Tag: ವಡಗೇರಾ

  • ಜೆಸ್ಕಾಂ ನಿರ್ಲಕ್ಷ್ಯ- ಹೈಟೆನ್ಷನ್ ವೈಯರ್ ತಗುಲಿ ಬೈಕ್ ಸವಾರ ಸ್ಥಳದಲ್ಲೇ ಸಾವು

    ಜೆಸ್ಕಾಂ ನಿರ್ಲಕ್ಷ್ಯ- ಹೈಟೆನ್ಷನ್ ವೈಯರ್ ತಗುಲಿ ಬೈಕ್ ಸವಾರ ಸ್ಥಳದಲ್ಲೇ ಸಾವು

    ಯಾದಗಿರಿ: ಜೆಸ್ಕಾಂ (GESCOM) ನಿರ್ಲಕ್ಷ್ಯದಿಂದ ತುಂಡರಿಸಿ ಬಿದ್ದ ವಿದ್ಯುತ್ ಹೈಟೆನ್ಷನ್ ವೈಯರ್ ತಗುಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಯಾದಗಿರಿಯ (Yadagiri) ಮಾತಾಮಣಿಕೇಶ್ವರ ನಗರದಲ್ಲಿ ನಡೆದಿದೆ.

    ವಡಗೇರಾ (Vadagera) ತಾಲೂಕಿನ ಬಬಲಾದ ಗ್ರಾಮದ ನಿವಾಸಿ ಕಾಜಾ ಪಟೇಲ್(23) ಮೃತ ಬೈಕ್ ಸವಾರ. ಕಾಜಾ ಪಟೇಲ್, ಯಾದಗಿರಿಯ ಸಹೋದರಿ ಮನೆಗೆ ತೆರಳಿ, ವಾಪಸ್ ಆಗುತ್ತಿದ್ದ ವೇಳೆ ತುಂಡರಿಸಿ ಬಿದ್ದಿದ್ದ ಹೈಟೆನ್ಷನ್ ವೈಯರ್ ನೋಡದೇ ಬೈಕ್‌ನಲ್ಲಿ ಹೋಗುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Gadag | ಡೆತ್‌ನೋಟ್ ಬರೆದಿಟ್ಟು ನವ ವಿವಾಹಿತೆ ಆತ್ಮಹತ್ಯೆ

    ಕಳೆದ ಮೂರು ದಿನದ ಹಿಂದೆ ಬಿರುಗಾಳಿ ಮಳೆಗೆ ಹೈಟೆನ್ಷನ್ ವೈಯರ್ ತುಂಡರಿಸಿ ಬಿದ್ದಿದ್ದು, ತುಂಡರಿಸಿ ಬಿದ್ದಿದ್ದ ವೈಯರನ್ನು ಸರಿಪಡಿಸದೇ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ ಬಂದು ಜಡ್ಜ್ ಮನೆಯಲ್ಲಿ ಕಳ್ಳತನ – 8 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿಗಳು ಅರೆಸ್ಟ್

    ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಯಾದಗಿರಿಯಲ್ಲಿ ವಿಪರೀತ ಬಿಸಿಲಿಗೆ ವೃದ್ಧೆ ಸಾವು

    ಯಾದಗಿರಿಯಲ್ಲಿ ವಿಪರೀತ ಬಿಸಿಲಿಗೆ ವೃದ್ಧೆ ಸಾವು

    ಯಾದಗಿರಿ: ವಿಪರೀತ ಬಿಸಿಲಿಗೆ (Extreme Heat) ವೃದ್ಧೆ (Old Woman) ಸಾವನ್ನಪ್ಪಿದ ಘಟನೆ ಯಾದಗಿರಿ (Yadagiri) ಜಿಲ್ಲೆಯ ವಡಗೇರಾ (Wadagera) ತಾಲೂಕಿನ ಕುರಕುಂದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಹಣಮಂತಿ (60) ಮೃತ ಕಾರ್ಮಿಕ ವೃದ್ಧೆ. ಇವರು ಉದ್ಯೋಗ ಖಾತ್ರಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅದೇ ರೀತಿ ಸೋಮವಾರವೂ ಕೂಲಿ ಕೆಲಸಕ್ಕೆ ಹೋಗಿದ್ದು, ಬಿಸಿಲಿನಲ್ಲೇ ಕೆಲಸ ಮಾಡುತ್ತಿದ್ದರು. ಈ ವೇಳೆ ಅಧಿಕ ಬಿಸಿಲಿನಿಂದಾಗಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಬಾಲಾಕೋಟ್ ಏರ್‌ಸ್ಟ್ರೈಕ್‌ ರಹಸ್ಯ ರಿವೀಲ್‌ ಮಾಡಿದ ಮೋದಿ

    ಮೃತ ವೃದ್ಧೆಯ ಮೃತದೇಹ ಯಾದಗಿರಿ ಯಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕಾವೇರಿ ನದಿಯಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳ ದುರ್ಮರಣ

  • ಆಸ್ತಿ ವಿವಾದ ವ್ಯಕ್ತಿಗೆ ಚಾಕು ಇರಿತ – 10 ದಿನಗಳ ಕಾಲ ಒದ್ದಾಡಿ ಪ್ರಾಣಬಿಟ್ಟ

    ಆಸ್ತಿ ವಿವಾದ ವ್ಯಕ್ತಿಗೆ ಚಾಕು ಇರಿತ – 10 ದಿನಗಳ ಕಾಲ ಒದ್ದಾಡಿ ಪ್ರಾಣಬಿಟ್ಟ

    ಯಾದಗಿರಿ: ಆಸ್ತಿ ವಿವಾದ ಹಾಗೂ ವೈಯಕ್ತಿಕ ದ್ವೇಷದ ಹಿನ್ನೆಲೆ ನಡೆದಿದ್ದ ಗಲಾಟೆಯಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ವಡಗೇರಾದ (Wadgera) ಕುರಿಹಾಳ (Kurihal) ಗ್ರಾಮದಲ್ಲಿ ನಡೆದಿದೆ.

    ಮರಿಲಿಂಗಪ್ಪ (45) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಜೂ.8 ರಂದು ಗಲಾಟೆ ನಡೆದಿದ್ದು, ಚಾಕು ಇರಿತಕ್ಕೆ ಒಳಗಾಗಿ ಮರಿಲಿಂಗಪ್ಪ ಗಂಭೀರ ಗಾಯಗೊಂಡಿದ್ದ. ಬಳಿಕ ಆತನನ್ನು ಕಲಬುರಗಿಯ (Kalaburagi) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 10 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ. ಈಗ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಭಾರೀ ಅನಾಹುತದಿಂದ ಮಹಾರಾಷ್ಟ್ರ ಸಚಿವರು ಜಸ್ಟ್ ಮಿಸ್

    ಅದೇ ಗ್ರಾಮದ ಬಸವರಾಜ ಹಾಗೂ ಕುಟುಂಬದ 10 ಜನರಿಂದ ಮರಿಲಿಂಗಪ್ಪನ ಮೇಲೆ ದಾಳಿ ಮಾಡಲಾಗಿತ್ತು. ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದ ಪ್ರಕರಣವೂ ದಾಖಲಾಗಿತ್ತು. ಈ ವೇಳೆ ಪ್ರಮುಖ ಆರೋಪಿ ಬಸವರಾಜ ಸೇರಿ 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

    ಈ ಸಂಬಂಧ ಕೊಲೆ ಯತ್ನದ ಕೇಸ್‍ನ್ನು ಕೊಲೆ ಪ್ರಕರಣವಾಗಿ ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ದುರ್ಬಲಗೊಂಡಿದ್ದ ಮುಂಗಾರು ಚುರುಕು – ಮುಂದಿನ 48 ಗಂಟೆಗಳ ಕಾಲ ಕರಾವಳಿ, ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

  • ಸರ್ವ ಸಂಕಷ್ಟದಿಂದ ಪಾರು ಮಾಡುವಂತೆ ಗಡೇ ದುರ್ಗಾದೇವಿಗೆ ಪತ್ರ ಬರೆದ ಡಿಕೆಶಿ

    ಸರ್ವ ಸಂಕಷ್ಟದಿಂದ ಪಾರು ಮಾಡುವಂತೆ ಗಡೇ ದುರ್ಗಾದೇವಿಗೆ ಪತ್ರ ಬರೆದ ಡಿಕೆಶಿ

    ಯಾದಗಿರಿ: ಸರ್ವ ಸಂಕಷ್ಟದಿಂದ ಪಾರು ಮಾಡುವಂತೆ ಯಾದಗಿರಿಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪತ್ರ ಬರೆದು ವಿಶೇಷ ಸಲ್ಲಿಸಿದ್ದಾರೆ.

    ಕಲಬುರಗಿ ಜಿಲ್ಲೆಯಿಂದ ರಸ್ತೆ ಮಾರ್ಗವಾಗಿ ಗೋನಾಲ ಗ್ರಾಮಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಅವರನ್ನು ಗೋನಾಲ ಗ್ರಾಮಸ್ಥರು ಮೇರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಗಡೇ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿಯಾದ ಡಿಕೆ ಶಿವಕುಮಾರ್ ಅವರು ದುರ್ಗಾದೇವಿ ಮಂದಿರದ ಗರ್ಭ ಗುಡಿಯೊಳಗೆ ಪ್ರವೇಶಿಸಿ, ಅರ್ಚಕ ಮಹಾದೇವಪ್ಪ ಪೂಜಾರಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವಿಗೆ ಮೊರೆಯಿಟ್ಟಿದ್ದಾರೆ.

    ಬಳಿಕ ಮಾತನಾಡಿದ ಅವರು, ಕಳೆದ ಬಾರಿ ಬರುತ್ತೇನೆ ಅಂತ ಮಾತುಕೊಟ್ಟಿದ್ದೆ. ಆದರೆ ಮೈತ್ರಿ ಸರ್ಕಾರ ಮತ್ತು ಕೆಲ ಒತ್ತಡದಿಂದ ಬರುವುದಕ್ಕೆ ಆಗಿರಲಿಲ್ಲ. ಈಗ ಬಂದಿದ್ದೇನೆ. ರಾಜ್ಯ ಮತ್ತು ನನ್ನ ಕುಟುಂಬಕ್ಕೆ ಒಳಿತು ಮಾಡುವಂತೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.

    ಡಿಕೆ ಶಿವಕುಮಾರ್ ಅವರು ಕೇವಲ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರವಲ್ಲ, ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಅಂತ ಗೋನಾಲ ದುರ್ಗಾದೇವಿಯ ಪೂಜಾರಿ ಮಹಾದೇವಪ್ಪ ಭವಿಷ್ಯ ನುಡಿದಿದ್ದಾರೆ.

    ಇದಕ್ಕೂ ಮುನ್ನ ಬೆಳಗ್ಗೆ ಕಲಬುರಗಿಯಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಆಯ್ಕೆಗೆ ನಾನು ಅರ್ಜಿನೂ ಹಾಕಿಲ್ಲ. ಆಕಾಂಕ್ಷಿನೂ ಅಲ್ಲ. ಸದ್ಯ ದಿನೇಶ್ ಗುಂಡೂರಾವ್ ಅವರೇ ಅಧ್ಯಕ್ಷರು. ಅವರ ರಾಜೀನಾಮೆ ಅಂಗೀಕಾರವಾಗಿಲ್ಲ. ಹೀಗಾಗಿ ಕೆಪಿಸಿಸಿ ಹುದ್ದೆ ಖಾಲಿ ಇಲ್ಲ. ಆ ಹುದ್ದೆಯೇ ಕೇಳಿಲ್ಲ ಅಂದ್ರೆ ಯಾರು ತಾನೆ ಅಡ್ಡಗಾಲು ಹಾಕಲು ಸಾಧ್ಯ ಎಂದು ಹೇಳಿದ್ದರು.

  • ಹನಿಕೇಕ್ ತಿಂದು ಗರ್ಭಿಣಿ ಸೇರಿ ಏಳು ಜನ ಆಸ್ಪತ್ರೆಗೆ ದಾಖಲು

    ಹನಿಕೇಕ್ ತಿಂದು ಗರ್ಭಿಣಿ ಸೇರಿ ಏಳು ಜನ ಆಸ್ಪತ್ರೆಗೆ ದಾಖಲು

    ಯಾದಗಿರಿ: ಹನಿಕೇಕ್ ತಿಂದು ಗರ್ಭಿಣಿ ಸೇರಿದಂತೆ ಏಳು ಜನ ಆಸ್ಪತ್ರೆಗೆ ದಾಖಲಾದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.

