎಂದು ಗಂಗೇರಿ ಪೊಲೀಸ್ ಠಾಣೆಯ ಸ್ಟೇಷನ್ ಅಧಿಕಾರಿ ರಾಮ್ ವಲ್ಲಭ ಶರ್ಮಾ ಹೇಳಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?
    ಭಾನುವಾರ ಸಂಜೆ ಠಾಣೆಯಲ್ಲಿ ಆಕೆ ಅಳುತ್ತಾ ಕುಳಿತ್ತಿದ್ದನ್ನು ಕೆಲ ಮಾಧ್ಯಮ ಪ್ರತಿನಿಧಿಗಳು ಗಮನಕ್ಕೆ ಬಂದ ಬಳಿಕ ಆಕೆ ಅಪ್ರಾಪ್ತಳು ಎನ್ನುವ ವಿಚಾರ ಬಳಕಿಗೆ ಬಂದಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಸ್ಮಾರ್ಟ್ ವಿಲೇಜ್ ಫೌಂಡೇಶನ್ ಹೆಸರಿನ ಸಂಘಟನೆಯೊಂದು ಆಕೆಯ ಸಹಾಯಕ್ಕೆ ಬಂದಿದ್ದು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಿದೆ.