Tag: ವನ್ಯ ಜೀವಿ

  • ವನ್ಯಜೀವಿಗಳ ವಸ್ತುಗಳನ್ನಿಟ್ಟುಕೊಂಡವರು 2-3 ತಿಂಗಳಲ್ಲಿ ವಾಪಸ್ ಮಾಡಬೇಕು: ಡೆಡ್‌ಲೈನ್ ನೀಡಿದ ಖಂಡ್ರೆ

    ವನ್ಯಜೀವಿಗಳ ವಸ್ತುಗಳನ್ನಿಟ್ಟುಕೊಂಡವರು 2-3 ತಿಂಗಳಲ್ಲಿ ವಾಪಸ್ ಮಾಡಬೇಕು: ಡೆಡ್‌ಲೈನ್ ನೀಡಿದ ಖಂಡ್ರೆ

    ಬೀದರ್: ವನ್ಯಜೀವಿಗಳ ಹಲ್ಲು, ಉಗುರು, ಅಂಗಾಂಗಗಳು, ಚರ್ಮ ಹಾಗೂ ಕೊಂಬುಗಳನ್ನು ಇಟ್ಟುಕೊಂಡವರು 2 ರಿಂದ 3 ತಿಂಗಲ್ಲಿ ವಾಪಸ್ ಮಾಡಬೇಕು ಎಂಬ ತೀರ್ಮಾನ ಮಾಡಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ಹೇಳಿಕೆ ನೀಡಿದ್ದಾರೆ.

    ಹಲವು ವರ್ಷಗಳಿಂದ ವನ್ಯಜೀವಿಗಳ (Wild Animal) ಉತ್ಪನ್ನಗಳನ್ನಿಟ್ಟುಕೊಂಡವರಿಗೆ ಬೀದರ್‌ನಲ್ಲಿ ಅರಣ್ಯ ಸಚಿವರು ಡೆಡ್‌ಲೈನ್ ನೀಡಿದ್ದಾರೆ. ಈಗಾಗಲೇ ಎಲ್ಲಾ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು ಡೆಡ್‌ಲೈನ್ ಬಗ್ಗೆ ಕರಡು ಪ್ರತಿ ರೆಡಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಜನರಿಗೆ ಈ ಬಗ್ಗೆ ಅರಿವು ಇಲ್ಲ. ಹೀಗಾಗಿ ಅವುಗಳನ್ನು ತಮ್ಮಲ್ಲಿಯೇ ಇರಿಸಿಕೊಂಡಿದ್ದು, ಅವುಗಳನ್ನು ಅರಣ್ಯ ಇಲಾಖೆಗೆ ವಾಪಸ್ ಕೊಡಲು ಒಂದು ಅವಕಾಶ ನೀಡುತ್ತಿದ್ದೇವೆ. ಸಿಎಂ ಜೊತೆ ಚರ್ಚೆ ಮಾಡಿ ತಿರ್ಮಾನ ಮಾಡಿದ್ದು, ನವೆಂಬರ್ 9ಕ್ಕೆ ಸಚಿವ ಸಂಪುಟದ ಸಭೆಯಲ್ಲಿ ಮಂಡನೆ ಮಾಡಿ ಜಾರಿಗೆ ತರುತ್ತೇವೆ ಎಂದರು. ಇದನ್ನೂ ಓದಿ: ದರ್ಶನ್ ವಿರುದ್ಧ ದೂರು ದಾಖಲಿಸಿದ್ದ ಮಹಿಳೆಗೆ ಪೊಲೀಸರಿಂದ ನೋಟಿಸ್

