Tag: ವಜ್ರಮಹೋತ್ಸವ

  • ಬಿಜೆಪಿ ಅಪಸ್ವರಕ್ಕೆ ರಾಷ್ಟ್ರಪತಿ ಭವನದ ಅಧಿಕಾರಿಗಳು ತಲೆಬಾಗಿದ್ರಾ?

    ಬಿಜೆಪಿ ಅಪಸ್ವರಕ್ಕೆ ರಾಷ್ಟ್ರಪತಿ ಭವನದ ಅಧಿಕಾರಿಗಳು ತಲೆಬಾಗಿದ್ರಾ?

    ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುಣಗಾನ ಮಾಡಿದ್ದರು. ಆದರೆ ಈ ಗುಣಗಾನ ಮಾಡಿದ ಬಳಿಕ ರಾಜ್ಯ ಬಿಜೆಪಿಯ ಅಪಸ್ವರಕ್ಕೆ ರಾಷ್ಟ್ರಪತಿ ಭವನದ ಅಧಿಕಾರಿಗಳು ತಲೆ ಬಾಗಿದಾರಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

    ಹೌದು. ಮೊದಲ ಬಾರಿಗೆ ವಿಶೇಷ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಬ್ರಿಟಿಷರ ವಿರುದ್ಧ ಹೋರಾಡಿ ಟಿಪ್ಪು ಸುಲ್ತಾನ್ ವೀರ ಮರಣವನ್ನಪ್ಪಿದ ಎಂದು ರಾಷ್ಟ್ರಪತಿ ಭಾಷಣದಲ್ಲಿ ಉಲ್ಲೇಖಿಸಿದರು. ಭಾಷಣದಲ್ಲಿ ಟಿಪ್ಪುಸುಲ್ತಾನ್ ಬಗ್ಗೆ ಉಲ್ಲೇಖಿಸಿದ ರಾಷ್ಟ್ರಪತಿಗಳು, ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕ ಎಂದು ಹಾಡಿಹೊಗಳಿದರು. ಇದಕ್ಕೆ ಕಾಂಗ್ರೆಸ್ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರೆ, ಬಿಜೆಪಿ ಶಾಸಕರು ಮಾತ್ರ ಸುಮ್ಮನೆ ಕುಳಿತಿದ್ದರು.

    ಈ ಕಾರ್ಯಕ್ರಮದ ಬಳಿಕ ರಾಷ್ಟ್ರಪತಿಗಳ ಭಾಷಣದ ಯಥಾವತ್ ಪ್ರತಿ http://www.presidentofindia.nic.in/ ಮತ್ತು   http://pib.gov.in ವೆಬ್ ಸೈಟಿನಲ್ಲಿ  ಅಪ್ಲೋಡ್ ಆಗಿದೆ. ಟ್ವಿಟ್ಟರ್ ನಲ್ಲೂ ರಾಷ್ಟ್ರಪತಿಗಳು ಹೇಳಿರುವ ಭಾಷಣದ ಪ್ರಮುಖ ಅಂಶಗಳು ಟ್ವೀಟ್ ಆಗಿದೆ. ಆದರೆ ಟಿಪ್ಪು ಸುಲ್ತಾನ್ ಬಗ್ಗೆ ಹೊಗಳಿರುವ ಬಗ್ಗೆ ಯಾವುದೇ ಟ್ವೀಟ್ ಗಳು ಪ್ರಕಟವಾಗದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

    ರಾಷ್ಟ್ರಪತಿಗಳು ಭಾಷಣದಲ್ಲಿ ಟಿಪ್ಪುವನ್ನು ಹೊಗಳಿದ್ದು ಅಚ್ಚರಿಗೆ ಕಾರಣವಾಗಿದ್ದು ಮಾತ್ರವಲ್ಲದೇ ಬುಧವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ‘ಮೈಸೂರು’ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿತ್ತು. ಹೀಗಾಗಿ ರಾಷ್ಟ್ರಪತಿಗಳು ಭಾಷಣದಲ್ಲಿ ಉಲ್ಲೇಖಿಸಿದ ಪರಿಣಾಮ ಟಿಪ್ಪು ಸುಲ್ತಾನ್ ಬಗ್ಗೆ ಟ್ವಿಟ್ಟರ್ ನಲ್ಲೂ ಬರಬಹುದು ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ರಾಷ್ಟ್ರಪತಿ ಭವನದ ಅಧಿಕಾರಿಗಳು ಕೋವಿಂದ್ ಅವರ ಭಾಷಣದ ಬಗ್ಗೆ 17 ಟ್ವೀಟ್ ಗಳನ್ನು ಮಾಡಿದ್ದರೂ ಟಿಪ್ಪು ಬಗ್ಗೆ ಹೊಗಳಿದ ಮಾತನ್ನು ಟ್ವಿಟ್ಟರ್ ನಲ್ಲಿ ಹಾಕಿಲ್ಲ ಯಾಕೆ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಬಿಜೆಪಿ ನಾಯಕರು ಈಗಾಗಲೇ ಟಿಪ್ಪು ಜಯಂತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ರಾಷ್ಟ್ರಪತಿಗಳು ಭಾಷಣ ಮಾಡಿದ್ದರೂ ಮತ್ತೊಮ್ಮೆ ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುವುದು ಬೇಡ ಎನ್ನುವ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ಈ ವಿಚಾರವನ್ನು ರಾಷ್ಟ್ರಪತಿ ಭವನದ ಅಧಿಕಾರಿಗಳು ಟ್ವೀಟ್ ಮಾಡಿಲ್ಲವೇ ಎನ್ನುವ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.

