Tag: ವರಂಗಲ್

  • ಬುದ್ಧಿಮಾಂದ್ಯ ಮಗಳ ಮೇಲೆ ಅತ್ಯಾಚಾರ ಎಸಗಿದ ರೈಲ್ವೆ ಅಧಿಕಾರಿಯ ಬಂಧನ

    ಬುದ್ಧಿಮಾಂದ್ಯ ಮಗಳ ಮೇಲೆ ಅತ್ಯಾಚಾರ ಎಸಗಿದ ರೈಲ್ವೆ ಅಧಿಕಾರಿಯ ಬಂಧನ

    ವರಂಗಲ್: ಬುದ್ಧಿಮಾಂದ್ಯ ಮಗಳ ಮೇಲೆ 2 ತಿಂಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದ ರೈಲ್ವೇ ಅಧಿಕಾರಿಯನ್ನು ಆಂಧ್ರ ಪ್ರದೇಶದ ವರಂಗಲ್ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ವಿಜಯೇಂದ್ರಚಾರಿ ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ಪತ್ನಿಯೇ ದೂರು ನೀಡಿದ್ದಾರೆ. ಜಿಲ್ಲೆಯ ಕಾಜಿಪೇಟ್ ರೈಲ್ವೆ ನಿಲ್ದಾಣದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಜಯೇಂದ್ರಚಾರಿ ತನ್ನ ಪತ್ನಿ ಹಾಗೂ ಮಗಳಿಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದ. ಆದರೆ ಮಗಳು ಬುದ್ಧಿಮಾಂದ್ಯಳಾದ ಕಾರಣ ಜೀವನೋಪಾಯಕ್ಕಾಗಿ ಪತಿಯನ್ನೇ ಅವಲಂಬಿಸಿದ್ದ ಪತ್ನಿ ಆತನ ಕಿರುಕುಳವನ್ನು ಸಹಿಸಿಕೊಂಡಿದ್ದರು.

    ವಿಜಯೇಂದ್ರ ಮಗಳ ಮೇಲೆ 2 ತಿಂಗಳಿಂದ ನಿರಂತರ ಅತ್ಯಾಚಾರ ಎಸಗಿದ್ದು, ಇದನ್ನು ಮಗಳು ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಈ ಕುರಿತು ಪತ್ನಿ ವಿಜಯೇಂದ್ರ ಬಳಿ ಪ್ರಶ್ನಿಸಿದಾಗ ಸುಮ್ಮನಿರುವಂತೆ ಹೊಡೆದಿದ್ದು, ಯಾರಿಗಾದರು ವಿಷಯ ತಿಳಿಸಿದರೆ ಇಬ್ಬರನ್ನು ಮನೆಯಿಂದ ಹೊರ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾನೆ.

    ಇದನ್ನೂ ಓದಿ:  ತಂದೆ, ಸಹೋದರನಿಂದಲೇ 9 ವರ್ಷ ನಿರಂತರ ಅತ್ಯಾಚಾರ- ತಾಯಿಂದ್ಲೇ ಮಗಳಿಗೆ 8 ಬಾರಿ ಗರ್ಭಪಾತ..!

    ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿದ ಪತಿಯ ಕೃತ್ಯದಿಂದ ಬೇಸರಗೊಂಡ ಪತ್ನಿ ಧೈರ್ಯ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಸಂತ್ರಸ್ತೆ 20 ವರ್ಷದ ಯುವತಿಯಾಗಿದ್ದು, ಪಿಯುಸಿವರೆಗೂ ಶಿಕ್ಷಣ ಪಡೆದಿದ್ದರು. ನಂತರ ಆರೋಪಿ ತಂದೆ ಆಕೆ ಬುದ್ಧಿಮಾಂದ್ಯಳು ಎಂದು ಕಾರಣ ನೀಡಿ ವಿದ್ಯಾಭ್ಯಾಸವನ್ನು ಕೊನೆಗೊಳಿಸಿದ್ದನು.

    ಪತ್ನಿಯ ದೂರನ್ನು ಆಧರಿಸಿ ರೈಲ್ವೆ ಪೊಲೀಸ್ ಅಧಿಕಾರಿಗಳು ವಿಜಯೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.