Tag: ವಯಸ್ಕರು

  • ಭಾರತದ ಎಲ್ಲಾ ವಯಸ್ಕರಿಗೂ ಬೂಸ್ಟರ್ ಡೋಸ್ – ಸರ್ಕಾರ ಚಿಂತನೆ

    ಭಾರತದ ಎಲ್ಲಾ ವಯಸ್ಕರಿಗೂ ಬೂಸ್ಟರ್ ಡೋಸ್ – ಸರ್ಕಾರ ಚಿಂತನೆ

    ನವದೆಹಲಿ: ಭಾರತ ತನ್ನ ಎಲ್ಲಾ ವಯಸ್ಕ ಪ್ರಜೆಗಳಿಗೂ ಬೂಸ್ಟರ್ ಡೋಸ್‌ಗೆ ಅರ್ಹತೆ ನೀಡಲು ಚಿಂತನೆ ನಡೆಸುತ್ತಿದೆ.

    ಚೀನಾ ಹಾಗೂ ಕೊರಿಯಾದಂತಹ ಕೆಲವು ರಾಷ್ಟ್ರಗಳಲ್ಲಿ ಇದೀಗ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕಷ್ಟದ ದಿನಗಳನ್ನು ಅನುಭವಿಸುತ್ತಿದೆ. ಅಷ್ಟ ಅಲ್ಲದೇ ಜನರು 3ನೇ ಲಸಿಕೆ ಪಡೆಯದೇ ವಿದೇಶಗಳಿಗೆ ಪ್ರಯಾಣಿಸಲು ಕಷ್ಟಪಡುವಂತಾಗಿದೆ. ಹೀಗಾಗಿ ಸರ್ಕಾರ ಇದೀಗ ಬೂಸ್ಟರ್ ಡೋಸ್ ಬಗ್ಗೆ ಹೊಸದಾಗಿ ಚಿಂತನೆ ನಡೆಸುತ್ತಿದೆ. ಇದನ್ನೂ ಓದಿ: ಕಡ್ಡಾಯ ಮಾಸ್ಕ್‌ ನಿಯಮ ಕೈಬಿಡಿ – ಸರ್ಕಾರಕ್ಕೆ ತಜ್ಞರ ಸಲಹೆ

    ಭಾರತದಲ್ಲಿ ಸದ್ಯ ಮುಂಚೂಣಿಯ ಕಾರ್ಯಕರ್ತರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಬೂಸ್ಟರ್ ಡೋಸ್ ನೀಡಲು ಸರ್ಕಾರ ಅನುಮತಿ ನೀಡಿದೆ. ಇದೀಗ ವಯಸ್ಕರಿಗೂ ಬೂಸ್ಟರ್ ಡೋಸ್ ಕೊಡಲು ನಿರ್ಧರಿಸುತ್ತಿರುವುದರಿಂದ ಕೋವಿಡ್ ಸೋಂಕಿನ ಭೀತಿ ಸ್ವಲ್ಪ ಮಟ್ಟಿಗೆ ತಗ್ಗುವ ಸಾಧ್ಯತೆಯೂ ಇದೆ.

    ಏಷ್ಯಾ, ಯುರೋಪ್ ದೇಶಗಳಲ್ಲಿ ಕೋವಿಡ್ ಏರಿಕೆ ಆಗುತ್ತಿದ್ದು ಇದೀಗ ಕೇಂದ್ರ ಸರ್ಕಾರ ಕಟ್ಟೆಚ್ಚರವಹಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಆದರೆ ಸಾಂಕ್ರಾಮಿಕ ರೋಗಗಳ ತಜ್ಞರು ದೇಶದಲ್ಲಿ ಕೋವಿಡ್ ಸೋಂಕಿಗೆ ಇನ್ನೂ ಹೆದರಿ ಬದುಕುವುದು ಬೇಡ. ನಾವಿನ್ನು ಮುಂದುವರಿದು ಮಾಸ್ಕ್ ಕಡ್ಡಾಯವನ್ನು ಕೈ ಬಿಡುವ ಯೋಚನೆ ಮಾಡಬೇಕೆಂದು ಸಲಹೆ ನೀಡಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪರಿಶೀಲಿಸಿದ ಮೋದಿ

    ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,549 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, 31 ಜನರು ಸಾವನ್ನಪ್ಪಿದ್ದಾರೆ.

  • ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ – ಪ್ರಧಾನಿ ಅಭಿನಂದನೆ

    ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ – ಪ್ರಧಾನಿ ಅಭಿನಂದನೆ

    ನವದೆಹಲಿ: ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.75ರಷ್ಟು ವಯಸ್ಕರು ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಲಸಿಕಾ ಅಭಿಯಾನಕ್ಕೆ ಸಹಕರಿಸಿದ ದೇಶದ ನಾಯಕರಿಗೆ ಪ್ರಧಾನಿ ಮೋದಿ ಅವರು ಅಭಿನಂದನೆ ತಿಳಿಸಿದ್ದಾರೆ.

    ದೇಶದ ಶೇ.75 ವಯಸ್ಕರು ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಮಹತ್ವದ ಸಾಧನೆಗಾಗಿ ನಮ್ಮ ನಾಗಕರಿಕರಿಗೆ ಅಭಿನಂದನೆಗಳು. ನಮ್ಮ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸುತ್ತಿರುವ ಎಲ್ಲರ ಬಗ್ಗೆಯೂ ಹೆಮ್ಮೆಯಿದೆ ಎಂದು ಮೋದಿ ಅವರು ಟ್ವೀಟ್‌ ಮಾಡಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ತಪಾಸಣೆ ನೆಪದಲ್ಲಿ ಮಹಿಳಾ ರೋಗಿಗೆ ಕಿರುಕುಳ – ವೈದ್ಯನ ವಿರುದ್ಧ ದೂರು

    ಕೇಂದ್ರ ಸರ್ಕಾರದ ಸಾಧನೆ ಕುರಿತು ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಟ್ವೀಟ್‌ ಮಾಡಿದ್ದು, ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎಂಬ ಆಶಯದೊಂದಿಗೆ ಭಾರತದ ವಯಸ್ಕ ಜನತೆಗೆ ಕೋವಿಡ್‌ ಲಸಿಕೆಯ ಎರಡೂ ಡೋಸ್‌ ನೀಡಿಕೆಯು ಶೇ.75ರಷ್ಟು ಆಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಬಲಶಾಲಿಗಳಾಗುತ್ತಿದ್ದೇವೆ. ನಾವು ಎಲ್ಲಾ ನಿಯಮಗಳನ್ನು ಅನುಸರಿಸಬೇಕು. ಆದಷ್ಟು ಬೇಗ ದೇಶದ ಪ್ರತಿಯೊಬ್ಬರೂ ಕೋವಿಡ್‌ ಲಸಿಕೆಯನ್ನು ಪಡೆಯಬೇಕು ಎಂದು ಕರೆ ನೀಡಿದ್ದಾರೆ.

    12.43 ಕೋಟಿಗಿಂತ ಹೆಚ್ಚು ಕೋವಿಡ್‌ ಲಸಿಕೆಗಳು ಬಳಕೆಯಾಗದೇ ವಿವಿಧ ರಾಜ್ಯಗಳಲ್ಲಿ ಹಾಗೇ ಉಳಿದಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ

    ಭಾನುವಾರ ದೇಶದಲ್ಲಿ ಕೋವಿಡ್‌ನ 2,34,281 ಹೊಸ ಪ್ರಕರಣಗಳು ದೃಢಪಟ್ಟಿವೆ. ಸದ್ಯ 18,84,937 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಈವರೆಗೆ 1,65,70,60,692 ಡೋಸ್‌ ಲಸಿಕೆ ನೀಡಲಾಗಿದೆ.