    ಸರ್ಕಾರದಿಂದ ದುರುಪಯೋಗ: ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ವೈಯುಕ್ತಿಕವಾಗಿ ಮಾತನಾಡಿಲ್ಲ. ರಾಷ್ಟ್ರಪತಿಗಳ ಸ್ಥಾನವನ್ನು ಸರ್ಕಾರ ದುರುಪಯೋಗ ಮಾಡಿಕೊಂಡಿದ್ದು, ಕಾಂಗ್ರೆಸ್ ಸಿಎಂ ಗಳ ಹೆಸರನ್ನು ಮಾತ್ರ ಹೇಳಿಸಿ ವಜ್ರಮಹೋತ್ಸವದಲ್ಲಿ ರಾಷ್ಟ್ರಪತಿಗಳ ಭಾಷಣವನ್ನು ದುರುಪಯೋಗ ಮಾಡಿಕೊಂಡಿದೆ. ರಾಜ್ಯಸರ್ಕಾರ ಅಗತ್ಯವಿರುವ ಮುಖ್ಯಮಂತ್ರಿಗಳ ಹೆಸರನ್ನಷ್ಟೇ ರಾಷ್ಟ್ರಪತಿಗಳ ಬಾಯಿಯಿಂದ ಹೇಳಿಸಿದ್ದಾರೆ. ದೇವೆಗೌಡರ ಹಾಗೂ ಬಿಎಸ್ ಯಡಿಯೂರಪ್ಪ ಅವರ ಹೆಸರನ್ನು ಕೈ ಬಿಟ್ಟದ್ದು ಯಾಕೆ? ಈ ವಿಚಾರವಾಗಿ ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

    ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಪ್ರತಿಕ್ರಿಯಿಸಿ, ಇತಿಹಾಸ ಮೆಲಕು ಹಾಕುವ ನೆಪದಲ್ಲಿ ರಾಷ್ಟ್ರಪತಿಗಳ ಬಾಯಿಂದ ಸರ್ಕಾರ ಟಿಪ್ಪು ಹೆಸರನ್ನು ಹೇಳಿಸಿದೆ. ಟಿಪ್ಪು ಕೊಡವರ ಕೊಂದ ವ್ಯಕ್ತಿಯಾಗಿದ್ದು. ನಮ್ಮ ನಿಲುವಿಗೆ ನಾವು ಈಗಲೂ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

    ಜಂಟಿ ಅಧಿವೇಶನವೇ?: ರಾಷ್ಟ್ರಪತಿ ಭಾಷಣದಲ್ಲಿ ಟಿಪ್ಪು ಹೆಸರು ಪ್ರಸ್ತಾಪವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ರಾಷ್ಟ್ರಪತಿಗಳಿಗೆ ನಾವು ಭಾಷಣ ಬರೆದುಕೊಡುವುದಕ್ಕೆ ಇದೇನು ಜಂಟಿ ಅಧಿವೇಶನವೇ? ಬಿಜೆಪಿಯವರಿಗೆ ತಿಳುವಳಿಕೆ ಮಟ್ಟ ಕಡಿಮೆ ಇದೆ. ರಾಜ್ಯಪಾಲರ ಜಂಟಿ ಅಧಿವೇಶನದ ವೇಳೆ ಸರ್ಕಾರ ಬರೆದುಕೊಡುತ್ತದೆ. ಇಂದು ಕೋವಿಂದ್ ಓದಿರುವುದು ರಾಷ್ಟ್ರಪತಿ ಕಚೇರಿಯಲ್ಲಿ ತಯಾರಾದ ಭಾಷಣ ಎಂದು ಹೇಳಿ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಚರಿತ್ರೆಯಲ್ಲಿ ಇರುವುದನ್ನು ರಾಷ್ಟ್ರಪತಿ ಹೇಳಿದ್ದು, ಇದಕ್ಕೆ ಬಿಜೆಪಿಯವರು ರಾಜಕೀಯ ಬಣ್ಣ ಕೊಡುವುದಕ್ಕೆ ನೋಡುತ್ತಿದ್ದಾರೆ. ಇದೊಂದು ಖಂಡನೀಯ ಹಾಗು ವಿಷಾದನೀಯ ಎಂದು ಪ್ರತಿಕ್ರಿಯಿಸಿದರು.

    ರಾಷ್ಟ್ರಪತಿ ಭಾಷಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಹೆಸರು ಪ್ರಸ್ತಾಪ ಮಾಡದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇದರಲ್ಲಿ ನಮ್ಮ ಪಾತ್ರ ಇಲ್ಲ. ರಾಷ್ಟ್ರಪತಿ ಮರೆತಿರಬಹುದು. ರಾಷ್ಟ್ರಪತಿ ಅವರು ಉದ್ದೇಶ ಪೂವರ್ಕವಾಗಿ ಮಾಡಿಲ್ಲ ಎಂದು ನನಗನಿಸುತ್ತದೆ ಎಂದರು.

    ಮಾಜಿ ಪ್ರಧಾನಿ ದೇವೇಗೌಡರ ಹೆಸರು ಬಿಟ್ಟಿದ್ದಕ್ಕೆ ನಾನು ರಾಷ್ಟ್ರಪತಿಗಳಿಗೆ ದೋಷ ಕೊಡುವುದಿಲ್ಲ. ಬದಲಿಗೆ ಭಾಷಣ ಬರೆದವರಿಗೆ ಸರಿಯಾದ ಮಾಹಿತಿ ಇಲ್ಲದಿರಬಹುದು ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

  • ವಜ್ರಮಹೋತ್ಸವಕ್ಕೆ 5 ದಿನದ ಟಿಎ, ಡಿಎ ಕೊಡಿ – ಶಾಸಕರಿಗೆ ಒಂದೂವರೆ ಕೋಟಿ ರೂ. ಖರ್ಚು

    ವಜ್ರಮಹೋತ್ಸವಕ್ಕೆ 5 ದಿನದ ಟಿಎ, ಡಿಎ ಕೊಡಿ – ಶಾಸಕರಿಗೆ ಒಂದೂವರೆ ಕೋಟಿ ರೂ. ಖರ್ಚು

    ಬೆಂಗಳೂರು: ಇದೇ ತಿಂಗಳು 25 ಮತ್ತು 26 ನೇ ದಿನಾಂಕದಂದು ನಡೆಯುವ ವಿಧಾನಸೌಧದ ವಜ್ರಮಹೋತ್ಸವ ಸಮಾರಂಭ ಹೆಜ್ಜೆ ಹೆಜ್ಜೆಗೂ ವಿವಾದಕ್ಕೆ ಗುರಿಯಾಗುತ್ತಿದೆ.

    ಮೊನ್ನೆಯ ತನಕ ಚಿನ್ನದ ಬಿಸ್ಕೆಟ್ ಗಿಫ್ಟ್ ವಿವಾದ ಎದುರಿಸುತ್ತಿದ್ದು ಇದೀಗ ಇತಿಹಾಸ ಸೃಷ್ಟಿ ಮಾಡುವ ಐತಿಹಾಸಿಕ ಅಧಿವೇಶನಕ್ಕೆ ಶಾಸಕರು ಟಿಎ ಮತ್ತು ಡಿಎ ಕೊಡಬೇಕಂತೆ. ಇಲ್ಲಿ ಇಂಟ್ರಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ ಒಂದು ದಿನ ಅಧಿವೇಶನ ನಡೆದ್ರು 5 ದಿನ ಶಾಸಕರಿಗೆ ಡಿಎ ಕೊಡಬೇಕು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

