Tag: ವನ್ಯಜೀವಿ ಕಾಯ್ದೆ

  • ನವಿಲುಗರಿ ಧರಿಸಿದ್ದ ಮಾತ್ರಕ್ಕೆ ಪ್ರಧಾನಿಯವರನ್ನು ಹಿಡಿದುಕೊಂಡು ಹೋಗಬೇಕಾ: ಹರಿಪ್ರಸಾದ್ ಪ್ರಶ್ನೆ

    ನವಿಲುಗರಿ ಧರಿಸಿದ್ದ ಮಾತ್ರಕ್ಕೆ ಪ್ರಧಾನಿಯವರನ್ನು ಹಿಡಿದುಕೊಂಡು ಹೋಗಬೇಕಾ: ಹರಿಪ್ರಸಾದ್ ಪ್ರಶ್ನೆ

    ಚಿತ್ರದುರ್ಗ: ಈ ಹಿಂದೆ ಪ್ರಧಾನಮಂತ್ರಿಯವರು ನವಿಲು ಗರಿ (Peacock feather)  ಧರಿಸಿದ್ದರು, ನವಿಲು ಸಾಕಿದ್ದರು. ಹಾಗೆಂದ ಮಾತ್ರಕ್ಕೆ ಪೊಲೀಸರು (Police) ಅವರನ್ನು ಹಿಡಿದುಕೊಂಡು ಹೋಗಬೇಕಾ? ಫ್ಯಾಷನ್‌ಗಾಗಿ ಹುಲಿ ಉಗುರು ಇತರೆ ವಸ್ತು ಬಳಸುವುದು ಸರಿಯಲ್ಲ, ವನ್ಯಜೀವಿ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಿದವರು ಯಾರೇ ಆಗಿರಲಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ಆಗ್ರಹಿಸಿದ್ದಾರೆ.

    ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಲಿ ಉಗುರು, ಕರಡಿ ಕೂದಲು ಸೇರಿದಂತೆ ಆನೆ ಕೂದಲು, ದಂತ ಹಾಗೂ ಇತರೆ ವಸ್ತುಗಳನ್ನು ಧರಿಸಿ ಕಾಡುಪ್ರಾಣಿಗಳನ್ನು ಅಣಕಿಸುವ ಕಾರ್ಯಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕಬ್ಬು ಬೆಳೆಯುವ ಉತ್ಸಾಹ – 20 ವರ್ಷಗಳಿಂದ ಮುಚ್ಚಿದ ಸಕ್ಕರೆ ಫ್ಯಾಕ್ಟರಿಯನ್ನು ತೆರೆಯಲು ಸರ್ಕಾರದ ಬೆನ್ನತ್ತಿದ ರೈತರು

    ಇದೇ ವೇಳೆ ದರ್ಗಾದಲ್ಲಿ, ಮೌಲ್ವಿಗಳಿಂದ ನವಿಲು ಗರಿ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಧಾನ ಮಂತ್ರಿಗಳೂ (Prime Minister) ನವಿಲು ಸಾಕಿದ್ದರು, ನವಿಲು ಗರಿ ಧರಿಸಿದ್ದರು. ಹಾಗಂತ ಪ್ರಧಾನಿಯವರನ್ನ ಪೊಲೀಸರು ಹಿಡಿದುಕೊಂಡು ಹೋಗಬೇಕಾ? ದರ್ಗಾಗಳಲ್ಲಿ ಮೌಲ್ವಿಗಳು ಬಳಸುವ ನವಿಲುಗರಿ ಕೂಡ ನೈಸರ್ಗಿಕವಾಗಿ ಉದುರುತ್ತದೆ. ಒಂದು ವೇಳೆ ನವಿಲನ್ನು ಕೊಂದು ಗರಿ ತಂದಿದ್ದರೆ ಅಂಥವರ ವಿರುದ್ಧವೂ ಕ್ರಮವಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಇದೇ ವೇಳೆ ಎರಡೂವರೆ ವರ್ಷಗಳ ಬಳಿಕ ಸಿಎಂ ಬದಲಾವಣೆ ವಿಚಾರ ಯಾರಿಗೂಗೊತ್ತಿಲ್ಲ. ಅದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮುಖಂಡರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಸೇರಿದಂತೆ ವೇಣುಗೋಪಾಲ್ ಮತ್ತು ಸಿಎಂ, ಡಿಸಿಎಂಗೆ ಮಾತ್ರ ಗೊತ್ತಿದೆ. ಆ ಬಗ್ಗೆ ಬೇರೆ ಯಾರೂ ಹೇಳೋಕಾಗಲ್ಲ. ಅವರವರ ವೈಯಕ್ತಿಕ ಅಭಿಪ್ರಾಯ ಹೇಳಬಹುದು ಅಷ್ಟೇ ಎಂದು ಜಾರಿಕೊಂಡಿದ್ದಾರೆ. ಇದನ್ನೂ ಓದಿ: ಕಾರ್ಯಕರ್ತರಲ್ಲಿ ಸಾಮರಸ್ಯ ಮೂಡದಿದ್ರೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಸಂಘರ್ಷವಾಗಲಿದೆ: ರೇಣುಕಾಚಾರ್ಯ

    ಶಾಸಕರ ಟೀಂ ಜೊತೆ ಸಚಿವ ಸತೀಶ್ ಜಾರಕಿಹೊಳಿ ದುಬೈ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದುಬೈ ರೀತಿ ರಾಜ್ಯದ ಅಭಿವೃದ್ಧಿಗಾಗಿ ಶಾಸಕರನ್ನು ಸತೀಶ್ ಕರೆದೊಯ್ದರೆ ಆಶ್ಚರ್ಯವಿಲ್ಲ. ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್; ಆರೋಪಿ ಸುಳಿವು ಕೊಟ್ಟವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸಿದ NIA

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಿಪ್ಪು ಸುಲ್ತಾನ್ ಹುಲಿ ಕೊಲ್ಲುತ್ತಿರುವ ಫೋಟೋ ಹಾಕಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಿ – ಆರಗ ಆಗ್ರಹ

    ಟಿಪ್ಪು ಸುಲ್ತಾನ್ ಹುಲಿ ಕೊಲ್ಲುತ್ತಿರುವ ಫೋಟೋ ಹಾಕಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಿ – ಆರಗ ಆಗ್ರಹ

    ಶಿವಮೊಗ್ಗ: ರಾಜ್ಯದಲ್ಲಿ ಹುಲಿ ಉಗುರು (Tiger Claws) ಧರಿಸಿದ ವ್ಯಕ್ತಿಗಳ ವಿರುದ್ಧ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದು, ಹಲವರನ್ನು ವಶಕ್ಕೆ ಪಡೆಯುತ್ತಿದ್ದಾರೆ. ಈ ಪ್ರಕರಣ ಗಮನಿಸಿದರೆ ಅರಣ್ಯಾಧಿಕಾರಿಗಳು (Forest Officer) ಪ್ರಚಾರದ ಗೀಳಿಗೆ ಬಿದ್ದಂತಿದೆ. ವನ್ಯಜೀವಿ ಕಾಯ್ದೆ (Wildlife Act) ಜಾರಿಗೆ ಬರುವ ಮೊದಲು ಸಂಗ್ರಹ ಮಾಡಿ ಇಟ್ಟುಕೊಂಡಿರುವವರನ್ನು ಬಿಡುಗಡೆ ಮಾಡಿ ಇಲ್ಲವೇ, ಟಿಪ್ಪು ಸುಲ್ತಾನ್ ಹುಲಿ ಕೊಲ್ಲುತ್ತಿರುವ ಫೋಟೋ ಹಾಕಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆಗ್ರಹಿಸಿದ್ದಾರೆ.

    ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಇದನ್ನೇ ದಾಳವಾಗಿರಿಸಿಕೊಂಡು ಪೆಂಡೆಂಟ್ ಧರಿಸಿದ ಅನೇಕರ ಫೋಟೋಗಳನ್ನ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಫೋಟೋ ಕಂಡು ಬಂದ ಎಲ್ಲರ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ. 1972ರ ವನ್ಯಜೀವಿ ಕಾಯ್ದೆ ಹಿಂದಿನ ಪ್ರಕರಣ ಕೈಬಿಡಿ, ಇಲ್ಲವೇ ಟಿಪ್ಪು ಸುಲ್ತಾನ್ (Tipu Sultan) ಹುಲಿ ಕೊಲ್ಲುತ್ತಿರುವ ಫೋಟೋ ಹಾಕಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ಇದು ಸಹ ಹುಲಿ ಕೊಲ್ಲಲ್ಲು ಬೇರೆಯವರಿಗೆ ಪ್ರೇರಣೆ ನೀಡಬಹುದು ಎಂದು ಒತ್ತಾಯಿಸಿದ್ದಾರೆ.

