Tag: ವದಂತಿ

  • ಗೃಹ ಬಂಧನದ ವದಂತಿಯ ಬೆನ್ನಲ್ಲೇ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಚೀನಾ ಅಧ್ಯಕ್ಷ

    ಗೃಹ ಬಂಧನದ ವದಂತಿಯ ಬೆನ್ನಲ್ಲೇ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಚೀನಾ ಅಧ್ಯಕ್ಷ

    ಬೀಜಿಂಗ್: ಚೀನಾದ ಅಧ್ಯಕ್ಷ (Chinese President) ಕ್ಸಿ ಜಿನ್‌ಪಿಂಗ್ (Xi Jinping) ಅವರನ್ನು ಗೃಹ ಬಂಧನದಲ್ಲಿ (House Arrest) ಇರಿಸಲಾಗಿದೆ ಎಂಬ ವದಂತಿ ವ್ಯಾಪಕವಾಗಿ ಹರಡುತ್ತಿದ್ದ ಬೆನ್ನಲ್ಲೇ ಅವರು ಮಂಗಳವಾರ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಸೆಪ್ಟೆಂಬರ್ 16 ರಂದು ಜಿನ್‌ಪಿಂಗ್ ಅವರು ಸಮರ್‌ಕಂಡರ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಹಿಂದಿರುಗಿದ ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈ ಹಿನ್ನೆಲೆ ಅವರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ವದಂತಿಗಳು ಹರಿದಾಡಲಾರಂಭಿಸಿತ್ತು.

    ವದಂತಿ ಏಕೆ ಹುಟ್ಟಿತು?
    ಚೀನಾದಲ್ಲಿ ಕಳೆದ ವಾರ ಇಬ್ಬರು ಮಾಜಿ ಮಂತ್ರಿಗಳಿಗೆ ಮರಣದಂಡನೆ ಹಾಗೂ 4 ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ವರದಿಗಳ ಪ್ರಕಾರ, 6 ಮಂದಿ ಕೂಡಾ ರಾಜಕೀಯ ಬಣದ ಭಾಗವಾಗಿದ್ದರು. ಶಿಕ್ಷೆ ವಿಧಿಸಲಾದ 6 ಜನರೂ ಜಿನ್‌ಪಿಂಗ್ ಅವರ ವಿರೋಧಿ ಎನ್ನಲಾಗಿದೆ. ಈ ಹಿನ್ನೆಲೆ ಅವರ ವಿರುದ್ಧ ಪಕ್ಷವೇ ಗೃಹಬಂಧನದಲ್ಲಿ ಇರಿಸಿದೆ ಎಂಬ ವದಂತಿ ಹರಡಿತ್ತು. ಇದನ್ನೂ ಓದಿ: ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ರೆಡ್ ಅಲರ್ಟ್ – ಗುಪ್ತಚರ ಇಲಾಖೆ ಸೂಚನೆ ಏನು?

    ವಿದೇಶದ ಮಾಧ್ಯಮಗಳು, ಫೇಸ್‌ಬುಕ್, ಟ್ವಿಟ್ಟರ್, ಯೂಟ್ಯೂಬ್ ಗೂ ಚೀನಾದಲ್ಲಿ ನಿರ್ಬಂಧ ಇರುವುದರಿಂದ ಅಲ್ಲಿ ಏನು ನಡೆಯುತ್ತದೆ ಎಂಬುದನ್ನು ನಿಖರವಾಗಿ ತಿಳಿಯುವುದು ಅಸಾಧ್ಯವಾಗಿದೆ. ಗೃಹ ಬಂಧನದ ವದಂತಿ ಹರಡಲು ಇದು ಕೂಡಾ ಕಾರಣವಾಗಿದೆ. ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ಲಿಂಕ್‌ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್‌

    Live Tv
    [brid partner=56869869 player=32851 video=960834 autoplay=true]

  • ನಿಧಿ ವದಂತಿ ನಂಬಿ ಗುಂಡಿ ತೋಡಿ ಬರಿಗೈಯಲ್ಲಿ ತೆರಳಿದ ಅಧಿಕಾರಿಗಳು

    ನಿಧಿ ವದಂತಿ ನಂಬಿ ಗುಂಡಿ ತೋಡಿ ಬರಿಗೈಯಲ್ಲಿ ತೆರಳಿದ ಅಧಿಕಾರಿಗಳು

    ಮಂಗಳೂರು: ಹೊಲದಲ್ಲಿ ನಿಧಿ ಇದೆ ಎಂಬ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಅಧಿಕಾರಿಗಳು ಬಂದು ಹುಡುಕಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಿ ನಡೆದಿದೆ.

    ಬೆಳ್ತಂಗಡಿಯ ನಡ ಗ್ರಾಮದ ಪುಣಿತ್ತಡಿ ಎಂಬಲ್ಲಿನ ನಿವಾಸಿ ಆನಂದ ಶೆಟ್ಟಿಗೆ ಸೇರಿದ ಗದ್ದೆಯಲ್ಲಿ ಇತ್ತೀಚೆಗೆ ಕೊಳವೆ ಬಾವಿ ಕೊರೆಯಿಸಿದ್ದ ವೇಳೆ ಭೂಮಿ ಕುಸಿದಿದ್ದು ಸುಮಾರು 10 ಅಡಿಯಷ್ಟು ಆಳದ ಗುಂಡಿಯಾಗಿತ್ತು. ಹೀಗಾಗಿ ಭೂಮಿಯೊಳಗೆ ನಿಧಿ ಇರುವ ಶಂಕೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿದ್ದು, ಜನ ಸೇರಲಾರಂಭಿಸಿದರು.

    ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್, ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಹಿಟಾಚಿ ಮೂಲಕ ಶೋಧ ಕಾರ್ಯ ನಡೆಸಿದರು. ಸುಮಾರು ಒಂದು ಗಂಟೆಗಳ ಕಾಲ ಗುಂಡಿ ತೆಗೆದು ಪರಿಶೀಲಿಸಿದ ಬಳಿಕ ಏನೂ ಸಿಗದೆ ಗುಂಡಿಗೆ ಮಣ್ಣು ಮುಚ್ಚಿ ಬರಿಗೈಯಲ್ಲೇ ವಾಪಸ್ ಹೋಗಿದ್ದಾರೆ. ಜನರ ವದಂತಿಯಿಂದ ಕೆಲಕಾಲ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು.

  • ಕೊಡಗು ಜಿಲ್ಲೆಯಲ್ಲಿ ಭೂ ಕಂಪನ ವದಂತಿ- ಜಿಲ್ಲಾಧಿಕಾರಿಗಳಿಂದ ಸ್ಪಷ್ಟನೆ

    ಕೊಡಗು ಜಿಲ್ಲೆಯಲ್ಲಿ ಭೂ ಕಂಪನ ವದಂತಿ- ಜಿಲ್ಲಾಧಿಕಾರಿಗಳಿಂದ ಸ್ಪಷ್ಟನೆ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭೂ ಕಂಪನ ಆಗಲಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇತಂಹ ಯಾವುದೇ ಮುನ್ನೆಚರಿಕೆ ಸಂದೇಶವನ್ನು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಥವಾ ಭೂ ವಿಜ್ಞಾನ ಇಲಾಖೆ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರು ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಭೂ ಕಂಪನ ಆಗಲಿದೆ ಎಂಬ ವದಂತಿ ಇರುವ ಸಂದೇಶ ಹರಿದಾಡುತ್ತಿದ್ದು, ಇಂತಹ ಸಂದೇಶಗಳನ್ನು ನಂಬಿ ಜನರು ಕಿವಿಗೊಟ್ಟು ಆತಂಕಗೊಳ್ಳುವ ಅಗತ್ಯವಿಲ್ಲ. ಭೂ ಕಂಪನದ ಕುರಿತು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಥವಾ ಭೂ ವಿಜ್ಞಾನ ಇಲಾಖೆ ಯಿಂದ ಯಾವುದೇ ಮುನ್ನೆಚ್ಚರಿಕೆ ಸಂದೇಶ ನೀಡಿಲ್ಲ ಎಂದು ತಿಳಿಸಿದ್ದಾರೆ.

    ಕೊಡಗಿನಲ್ಲಿ ಮಳೆ ಮುಂದುವರಿದಿರುವ ಪರಿಣಾಮ ಹಸಿಯಾಗಿರುವ ಗುಡ್ಡ ಕುಸಿಯುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಜಿಲ್ಲೆಯ ಮುಕ್ಕೋಡ್ಲು ಗ್ರಾಮದಲ್ಲಿ ಮಣ್ಣು ಕುಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಜೊತೆಗೆ ಮತ್ತೊಬ್ಬರು ಮಣ್ಣಿನಲ್ಲಿ ಸಿಲುಕಿದ್ದಾರೆ. ಮಳೆ ಮತ್ತೆ ತನ್ನ ಮುಂದುವರಿದಿರುವ ಪರಿಣಾಮ ರಕ್ಷಣಾ ಕಾರ್ಯಾಚರಣೆಗೆ ತಡೆಯಾಗಿದೆ. ಈಗಾಗಲೇ ಒಟ್ಟು 40 ಜನರನ್ನು ರಕ್ಷಣೆ ಮಾಡಲಾಗಿದ್ದು, ಉಳಿದ 120 ಮಂದಿ ರಕ್ಷಣೆಗೆ ಮಳೆ ಅಡ್ಡಿಯಾಗಿದೆ. ಇದರಲ್ಲಿ 80 ಜನರು ಅಪಾಯದ ಸ್ಥಿತಿಯಲ್ಲಿದ್ದಾರೆ. ಮುಕ್ಕೋಡ್ಲು ಭಾಗದಲ್ಲಿ ನಿರಂತರವಾಗಿ ಗುಡ್ಡ ಕುಸಿತವಾಗುತ್ತಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಯೋಧರಿಗೆ ಇದು ಅಡ್ಡಿಯಾಗುತ್ತಿದೆ. ಅಪಾಯದ ಪರಿಸ್ಥಿತಿಯಲ್ಲೂ ಯೋಧರು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಕ್ಕಳ ಕಳ್ಳರ ವದಂತಿ – ಐದು ಜನರನ್ನು ಬಡಿದು ಕೊಂದ ಗ್ರಾಮಸ್ಥರು

    ಮಕ್ಕಳ ಕಳ್ಳರ ವದಂತಿ – ಐದು ಜನರನ್ನು ಬಡಿದು ಕೊಂದ ಗ್ರಾಮಸ್ಥರು

    ಮುಂಬೈ: ಮಕ್ಕಳ ಅಪರಹರಣಕಾರರೆಂದು ತಪ್ಪಾಗಿ ಭಾವಿಸಿ ಹಲ್ಲೆ ನಡೆಸುವ ಕೊಲೆ ಮಾಡುವ ಪರಿಪಾಠ ಮುಂದುವರಿದಿದ್ದು, ಇದೀಗ ಮಹಾರಾಷ್ಟ್ರದ ಧುಲೆ ಎಂಬಲ್ಲಿ ಐವರನ್ನು ಹಿಡಿದು ಗ್ರಾಮಸ್ಥರು ಕೊಲೆ ಮಾಡಿದ್ದಾರೆ.

    ಸೋಲ್ಲಾಪುರ ಜಿಲ್ಲೆಯ ರೈನ್‍ಪಾದಾ ಎಂಬ ಹಳ್ಳಿಯ ಸಂತೆಗೆ ಬಂದ ಐವರಲ್ಲಿ ಒಬ್ಬಾತ ಮಕ್ಕಳನ್ನು ಮಾತನಾಡಿಸಲು ಮುಂದಾಗಿದ್ದಾನೆ. ಇದ್ದರಿಂದ ಅನುಮಾನಗೊಂಡ ಜನ ಮಕ್ಕಳ ಕಳ್ಳರೆಂದು ಭಾವಿಸಿ ಐವರನ್ನು ಹಿಗ್ಗಾಮುಗ್ಗಾ ಬಡಿದು ಕೊಂದಿದ್ದಾರೆ.

    ಸದ್ಯ ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸರು, ಗುಂಪಿನಲ್ಲಿ ಒಟ್ಟು 7 ಜನರಿದ್ದು ಇದರಲ್ಲಿ ಇಬ್ಬರು ಜನರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮೃತರು ಏಕೆ ಹಳ್ಳಿಗೆ ತೆರಳಿದ್ದರು ಎಂಬ ಮಾಹಿತಿ ಖಚಿತವಾಗಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.

    ಘಟನೆ ಸಂಬಂಧ ಈಗಾಗಲೇ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಮಕ್ಕಳ ಕಳ್ಳರ ವಂದತಿಯೇ ಪ್ರಮುಖ ಕಾರಣ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು. ಕೊಲೆಯಾದ ಐವರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಗಾಂಜಾ ನಶೆಯಲ್ಲಿದ್ದವನಿಗೆ ಮಕ್ಕಳ ಕಳ್ಳ ಎಂದು ಶಂಕಿಸಿ ಥಳಿಸಿದ್ರು!

    ಗಾಂಜಾ ನಶೆಯಲ್ಲಿದ್ದವನಿಗೆ ಮಕ್ಕಳ ಕಳ್ಳ ಎಂದು ಶಂಕಿಸಿ ಥಳಿಸಿದ್ರು!

    ಬೆಂಗಳೂರು: ಅನುಮಾನಾಸ್ಪದವಾಗಿ ಕಾಣಿಸಿಕೊಂಡ ವ್ಯಕ್ತಿಯನ್ನು ಮಕ್ಕಳ ಕಳ್ಳನೆಂದು ಶಂಕಿಸಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಹೆಚ್‍ಎಎಲ್ ಬಳಿ ನಡೆದಿದೆ.

    ಅಸ್ಸಾಂ ಮೂಲದ ಚಂದ್ರಕುಮಾರ್ ಎಂಬಾತ ಸಾರ್ವಜನಿಕರಿಂದ ಸಖತ್ ಗೂಸಾ ತಿಂದಾತ. ಹೆಚ್‍ಎಎಲ್ ಬಳಿಯ ದೊಡ್ಡನೆಕ್ಕುಂದಿ ಸರ್ಕಾರಿ ಶಾಲೆ ಬಳಿ ಇಂದು ಸಂಜೆ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಚಂದ್ರಕುಮಾರ್ ನನ್ನು ಕಂಡ ಜನರು ಕಂಬಕ್ಕೆ ಕಟ್ಟಿ ಹಿಗ್ಗಮುಗ್ಗಾ ಥಳಿಸಿದ್ದಾರೆ.

    ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಚಂದ್ರಕಾಂತ್ ಗಾಂಜಾ ಸೇವನೆ ಮಾಡಿ ನಶೆಯಲ್ಲಿ ತಿರುಗಾಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಚಂದ್ರಕುಮಾರ್ ನನ್ನು ವಶಕ್ಕೆ ಪಡೆದು ಎಚ್‍ಎಎಲ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಮೇ 24 ರಂದು ಮಕ್ಕಳ ಕಳ್ಳ ಎಂದು ರಾಜಸ್ಥಾನ ಮೂಲದ ಕಾಲುರಾಮ್ ಅಲಿಯಾಸ್ ಬಚ್ಚನ್ ರಾಮ್ ಎಂಬಾತನ್ನು ನಗರದ ಕಾಟನ್ ಪೇಟೆ ಬಳಿಯ ಭಕ್ಷಿ ಗಾರ್ಡನ್ ಬಳಿ ಸಾರ್ವಜನಿಕರು ಥಳಿಸಿ ಕೊಲೆ ಮಾಡಿದ್ದರು. ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಡಿಯೋ ಆಧರಿಸಿ ಹಲವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿತ್ತು. ಇದಾದ ಬಳಿಕ ಪೊಲೀಸರು ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದ್ದರೂ ಈಗ ಮತ್ತದೇ ರೀತಿಯ ಘಟನೆಗಳು ನಡೆಯುತ್ತಿದೆ.

  • ರಿಯಾ ಸೇನ್ ತನ್ನ ಟ್ರ್ಯಾಕ್ ಪ್ಯಾಂಟ್ ಬಿಚ್ಚಿದ್ದೇಕೆ? ನಿಶಾಂತ್ ಮಲ್ಕಾನಿ ಹೇಳಿದ್ದು ಹೀಗೆ

    ರಿಯಾ ಸೇನ್ ತನ್ನ ಟ್ರ್ಯಾಕ್ ಪ್ಯಾಂಟ್ ಬಿಚ್ಚಿದ್ದೇಕೆ? ನಿಶಾಂತ್ ಮಲ್ಕಾನಿ ಹೇಳಿದ್ದು ಹೀಗೆ

    ಮುಂಬೈ: ಬಾಲಿವುಡ್‍ಗೆ ಈಗ ತಾನೆ ಎಂಟ್ರಿ ಕೊಡುತ್ತಿರುವ ನಟ ನಿಶಾಂತ್ ಮಲ್ಕಾನಿಗೆ ಸೆಕ್ಸಿ ಹಾಟೆಸ್ಟ್ ಬ್ಯೂಟಿ ರಿಯಾ ಸೇನ್ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂಬ ಸುಳಿದಾಡುತ್ತಿತ್ತು. ಸದ್ಯ ಈ ಗಾಸಿಪ್ ಸುದ್ದಿಗೆ ನಟ ನಿಶಾಂತ್ ಸ್ಪಷ್ಟನೆ ನೀಡಿದ್ದಾರೆ.

    ರಾಗಿಣಿ ಎಂಎಂಎಸ್ ರಿಟರ್ನ್ ಚಿತ್ರದ ಬೆಡ್ ರೂಮ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ಅದರಲ್ಲಿ ನಾನು ಮತ್ತು ನಟಿ ರಿಯಾ ಸೇನ್ ಕೂಡ ಸನ್ನಿವೇಶಕ್ಕೆ ತಕ್ಕಂತೆ ಪಾತ್ರದೊಳಗೆ ಪ್ರವೇಶ ಮಾಡಬೇಕಿತ್ತು. ಹೀಗಾಗಿ ರಿಯಾ ಸೇನ್ ನನ್ನ ಟ್ರ್ಯಾಕ್ ಪ್ಯಾಂಟ್‍ನ್ನು ಎಳೆದರು. ಆದರೆ ಕೆಲವರು ರಿಯಾ ಸೇನ್ ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಹೇಳತೊಡಗಿದರು. ಈ ಸುದ್ದಿ ಕೇಳಿದ ನಾನು ನಿಜಕ್ಕೂ ಆಶ್ಚರ್ಯ ಚಕಿತನಾಗುವಂತೆ ಮಾಡಿತು. ಆದರೆ ಈ ಸುದ್ದಿಗಳೆಲ್ಲಾ ಸುಳ್ಳು ಎಂದು ನಿಶಾಂತ್ ತಿಳಿಸಿದ್ದಾರೆ.

    ನಾವಿಬ್ಬರೂ ಕೇವಲ ತಮಾಷೆಗೆ ಮಾಡಿದ್ದು, ಈ ರೀತಿ ಮಾಡುವುದರಿಂದ ಲವ್ ಸೀನ್‍ಗಳು ಉತ್ತಮ ರೀತಿ ಬರಲು ಸಾಧ್ಯ. ರಿಯಾ ಸೇನ್ ನನ್ನ ಪ್ಯಾಂಟ್ ಎಳೆದಿದ್ದು ಕೇವಲ ಸಿನಿಮಾಗಾಗಿ ಮತ್ತು ಸಿನಿಮಾದ ಸನ್ನಿವೇಶಕ್ಕಾಗಿ ಅಷ್ಟೆ. ಅವರ ಪತಿಯೂ ಸಹ ಇದರ ಬಗ್ಗೆ ಚಿಂತಿಸಿಲ್ಲ. ಲೈಂಗಿಕ ದೌರ್ಜನ್ಯದ ವಿಚಾರಗಳು ತುಂಬಾ ಸೂಕ್ಷ್ಮ ಸಂಗತಿಗಳು ಎಂದು ನಿಶಾಂತ್ ಬೇಸರ ವ್ಯಕ್ತಪಡಿಸಿದರು.

    ನಿಶಾಂತ್ ಮತ್ತು ರಿಯಾ ಇಬ್ಬರೂ ಜೊತೆಯಾಗಿ ರಾಗಿಣಿ ಎಂಎಂಎಸ್ ರಿಟರ್ನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ರಾಗಿಣಿ ಚಿತ್ರದ ಎರಡು ಭಾಗಗಳು ತೆರೆಕಂಡು ಭಾರೀ ಯಶಸ್ವಿಯನ್ನು ಪಡೆದುಕೊಂಡಿವೆ. ಏಕ್ತಾ ಕಪೂರ್ ನಿರ್ಮಾಣ ಸಂಸ್ಥೆಯಡಿಯಲ್ಲಿ ರಾಗಿಣಿ ಎಂಎಂಎಸ್ ಮೂಡಿ ಬರಲಿದೆ.

    ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಪತಿಗೆ ಕಿಸ್ ಕೊಟ್ಟ ರಿಯಾ ಸೇನ್ 

    https://www.instagram.com/p/BZGhmMYl4Jp/?tagged=raginimmsreturns

    https://www.instagram.com/p/BZEkCvAAr6e/?tagged=raginimmsreturns

    https://www.instagram.com/p/BZAtzbjlGqF/?tagged=raginimmsreturns

  • ಬಾಬಾ ರಾಮ್‍ದೇವ್ ಅಪಘಾತದ ಬಗ್ಗೆ ವದಂತಿ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ಬಾಬಾ ರಾಮ್‍ದೇವ್ ಅಪಘಾತದ ಬಗ್ಗೆ ವದಂತಿ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ಹರಿದ್ವಾರ್: ಯೋಗ ಗುರು ಬಾಬಾ ರಾಮ್ ದೇವ್ ಮುಂಬೈ-ಪುಣೆ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದಾರೆ ಎಂಬ ಸುದ್ದಿಯೊಂದು ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲದೆ ಅಪಘಾತ ಸಂಭವಿಸಿದೆ ಎಂದು ನಂಬಿಸಲು ಕೆಲವು ಚಿತ್ರಗಳನ್ನೂ ಕೂಡ ಹಾಕಲಾಗಿತ್ತು. ಆದ್ರೆ ಇದು ಸುಳ್ಳು ಸುದ್ದಿ. ನಾನು ಆರೋಗ್ಯವಾಗಿದ್ದೇನೆ. ಭಕ್ತರು ವದಂತಿಗಳಿಗೆ ಕಿವಿಗೊಡಬೇಡಿ ಅಂತಾ ಸ್ವತಃ ಬಾಬಾ ರಾಮ್‍ದೇವ್ ಸ್ಪಷ್ಟ ಪಡಿಸಿದ್ದಾರೆ.

    ಟ್ವೀಟ್ ಮೂಲಕ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಹರಿದ್ವಾರದಲ್ಲಿದ್ದು, ಸಾವಿರಾರು ಭಕ್ತರಿಗೆ ಯೋಗ ಶಿಬಿರ ನಡೆಸಿದೆ. ನಾನು ಸುರಕ್ಷಿತನಾಗಿದ್ದೇನೆ, ಆರೋಗ್ಯವಾಗಿದ್ದೇನೆ. ವದಂತಿಗಳನ್ನ ನಂಬಬೇಡಿ ಅಂತಾ ಭಕ್ತರಿಗೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಹೆದ್ದಾರಿ ನಿಯಂತ್ರಣ ಅಧಿಕಾರಿಗಳು ಕೂಡ ಪ್ರತಿಕ್ರಿಯಿಸಿದ್ದು, ಮುಂಬೈ-ಪುಣೆ ಹೆದ್ದಾರಿಯಲ್ಲಿ ಇಂತಹ ಯಾವುದೇ ಅಪಘಾತ ಸಂಭವಿಸಿಲ್ಲ. ಇದೊಂದು ಸುಳ್ಳು ಸುದ್ದಿ ಅಂತಾ ತಿಳಿಸಿದ್ದಾರೆ.

    ಬಾಬಾ ರಾಮ್‍ದೇವ್ ಅವರನ್ನ ಸ್ರೆಚ್ಚರ್‍ನಲ್ಲಿ ಕೊಂಡೊಯ್ಯಲಾಗುತ್ತಿರುವ ಫೋಟೋಗಳು 2011ನೇ ವರ್ಷದ್ದಾಗಿದೆ. ಈ ಹಿಂದೆ ಬಿಹಾರದಲ್ಲಿ ಬಾಬಾ ರಾಮ್ ದೇವ್ ಅಪಘಾತಕ್ಕೀಡಾಗಿದ್ದಾಗ ತಗೆಯಲಾದ ಈ ಫೋಟೋಗಳನ್ನು ಬಳಸಿಕೊಂಡು ಕಿಡಿಗೇಡಿಗಳು ಈ ವದಂತಿಯನ್ನ ಹರಡಿದ್ದಾರೆ.

    https://youtu.be/83aa2bwBgTw