Tag: ವಜ್ರ

  • ಕೊಹಿನೂರ್‌ವೊಂದೇ ಅಲ್ಲ, ರಾಣಿ ಕಿರೀಟದಲ್ಲಿರುವ ದಕ್ಷಿಣ ಆಫ್ರಿಕಾದ ವಜ್ರ ಮರಳಿಸಿ

    ಕೊಹಿನೂರ್‌ವೊಂದೇ ಅಲ್ಲ, ರಾಣಿ ಕಿರೀಟದಲ್ಲಿರುವ ದಕ್ಷಿಣ ಆಫ್ರಿಕಾದ ವಜ್ರ ಮರಳಿಸಿ

    ಕೇಪ್‍ಟೌನ್: ರಾಣಿ ಎಲಿಜಬೆತ್ (Queen Elizabeth) ನಿಧನದ ಬೆನ್ನಲ್ಲೇ ಬ್ರಿಟಿಷ್ ಕಿರೀಟದ ಆಭರಣಗಳಲ್ಲಿರುವ ಕೊಹಿನೂರ್ (Kohinoor) ವಜ್ರವನ್ನು ವಾಪಸ್ ನೀಡುವಂತೆ ಈಗಾಗಲೇ ಭಾರತದಲ್ಲಿ (India) ಅನೇಕರು ಒತ್ತಾಯಿಸಿದ್ದರು. ಆದರೆ ಇದೀಗ ರಾಣಿ ಕಿರೀಟದಲ್ಲಿರುವ ಇನ್ನೊಂದು ಪ್ರಮುಖ ವಜ್ರವನ್ನು ಮರಳಿ ನೀಡುವಂತೆ ದಕ್ಷಿಣ ಆಫ್ರಿಕಾ (South Africa) ಒತ್ತಾಯಿಸಿದೆ.

    ರಾಣಿ ಎಲಿಜಬೆತ್ 2ರ ಮರಣದ ನಂತರ, ಆಕೆಯ ಮಗ ಪ್ರಿನ್ಸ್ ಚಾಲ್ಸ್ ಬ್ರಿಟನ್ ರಾಜ ಸಿಂಹಾಸನ ಅಲಂಕರಿಸಿದ್ದು, ಈಗ 105-ಕ್ಯಾರೆಟ್ ಕೊಹಿನೂರು ವಜ್ರ ಹಾಗೂ 530.2 ಕ್ಯಾರೆಟ್ ಇರುವ ಗ್ರೇಟ್ ಸ್ಟಾರ್ ವಜ್ರ (Great Star Diamond ) ಇರುವ ಕಿರೀಟ ಅವರ ಪತ್ನಿಯಾದ ರಾಣಿ ಕ್ಯಾಮಿಲ್ಲಾಗೆ ಹೋಗುತ್ತದೆ. ಈ ಕಿರೀಟದಲ್ಲಿರುವ ವಜ್ರವನ್ನು ವಾಪಸ್ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿ ಬರುತ್ತಿದೆ.

    1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ ಸಂದರ್ಭದಲ್ಲಿ ಗ್ರೇಟ್ ಸ್ಟಾರ್ ವಜ್ರ ಸಿಕ್ಕಿತ್ತು. ಇದು ವಿಶ್ವದ ದೊಡ್ಡ ವಜ್ರ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಈ ಗ್ರೇಟ್ ಸ್ಟಾರ್ ಅನ್ನು ಆಫ್ರಿಕಾದ ವಸಾಹತುಶಾಹಿ ಆಡಳಿತಗಾರರು ಬ್ರಿಟಿಷ್ ರಾಜಮನೆತನಕ್ಕೆ ಹಸ್ತಾಂತರಿಸಿದ್ದರು. ಪ್ರಸ್ತುತ ಈ ವಜ್ರವು ರಾಣಿಗೆ ಸೇರಿದ ಕಿರೀಟದಲ್ಲಿ ಅಳವಡಿಸಲಾಗಿದೆ. ಇದನ್ನೂ ಓದಿ: ರಸ್ತೆಗಾಗಿ ದಶಕಗಳಿಂದ ಹೋರಾಟ – ಆಸ್ಪತ್ರೆಗೆ ದಾಖಲಿಸಲು ವದ್ಧೆಯನ್ನು ಜೋಳಿಗೆಯಲ್ಲೇ ಹೊತ್ತೊಯ್ದರು

    ರಾಣಿ ಎಲಿಜಬೆತ್ ನಿಧನದ ಬೆನ್ನಲ್ಲೇ ವಜ್ರವನ್ನು ಹಿಂದಿರುಗಿಸುವಂತೆ change.orgನಲ್ಲಿ ಆನ್‍ಲೈನ್ ಅಭಿಯಾನ ಪ್ರಾರಂಭವಾಗಿದೆ. ಅದಕ್ಕೆ 6,000ಕ್ಕೂ ಹೆಚ್ಚು ಜನರು ಈಗಾಗಲೇ ಸಹಿ ಹಾಕಿದ್ದಾರೆ. ಕಲ್ಲಿನನ್ ವಜ್ರವನ್ನು ತಕ್ಷಣವೇ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಿಸಬೇಕು. ಜೊತೆಗೆ ನಮ್ಮ ದೇಶದ ಮತ್ತು ಇತರ ದೇಶಗಳ ಖನಿಜಗಳು ಅವರವರ ದೇಶಕ್ಕೆ ವಾಪಸ್ ನೀಡಬೇಕು ಎಂದರು.

    ದಕ್ಷಿಣ ಆಫ್ರಿಕಾದ ಸಂಸತ್ತಿನ ಸದಸ್ಯರಾದ ವುಯೋಲ್ವೆತು ಝುಂಗುಲಾ ಅವರು ಈ ಅಭಿಯಾನಕ್ಕೆ ಕೈಜೋಡಿಸಿದ್ದು, ಬ್ರಿಟನ್ ಮಾಡಿದ ಎಲ್ಲಾ ಹಾನಿಗಳಿಗೆ ಪರಿಹಾರ ಹಾಗೂ ಬ್ರಿಟನ್ ಕದ್ದ ಎಲ್ಲಾ ಚಿನ್ನ, ವಜ್ರಗಳನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಲಂಡನ್ ಟವರ್‍ನಲ್ಲಿರುವ ಜ್ಯುವೆಲ್ ಹೌಸ್‍ನಲ್ಲಿ ವಜ್ರವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನೂ ಓದಿ: ಶ್ವಾನಕ್ಕೆ ಶ್ವಾನದಿಂದಲೇ ರಕ್ತದಾನ

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರದಲ್ಲಿ ಐಟಿ ಭರ್ಜರಿ ಬೇಟೆ – 56 ಕೋಟಿ ಹಣ, 32 ಕೆಜಿ ಚಿನ್ನ, 13 ಕೋಟಿಯ ವಜ್ರ ವಶಕ್ಕೆ

    ಮಹಾರಾಷ್ಟ್ರದಲ್ಲಿ ಐಟಿ ಭರ್ಜರಿ ಬೇಟೆ – 56 ಕೋಟಿ ಹಣ, 32 ಕೆಜಿ ಚಿನ್ನ, 13 ಕೋಟಿಯ ವಜ್ರ ವಶಕ್ಕೆ

    ಮುಂಬೈ: ಮಹಾರಾಷ್ಟ್ರದ ಜಲ್ನಾದಲ್ಲಿ ಉಕ್ಕು, ಬಟ್ಟೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಎರಡು ಉದ್ಯಮ ಗುಂಪುಗಳ ಮೇಲೆ ಆಗಸ್ಟ್ 1 ಮತ್ತು 8ರ ನಡುವೆ ಆದಾಯ ತೆರಿಗೆ ನಡೆಸಿದ ದಾಳಿಯಲ್ಲಿ 390 ಕೋಟಿ ರೂ. ಮೊತ್ತದ ಬೇನಾಮಿ ಆಸ್ತಿ ಪತ್ತೆಯಾಗಿದ್ದು, ಇದೀಗ ಅದನ್ನು ವಶಪಡಿಸಿಕೊಳ್ಳಲಾಗಿದೆ.

    ನಾಸಿಕ್ ವಿಭಾಗದ ಆದಾಯ ತೆರಿಗೆ ಇಲಾಖೆಯು ಆಗಸ್ಟ್ ಮೊದಲ ವಾರದಲ್ಲಿ ಜಲ್ನಾ ಮತ್ತು ಔರಂಗಾಬಾದ್ ನಗರಗಳಲ್ಲಿರುವ ಉಕ್ಕು ತಯಾರಿಕರ ಕಾರ್ಖಾನೆಗಳು, ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು 390 ಕೋಟಿ ಮೌಲ್ಯದ ಲೆಕ್ಕವಿರದಷ್ಟು ಆಸ್ತಿ ಪತ್ತೆ ಮಾಡಿದೆ. ಇದನ್ನೂ ಓದಿ: ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    ಈ ದಾಳಿಯಲ್ಲಿ ಸುಮಾರು 58 ಕೋಟಿ ರೂಪಾಯಿ ನಗದು, 32 ಕೆಜಿ ಚಿನ್ನ ಸೇರಿದಂತೆ, 14 ಕೋಟಿ ರೂ. ಮೌಲ್ಯದ ಮುತ್ತುಗಳು ಮತ್ತು ವಜ್ರಗಳು ಹೀಗೆ ಒಟ್ಟು 390 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದ್ದು, ದಾಳಿಯ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೆಲವು ಆಸ್ತಿ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಂಡಿದೆ ಮತ್ತು ಇವುಗಳ ಪರಿಶೀಲನೆ ನಡೆಸಲಾಗುತ್ತಿದೆ.

    ವಶಪಡಿಸಿಕೊಂಡ ಹಣವನ್ನು ಎಣಿಸಲು ಇಲಾಖೆ 13 ಗಂಟೆಗಳ ಸಮಯ ತೆಗೆದುಕೊಂಡಿತು. ಆದಾಯ ತೆರಿಗೆ ಇಲಾಖೆಯು ಶೋಧ ಕಾರ್ಯಾಚರಣೆ ನಡೆಸಲು ವಿವಿಧ ರಾಜ್ಯಗಳ 260 ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಿತ್ತು. ಇದನ್ನೂ ಓದಿ: ಮೋದಿಜಿಯವರ ಡಿಜಿಟಲ್ ಇಂಡಿಯಾ ಎಫೆಕ್ಟ್ – ರಾಜ್ಯದ ಪರೀಕ್ಷೆಗಳಲ್ಲಿ ಬ್ಲೂಟೂತ್, ಸ್ಮಾರ್ಟ್ ವಾಚ್‍ಗಳದ್ದೇ ಕಾರುಬಾರು: ಕಾಂಗ್ರೆಸ್

    Live Tv
    [brid partner=56869869 player=32851 video=960834 autoplay=true]

  • ಇಟ್ಟಿಗೆ ವ್ಯಾಪಾರಿಗೆ ಸಿಕ್ತು 1.20 ಕೋಟಿ ಬೆಲೆ ಬಾಳುವ ವಜ್ರ

    ಇಟ್ಟಿಗೆ ವ್ಯಾಪಾರಿಗೆ ಸಿಕ್ತು 1.20 ಕೋಟಿ ಬೆಲೆ ಬಾಳುವ ವಜ್ರ

    ಭೋಪಾಲ್: ಕೆಲವೊಮ್ಮೆ ಅದೃಷ್ಟ ಹೇಗೆ ಬದಲಾಗುತ್ತದೆ ಎಂದು ಊಹಿಸಲು ಅಸಾಧ್ಯ. ಇಲ್ಲೊಬ್ಬ ಗಣಿ ಕಾರ್ಮಿಕನಿಗೆ ಅಮೂಲ್ಯವಾದ ವಜ್ರ ಸಿಕ್ಕು ಆತನ ಅದೃಷ್ಟವೇ ಬದಲಾಗಿದೆ. ಸಣ್ಣ ಪ್ರಮಾಣದ ಇಟ್ಟಿಗೆ ವ್ಯವಹಾರ ನಡೆಸುತ್ತಿರುವ ವ್ಯಕ್ತಿಯೊಬ್ಬರು ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಗಣಿಯೊಂದರಲ್ಲಿ 26.11 ಕ್ಯಾರೆಟ್ ವಜ್ರ ಸಿಕ್ಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವಜ್ರದ ಗಣಿಯಾಗಿರುವ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಕಳೆದ ವರ್ಷ 30 ಲಕ್ಷದಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳನ್ನು ಹೊರ ತೆಗೆದ ಕಾರ್ಮಿಕರೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾದರು. ಇದೀಗ ಪನ್ನಾದಲ್ಲಿ ಕಿಶೋರ್‌ಗಂಜ್‌ನ ನಿವಾಸಿ ಸುಶೀಲ್ ಶುಕ್ಲಾ  ಅವರಿಗೆ ಕೃಷ್ಣ ಕಲ್ಯಾಣಪುರ ಪ್ರದೇಶದ ಬಳಿ ಇರುವ ಗಣಿಯಲ್ಲಿ ಅಮೂಲ್ಯವಾದ ಕಲ್ಲನ್ನು ಕಂಡುಕೊಂಡಿದ್ದಾರೆ. ಇಲ್ಲಿನ ವಜ್ರದ ಅಧಿಕಾರಿ ರವಿ ಪಟೇಲ್ ಇದರ ಬೆಲೆ 1.20 ಕೋಟಿ ರೂಪಾಯಿ ಎಂದಿದ್ದಾರೆ. ಇದನ್ನೂ ಓದಿ :  ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು

    BRIBE

    ಸುಶಿಲ್ ಶುಕ್ಲಾ ಕಿಶೋರ್‌ಗಂಜ್‌ನಲ್ಲಿ ಸಣ್ಣ ಇಟ್ಟಿಗೆ ಗೂಡು ವ್ಯಾಪಾರವನ್ನು ನಡೆಸುತ್ತಿದ್ದರು. ಇನ್ನು ಗಣಿ ಕಾರ್ಮಿಕನಾಗಿಯೂ ಕೆಲಸ ಮಾಡುತ್ತಿದ್ದವನಿಗೆ ಅದೃಷ್ಟ ಲಕ್ಷ್ಮಿ ವಜ್ರದ ರೂಪದಲ್ಲಿ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಂತಾಗಿದೆ. ಒಂದೆರಡು ದಿನಗಳಲ್ಲಿ ರತ್ನವನ್ನು ಹರಾಜಿಗೆ ಇಡಲಾಗುವುದು ಮತ್ತು ಸರ್ಕಾರದ ತೆರಿಗೆಯನ್ನು ಕಡಿತಗೊಳಿಸಿದ ನಂತರ ಗಣಿಗಾರರಿಗೆ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ : ಸಿಂಪಲ್ಲಾಗೊಂದ್ ಲವ್ ಸ್ಟೋರಿಯಲ್ಲಿ ನಟಿಸಿದ್ದ ಆರ್.ಜೆ ರಚನಾ

    ಶುಕ್ಲಾ ಮಾತನಾಡಿ, ಬಾಡಿಗೆ ಜಮೀನಿನಲ್ಲಿ ಸಣ್ಣ ಪ್ರಮಾಣದ ಇಟ್ಟಿಗೆ ವ್ಯಾಪಾರ ನಡೆಸುತ್ತಿದ್ದೇನೆ. ಕಳೆದ 20 ವರ್ಷಗಳಿಂದ ವಜ್ರದ ಗಣಿಗಾರಿಕೆಯಲ್ಲಿ ತಾನು ಮತ್ತು ತನ್ನ ಕುಟುಂಬವೂ ತೊಡಗಿಸಿಕೊಂಡಿದೆ. ಇಷ್ಟು ದೊಡ್ಡ ರತ್ನವನ್ನು ನಾನು ಹೊರತೆಗೆಯುವುದು ಇದೇ ಮೊದಲು ಎಂದಿದ್ದಾರೆ.

  • 175 ಕೋಟೆ ಬೆಲೆ ಬಾಳುವ ವಜ್ರವನ್ನು ಹಣೆಯಲ್ಲಿ ಫಿಕ್ಸ್ ಮಾಡಿದ  ರ‍್ಯಾಪರ್

    175 ಕೋಟೆ ಬೆಲೆ ಬಾಳುವ ವಜ್ರವನ್ನು ಹಣೆಯಲ್ಲಿ ಫಿಕ್ಸ್ ಮಾಡಿದ ರ‍್ಯಾಪರ್

    ವಾಷಿಂಗ್ಟನ್: 175 ಕೋಟಿ ರೂಪಾಯಿ ಬೆಲೆಬಾಳುವ ವಜ್ರವನ್ನು ಅಮೆರಿಕ  ರ‍್ಯಾಪರ್ ಹಣೆಯಲ್ಲಿ ಫಿಕ್ಸ್ ಮಾಡಿಸಿಕೊಂಡಿದ್ದಾನೆ

    ಅಮೆರಿಕಾದ ಪ್ರಸಿದ್ಧ  ರ‍್ಯಾಪರ್ ಸೈಮರ್ ಬೇಸಿಲ್ ವುಡ್ಸ್ ಈ ರೀತಿಯ ವಿಚಿತ್ರ ಕೆಲಸವನ್ನು ಮಾಡಿದ್ದಾನೆ. ಮಹಿಳೆಯರು ಸಿಂಧೂರವನ್ನು ಹಾಕುವಂತೆ ಈತ ತನ್ನ ಹಣೆಯಲ್ಲಿ 175 ಕೋಟಿ ಬೆಲೆಬಾಳುವ ವಜ್ರವನ್ನು ಫಿಕ್ಸ್ ಮಾಡಿಕೊಂಡು ಎಲ್ಲರ ಗಮನವನ್ನು ಸೆಳೆಯುತ್ತಿದ್ದಾನೆ.

    ಹಣೆಯ ಮೇಲೆ ವಜ್ರವನ್ನು ಜೋಡಿಸಿಕೊಳ್ಳಬೇಕು ಎಂದು ಹಲವು ವರ್ಷಗಳ ಹಿಂದೆಯೇ ಅಂದುಕೊಂಡಿದ್ದೆ. ಇದಕ್ಕಾಗಿ ಮೂರು ವರ್ಷಗಳಿಂದ ಹಣವನ್ನು ಕೂಡಿಟ್ಟಿದ್ದೆ. ಒಂದು ವಜ್ರಕ್ಕೆ ಇಷ್ಟೊಂದು ಬೆಲೆ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ದುಬಾರಿಯಾದ ಕಾರುಗಳಿಗೆ ಇಷ್ಟೊಂದು ಬೆಲೆ ತೆತ್ತಿರಲಿಲ್ಲ. ಇದೇ ಕೊನೆ ಮುಂದೆ ಇಂತಹ ಸಾಹಸಗಳಿಗೆ ಕೈ ಹಾಕುವುದಿಲ್ಲ ಎಂದು ಸ್ವತಃ ರ‍್ಯಾಪರ್ ಸೈಮರ್ ಬೇಸಿಲ್ ವುಡ್ಸ್ ಹೇಳಿದ್ದಾನೆ.

    ಹಣೆ ಮತ್ತು ಕೈಯಲ್ಲಿ ವಜ್ರದ ಆಭರಣಗಳನ್ನು ತೊಟ್ಟಿರುವ ರ‍್ಯಾಪರ್ ಸೈಮರ್ ಬೇಸಿಲ್ ವುಡ್ಸ್ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ಹರಿದಾಡುತ್ತಿದೆ.

  • ಮದ್ವೆ ಮನೆಗೆ ಬಂದವ ವಜ್ರದ ಉಂಗುರದೊಂದಿಗೆ 3.5 ಲಕ್ಷ ಎಗರಿಸಿದ!

    ಮದ್ವೆ ಮನೆಗೆ ಬಂದವ ವಜ್ರದ ಉಂಗುರದೊಂದಿಗೆ 3.5 ಲಕ್ಷ ಎಗರಿಸಿದ!

    ಚಂಡೀಗಢ: ವಿವಾಹ ಸಂಭ್ರಮದಲ್ಲಿದ್ದ ಜನರ ಮಧ್ಯೆ ಕಳ್ಳನೊಬ್ಬ ಬೆಲೆಬಾಳು ವಜ್ರದ ಉಂಗುರದೊಂದಿಗೆ 3.4 ಲಕ್ಷ ಹಣ ಕದ್ದು ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ಚಂಡೀಗಢದ ಸೆಕ್ಟರ್ 22ರಲ್ಲಿ ಹೋಟೆಲ್‍ನಲ್ಲಿ ನಡೆದಿದೆ.

    ವ್ಯಕ್ತಿ ವಜ್ರದ ಉಂಗುರ ಮತ್ತು ಹಣ, ಎರಡು ಫೋನ್‍ಗಳಿದ್ದ ಪರ್ಸನ್ನು ಕದ್ದು ಪರಾರಿಯಾಗಿರುವ ದೃಶ್ಯಗಳು ಹೋಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಂಗುರ ಕಳೆದುಕೊಂಡಾಕೆಯನ್ನು ಉಷಾ ಠಾಕೂರ್ ಎಂದು ಗುರುತಿಸಲಾಗಿದೆ.

    ವಧು-ವರರಿಗೆ ಶುಭಕೋರಿ ಉಡುಗೊರೆ ನೀಡಲೆಂದು ಉಷಾ ಪರ್ಸ್‍ನಲ್ಲಿ ಉಂಗುರ ತಂದಿದ್ದಳು. ಈ ವೇಳೆ ಪರ್ಸ್ ಕಳುವಾಗಿದೆ. ಇತ್ತ ತನ್ನ ಪರ್ಸ್ ಕಾಣಿಸದಿದ್ದಾಗ ಎಚ್ಚೆತ್ತುಕೊಂಡ ಮಹಿಳೆ ಸಂಬಂಧಿಕರೊಂದಿಗೆ ಪರ್ಸ್ ಬಗ್ಗೆ ವಿಚಾರಿಸಿದ್ದಾಳೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಂತರ ಆಕೆ ಪೊಲೀಸರ ಮೊರೆ ಹೋಗಿದ್ದಾಳೆ.

    ಕುಟುಂಬದ ಸಂಬಂಧಿಯಂತೆ ನಟಿಸುತ್ತಾ ಮುಖವಾಡ ಧರಿಸಿ ಮದುವೆ ಮನೆ ನುಗ್ಗಿದ ವ್ಯಕ್ತಿ ಪರ್ಸ್‍ನೊಂದಿಗೆ ಹೋಟೆಲ್ ನಿಂದ ಹೊರ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಐಪಿಸಿ ಸೆಕ್ಷನ್ 380ರ ಅಡಿಯಲ್ಲಿ ಪ್ರಕರಣ ದಾಖಸಿಕೊಂಡಿರುವ ಪೊಲೀಸರು ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಕಳ್ಳನ ಫೋಟೋವನ್ನು ಅಂಟಿಸಿ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.

