Tag: ವಡೋದರ

  • ಜೀವನ ಮಾಡಲು ಏನೂ ಉಳಿದಿಲ್ಲ: 50 ಲಕ್ಷದ ಆಡಿ ಕಾರು ಮಳೆ ನೀರಿನಲ್ಲಿ ಮುಳುಗಿದ ಬಳಿಕ ಮಾಲೀಕನ ಪ್ರತಿಕ್ರಿಯೆ

    ಜೀವನ ಮಾಡಲು ಏನೂ ಉಳಿದಿಲ್ಲ: 50 ಲಕ್ಷದ ಆಡಿ ಕಾರು ಮಳೆ ನೀರಿನಲ್ಲಿ ಮುಳುಗಿದ ಬಳಿಕ ಮಾಲೀಕನ ಪ್ರತಿಕ್ರಿಯೆ

    ಗುಜರಾತ್: ಭಾರೀ ಮಳೆಯು ಗುಜರಾತ್‌ನಲ್ಲಿ (Gujarat Rain) ಅನಾಹುತವನ್ನು ಸೃಷ್ಟಿಸಿದ್ದು, ರಾಜ್ಯದಾದ್ಯಂತ ತೀವ್ರ ಜಲಾವೃತ ಮತ್ತು ಪ್ರವಾಹದಂತಹ ಪರಿಸ್ಥಿತಿಗಳನ್ನು ಸೃಷ್ಟಿಸಿದೆ. ವಡೋದರಾದಲ್ಲಿ (Vadodara), ಪರಿಸ್ಥಿತಿಯು ನಿವಾಸಿಗಳಿಗೆ ಭೀಕರವಾಗಿದೆ.

    ಸ್ಥಳೀಯರೊಬ್ಬರು ತಮ್ಮ ಸಂಕಟದ ಅನುಭವವನ್ನು ಹಂಚಿಕೊಂಡಿದ್ದಾರೆ. ಎಡೆಬಿಡದೇ ಸುರಿಯುತ್ತಿರುವ ಮಳೆಯು ತನ್ನ ಬಂಗಲೆಯ ಡ್ರೈವಾಲ್‌ನಲ್ಲಿ ನಿಲ್ಲಿಸಿದ್ದ ತನ್ನ ಮೂರು ಕಾರುಗಳನ್ನು ಮುಳುಗಿಸಿ ತೀವ್ರವಾಗಿ ಹಾನಿಗೊಳಿಸಿದೆ ಎಂದು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಗ್ರಾಹಕರಿಗೆ ಉಚಿತವಾಗಿ 100 ಜಿಬಿ ಕ್ಲೌಡ್ ಸಂಗ್ರಹ ನೀಡಲಿದೆ ರಿಲಯನ್ಸ್ ಜಿಯೋ

    ವಡೋದರಾ ನಿವಾಸಿಯು ತನ್ನ ವಾಹನಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಆಡಿ A6 (Audi Car), ಫೋರ್ಡ್ ಇಕೋಸ್ಪೋರ್ಟ್ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳು ಭಾಗಶಃ ನೀರಿನಲ್ಲಿ ಹಲವಾರು ಇಂಚುಗಳಷ್ಟು ಮುಳುಗಿದೆ. ಈ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸುತ್ತಾ, ಮೂರು ಕಾರುಗಳನ್ನು ಕಳೆದುಕೊಂಡ ನಂತರ ಜೀವನ ಮಾಡಲು ಏನೂ ಉಳಿದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

    ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸಿದ್ದರಿಂದ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ವಾಹನಗಳನ್ನು ಬಂಗಲೆಯೊಳಗೆ ಸುಸಜ್ಜಿತವಾದ ಸ್ಥಳದಲ್ಲಿ ಸುರಕ್ಷಿತವಾಗಿ ನಿಲ್ಲಿಸಲಾಗಿತ್ತು. ಏಳು ಇಂಚುಗಳಷ್ಟು ನೀರು ನನ್ನ ಮನೆಗೆ ನುಗ್ಗಿದೆ. ಹೊರಗೆ ಸುಮಾರು ನಾಲ್ಕು ಅಡಿಗಳಷ್ಟು ಏರಿಕೆಯಾಗಿದ್ದು, ಇಡೀ ನೆರೆಹೊರೆಯ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಗನ್‌ ರೆಡ್ಡಿಗೆ ಭಾರಿ ಹಿನ್ನಡೆ – ಪಕ್ಷದ ಇಬ್ಬರು ರಾಜ್ಯಸಭಾ ಸಂಸದರು ರಾಜೀನಾಮೆ; ಟಿಡಿಪಿ ಸೇರ್ಪಡೆಗೆ ಸಜ್ಜು

    ಮೂರನೇ ಬಾರಿಗೆ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ. ಹಿಂದೆ ನಾನಿದ್ದ ಸ್ಥಳದಲ್ಲಿ ಎರಡು ಬಾರಿ ಸಮಸ್ಯೆಯಾಗಿತ್ತು. ಈ ಸ್ಥಳದಲ್ಲಿ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.

  • 2 ತಿಂಗಳಿಂದ ನನ್ನ ಮಕ್ಕಳು ಕಾಣ್ತಿಲ್ಲ: ಸಿಎಂ, ಗೃಹ ಸಚಿವರಿಗೆ ಪತ್ರ ಬರೆದ ಅವಳಿ ಸಹೋದರಿಯರ ತಂದೆ

    2 ತಿಂಗಳಿಂದ ನನ್ನ ಮಕ್ಕಳು ಕಾಣ್ತಿಲ್ಲ: ಸಿಎಂ, ಗೃಹ ಸಚಿವರಿಗೆ ಪತ್ರ ಬರೆದ ಅವಳಿ ಸಹೋದರಿಯರ ತಂದೆ

    ಗಾಂಧೀನಗರ: ಕಳೆದ 2 ತಿಂಗಳಿಂದ ನನ್ನ ಅವಳಿ ಮಕ್ಕಳು ಕಾಣೆಯಾಗಿದ್ದಾರೆಂದು ಗುಜರಾತ್‌ (Gujarat) ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ವ್ಯಕ್ತಿಯೊಬ್ಬ ಪತ್ರ ಬರೆದಿರುವ ಘಟನೆ ನಡೆದಿದೆ.