    50 ಸಾವಿರ ರೂಪಾಯಿ ಮೊತ್ತದ ಚಿನ್ನದ ಬಿಸ್ಕೆಟ್ ಬೇಡ ಎಂದ ಶಾಸಕರು, ಅದೇ ಮೊತ್ತದ ಟಿಎ ಮತ್ತು ಡಿಎ ಬೇಕು. ಒಂದು ದಿನದ ಅಧಿವೇಶನಕ್ಕೆ ಬರೋಬ್ಬರಿ 1.20 ಕೋಟಿ ರುಪಾಯಿ ವೆಚ್ಚವಾಗಲಿದಯಂತೆ. ಐತಿಹಾಸಿಕ ಜಂಟಿ ಅಧಿವೇಶನಕ್ಕೂ ಶಾಸಕರು ಟಿಎ, ಡಿಎ ಬೇಕು ಅಂತ ಜೋತು ಬಿದ್ದಿರೋದು ಮಾತ್ರ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

    ದುಂದುವೆಚ್ಚಕ್ಕೆ ಸಿಎಂ ಕಡಿವಾಣ: ಇತ್ತೀಚೆಗಷ್ಟೇ ವಿಧಾನ ಸಭೆಯ ಸ್ಪೀಕರ್ ಕೋಳಿವಾಡ ಹಾಗೂ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿ ಸಿಎಂ ಗೆ ವಜ್ರಮಹೋತ್ಸವದ ಖರ್ಚು-ವೆಚ್ಚದ ವಿವರ ನೀಡಲು ಮುಂದಾದ್ರು.

    ಇದನ್ನು ಪರಿಶೀಲಿಸಿದ ಸಿಎಂ ವಜ್ರಮಹೋತ್ಸವಕ್ಕೆ 26 ಕೋಟಿ ತೆಗೆದುಕೊಂಡು ಏನು ಮಾಡುತ್ತೀರಾ?. ನನಗೆ ಯಾವ ವಿವರವನ್ನು ನೀಡುವುದು ಬೇಡ. 26 ಕೋಟಿ ಪ್ರಸ್ತಾವನೆ, ಶಾಸಕರಿಗೆ ಚಿನ್ನದ ಬಿಸ್ಕತ್ ನೀಡುವುದು ಹಾಗೂ ನೌಕರರಿಗೆ ಬೆಳ್ಳಿ ತಟ್ಟೆ ನೀಡುವ ವಿಚಾರ ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಯಾರಿಗೂ ಯಾವ ದುಬಾರಿ ಗಿಫ್ಟ್ ಬೇಡ. ನಾನು ಕೊಡುವುದು ಹತ್ತು ಕೋಟಿ ಮಾತ್ರ. ಅದರಲ್ಲೇ ಎಲ್ಲವನ್ನೂ ಒಂದೇ ದಿನದಲ್ಲಿ ಕಾರ್ಯಕ್ರಮ ಮುಗಿಸಬೇಕು ಅಂತ ಇದೇ ಮೊದಲ ಬಾರಿಗೆ ಸ್ಪೀಕರ್ ಮತ್ತು ಸಭಾಪತಿ ಅವರಿಗೆ ಖಡಕ್ ಸೂಚನೆ ನೀಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿತ್ತು.

    ರಾಜ್ಯದ ಜನತೆ ಮೊದಲೇ ಸಂಕಷ್ಟದಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ವಜ್ರಮಹೋತ್ಸವ ಕಾರ್ಯಕ್ರಮವನ್ನು 10 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಮಾಡುವಂತೆ ಸೂಚಿಸಿದ್ದರು. ಈ ಮೂಲಕ ದುಂದು ವೆಚ್ಚದ ಕಾರ್ಯಕ್ರಮಕ್ಕೆ ಕಡಿವಾಣ ಹಾಕಿದ್ದರು. ಅಲ್ಲದೇ ಇದೇ ತಿಂಗಳ 25, 26ರಂದು ಎರಡು ದಿನ ನಡೆಯಬೇಕಿದ್ದ ಕಾರ್ಯಕ್ರಮವು 25ರಂದು ಒಂದು ದಿನ ಮಾತ್ರ ನಡೆಸುವಂತೆ ಸೂಚನೆ ನೀಡಿದ್ದರು ಎಂದು ತಿಳಿದುಬಂದಿತ್ತು.

    ಸಾಕ್ಷ್ಯಚಿತ್ರ: ವಜ್ರಮಹೋತ್ಸವ ಸಮಾರಂಭ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಆದರೆ ಈ ವಜ್ರಮಹೋತ್ಸಕ್ಕೆ ಸಾಕ್ಷ್ಯಚಿತ್ರಗಳು ಸಿದ್ಧವಾಗುತ್ತಿದ್ದು, ಅದಕ್ಕೆ ಇನ್ನು 8 ತಿಂಗಳು ಸಮಯ ಬೇಕಾಗಿದೆ. ಇದು ಕೇವಲ ಸಾಕ್ಷ್ಯಚಿತ್ರವಲ್ಲ, ನಮ್ಮ ಇತಿಹಾಸದ ಮರುಸೃಷ್ಟಿ ಎಂದು ನಿರ್ದೇಶಕರಾದ ಟಿ.ಎನ್.ಸೀತಾರಾಮ್ ಹೇಳಿದ್ದರು.

    1950 ರಿಂದ ಇಲ್ಲಿಯ ತನಕ ವಿಧಾನಸಭೆ ನಡೆದು ಬಂದಿರುವ ಹಾದಿಯನ್ನು ಮರುಸೃಷ್ಟಿ ಮಾಡಲಾಗುತ್ತದೆ. ಇದಕ್ಕಾಗಿ ಇಡೀ ವಿಧಾನಸಭೆಯ ಮಾದರಿ ಸೆಟ್ ಹಾಕಿ, ಮರುಸೃಷ್ಟಿ ಮಾಡಲಾಗುತ್ತದೆ. ಕರ್ನಾಟಕದ ಔನ್ಯತೆಗಾಗಿ ತೆಗೆದುಕೊಂಡಿರುವ ಇತಿಹಾಸ ಪ್ರಸಿದ್ಧ ತೀರ್ಮಾನಗಳು ಕೂಡ ಇದರಲ್ಲಿ ಅಡಕವಾಗಿರುತ್ತವೆ. ಪ್ರಮುಖವಾಗಿ ನಾಲ್ಕು ಗಂಟೆಗಳ ಕಾಲದ ಈ ಸಾಕ್ಷ್ಯಚಿತ್ರಕ್ಕೆ ಸಂಗೀತ ಬ್ರಹ್ಮ ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗಿದೆ.

    https://www.youtube.com/watch?v=xXietK2yVTY

     

  • ಅ.25ರಂದು ವಿಧಾನಸೌಧದ ವಜ್ರಮಹೋತ್ಸವ: ಪರಿಷತ್ ಸದಸ್ಯ, ಶಾಸಕ, ಸಿಬ್ಬಂದಿಗಳಿಗೆ ಭರ್ಜರಿ ಗಿಫ್ಟ್

    ಅ.25ರಂದು ವಿಧಾನಸೌಧದ ವಜ್ರಮಹೋತ್ಸವ: ಪರಿಷತ್ ಸದಸ್ಯ, ಶಾಸಕ, ಸಿಬ್ಬಂದಿಗಳಿಗೆ ಭರ್ಜರಿ ಗಿಫ್ಟ್

    ಬೆಂಗಳೂರು: ವಿಧಾನಸೌಧ ವಜ್ರಮಹೋತ್ಸವವು ಅಕ್ಟೋಬರ್ 25 ರಂದು ನಡೆಯಲಿದ್ದು, ಇದರ ಸವಿನೆನಪಿಗಾಗಿ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಚಿನ್ನದ ಬಿಸ್ಕತ್ ಹಾಗೂ ಸಿಬ್ಬಂದಿಗಳಿಗೆ ಬೆಳ್ಳಿತಟ್ಟೆ ನೀಡಲು ನಿರ್ಧರಿಸಿದೆ.

    ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಡೆಸುತ್ತಿರುವ ಎರಡು ದಿನಗಳ ವಜ್ರಮಹೋತ್ಸವ ಸಮಾರಂಭದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

    ವಿಧಾನಸೌಧ ವಜ್ರಮಹೋತ್ಸವ ಸಮಾರಂಭಕ್ಕಾಗಿ ಒಟ್ಟು 27 ಕೋಟಿ ರೂ. ವೆಚ್ಚದಲ್ಲಿ 300 ಶಾಸಕರಿಗೆ ಹಾಗೂ ಪರಿಷತ್ ಸದಸ್ಯರಿಗೆ 50,000 ಮೌಲ್ಯದ ಚಿನ್ನದ ಬಿಸ್ಕತ್ ನೀಡಲು ನಿರ್ಧರಿಸಿದೆ.

    ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಬೆಂಗಳೂರಿನಲ್ಲಿ ಸಾವು ನೋವು ಸಂಭವಿಸಿರುವಾಗ 27 ಕೋಟಿ ಖರ್ಚು ಮಾಡುವುದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

    ಇನ್ನು ಯಾರು, ಯಾವ ಕಾರಣಕ್ಕೆ ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಹೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.

    27 ಕೋಟಿ ರೂ. ಖರ್ಚಿನ ಲೆಕ್ಕಾಚಾರ ಇಂತಿದೆ: