Tag: ವಜ್ರದೇಹಿ ಮಠ

  • ಚೈತ್ರಾ ಕೋಟಿ ಡೀಲ್ ಪ್ರಕರಣ – ವಜ್ರದೇಹಿ ಮಠದ ಸ್ವಾಮೀಜಿಗೆ ಸಿಸಿಬಿ ನೋಟಿಸ್

    ಚೈತ್ರಾ ಕೋಟಿ ಡೀಲ್ ಪ್ರಕರಣ – ವಜ್ರದೇಹಿ ಮಠದ ಸ್ವಾಮೀಜಿಗೆ ಸಿಸಿಬಿ ನೋಟಿಸ್

    ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Assembly Election) ಬಿಜೆಪಿ (BJP) ಟಿಕೆಟ್ ಕೊಡಿಸುವುದಾಗಿ ನಂಬಿಸಿ ಚೈತ್ರಾ (Chaithra) ಮತ್ತು ಗ್ಯಾಂಗ್ ಬಹುಕೋಟಿ ವಂಚನೆ ಪ್ರಕರಣಕ್ಕೆ (Fraud Case) ಸಂಬಂಧಿಸಿದಂತೆ ವಜ್ರದೇಹಿ ಮಠದ (Vajradehi Math) ರಾಜಶೇಖರಾನಂದ ಸ್ವಾಮೀಜಿಗೆ (Rajashekharananda swamiji) ಸಿಸಿಬಿ ನೋಟಿಸ್ ಕಳುಹಿಸಿದೆ.

    ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಚೈತ್ರಾ ಮತ್ತು ಆಕೆಯ ತಂಡ ಗೋವಿಂದ ಬಾಬು ಪೂಜಾರಿ ಎಂಬ ಉದ್ಯಮಿಯಿಂದ ಹಣ ಪಡೆದು ವಂಚಿಸಿ ಪೊಲೀಸರ ಅತಿಥಿಯಾಗಿದ್ದಾರೆ . ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಿಸಿಬಿ (CCB) ತನಿಖೆ ನಡೆಸುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ವಜ್ರದೇಹಿ ಸ್ವಾಮೀಜಿಗೆ ಬೆಂಗಳೂರು (Bengaluru) ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ, ಮೂವರು ಅಧಿಕಾರಿಗಳು ಸಸ್ಪೆಂಡ್: ಡಿಸಿ, ಎಸ್‌ಪಿಗೆ ನೋಟಿಸ್‌

    ವಜ್ರದೇಹಿ ಮಠ ಮಂಗಳೂರಿನ ಗುರುಪುರದಲ್ಲಿದೆ. ಸಿಸಿಬಿ ಎಸಿಪಿ ರೀನಾ ಸುವರ್ಣ ನೋಟಿಸ್ ಜಾರಿ ಮಾಡಿದ್ದು, ಇನ್ನೆರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸ್ವಾಮೀಜಿಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಮಹಿಷ ದಸರಾ, ಚಲೋ ಚಾಮುಂಡಿ ಬೆಟ್ಟ ಕಾರ್ಯಕ್ರಮಗಳಿಗೆ ಬ್ರೇಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಡೀಲ್ ಕೇಸ್; ನನ್ನ ಹೆಸರು ಬಂದಿರೋದು ಬೇಸರವಾಗಿದೆ- ವಜ್ರದೇಹಿ ಮಠದ ಸ್ವಾಮೀಜಿ

    ಚೈತ್ರಾ ಡೀಲ್ ಕೇಸ್; ನನ್ನ ಹೆಸರು ಬಂದಿರೋದು ಬೇಸರವಾಗಿದೆ- ವಜ್ರದೇಹಿ ಮಠದ ಸ್ವಾಮೀಜಿ

    ಮಂಗಳೂರು: ಬಿಜೆಪಿ ಟಿಕೆಟ್‍ಗಾಗಿ (BJP Ticket) ಡೀಲ್ ಪ್ರಕರಣದಲ್ಲಿ ಮತ್ತೊಬ್ಬ ಸ್ವಾಮೀಜಿ ಹೆಸರು ಕೇಳಿಬಂದಿದೆ. ಚೈತ್ರಾ ಕುಂದಾಪುರ (Chaitra Kundapura) ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ವಿಶ್ವ ಹಿಂದು ಪರಿಷತ್ ಸಂಘಟನೆಯಲ್ಲಿ ಗುರುತಿಸಿರುವ ಮಂಗಳೂರಿನ ವಜ್ರದೇಹಿ ಮಠದ (Vajradehi Mutt) ರಾಜಶೇಖರಾನಂದ ಸ್ವಾಮೀಜಿ ಹೆಸರು ಕೇಳಿಬಂದಿದೆ.

    ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ನನಗೂ ಆಕೆಯ ಪ್ರಕರಣಕ್ಕೂ ಸಂಬಂಧ ಇಲ್ಲ. ಜುಲೈ ತಿಂಗಳಲ್ಲಿ ಹಿಂದೂ ಸಂಘಟನೆಯ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿದ್ದರು. ಗೋವಿಂದ ಪೂಜಾರಿ ಟಿಕೆಟ್ ವಿಚಾರದಲ್ಲಿ ನನಗೆ ಪ್ರಶ್ನೆ ಮಾಡಿದ್ದರು. ಆದರೆ ನನಗೇನೂ ತಿಳಿದಿರಲಿಲ್ಲ, ನನ್ನಲ್ಲಿ ಯಾಕೆ ಪ್ರಶ್ನೆ ಮಾಡುವುದೆಂದು ಕೇಳಿದ್ದೆ. ಬಳಿಕ ಅವರೇ ಫೋನ್ ಮಾಡಿ, ಚೈತ್ರಾ ಮತ್ತು ಅಭಿನವ ಹಾಲಶ್ರೀ ಹೆಸರಿದೆ ಎಂದು ಹೇಳಿದ್ದರು ಎಂದರು. ಇದನ್ನೂ ಓದಿ: ಗೋವಿಂದ ಬಾಬು ಪೂಜಾರಿಗೆ ಬೈದಿದ್ದೇನೆ: ಸೂಲಿಬೆಲೆ ಫಸ್ಟ್ ರಿಯಾಕ್ಷನ್

    ಚೈತ್ರಾ ಜೊತೆ ಸಂಪರ್ಕ ಇದ್ದುದರಿಂದ ಆಕೆಗೆ ಫೋನ್ ಮಾಡಿ ಸ್ಪಷ್ಟನೆ ಕೇಳಿದ್ದೆ. ಮೂರು ಕೋಟಿ ದುಡ್ಡಿನ ಬಗ್ಗೆ ಕೇಳಿದಾಗ, ಒಂದೂವರೆ ಇದ್ದಿದ್ದು ಮೂರು ಕೋಟಿ ಆಯ್ತಾ? ಇನ್ನು ಅದು 4-5 ಕೋಟಿ ಆಗಬಹುದು ಎಂದು ಆಕೆ ಹೇಳಿದ್ದಳು, ಸತ್ಯ ಹೇಳು ಎಂದಿದ್ದೆ. ಆಕೆ ತನಗೇನೂ ಗೊತ್ತಿಲ್ಲ ಎಂದಿದ್ದರು, ಚಕ್ರವರ್ತಿ ಸೂಲಿಬೆಲೆ ಅವರಿಗೂ ಫೋನ್ ಮಾಡಿದ್ದೆ. ಅಭಿನವ ಹಾಲಶ್ರೀ ಸ್ವಾಮೀಜಿ, ಸೂಲಿಬೆಲೆ ಜೊತೆಗೆ ಗುರುತಿಸಿದ್ದರಿಂದ ಅವರಿಗೂ ವಿಷಯ ತಿಳಿಸಿದ್ದೆ ಎಂದು ಹೇಳಿದರು. ಇದನ್ನೂ ಓದಿ:  ಚೈತ್ರಾ ಕುಂದಾಪುರ ಡೀಲ್ ಕೇಸ್- ಗೋವಿಂದ ಪೂಜಾರಿ ವಿರುದ್ಧ ಗಗನ್ ದೂರು

    ನಾವು ವಿಶ್ವ ಹಿಂದೂ ಪರಿಷತ್ತಿನಲ್ಲಿ ಗುರುತಿಸಿದ್ದರಿಂದ ಶರಣ್ ಪಂಪ್ ವೆಲ್ ಅವರಿಗೂ ವಿಷಯ ತಿಳಿಸಿದ್ದೇವೆ. ನಿಮಗೇನೂ ಸಂಪರ್ಕ ಇಲ್ಲಾಂದ್ರೆ ನೀವ್ಯಾಕೆ ತಲೆ ಬಿಸಿ ಮಾಡ್ತೀರಿ ಎಂದು ಶರಣ್ ಹೇಳಿದ್ದರು. ಈಗ ನನ್ನ ಹೆಸರನ್ನು ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ವಿಷಯ ಇಷ್ಟೇ ಆಗಿದ್ದರೂ, ನನ್ನ ಹೆಸರು ಬಂದಿರುವುದು ಬೇಸರವಾಗಿದೆ. ಹಣದ ವಿಚಾರದಲ್ಲಿ ತನಗೇನೂ ಗೊತ್ತಿಲ್ಲ, ಚೈತ್ರಾಳ ಪರಿಚಯ ಇದ್ದುದು ಹೌದು. ಹಾಗಂತ, ಆಕೆಯ ಜೊತೆಗೆ ಬೇರೇನೂ ಸಂಪರ್ಕ, ಮಾತುಕತೆ, ವಹಿವಾಟು ಇಲ್ಲ ಎಂದು ಅವರು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]