    ವಡೋದರ (Vadodara) ನಿವಾಸಿ ಚಿಮನ್‌ ಎಂಬಾತನ ಮಕ್ಕಳಾದ ಪದವಿ ಓದುತ್ತಿರುವ ಶೀತಲಾ ಹಾಗೂ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿರುವ ಸರಿಕಾ ಕಾಣೆಯಾಗಿರುವ ಅವಳಿ ಸಹೋದರಿಯರು. ಎಂದಿನಂತೆ ಕಾಲೇಜಿಗೆ ಹೋಗಿದ್ದ ಇಬ್ಬರು ಸಹೋದರಿಯರು ಫೆ.17 ರಿಂದ ನಾಪತ್ತೆಯಾಗಿದ್ದಾರೆ. ಮಕ್ಕಳಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದ ತಂದೆ ಕೊನೆಗೆ ಸಯಾಜಿಗಂಜ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ನಿಷೇಧಿತ ಪಿಎಫ್‍ಐನ ಇಬ್ಬರು ಮುಖಂಡರ ಬಂಧನ

    ಆದರೆ, 25 ದಿನಗಳು ಕಳೆದರೂ ಪೊಲೀಸರಿಂದ ಯಾವುದೇ ತೃಪ್ತಿಕರ ಉತ್ತರ ಸಿಗದ ಕಾರಣ ಚಿಮನ್‌ ನಂತರ ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿದರು. ಪ್ರಕರಣವನ್ನು ವಡೋದರಾ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಯಿತು.

    51 ದಿನಗಳು ಕಳೆದರೂ ಅವರ ಇಬ್ಬರು ಪುತ್ರಿಯರ ಗುರುತು ಪತ್ತೆಯಾಗದ ಕಾರಣ ಹತಾಶರಾದ ಚಿಮನ್ ಈಗ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಮತ್ತು ಗೃಹ ಸಚಿವ ಹರ್ಷ ಶಾಂಘ್ವಿಗೆ (Harsh Shanghvi) ಪತ್ರ ಬರೆದಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಸಹೋದರಿಯರ ವಾಟ್ಸ್‌ ಆ್ಯಪ್ ಚಾಟ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಭೇಟೆ – ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

    ನನ್ನ ಇಬ್ಬರು ಮಕ್ಕಳ ಬಗ್ಗೆ ಇನ್ನೂ ಕುರುಹು ಸಿಕ್ಕಿಲ್ಲ. ಅವರ ಬಗ್ಗೆ ಪೊಲೀಸರಿಂದ ಮಾಹಿತಿ ಸಿಗಬಹುದು ಎಂಬ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿದ್ದೇನೆ. ನಿತ್ಯ ಆತಂಕದಿಂದಲೇ ದಿನ ದೂಡುತ್ತಿದ್ದೇನೆ ಎಂದು ನಾಪತ್ತೆಯಾಗಿರುವ ಸಹೋದರಿಯರ ತಂದೆ ನೊಂದು ನುಡಿದಿದ್ದಾರೆ.

  • ಏರ್‌ಬಸ್‌ ಜೊತೆಗೂಡಿ ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ

    ಏರ್‌ಬಸ್‌ ಜೊತೆಗೂಡಿ ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ

    – ವಡೋದರಾದಲ್ಲಿ ನಿರ್ಮಾಣ, ಅ.30ಕ್ಕೆ ಮೋದಿ ಶಂಕುಸ್ಥಾಪನೆ
    – ಯುರೋಪ್‌ ಹೊರಗಡೆ ತೆರೆಯುತ್ತಿರುವ ಮೊದಲ ಏರ್‌ಬಸ್‌ ಘಟಕ

    ನವದೆಹಲಿ: ಏರ್‌ ಇಂಡಿಯಾ ಖರೀದಿಸಿದ್ದ ಟಾಟಾ ಸಮೂಹ(Tata Group) ಈಗ  ವಿಮಾನ ತಯಾರಿಸಲು ಮುಂದಾಗಿದೆ.

    ಹೌದು. ಜಗತ್ತಿನ ದೊಡ್ಡ ವಿಮಾನ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ ಯುರೋಪ್‌ ಮೂಲದ ಏರ್‌ಬಸ್‌(Airbus) ಜೊತೆಗೂಡಿ ಮೇಕ್‌ ಇನ್‌ ಇಂಡಿಯಾ(Make In India) ಅಡಿ ಟಾಟಾ ಸಮೂಹ ವಾಯುಸೇನೆಗೆ C-295MW ವಿಮಾನವನ್ನು ನಿರ್ಮಾಣ ಮಾಡಲಿದೆ.

    ಗುಜರಾತಿನ ವಡೋದರಾದಲ್ಲಿ(Vadodara) ನಿರ್ಮಾಣ ಘಟಕ ಆರಂಭವಾಗಲಿದ್ದು ಪ್ರಧಾನಿ ನರೇಂದ್ರ ಮೋದಿ(Narenndra Modi) ಅ.30 ರಂದು ಶಂಕುಸ್ಥಾಪನೆ ನಡೆಸಲಿದ್ದಾರೆ. ಯೋಜನೆಯ ಒಟ್ಟು ವೆಚ್ಚ 21,935 ಕೋಟಿ ರೂ. ಆಗಿದ್ದು ವಿಮಾನವನ್ನು ನಾಗರಿಕ ಉದ್ದೇಶಗಳಿಗಾಗಿಯೂ ಬಳಸಬಹುದಾಗಿದೆ.

    ಯುರೋಪ್‌ ಹೊರಗಡೆ ಏರ್‌ಬಸ್‌ ಕಂಪನಿ ತನ್ನ ತಯಾರಿಕಾ ಘಟಕ ತೆರೆಯುತ್ತಿರುವುದು ಇದೇ ಮೊದಲಾಗಿರುವ ಕಾರಣ ಈ ಯೋಜನೆ ಭಾರೀ ಮಹತ್ವ ಪಡೆದಿದೆ. ಇದನ್ನೂ ಓದಿ: ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೆ ಕರ್ನಾಟಕವನ್ನು ಬಿಟ್ಟು ಗುಜರಾತ್‌ ಆಯ್ಕೆ ಮಾಡಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ವೇದಾಂತ ಕಂಪನಿ

    ಏನಿದು ಯೋಜನೆ?
    ರಕ್ಷಣೆಯಲ್ಲಿ ಸ್ವಾವಲಂಬಿಯಾಗಲು ಭಾರತ ಮುಂದಾಗುತ್ತಿದ್ದು ಈ ನಿಟ್ಟಿನಲ್ಲಿ ಮೇಕ್‌ ಇನ್‌ ಇಂಡಿಯಾದ ಅಡಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. 2021ರ ಸೆಪ್ಟೆಂಬರ್‌ನಲ್ಲಿ ರಕ್ಷಣೆಗೆ ಸಂಬಂಧಿಸಿದ ಉಪಸಮಿತಿ ಏರ್‌ಬಸ್‌ ಕಂಪನಿಯ ಜೊತೆ 56 C-295MW ಸರಕು ವಿಮಾನ ಖರೀದಿ ಸಂಬಂಧ ಒಪ್ಪಂದ ನಡೆಸಿತ್ತು. ಏರ್‌ಬಸ್‌ ಕಂಪನಿ ಮೊದಲು ಹಾರಾಟಕ್ಕೆ ಯೋಗ್ಯವಾಗಿರುವ 16 ವಿಮಾನಗಳನ್ನು ನೀಡಬೇಕು. ಬಳಿಕ 40 ವಿಮಾನಗಳನ್ನು ಭಾರತದಲ್ಲೇ ತಯಾರಿಸಿ ವಾಯುಸೇನೆಗೆ ಹಸ್ತಾಂತರಿಸಬೇಕು ಎಂದು ಒಪ್ಪಂದದಲ್ಲಿ ತಿಳಿಸಲಾಗಿತ್ತು.

    ವಾಯುಸೇನೆಗೆ 56 ವಿಮಾನಗಳ ವಿತರಣೆಯನ್ನು ಪೂರ್ಣಗೊಳಿಸಿದ ನಂತರ, ಏರ್‌ಬಸ್ ಡಿಫೆನ್ಸ್ ಭಾರತದಲ್ಲಿ ತಯಾರಿಸಿದ ವಿಮಾನಗಳನ್ನು ಸಿವಿಲ್ ಆಪರೇಟರ್‌ಗಳಿಗೆ ಮಾರಾಟ ಮಾಡಬಹುದು. ಅಷ್ಟೇ ಅಲ್ಲದೇ ಭಾರತ ಸರ್ಕಾರ ಅನುಮತಿ ನೀಡಿದ ದೇಶಗಳಿಗೆ ರಫ್ತು ಮಾಡಬಹುದಾಗಿದೆ

    C-295MW ಸಮಕಾಲೀನ ತಂತ್ರಜ್ಞಾನದೊಂದಿಗೆ 5-10 ಟನ್ ಸಾಮರ್ಥ್ಯದ ಸಾರಿಗೆ ವಿಮಾನವಾಗಿದ್ದು ಅದು ವಾಯುಸೇನೆಯ ಹಳೆಯ ಅವ್ರೋ ವಿಮಾನವನ್ನು ಬದಲಾಯಿಸುತ್ತದೆ. ಎಲ್ಲಾ 56 ವಿಮಾನಗಳಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ ಅಭಿವೃದ್ಧಿ ಪಡಿಸಿರುವ ಸ್ಥಳೀಯ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್‌ಗಳನ್ನು ಅಳವಡಿಸಲಾಗುತ್ತದೆ.

    ಮುಂದಿನ ದಿನಗಳಲ್ಲಿ ಭಾರತದಲ್ಲಿ ವಾಯು ಸಾರಿಗೆ ದೊಡ್ಡ ಉದ್ಯಮವಾಗಿ ಬೆಳೆಯುವುದರಿಂದ ಆಮದು ಅವಲಂಬನೆಯನ್ನು ಕಡಿಮೆ ಮಾಡಲಿದೆ. ಹೆಚಿನ ರಫ್ತು ಮಾಡುವುದರ ಜೊತೆಗೆ ದೇಶೀಯ ವಿಮಾನಯಾನ ತಯಾರಿಕೆಯನ್ನು ವೃದ್ಧಿಸಲಿದೆ.

    ಭಾರತದಲ್ಲಿ ಮಿಲಿಟರಿ ವಿಮಾನಗಳನ್ನು ಎಚ್‌ಎಎಲ್‌ ಕಂಪನಿ ತಯಾರಿಸುತ್ತಿದೆ. ಆದರೆ ವಿದೇಶಿ ಕಂಪನಿ ಮಿಲಿಟರಿ ವಿಮಾನಗಳನ್ನು ದೇಶದಲ್ಲಿ ತಯಾರಿಸಲು ಮುಂದಾಗುತ್ತಿರುವುದು ಇದೇ ಮೊದಲು.

    Live Tv
    [brid partner=56869869 player=32851 video=960834 autoplay=true]

  • 400 ವರ್ಷ ಹಳೆಯ ಇತಿಹಾಸವಿರುವ ʼಕೋಥಿಸ್‌ʼ ಪಟಾಕಿಗಳ ತಯಾರಿಕೆ ಮತ್ತೆ ಆರಂಭ- ಏನಿದರ ವೈಶಿಷ್ಟ್ಯ?

    400 ವರ್ಷ ಹಳೆಯ ಇತಿಹಾಸವಿರುವ ʼಕೋಥಿಸ್‌ʼ ಪಟಾಕಿಗಳ ತಯಾರಿಕೆ ಮತ್ತೆ ಆರಂಭ- ಏನಿದರ ವೈಶಿಷ್ಟ್ಯ?

    ಗಾಂಧಿನಗರ: ಜೇಡಿಮಣ್ಣನ್ನು ಬಳಸಿ ಪಟಾಕಿ ತಯಾರಿಸುವ 400 ವರ್ಷಗಳಷ್ಟು ಹಳೆಯದಾದ ವಿಧಾನವನ್ನು ವಡೋದರದಲ್ಲಿ ಮತ್ತೆ ಆರಂಭಿಸಲಾಗಿದೆ.

    FIRECRACKERS

    ವಡೋದರಾ ಜಿಲ್ಲೆಯ ಕುಮ್‌ಹರ್ವಾಡ, ಫತೇಪುರ್‌ನಲ್ಲಿ ಕೆಲವು ಕುಶಲಕರ್ಮಿಗಳು ವಾಸವಾಗಿದ್ದಾರೆ. ಅವರು ಜೇಡಿಮಣ್ಣಿನಿಂದ ಪಟಾಕಿಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿದ್ದಾರೆ. ʼಕೋಥಿಸ್‌ʼ ಹೆಸರಿನಲ್ಲಿ ಕರೆಯಲ್ಪಡುವ ವಿವಿಧ ಮಾದರಿಯ ಪಟಾಕಿಗಳನ್ನು ಅವರು ತಯಾರಿಸುತ್ತಾರೆ. ಇದನ್ನೂ ಓದಿ: ಸೆಪ್ಟೆಂಬರ್‌ನಲ್ಲಿ 22 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್‌

    ಚೀನಾದ ಹೊಸ ಮಾದರಿಯ ಪಟಾಕಿಗಳು ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಪರಿಣಾಮವಾಗಿ ವಡೋದರದಲ್ಲಿ ಪಟಾಕಿ ತಯಾರಿಸುವ ಹಳೆಯ ವಿಧಾನ ನಿಂತುಹೋಯಿತು. ಈಗ ಮತ್ತೆ ಆರಂಭವಾಗಿದೆ.

    400 ವರ್ಷಗಳಷ್ಟು ಹಳೆಯದಾದ ಈ ಉತ್ಪಾದನಾ ಕಲೆಯನ್ನು ಪ್ರೋತ್ಸಾಹಿಸಲು ಪ್ರಮುಖ್‌ ಪರಿವಾರ ಫೌಂಡೇಷನ್‌ ಎಂಬ ಎನ್‌ಜಿಒ ಸಹಾಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ “ವೋಕಲ್‌ ಫಾರ್‌ ಲೋಕಲ್”‌ (ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು) ಕರೆಯಿಂದ ಪ್ರೇರೇಪಣೆಗೊಂಡು ಈ ಕಾರ್ಯ ಮಾಡುತ್ತಿರುವುದಾಗಿ ಎನ್‌ಜಿಒ ತಿಳಿಸಿದೆ. ಈ ಕಲೆ ಮುಂದಿನ ಪೀಳಿಗೆಗೆ ಬಳುವಳಿ ಅಷ್ಟೇ ಅಲ್ಲ, ಸ್ತಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲು ಸಹಕಾರಿಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಮಗ ಮನೆಗೆ ಹಿಂದಿರುಗುತ್ತಿದ್ದಂತೆ ಶಾರೂಖ್ ನಿವಾಸದಲ್ಲಿ ಕಳೆಗಟ್ಟಿದ ದೀಪಾವಳಿ ಹಬ್ಬದ ಸಂಭ್ರಮ

    “ಇದು ಅಪ್ಪಟ ಸ್ಥಳೀಯ ಕಲೆಯಾಗಿದೆ. ಕೋಥಿಸ್‌ ಪಟಾಕಿಗಳನ್ನು ಜೇಡಿಮಣ್ಣಿನಿಂದ ಮಾಡಲಾಗುತ್ತದೆ. ಇದು ಪರಿಸರ ಸ್ನೇಹಿಯಾಗಿದೆ. ಈ ಪಟಾಕಿಗಳನ್ನು ಬಳಸಿದ ನಂತರ ಕರಗಿಸಬಹುದು. ಮಕ್ಕಳು ಸುರಕ್ಷಿತವಾಗಿಯೇ ಇವುಗಳನ್ನು ಬಳಸಬಹುದು. ಯಾರು ಬೇಕಾದರೂ ಈ ಪಟಾಕಿಗಳನ್ನು ಬಳಸಬಹುದು” ಎಂದು ಫೌಂಡೇಷನ್‌ನ ಅಧ್ಯಕ್ಷ ನಿತಲ್‌ ಗಾಂಧಿ ತಿಳಿಸಿದ್ದಾರೆ.

    DEEPAVALI

    “ಈ ಪಟಾಕಿಗಳು ಕೈಯಲ್ಲಿ ಹಿಡಿದುಕೊಂಡು ಸಿಡಿಸುವಷ್ಟು ಸುರಕ್ಷಿತವಾಗಿವೆ. ನಮ್ಮ ಪೂರ್ವಿಕರೆಲ್ಲ ಇದೇ ಮಾದರಿ ಪಟಾಕಿಗಳನ್ನು ಬಳಸುತ್ತಿದ್ದರು. 20 ವರ್ಷಗಳ ಹಿಂದೆಯೇ ನಷ್ಟದ ಕಾರಣ ನಾನು ಈ ಪಟಾಕಿಗಳನ್ನು ತಯಾರಿಸುವುದನ್ನು ನಿಲ್ಲಿಸಿದ್ದೆ. ಆದರೆ ನಿತಲ್‌ ಅವರು ಇಲ್ಲಿ ಸುತ್ತಾಡುತ್ತಿದ್ದಾಗ ಅವರಿಗೆ ಒಂದಷ್ಟು ಸ್ಯಾಂಪಲ್ಸ್‌ ತೋರಿಸಿದ್ದೆ. ಅವರ ಸಲಹೆಯಂತೆ ಮತ್ತೆ ಪಟಾಕಿ ತಯಾರಿಸುವುದು ಆರಂಭಿಸಿದ್ದೇನೆ. ದೀಪಾವಳಿ ಸಂದರ್ಭದಲ್ಲಿ ನಮಗೆ ಆದಾಯವೂ ಬರುತ್ತಿದೆ. 1.5 ಲಕ್ಷ ಕೋಥಿಸ್‌ ಪಟಾಕಿಗಳನ್ನು ತಯಾರಿಸಲಿದ್ದೇವೆ” ಎಂದು ಕುಶಲಕರ್ಮಿ ರಾಮನ್‌ ಪ್ರಜಾಪತಿ ಹೇಳಿದ್ದಾರೆ.

  • ಮೊಸಳೆ ಜೊತೆ ಕುಳಿತು ವ್ಯಕ್ತಿ ಮಾತುಕತೆ – ವಿಚಿತ್ರ ದೃಶ್ಯ ನೋಡಿ ಬೆಚ್ಚಿ ಬಿದ್ದ ಸ್ಥಳೀಯರು

    ಮೊಸಳೆ ಜೊತೆ ಕುಳಿತು ವ್ಯಕ್ತಿ ಮಾತುಕತೆ – ವಿಚಿತ್ರ ದೃಶ್ಯ ನೋಡಿ ಬೆಚ್ಚಿ ಬಿದ್ದ ಸ್ಥಳೀಯರು

    ಗಾಂಧಿನಗರ: ಮೊಸಳೆ ಅಂದರೆ ಯಾರಿಗೆ ತಾನೇ ಭಯ ಇಲ್ಲ. ಮೊಸಳೆ ಹತ್ತಿರ ಹೋಗುವುದಕ್ಕೂ ಜನ ಹೆದರಿಕೊಳ್ಳುತ್ತಾರೆ. ಒಂದು ಬಾರಿ ಮೊಸಳೆ ಬಾಯಿಗೆ ಸಿಕ್ಕರೆ ಮತ್ತೆ ಮನುಷ್ಯ ಉಳಿಯುವುದೇ ಕಷ್ಟ. ಅಂತಹ ಭಯಾನಕ ಮೊಸಳೆಯೊಂದಿಗೆ ವ್ಯಕ್ತಿಯೊಬ್ಬ ಕುಳಿತು ಸ್ನೇಹದಿಂದ ಮಾತನಾಡುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ನದಿ ಬಳಿ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಜೀವವನ್ನು ಲೆಕ್ಕಿಸದೇ ಮೊಸಳೆಗೆ ನಮಸ್ಕಾರ ಮಾಡಿ, ಅದನ್ನು ಮುಟ್ಟಿ ಅದರ ಜೊತೆ ತಾಳ್ಮೆಯಿಂದ ಮಾತನಾಡಿದ್ದಾನೆ. ಮೊಸಳೆ ಬಾಯಿಗೆ ಆತ ಆಹಾರವಾದರೆ ಎಂಬ ಆತಂಕದಿಂದ ಅಲ್ಲಿಂದ್ದ ಜನ ಆತನನ್ನು ಎದ್ದು ಹಿಂದಕ್ಕೆ ಬರುವಂತೆ ಕೂಗುತ್ತಿರುವುದು ವೀಡಿಯೋನಲ್ಲಿ ಕಂಡು ಬಂದಿದೆ.

    ವೀಡಿಯೋದಲ್ಲಿರುವ ವ್ಯಕ್ತಿಯನ್ನು ಪಂಕಜ್ ಎಂದು ಗುರುತಿಸಲಾಗಿದ್ದು, ಗುಜರಾತ್‍ನ ವಡೋದರ ಮೂಲದವನಾಗಿದ್ದಾನೆ. ವೀಡಿಯೋನಲ್ಲಿ ಮೊಸಳೆ ಮೇಲೆ ತನ್ನ ಕೈಗಳಿಂದ ಸವರುತ್ತಾ ಅದನ್ನು ತನ್ನ ತಾಯಿ ಎಂದು ಕರೆಯುವ ಮೂಲಕ ನಮಸ್ಕರಿಸಿ ಯಾರಾದರೂ ನಿಮ್ಮನ್ನು ಕಲ್ಲಿನಿಂದ ಹೊಡೆದರೆ ನಿಮ್ಮ ಮಗ(ತನ್ನನ್ನು ಉಲ್ಲೇಖಿಸಿ) ಅವರನ್ನು ಸುಮ್ಮನೆ ಬಿಡುವುದಿಲ್ಲ ನಿಮ್ಮನ್ನು ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಾನೆ ಎಂದು ಹೇಳಿಕೊಂಡಿದ್ದಾನೆ.

    ಈ ವೇಳೆ ಸ್ಥಳೀಯರು ಆತನನ್ನು ಎಷ್ಟೇ ಕರೆದರೂ ಬರದೇ ಕೊನೆಗೆ ಸ್ವಲ್ಪ ಸಮಯದ ನಂತರ ಅಲ್ಲಿಂದ ಎದ್ದು ಹಿಂದಕ್ಕೆ ಬಂದಿದ್ದಾನೆ. ಸದ್ಯ ಮೊಸಳೆಯಿಂದ ಆತನಿಗೆ ಯಾವುದೇ ಅಪಾಯವಾಗಲಿಲ್ಲ ಎಂದು ಅಲ್ಲಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

  • ಇಂಟೀರಿಯರ್ ಡಿಸೈನಿಂಗ್ ಹೆಸರಲ್ಲಿ ವರ್ಚುವಲ್ ಸೆಕ್ಸ್ ದಂಧೆ

    ಇಂಟೀರಿಯರ್ ಡಿಸೈನಿಂಗ್ ಹೆಸರಲ್ಲಿ ವರ್ಚುವಲ್ ಸೆಕ್ಸ್ ದಂಧೆ

    – ಯುವತಿಯರಿಗೆ ಅಂಗಾಂಗ ಪ್ರದರ್ಶನದ ಟ್ರೈನಿಂಗ್
    – 25 ಲಕ್ಷ ಮೌಲ್ಯದ ಬಿಟ್ ಕಾಯಿನ್ ವಶಕ್ಕೆ

    ಗಾಂಧಿನಗರ: ಇಂಟೀರಿಯರ್ ಡಿಸೈನಿಂಗ್ ಆ್ಯಂಡ್ ಆರ್ಕಿಟೆಕ್ಟ್ ಹೆಸರಿನಲ್ಲಿ ವರ್ಚುವಲ್ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ದಂಧೆಯ ಮಾಸ್ಟರ್ ಮೈಂಡ್ ಅರೆಸ್ಟ್ ಆಗಿದ್ದಾನೆ.

    ವಡೋದರ ನಗರದಲ್ಲಿ ವರ್ಚುವಲ್ ಸೆಕ್ಸ್ ದಂಧೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಹಾಗೆ ನಗರಕ್ಕೆ ಅನ್ಯ ರಾಜ್ಯಗಳ ಯುವತಿಯರ ಆಗಮಿಸುತ್ತಿರುವ ಸಂಖ್ಯೆ ಹೆಚ್ಚಾಗಿತ್ತು. ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಇಂಟೀರಿಯರ್ ಡಿಸೈನಿಂಗ್ ಆ್ಯಂಡ್ ಆರ್ಕಿಟೆಕ್ಟ್ ಹೆಸರಿನ ಬೋರ್ಡ್ ಹಾಕಿದ್ದ ಕಟ್ಟಡದ ಮೇಲೆ ದಾಳಿ ನಡೆಸಿದ್ದರು. ದಂಧೆ ಸಂಚಾಲಕ ಮಾಸ್ಟರ್ ಮೈಂಡ್ ನೀಲೇಶ್ ಗುಪ್ತಾನ ಬಂಧನವಾಗಿದೆ. ನೀಲೇಶ್ ಆಪ್ತ ಅಮಿ ಪರ್ಮಾರ್ ಎಸ್ಪೇಕ್ ಆಗಿದ್ದಾನೆ. ಇದನ್ನೂ ಓದಿ: ಮದ್ವೆ ಆಗೋದು ಹೇಳಿ ಸೆಕ್ಸ್- ಗರ್ಭಿಣಿಯಾಗ್ತಿದ್ದಂತೆ ಬಯಲಾಯ್ತು ಪ್ರೇಮಿಯ ಕರಾಳ ಮುಖ

    ಒಂದೂವರೆ ವರ್ಷದಿಂದ ವಡೋದರದಲ್ಲಿ ಈ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಪೋರ್ನ್ ವೆಬ್‍ಸೈಟ್ ನಲ್ಲಿ ಹೇಗೆ ಅಂಗಾಂಗ ಪ್ರದರ್ಶಿಸಬೇಕು ಎಂಬುದರ ಕುರಿತು ತರಬೇತಿ ನೀಡಲಾಗುತ್ತಿತ್ತು. ಹೀಗಾಗಿ ಬೇರೆ ರಾಜ್ಯಗಳಿಂದಲೂ ಯುವತಿಯರನ್ನ ಇಲ್ಲಿಗೆ ಕರೆತರಲಾಗುತ್ತಿತ್ತು. ಇದನ್ನೂ ಓದಿ: ಒಂದು ಮನೆ, ಐದು ಕೋಣೆ- ಸೆಕ್ಸ್ ನಲ್ಲಿ ತೊಡಗಿದ್ದ 5 ಜೋಡಿಯ ಬಂಧನ

    ಈ ಎಲ್ಲ ವ್ಯವಹಾರ ಬಂಧಿತ ನೀಲೇಶ್ ರಷ್ಯನ್ ಪತ್ನಿಯಿಂದ ನಡೆಯುತ್ತಿತ್ತು. ಬಿಟ್ ಕಾಯಿನ್ ಮೂಲಕ ಹಣಕಾಸಿನ ವ್ಯವಹಾರ ನಡೆಯುತ್ತಿತ್ತು. ದಾಳಿ ವೇಳೆ 30 ಬಿಟ್ ಕಾಯಿನ್ ವಾಲೆಟ್ ಮತ್ತು 25 ಲಕ್ಷ ಮೌಲ್ಯದ 9.45 ಬಿಟ್ ಕಾಯಿನ್ ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಲ್ಯಾಪ್‍ಟಾಪ್, ವೆಬ್ ಕ್ಯಾಮ್ ಜೊತೆ ಕೆಲ ದಾಖಲೆ ಪತ್ರ ವಶಕ್ಕೆ ಪಡೆದು ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಈ ಸೆಕ್ಸ್ ದಂಧೆಯಲ್ಲಿ ಹಲವರು ಭಾಗಿಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಸಂದೀಪ್ ಚೌಧರಿ ಹೇಳಿದ್ದಾರೆ. ಇದನ್ನೂ ಓದಿ:  ಗೆಳತಿಗೆ ಹೇಳದೇ ಕಾಂಡೋಮ್‍ಗೆ ರಂಧ್ರ ಹಾಕಿ ಸೆಕ್ಸ್- 4 ವರ್ಷ ಜೈಲು ಶಿಕ್ಷೆ

  • ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ 11 ಜನರ ಸಾವು

    ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ 11 ಜನರ ಸಾವು

    – ಮುಂದಿನ ತಿಂಗ್ಳು ಮದ್ವೆ ನಿಶ್ಚಯವಾಗಿದ್ದ ಯುವಕ
    – ದೇವರ ದರ್ಶನಕ್ಕೆ ಹೊರಟಿದ್ದ ಕುಟುಂಬ
    – ನಿದ್ದೆಯಲ್ಲಿದ್ದವರು ಏಳಲೇ ಇಲ್ಲ

    ಗಾಂಧಿನಗರ: ಗುಜರಾತಿನ ವಡೋದರ ಬಳಿ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ 11 ಜನರು ಮೃತಪಟ್ಟಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಇಡೀ ಕುಟುಂಬವೊಂದು ನಾಶವಾಗಿದೆ. ಮೂವರು ಪುರುಷರು ಸೇರಿದಂತೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತ ಸುರೇಶ್ ಮದುವೆ ಮುಂದಿನ ತಿಂಗಳು ನಿಶ್ಚಯವಾಗಿತ್ತು. ಸೂ ರತ್ ನಗರದ ನಿವಾಸಿಯಾಗಿದ್ದ ಕುಟುಂಬ ವಾಸಿಸುತ್ತಿದ್ದ ಸೊಸೈಟಿಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

    ಆಸ್ಪತ್ರೆಗೆ ಬರುವ ಮೊದಲೇ ಒಂಬತ್ತು ಜನರು ಸಾವನ್ನಪ್ಪಿದ್ದರು. ಇನ್ನಿಬ್ಬರಿಗೆ ಚಿಕಿತ್ಸೆ ನೀಡುವಷ್ಟರಲ್ಲಿ ಪ್ರಾಣ ಬಿಟ್ಟಿದ್ದರು. ಐವರು ಮಹಿಳೆಯರು, ನಾಲ್ಕು ಜನ ಪುರಷರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 11 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೆಚ್ಚು ರಕ್ತಸ್ರಾವವಾದ ಹಿನ್ನೆಲೆ ಎಲ್ಲರ ಸಾವು ಆಗಿದೆ ಎಂದು ವಡೋದರ ಸಯ್ಯಾಜಿ ಆಸ್ಪತ್ರೆಯ ವೈದ್ಯ ರಂಜನ್ ಮಾಹಿತಿ ನೀಡಿದ್ದಾರೆ.

    ಮಲಗಿದ್ದವರು ಏಳಲೇ ಇಲ್ಲ: ವಡೋದರ ಜಿಲ್ಲೆಯ ವಾಘೋಡಿಯಾ ಚೌಕ್ ಬಳಿಯಲ್ಲಿ ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಅಪಘಾತ ಸಂಭವಿಸಿದೆ. ಮೃತರು ಮಿನಿ ಟ್ರಕ್ ಬಾಡಿಗೆ ಪಡೆದು ಸೂರತ್ ನಿಂದ ಪಾಗಾಗಢದ ಮೂಲಕ ಡಾಕೋರ್ ದೇವಸ್ಥಾನಕ್ಕೆ ತೆರಳುತ್ತಿದ್ದರು. ಅಪಘಾತದ ವೇಳೆ ಪ್ರಯಾಣಿಕರೆಲ್ಲರೂ ನಿದ್ರೆಯಲ್ಲಿದ್ದರು. ಘಟನೆಯ ಬಳಿಕ ಪ್ರಯಾಣಿಕರು ಚೀರಾಟ ಕೇಳಿದ ಸ್ಥಳೀಯರು ಸಹಾಯಕ್ಕೆ ಆಗಮಿಸಿ ಅಂಬುಲೆನ್ಸ್ ಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಜನರು ವಾಹನದಲ್ಲಿ ಸಿಲುಕಿದ್ದವರು ರಕ್ಷಣಾ ಕಾರ್ಯಕ್ಕೆ ಮುಂದಾಗಿ ಪ್ರಾಣ ಉಳಿಸಲು ಹರಸಾಹಸಪಟ್ಟಿದ್ದರು.

    ವಾಘೋಡಿಯಾ ಚೌಕ್ ಬಳಿ ದೇವಸ್ಥಾನಕ್ಕೆ ಹೊರಟ್ಟಿದ್ದ ಮಿನಿ ಟ್ರಕ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 11 ಜನರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿಯ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಗುಜರಾತ ಸಿಎಂ ವಿಜಯ್ ರೂಪಾನಿ ಸೂಚಿಸಿದ್ದಾರೆ.

  • ಶಾಲೆ ನಡೆಯಲೇಬಾರದೆಂದು ಸಹಪಾಠಿಯನ್ನು 10ಕ್ಕೂ ಹೆಚ್ಚು ಬಾರಿ ಇರಿದು ಕೊಂದೇಬಿಟ್ಟ!

    ಶಾಲೆ ನಡೆಯಲೇಬಾರದೆಂದು ಸಹಪಾಠಿಯನ್ನು 10ಕ್ಕೂ ಹೆಚ್ಚು ಬಾರಿ ಇರಿದು ಕೊಂದೇಬಿಟ್ಟ!

    ವಡೋದರ: ಕಳೆದ ಎರಡು ದಿನಗಳ ಹಿಂದೆ ಗುಜರಾತ್ ವಡೋದರ ಶಾಲೆಯ ಶೌಚಾಲಯದಲ್ಲಿ ಕೊಲೆಯಾಗಿದ್ದ ವಿದ್ಯಾರ್ಥಿಯ ಪ್ರಕರಣವನ್ನು ಬೇಧಿಸಲು ಪೊಲೀಸರು ಯಶಸ್ವಿಯಾಗಿದ್ದು, ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೊಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಶಾಲೆಯ ಹಿರಿಯ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಮಕ್ಕಳ ಬಾಲಾಪರಾಧಿ ಕಾಯ್ದೆಯ ಅಡಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಏನಿದು ಘಟನೆ:
    ಕಳೆದ ಶುಕ್ರವಾರ 14 ವರ್ಷದ 9ನೇತರಗತಿ ವಿದ್ಯಾರ್ಥಿಯನ್ನು ಶಾಲೆಯ ಶೌಚಾಲಯದಲ್ಲಿ ಚಾಕುವಿನಿಂದ ಹಿರಿದು ಕೊಲೆ ಮಾಡಲಾಗಿತ್ತು. ಈ ಶಾಲೆಯ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದು ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಈ ವೇಳೆ ಕೊಲೆಯಾದ ವಿದ್ಯಾರ್ಥಿ ದೇಹದ ಮೇಲೆ 10ಕ್ಕೂ ಹೆಚ್ಚು ಗಾಯದ ಗುರುತು ಪತ್ತೆಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಶಾಲೆಯ 10ನೇ ವಿದ್ಯಾರ್ಥಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ವಿದ್ಯಾರ್ಥಿಯನ್ನು ಕಳೆದ ಒಂದು ವಾರದ ಹಿಂದೆಯಷ್ಟೇ ಶಾಲೆಗೆ ದಾಖಲು ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಕೊಲೆ

    ಕೊಲೆ ಮಾಡಿದ್ದು ಏಕೆ?
    ಆರೋಪಿ ವಿದ್ಯಾರ್ಥಿ ಕೊಲೆಗೆ ಮಾಡಲು ಕಾರಣವನ್ನು ಬಿಚ್ಚಿಟ್ಟಿದ್ದು, ಶಾಲೆಯ ಶಿಕ್ಷಕರು ಹೋಂ ವರ್ಕ್ ಮಾಡದೇ ಬಂದ ಕಾರಣ ಬೈದಿದ್ದರು. ಅದ್ದರಿಂದ ಶಾಲೆ ನಾಳೆಯಿಂದ ನಡೆಯಬಾರದು ಎಂದು ತೀರ್ಮಾನಿಸಿ ಈ ಕೃತ್ಯ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಶಾಲೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ ವೇಳೆ ವಿದ್ಯಾರ್ಥಿಯ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಾಲಕ ಪ್ರದ್ಯುಮನ್ ಕೊಲೆ ಆರೋಪಿಯನ್ನ ಚಾಕು ಅಂಗಡಿಗೆ ಕರೆದುಕೊಂಡು ಹೋದ ಸಿಬಿಐ

    ಆರೋಪಿ ವಿದ್ಯಾರ್ಥಿ ತನ್ನ ಪೋಷಕರ ಮನೆಯಲ್ಲಿ ವಾಸವಿದ್ದು, ಆತನ ತಂದೆ ತಾಯಿ ಗುಜರಾತ್‍ನ ಅನಂದ್ ನಗರದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಗುರುಗಾಂವ್ ನಲ್ಲಿ ಇಂತಹದ್ದೇ ಘಟನೆ ವರದಿಯಾಗಿತ್ತು. 7 ವರ್ಷದ ಬಾಲಕನನ್ನು ಸಹಪಾರಿ ವಿದ್ಯಾರ್ಥಿ ಶೌಚಾಲಯದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಸದ್ಯ ಈ ಘಟನೆ ಮಸುವ ಮುನ್ನವೇ ಮತ್ತೊಂದು ಘಟನೆ ನಡೆದಿದ್ದು, ಪೋಷಕರಲ್ಲಿ ಅಂತಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಪ್ರದ್ಯುಮನ್ ಕೊಲೆ ಪ್ರಕರಣ- ವಿದ್ಯಾರ್ಥಿ ಮೇಲೆ ತಿಂಗಳ ಹಿಂದೆಯೇ ಸಿಬಿಐಗೆ ಅನುಮಾನವಿತ್ತು

  • ಬಿಜೆಪಿ ನಾಯಕರು ನಮಿಸಿದ್ದಕ್ಕೆ ಅಂಬೇಡ್ಕರ್ ಪ್ರತಿಮೆಗೆ ಶುದ್ಧಿ ಕಾರ್ಯ!

    ಬಿಜೆಪಿ ನಾಯಕರು ನಮಿಸಿದ್ದಕ್ಕೆ ಅಂಬೇಡ್ಕರ್ ಪ್ರತಿಮೆಗೆ ಶುದ್ಧಿ ಕಾರ್ಯ!

    ವಡೋದರ: 127 ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಅಂಬೇಡ್ಕರ್ ಪ್ರತಿಮೆ ಬಿಜೆಪಿ ನಾಯಕರು ನಮನ ಸಲ್ಲಿಸಿದ ಬಳಿಕ ಪ್ರತಿಮೆಯನ್ನು ಶುದ್ಧೀಕರಣಗೊಳಿಸಿರುವ ಘಟನೆ ಗುಜರಾತ್ ನ ವಡೋದರದಲ್ಲಿ ನಡೆದಿದೆ.

    ಕೇಂದ್ರ ಸಚಿವೆಯಾದ ಮನೇಕಾ ಗಾಂಧಿ ಸೇರಿದಂತೆ ಹಲವು ಬಿಜೆಪಿ ನಾಯಕರು ಅಂಬೇಡ್ಕರ್ ಪ್ರತಿಮೆ ಬಳಿ ತೆರಳಿ ನಮನ ಸಲ್ಲಿಸಿದ್ದರು. ಇತ್ತ ಬಿಜೆಪಿ ನಾಯಕರು ಸ್ಥಳದಿಂದ ಹಿಂದಿರುಗುತ್ತಿದ್ದಂತೆ ದಲಿತ ಮುಖಂಡರು ಪ್ರತಿಮೆಯನ್ನು ಹಾಲಿನಿಂದ ಶುದ್ಧಿಗೊಳಿಸಿದರು.

    ಬಿಜೆಪಿ ಮುಖಂಡರು ಆಗಮನಕ್ಕೂ ಮುನ್ನವೇ ಅಂಬೇಡ್ಕರ್ ಪ್ರತಿಮೆಗೆ ನಮನ ಸಲ್ಲಿಸಲು ಬಂದ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ದಲಿತ ಮುಖಂಡರೊಬ್ಬರು ಬಿಜೆಪಿ ನಾಯಕರು ನಮನ ಸಲ್ಲಿಸಿದ್ದರಿಂದ ಪ್ರತಿಮೆ ಅಪವಿತ್ರವಾಗಿದೆ. ಆದ್ದರಿಂದ ಹಾಲಿನಿಂದ ಶುದ್ಧೀಕರಿಸಿದ್ದೇವೆ ಎಂದು ಹೇಳಿದ್ದಾರೆ.

    ಬಿಜೆಪಿ ನಾಯಕರು ಸ್ಥಳಕ್ಕೆ ಆಗಮಿಸುವ ಮುನ್ನವೇ ನಾವು ಅಂಬೇಡ್ಕರ್ ಪ್ರತಿಮೆಗೆ ನಮನ ಸಲ್ಲಿಸಲು ಮುಂದಾಗಿದ್ದೆವು, ಆದರೆ ಪೊಲೀಸರು ಬಿಜೆಪಿ ನಾಯಕರು ಆಗಮಿಸುತ್ತಾರೆ ಎಂಬ ಕಾರಣದಿಂದ ನಮಗೆ ಅಡ್ಡಿಪಡಿಸಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರಕಾಶ್ ರೈ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ಶುದ್ಧಗೊಳಿಸಿದ ಬಿಜೆಪಿ

  • ಮರಕ್ಕೆ ಕಟ್ಟಿ ಬಿಜೆಪಿ ಕಾರ್ಪೊರೇಟರ್ ಮೇಲೆ 30 ಜನರಿಂದ ಹಲ್ಲೆ- ವಿಡಿಯೋ ವೈರಲ್

    ಮರಕ್ಕೆ ಕಟ್ಟಿ ಬಿಜೆಪಿ ಕಾರ್ಪೊರೇಟರ್ ಮೇಲೆ 30 ಜನರಿಂದ ಹಲ್ಲೆ- ವಿಡಿಯೋ ವೈರಲ್

    ವಡೋದರ: ನೋಟಿಸ್ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದ ಸ್ಥಳೀಯ ಬಿಜೆಪಿ ಪಾಲಿಕೆಯ ಕಾರ್ಪೊರೇಟರ್ ಒಬ್ಬರನ್ನು ಮರಕ್ಕೆ ಕಟ್ಟಿ 30 ಜನರು ಹಲ್ಲೆ ನಡೆಸಿರುವ ಘಟನೆ ಗುಜರಾತ್‍ನ ವಡೋದರದಲ್ಲಿ ನಡೆದಿದೆ.

    ಹಸ್ಮುಖ್ ಪಟೇಲ್ ಸ್ಥಳಿಯರಿಂದ ಹಲ್ಲೆಗೊಳಗಾದ ಬಿಜೆಪಿ ಕಾರ್ಪೊರೇಟರ್. ಪಾಲಿಕೆ ಅಲ್ಲಿ ನೆಲೆಸಿದ್ದ ನಿವಾಸಿಗಳ ಮನೆಗಳನ್ನು ಬುಲ್ಡೋಜರ್‍ನಿಂದ ಕೆಡವಲು ಮುಂದಾಗಿತ್ತು. ಈ ವೇಳೆ ಉದ್ರಿಕ್ತರ ಗುಂಪೊಂದು ಕಾರ್ಪೊರೇಟರ್‍ನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.

    ಏನಿದು ಘಟನೆ:
    ಮನೆಗಳ ತೆರವು ಕಾರ್ಯಾಚರಣೆಗೆ ಪುರಸಭೆ ಮುಂದಾಗಿತ್ತು. ಇದಕ್ಕೆ ಸಂಬಂಧಿಸಿದ ನೋಟಿಸ್ ನೀಡುವಂತೆ ಜನರು ಪುರಸಭೆ ಆಯುಕ್ತರ ಬಳಿ ಹೋಗಿದ್ದಾರೆ. ನೋಟಿಸ್ ಈಗಾಗಲೇ ಕಾರ್ಪೊರೇಟರ್‍ಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ನೋಟಿಸ್ ನೀಡಿದ್ದರೂ ಸ್ಥಳೀಯರಿಗೆ ಮಾಹಿತಿ ನೀಡಿಲ್ಲವೆಂದು ಕೋಪಗೊಂಡು ನೇರ ಕಾರ್ಪೊರೇಟರ್ ಮನೆಗೆ ತೆರಳಿ ನೋಟಿಸ್ ತೋರಿಸುವಂತೆ ಕೇಳಿದ್ದಾರೆ. ನೋಟಿಸ್ ನೀಡಲು ನಿರಾಕರಿಸಿದ್ದಕ್ಕೆ ಉದ್ರಿಕ್ತ 30 ಜನರ ಗುಂಪೊಂದು ಹಸ್ಮುಖ್ ಪಟೇಲ್‍ರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.

    http://www.youtube.com/watch?v=VrUPxLZtYsg

    ಬಳಿಕ ಸ್ಥಳಕ್ಕೆ ವಡೋದರ ಪೊಲೀಸರು ಸ್ಥಳಕ್ಕೆ ಆಗಮಿಸಿ 30 ಮಂದಿ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ. ಸದ್ಯ ಕಾರ್ಪೊರೆಟರ್‍ನನ್ನು ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.