Tag: ವನ ಮಹೋತ್ಸವ

  • ಆರ್ಮಿ ಪಬ್ಲಿಕ್ ಶಾಲೆಯಲ್ಲಿ 1,300 ಸಸಿ ನೆಟ್ಟಿದ ಕಮಾಂಡಿಂಗ್ ಮೇಜರ್ ಜನರಲ್!

    ಆರ್ಮಿ ಪಬ್ಲಿಕ್ ಶಾಲೆಯಲ್ಲಿ 1,300 ಸಸಿ ನೆಟ್ಟಿದ ಕಮಾಂಡಿಂಗ್ ಮೇಜರ್ ಜನರಲ್!

    ಬೆಂಗಳೂರು: ಭಾರತೀಯ ಸೇನಾಪಡೆ, ರೀಫಾರೆಸ್ಟ್ ಇಂಡಿಯಾ ಹಾಗೂ ಪೆರ್ನಾಡ್ ರೆಕಾರ್ಡ್ ಇಂಡಿಯಾ ಸಹಭಾಗಿತ್ವದಲ್ಲಿ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ವನ ಮಹೋತ್ಸವದ ಅಂಗವಾಗಿ 1300 ಸಸಿಗಳನ್ನು ನೆಡಲಾಯಿತು.

    ಈ ಕುರಿತು ಮಾತನಾಡಿದ ಕರ್ನಾಟಕ ಕಮಾಂಡಿಂಗ್ ಮೇಜರ್ ಜನರಲ್ ಜೆ.ವಿ.ಪ್ರಸಾದ್, ಸೇನಾ ಶಾಲೆಗಳಲ್ಲಿ ಪರಿಸರವನ್ನು ಉತ್ತೇಜಿಸಬೇಕು. ಇನ್ನಷ್ಟು ಮರಗಳನ್ನು ಬೆಳೆಸುವ ಉದ್ದೇಶದಿಂದ ಇಂದು ಈಗಾಗಲೇ 4 ರಿಂದ 6 ಅಡಿ ಉದ್ದ ಬೆಳೆದಿರುವ ಒಂದು ವರ್ಷ ವಯಸ್ಸಿನ 1,300 ಸಸಿಗಳನ್ನು ನೆಡಲಾಗಿದೆ. ಈ ರೀತಿಯ ಸಸಿಗಳು ಶೇ.90ರಷ್ಟು ಉಳಿಯುವ ಆಶಯವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಂತರಾಷ್ಟ್ರೀಯ ವಿಜ್ಞಾನ ಕೇಂದ್ರಕ್ಕೆ ಚಾಲನೆ ನೀಡಿದ ಅಶ್ವಥ್ ನಾರಾಯಣ

    ಜಾಗತಿಕರಣದ ಬಳಿಕ ಹಸಿರುಮಯ ಪರಿಸರ ಕಣ್ಮರೆಯಾಗುತ್ತಿದೆ. ಹೀಗಾಗಿ ಪೆರ್ನಾಡ್ ರೆಕಾರ್ಡ್ ಸಹಭಾಗಿತ್ವದಲ್ಲಿ ಆರ್ಮಿ ಶಾಲೆಯಲ್ಲಿ ಈ ಸಸಿಗಳನ್ನು ನೆಡಲು ಉತ್ಸಾಹ ತೋರಿದ್ದು ಶ್ಲಾಘನೀಯ. ಪ್ರತಿ ಶಾಲೆಗಳಿಗೆ ಖಾಸಗಿ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಸಸಿ ನೆಡುವುದರಿಂದ ಎಲ್ಲೆಡೆ ಹಸಿರುಮಯವಾಗಿರಲಿದೆ. ಇದು ಮುಂದಿನ ಪೀಳಿಗೆಗೆ ಮರಗಳ ಬಗ್ಗೆ ಜಾಗೃತಿ ಮೂಡಿಸಿದಂತೆ ಆಗಲಿದೆ ಎಂದು ಹೇಳಿದರು.