    ಪಟ್ಟಣದ ನಿವಾಸಿ ಗುರುನಾಥ್ ನಾಟೇಕರ್ ಬಸವೇಶ್ವರ ವೃತ್ತದ ಬಳಿಯ ಜಬ್ಬಾರ್ ಎಂಬವರಿಗೆ ಸೇರಿದ್ದ ಬೇಕರಿಯಿಂದ ಸುಮಾರು ಅರ್ಧ ಕೆಜಿ ಹನಿ ಕೇಕ್ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗಿದ್ದ್ರು. ನಾಟೇಕರ್ ಮನೆಯಲ್ಲಿ ಇಬ್ಬರು ಮಕ್ಕಳು ಹಾಗೂ ಇಬ್ಬರು ಗರ್ಭಿಣಿಯರು ಸೇರಿ ಒಟ್ಟು ಏಳು ಜನ ಹನಿ ಕೇಕ್ ತಿಂದಿದ್ದಾರೆ. ಸ್ವಲ್ಪ ಸಮಯದ ಬಳಿಕ ಎಲ್ಲರಿಗೂ ವಾಂತಿ ಭೇದಿ ಆರಂಭವಾಗಿದೆ. ಕೊನೆಗೆ ನೋಡು ನೋಡುತ್ತಿದ್ದಂತೆ ತೀವ್ರ ಅಸ್ವಸ್ಥರಾಗಿದ್ದಾರೆ.

    ಅಸ್ವಸ್ಥರನ್ನ ಯಾದಗಿರಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬೇಕರಿ ಮಾಲೀಕನ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ನೆರೆ ‘ಪೀಡಕರು’- ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತ್ರಸ್ತರಿಗೆ ತಲುಪುತ್ತಿಲ್ಲ ಪರಿಹಾರ

    ನೆರೆ ‘ಪೀಡಕರು’- ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತ್ರಸ್ತರಿಗೆ ತಲುಪುತ್ತಿಲ್ಲ ಪರಿಹಾರ

    ಯಾದಗಿರಿ: ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಸಂತ್ರಸ್ತರ ನೆರವಿಗೆ ಸರ್ಕಾರ ಮತ್ತು ರಾಜ್ಯದ ಜನತೆ ಮುಂದಾಗಿದ್ದಾರೆ. ಸರ್ಕಾರ ಸಹ ಕೂಡಲೇ ಸಂತ್ರಸ್ತರಿಗೆ ಪರಿಹಾರದ ವಿತರಣೆ ಆಗಬೇಕೆಂದು ಹೇಳಿದೆ. ದೇವರು ವರ ಕೊಟ್ಟರು ಪೂಜಾರಿ ನೀಡಲಿಲ್ಲ ಎಂಬ ಮಾತಿನಂತೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಹಾರದ ಹಣ ಸಂತ್ರಸ್ತರಿಗೆ ಕೈಗೆ ತಲುಪುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಯಾದಗಿರಿ ಜಿಲ್ಲೆಯ ವಡಗೇರಾ, ಶಹಾಪುರ ತಾಲೂಕಿನಲ್ಲಿ ನೆರೆಹಾವಳಿಯಿಂದಾಗಿ ಯಕ್ಷಚಿಂತಿ, ಗೌಡೂರು, ಚನ್ನೂರು, ಕೊಳ್ಳೂರು ಗ್ರಾಮಗಳು ಜಲಾವೃತವಾಗಿದ್ದವು. ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಹುಣಸಗಿ ತಾಲೂಕಿನ ಜುಮಲಾಪುರ ತಾಂಡಗಳ ಸೇತುವೆ ಕೊಚ್ಚಿ ಹೋಗಿದ್ದವು. ಅಧಿಕಾರಿಯ ನಿರ್ಲಕ್ಷ್ಯದಿಂದ ಸಂತ್ರಸ್ತರಿಗೆ ಇದೂವರೆಗೂ ಪರಿಹಾರ ಸಿಕ್ಕಿಲ್ಲ.

    ಯಾದಗಿರಿ ಜಿಲ್ಲಾಡಳಿತದ ಪ್ರಕಾರ 339 ಮನೆಗಳಿಗೆ ಪರಿಹಾರ ನೀಡಲಾಗಿದೆ. ಈ ಪರಿಹಾರ ಕೇವಲ ಕಾಗದದ ಮೇಲಿದೆ, ಹೊರತು ಸಂತ್ರಸ್ತರಿಗೆ ತಲುಪಿಲ್ಲ. ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಪರಿಹಾರ ಯಾಕೆ ತಲುಪಿಲ್ಲ ಎಂಬ ವಿಚಾರ ಬಯಲಾಗಿದೆ. ಅಧಿಕಾರಿಯ ಎಡವಟ್ಟಿನಿಂದಾಗಿ ಗಂಡನ ಹೆಸರು ಹೆಂಡತಿಗೆ, ಒಬ್ಬರ ಚೆಕ್‍ನಲ್ಲಿ ಮತ್ಯಾರದೋ ಹೆಸರು ಹಾಕಲಾಗಿದೆ. ಪರಿಹಾರದ ಚೆಕ್ ನೀಡಿದ್ದರೂ ಸಿಕ್ಕಾಪಟ್ಟೆ ಲೋಪದೋಷಗಳಿಂದ ಕೂಡಿದೆ. ಚೆಕ್ ದೊರೆತರೂ ಹಣ ಸಿಗುತ್ತಾ ಎಂಬ ಪ್ರಶ್ನೆ ನಿರಾಶ್ರಿತರಲ್ಲಿ ಮನೆ ಮಾಡಿದೆ.

    ಯಕ್ಷಿಚಿಂತಿ ಗ್ರಾಮ ಲೆಕ್ಕಿಗ ಪ್ರವೀಣ್ ಮತ್ತು ವಡಗೇರಾ ತಹಶೀಲ್ದಾರ್ ಸಂತೋಷ್ ರಾಣಿಯವರ ಬೇಜವಾಬ್ದಾರಿ ಕೆಲಸದಿಂದ ಪ್ರವಾಹ ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗೆ ಮೇಲೆ ಕಾಣಿಸದಂತೆ ಸಂತ್ರಸ್ತರ ಹೆಸರುಗಳನ್ನು ತಪ್ಪಾಗಿ ನಮೂದಿಸಿಕೊಂಡಿದ್ದಾರೆ.

    ಯಾದಗಿರಿಯ ವಡಗೇರಾ, ಶಹಾಪುರ, ಸುರಪುರ, ಹುಣಸಗಿ ತಾಲೂಕುಗಳು ಪ್ರವಾಹ ಬಾಧಿತವಾಗಿದ್ದು, 339 ಕುಟುಂಬಗಳು ಮನೆ ಕಳೆದುಕೊಂಡಿವೆ. ಅಧಿಕಾರಿಗಳು ಸರ್ವೇ ಮಾಡಿ, ವರದಿಯನ್ನು ಸಿದ್ಧ ಪಡಿಸಿ ಪರಿಹಾರದ ಚೆಕ್ ಲೋಪದೋಷದಿಂದ ಕೂಡಿದೆ. ಹೀಗಾಗಿ ವಡಗೇರಾದ ಯಕ್ಷಚಿಂತಿ ಗ್ರಾಮದಲ್ಲಿ ಸುಮಾರು 100ಕ್ಕೂ ಅಧಿಕ ಕುಟುಂಬಗಳಿಗೆ ಪರಿಹಾರ ಮರೀಚಿಕೆ ಆಗಿದೆ. ಇಷ್ಟು ಮಾತ್ರವಲ್ಲದೇ ಅರ್ಹ ಸಂತ್ರಸ್ತರನ್ನು ಪರಿಗಣಿಸಿಲ್ಲ ಎಂಬ ಗಂಭೀರ ಆರೋಪಗಳು ಸಹ ಕೇಳಿ ಬಂದಿವೆ.

    ಎರಡು ಕಂತಿನಲ್ಲಿ 10 ಸಾವಿರ ರೂ. ಪರಿಹಾರದ ಹಣ ಹಂಚಿಕೆಯಾಗಲಿದೆ. 3,800 ರೂ. ಚೆಕ್ ನಲ್ಲಿ ಮತ್ತು ಉಳಿದ ಮೊತ್ತ ಸಂತ್ರಸ್ತರ ಖಾತೆಗೆ ನೇರವಾಗಿ ಜಮೆ ಆಗಲಿದೆ. ವಡಗೇರಾ ಹೊಸ ತಾಲೂಕು ಆಗಿದ್ದರಿಂದ ತಹಶೀಲ್ದಾರ್ ಇನ್ನೂ ಖಜಾನೆಯ ಸಹಿ ಹಕ್ಕು ಕೊಟ್ಟಿಲ್ಲ. ಹಾಗಾಗಿ ಪ್ರತಿಯೊಂದು ಪರಿಹಾರಕ್ಕೂ ಶಹಾಪುರದ ಅಧಿಕಾರಿಗಳ ಗಮನಕ್ಕೆ ತರಬೇಕು. ಈ ಎಲ್ಲ ಕಾರಣಗಳಿಂದ ವಡಗೇರಾದ ಯಕ್ಷಚಿಂತಿ ಗ್ರಾಮದಲ್ಲಿ ಪರಿಹಾರ ವಿಳಂಬವಾಗುತ್ತಿದೆ.

  • ಡಿಕೆಶಿಯನ್ನ ಸಂಕಷ್ಟದಿಂದ ಪಾರು ಮಾಡುವಂತೆ ದೇವಿಗೆ ಪೂಜೆ

    ಡಿಕೆಶಿಯನ್ನ ಸಂಕಷ್ಟದಿಂದ ಪಾರು ಮಾಡುವಂತೆ ದೇವಿಗೆ ಪೂಜೆ

    ಯಾದಗಿರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಸಂಕಷ್ಟದಿಂದ ಪಾರು ಮಾಡಲು ಜಿಲ್ಲೆಯ ದೇವಸ್ಥಾನವೊಂದರಲ್ಲಿ ಅಮವಾಸ್ಯೆಯ ತಡ ರಾತ್ರಿವರೆಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ.

    ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಶ್ರೀದುರ್ಗಾ ದೇವಿ ದೇವಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಅವರಿಗಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಈ ವೇಳೆ ಮಾಜಿ ಸಚಿವರು ಆದಷ್ಟು ಬೇಗ ಸಮಸ್ಯೆಗಳಿಂದ ಪಾರಾಗಲಿ ಎಂದು ದೇವರಿಗೆ ಬೇಡಿಕೊಳ್ಳಲಾಗಿದೆ.

    ಡಿ.ಕೆ.ಶಿವಕುಮಾರ್ ಅವರು ಕಷ್ಟದ ಸಮಯದಲ್ಲಿ ಗೋನಾಲ ಗ್ರಾಮದ ಶ್ರೀದುರ್ಗಾ ದೇವಿಯ ಆರಾಧನೆ ಮಾಡಿ ತಮ್ಮ ಸಂಕಷ್ಟವನ್ನು ದೂರ ಮಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಕಳೆದ ಫೆಬ್ರವರಿ ತಿಂಗಳಲ್ಲಿ ಈ ದೇವರ ದರ್ಶನಕ್ಕೆ ಬರುವುದಾಗಿ ಮಾತು ಕೊಟ್ಟು, ಕೊನೆಗಳಿಯಲ್ಲಿ ಮಾತು ತಪ್ಪಿದ್ದರು. ಹೀಗಾಗಿ ಮಾಜಿ ಸಚಿವರಿಗೆ ದೇವಿ ಶಾಪ ನೀಡಿದ್ದಾಳೆ ಅಂತ ದೇವಸ್ಥಾನದ ಪೂಜಾರಿ ಮಹಾದೇವಪ್ಪ ಮನವರಿಕೆ ಮಾಡಿಕೊಟ್ಟಿದ್ದಾರೆ.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಸದ್ಯ ಇ.ಡಿ ಸಂಕಷ್ಟದಿಂದ ಪಾರು ಮಾಡು ಎಂದು ಮತ್ತೆ ಗೋನಾಲ ದುರ್ಗಾದೇವಿ ಮೊರೆ ಹೋಗಿದ್ದಾರೆ. ದೆಹಲಿಯ ಜಾನಿ ನಿರ್ದೇಶನಾಲಯದ ಕಚೇರಿಯಲ್ಲಿ ತನಿಖೆಗೆ ಒಳಗಾಗುವಷ್ಟು ದಿನ ವಿಶೇಷ ಪೂಜೆ ಸಲ್ಲಿಸುವಂತೆ ದೇವಸ್ಥಾನ ಪೂಜಾರಿಯ ಬಳಿ ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಶುಕ್ರವಾರ ಗೋನಾಲದ ದುರ್ಗಾದೇವಿ ಅಮವಾಸ್ಯೆ ತಡ ರಾತ್ರಿ ವಿಶೇಷ ಪೂಜೆಯನ್ನು ನೇರವೆರಿಸಿರುವ ಅರ್ಚಕರು ಡಿಕೆಶಿಯನ್ನು ಸಂಕಷ್ಟದಿಂದ ಪಾರು ಮಾಡುವಂತೆ ದುರ್ಗಾದೇವಿಗೆ ಮೊರೆಯನ್ನಿಟ್ಟಿದ್ದಾರೆ.

  • ಯಾದಗಿರಿ: ಸಿಎಂ ಬರ್ತಾರೆ ಅಂತ ರಾತ್ರೋರಾತ್ರಿ ರಸ್ತೆಗೆ ಟಾರು

    ಯಾದಗಿರಿ: ಜಿಲ್ಲೆಯ ನೂತನ ಜಿಲ್ಲಾ ಸಂಕೀರ್ಣ ಕಟ್ಟಡ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿರೋ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಅಧಿಕಾರಿ ವರ್ಗ ರಾತ್ರೋರಾತ್ರಿ ರಸ್ತೆಗೆ ಟಾರ್ ಹಾಕಿಸಿದ್ದಾರೆ.

    ಕಳೆದ 2-3 ವರ್ಷಗಳಿಂದ ತಗ್ಗು ಗುಂಡಿಗಳಿಂದ ಕೂಡಿದ ಟಾರ್ ಕಾಣದ ರಸ್ತೆಗಳೀಗ ಥಳಥಳ ಫಳಫಳ ಹೊಳೆಯುವಂತೆ ಮಾಡಿದ್ದಾರೆ. ಗ್ರಾಮೀಣ ಭಾಗದ ಮತ್ತು ನಗರದ ಇತರೆ ರಸ್ತೆಗಳು ಹಾಳಾದರೂ ಹೊರಳಿ ನೋಡದ ಅಧಿಕಾರಿಗಳು, ಸಿಎಂ ಮೆಚ್ಚಿಸಲು ಮಾಡಿದ ಈ ಕ್ರಮ ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಯಾದಗಿರಿ ಜಿಲ್ಲೆಗೆ ನೂತನ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣವಾಗಿ 6 ತಿಂಗಳಾಯ್ತು. ಎರಡು ಮೂರು ಬಾರಿ ಟೇಪ್ ಕತ್ತರಿಸಲು ಸಮಯ ನಿಗದಿ ಮಾಡಿ ಮುಂದಕ್ಕೆ ಹಾಕಿದ್ರು. ಇಂದು ಸಿದ್ದರಾಮಯ್ಯನವರು ಸಮಯ ಕೊಟ್ರು. ಅದಕ್ಕೆ ಮುಖ್ಯಮಂತ್ರಿಗಳನ್ನ ಮೆಚ್ಚಿಸೋಕೆ ರಾತ್ರೋರಾತ್ರಿ ರಸ್ತೆಗೆ ಟಾರ್ ಹಾಕಿದ್ದಾರೆ. ಬಣ್ಣನೂ ಬಳಿದು ಫಳಫಳ ಮಿಂಚಿಸಿದ್ದಾರೆ.

    ಆದ್ರೆ ಪ್ರಶ್ನೆ ಇರೋದು ಇಲ್ಲೇ. ಯಾದಗಿರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ 60 ಹಳ್ಳಿಗಳ ರಸ್ತೆಗಳು ಟಾರನ್ನೇ ನೋಡಿಲ್ಲ. ವಡಗೇರಾ ರಸ್ತೆ ಕೆಲಸ 5 ವರ್ಷದಿಂದ ಆಗ್ತಿದೆ. ಆದ್ರೆ ಮುಖ್ಯಮಂತ್ರಿಗಳನ್ನ ಮೆಚ್ಚಿಸೋಕೆ ಇಂಥಾ ಕೆಲಸ ಮಾಡ್ಬೇಕಾ ಅನ್ನೋದು ಜನರ ಪ್ರಶ್ನೆ. ಈ ಬಗ್ಗೆ ಸಚಿವರನ್ನ ಕೇಳಿದ್ರೆ, ಆಯ್ತು ಬಿಡಿ ಬೇಗ ಸರಿಮಾಡಿಸೋಣ ಅಂತಾರೆ.

    ನಮ್ಮ ಮುಖ್ಯಮಂತ್ರಿಗಳಿಗೆ ನಿಜಕ್ಕೂ ಜನಪರ ಕಾಳಜಿ ಇದ್ರೆ, ಇವತ್ತು ಹಳ್ಳಿಗಳ ರಸ್ತೆ ಕಡೆ ಹೋಗಿ ಬರ್ಲಿ. ಆಗ ಅಧಿಕಾರಿಗಳ ಬಣ್ಣ ಬಯಲಾಗುತ್ತೆ ಅಂತಾರೆ ಇಲ್ಲಿನ ಜನ.