Tag: ವಯೋವೃದ್ಧ

  • ಧರಣಿ ಸತ್ಯಾಗ್ರಹ ನಿರತ ವಯೋವೃದ್ಧ ಏಕಾಏಕಿ ಅಸ್ವಸ್ಥ

    ಧರಣಿ ಸತ್ಯಾಗ್ರಹ ನಿರತ ವಯೋವೃದ್ಧ ಏಕಾಏಕಿ ಅಸ್ವಸ್ಥ

    ಬೀದರ್: ಧರಣಿ ನಿರತ ವಯೋವೃದ್ಧ ಅಸ್ವಸ್ಥಗೊಂಡ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.

    ‘ಬೇಡ ಜಂಗಮ’ ಜಾತಿ ಪ್ರಮಾಣ ಪತ್ರ ನೀಡುವಂತೆ ಜಂಗಮರು ಅಹೋ ರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. 28 ದಿನಗಳಿಂದ ಭಾಲ್ಕಿ ತಹಶಿಲ್ದಾರ್ ಕಚೇರಿ ಮುಂಭಾಗ ಜಂಗಮರು ಧರಣಿ ಸತ್ಯಾಗ್ರಹ ಮಾಡುತ್ತಿದ್ದು, ತಡರಾತ್ರಿ ಧರಣಿ ನಿರತ ರಾಚಯ್ಯ ಸ್ವಾಮಿ ವಯೋವೃದ್ಧ ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ಇದನ್ನೂ ಓದಿ: ಪೊಲೀಸರಿಗಿಂತ ಇಡಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ: ಮೋದಿ ವಿರುದ್ಧ ಅಶೋಕ್ ಗೆಹ್ಲೋಟ್ ಕಿಡಿ

    ಅಸ್ವಸ್ಥಗೊಂಡ ರಾಚಯ್ಯ ಸ್ವಾಮಿ ಅವರನ್ನು ತಕ್ಷಣವೇ ಅಂಬುಲೆನ್ಸ್ ಮೂಲಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಭಾಲ್ಕಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    28 ದಿನಗಳಿಂದ ‘ಬೇಡ ಜಂಗಮ’ ಜಾತಿ ಪ್ರಮಾಣ ಪತ್ರಕ್ಕಾಗಿ ಜಂಗಮರು ನಿರಂತರವಾಗಿ ಧರಣಿ ಸತ್ಯಾಗ್ರಹ ಮಾಡುತ್ತಿದ್ರು ಸ್ಪಂದಿಸದ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಧರಣಿ ನಿರತ ಜಂಗಮರು ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇದನ್ನೂ ಓದಿ: ಕೋಮು ಪ್ರಚೋದಿಸುತ್ತಿದ್ದ ದೆಹಲಿ ಮೂಲದ ಓರ್ವ ಸೇರಿ ಇಬ್ಬರು ಅರೆಸ್ಟ್ 

    Live Tv
    [brid partner=56869869 player=32851 video=960834 autoplay=true]

  • ನಾಯಿ ಮೂತ್ರ, ವಿರ್ಸಜನೆ ಮಾಡಿದ್ದಕ್ಕೆ ವೃದ್ಧನಿಗೆ ಕಲ್ಲಿನಿಂದ ಹೊಡ್ದ

    ನಾಯಿ ಮೂತ್ರ, ವಿರ್ಸಜನೆ ಮಾಡಿದ್ದಕ್ಕೆ ವೃದ್ಧನಿಗೆ ಕಲ್ಲಿನಿಂದ ಹೊಡ್ದ

    ಬೆಂಗಳೂರು: ಕಾರಿನ ಮೇಲೆ ನಾಯಿ ಮೂತ್ರ ವಿಸರ್ಜನೆ ಮಾಡಿದಕ್ಕೆ ಕಾರಿನ ಮಾಲೀಕ ವಯೋ ವೃದ್ಧರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನಗರದ ಬಾಣಸವಾಡಿಯಲ್ಲಿ ಈ ಘಟನೆ ನಡೆದಿದ್ದು, ಕಾರು ಮಾಲೀಕ ಚಾರ್ಲ್ಸ್, ನಾಯಿಯನ್ನು ಸಾಕಿದ್ದ ಗೇರಿ ರೋಜಾರಿಯೋ ಎಂಬ ವೃದ್ಧನ ಮೇಲೆ ಹಲ್ಲೆ ನಡೆಸಿದ್ದಾನೆ. ಭಾನುವಾರ ರಾತ್ರಿ 11 ಗಂಟೆಗೆ ಗೇರಿ ರೋಜಾರಿಯೋ ನಾಯಿಯನ್ನು ಹೊರಗಡೆ ಬಿಟ್ಟಿದ್ದಾರೆ. ಈ ವೇಳೆ ನಾಯಿ ಎದುರುಗಡೆ ರಸ್ತೆಯ ಚಾರ್ಲ್ಸ್ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದೆ. ಇದನ್ನೂ ಓದಿ: ಮಟನ್ ಚೀಲ ಹೊತ್ತೊಯ್ದ ಬೀದಿ ನಾಯಿ ಹೊಡೆದು ಕೊಂದ

    ನಾಯಿ ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ವಿಚಾರವಾಗಿ ಎರಡು ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇಷ್ಟಕ್ಕೆ ರೊಚ್ಚಿಗೆದ್ದ ಕಾರು ಮಾಲೀಕ ಚಾರ್ಲ್ಸ್ ಎರಡನೇ ಮಹಡಿಯಿಂದ ಕಲ್ಲು ತಗೆದು ವಯೋವೃದ್ಧ ಗೇರಿ ರೋಜಾರಿಯೋಗೆ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಗೇರಿ ರೋಜಾರಿಯೋ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕಲ್ಲು ಬಿದ್ದ ರಭಸಕ್ಕೆ ಗೇರಿ ರೋಜಾರಿಯ ಎರಡು ಹಲ್ಲುಗಳು ಮುರಿದಿದ್ದು, ಕಣ್ಣುಗಳು ಮಂಜಾಗಿ ಕಾಣುತ್ತಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಮಳೆ ಎಚ್ಚರಿಕೆ – ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ

    POLICE JEEP

    ಈ ಕುರಿತಂತೆ ಗೇರಿ ರೋಜಾರಿಯೋ ಅವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಚಾರ್ಲ್ಸ್ ತಲೆ ಮರೆಸಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದು, ಆರೋಪಿಗಾಗಿ ಬಲೆ ಬೀಸಲಾಗಿದೆ.

  • ಗುಡಿಸಲಿನಲ್ಲಿ ವಾಸವಾಗಿದ್ದ ವಯೋವೃದ್ಧನಿಗೆ ಬೆಡ್‍ಶೀಟ್ ನೀಡಿ ಮಾನವೀಯತೆ ಮೆರೆದ ಯುವಕ

    ಗುಡಿಸಲಿನಲ್ಲಿ ವಾಸವಾಗಿದ್ದ ವಯೋವೃದ್ಧನಿಗೆ ಬೆಡ್‍ಶೀಟ್ ನೀಡಿ ಮಾನವೀಯತೆ ಮೆರೆದ ಯುವಕ

    ಬೀದರ್: ಕೊರೆಯುವ ಚಳಿಗೆ ಗಡಗಡ ನಡುಗುತ್ತಿದ್ದ ವಯೋವೃದ್ಧನಿಗೆ ಬೆಡ್‍ಶೀಟ್ ನೀಡಿ ಯುವಕನೊಬ್ಬ ಮಾನವೀಯತೆ ಮೆರೆದಿದ್ದಾರೆ.

    ಬೀದರ್ ಜಿಲ್ಲೆಯಲ್ಲಿ ಸದ್ಯ 9 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಜಿಲ್ಲೆಯ ಜನ ಕೊರೆಯುವ ಚಳಿಗೆ ಹೈರಾಣಾಗಿ ಹೋಗಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣತೊರವಾಡಿ ಗ್ರಾಮದ ಪುಟ್ಟ ಗುಡಿಸಲಿನಲ್ಲಿ ವಾಸವಾಗಿದ್ದ ವಯೋವೃದ್ಧ ಸ್ಥಿತಿ ನೋಡಿ ಶಂಕರ್ ಎಂಬವರು ಬೆಡ್‍ಶೀಟ್ ಹಂಚಿದ್ದಾರೆ.

    ವಯೋವೃದ್ಧನಿಗೆ ಈಗಾಗಲೇ ಸ್ಟ್ರೋಕ್ ಹೊಡೆದಿದ್ದು, ಅವರನ್ನು ನೋಡಿಕೊಳ್ಳಲ್ಲಿ ಮನೆಯಲ್ಲಿ ಯಾರು ಇಲ್ಲ. ಅಲ್ಲದೆ ಕೊರೆಯುವ ಚಳಿಗೆ ವಯೋವೃದ್ಧ ತತ್ತರಿಸಿ ಹೋಗಿದ್ದರು. ಇದನ್ನು ಕಂಡ ಯುವಕ ಬೆಡ್‍ಶೀಟ್ ನೀಡಿ ಮಾನವೀಯತೆ ಮೆರೆದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಶಂಕರ್, ಈ ವಯೋವೃದ್ಧನಿಗೆ ಯಾರು ಇಲ್ಲ. ಹೀಗಾಗಿ ನಾನು ಈ ಪುಟ್ಟ ಸಹಾಯ ಮಾಡಿದ್ದೇನೆ ಎಂದು ಯುವಕ ಶಂಕರ್ ತಿಳಿಸಿದ್ದಾರೆ.

  • ಗ್ರಾಮದ ನೀರಿನ ಸಮಸ್ಯೆ ನಿವಾರಿಸಲು ಏಕಾಂಗಿಯಾಗಿ ಬಾವಿ ಅಗೆಯುತ್ತಿದ್ದಾರೆ 70ರ ವಯೋವೃದ್ಧ!

    ಗ್ರಾಮದ ನೀರಿನ ಸಮಸ್ಯೆ ನಿವಾರಿಸಲು ಏಕಾಂಗಿಯಾಗಿ ಬಾವಿ ಅಗೆಯುತ್ತಿದ್ದಾರೆ 70ರ ವಯೋವೃದ್ಧ!

    ಭೋಪಾಲ್: ಗ್ರಾಮದ ನೀರಿನ ಸಮಸ್ಯೆ ನಿವಾರಿಸಲು ಪಣತೊಟ್ಟಿರುವ 70 ವರ್ಷದ ವ್ಯಕ್ತಿಯೊಬ್ಬರು, ಸತತ 18 ತಿಂಗಳುಗಳಿಂದ ಮಧ್ಯಪ್ರದೇಶದ ಗ್ರಾಮ ಒಂದರಲ್ಲಿ ಏಕಾಂಗಿಯಾಗಿ ಬಾವಿ ನಿರ್ಮಾಣ ಮಾಡುತ್ತಿದ್ದಾರೆ.

    ಸೀತಾ ರಾಮ್ ಗ್ರಾಮದ ನೀರಿನ ಸಮಸ್ಯೆ ನಿವಾರಿಸಲು ಪಣತೊಟ್ಟಿರುವ ವ್ಯಕ್ತಿ. ಕಳೆದ 18 ತಿಂಗಳುಗಳಿಂದ ಬಾವಿ ಅಗೆಯುವ ಕಾರ್ಯದಲ್ಲಿ ನಿರತರಾಗಿರುವ ಸೀತಾ ರಾಮ್ ಅವರು ಈಗಾಗಲೇ 33 ಅಡಿ ಆಳದ ಬಾವಿ ನಿರ್ಮಾಣ ಮಾಡಿದ್ದಾರೆ.

    ಸೀತಾ ರಾಮ್ ಮದುವೆಯಾಗದೆ ಸಹೋದರರ ಜೊತೆ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಾರೆ. ಆದರೆ ಬೇಸಿಗೆ ಆರಂಭವಾಗುತ್ತಿದಂತೆ ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿತ್ತು. ಕಳೆದ ಎರಡುವರೆ ವರ್ಷಗಳಿಂದ ಈ ಸಮಸ್ಯೆ ಮುಂದುವರೆದಿತ್ತು. ನೀರಿನ ಸಮಸ್ಯೆಯನ್ನು ಪರಿಹಾರ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾದ ಕಾರಣ ನಾನೇ ಏಕಾಂಗಿಯಾಗಿ ಬಾವಿ ನಿರ್ಮಾಣ ಮಾಡಲು ಮುಂದಾಗಿದ್ದೇನೆ ಎಂದು ತಿಳಿಸಿದ್ದಾರೆ.

    ಸೀತಾ ರಾಮ್ ತಮ್ಮ ನಿರ್ಧಾರವನ್ನು ತಿಳಿಸಿದಾಗ ಕುಟುಂಬ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಗ್ರಾಮದ ಯಾರೊಬ್ಬರು ಇವರ ಸಹಾಯಕ್ಕೆ ಬರಲಿಲ್ಲ ಎಂದು ವರದಿಯಾಗಿದೆ.

    ಸಹಾಯ ಯಾರೂ ಮಾಡದೇ ಇದ್ದರೂ ಧೃತಿಗೆಡದೆ ಸೀತಾ ರಾಮ್ ಏಕಾಂಗಿಯಾಗಿ ಬಾವಿ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಬಾವಿ ಅಗೆಯುತ್ತಿರುವ ಸೀತಾರಾಮ್ ಈಗಲೂ ನಾನು ಶಕ್ತನಾಗಿದ್ದೇನೆ ಎಂದು ಹೇಳಿದ್ದಾರೆ.