Tag: ವಯಸ್ಸು

  • ರಮ್ಯಾ ವಯಸ್ಸಿನ ಬಗ್ಗೆ ಮಾತನಾಡಿದ್ರು ರಾಗಿಣಿ

    ರಮ್ಯಾ ವಯಸ್ಸಿನ ಬಗ್ಗೆ ಮಾತನಾಡಿದ್ರು ರಾಗಿಣಿ

    ಬೆಂಗಳೂರು: ಇತ್ತೀಚೆಗಷ್ಟೆ ರಮ್ಯಾ ಕನ್ನಡ ಚಿತ್ರರಂಗಕ್ಕೆ ಬರಬೇಕು ಅಂತ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದು, ಈ ಟ್ವೀಟ್ ಅನ್ನು ನಟಿ ರಾಗಿಣಿ ದ್ವಿವೇದಿ ಅವರು ರೀಟ್ವೀಟ್ ಮಾಡುವ ಮೂಲಕ ಇಬ್ಬರ ಮಧ್ಯೆ ಇರುವ ವೈಮನಸ್ಸು ಮಾಯವಾಯುತ್ತಾ ಅನ್ನೋ ಪ್ರಶ್ನೆಯೊಂದು ಮೂಡಿತ್ತು. ಈ ಬೆನ್ನಲ್ಲೇ ಇದೀಗ ರಾಗಿಣಿ ಅವರು ರಮ್ಯಾ ವಯಸ್ಸಿನ ಬಗ್ಗೆ ಮಾತನಾಡುವ ಮೂಲಕ ಇಬ್ಬರೂ ಸ್ನೇಹಿತರಾಗಿದ್ದಾರೆ ಅನ್ನೋದು ಸ್ಪಷ್ಟವಾಗಿದೆ.

    https://twitter.com/LeaderRamya/status/1045710004777603072

    ಹೌದು. ಯೂತ್ ಐಕಾನ್ ರಮ್ಯಾ ಎಂಬ ಟ್ವಿಟ್ಟರ್ ಅಕೌಂಟ್ ನಲ್ಲಿ ಅಭಿಮಾನಿ ಜೊತೆ ರಮ್ಯಾ ಇರೋ ಫೋಟೋವನ್ನು ಶೇರ್ ಮಾಡಲಾಗಿತ್ತು. ಈ ಫೋಟೋಗೆ ರಾಗಿಣಿ ರಿಟ್ವೀಟ್ ಮಾಡಿದ್ದು, ನಮ್ಮ ವಯಸ್ಸು ಮುಂದಕ್ಕೆ ಹೋದಂತೆ ರಮ್ಯಾ ಅವರ ವಯಸ್ಸು ಹಿಂದಕ್ಕೆ ಬರುತ್ತಿದೆ. ಹೀಗಾಗಿ ಅವರು ದಿನ ಕಳೆದಂತೆ ಹೆಚ್ಚು ಸುಂದರವಾಗಿ ಕಾಣುತ್ತಿದ್ದಾರೆ ಅಂತ ಹೇಳಿದ್ದಾರೆ. ರಾಗಿಣಿ ರೀಟ್ವೀಟ್ ಗೆ ರಮ್ಯಾ ಕೂಡ ಪ್ರತಿಕ್ರಿಯಿಸಿದ್ದು, ಧನ್ಯಾವಾದಗಳು ರಾಗಿಣಿ ಅಂತ ಹೇಳಿದ್ದಾರೆ.

    ಮೋಹಕ ತಾರೆ ರಮ್ಯಾ ಇದೀಗ ಸಂಪೂರ್ಣವಾಗಿ ರಾಜಕಾರಣದಲ್ಲಿ ಕಳೆದು ಹೋಗಿದ್ದಾರೆ. ಆದರೆ ಈಗಲೂ ಕೂಡಾ ಹಲವಾರು ಮಂದಿ ಅವರು ಮತ್ತೆ ಬಂದು ಚಿತ್ರಗಳಲ್ಲಿ ನಟಿಸಲಿ ಎಂದೇ ಬಯಸುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ರಮ್ಯಾ ಜೊತೆ ಕಿತ್ತಾಡಿಕೊಂಡಿದ್ದ ರಾಗಿಣಿ ದ್ವಿವೇದಿ ಕೂಡಾ ಅದನ್ನೇ ಬಯಸುತ್ತಿದ್ದಾರಾ ಎಂಬ ಅಚ್ಚರಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪತ್ತೆಯಾಗಿತ್ತು.

    ಟ್ವಿಟ್ಟರಿನಲ್ಲಿ ರಮ್ಯಾ ಅಭಿಮಾನಿಯೊಬ್ಬರು ಅವರು ಮತ್ತೆ ಬರಬೇಕೆಂದು ಗೋಗರೆಯುವಂತೆ ಒಂದು ಟ್ವೀಟ್ ಮಾಡಿದ್ದರು. ಅದನ್ನು ರಾಗಿಣಿ ದ್ವಿವೇದಿ ಕೂಡಾ ರೀಟ್ವೀಟ್ ಮಾಡಿದ್ದರು. ಈ ಮೂಲಕ ಮುನಿಸು ಮರೆತು ಮತ್ತೆ ರಮ್ಯಾ ಚಿತ್ರ ರಂಗಕ್ಕೆ ಮರಳಲಿ ಅಂತ ಆಶಿಸುತ್ತಿದ್ದಾರಾ ಎಂಬ ಪ್ರಶ್ನೆ ಸಿನಿಪ್ರಿಯರನ್ನು ಕಾಡಿತ್ತು.

    ವರ್ಷಾಂತರಗಳ ಹಿಂದೆ ರಾಗಿಣಿ, ರಮ್ಯಾ ವಿರುದ್ಧ ಮಾತಾಡಿದ್ದರೆಂಬ ಬಗ್ಗೆ ಗುಲ್ಲೆದ್ದಿತ್ತು. ಈ ವಿಚಾರವಾಗಿ ರಮ್ಯಾ ಕೂಡಾ ಪರೋಕ್ಷವಾಗಿ ರಾಗಿಣಿಯವರನ್ನು ಫೇಸ್ ಬುಕ್ ಮೂಲಕ ತಿವಿದಿದ್ದರು. ರಾಗಿಣಿ ಕೂಡಾ ಅದಕ್ಕೆ ಅಷ್ಟೇ ಮೊನಚಾಗಿ ಮಾರುತ್ತರ ನೀಡಿದ್ದರು. ಒಟ್ಟಿನಲ್ಲಿ ರಮ್ಯಾ ಮತ್ತು ರಾಗಿಣಿ ವಿರುದ್ಧಾರ್ಥಕ ಪದಗಳಂತಾಗಿದ್ದ ಇವರಿಬ್ಬರ ನಡುವೆ ಮುನಿಸಿನ ಮುಸುಕು ಸರಿದಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv