Tag: ವಡ್ ನಗರ

  • 8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ ಮೋದಿ ಟೀ ಮಾರಿದ್ದ  ರೈಲು ನಿಲ್ದಾಣ

    8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ ಮೋದಿ ಟೀ ಮಾರಿದ್ದ ರೈಲು ನಿಲ್ದಾಣ

    ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಬಾಲ್ಯದಲ್ಲಿ ಚಹಾ ಮಾರಾಟ ಮಾಡಿದ್ದ ರೈಲು ನಿಲ್ದಾಣ 8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ.

    ಉತ್ತರ ಗುಜರಾತಿನ ಮೆಹಸಾನ ಜಿಲ್ಲೆಯಲ್ಲಿರುವ ವಡ್‍ನಗರ ರೈಲು ನಿಲ್ದಾಣದ ಅಭಿವೃದ್ಧಿಗೆ 8 ಕೋಟಿ ರೂ. ಹಣವನ್ನು ಮಂಜೂರು ಮಾಡಲಾಗಿದೆ ಎಂದು ರೈಲ್ವೆ ರಾಜ್ಯ ಸಚಿವ ಮನೋಜ್ ಸಿನ್ಹಾ ತಿಳಿಸಿದ್ದಾರೆ.

    ಅಹಮದಾಬಾದ್‍ನಲ್ಲಿರುವ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ದಿನೇಶ್ ಕುಮಾರ್ ಮಾತನಾಡಿ, ಪ್ರವಾಸೋದ್ಯಮ ಸಚಿವಾಲಯ ವಡ್‍ನಗರ ನಿಲ್ದಾಣದ ಅಭಿವೃದ್ಧಿಗೆ 8 ಕೋಟಿ ರೂ. ಅನುದಾನ ನೀಡಿದೆ. ರಾಜ್ಯ ಪ್ರವಾಸೋದ್ಯಮ ಸಚಿವಾಲಯ ವಡ್‍ನಗರ- ಪಟನಾ ನಡುವೆ ಟೂರಿಸ್ಟ್ ಸರ್ಕ್ಯೂಟ್ ನಿರ್ಮಿಸಲು 100 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಂಡಿದೆ. ಈ ವರ್ಷದ ಒಳಗಡೆ ಈ ನಿಲ್ದಾಣ ಅಭಿವೃದ್ಧಿಯಾಗಲಿದೆ ಎಂದು ಅವರು ತಿಳಿಸಿದರು.

    ಕಳೆದ ವರ್ಷ ಮೋದಿ ಸರ್ಕಾರ ಜೈನರ ಪವಿತ್ರ ಸ್ಥಳ ತರಂಗ ಬೆಟ್ಟ ಮತ್ತು ಮೆಹಸಾನ ನಡುವಿನ 57.4 ಕಿ.ಮೀ ಉದ್ದದ ಮಾರ್ಗ ಬ್ರಾಡ್ ಗೇಜ್ ಹಳಿ ಪರಿವರ್ತನೆಗೆ 414 ಕೋಟಿ ರೂ. ನೀಡಲು ಅನುಮೋದನೆ ನೀಡಿತ್ತು.

    ಕೂಡಾ ವಡ್‍ನಗರ ಮೋದಿ ಅವರ ಹುಟ್ಟೂರು ಆಗಿದ್ದು, ಬಾಲ್ಯದಲ್ಲಿ ತಮ್ಮ ತಂದೆಯೊಂದಿಗೆ ಈ ರೈಲು ನಿಲ್ದಾಣದಲ್ಲಿ ಟೀ ಮಾರುತ್ತಿದ್ದರು. 2014ರ ಲೋಕಸಭಾ ಚುನಾವಣೆ ವೇಳೆ ಮೋದಿ ಅವರು ತಮ್ಮ ತಂದೆ ಜೊತೆಗೆ ಇಲ್ಲಿ ಟೀ ಮಾರಾಟ ಮಾಡುವ ವಿಚಾರವನ್ನು ಹೇಳಿಕೊಂಡಿದ್ದರು.