    ಜೊತೆಗೆ ಮಸೀದಿಗಳಲ್ಲಿ ಮುಸ್ಲಿಂ ಮೌಲ್ವಿಗಳು ನವಿಲುಗರಿ ಇಟ್ಟುಕೊಂಡಿರುತ್ತಾರೆ. ನವಿಲುಗರಿಯಿಂದ ತಲೆಯ ಮೇಲೆ, ಭುಜದ ಮೇಲೆ ಹೊಡೆಯುತ್ತಾರೆ. ನವಿಲು ರಾಷ್ಟ್ರೀಯ ಪಕ್ಷಿ ಆಗಿರುವುದರಿಂದ ಅವರ ಮೇಲೆಯೂ ಕ್ರಮ ಕೈಗೊಳ್ಳಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ದಾಳಿ ನಡೆಸಿ ಹಮಾಸ್‌ ಕಮಾಂಡರ್‌ ಹತ್ಯೆ; 36 ಮಂದಿ ಬಂಧಿಸಿದ ಇಸ್ರೇಲ್‌ ರಕ್ಷಣಾ ಪಡೆ

    ಮಲೆನಾಡು ಹಾಗೂ ಕರಾವಳಿ ಭಾಗದ ಮನೆಗಳಲ್ಲಿ ನೂರಾರು ವರ್ಷಗಳಿಂದ ಕಾಡೆಮ್ಮೆ, ಜಿಂಕೆ ಕೊಂಬುಗಳನ್ನು ಮನೆಯಲ್ಲಿ ಅಲಂಕಾರಿಕ ವಸ್ತುಗಳಾಗಿ ಬಳಸುತ್ತಿದ್ದಾರೆ. ಈ ಹಿಂದೆ ಹುಲಿ ಉಗುರು ರೀತಿಯ ವಸ್ತುಗಳನ್ನು ಮಾರಾಟ ಮಾಡಲು ಹಳ್ಳಿಗಳ ಕಡೆ ಬರುತ್ತಿದ್ದರು. ಅದನ್ನು‌ ಜನರು ಕೊಂಡುಕೊಳ್ಳುತ್ತಿದ್ದರು. ಮಕ್ಕಳ ಕೊರಳಿಗೆ ಕಟ್ಟಿದ್ದರೆ ಧೈರ್ಯದ ಪ್ರತೀಕ ಎಂದು‌ ಭಾವಿಸಿದ್ದರು. ಇತ್ತೀಚೆಗೆ ಶ್ರೀಮಂತರು ಅದನ್ನು ಚಿನ್ನದ ಸರಕ್ಕೆ ಪೆಂಡೆಂಟ್ ರೂಪದಲ್ಲಿ ಮಾಡಿಸಿಕೊಂಡು ಹಾಕಿಕೊಳ್ಳುತ್ತಿದ್ದಾರೆ. ಆದ್ರೆ ಅರಣ್ಯಾಧಿಕಾರಿಗಳು ಹಿಂದೆ-ಮುಂದೆ ನೋಡದೇ ಕ್ರಮ ಜರುಗಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ನಾನು ವನ್ಯಜೀವಿ ಕಾಯ್ದೆ ವಿರೋಧಿಯಲ್ಲ, ವನ್ಯಜೀವಿ ಕಾಯ್ದೆ ಜಾರಿಗೆ ಬರುವ ಮೊದಲು ಸಂಗ್ರಹ ಮಾಡಿ ಇಟ್ಟುಕೊಂಡಿರುವವರನ್ನು ಬಿಡುಗಡೆ ಮಾಡಬೇಕು. ಎಲ್ಲರನ್ನು ಹಿಡಿದು ಜೈಲಿಗೆ ಹಾಕಿದರೆ, ಈ ರಾಜ್ಯದ ಜೈಲುಗಳು ಸಾಕಾಗುವುದಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಮಧ್ಯ ಪ್ರವೇಶ ಮಾಡಬೇಕು. ಮುಖ್ಯಮಂತ್ರಿ, ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕುಳಿತು ಚರ್ಚೆ ಮಾಡಿ ನಂತರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್; ಆರೋಪಿ ಸುಳಿವು ಕೊಟ್ಟವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸಿದ NIA

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಲಿ ಗಣತಿ ಹೇಗೆ ಮಾಡ್ತಾರೆ? ಇಲ್ಲಿದೆ ಮಾಹಿತಿ

    ಹುಲಿ ಗಣತಿ ಹೇಗೆ ಮಾಡ್ತಾರೆ? ಇಲ್ಲಿದೆ ಮಾಹಿತಿ

    ರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳ ಬೇಕಾದರೆ ಎಲ್ಲಾ ರೀತಿ ಪ್ರಾಣಿ ಪಕ್ಷಿಗಳ ಇರುವಿಕೆ ಅಗತ್ಯ. ಈ ನಿಟ್ಟಿನಲ್ಲಿ ವಿಶ್ವದ ಎಲ್ಲಾ ಕಡೆ ಪ್ರಕೃತಿಯ ಸಮತೋಲನ ಕಾಪಾಡಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅದರಂತೆ ವನ್ಯ ಪ್ರಾಣಿಗಳನ್ನು ಸಂಪತ್ತೆಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ವನ್ಯ ಜೀವಿಗಳನ್ನು ಹಾಗೂ ಅಳಿವಿನಂಚಿನ ಪ್ರಾಣಿಗಳನ್ನು ರಕ್ಷಿಸಲು ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಭಾರತದಲ್ಲಿ ಹುಲಿಗಳ ಗಣತಿಯನ್ನು (Tiger Estimation) 1973 ರಲ್ಲಿ ಪ್ರಾರಂಭಿಸಲಾಯಿತು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಗಣತಿಯನ್ನು ನಡೆಸಲಾಗುತ್ತದೆ.

    ಪ್ರಪಂಚದಲ್ಲೇ ಮೊದಲ ಹುಲಿ ಗಣತಿ ಭಾರತದಲ್ಲೇ ಆರಂಭವಾಗಿದ್ದು. ಜಾರ್ಖಂಡ್‌ನ (Jharkhand) ಪಲ್ಮಾವ್ ಹುಲಿ ರಕ್ಷಿತಾರಣ್ಯದಲ್ಲಿ ಮೊದಲಬಾರಿಗೆ ನಡೆಸಲಾಗಿತ್ತು. ಬಳಿಕ 1972ರಲ್ಲಿ ವನ್ಯಜೀವಿ ಕಾಯ್ದೆ (Wildlife Protection Act 1972) ಜಾರಿಗೆ ಬಂದ ನಂತರ ಅದೇ ವರ್ಷ ಹುಲಿ ಗಣತಿಯನ್ನು ರಾಜಸ್ಥಾನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕೈಲಾಸ್ ಸಂಕಲ್ ಆರಂಭಿಸಿದರು. ಸಮೀಕ್ಷೆಗಾಗಿ ಭಾರತವನ್ನು ಐದು ವಲಯಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಗಂಗಾ ಬಯಲು, ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳು, ಪಶ್ಚಿಮ ಘಟ್ಟಗಳು, ಈಶಾನ್ಯ ಬೆಟ್ಟಗಳು ಮತ್ತು ಬ್ರಹ್ಮಪುತ್ರ ಪ್ರವಾಹ ಬಯಲು ಪ್ರದೇಶಗಳು ಮತ್ತು ಸುಂದರಬನಗಳು. ಇದನ್ನೂ ಓದಿ: ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ನಂ.1 – ರಾಜ್ಯದಲ್ಲಿ ಬಂಡೀಪುರಕ್ಕೆ ಮೊದಲ ಸ್ಥಾನ

    ಹುಲಿಗಳ ಹೆಜ್ಜೆ ಗುರುತು ಮಾನವನ ಬೆರಳಚ್ಚುಗಳಂತೆ ಪ್ರತಿ ಹುಲಿಯು ವಿಶಿಷ್ಟವಾದ ಹೆಜ್ಜೆಗುರುತನ್ನು ಹೊಂದಿರುತ್ತದೆ. ಇದರಿಂದಾಗಿ ಅರಣ್ಯ ಅಧಿಕಾರಿಗಳು ಹುಲಿಗಳ ಸಂಖ್ಯೆಗಳನ್ನು ಲೆಕ್ಕ ಹಾಕಲು ಗಾಜು ಮತ್ತು ಕಾಗದವನ್ನು ಬಳಸಿ ಹೆಜ್ಜೆಯನ್ನು ಸಂಗ್ರಹಿಸಿ ಮಾಹಿತಿ ಕಲೆಹಾಕುತ್ತಾರೆ. ಮುಂದಿನ ದಿನಗಳಲ್ಲಿ ಲೆಕ್ಕ ಹಾಕುವಾಗ ಹಳೆಯ ಹೆಜ್ಜೆಗುರುತುಗಳ ಮೂಲಕ ಮೊದಲಿನ ಹುಲಿಗಳನ್ನು ಗುರುತಿಸಬಹುದಾಗಿದೆ.

    ಆದರೆ ಹುಲಿಯ ಹೆಜ್ಜೆ ಗುರುತುಗಳು ನಿಂತಿರುವಾಗ, ಓಡುವಾಗ ಮತ್ತು ವಿಶ್ರಾಂತಿ ಪಡೆಯುವಾಗ ಭಿನ್ನವಾಗಿರುತ್ತವೆ. ಇದು ಗಣತಿಗೆ ಸ್ವಲ್ಪ ಮಟ್ಟದ ತೊಡಕಾಗಿದೆ. ಇದೇ ಕಾರಣಕ್ಕೆ ಈಗ ರೇಡಿಯೋ ಕಾಲರ್‌ಗಳನ್ನು ಹುಲಿಗಳಿಗೆ ಅಳವಡಿಸಿ, ಕ್ಯಾಮೆರಾ ಟ್ರ್ಯಾಪ್ ಬಳಸಿ ಹುಲಿಗಳ ಸಂಖ್ಯೆಯನ್ನು ಅಂದಾಜಿಸಲಾಗುತ್ತದೆ. ವಿಶ್ವದ 75% ಹುಲಿಗಳು ಭಾರತದಲ್ಲಿವೆ. ಅಲ್ಲದೇ ಗಣತಿಗೆ ಅತೀ ಹೆಚ್ಚು ಕ್ಯಾಮೆರಾ ಟ್ರ್ಯಾಪಿಂಗ್ ಬಳಸುವ ದೇಶ ನಮ್ಮದಾಗಿದೆ. ಈ ಬಾರಿ ಜಿಪಿಎಸ್ ತಂತ್ರಾಂಶ ಬಳಸಲಾಗುತ್ತಿದೆ.

    ಇದರೊಂದಿಗೆ ಅರಣ್ಯ ಅಧಿಕಾರಿಗಳ ತಂಡ ಹೆಜ್ಜೆ ಗುರುತು, ಲದ್ದಿ, ಮರಗಳಿಗೆ ಉಜ್ಜಿದ ಗುರುತುಗಳು, ಗರ್ಜನೆ ಬಗ್ಗೆ ಸಂಕ್ಷಿಪ್ತ ಮಾಹಿತಿ ದಾಖಲು ಮಾಡುತ್ತಾರೆ. ಈ ವೇಳೆ ಕಣ್ಣಿಗೆ ಬಿದ್ದ ಪ್ರಾಣಿಗಳ ಸಂಖ್ಯೆ, ನೋಡಿದ ಸಮಯ, ಪ್ರಭೇದ ಮತ್ತು ಗುಂಪಿನ ಪ್ರಮಾಣ ಗುರುತಿಸುತ್ತಾರೆ. ವಾಪಸಾಗುವಾಗ ಸಸ್ಯ ಸಂಪತ್ತು, ಮಾನವ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಎಲ್ಲಾ ರೀತಿಯ ಪರಿಶೀಲನೆಯ ನಂತರ ಹುಲಿಗಳ ಸಂಖ್ಯೆಯನ್ನು ದಾಖಲಿಸಲಾಗುತ್ತದೆ.

    2018-19ರ ಹುಲಿ ಗಣತಿಯ ಸಮಯದಲ್ಲಿ ಭಾರತದಲ್ಲಿ ಸುಮಾರು 26,838 ಸ್ಥಳಗಳಲ್ಲಿ 27,000 ಕ್ಯಾಮೆರಾ ಟ್ರ‍್ಯಾಪ್‌ಗಳನ್ನು ಬಳಸಲಾಗಿತ್ತು. ಇದರಿಂದಾಗಿ 34 ಮಿಲಿಯನ್‌ಗಿಂತಲೂ ಹೆಚ್ಚು ಚಿತ್ರಗಳನ್ನು ತೆಗೆಯಲಾಗಿತ್ತು. ಅದರಲ್ಲಿ 2967 ಹುಲಿಗಳು ಇರುವುದು ಪತ್ತೆಯಾಗಿದ್ದವು.

    ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಪ್ರಾಣಿಗಳು ಓಡಾಡುವ ಜಾಗಗಳು, ನದಿಪಾತ್ರಗಳಲ್ಲಿ ಕ್ಯಾಮೆರಾ ಟ್ರ‍್ಯಾಪ್‌ಗಳನ್ನು ಸ್ಥಾಪಿಸುತ್ತದೆ. ಇದನ್ನೂ ಹುಲಿಯ ಎರಡೂ ಬದಿಗಳನ್ನು ಸೆರೆಹಿಡಿಯಲು ಅನುಕೂಲವಾಗುವಂತೆ ಕ್ಯಾಮೆರಾ ಟ್ರ‍್ಯಾಪ್‌ಗಳನ್ನು ಜೋಡಿಯಾಗಿ ಹೊಂದಿಸಲಾಗುತ್ತದೆ. ಹಿಂದೆ 2005ರವರೆಗೂ ಹೆಜ್ಜೆಯನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂಲಕ ಅಚ್ಚು ಹಾಕಿಸಲಾಗುತ್ತಿತ್ತು.

    ಈ ಬಾರಿ ಭಾರತದಲ್ಲಿ (India) ಹುಲಿಗಳ ಸಂಖ್ಯೆ 3,167 ಆಗಿದೆ. ಹುಲಿಗಳ ಸಂಖ್ಯೆ ಕಳೆದ ಬಾರಿ ಇದ್ದ 2,967 ರಿಂದ 3,167 ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಸರ್ಕಾರ ಮಾಡುವಾಗ ದಮ್ಮಯ್ಯ ಬನ್ನಿ ಅಂತಾ ಕರೆದ್ರು, ಈಗ ಬರ್ತೀವಿ ಅಂದ್ರೂ ಸೇರಿಸಿಕೊಳ್ಳೋರಿಲ್ಲ: ವಿಶ್ವನಾಥ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಾವು ಹಿಡಿದು ಪ್ರದರ್ಶನ – ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಅರಣ್ಯಾಧಿಕಾರಿಗೆ ದೂರು

    ಹಾವು ಹಿಡಿದು ಪ್ರದರ್ಶನ – ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ಅರಣ್ಯಾಧಿಕಾರಿಗೆ ದೂರು

    ಚಿಕ್ಕಬಳ್ಳಾಪುರ: ಜೀವಂತ ಹಾವು (Snake) ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಇಶಾ ಫೌಂಡೇಶನ್ (Isha Foundation) ಸಂಸ್ಥಾಪಕ ಜಗ್ಗಿ ವಾಸುದೇವ್ (Sadhguru Jaggi Vasudev) ವಿರುದ್ಧ ಅರಣ್ಯಾಧಿಕಾರಿಗೆ ದೂರು ನೀಡಲಾಗಿದೆ.

    ಇತ್ತೀಚೆಗೆ ನಡೆದ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಜಗ್ಗಿ ವಾಸುದೇವ್ ಅವರು ಜೀವಂತ ಹಾವನ್ನು ಹಿಡಿದು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದರು. ಈ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಎಸ್‌ಪಿಸಿಎ ಸಂಸ್ಥೆ ಸದಸ್ಯ ಹಾಗೂ ಉರಗರಕ್ಷಕ ಪೃಥ್ವಿರಾಜ್ ಚಿಕ್ಕಬಳ್ಳಾಪುರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ (Forest Officer) ರಮೇಶ್ ಅವರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ರಣರೋಚಕ T20 ವಿಶ್ವಕಪ್ ಆರಂಭ – ಟೀಂ ಇಂಡಿಯಾದತ್ತ ಎಲ್ಲರ ಚಿತ್ತ

    ವನ್ಯಜೀವಿಗಳನ್ನು ಹಿಡಿದು ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶನ ಮಾಡುವುದು `ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ’ (Wildlife Act) ಸ್ಪಷ್ಟ ಉಲ್ಲಂಘನೆ ಆಗುತ್ತದೆ.

    Live Tv
    [brid partner=56869869 player=32851 video=960834 autoplay=true]