    ಕಳ್ಳಬೇಟೆ ಮಾಡೋದು ಅಪರಾಧವಿದೆ. ಅದನ್ನು ನಮ್ಮ ಇಲಾಖೆ ತಡೆಯುತ್ತದೆ ಎಂದು ಬೀದರ್‌ನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ವನ್ಯಜೀವಿಗಳ ಉತ್ಪನ್ನ ಬಳಸುತ್ತಿರುವವರಿಗೆ ಶಾಕ್ ನೀಡಿದ್ದಾರೆ. ಇದನ್ನೂ ಓದಿ: ಡಿಕೆಶಿ ನಿಷ್ಠಾವಂತರು, ಸಿಎಂ ಆಗಲು ಅರ್ಹರಿದ್ದಾರೆ – ಸಚಿವ ಕೆ.ಎನ್ ರಾಜಣ್ಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವನ್ಯಜೀವಿಯಿಂದ ಜೀವಹಾನಿ – ಸ್ಥಳ ಭೇಟಿಗೆ ಈಶ್ವರ್ ಖಂಡ್ರೆ ಸೂಚನೆ

    ವನ್ಯಜೀವಿಯಿಂದ ಜೀವಹಾನಿ – ಸ್ಥಳ ಭೇಟಿಗೆ ಈಶ್ವರ್ ಖಂಡ್ರೆ ಸೂಚನೆ

    – ಒತ್ತುವರಿ ತೆರವಿಗೆ ಆದೇಶ

    ಬೆಂಗಳೂರು: ರಾಜ್ಯದ ಯಾವುದೇ ಭಾಗದಲ್ಲಿ ವನ್ಯಜೀವಿಗಳ (Wild Animal) ದಾಳಿಯಿಂದ ಮಾನವ ಪ್ರಾಣಿ ಹಾನಿ ಆದರೆ, ಆಯಾ ವಲಯದ ಉನ್ನತ ಅರಣ್ಯಾಧಿಕಾರಿಗಳು ಆದ್ಯತೆಯ ಮೇಲೆ ಸ್ಥಳಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿ, ಪರಿಹಾರ ನೀಡಬೇಕು ಮತ್ತು ಪ್ರಾಣಿಗಳ ಸೆರೆಗೆ ಅಥವಾ ಕಾಡಿಗೆ ಕಳುಹಿಸಲು ಕ್ರಮ ವಹಿಸಬೇಕು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwara Khandre) ಸೂಚನೆ ನೀಡಿದ್ದಾರೆ.

    ಶುಕ್ರವಾರ ಬೆಂಗಳೂರಿನ (Bengaluru) ತಮ್ಮ ಕಚೇರಿಯಲ್ಲಿ ಅರಣ್ಯ ವೃತ್ತಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಕರಡಿಯ ದಾಳಿಯಿಂದ ಉತ್ತರ ಕನ್ನಡ ಜಿಲ್ಲೆ, ಯಲ್ಲಾಪುರ ವಿಭಾಗದ ಮರಗಡಿ ಗ್ರಾಮದಲ್ಲಿ ಜಮ್ಮು ಬಾಗು ಥೋರಟ್ (60) ಮೃತಪಟ್ಟಿರುವ ಬಗ್ಗೆ ಸಂತಾಪ ಸೂಚಿಸಿದ ಸಚಿವರು, ಕೂಡಲೇ ಪರಿಹಾರ ನೀಡುವಂತೆ ಆದೇಶ ನೀಡಿದರು.

    ಒತ್ತುವರಿ ತೆರವಿಗೆ ಸೂಚನೆ:
    ಧಾರವಾಡ ವಲಯದ ಕಲಘಟಗಿ ಬಳಿ 50 ಎಕರೆ ಅರಣ್ಯ ಭೂಮಿ ಒತ್ತುವರಿಯನ್ನು ತೆರವು ಮಾಡಿರುವ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಸಣ್ಣ ಮನೆ ಕಟ್ಟಿಕೊಂಡಿರುವ, 3 ಎಕರೆಗಿಂತ ಕಡಿಮೆ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ಬಡವರ ವಿಷಯದಲ್ಲಿ ಮಾನವೀಯತೆ ತೋರಿ. ಅರಣ್ಯವನ್ನು ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಮಾಡಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಎಂದು ಸೂಚಿಸಿದರು.

    ವನಮಹೋತ್ಸವ:
    ವನಮಹೋತ್ಸವದ ಅವಧಿಯಲ್ಲಿ ರಾಜ್ಯದಾದ್ಯಂತ ಯಾವ ಯಾವ ವೃತ್ತದಲ್ಲಿ ಎಷ್ಟು ಸಸಿ ನೆಡಲಾಗಿದೆ, ಎಷ್ಟು ಸಸಿಗಳನ್ನು ರೈತರಿಗೆ ನೀಡಲಾಗಿದೆ ಎಂಬ ವಿವರ ಪಡೆದ ಸಚಿವರು, ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಗುರಿ ಮೀರಿ ಸಾಧನೆ ಮಾಡಿ. ಮಳೆ ಕಡಿಮೆ ಇರುವ ಪ್ರದೇಶದಲ್ಲಿ ಈಗಾಗಲೇ ಬೆಳೆಸಿರುವ ಸಸಿಗಳನ್ನು ಮಳೆ ಹೆಚ್ಚಾಗಿ ಆಗಿರುವ ಪ್ರದೇಶದಲ್ಲಿ ನೆಟ್ಟು ಪೋಷಿಸಿ ಎಂದು ಸೂಚಿಸಿದರು. ಇದನ್ನೂ ಓದಿ: Nandini Milk: ನಂದಿನಿ ಹಾಲಿನ ದರ 3 ರೂ. ಹೆಚ್ಚಳ

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ವ್ಯಾಪ್ತಿ ಮತ್ತು ಹಸಿರು ವಲಯ ವ್ಯಾಪ್ತಿ ಕಡಿಮೆ ಇರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಸಚಿವರು, ಈ ಭಾಗದಲ್ಲಿ ಸರ್ಕಾರಿ ಕಚೇರಿಗಳ ಆವರಣ, ರಸ್ತೆಯ ಬದಿಗಳಲ್ಲಿ ಮತ್ತು ಸರ್ಕಾರಿ ಜಮೀನಿನಲ್ಲಿ ಎಲ್ಲೆಲ್ಲಿ ಸಸಿ ನೆಡಲು ಅವಕಾಶ ಇದೆಯೋ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡ ನೆಟ್ಟು, ಅದರ ಪೋಷಣೆಗೆ ಇತರ ಇಲಾಖೆಗಳ ನೆರವು ಪಡೆಯುವಂತೆ ತಿಳಿಸಿದರು.

    ಸಭೆಯಲ್ಲಿ ಅರಣ್ಯ, ವನ್ಯಜೀವಿ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಾದ ಸಂಜಯ್ ಬಿಜ್ಜೂರ್, ರಾಜೀವ್ ರಂಜನ್ ಮತ್ತಿತರರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಶಾಸಕತ್ವ ಅಸಿಂಧು ಕೋರಿ ಅರ್ಜಿ – ಜು.28 ಕ್ಕೆ ಹೈಕೋರ್ಟ್‌ನಿಂದ ವಿಚಾರಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 10 ದಿನಗಳಿಂದ ಹೊತ್ತಿ ಉರಿಯುತ್ತಿದೆ ರಾಷ್ಟ್ರೀಯ ಉದ್ಯಾನವನ

    10 ದಿನಗಳಿಂದ ಹೊತ್ತಿ ಉರಿಯುತ್ತಿದೆ ರಾಷ್ಟ್ರೀಯ ಉದ್ಯಾನವನ

    ಭುವನೇಶ್ವರ: ಏಷ್ಯಾದ ಎರಡನೇ ಅತೀ ದೊಡ್ಡ ಬಯೋಸ್ಫಿಯರ್ ರಿಸರ್ವ್ ಎನಿಸಿಕೊಂಡಿರುವ ಒಡಿಶಾದ ಸಿಮ್ಲಿಪಾಲ ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 10 ದಿನಗಳಿಂದ ಹೊತ್ತಿ ಉರಿಯುತ್ತಿದೆ.

    ಕಳೆದ ವಾರ ಕಾಣಿಸಿಕೊಂಡ ದಿಢೀರ್ ಬೆಂಕಿಯಿಂದ ಅಪಾರವಾದ ವನ್ಯ ಸಂಪತ್ತು ಹಾನಿಗೊಳಗಾಗಿದೆ. ಈಗಾಗಲೇ ಕಾಡ್ಗಿಚ್ಚು ಮತ್ತಷ್ಟು ವಿಸ್ತರಿಸಿದ್ದು, ಉದ್ಯಾನವನದಲ್ಲಿ ಹೊತ್ತು ಉರಿಯುತ್ತಿರುವ ಬೆಂಕಿಯನ್ನ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

    ಸ್ಥಳದಲ್ಲಿ ಅರಣ್ಯ ಇಲಾಖೆ, ಹೆಚ್ಚುವರಿ ಸಿಬ್ಬಂದಿ ಮತ್ತು ಹೆಚ್ಚಿನ ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ. ಸಿಮ್ಲಿಪಾಲ ರಾಷ್ಟೀಯ ಉದ್ಯಾನವನವು ಹುಲಿ ಮೀಸಲು ಪ್ರದೇಶವಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ ಎಂದು ಒಡಿಶಾ ಸರ್ಕಾರ ವರದಿ ಮಾಡಿದೆ. ಆದರೆ ಪ್ರಾಣಿಗಳಿಗೆ ಹಾನಿಯಾಗಿದೆಯಾ ಅನ್ನೋದು ತಿಳಿದುಬಂದಿಲ್ಲ.

  • ಮಧ್ಯಪ್ರದೇಶದಿಂದ ಬಂದಿದ್ದ ಶ್ರೀಗಂಧ ಚೋರರು ಧಾರವಾಡದಲ್ಲಿ ಅರೆಸ್ಟ್

    ಮಧ್ಯಪ್ರದೇಶದಿಂದ ಬಂದಿದ್ದ ಶ್ರೀಗಂಧ ಚೋರರು ಧಾರವಾಡದಲ್ಲಿ ಅರೆಸ್ಟ್

    ಧಾರವಾಡ: ಜಿಲ್ಲೆಯ ಅರಣ್ಯ ಇಲಾಖೆ ಅಂತರಾಜ್ಯ ಶ್ರೀಗಂಧ ಕಳ್ಳರ ತಂಡವನ್ನು ಬೇಧಿಸಿ 4 ಮಂದಿಯನ್ನು ಬಂಧಿಸಿದೆ.

    ಧಾರವಾಡ ಜಿಲ್ಲೆಯಲ್ಲಿ ಶ್ರೀಗಂಧ ಹಾಗೂ ವನ್ಯ ಜೀವಿ ಸಂಪತ್ತಿಗೆ ಕನ್ನ ಹಾಕುತ್ತಿದ್ದ 20 ಜನರ ಈ ಕಳ್ಳರ ತಂಡ, ಮಧ್ಯಪ್ರದೇಶದಿಂದ ರಾಜ್ಯಕ್ಕೆ ಗುಡಿ ಕೈಗಾರಿಕಾ ವಸ್ತುಗಳ ಮಾರಾಟ ವೇಶದಲ್ಲಿ ಬಂದಿದ್ದರು. ಸದ್ಯ ಧಾರವಾಡ ಅರಣ್ಯ ಇಲಾಖೆ 4 ಮಹಿಳೆಯರನ್ನು ಬಂಧಿಸಿದ್ದು, ಉಳಿದ 16 ಜನರ ಬಂಧನಕ್ಕೆ ಜಾಲ ಬಿಸಿದೆ.

    ಧಾರವಾಡ ಜಿಲ್ಲೆಯ ತೋಟದ ಮನೆಯ ಸಿಸಿಟಿವಿಯಲ್ಲಿ ಈ ಕಳ್ಳರ ಓಡಾಟ ಎಲ್ಲಾ ಸೆರೆಯಾಗಿದೆ. ಬಂಧನಕ್ಕೆ ಒಳಗಾದವರಲ್ಲಿ ಅಧೂರಿ ಠಾಕೂರ್, ಪುಂಜಿ ಆದಿವಾಸಿ, ಗರ್ಮಾಬಾಯಿ ಹಾಗೂ ಜಾಮುಂಡಿ ಆದಿವಾಸಿ ಎಂಬ ಮಹಿಳೆಯರಿದ್ದು, ಅವರಿಂದ ಒಟ್ಟು 9 ಕೆಜಿ ಶ್ರೀಗಂಧ ಹಾಗೂ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ.

    ಸದ್ಯ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.