Tag: ವಯಾಗ್ರ

  • ಕಾಮೋತ್ತೇಜಕ ಮಾತ್ರೆ ಸೇವಿಸಿ 24 ಗಂಟೆ ನಿರಂತರ ಸೆಕ್ಸ್‌, 50ರ ವೃದ್ಧ ಸೀದಾ ಆಸ್ಪತ್ರೆಗೆ – ಆಮೇಲೆ ಏನಾಯ್ತು?

    ಕಾಮೋತ್ತೇಜಕ ಮಾತ್ರೆ ಸೇವಿಸಿ 24 ಗಂಟೆ ನಿರಂತರ ಸೆಕ್ಸ್‌, 50ರ ವೃದ್ಧ ಸೀದಾ ಆಸ್ಪತ್ರೆಗೆ – ಆಮೇಲೆ ಏನಾಯ್ತು?

    ರೋಮ್‌: ಇತ್ತೀಚೆಗೆ ಜನರು ಲೈಂಗಿಕ ತೃಪ್ತಿಗಾಗಿ ಹಲವು ರೀತಿಯ ಕಸರತ್ತು ಮಾಡುತ್ತಾರೆ. ಲೈಂಗಿಕ ಶಕ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಔಷಧ (Medicine) ಹಾಗೂ ದೈಹಿಕ ಕಸರತ್ತುಗಳ ಮೊರೆ ಹೋಗುತ್ತಾರೆ. ಹೀಗೆಯೇ ಸೆಕ್ಸ್ ಲೈಫ್‌ ಚೆನ್ನಾಗಿರಬೇಕೆಂದು ವಯಾಗ್ರ ಸೇವಿಸಿದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಟಲಿಯಲ್ಲಿ ನಡೆದಿದೆ.

    ಜರ್ಮನಿಯ (German Tourist) 50 ವರ್ಷದ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗ ನಿಮಿರುವಿಕೆಗಾಗಿ ವಯಾಗ್ರ (Viagra) ಮಾತ್ರೆ ಸೇವಿಸಿ 24 ಗಂಟೆಗೂ ಅಧಿಕ ಕಾಲ ಸೆಕ್ಸ್‌ನಲ್ಲಿ ತೊಡಗಿದ್ದಾನೆ. ಆರಂಭದಲ್ಲಿ ಆತನ ಗುಪ್ತಾಂಗದಲ್ಲಿ ನಿಧಾನವಾಗಿ ನೋವು ಕಾಣಿಸಿಕೊಂಡಿದೆ. ನಂತರ ನೋವು ತೀವ್ರವಾಗಿದೆ, ಇದರಿಂದ ಗಾಬರಿಯಾಗೊಂಡ ವ್ಯಕ್ತಿ ತಕ್ಷಣವೇ ಕಾರು ಏರಿ ಆಸ್ಪತ್ರೆಗೆ ತೆರಳಿದ್ದಾನೆ. ಆತನನ್ನ ಪರೀಕ್ಷಿಸಿದ ವೈದ್ಯರು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ಗಿಂತಲೂ ಭಯಾನಕ – ಮುಂದಿನ ಸಾಂಕ್ರಾಮಿಕ ಎದುರಿಸಲು ಸಿದ್ಧರಾಗಿ: WHO ಎಚ್ಚರಿಕೆ

    ನಿರಂತರ ಸಂಭೋಗದಿಂದ ಗುಪ್ತಾಂಗದ ತುದಿಯಲ್ಲಿರುವ ಸೀಳಿನಲ್ಲಿ ಬಿರುಕುಬಿಟ್ಟು ರಕ್ತಸ್ರಾವವಾಗಿದೆ. ಆದ್ದರಿಂದ ಶಸ್ತ್ರಚಿಕಿತ್ಸೆ ಅಗತ್ಯವಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಇಟಲಿಯ ಗ್ರೊಸೆಟೊ ಆಸ್ಪತ್ರೆಯೊಂದರಲ್ಲಿ ವಿಚಿತ್ರ ಪ್ರಕರಣ ವರದಿಯಾಗಿದೆ. ರಜೆಯ ಮೇಲೆ ಇಟಲಿಗೆ ಪ್ರವಾಸಕ್ಕೆ ಬಂದಿದ್ದ ಜರ್ಮನಿಯ ವ್ಯಕ್ತಿ ನಿರಂತರ ಸಂಭೋಗದಿಂದ ಅಸ್ವಸ್ಥಗೊಂಡಿದ್ದಾನೆ. ಮೇ 11 ರಂದು ಮಿಸೆರಿಕಾರ್ಡಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಆತನ ಪತ್ನಿಯೂ ಆತನೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಂಬಿದ್ರೆ ನಂಬಿ… ಒಂದು ವರ್ಷಕ್ಕೆ 8.26 ಕೋಟಿ ಸಂಪಾದಿಸುತ್ತೆ ಈ ನಾಯಿ

    ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ವಾರ ಕಳೆದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯ ಸಂತ್ರಸ್ತ ಸೆಪ್ಟಿಕ್ ಆಘಾತದಿಂದ ಬಳಲುತ್ತಿದ್ದಾನೆ. ವೈದ್ಯರು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

  • ಗೆಳತಿಯನ್ನು ಖುಷಿ ಪಡಿಸಲು ಹೋಗಿ ಯಡವಟ್ಟು ಮಾಡಿಕೊಂಡ 41ರ ಗೆಳೆಯ

    ಗೆಳತಿಯನ್ನು ಖುಷಿ ಪಡಿಸಲು ಹೋಗಿ ಯಡವಟ್ಟು ಮಾಡಿಕೊಂಡ 41ರ ಗೆಳೆಯ

    ಮುಂಬೈ: ತನ್ನ ಗೆಳತಿಯನ್ನ ಖುಷಿಪಡಿಸಲು ಮುಂದಾದ 41 ವರ್ಷದ ಗೆಳೆಯನೊಬ್ಬ ಮದ್ಯ (Alcohol) ಸೇವಿಸಿದ ನಂತರ 2 ವಯಾಗ್ರ ಮಾತ್ರೆಗಳನ್ನು (Viagra Pills) ಸೇವಿಸಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ (Nagpur) ನಡೆದಿದೆ.

    ತನ್ನ ಸ್ನೇಹಿತೆಯೊಂದಿಗೆ ಹೋಟೆಲ್‌ನಲ್ಲಿ (Hotel) ರೂಮ್ ಮಾಡಿಕೊಂಡಿದ್ದ ವ್ಯಕ್ತಿ, ಮದ್ಯ ಸೇವಿಸಿದ ಬಳಿಕ, ಸಿಲ್ಡೆನಾಫಿಲ್‌ನ 50 ಎಂಜಿ ಮಾತ್ರೆಗಳನ್ನ ಸೇವಿಸಿದ್ದಾನೆ. ಮಾರನೇ ದಿನ ಬೆಳಗ್ಗೆ ಇದ್ದಕ್ಕಿದಂತೆ ವಾಂತಿ ಮಾಡಿಕೊಂಡಿದ್ದಾನೆ. ತನ್ನ ಸ್ನೇಹಿತೆ, ವೈದ್ಯರ ಸಹಾಯ ಪಡೆಯುವಂತೆ ಹೇಳಿದರೂ ಆತ ನಿರಾಕರಿಸಿದ್ದಾನೆ. ನಂತರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರದೃಷ್ಟವಶಾತ್ ಆಸ್ಪತ್ರೆಗೆ ಬರುವಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ಬಳಿಕ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಪೀಸ್ ಪೀಸ್ ಮಾಡಿ ನೀರಿನ ಟ್ಯಾಂಕಿನಲ್ಲಿ ತುಂಬಿಸಿಟ್ಟ!

    ವ್ಯಕ್ತಿಗೆ ಸೆರೆಬ್ರೊವಾಸ್ಕುಲರ್ ನಿಂದ ರಕ್ತಸ್ರಾವವಾಗಿದೆ, ಇದರಿಂದ ಮೆದುಳಿಗೆ ಆಮ್ಲಜನಕದ ಸರಬರಾಜು ಕಡಿಮೆಯಾಗಿ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ವರಾ ಭಾಸ್ಕರ್ ಮತ್ತೊಂದು ಮದುವೆ: ಆಹ್ವಾನ ಪತ್ರಿಕೆ ವಿಶೇಷತೆ ಏನು?

    ಮರಣೋತ್ತರ ಪರೀಕ್ಷೆಯಲ್ಲಿ ಆಲ್ಕೋಹಾಲ್, ಔಷಧಿ ಮಿಶ್ರಣದೊಂದಿಗೆ 300 ಗ್ರಾಮ್‌ನಷ್ಟು ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಆದ್ದರಿಂದ ರಕ್ತದಲ್ಲಿ ಅಧಿಕ ಒತ್ತಡ ಉಂಟಾಗಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

  • ಕೋವಿಡ್ ‘ಬೂಸ್ಟರ್ ಡೋಸ್’ ಅನ್ನು ‘ವಯಾಗ್ರ’ಕ್ಕೆ ಹೋಲಿಸಿದ ರಾಖಿ ಸಾವಂತ್

    ಕೋವಿಡ್ ‘ಬೂಸ್ಟರ್ ಡೋಸ್’ ಅನ್ನು ‘ವಯಾಗ್ರ’ಕ್ಕೆ ಹೋಲಿಸಿದ ರಾಖಿ ಸಾವಂತ್

    ಕೋವಿಡ್ ಅಪಾಯದಿಂದ ಪಾರಾಗಲು ಬೂಸ್ಟರ್ ಡೋಸ್ ತಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸತತ ಮನವಿ ಮಾಡಿಕೊಳ್ಳುತ್ತಿವೆ. ಆದರೆ, ಬೂಸ್ಟರ್ ಡೋಸ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿ, ಸಖತ್ ಟ್ರೋಲ್ ಆಗಿದ್ದಾರೆ ಬಾಲಿವುಡ್ ನಟಿ ರಾಖಿ ಸಾವಂತ್. ಬೂಸ್ಟರ್ ಡೋಸ್ ಅನ್ನು ಅವರು ವಯಾಗ್ರಕ್ಕೆ ಹೋಲಿಸಿದ್ದಾರೆ. ಸದ್ಯ ಬೂಸ್ಟರ್ ಡೋಸ್ ತಗೆದುಕೊಂಡಿರುವ ಅವರು ,ಎರಡು ದಿನದಿಂದ ವಯಾಗ್ರ ತಿಂದಂತೆ ನೋವಾಗುತ್ತಿದೆ ಎಂದಿದ್ದಾರೆ.

    ಬಾಯ್ ಫ್ರೆಂಡ್ ಊರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ರಾಖಿ ಸಾವಂತ್ ಅವರನ್ನು ಪಾಪರಾಜಿಗಳ ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ. ನನ್ನ ಜೀವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಾಳು ಮಾಡಿಬಿಟ್ಟರು. ಬೂಸ್ಟರ್ ಡೋಸ್ ತಗೆದುಕೊಂಡು ಎದೆಬಡಿತ ಜಾಸ್ತಿ ಅನಿಸುತ್ತಿದೆ. ಎದೆಯೊಳಗೆ ಏನೋನೋ ಆಗುತ್ತಿದೆ. ವಯಾಗ್ರ ತಿಂದಂತಹ ನೋವದು. ಬೂಸ್ಟರ್ ಡೋಸ್ ತಗೆದುಕೊಂಡು ಎರಡು ದಿನದಿಂದ ಒದ್ದಾಡ್ತಾ ಇದ್ದೇನೆ ಎಂದು ಹೇಳಿದರು.  ಇದನ್ನೂ ಓದಿ:ಲಲಿತ್ ಮೋದಿ ಡೇಟಿಂಗ್ ವಿಚಾರ: ಟ್ರೋಲಿಗರಿಗೆ ಸುಶ್ಮಿತಾ ಸೇನ್ ತಿರುಗೇಟು

    ಸದ್ಯ ಬಾಯ್ ಫ್ರೆಂಡ್ ಆದಿಲ್ ಮೈಸೂರಿನಲ್ಲಿದ್ದು, ಅವರನ್ನು ನೋಡಲು ಮೈಸೂರಿಗೆ ತೆರಳುತ್ತಿರುವುದಾಗಿ ರಾಖಿ ಸಾವಂತ್ ಹೇಳಿದರು. ಈ ಕಡೆ ಬಾಯ್ ಫ್ರೆಂಡ್ ಇಲ್ಲ, ಆ ಕಡೆ ಬೂಸ್ಟರ್ ಡೋಸ್ ತಗೆದುಕೊಂಡಿರುವ ನೋವು. ನನ್ನ ಸ್ಥಿತಿ ಯಾರಿಗೂ ಬರಬಾರದು ಅಂದಿರುವ ರಾಖಿ, ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದರು.

    Live Tv
    [brid partner=56869869 player=32851 video=960834 autoplay=true]

  • ಕೋಮಾಗೆ ಜಾರಿದ್ದ ಕೋವಿಡ್‌ ಸೋಂಕಿತ ಮಹಿಳೆ ವಯಾಗ್ರದಿಂದ ಪಾರು

    ಕೋಮಾಗೆ ಜಾರಿದ್ದ ಕೋವಿಡ್‌ ಸೋಂಕಿತ ಮಹಿಳೆ ವಯಾಗ್ರದಿಂದ ಪಾರು

    – ವಯಾಗ್ರ ಡೋಸ್‌ ನೀಡಿದ ಬಳಿಕ ಆಮ್ಲಜನಕ ಮಟ್ಟ ಏರಿಕೆ
    – 2 ಡೋಸ್‌ ಕೊರೊನಾ ಲಸಿಕೆ ಪಡೆದಿದ್ದ ನರ್ಸ್‌

    ಲಂಡನ್‌: ಕೋವಿಡ್‌ 19ಗೆ ಸದ್ಯಕ್ಕೆ ಯಾವುದೇ ಔಷಧಿ ಇಲ್ಲ. ವೈದ್ಯರು ಯಾವುದೋ ಜ್ವರ, ರೋಗಕ್ಕೆ ಕಂಡುಹಿಡಿದ ಮಾತ್ರೆ, ಔಷಧಿಗಳನ್ನು ಸೋಂಕಿತರಿಗೆ ನೀಡುತ್ತಿದ್ದಾರೆ. ಈ ಪ್ರಯೋಗ ಹಲವು ಬಾರಿ ಯಶಸ್ವಿಯಾಗಿದೆ. ಅದೇ ರೀತಿಯಾಗಿ ಇಂಗ್ಲೆಂಡ್‌ನಲ್ಲಿ ಕೋಮಾದಲ್ಲಿದ್ದ ಸೋಂಕಿತ ಮಹಿಳೆ ವಯಾಗ್ರ ಡೋಸ್‌ನಿಂದ ಪಾರಾಗಿ ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ.

    ಹೌದು. ಐಸಿಯುನಲ್ಲಿ ಸಾವು ಬದುಕಿನ ಮಧ್ಯೆ ಕಳೆದ 28 ದಿನಗಳಿಂದ ಹೋರಾಡುತ್ತಿದ್ದ ಲಿಂಕನ್‌ಶೈರ್ ಮೂಲದ ಮಹಿಳೆ ವಯಾಗ್ರದಿಂದ ಪಾರಾಗಿದ್ದಾರೆ.

    37 ವರ್ಷದ ಇಬ್ಬರು ಮಕ್ಕಳ ತಾಯಿ ಆಗಿರುವ ಮೋನಿಕಾ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತೆಯಾಗಿರುವ ಇವರು ಎರಡು ಡೋಸ್‌ ಲಸಿಕೆಯನ್ನು ಪಡೆದಿದ್ದರು. ಈ ಮಧ್ಯೆ ಅಕ್ಟೋಬರ್‌ 31 ರಂದು ಕೊರೊನಾಗೆ ತುತ್ತಾಗಿದ್ದರು.

    ಆರೋಗ್ಯ ದಿನೇ ದಿನೇ ಹದಗೆಡಲು ಆರಂಭವಾದ ಹಿನ್ನೆಲೆಯಲ್ಲಿ ನವೆಂಬರ್‌ 9 ರಂದು ಆಸ್ಪತ್ರೆಗೆ ದಾಖಲಾಗುತ್ತಾರೆ. ಮತ್ತಷ್ಟು ಆರೋಗ್ಯ ಹದೆಗೆಟ್ಟು  ಕೋಮಾಗೆ ಜಾರಿದ್ದರಿಂದ ನವೆಂಬರ್‌ 16ಕ್ಕೆ ಅವರನ್ನು ಐಸಿಯುಗೆ ಶಿಫ್ಟ್‌ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದನ್ನೂ ಓದಿ: ವಿಶ್ವಕ್ಕೆ ಮತ್ತೆ ಕೊರೊನಾ ಕಿರಿಕಿರಿ – ಅಮೆರಿಕಾದಲ್ಲಿ ಪ್ರತಿ ಆರು ಮಂದಿಯಲ್ಲಿ ಒಬ್ಬರಿಗೆ ಸೋಂಕು

    ಚಿಕಿತ್ಸೆಯ ಬಳಿಕ ಆರೋಗ್ಯ ಸುಧಾರಣೆಯಾಗಿ ಡಿಸೆಂಬರ್‌ 14 ರಂದು ಬೆಡ್‌ನಿಂದ ಎದ್ದು ಮಾತನಾಡಲು ಆರಂಭಿಸಿದ್ದಾರೆ. ಈ ವೇಳೆ ವೈದ್ಯರು ಚಿಕಿತ್ಸೆ ರೂಪವಾಗಿ ವಯಾಗ್ರ ನೀಡಿದ ವಿಚಾರವನ್ನು ತಿಳಿಸಿದ್ದಾರೆ.

    ಕೋಮಾಗೆ ಜಾರುವ ಮೊದಲೇ ತನ್ನ ಮೇಲೆ ಯಾವುದೇ ರೀತಿಯ ಚಿಕಿತ್ಸಾ ಪ್ರಯೋಗ ನಡೆಸಲು ಮೋನಿಕಾ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯರು ಪ್ರಯೋಗಿಕವಾಗಿ ವಯಾಗ್ರವನ್ನು ಔಷಧಿ ರೂಪವಾಗಿ ನೀಡಿದ್ದರು.

    ವಯಾಗ್ರ ನೀಡಿದ್ದರಿಂದ ದೇಹದ ಎಲ್ಲ ರಕ್ತನಾಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಹರಿದಿದೆ. ಇದರಿಂದಾಗಿ ದಿನೇ ದಿನೇ ಕಡಿಮೆ ಆಗುತ್ತಿದ್ದ ಆಮ್ಲಜನಕ ಮಟ್ಟ ಒಂದು ವಾರದಲ್ಲೇ ಏರಿಕೆಯಾಗಿದೆ. ಇದನ್ನೂ ಓದಿ: ಕೊರೊನಾ ಸ್ಫೋಟ ಒಟ್ಟು 2,479 ಪ್ರಕರಣ – ಬೆಂಗ್ಳೂರಲ್ಲಿ 2,053 ಕೇಸ್

    ಆರಂಭದಲ್ಲಿ ವಿಚಾರ ತಿಳಿಸಿದಾಗ ಜೋಕ್‌ ಮಾಡುತ್ತಿದ್ದಾರೆ ಎಂದು ತಿಳಿದು ನಕ್ಕಿದ್ದೆ. ಆದರೆ ವೈದ್ಯರು ಭಾರೀ ಪ್ರಮಾಣದಲ್ಲಿ ವಯಾಗ್ರ ಡೋಸ್‌ ನೀಡಲಾಗಿದೆ ಎಂದಾಗ ನಾನು ಆಶ್ಚರ್ಯಪಟ್ಟೆ. ಕ್ರಿಸ್ಮಸ್‌ ವೇಳೆ ಪವಾಡ ನಡೆದಿದ್ದು ವಯಾಗ್ರವೇ ನನ್ನನ್ನು ಬದುಕಿಸಿದೆ. 48 ಗಂಟೆಯ ಬಳಿಕ ನನ್ನ ಶ್ವಾಸಕೋಶ ಕೆಲಸ ಮಾಡಲು ಆರಂಭಿಸಿತ್ತು ಎಂದು ಮೋನಿಕಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ಕೋವಿಡ್‌ ಬಂದ ನಾಲ್ಕೇ ದಿನಕ್ಕೆ ಅವರ ಆಮ್ಲಜನಕ ಮಟ್ಟ ಕಡಿಮೆಯಾಗಿತ್ತು. ಹೀಗಾಗಿ ಮೋನಿಕಾ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸುಧಾರಣೆಯಾಗಿ ಡಿಸ್ಚಾರ್ಜ್‌ ಆಗಿದ್ದರು. ಇದಾದ ಬಳಿಕ ಮತ್ತೆ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಅವರು ಕೋಮಾಗೆ ಜಾರಿದ್ದರು.

    ಯಾವುದೇ ಚಿಕಿತ್ಸೆಗೆ ಸ್ಪಂದಿಸದ ಕಾರಣ ವೈದ್ಯರು ಚಿಂತೆಯಲ್ಲಿದ್ದರು. ಈ ಸಂದರ್ಭದಲ್ಲಿ ವಯಾಗ್ರ ನೀಡಿದರೆ ಕೋವಿಡ್‌ 19 ಸೋಂಕಿತರ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗಬಹುದು ಎಂದು ಈ ಹಿಂದೆ ಸಿಕ್ಕಿದ್ದ ಸಲಹೆ ವೈದ್ಯರ ನೆನಪಿಗೆ ಬಂದಿತ್ತು. ಹೀಗಾಗಿ ಕೂಡಲೇ ವಯಾಗ್ರ ಡೋಸ್‌ ನೀಡಿದ್ದರು.

    ಇಂಗ್ಲೆಂಡ್‌ನಲ್ಲಿ ಕೋವಿಡ್‌ ಸೋಂಕಿತ ವ್ಯಕ್ತಿ ಚಿಕಿತ್ಸೆ ರೂಪದಲ್ಲಿ ಯಾವುದೇ ರೀತಿ ಔಷಧ ಪ್ರಯೋಗ ಅನುಮತಿ ನೀಡಿದ್ದರೆ ಆತನ ಮೇಲೆ ಬೇರೆ ಬೇರೆ ಡ್ರಗ್ಸ್‌ ನೀಡಿ ಪ್ರಯೋಗ ಮಾಡಲಾಗುತ್ತದೆ.

  • ಅತಿಯಾದ ವಯಾಗ್ರ ಸೇವಿಸಿ ದೃಷ್ಟಿ ಹೋಯ್ತು!

    ಅತಿಯಾದ ವಯಾಗ್ರ ಸೇವಿಸಿ ದೃಷ್ಟಿ ಹೋಯ್ತು!

    ನವದೆಹಲಿ: ಎಲ್ಲದಕ್ಕೂ ಒಂದು ಮಿತಿಯಿರುತ್ತದೆ. ಅದರ ವ್ಯಾಪ್ತಿಯನ್ನು ದಾಟಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಇದಕ್ಕೆ ಉದಾರಹಣೆ ಎಂಬಂತೆ ವ್ಯಕ್ತಿಯೊಬ್ಬರು ಲೈಂಗಿಕ ತೃಪ್ತಿಯಾಗಿ ಹೆಚ್ಚು ವಯಾಗ್ರ ಸೇವಿಸಿ, ದೃಷ್ಟಿ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.

    ಹೌದು, ವ್ಯಕ್ತಿಯೊಬ್ಬರು ಆನ್‍ಲೈನ್ ಮೂಲಕ ವಯಾಗ್ರ ಖರೀದಿಸಿದ್ದು, ನಿತ್ಯವೂ 50 ಗ್ರಾಂ ಗಿಂತ ಹೆಚ್ಚಿನ ಪ್ರಮಾಣದಲ್ಲಿ ವಯಾಗ್ರಾ ಸೇವಿಸಿದ್ದಾರೆ. ಹೀಗಾಗಿ ಅವರ ಎರಡೂ ಕಣ್ಣುಗಳು ಕೆಂಪಾಗಿ ದೃಷ್ಟಿ ದೋಷಕ್ಕೆ ತುತ್ತಾಗಿದ್ದಾರೆ. ಅವರ ಮುಂದಿರುವ ವ್ಯಕ್ತಿ ಹಾಗೂ ವಸ್ತುಗಳು ಮಂಜು ಮಂಜಾಗಿ ಕಾಣಿಸಲು ಪ್ರಾರಂಭಿಸಿವೆ. ತಮಗೆ ಎದುರಾದ ವಿಚಿತ್ರ ಸಮಸ್ಯೆಯಿಂದ ಭಯಗೊಂಡ ಅವರು ವೈದ್ಯರನ್ನು ಭೇಟಿಯಾಗಿದ್ದಾರೆ. ಇದನ್ನೂ ಓದಿ: ಕಾಂಡೋಮ್ ಬಳಸಿ ಆಸ್ಪತ್ರೆ ಸೇರಿದ! ವೈದ್ಯರು ಹೇಳಿದ್ದು ಏನು?

    ತಪಾಸಣೆಗೆ ಒಳಪಡಿಸಿ ನಂತರ ರೋಗಿಯನ್ನು ವಿಚಾರಿಸಿದ ವೈದ್ಯರು, ಅತಿಯಾದ ವಯಾಗ್ರ ಸೇವನೆ ಮಾಡಿದ್ದೆ ಈ ಸಮಸ್ಯೆಗೆ ಕಾರಣ ಎಂದು ಖಚಿತಪಡಿಸಿದ್ದಾರೆ. ಕೆಲವು ಪುರುಷರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಶಿಶ್ನ ನಿಮಿರುವಿಕೆ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದಾಗಿ ತಮ್ಮ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ವಯಾಗ್ರ ಸೇವಿಸುತ್ತಾರೆ. ಇದನ್ನೂ ಓದಿ: ಸೆಕ್ಸ್ ವೇಳೆ ಸ್ಫೋಟಗೊಂಡ ಕಾಂಡೋಮ್-ದೂರು ದಾಖಲಿಸಿದ ಮಹಿಳೆ

    ಕೆಲವರು ತಮಗಿರುವ ಲೈಂಗಿಕ ಕ್ರಿಯೆಯ ಸಮಸ್ಯೆಯನ್ನು ವೈದ್ಯರ ಬಳಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅವರು ವೈದ್ಯರ ಸಲಹೆ ಪಡೆಯದೇ ಔಷಧಗಳನ್ನು ತೆಗೆದುಕೊಂಡ ಪರಿಣಾಮ ದೃಷ್ಟಿ ದೋಷದಂತಹ ಸಮಸ್ಯೆಗಳು ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿರೋ ‘ಕಾಂಡೋಮ್ ಚಾಲೆಂಜ್’ ಟ್ರೈ ಮಾಡ್ಬೇಡಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದ ಆರ್ಥಿಕತೆಗೆ ವಯಾಗ್ರ ಕೊಡಿ-ಮೋದಿ ಸರ್ಕಾರದ ಕಾಲೆಳೆದ `ಕೈ’

    ದೇಶದ ಆರ್ಥಿಕತೆಗೆ ವಯಾಗ್ರ ಕೊಡಿ-ಮೋದಿ ಸರ್ಕಾರದ ಕಾಲೆಳೆದ `ಕೈ’

    ನವದೆಹಲಿ: ಕುಸಿಯುತ್ತಿರುವ ಆರ್ಥಿಕ ಬೆಳವಣಿಗೆ, ಬೆಲೆ ಏರಿಕೆ, ಉದ್ಯೋಗ ಅಲಭ್ಯತೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

    ಆರ್ಥಿಕತೆಗೆ ಉತ್ತೇಜನ ನೀಡೋದಕ್ಕೆ ವಯಾಗ್ರ ನೀಡುವಂತೆಯೂ ವ್ಯಂಗ್ಯವಾಡಿದೆ. ಮೋದಿ ಸರ್ಕಾರ ಆರ್ಥಿಕ ಬೆಳವಣಿಗೆ ಹೆಚ್ಚಾಗಿದೆ ಅಂತಾ ಹೇಳ್ತಿತ್ತು. ಆದ್ರೆ ಏರಿಕೆ ಆಗಿರೋದು ಪೆಟ್ರೋಲ್, ಗ್ಯಾಸ್ ಬೆಲೆಯಲ್ಲಿ. ನಿರುದ್ಯೋಗ ಹೆಚ್ಚಾಗಿದೆ. ಮೂರುವರೆ ವರ್ಷ ಅಧಿಕಾರ ನಡೆಸಿದ ಬಳಿಕವೂ ಹೀಗಾದ್ರೆ ದೇಶ ಎತ್ತ ಸಾಗಲಿದೆ..? ಆರ್ಥಿಕತೆಯ ಸುಧಾರಣೆಗೆ ವಯಾಗ್ರ ನೀಡೋದು ಒಳ್ಳೆದು ಅಂತಾ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.

    ನೋಟು ನಿಷೇಧ ಅನ್ನೋದೇ ಬೇಡವಾಗಿತ್ತು. ತಾಂತ್ರಿಕವಾಗಿಯೂ ಆರ್ಥಿಕವಾಗಿಯೂ ನೋಟು ನಿಷೇಧದಂತಹ ದುಸ್ಸಾಹಸ ಬೇಡವಾಗಿತ್ತು. ಯಾವ ನಾಗರಿಕ ಅರ್ಥವ್ಯವಸ್ಥೆಯಲ್ಲೂ ಅದು ಸಫಲವಾಗಿಲ್ಲ ಅಂತಾ ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

    ಇನ್ನು ಪ್ರಧಾನಿ ಮೋದಿ ಸರ್ಕಾರ ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ಕೊಟ್ಟರೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ತಮಗೆ ತಿಳಿದಿರುವ ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ 15 ಲಕ್ಷದಿಂದ 1 ಕೋಟಿ ರೂಪಾಯಿ ಗೆಲ್ಲಬಹುದು ಅಂತ ನೇರ ತೆರಿಗೆಗೆಳ ಕೇಂದ್ರೀಯ ಮಂಡಳಿ ಹೇಳಿದೆ. ಬೇನಾಮಿ ಮಾಹಿತಿ ಕೊಟ್ಟವರ ಮಾಹಿತಿಯನ್ನು ಸುರಕ್ಷತೆಯ ಕಾರಣಕ್ಕಾಗಿ ಗೌಪ್ಯವಾಗಿ ಇಡಲಾಗುತ್ತದೆ ಎನ್ನಲಾಗಿದೆ.