  • ಗಣಿ ಕಾರ್ಮಿಕನಿಗೆ ಸಿಕ್ತು 35 ಲಕ್ಷ ಮೌಲ್ಯದ ವಜ್ರ

    ಗಣಿ ಕಾರ್ಮಿಕನಿಗೆ ಸಿಕ್ತು 35 ಲಕ್ಷ ಮೌಲ್ಯದ ವಜ್ರ

    ಭೋಪಾಲ್: ಕಾರ್ಮಿಕರೊಬ್ಬನಿಗೆ 35 ಲಕ್ಷ ಮೌಲ್ಯದ ವಜ್ರಗಳು ಸಿಕ್ಕಿರುವ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ವಜ್ರ ಗಣಿಯೊಂದರಲ್ಲಿ ನಡೆದಿದೆ.

    ಪನ್ನಾ ವಜ್ರ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸುಬಲ್ ಎಂಬವರಿಗೆ ಅಂದಾಜು 30 ಲಕ್ಷದಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳನ್ನು ಸಿಕ್ಕಿವೆ. 7.5 ಕ್ಯಾರೆಟ್ ನಿವ್ವಳ ತೂಕದ ಮೂರು ವಜ್ರಗಳನ್ನು ಗಣಿಯಲ್ಲಿ ಸಿಕ್ಕಿವೆ ಎಂದು ಪನ್ನಾ ಜಿಲ್ಲೆಯ ವಜ್ರಾಧಿಕಾರಿ ಆರ್.ಕೆ.ಪಾಂಡೆ ತಿಳಿಸಿದ್ದಾರೆ.

    ಈ ವಜ್ರಗಳನ್ನು ಕಾರ್ಮಿಕರ ಸುಬಲ್ ಜಿಲ್ಲಾ ವಜ್ರದ ಕಚೇರಿಗೆ ನೀಡಿದ್ದಾನೆ. ಅವುಗಳನ್ನು ಸರ್ಕಾರದ ನಿಯಮಗಳ ಪ್ರಕಾರ ಹರಾಜು ಮಾಡಲಾಗುತ್ತದೆ ಎಂದು ಶ್ರೀ ಪಾಂಡೆ ಹೇಳಿದ್ದಾರೆ. ಜೊತೆಗೆ ಇದರ ಮಾರಾಟದಿಂದ ಬಂದ ಹಣದಲ್ಲಿ ಶೇಕಡಾ 12 ರಷ್ಟು ತೆರಿಗೆಯನ್ನು ಕಡಿತಗೊಳಿಸಿದ ನಂತರ, ಉಳಿದ 88 ಶೇಕಡಾ ಮಾರಾಟದ ಆದಾಯವನ್ನು ಸುಬಲ್ ಅವರಿಗೆ ನೀಡುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದ ಬುಂದೇಲ್‍ಖಂಡ್ ಪ್ರದೇಶದ ಪನ್ನಾದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ 10.69 ಕ್ಯಾರೆಟ್ ವಜ್ರ ಸಿಕ್ಕಿತ್ತು.

  • ಬೆಳ್ಳಿ, ಚಿನ್ನ ಆಯ್ತು- ಈಗ ಡೈಮಂಡ್ ಮಾಸ್ಕ್ ಮಾರಾಟ

    ಬೆಳ್ಳಿ, ಚಿನ್ನ ಆಯ್ತು- ಈಗ ಡೈಮಂಡ್ ಮಾಸ್ಕ್ ಮಾರಾಟ

    – 1.5 ಲಕ್ಷದಿಂದ 4 ಲಕ್ಷದ ಬೆಲೆಯ ಮಾಸ್ಕ್

    ಗಾಂಧಿನಗರ: ಕೊರೊನಾ ನಂತರ ದೇಶಾದ್ಯಂತ ಫೇಸ್ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಅನೇಕರು ವಿವಿಧ ರೀತಿಯ ಮಾಸ್ಕ್ ತಯಾರಿಸಿಕೊಂಡು ಧರಿಸುತ್ತಿದ್ದಾರೆ. ಈಗಾಗಲೇ ಅನೇಕರು ಬೆಳ್ಳಿ, ಚಿನ್ನದಿಂದ ತಯಾರಿಸಿದ್ದ ಮಾಸ್ಕ್‌ಗಳನ್ನು ಧರಿಸಿದ್ದಾರೆ. ಇದೀಗ ಗುಜರಾತ್‍ನ ಸೂರತ್‍ನಲ್ಲಿ ವಜ್ರದಿಂದ ಮಾಸ್ಕ್ ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

    ಸೂರತ್‍ನ ಆಭರಣ ಅಂಗಡಿಯೊಂದು 1.5 ಲಕ್ಷದಿಂದ 4 ಲಕ್ಷದವರೆಗಿನ ವಜ್ರದಿಂದ ತಯಾರಿಸಿರುವ ಮಾಸ್ಕ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನೂ ಓದಿ: 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ ವ್ಯಕ್ತಿ!

