Tag: ವಧುದಕ್ಷಿಣೆ

  • ವಧುದಕ್ಷಿಣೆ ಕಡಿಮೆ ಆಯ್ತು ಅಂತಾ ಮದುವೆ ಬೇಡವೆಂದ ಯುವತಿ – ಪ್ರಕರಣ ದಾಖಲಿಸದ ಪೊಲೀಸರು

    ವಧುದಕ್ಷಿಣೆ ಕಡಿಮೆ ಆಯ್ತು ಅಂತಾ ಮದುವೆ ಬೇಡವೆಂದ ಯುವತಿ – ಪ್ರಕರಣ ದಾಖಲಿಸದ ಪೊಲೀಸರು

    ಹೈದರಾಬಾದ್: ವರದಕ್ಷಿಣೆ ವಿಚಾರಕ್ಕೆ ಬಹಳಷ್ಟು ಮದುವೆಗಳು ಮುರಿದಿರುವುದನ್ನು ನಾವು ಕಂಡಿದ್ದೇವೆ. ಆದರೆ ಹೈದರಾಬಾದ್ (Hyderabad) ಹೊರವಲಯ ಘಟ್‍ಕೇಸರ್‌ನಲ್ಲಿ (Ghatkesar) ನಡೆಯುತ್ತಿದ್ದ ಮದುವೆಯೊಂದು (Marriage) ವಧುದಕ್ಷಿಣೆ (Dowry) ವಿಚಾರಕ್ಕೆ ಮುರಿದು ಹೋಗಿದೆ.

    ಮದುವೆಗೂ ಮುನ್ನ ವಧುದಕ್ಷಿಣೆಯಾಗಿ ಎರಡು ಲಕ್ಷ ರೂ. ನೀಡಲು ಮಾತುಕತೆ ನಡೆದಿತ್ತು. ಇದಕ್ಕೆ ಒಪ್ಪಿದ್ದ ವರನ ಕುಟುಂಬಸ್ಥರು ಹಣವನ್ನು ವಧುವಿನ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದರು. ಮದುವೆಗೆ ಎಲ್ಲಾ ತಯಾರಿಗಳೂ ನಡೆದಿದ್ದವು. ಆದರೆ ಕಡೆ ಕ್ಷಣದಲ್ಲಿ ಮನಸ್ಸು ಬದಲಿಸಿದ ಯುವತಿ ವಧುದಕ್ಷಿಣೆ ಕಡಿಮೆಯಾಗಿದೆ ಎಂದು ಆರೋಪಿಸಿ ಮದುವೆಗೆ ನಿರಾಕರಿಸಿದ್ದಾಳೆ. ಇದನ್ನೂ ಓದಿ: ಮದುವೆಗೆ ವಿರೋಧ – ಬೆಟ್ಟದಿಂದ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ

    ಅಶ್ವರಾವ್‍ಪೇಟೆಯಿಂದ (Aswaraopeta) ವಿವಾಹ ಸ್ಥಳಕ್ಕೆ ತೆರಳಬೇಕಿದ್ದ ವಧು ಮದುವೆಗೆ ನಿರಾಕರಿಸಿ ಮನೆಯಲ್ಲೆ ಉಳಿದುಕೊಂಡಿದ್ದಾಳೆ. ಯುವತಿಯ ನಿರ್ಧಾರ ತಿಳಿಯುತ್ತಿದ್ದಂತೆ ವರನ ಮನೆಯವರು ಆಘಾತಗೊಂಡಿದ್ದಾರೆ. ಪೊಲೀಸ್ ಠಾಣೆಗೆ ತೆರಳಿ ವಧುವಿನ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

    ಪೊಲೀಸರು ವಧುವಿನ (Bride) ಕುಟುಂಬಸ್ಥರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ನಂತರ ಯುವತಿ ಮದುವೆಗೆ ಆಸಕ್ತಿ ಹೊಂದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ಸಂಧಾನ ನಡೆಸಿದ್ದಾರೆ. ದೂರು ದಾಖಲಿಸದೇ ಪ್ರಕರಣ ಅಂತ್ಯಗೊಳಿಸಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ಅಂದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ವಾಕಿಂಗ್ ಮಾಡಿದಂತಲ್ಲ: ತೇಜಸ್ವಿ

  • ವಧುದಕ್ಷಿಣೆ ಬದಲಾಗಿ 46,000 ರೂ. ಮೌಲ್ಯದ ಪುಸ್ತಕಕ್ಕೆ ಬೇಡಿಕೆ ಇಟ್ಟ ವಧು!

    ವಧುದಕ್ಷಿಣೆ ಬದಲಾಗಿ 46,000 ರೂ. ಮೌಲ್ಯದ ಪುಸ್ತಕಕ್ಕೆ ಬೇಡಿಕೆ ಇಟ್ಟ ವಧು!

    ಇಸ್ಲಾಮಾಬಾದ್: ಪಾಕಿಸ್ತಾನದ ಮದುಮಗಳು ವಧುದಕ್ಷಿಣೆ ರೂಪದಲ್ಲಿ ನೀಡುವ ಹಣ ಹಾಗೂ ಆಭರಣಗಳ ಬದಲಾಗಿ ಪಿಕೆಆರ್ 1,00,000(46,600 ರೂ.) ಮೌಲ್ಯದ ಪುಸ್ತಕ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಪಾಕಿಸ್ತಾನದ ಮರ್ದಾನ್ ನಗರದ ನೈಲಾ ಶಮಾಲ್ ಎಂಬವರು ತಮ್ಮ ವಿವಾಹದಲ್ಲಿ ಈ ರೀತಿಯ ಬೇಡಿಕೆ ಇಡಲು ಹಲವಾರು ಉದಾಹರಣೆಗಳನ್ನು ನೀಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ನೈಲಾ, ಹಣ ಹಾಗೂ ಆಭರಣದ ಬದಲಾಗಿ ಪುಸ್ತಕ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ವೀಡಿಯೋದಲ್ಲಿ ನೈಲಾ ಮದುಮಗಳ ವಸ್ತ್ರ ಧರಿಸಿರುವುದನ್ನು ಕಾಣಬಹುದಾಗಿದೆ. ನಾನು ಹಕ್ ಮೆಹರ್ ಪಿಕೆಆರ್ 1,00,000 ಮೌಲ್ಯದ ಪುಸ್ತಕಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದೇನೆ. ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಹಾಗೂ ನಾವು ದುಬಾರಿ ಉಡುಗೊರೆಗಳನ್ನು ಖರೀದಿಸಲು ಆಗುತ್ತಿಲ್ಲ. ಮತ್ತೊಂದು ನಮ್ಮ ಸಮಾಜದಲ್ಲಿರುವ ತಪ್ಪಾದ ಪದ್ಧತಿಗಳನ್ನು ತೊಡೆದು ಹಾಕುವುದಾಗಿದೆ ಎಂದು ಹೇಳಿದ್ದಾರೆ.

    ನಾನು ಓರ್ವ ಬರಹಗಾತಿಯಾಗಿದ್ದು ಪುಸ್ತಕಗಳಿಗೆ ಬೆಲೆ ನೀಡಲಿಲ್ಲ ಎಂದರೆ ಇನ್ನೂ ಸಾಮಾನ್ಯ ಜನರು ಹೇಗೆ ಪುಸ್ತಕಗಳಿಗೆ ಬೆಲೆ ಕೊಡುತ್ತಾರೆ ಎಂದು ಪ್ರಶ್ನಿಸಿದರು. ಈ ರೀತಿಯಾದಂತಹ ಬೇಡಿಕೆ ಇಡಲು ಮುಖ್ಯ ಕಾರಣ, ನಾನು ಹಕ್ ಮೆಹರ್ ನಲ್ಲಿ ಪುಸ್ತಕಗಳಿಗೆ ಬೆಲೆ ಕೊಟ್ಟು, ಇತರರಿಗೂ ಸಲಹೆ ನೀಡುವುದಾಗಿದೆ ಎಂದು ನುಡಿದರು.

    ಸದ್ಯ ಈ ವೀಡಿಯೋವನ್ನು ನೈಲಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ವಧು ಮತ್ತು ವರ ಇಬ್ಬರೂ ಬರಹಗಾರರು ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

  • ವಧುದಕ್ಷಿಣೆಗಾಗಿ ಜೋಡಿಯ ಕಿಡ್ನಾಪ್

    ವಧುದಕ್ಷಿಣೆಗಾಗಿ ಜೋಡಿಯ ಕಿಡ್ನಾಪ್

    ಕಲಬುರಗಿ: ವರದಕ್ಷಿಣೆ ಬೇಕಂತ ಅದೆಷ್ಟೋ ಜನ ಡಿಮ್ಯಾಂಡ್ ಮಾಡುವುದನ್ನು ನೋಡಿದ್ದೀವಿ, ಕೇಳಿದ್ದೀವಿ. ಆದರೆ ಜಿಲ್ಲೆಯಲ್ಲಿ ವಧುದಕ್ಷಿಣೆ ಬೇಕಂತ ಹುಡುಗಿ ಮನೆಯವರೇ ಟಾರ್ಚರ್ ಮಾಡಿದ್ದಾರೆ.

    ಕಲಬುರಗಿ ಜಿಲ್ಲೆಯ ನಿಡಗುಂದಾ ಗ್ರಾಮದ ಅಜಯ್ ಪ್ರೀತಿಸಿ ಜ್ಯೋತಿ ಎಂಬವರನ್ನು ಮದುವೆಯಾಗಿದ್ದರು. ಒಂದೂವರೆ ವರ್ಷದಿಂದ ಅಜಯ್ ಮತ್ತು ಜ್ಯೋತಿ ಸಂಸಾರ ಮಾಡುತ್ತಿದ್ದರು. ಆದರೆ ಅಷ್ಟರಲ್ಲಿಯೇ ಜ್ಯೋತಿ ಸಹೋದರ ರವಿ ವಧುದಕ್ಷಿಣೆಗಾಗಿ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಅಷ್ಟೇ ಆಲ್ಲದೇ ಈ ಜೋಡಿಯನ್ನ ಕಿಡ್ನಾಪ್ ಮಾಡಿ ಅಜ್ಞಾತ ಸ್ಥಳದಲ್ಲಿಟ್ಟಿದ್ದಾನೆ ಎಂದು ಅಜಯ್ ತಾಯಿ ಆರೋಪ ಮಾಡಿದ್ದಾರೆ.

    ವಧುದಕ್ಷಿಣೆ ಅನ್ನೋ ಪದ್ಧತಿ ಇರುವುದು ಪಾರ್ದಿ ಜನಾಂಗದಲ್ಲಿ. ಹೀಗಾಗಿ ಪಾರ್ದಿ ಸಮುದಾಯಕ್ಕೆ ಸೇರಿದ ಅಜಯ್ ತನ್ನ ತಂಗಿ ಜ್ಯೋತಿಯನ್ನ ಪ್ರೀತಿಸಿ ಮದುವೆಯಾಗಿದ್ದಾನೆ. ಆದ್ದರಿಂದ ಪದ್ಧತಿ ಪ್ರಕಾರ ವಧುದಕ್ಷಿಣೆ ಕೊಟ್ಟಿಲ್ಲ. ಹೀಗಾಗಿ ಟಾರ್ಚರ್ ಕೊಟ್ಟಿದ್ದಾನೆ ಅನ್ನೋ ಮಾತು ಕೇಳಿ ಬರುತ್ತಿದೆ.

    ಅಜಯ್ ಮತ್ತು ಜ್ಯೋತಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪ್ರಕರಣ ಕಿಡ್ನಾಪ್ ಅಂತ ಬದಲಾಗಲಿ ಎಂದು ಅಜಯ್ ಕುಟುಂಬದವರು ಆಗ್ರಹ ಮಾಡಿದ್ದಾರೆ. ಈ ಬಗ್ಗೆ ಪೊಲೀಸರನ್ನು ಕೇಳಿದರೆ ತನಿಖೆ ಮುಗಿದ ನಂತರ ಎಲ್ಲ ಗೊತ್ತಾಗಲಿದೆ ಎಂದು ಕಲಬುರಗಿಯ ಹೆಚ್ಚುವರಿ ಎಸ್‍ಪಿ ಜಯಪ್ರಕಾಶ್ ಹೇಳಿದ್ದಾರೆ.

    ಈಗಾಗಲೇ ಅಜಯ್ ಗೆ ಮಹಾರಾಷ್ಟ್ರದಲ್ಲಿಯೇ ಒಂದು ಮದುವೆಯಾಗಿದೆ ಮತ್ತು ಮಕ್ಕಳಿವೆ. ಅಷ್ಟಾದರೂ ಎರಡನೇ ಮದುವೆ ಬೇಕಿತ್ತಾ ಅನ್ನೋದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವರ ಅಲ್ಲ, ಇದು ವಧುದಕ್ಷಿಣೆ ಕಿರುಕುಳ- ಪತ್ನಿ ವಿರುದ್ಧವೇ ಟೆಕ್ಕಿ ದೂರು!

    ವರ ಅಲ್ಲ, ಇದು ವಧುದಕ್ಷಿಣೆ ಕಿರುಕುಳ- ಪತ್ನಿ ವಿರುದ್ಧವೇ ಟೆಕ್ಕಿ ದೂರು!

    ಬೆಂಗಳೂರು: ನಗರದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದ್ದು, ಟೆಕ್ಕಿಯೊಬ್ಬ ತನ್ನ ಪತ್ನಿ ವಿರುದ್ಧ ವಧುದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ.

    ಆಂಧ್ರ ಮೂಲದ ಧೀರಾಜ್ ರೆಡ್ಡಿ ಚಿಂತಾಲ ತನ್ನ ಪತ್ನಿ ಜಯಶೃತಿ ವಿರುದ್ಧ ದೂರು ನೀಡಿದ್ದಾರೆ. ವೃತ್ತಿಯಲ್ಲಿ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿದ್ದಾರೆ. ಈಗ ಪತ್ನಿ ವಧುದಕ್ಷಿಣೆಗಾಗಿ ಪೀಡಿಸಿದಕ್ಕಾಗಿ ದೂರು ನೀಡಿದ್ದಾರೆ. ಪತ್ನಿ ಜಯಶೃತಿ ಐಷಾರಾಮಿ ಜೀವನ ನಡೆಸಲು ಗಂಡನಿಗೆ ಹಣ ಹಾಗೂ ಆಭರಣಗಳಿಗಾಗಿ ಪೀಡಿಸುತ್ತಿದ್ದರು ಎಂದು ತಿಳಿದುಬಂದಿದೆ.

    2016ರಲ್ಲಿ ಧೀರಾಜ್ ರೆಡ್ಡಿ ಚಿಂತಾಲ ಮತ್ತು ಜಯಶೃತಿ ವಿವಾಹವಾಗಿದ್ದರು. ಕಳೆದ ವರ್ಷ 30 ಲಕ್ಷ ಮೌಲ್ಯದ ಡೈಮಂಡ್ ಡಾಬು ಕೊಡಿಸುವಂತೆ ಪತ್ನಿ ಪೀಡಿಸಿದ್ದಳು. ಒಂದು ವೇಳೆ ಡಾಬು ಕೊಡಿಸದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಳು. ತನ್ನ ತಂಗಿ ಮದುವೆಗೆ 40 ಲಕ್ಷ ಮೌಲ್ಯದ ಆಭರಣಕ್ಕೆ ಬೇಡಿಕೆ ಇಟ್ಟಿದ್ದಳು. ಪತ್ನಿಯ ವರ್ತನೆ ಬಗ್ಗೆ ಆಕೆಯ ಪೋಷಕರ ಬಳಿ ಪತಿ ಧೀರಾಜ್ ಹೇಳಿಕೊಂಡಿದ್ದರು. ಆಗ ಅವರು ಕೂಡ ಪತ್ನಿ ಹೇಳಿದಂತೆ ಕೇಳಬೇಕೆಂದು ತಾಕೀತು ಹಾಕಿದ್ದರು. ಜೊತೆಗೆ ನಿನ್ನ ಎಲ್ಲ ಆಸ್ತಿಯನ್ನೆಲ್ಲ ಜಯಶೃತಿ ಹೆಸರಿಗೆ ಬರೆದುಕೊಡು ಎಂದು ಬೆದರಿಕೆ ಒಡ್ಡಿದರು. ಅಷ್ಟೇ ಅಲ್ಲದೇ ಕಳೆದ ತಿಂಗಳು 2 ಕೋಟಿ ಹಣ ನೀಡುವಂತೆ ಪ್ರತಿದಿನ ಕಿರುಕುಳ ನೀಡುತ್ತಾರೆ ಎಂದು ಧೀರಾಜ್ ದೂರಿನಲ್ಲಿ ತಿಳಿಸಿದ್ದಾರೆ.

    ಪತ್ನಿ ಕೂಡ ತನ್ನ ಸ್ನೇಹಿತರ ಮೂಲಕ ಪತಿಗೆ ಬೆದರಿಕೆಯೊಡ್ಡಿದ್ದರು ಎಂದು ತಿಳಿದುಬಂದಿದೆ. ಇದರಿಂದ ನೊಂದ ಪತಿ, ಪತ್ನಿ ಜಯಶೃತಿ ಹಾಗೂ ಪೋಷಕರ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಧುದಕ್ಷಿಣೆ ಹಾಗೂ ಬೆದರಿಕೆ ಆರೋಪದಡಿ ದೂರು ಸ್ವೀಕರಿಸಿದ ಪೊಲೀಸರು ಸದ್ಯ ಇಬ್ಬರನ್ನು ಕರೆಸಿ ಮಾತುಕತೆ ನಡೆಸಲು ಮುಂದಾಗಿದ್ದಾರೆ.