    ಪೆರ್ನಾಡ್ ರೆಕಾರ್ಡ್ ಇಂಡಿಯಾದ ಸಿಎಸ್‍ಆರ್ ಮುಖ್ಯಸ್ಥ ಶಶಿಧರ್ ವೇಂಪಲ್, ನಮ್ಮ ಸಂಸ್ಥೆ ಸಾಮಾಜಿಕ ಕಳಕಳಿಯಿಂದ ಸಿಎಸ್‍ಆರ್ ಫಂಡ್‍ನಲ್ಲಿ ಸಸಿ ನೆಡುವ ಕೆಲಸ ಮಾಡುತ್ತಿದ್ದೇವೆ. ಇದು ಅತ್ಯಂತ ಸಂತೃಪ್ತಿ ನೀಡುತ್ತಿದೆ. ಇದಷ್ಟೇ ಅಲ್ಲದೆ ಇತರೆ ಕಾರ್ಯಗಳನ್ನೂ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯ ವೀಡಿಯೋ ಶೇರ್ ಮಾಡಿದ ಪ್ರಿಯಾಂಕಾ!

    4 Plant Growth Factors That Affect All Plants | LoveToKnow

    ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ, ಯುವಜನ ಉದ್ಯೋಗ ಹಾಗೂ ಪ್ರಾಥಮಿಕ ಆರೋಗ್ಯ ಶುಶ್ರೂಷೆಯತ್ತ ಹೆಚ್ಚು ಕೆಲಸ ಮಾಡುತ್ತಿದೆ. ಇದರ ಭಾಗವಾಗಿ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ‘ಸಂರಕ್ಷಣ್’ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ 1300 ಸಸಿಗಳನ್ನು ನೆಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಸಿ ನೆಡುವ ಆಶಯವಿದೆ ಎಂದರು.

  • ಪಬ್ಲಿಕ್‌ ಟಿವಿ ದಶಮಾನೋತ್ಸವ: ರಾಜ್ಯಾದ್ಯಂತ ಸಸಿ ನೆಟ್ಟು ಶುಭ ಕೋರಿದ ಜನತೆ

    ಪಬ್ಲಿಕ್‌ ಟಿವಿ ದಶಮಾನೋತ್ಸವ: ರಾಜ್ಯಾದ್ಯಂತ ಸಸಿ ನೆಟ್ಟು ಶುಭ ಕೋರಿದ ಜನತೆ

    ಬೆಂಗಳೂರು: ಪಬ್ಲಿಕ್ ಟಿವಿಯ ದಶಮಾನೋತ್ಸವದ ನೆನಪನ್ನು ಹಚ್ಚ ಹಸಿರಾಗಿಸಬೇಕು ಎಂಬ ಆಶಯದೊಂದಿಗೆ ಇಂದು ರಾಜ್ಯಾದ್ಯಂತ 10 ಸಾವಿರ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 101 ಗಿಡಗಳನ್ನು ನೆಡಲಾಯಿತು.

    ಬೆಗಳೂರಿನಲ್ಲಿ ಅದಮ್ಯ ಚೇತನ ಸಂಸ್ಥೆ ಸಹಯೋಗದಲ್ಲಿ ಜ್ಞಾನಭಾರತಿ ಪ್ರದೇಶದಲ್ಲಿ ಸಾವಿರ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ನಿವೃತ್ತ ನ್ಯಾಯಮೂರ್ತಿ ಎನ್ ಕುಮಾರ್, ಆರ್‌ಎಸ್‍ಎಸ್ ಹಿರಿಯರಾದ ನಾಗರಾಜ್, ಬೆಂಗಳೂರು ವಿವಿ ವಿಸಿ, ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ಮಕ್ಕಳು ಸ್ವಯಂ ಪ್ರೇರಿತವಾಗಿ ಗಿಡ ನೆಟ್ಟರು. ಇದನ್ನೂ ಓದಿ: ಪಬ್ಲಿಕ್‌ ಟಿವಿ ಜ್ಞಾನದೀವಿಗೆ 2ನೇ ಆವೃತ್ತಿಗೆ ಬೊಮ್ಮಾಯಿ, ಸಿದ್ದರಾಮಯ್ಯ ಚಾಲನೆ


    ಹಲವು ಪ್ರಭೇದ ಸಸಿಗಳನ್ನು ನೆಟ್ಟು ಗೊಬ್ಬರ ಹಾಕಿ, ನೀರೆರೆಯಲಾಯ್ತು ಮೈಸೂರು, ಬೆಳಗಾವಿ, ಮಂಗಳೂರು, ಶಿವಮೊಗ್ಗ, ಮಂಡ್ಯ, ಧಾರವಾಡ ಸೇರಿ ಎಲ್ಲಾ ಜಿಲ್ಲೆಗಳಲ್ಲೂ ವನಮಹೋತ್ಸವ ನಡೆಯಿತು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಕದ ಸಂಭ್ರಮ – ಶಾಂತಿಧಾಮಕ್ಕೆ 25 ಲಕ್ಷ ರೂ. ವಿತರಣೆ

  • ವನಮಹೋತ್ಸವ: ಗೃಹ ರಕ್ಷಕ ದಳದಿಂದ ಒಂದು ಲಕ್ಷ ಗಿಡ ನೆಡುವ ಗುರಿ

    ವನಮಹೋತ್ಸವ: ಗೃಹ ರಕ್ಷಕ ದಳದಿಂದ ಒಂದು ಲಕ್ಷ ಗಿಡ ನೆಡುವ ಗುರಿ

    ಬೆಂಗಳೂರು : ಕರ್ನಾಟಕ ರಾಜ್ಯ ಗೃಹ ರಕ್ಷಕದಳ ವತಿಯಿಂದ ಬಿಇಎಲ್ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು.

    ಬಿಇಎಲ್ ಆವಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಇಎಲ್ ನ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕಿ ಹೇಮಾ ಆರ್.ರಾವ್ ಮತ್ತು ಬೆಂಗಳೂರು ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಗೋಪಾಲಕೃಷ್ಣ ಬಿ ಗೌಡರ್ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

    ಬಳಿಕ ಬೆಂಗಳೂರು ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಗೋಪಾಲಕೃಷ್ಣ ಬಿ ಗೌಡರ್ ಮಾತನಾಡಿ, ವನಮಹೋತ್ಸವ ಹಿನ್ನೆಲೆ ಬಿಇಎಲ್ ಆವರಣದಲ್ಲಿ 400 ಗಿಡಗಳನ್ನ ನೆಡಲಾಗಿದೆ. ಜೊತೆಗೆ ಗೃಹ ರಕ್ಷಕ ದಳದಿಂದ ಪ್ರತಿ ಗೃಹಕ್ಷಕರು 4 ರಿಂದ 5 ಗಿಡಗಳನ್ನ ರಸ್ತೆ ಬದಿ, ಸರ್ಕಾರಿ ಕಚೇರಿಗಳು ಆಸ್ಪತ್ರೆಗಳ ಶಾಲೆಗಳಲ್ಲಿ ನೆಡುವಂತೆ ಕರೆ ನೀಡಲಾಗಿದೆ. ಒಂದು ಲಕ್ಷ ಗಿಡ ನೆಡುವ ಗುರಿ ಹೊಂದಿದ್ದೇವೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಶ್ರೀಘ್ರದಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ ಎಂದರು.

    ಕಾರ್ಯಕ್ರಮದಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಎಂ ಗುರುರಾಜ್, ಜೀತೇಂದ್ರ ಸಿಂಗ್,ಶಂಕರಪ್ಪ ಸೇರಿದಂತೆ ಕಾರ್ಯಕ್ರಮದಲ್ಲಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.