    ಈ ಬಗ್ಗೆ ಮಾತನಾಡಿದ ಆಭರಣ ಅಂಗಡಿಯ ಮಾಲೀಕ ದೀಪಕ್ ಚೋಕ್ಸಿ, “ಲಾಕ್‍ಡೌನ್ ಸಡಿಲಗೊಳಿಸಿದ ನಂತರ ಗ್ರಾಹಕರೊಬ್ಬರು ನಮ್ಮ ಅಂಗಡಿಗೆ ಬಂದು, ನಮ್ಮ ಮನೆಯಲ್ಲಿ ವಿವಾಹ ನಡೆಯುತ್ತಿದೆ. ವಧು-ವರರಿಗೆ ವಿಶಿಷ್ಟವಾದ ಮಾಸ್ಕ್‌ಗಳನ್ನು ಮಾಡಿಕೊಂಡಿ ಎಂದು ಕೇಳಿಕೊಂಡರು. ಆಗ ವಜ್ರದಿಂದ ಮಾಸ್ಕ್ ತಯಾರಿಸುವ ಯೋಚನೆ ಬಂತು. ಈ ವೇಳೆ ನಮ್ಮ ವಿನ್ಯಾಸಕರಿಗೆ ಹೇಳಿ ವಜ್ರದ ಮಾಸ್ಕ್ ರೆಡಿ ಮಾಡಿಸಿದ್ದೇವೆ. ಅದನ್ನು ಅವರು ಖರೀದಿಸಿದ್ದಾರೆ” ಎಂದು ಹೇಳಿದರು.

    ಅಲ್ಲದೇ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ವಜ್ರದ ಮಾಸ್ಕ್ ಬೇಕಾಗಬಹುದು ಎಂದು ಅಂತಹ ಅನೇಕ ಮಾಸ್ಕ್‌ಗಳನ್ನು ತಯಾರಿಸಲಾಗಿದೆ. ಇದರಲ್ಲಿ ವಜ್ರ ಮತ್ತು ಅಮೇರಿಕನ್ ವಜ್ರವನ್ನು ಚಿನ್ನದೊಂದಿಗೆ ಬಳಸಲಾಗಿದೆ. ಅಮೆರಿಕನ್ ವಜ್ರದ ಜೊತೆಗೆ ಮಾಸ್ಕ್‌ನಲ್ಲಿ ಹಳದಿ ಚಿನ್ನವನ್ನು ಬಳಸಲಾಗಿದೆ. ಇದರ ಬೆಲೆ 1.5 ಲಕ್ಷ ರೂಪಾಯಿ ಆಗಿದೆ. ಬಿಳಿ ಚಿನ್ನ ಮತ್ತು ರಿಯಲ್ ವಜ್ರದಿಂದ ಮತ್ತೊಂದು ಮಾಸ್ಕ್ ತಯಾರಿಸಿದ್ದೇವೆ. ಇದರ ಬೆಲೆ 4 ಲಕ್ಷ ರೂಪಾಯಿಗಳು ಎಂದು ಚೋಕ್ಸಿ ತಿಳಿಸಿದರು.

    ಈ ಮಾಸ್ಕ್‌ಗಳ ಬಟ್ಟೆಯ ವಸ್ತುಗಳನ್ನು ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಬಳಸಿದ್ದೇವೆ. ಈ ಮಾಸ್ಕ್‌ಗಳಿಂದ ವಜ್ರ ಮತ್ತು ಚಿನ್ನವನ್ನು ಗ್ರಾಹಕರ ಇಚ್ಛೆಯಂತೆ ತೆಗೆದುಕೊಂಡು ಇತರ ಆಭರಣವನ್ನು ತಯಾರಿಸಲು ಬಳಸಬಹುದು ಎಂದು ಅಂಗಡಿ ಮಾಲೀಕರು ಹೇಳಿದರು.

    ನಮ್ಮ ಕುಟುಂಬದಲ್ಲಿ ಮದುವೆ ಇರುವುದರಿಂದ ನಾನು ಆಭರಣ ಖರೀದಿಸಲು ಅಂಗಡಿಗೆ ಬಂದೆ. ಇಲ್ಲ ನಾನು ಆಭರಣಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುವ ವಜ್ರದ ಮಾಸ್ಕ್‌ಗಳನ್ನು ನೋಡಿದೆ. ಆದ್ದರಿಂದ ನಾನು ವಜ್ರದ ಮಾಸ್ಕ್ ಖರೀದಿಸಲು ನಿರ್ಧರಿಸಿದೆ. ಅಲ್ಲದೇ ನನ್ನ ಉಡುಪಿಗೆ ಹೊಂದಾಣಿಕೆಯಾಗುವ ಮಾಸ್ಕ್ ಖರೀಸಿದೆ ಎಂದು ಗ್ರಾಹಕರೊಬ್ಬರು ಹೇಳಿದರು.

    ಇತ್ತೀಚೆಗೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಡೆ ಎಂಬವರು 2.89 ಲಕ್ಷ ಮೌಲ್ಯದ ಮಾಸ್ಕ್ ತಯಾರಿಸಿದ್ದರು. ಶಂಕರ್ ಚಿನ್ನದ ಮಾಸ್ಕ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

  • ಏರ್‌ಪೋರ್ಟಿನಲ್ಲಿ 2.25 ಕೋಟಿ ಮೌಲ್ಯದ ವಜ್ರ ವಶ

    ಏರ್‌ಪೋರ್ಟಿನಲ್ಲಿ 2.25 ಕೋಟಿ ಮೌಲ್ಯದ ವಜ್ರ ವಶ

    ಚೆನ್ನೈ: ನಗರದ ಅಣ್ಣಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 2.25 ಕೋಟಿ ರೂ. ಮೌಲ್ಯದ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಆರೋಪಿಯನ್ನು ಮಲೇಷಿಯಾ ಮೂಲದ ಅಜ್ಮಲ್ ಖಾನ್ ಬಿನ್ ನಾಗೋರ್ ಮೇರಾ (48) ಎಂದು ಗುರುತಿಸಲಾಗಿದೆ. ಈತ ಬಾಟಿಕ್ ವಿಮಾನದಲ್ಲಿ ಕೌಲಾಲಂಪುರದಿಂದ ಆಗಮಿಸಿದ್ದನು. ಅಣ್ಣಾ ವಿಮಾನ ನಿಲ್ದಾಣದಿಂದ ಹೋಗುವಾಗ ಈತನ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದೆ. ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.

    ಪರಿಶೀಲನೆ ವೇಳೆ ಆರೋಪಿ ತನ್ನ ಒಳ ಉಡುಪಿನಲ್ಲಿ ಎರಡು ಬಿಳಿ ಬಂಡಲ್ಸ್ ಗಳಿಂದ ವಜ್ರಗಳನ್ನು ಬಚ್ಚಿಟ್ಟುಕೊಂಡಿದ್ದನು. ಬಳಿಕ ಆತನ ಲಗೇಜ್ ಚೆಕ್ ಮಾಡಿದಾಗ ಮಲ್ಟಿ-ಫಂಕ್ಷನ್ ಕುಕ್ಕರ್ ಒಳಗೆ ಎಂಟು ಕಟ್ಟುಗಳು ಪತ್ತೆಯಾಗಿದ್ದು, ಅದರಲ್ಲಿ ಟೇಪ್‍ನಲ್ಲಿ ಸುತ್ತಿ ಕುಕ್ಕರ್ ಕೆಳಭಾಗದಲ್ಲಿ ಇಟ್ಟಿದ್ದನು. ಆ ಕಟ್ಟುಗಳಿಂದ ಅಮೂಲ್ಯವಾದ 55 ಬಿಳಿ ಮಿನಿ ಜಿಪ್‍ಲಾಕ್ ಕವರ್ ಪ್ಯಾಕ್‍ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಒಟ್ಟು ಸುಮಾರು 2,996 ಕ್ಯಾರೆಟ್ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ವಿಚಾರಣೆ ಮಾಡಿದಾಗ ವಿಮಾನ ನಿಲ್ದಾಣದ ಹೊರಗೆ ಅಪರಿಚಿತ ವ್ಯಕ್ತಿಗೆ ಇದನ್ನು ಹಸ್ತಾಂತರಿಸಬೇಕಾಗಿತ್ತು ಎಂದು ಹೇಳಿದ್ದಾನೆ. ನಂತರ ಅಧಿಕಾರಿಗಳು ಆತನ್ನು ವಿಮಾನ ನಿಲ್ದಾಣದ ಹೊರಗೆ ಕರೆದುಕೊಂಡು ಹೋಗಿ ಅಪರಿಚಿತ ವ್ಯಕ್ತಿಗಾಗಿ ಹುಡುಕಾಡಿದ್ದಾರೆ. ಆದರೆ ಆತ ಎಲ್ಲೂ ಪತ್ತೆಯಾಗಿಲ್ಲ.

    ಸದ್ಯಕ್ಕೆ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

  • 850 ರೂ.ಗೆ ಉಂಗುರ ಖರೀದಿ- ಮಾರಿದಾಗ ಸಿಕ್ತು ಬರೋಬ್ಬರಿ 6.5 ಕೋಟಿ ರೂ.!

    850 ರೂ.ಗೆ ಉಂಗುರ ಖರೀದಿ- ಮಾರಿದಾಗ ಸಿಕ್ತು ಬರೋಬ್ಬರಿ 6.5 ಕೋಟಿ ರೂ.!

    -ಇಲ್ಲಿದೆ ರಹಸ್ಯಮಯ ಉಂಗುರದ ನೈಜ ಕಥೆ

    ಲಂಡನ್: ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಬೆಲೆ ಬಾಳುವ ಆಭರಣಗಳು ತಮ್ಮದಾಗಬೇಕು ಎಂಬ ಆಸೆ ಇರುತ್ತದೆ. ಆರ್ಥಿಕವಾಗಿ ಚಿನ್ನದ ಆಭರಣ ಖರೀದಿಸಲು ಸಾಧ್ಯವಾಗದಿದ್ದಾಗ ಮಾರುಕಟ್ಟೆಯಲ್ಲಿ ದೊರೆಯುವ ನಕಲಿ ಆಭರಣಗಳನ್ನು ಖರೀದಿಸುತ್ತಾರೆ. ಅಂತೆಯೇ ಇಂಗ್ಲೆಂಡ್ ನಿವಾಸಿಯ ಮಹಿಳೆ 33 ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ 850 ರೂ.ಗೆ ಖರೀದಿಸಿದ್ದ ವಜ್ರದ ಉಂಗುರ ಇಂದು ಬರೋಬ್ಬರಿ 6.5 ಕೋಟಿ ರೂ.ಗೆ ಮಾರಾಟವಾಗಿದೆ.

    ವಜ್ರದ ಉಂಗುರ ಧರಿಸಬೇಕೆಂದು ಆಸೆ ಪಟ್ಟಿದ್ದ ಲಂಡನ್ ನಿವಾಸಿ 33 ವರ್ಷಗಳ ಹಿಂದೆ ಡೆಬ್ರಾ ಗಾಂಡರ್ಡ್(55), ರಸ್ತೆ ಬದಿಯ ಅಂಗಡಿಯಲ್ಲಿ 850 ರೂ. ನೀಡಿ ರಿಂಗ್ ಖರೀದಿಸಿದ್ದರು. ಹೀಗೆ ಹಲವು ವರ್ಷ ಉಂಗುರವನ್ನು ಧರಿಸಿದ್ದ ಡೆಬ್ರಾ ಇತ್ತೀಚೆಗೆ ಅದನ್ನು ಮಾರಲು ನಿರ್ಧರಿಸಿದ್ದರು. ಹೀಗಾಗಿ ಸಮೀಪದ ಅಂಗಡಿಗೆ ತೆರಳಿದಾಗ ಅದು ನಕಲಿ ಅಲ್ಲ ಅಸಲಿ ಎಂಬುದಾಗಿ ಗೊತ್ತಾಗಿದೆ.

    ಅಂಗಡಿಯವನ ಮಾತು ನಂಬದ ಡೆಬ್ರಾ ನಗರದ ಪ್ರಸಿದ್ಧ ವಜ್ರ ವ್ಯಾಪಾರಿ ಬಳಿ ತೆರಳಿ ಉಂಗುರದ ಗುಣಮಟ್ಟವನ್ನು ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ವ್ಯಾಪಾರಿ ನಿಮ್ಮ ಉಂಗುರ 26.27 ಕ್ಯಾರಟ್ ವಜ್ರದ ಹರಳನ್ನು ಹೊಂದಿದೆ. ಪ್ರಾಚೀನ ಕಾಲದ ಉಂಗುರ ಇದಾಗಿದ್ದು, ಪ್ರದರ್ಶನಕ್ಕಿರಿಸಿ ಮಾರುವುದರಿಂದ ಹೆಚ್ಚಿನ ಹಣ ನಿಮ್ಮದಾಗಲಿದೆ ಎಂದು ಸಲಹೆ ನೀಡಿದ್ದರು.

    ವ್ಯಾಪಾರಿಯ ಸಲಹೆ ಮೇರೆಗೆ ಉಂಗುರವನ್ನು ಡೆಬ್ರಾ ಪ್ರದರ್ಶನಕ್ಕೆ ಇರಿಸಿದ್ದರು. ಈ ವೇಳೆ ನಗರದ ಖ್ಯಾತ ವ್ಯಕ್ತಿಯೊಬ್ಬರು ಹರಾಜಿನಲ್ಲಿ 6 ಕೋಟಿ 86 ಲಕ್ಷ ರೂ. ನೀಡಿ ಖರೀದಿಸಿದ್ದಾರೆ. ತೆರಿಗೆ ಕಡಿತಗೊಳಿಸಿದಾಗ ಡೆಬ್ರಾರ ಪಾಲಿಗೆ 4.5 ಕೋಟಿ ರೂ. ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲ್ಯದ ಗೆಳತಿಗಾಗಿ ವಜ್ರದ ಉಂಗುರ

    ಬಾಲ್ಯದ ಗೆಳತಿಗಾಗಿ ವಜ್ರದ ಉಂಗುರ

    ಬೆಂಗಳೂರು: ಭಾನುವಾರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಅವರ ಬಾಲ್ಯದ ಗೆಳತಿಯ ಪ್ರೇರಣ ನಿಶ್ಚಿತಾರ್ಥ. ಈಗಾಗಲೇ ಕುಟುಂಬದವರು ಅದ್ಧೂರಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

    ಧ್ರುವ ಸರ್ಜಾ ತನ್ನ ಬಾಲ್ಯದ ಗೆಳತಿಗೆ ನಿಶ್ಚಿತಾರ್ಥದಲ್ಲಿ ತೊಡಿಸಲು ಕೊಂಡಿರುವ ಉಂಗುರದ ಬೆಲೆ 21 ಲಕ್ಷ ರೂ. ಮೌಲ್ಯದ್ದಾಗಿದ್ದು, ಈ ಉಂಗುರ ವಜ್ರ ಖಚಿತವಾಗಿದೆ. ಇದರ ಸ್ಪೆಷಲ್ ಅಂದರೆ ಮಧ್ಯದಲ್ಲಿರುವ ವಜ್ರದ ಹರಳು 1.45 ಕ್ಯಾರೆಟ್‍ನ ಡೈಮಂಡ್ ಸಾಲಿಟೇರ್ ಇದ್ದು, ಉಂಗುರದ ಸುತ್ತಲಿನ ವಜ್ರದ ಹರಳುಗಳು 2.600 ಕ್ಯಾರೆಟ್ ಹೊಂದಿದೆ.

    ಧ್ರುವ ಸರ್ಜಾರ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಗೆ ಈ ಉಂಗುರ ತೊಡಿಸಿ ಮದುವೆ ನಿಶ್ಚಯ ಮಾಡಿಕೊಳ್ಳಲಿದ್ದಾರೆ. ಬನಶಂಕರಿ ಬಳಿಯ ಧರ್ಮಗಿರಿ ದೇವಾಲಯದ ಆವರಣದಲ್ಲಿ ಧ್ರುವ ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆ ನಡೆದಿದೆ. ಆರ್ಟ್ ಡೈರೆಕ್ಟರ್ ಅರುಣ್ ಸಾಗರ್ ಸೆಟ್ ನಿರ್ಮಾಣದಲ್ಲಿ ತೊಡಗಿದ್ದಾರೆ.

    ಹಸಿರು ಥೀಮ್‍ನಲ್ಲಿ ತೆಂಗಿನ ಗರಿಗಳಿಂದ ನಿರ್ಮಾಣವಾಗುತ್ತಿರುವ ಸೆಟ್‍ಗೆ ಸಾಂಪ್ರದಾಯಿಕ ಪರಿಕರಗಳನ್ನೇ ಡೆಕೋರೇಷನ್‍ಗೆ ಉಪಯೋಗಿಸಲಾಗಿದೆ. ಬೆಳಗ್ಗೆ 10 ಗಂಟೆಯ ಶುಭ ಮುಹೂರ್ತದಲ್ಲಿ ಧ್ರುವ ಸರ್ಜಾ 50 ಗೋವುಗಳನ್ನ ತರಿಸಿ ಗೋ ಪೂಜೆ ಮಾಡಿ ವಿಶೇಷ ರೀತಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವುದಕ್ಕೆ ಧ್ರುವ ಯೋಚಿಸಿದ್ದು, ಈ ಕಾರ್ಯಕ್ರಮಕ್ಕೆ ಸರ್ಜಾ ಕುಟುಂಬ ಹಾಗೂ ಕನ್ನಡ ಚಿತ್ರರಂಗದ ಸ್ಟಾರ್ ನಟರು ಆಗಮಿಸಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv