ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸುಗಳನ್ನು ವಿತರಣೆ ಮಾಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ (BMTC) ಸಂಸ್ಥೆ ಇದೀಗ ವಜ್ರ ಸೇವೆಗಳ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ವಜ್ರ ಸಾಪ್ತಾಹಿಕ ಪಾಸನ್ನು (Vayu Weekly Pass) ಆಗಸ್ಟ್ 1 ರಿಂದ ವಿತರಣೆ ಮಾಡುತ್ತಿದೆ.
ದರ ಎಷ್ಟು? ವಜ್ರ ಸಾಪ್ತಾಹಿಕ ಪಾಸು 750 ರೂ. – ಪಾಸುದಾರರಿಗೆ ಪಾಸಿನ ಮಾನ್ಯತಾ ಅವಧಿಯಲ್ಲಿ ಸಂಸ್ಥೆಯ ವಜ್ರ, ಸಾಮಾನ್ಯ ವೇಗದೂತ ಹಾಗೂ ಸಾಮಾನ್ಯ ಸಾರಿಗೆ ಸೇವೆಗಳಲ್ಲಿ (ವಾಯುವಜ್ರ ಮತ್ತು ವಿಶೇಷ ಸೇವೆಗಳನ್ನು ಹೊರತುಪಡಿಸಿ) ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯ. ಇದನ್ನೂ ಓದಿ: FAStag ವ್ಯವಹಾರ – ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ
ವಜ್ರ ಸಾಪ್ತಾಹಿಕ ಪಾಸು ಹೊಂದಿರುವ ಪ್ರಯಾಣಿಕರು ವಜ್ರ ವೇಗದೂತ ಸೇವೆಗಳಲ್ಲಿ ಪ್ರಯಾಣಿಸುವಾಗ, ಪ್ರತ್ಯೇಕವಾಗಿ 10 ರೂ. ವೇಗದೂತ ಸೇವಾ ಶುಲ್ಕ ಹಾಗೂ ಅನ್ವಯವಾಗುವ ಟೋಲ್ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿರುತ್ತದೆ.
ಗಾಂಧಿನಗರ: ಅಯೋಧ್ಯೆ ರಾಮ ಮಂದಿರ (Ayodhya Ram Mandir) ನಿರ್ಮಾಣಕ್ಕೆ 2011ರಲ್ಲೇ 11 ಕೋಟಿ ರೂ. ದೇಣಿಗೆ ನೀಡಿದ್ದ ಉದ್ಯಮಿ, ಸಮಾಜ ಸೇವಕ ಗೋವಿಂದ್ ಧೋಲಾಕಿಯಾ (Govind Dholakia) ಅವರನ್ನು ರಾಜ್ಯಸಭಾ ಚುನಾವಣೆಗೆ (Rajya Sabha) ಗುಜರಾತ್‌ನಿಂದ ಬಿಜೆಪಿ (BJP) ನಾಮನಿರ್ದೇಶನ ಮಾಡಿದೆ.
ಗೋವಿಂದ್ ಧೋಲಾಕಿಯಾ ಅವರು ಸೂರತ್ ಮೂಲದ ವಜ್ರ (Diamond) ಉತ್ಪಾದನೆ ಮತ್ತು ರಫ್ತು ಮಾಡುವ ಕಂಪನಿಯಾದ ಶ್ರೀ ರಾಮಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ರೈತ ಕುಟುಂಬದಿಂದ ನಾನು ಬಂದಿದ್ದೇನೆ. ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗುವ ನಾಲ್ಕು ಗಂಟೆಗಳ ಮೊದಲು ನನ್ನ ನಾಮನಿರ್ದೇಶನದ ಬಗ್ಗೆ ನನಗೆ ತಿಳಿಯಿತು. ನನ್ನ ಹೆಸರನ್ನು ಅಂತಿಮಗೊಳಿಸುವ ಮೊದಲು ಬಿಜೆಪಿ ನಾಯಕತ್ವವು ಖಂಡಿತವಾಗಿಯೂ ಚಿಂತನೆ ನಡೆಸಿರಬೇಕು ಎಂದು ಹೇಳಿದರು.
ಆರಂಭದಲ್ಲಿ ವಜ್ರ ಕಂಪನಿಯೊಂದರಲ್ಲಿ ಕಾರ್ಮಿಕನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಸಣ್ಣ ಪ್ರಮಾಣದಲ್ಲಿ ಸಾಲ ಮಾಡಿ 1970ರಲ್ಲಿ ಕಂಪನಿ ಆರಂಭಿಸಿದರು. ಸದ್ಯ 5000ಕ್ಕೂ ಹೆಚ್ಚು ಉದ್ಯೋಗಿಗಳು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ಭಾಷಣಕಾರರಾಗಿರುವ ಗೋವಿಂದ್ ಧೋಲಾಕಿಯಾ ತಮ್ಮ ಸಮಾಜಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ. ದೀಪಾವಳಿ ಸಮಯದಲ್ಲಿ ತಮ್ಮ ಉದ್ಯೋಗಿಗಳಿಗೆ ಕಾರು, ಫ್ಲ್ಯಾಟ್ ಸೇರಿದಂತೆ ದುಬಾರಿ ಉಡುಗೊರೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಉದ್ಯೋಗಿಗಳ ಜೊತೆ ಅವರ ಕುಟುಂಬದ ಸದಸ್ಯರಿಗೂ ಪ್ರವಾಸವನ್ನು ಆಯೋಜಿಸುವ ಮೂಲಕ ಸುದ್ದಿಯಾಗಿದ್ದರು. ಇದನ್ನೂ ಓದಿ: T20 World Cup: ರೋಹಿತ್ ಶರ್ಮಾ ನಾಯಕ, ಹಾರ್ದಿಕ್ ಉಪನಾಯಕ: ಜಯ್ ಶಾ
ಯಶಸ್ವಿ ಉದ್ಯಮಿಯಾಗಿರುವ ಇವರು ಹಲವಾರು ಕಾರ್ಯಕ್ರಮದಲ್ಲಿ ಯುವ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಅಹಮಾದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ದೆಹಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಗಾಗ ಇವರನ್ನು ಆಹ್ವಾನಿಸುತ್ತಿದೆ.
ವಡೋದರಾದ ನ್ಯಾಷನಲ್ ಅಕಾಡೆಮಿ ಆಫ್ ಇಂಡಿಯನ್ ರೈಲ್ವೇಸ್, ಪುಣೆಯ ಸಿಂಬೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್, ಪುಣೆಯ ಎಂಐಟಿ ಸೇರಿದಂತೆ ದೇಶದ ಹಲವಾರು ಪ್ರಸಿದ್ಧ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ತೆರಳಿ ಮಕ್ಕಳಿಗೆ ಉದ್ಯಮದ ಕಥೆಯ ಬಗ್ಗೆ ಪಾಠ ಮಾಡುತ್ತಿದ್ದಾರೆ.
ಗೋವಿಂದ್ ಧೋಲಾಕಿಯಾ ಅವರು ಬಡ ಮಕ್ಕಳ ಶಿಕ್ಷಣ, ಬಡವರಿಗೆ ಆರೋಗ್ಯ, ಯುವಕರಿಗೆ ಉದ್ಯಮ ಮಾರ್ಗದರ್ಶನ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಸಮಾಜ ಸೇವೆಗಾಗಿ 2014 ರಲ್ಲಿ ಎಸ್‌ಆರ್‌ಕೆಕೆಎಫ್ ಹೆಸರಿನಲ್ಲಿ ನಾಲೆಡ್ಜ್ ಫೌಂಡೇಶನ್ ಸ್ಥಾಪಿಸಿದ್ದಾರೆ.
ಬೆಂಗಳೂರು: ಡಿಆರ್‌ಐ (ಡೈರೆಕ್ಟೊರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್) ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿ ಎರಡು ಏರ್‌ಪೋರ್ಟ್‌ಗಳಲ್ಲಿ (Bengaluru Airport) 13 ಕೋಟಿ ಮೌಲ್ಯದ ವಜ್ರ (Diamond) ಹಾಗೂ ವಿದೇಶಿ ಕರೆನ್ಸಿಯನ್ನ ವಶಕ್ಕೆ ಪಡೆದಿದ್ದಾರೆ.
ಪ್ರಯಾಣಿಕರ ಬಳಿ ಸ್ವಾಭಾವಿಕವಾಗಿ ಹಾಗೂ ಲ್ಯಾಬ್‌ನಲ್ಲಿ ತಯಾರಿಸಿದ ವಜ್ರಗಳು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 7.77 ಕೋಟಿ ಮೌಲ್ಯದ 8,053 ಕ್ಯಾರೆಟ್ ತೂಕದ ವಜ್ರಗಳು ಹಾಗೂ 4.62 ಲಕ್ಷ ವಿದೇಶಿ ಕರೆನ್ಸಿ ಪತ್ತೆಯಾಗಿದೆ.
ಹೈದರಾಬಾದ್‌ನಲ್ಲಿ 6.03 ಕೋಟಿ ಮೌಲ್ಯದ 5569 ಕ್ಯಾರೆಟ್ ತೂಕದ ವಜ್ರಗಳು ಹಾಗೂ 9.83 ಲಕ್ಷ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಚಾಕ್ಲೇಟ್ ಪಾಕೇಟ್‌ಗಳಲ್ಲಿ ಸೀಲ್ ಮಾಡಿ ವಜ್ರಗಳ ಸಾಗಾಟ ಮಾಡುತ್ತಿದ್ದರು. ಪ್ರಯಾಣಿಕರನ್ನ ವಶಕ್ಕೆ ಪಡೆದು ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಪಹರಣಕಾರರೆಂದು ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ – ಪಶ್ಚಿಮ ಬಂಗಾಳದ 12 ಮಂದಿ ಅರೆಸ್ಟ್
ಗಾಂಧಿನಗರ: ಅಮೆರಿಕದ ಪೆಂಟಗನ್ ಮೀರಿಸುವ ಹೊಸ ಕಚೇರಿ ಸಂಕೀರ್ಣವು ಭಾರತದಲ್ಲಿ ತಲೆ ಎತ್ತಿದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ನೆರವೇರಿಸಿದ್ದಾರೆ.
#WATCH | Gujarat: Prime Minister Narendra Modi inaugurates the Surat Diamond Bourse.
It will be the world’s largest and modern centre for international diamond and jewellery business. It will be a global centre for trading both rough and polished diamonds as well as jewellery.… pic.twitter.com/itJi0jlKBI
ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರವಾದ `ಸೂರತ್ ಡೈಮಂಡ್ ಬೋರ್ಸ್’ (Surat Diamond Bourse) ಅನ್ನು ಮೋದಿ ಅವರು ಭಾನುವಾರ (ಇಂದು) ಉದ್ಘಾಟಿಸಿ ಶುಭಹಾರೈಸಿದ್ದಾರೆ. ಈ ಮೂಲಕ ಗುಜರಾತ್‌ನ (Gujarat) ಸೂರತ್ ನಗರವು ವಜ್ರದ ರಾಜಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಖಚಿತಪಡಿಸಿದೆ. ಇದನ್ನೂ ಓದಿ: ಸೀರೆಯ ಸೆರಗು ಮೆಟ್ರೋ ಬಾಗಿಲಿಗೆ ಸಿಲುಕಿ ಎಳೆದೊಯ್ದ ರೈಲು – ಮಹಿಳೆ ಸಾವು
ಡೈಮಂಡ್ ಬೋರ್ಸ್ ವಿಶೇಷತೆ ಏನು?
ಸೂರತ್ ಡೈಮಂಡ್ ಬೋರ್ಸ್ 35.54 ಎಕರೆ ಭೂಪ್ರದೇಶದಲ್ಲಿ, 3,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈ ಮೂಲಕ ಇದು 1943ರಲ್ಲಿ 6.5 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಪೆಂಟಗನ್ ಸಂಕೀರ್ಣ ಕಚೇರಿಯನ್ನೂ ಹಿಂದಿಕ್ಕಿದೆ. 4,500ಕ್ಕೂ ಹೆಚ್ಚು ನೆಟ್‌ವರ್ಕ್ ಕಚೇರಿಗಳನ್ನು ಒಳಗೊಂಡಿದ್ದು ವಿಶ್ವದಲ್ಲೇ ಅತಿದೊಡ್ಡ ಕಚೇರಿ ಸಂಕೀರ್ಣ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇದನ್ನೂ ಓದಿ: ಸಂಸತ್‌ನಲ್ಲಿನ ಭದ್ರತಾ ಲೋಪಕ್ಕೂ, ಸಂಸದರ ಅಮಾನತಿಗೂ ಸಂಬಂಧವಿಲ್ಲ: ಲೋಕಸಭಾ ಸ್ಫೀಕರ್ ಸ್ಪಷ್ಟನೆ
ಸೂರತ್‌ನ ಡೈಮಂಡ್ ಬೋರ್ಸ್ ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ (Diamond And Jewellery) ವ್ಯಾಪಾರದ ಜಾಗತಿಕ ಕೇಂದ್ರವಾಗಲಿದೆ. 65,000ಕ್ಕೂ ಹೆಚ್ಚು ವಜ್ರದ ವ್ಯಾಪಾರಿಗಳಿಗೆ ಒನ್‌ಸ್ಟಾಪ್ ಡೆಸ್ಟಿನೇಶನ್ ಆಗಿದ್ದು, ಕಟ್ಟರ್, ಪಾಲಿಷರ್ ವಜ್ರಗಳು ಹಾಗೂ ವಜ್ರದ ಆಭರಣಗಳ ವ್ಯಾಪಾರ, ವಹಿವಾಟು ನಡೆಯಲಿದೆ. ಈ ಕಟ್ಟಡವು 175 ದೇಶಗಳ 4,200 ವ್ಯಾಪಾರಿಗಳನ್ನು ಒಳಗೊಂಡಿದೆ. ಆಮದು-ರಫ್ತಿಗಾಗಿ ಅತ್ಯಾಧುನಿಕ `ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್’ (Customs Clearance House) ಅನ್ನೂ ಹೊಂದಿದೆ. ಜೊತೆಗೆ ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ಆಭರಣ ಮಳಿಗೆ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ವಾಲ್ಟ್ಸ್‌ಗಳ ಸೌಲಭ್ಯವೂ ಇಲ್ಲಿದೆ. ಮನರಂಜನಾ ವಲಯ ಮತ್ತು ಪಾರ್ಕಿಂಗ್‌ಗೆ 20 ಲಕ್ಷ ಚದರ ಅಡಿ ವಿಸ್ತೀರ್ಣ ಪ್ರದೇಶವನ್ನು ಮೀಸಲಿಡಲಾಗಿದೆ. ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ- ಅಂತಿಮ ಹಂತದಲ್ಲಿ ತಯಾರಿ, ವಿಶೇಷ ಸಾರಿಗೆ ವ್ಯವಸ್ಥೆ
ವಜ್ರ ವಿನ್ಯಾಸಕ್ಕೆ ಭಾರತ ಫೇಮಸ್: ವಿಶ್ವದಲ್ಲಿಯೇ ಮೊದಲಿಗೆ ದಕ್ಷಿಣ ಭಾರತದಲ್ಲಿ ವಜ್ರದ ನಿಕ್ಷೇಪಗಳು 9ನೇ ಶತಮಾನದಲ್ಲಿ ಪತ್ತೆಯಾದವು. ಅಲ್ಲಿಂದ 18ನೇ ಶತಮಾನದ ಮಧ್ಯಭಾಗದವರೆಗೆ ಭಾರತವು ವಜ್ರದ ಏಕೈಕ ಉತ್ಪಾದಕ ರಾಷ್ಟ್ರವಾಗಿತ್ತು. ನಂತರ ಇಲ್ಲಿನ ನಿಕ್ಷೇಪಗಳು ಬರಿದಾಗತೊಡಗಿ ಬ್ರೆಜಿಲ್‌ನಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾಗಿ, ಅಲ್ಲಿ ಉತ್ಪಾದನೆ ಆರಂಭವಾಯಿತು. 1870ರ ದಶಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ವಜ್ರದ ಅದಿರು ಪತ್ತೆಯಾದ ಮೇಲೆ ವಜ್ರೋದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆಯಿತು. ಈಗ ಅಲ್ಲಿ ಮಾತ್ರವಲ್ಲದೆ ಕೆನಡಾ, ಜಿಂಬಾಬ್ವೆ, ಅಂಗೋಲ ಮತ್ತು ರಷ್ಯಾದಲ್ಲಿ ಸಹ ವಜ್ರದ ಗಣಿಗಳಿವೆ. ಇಲ್ಲಿನ ಸಿಗುವ ವಜ್ರಗಳನ್ನು ಭಾರತಕ್ಕೆ ಕಳುಹಿಸಿ ಅಲಂಕಾರಿಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ವಜ್ರದ ಹರಳುಗಳನ್ನು ವಿನ್ಯಾಸಗೊಳಿಸಲು ಭಾರತದ ಗುಜರಾತ್ ರಾಜ್ಯ ಫೇಮಸ್ ಆಗಿದೆ. ವಜ್ರಗಳನ್ನು ವಿನ್ಯಾಸಗೊಳಿಸಿ ಆಭರಣಗಳಾಗಿ ರೂಪಿಸಿ ಒದಗಿಸುವ ಕಾರ್ಯವನ್ನು ಭಾರತದಲ್ಲಿ ಸುಮಾರು 25 ಕಂಪನಿಗಳು ಮಾಡುತ್ತಿವೆ. ಇದೀಗ ಭಾರತದಲ್ಲೇ ಬೃಹತ್ ಕಚೇರಿ ಸಂಕೀರ್ಣ ತೆರೆಯುತ್ತಿರುವುದು ಮತ್ತೊಂದು ಗರಿಮೆ.
ಗಾಂಧಿನಗರ: ಅಮೆರಿಕದ ಪೆಂಟಗನ್ ಮೀರಿಸುವ ಹೊಸ ಕಚೇರಿ ಸಂಕೀರ್ಣವು ಭಾರತದಲ್ಲಿ ತಲೆ ಎತ್ತಿದ್ದು ಉದ್ಘಾಟನೆಗೆ ಸಜ್ಜಾಗಿದೆ. ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರವಾದ ‘ಸೂರತ್ ಡೈಮಂಡ್ ಬೋರ್ಸ್’ (Surat Diamond Bourse) ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಉದ್ಘಾಟಿಸಲಿದ್ದಾರೆ. ಈ ಮೂಲಕ ಗುಜರಾತ್‌ನ ಸೂರತ್ ನಗರವು ವಜ್ರದ ರಾಜಧಾನಿಯಾಗುವ ನಗರದ ಮಹತ್ವಾಕಾಂಕ್ಷೆಯನ್ನು ಖಚಿತಪಡಿಸಿದೆ.
ಗುಜರಾತ್‌ನ ಸೂರತ್ ಡೈಮಂಡ್ ಬೋರ್ಸ್, 6.7 ಮಿಲಿಯನ್ ಚದರ ಅಡಿ (620,000 ಚದರ ಮೀಟರ್) ವಿಸ್ತೀರ್ಣ ಭೂ ಪ್ರದೇಶದಲ್ಲಿ, 32 ಶತಕೋಟಿ (384 ಮಿಲಿಯನ್ ಡಾಲರ್) ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇದು 1943ರಲ್ಲಿ 6.5 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಪೆಂಟಗನ್ ಸಂಕೀರ್ಣ ಕಚೇರಿಯನ್ನೂ ಹಿಂದಿಕ್ಕಿದೆ. ಈ ಕಚೇರಿ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಪಾಂಡ್ಯ ನಾಯಕತ್ವ ವರವೋ ಶಾಪವೋ – ಕ್ಯಾಪ್ಟನ್ ಆದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್ ಕಳೆದುಕೊಂಡ ಮುಂಬೈ
ಅಲ್ಲದೇ ಸೂರತ್‌ನ ಡೈಮಂಡ್ ಬೋರ್ಸ್ ಅಂತಾರಾಷ್ಟ್ರೀಯ ವಜ್ರ (Diamond) ಮತ್ತು ಆಭರಣ (Jewellery) ವ್ಯಾಪಾರದ ಜಾಗತಿಕ ಕೇಂದ್ರವಾಗಲಿದೆ. ಒರಟು ಮತ್ತು ನಯವಾಗಿ ವಿನ್ಯಾಸಗೊಳಿಸಿದ ಪಾಲಿಶ್ ವಜ್ರಗಳ ವ್ಯಾಪಾರ ನಡೆಯಲಿದೆ. ಆಮದು-ರಫ್ತಿಗಾಗಿ ಅತ್ಯಾಧುನಿಕ ʻಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್ʼ (Customs Clearance House), ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ಆಭರಣ ಮಳಿಗೆ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ವಾಲ್ಟ್‌ಗಳ ಸೌಲಭ್ಯವನ್ನೂ ಬೋರ್ಸ್ ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ.
ವಜ್ರ ವಿನ್ಯಾಸಕ್ಕೆ ಭಾರತ ಫೇಮಸ್: ವಿಶ್ವದಲ್ಲಿಯೇ ಮೊದಲಿಗೆ ದಕ್ಷಿಣ ಭಾರತದಲ್ಲಿ ವಜ್ರದ ನಿಕ್ಷೇಪಗಳು 9ನೇ ಶತಮಾನದಲ್ಲಿ ಪತ್ತೆಯಾದವು. ಅಲ್ಲಿಂದ 18ನೇ ಶತಮಾನದ ಮಧ್ಯಭಾಗದವರೆಗೆ ಭಾರತವು ವಜ್ರದ ಏಕೈಕ ಉತ್ಪಾದಕ ರಾಷ್ಟ್ರವಾಗಿತ್ತು. ನಂತರ ಇಲ್ಲಿನ ನಿಕ್ಷೇಪಗಳು ಬರಿದಾಗತೊಡಗಿ ಬ್ರೆಜಿಲ್‌ನಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾಗಿ, ಅಲ್ಲಿ ಉತ್ಪಾದನೆ ಆರಂಭವಾಯಿತು. 1870ರ ದಶಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ವಜ್ರದ ಅದಿರು ಪತ್ತೆಯಾದ ಮೇಲೆ ವಜ್ರೋದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆಯಿತು. ಈಗ ಅಲ್ಲಿ ಮಾತ್ರವಲ್ಲದೆ ಕೆನಡ, ಜಿಂಬಾಬ್ವೆ, ಅಂಗೋಲ ಮತ್ತು ರಷ್ಯಾಗಳಲ್ಲಿ ಸಹ ವಜ್ರದ ಗಣಿಗಳಿವೆ. ಇಲ್ಲಿನ ಸಿಗುವ ವಜ್ರಗಳನ್ನು ಭಾರತಕ್ಕೆ ಕಳುಹಿಸಿ ಅಲಂಕರಿಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ವಜ್ರದ ಹರಳುಗಳನ್ನು ವಿನ್ಯಾಸಗೊಳಿಸಲು ಭಾರತದ ಗುಜರಾತ್ ರಾಜ್ಯ ಫೇಮಸ್ ಆಗಿದೆ. ವಜ್ರಗಳನ್ನು ವಿನ್ಯಾಸಗೊಳಿಸಿ ಆಭರಣಗಳಾಗಿ ರೂಪಿಸಿ ಒದಗಿಸುವ ಕಾರ್ಯವನ್ನು ಭಾರತದಲ್ಲಿ ಸುಮಾರು 25 ಕಂಪನಿಗಳು ಮಾಡುತ್ತಿವೆ. ಇದೀಗ ಭಾರತದಲ್ಲೇ ಬೃಹತ್ ಕಚೇರಿ ಸಂಕೀರ್ಣ ತೆರೆಯುತ್ತಿರುವುದು ಮತ್ತೊಂದು ಗರಿಮೆ.
ರಾಯಚೂರು: ರಾಜ್ಯದಲ್ಲಿ ತಡವಾಗಿ ಮುಂಗಾರು ಮಳೆ ಅಬ್ಬರಿಸುತ್ತಿದ್ದರೆ ಗಡಿ ರಾಜ್ಯ ಆಂಧ್ರಪ್ರದೇಶದಲ್ಲಿ (Andhra Pradesh) ವಜ್ರದ ಮಳೆಯೇ (Diamond Rain) ಸುರಿಯುತ್ತಿದೆ ಎಂದು ಹೇಳಲಾಗಿದೆ. ಜಮೀನುಗಳಲ್ಲಿ ರೈತರು ಮಾತ್ರವಲ್ಲ ದೂರದ ಊರುಗಳಾದ ರಾಯಚೂರು, ಬಳ್ಳಾರಿ ಜಿಲ್ಲೆಗಳಿಂದಲೂ ಹೋಗಿ ಜನ ವಜ್ರಗಳನ್ನ ಹುಡುಕುತ್ತಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವಜಕರೂರ ಮತ್ತು ಪೆತ್ತಿಕೊಂಡ ಮಂಡಲದ ಹಲವಾರು ಹಳ್ಳಿಗಳಲ್ಲಿ ವಜ್ರಗಳ (Diamond) ಹುಡುಕಾಟ ನಡೆದಿದೆ. ವಜಕರೂರು, ತುಗ್ಗಲಿ, ಜೊನ್ನಾಗಿರಿ, ಮಡ್ಡಿಕೇರಾ, ಬಾಸಿನೇಪಲ್ಲಿ, ಚೆನ್ನಗಿರಿ, ಯಾಪಲಿ, ಮದ್ದಿಕೇರಿ ಸೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ ಮಳೆಗಾಲ ಬಂದರೆ ಸಾಕು, ಹೊಲದಲ್ಲಿ ರೈತರು, ಕೃಷಿ ಕೂಲಿಕಾರ್ಮಿಕರು ವಜ್ರಕ್ಕಾಗಿ ಹುಡುಕಾಟ ನಡೆಸುತ್ತಾರೆ. ಇದನ್ನೂ ಓದಿ: KRS ಡ್ಯಾಂ ಬರೋಬ್ಬರಿ 110 ಅಡಿ ಭರ್ತಿ – 48 ಗಂಟೆಯಲ್ಲಿ 5 ಟಿಎಂಸಿ ನೀರು ಒಳಹರಿವು
ವಜ್ರ ಹುಡುಕಲು ಜಮೀನುಗಳನ್ನ ಲೀಸ್ (ಭೋಗ್ಯಕ್ಕೆ) ಪಡೆಯುವರೂ ಇದ್ದಾರೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ರಾಯಲಸೀಮಾದಲ್ಲಿ ವಜ್ರಗಳ ಮಾರುಕಟ್ಟೆಯಿತ್ತು. ಆಗ ರಸ್ತೆ ಪಕ್ಕದಲ್ಲಿ ವಜ್ರ, ವಜ್ರದ ಆಭರಣಗಳನ್ನ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಆಗಿನ ವಜ್ರಗಳು ಇಂದಿಗೂ ಭೂಮಿಯಲ್ಲಿದ್ದು, ಮಳೆ ಬಂದಾಗ ಮಾತ್ರ ಕಣ್ಣಿಗೆ ಗೋಚರವಾಗುತ್ತವೆ ಅಂತ ಜನ ನಂಬಿದ್ದಾರೆ. ಹಲವರಿಗೆ ಬೆಲೆಬಾಳುವ ವಜ್ರಗಳು ಸಿಕ್ಕಿರುವ ಹಿನ್ನೆಲೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲಿನ ಜಮೀನುಗಳ ಮೇಲೆ ನಿಗಾ ಇಟ್ಟಿದ್ದಾರೆ. ಇದನ್ನೂ ಓದಿ: ಕರಾವಳಿ ಭಾಗದಲ್ಲಿಂದು ರೆಡ್ ಅಲರ್ಟ್ – ಬೆಂಗ್ಳೂರಲ್ಲಿ ದಿನವಿಡೀ ತುಂತುರು ಮಳೆ
ಬೆಂಗಳೂರು: ಉಚಿತ ಬಸ್ ಪ್ರಯಾಣ (Free Bus Travel) ಆರಂಭವಾಗಿದ್ದೇ ತಡ ಮಹಿಳಾಮಣಿಗಳು ನಾ ಮುಂದು ತಾ ಮುಂದು ಎಂದು ಸರ್ಕಾರಿ ಬಸ್ ಏರಿ ಪ್ರಯಾಣಿಸಲು ಆರಂಭಿಸಿದ್ದಾರೆ. ಬಿಎಂಟಿಸಿ (BMTC) ಬಸ್‌ಗಳು ಫುಲ್ ರಶ್ ಆಗಿದ್ದು, ಪುರುಷರಿಗೆ ಸೀಟ್ ಸಿಗೋದೇ ಕಷ್ಟವಾಗಿದೆ. ಈ ಹಿನ್ನೆಲೆ ಪುರುಷರು ವೋಲ್ವೋ (Volvo) ಬಸ್‌ಗಳ ಮೊರೆ ಹೋಗಿದ್ದಾರೆ.
ಶಕ್ತಿ ಯೋಜನೆ (Shakti Scheme) ಜಾರಿಗೆ ಬಂದಮೇಲೆ ಐಷಾರಾಮಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದಾಗಿ ಐಷಾರಾಮಿ ಬಸ್ ಮತ್ತು ವೋಲ್ವೋ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಇಳಿಕೆಯ ಆತಂಕ ವ್ಯಕ್ತವಾಗಿತ್ತು. ಆದರೆ ಬಿಎಂಟಿಸಿಯ ಐಷಾರಾಮಿ ಬಸ್‌ಗಳಿಗೆ ಶಕ್ತಿ ಯೋಜನೆ ಬೊಕ್ಕಸ ತುಂಬಿಸುತ್ತಿದೆ. ಕಳೆದ ಒಂದು ವಾರದಲ್ಲಿ ವೋಲ್ವೋ ಮತ್ತು ವಜ್ರ (Vajra) ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಸಾಮಾನ್ಯ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರೇ ತುಂಬಿ ತುಳುಕುತ್ತಿರುವುದರಿಂದ ಪುರುಷ ಪ್ರಯಾಣಿಕರು ವೋಲ್ವೋ ಬಸ್‌ಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ದಿನನಿತ್ಯದ ಪ್ರಯಾಣಿಕರ ಸಂಖ್ಯೆಯಲ್ಲಿ 10,000 ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಿದೆ. ಇದನ್ನೂ ಓದಿ: 2ನೇ ವೀಕೆಂಡ್ – ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ನಿಲ್ದಾಣ ಖಾಲಿ, ಖಾಲಿ
ಪ್ರತಿನಿತ್ಯ ಬೆಂಗಳೂರಿನಲ್ಲಿ (Bengaluru) ಬಿಎಂಟಿಸಿಯ 470 ವೋಲ್ವೋ ಬಸ್‌ಗಳು ಓಡಾಡುತ್ತಿವೆ. ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ 3-5% ಏರಿಕೆಯಾಗಿದ್ದು, ಜೂನ್ ತಿಂಗಳ 21 ದಿನಗಳ ಲೆಕ್ಕಾಚಾರದ ಪ್ರಕಾರದ ಪ್ರತಿದಿನ 1,16,000 ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿಯೇ ಅತಿಹೆಚ್ಚು ಪ್ರಯಾಣಿಕರು ವೋಲ್ವೋ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಅದರಲ್ಲೂ ಪುರುಷ ಪ್ರಯಾಣಿಕರೇ ಅತಿಹೆಚ್ಚು ಪ್ರಯಾಣಿಸಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಅನ್ನಭಾಗ್ಯಕ್ಕೆ ಮತ್ತಷ್ಟು ಸಂಕಷ್ಟ- ರಾಜ್ಯಗಳು ಹೇಳಿದ್ದೇನು?
ಕಳೆದ ಹಲವು ವರ್ಷಗಳಿಂದ ಬಿಎಂಟಿಸಿಗೆ ವೋಲ್ಬೋ ಬಸ್‌ಗಳು ಹೊರೆಯಾಗಿದ್ದವು. ಇದೀಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಬಿಎಂಟಿಸಿ ವೋಲ್ವೋ ಬಸ್‌ಗಳಲ್ಲಿಯೂ ಗಣನೀಯವಾಗಿ ಪುರುಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಆದಾಯದಲ್ಲಿ ಕೂಡಾ ಬಿಎಂಟಿಸಿ ಸುಧಾರಣೆ ಕಂಡಿದೆ. ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿಗೆ ಕೇಂದ್ರದ ಬಾಗಿಲು ಬಂದ್ – ಸರ್ಕಾರದ ಮುಂದಿರುವ ಆಯ್ಕೆಗಳೇನು?
ಗಾಂಧಿನಗರ: ವ್ಯಕ್ತಿಯೊಬ್ಬ 32 ಲಕ್ಷ ಮೌಲ್ಯದ ವಜ್ರವನ್ನು ಗುಟ್ಕಾ ಪ್ಯಾಕೆಟ್ (Gutka Packet) ಮುಖಾಂತರ ವಂಚಿಸಲು ಯತ್ನಿಸಿದ ಘಟನೆ ಗುಜರಾತಿ (Gujrat) ನ ಸೂರತ್‍ನಲ್ಲಿ ನಡೆದಿದೆ.
ಮೋಸ ಹೋದ ವ್ಯಾಪಾರಿಯು ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ರಹೀಲ್ ಮಂಜನಿ ಎಂದು ಗುರುತಿಸಲಾಗಿದೆ. ಈತ ವಜ್ರದ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದನು.
ವ್ಯಾಪಾರಿ ನಿಡಿದ ದೂರಿನಲ್ಲೇನಿದೆ..?: ಮಂಜನಿ ತನ್ನ ಕಚೇರಿಯಿಂದ 32,04,442 ರೂ. ಮೌಲ್ಯದ ಪಾಲಿಶ್ ಮಾಡಿದ, ದುಂಡಗಿನ ಮತ್ತು ನೈಸರ್ಗಿಕ ಗುಣಮಟ್ಟದ ವಜ್ರ (Diamond) ಗಳನ್ನು ಬೇರೆ ವ್ಯಾಪಾರಿಗೆ ಮಾರಾಟ ಮಾಡುವ ನೆಪದಲ್ಲಿ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದ. ಅಲ್ಲದೆ 2023ರ ಫೆಬ್ರವರಿ 13ರಿಂದ 21ರ ನಡುವೆ ಮೂರು ಸೀಲ್ ಮಾಡಿದ ಪಾರ್ಸೆಲ್‍ಗಳಲ್ಲಿ ವಜ್ರಗಳನ್ನು ಸಂಗ್ರಹಿಸಿ, ಮುಂಚಿತವಾಗಿ 2 ಲಕ್ಷವನ್ನು ವೋರಾಗೆ ನೀಡಿದ್ದಾನೆ. ಉಳಿದ ಹಣವನ್ನು ಮೂರ್ನಾಲ್ಕು ದಿನಗಳಲ್ಲಿ ನೀಡುವುದಾಗಿ ಆರೋಪಿ ಹೇಳಿದ್ದಾನೆ.
ಇತ್ತ ಹಣ ಪಾವತಿ ಮಾಡದಿದ್ದಾಗ, ವೋರಾ ಅವರ ಪಾರ್ಸೆಲ್‍ಗಳನ್ನು ಕೇಳಿದರು ಮತ್ತು ಬ್ರೋಕರ್ ಮುಂದೆ ಮೂರು ಸೀಲ್ ಮಾಡಿದ ಪಾರ್ಸೆಲ್‍ಗಳನ್ನು ತೆರೆದರು. ಈ ವೇಳೆ ವಜ್ರಗಳ ಬದಲಿಗೆ ಪಾರ್ಸೆಲ್‍ಗಳಲ್ಲಿ ಗುಟ್ಕಾ, ತಂಬಾಕು ಜಗಿಯುವ ಪ್ಯಾಕೆಟ್‍ಗಳನ್ನು ಕಂಡು ಆಘಾತಕ್ಕೊಳಗಾಗಿದ್ದೇನೆ ಎಂದು ವ್ಯಾಪಾರಿ ರುಷಭ್ ವೋರಾ ಅವರು ಮಹಿಧರಪಾರಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ವ್ಯಾಪಾರಿ ನೀಡಿದ ದೂರಿನ ಅನ್ವಯ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ 420 (ವಂಚನೆ) ಮತ್ತು 409 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತರ ವ್ಯಾಪಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಜ್ರ (Diamond) ಅತ್ಯಂತ ದುಬಾರಿ ಹಾಗೂ ಬೆಲೆ ಬಾಳುವ ಹರಳು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇವು ಭೂಮಿಯಡಿಯಲ್ಲಿ ಅದೆಷ್ಟೋ ವರ್ಷಗಳ ಹಿಂದೆ ಶಾಖ ಹಾಗೂ ರಾಸಾಯನಿಕ ಕ್ರಿಯೆಗಳಿಂದ ನೈಸರ್ಗಿಕವಾಗಿ ತಯಾರಾಗುತ್ತವೆ. ಆದರೆ ಇತ್ತೀಚೆಗೆ ಭಾರತದಲ್ಲಿ ಕೃತಕ ವಜ್ರಗಳು ಸದ್ದು ಮಾಡುತ್ತಿವೆ.
ಲ್ಯಾಬ್‌ಗಳಲ್ಲಿ ಕಡಿಮೆ ಸಮಯದಲ್ಲಿ ಕೃತಕ ವಜ್ರಗಳನ್ನು ಹೇಗೆ ತಯಾರಿಸಲಾಗುತ್ತೆ? ಕೃತಕ ವಜ್ರಗಳು ನಿಜವಾಗಿಯೂ ಅಸಲಿ ವಜ್ರಗಳಿಗೆ ಸರಿಸಾಟಿಯಾಗಬಲ್ಲದೇ? ಅದರ ಬೆಲೆ ನೈಸರ್ಗಿಕ ವಜ್ರಗಳಷ್ಟೇ ಇರುತ್ತದೆಯೇ? ಕೃತಕ ಹಾಗೂ ನೈಸರ್ಗಿಕ ವಜ್ರಗಳ ವ್ಯತ್ಯಾಸ ಹೇಗಿರಲಿದೆ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನಿಮಗಿಲ್ಲಿ ಸಿಗಲಿದೆ.
ಏನಿದು ಕೃತಕ ವಜ್ರ?
ಕೃತಕ ವಜ್ರಗಳನ್ನು ಲ್ಯಾಬ್‌ಗಳಲ್ಲಿ ತಯಾರಿಸಲಾಗುತ್ತದೆ (Lab Grown Diamonds). ಇವು ಭೌತಿಕವಾಗಿ ಹಾಗೂ ನೋಡಲು ಸಹ ನೈಸರ್ಗಿಕ ವಜ್ರಗಳಂತೆಯೇ ಇರುತ್ತವೆ. 1950ರ ದಶಕದಲ್ಲೇ ಕೃತಕ ವಜ್ರವನ್ನು ಕಂಡುಹಿಡಿಯಲಾಗಿದೆ. ಆದರೆ ಇದು ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಸುಮಾರು 10 ವರ್ಷಗಳ ಹಿಂದೆ ಈ ಕೃತಕ ವಜ್ರಗಳ ಮಾರಾಟ ಪ್ರಾರಂಭವಾಗಿದೆ. ಇದೀಗ ಭಾರತದಲ್ಲೂ ಕೃತಕ ವಜ್ರ ತಯಾರಿಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಈಚೆಗೆ ಮಂಡಿಸಲಾದ ಬಜೆಟ್‌ನಲ್ಲಿ ಕೂಡ ಪ್ರಸ್ತಾಪಿಸಲಾಗಿದೆ.
ನೈಸರ್ಗಿಕ ವಜ್ರಗಳು ಹೇಗಾಗುತ್ತವೆ?
ನಾವು ಕೃತಕ ವಜ್ರಗಳ ಬಗ್ಗೆ ಮಾತನಾಡುವುದಕ್ಕೂ ಮೊದಲು ನೈಸರ್ಗಿಕ ವಜ್ರಗಳು ಹೇಗೆ ತಯಾರಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ವಜ್ರಗಳು ಇಂಗಾಲ ಹರಳುಗಟ್ಟಿರುವ ಸ್ಥಿತಿ. ಭೂಮಿಯ ಅಂತರಾಳದಲ್ಲಿ ಎಂದರೆ, ಸುಮಾರು 200 ಕಿ.ಮೀ ಆಳದಲ್ಲಿ ಶೇಖರವಾದ ಇಂಗಾಲವು ಅತಿ ಶಾಖ ಹಾಗೂ ಒತ್ತಡಕ್ಕೆ ಸಿಲುಕಿ ಕಲ್ಲಾಗಿ ಪರಿವರ್ತನೆಯಾಗುತ್ತದೆ. ಇದುವೇ ವಜ್ರಗಳು. ಇದನ್ನು ಭೂಮಿಯಿಂದ ಹೊರತೆಗೆದು, ಆಕರ್ಷಕ ಆಕಾರದಲ್ಲಿ ವಿನ್ಯಾಸಗೊಳಿಸಿದರೆ ಅವು ದುಬಾರಿ ಹರಳುಗಳಾಗುತ್ತವೆ.
ಕೃತಕ ವಜ್ರಗಳನ್ನ ತಯಾರಿಸೋದು ಹೇಗೆ?
ನೈಸರ್ಗಿಕ ವಜ್ರಗಳು ತಯಾರಾಗುವ ವಿಧಾನದಲ್ಲಿಯೇ ಕೃತಕ ವಜ್ರಗಳನ್ನೂ ಮಾಡಲಾಗುತ್ತದೆ. ಆದರೆ ಇವುಗಳನ್ನು ಭೂಮಿಯಡಿಯಲ್ಲಿ ತಯಾರಿಸುವ ಬದಲು ಲ್ಯಾಬ್‌ಗಳಲ್ಲಿ ಮಾಡಲಾಗುತ್ತದೆ. ಇಂಗಾಲಕ್ಕೆ ನಿರ್ದಿಷ್ಟ ಶಾಖ ಹಾಗೂ ಒತ್ತಡವನ್ನು ನೀಡಿ, ವಜ್ರವನ್ನಾಗಿ ಮಾಡಲಾಗುತ್ತದೆ. ಲ್ಯಾಬ್ ನಿರ್ಮಿತ ವಜ್ರ ನಿರ್ಮಾಣಕ್ಕೆ 15ರಿಂದ 30 ದಿನಗಳ ಸಮಯ ಹಿಡಿಯಲಿದೆ.
ವಜ್ರ ವಿನ್ಯಾಸಕ್ಕೆ ಭಾರತ ಫೇಮಸ್:
ವಿಶ್ವದಲ್ಲಿಯೇ ಮೊದಲಿಗೆ ದಕ್ಷಿಣ ಭಾರತದಲ್ಲಿ ವಜ್ರದ ನಿಕ್ಷೇಪಗಳು 9 ನೆಯ ಶತಮಾನದಲ್ಲಿ ಪತ್ತೆಯಾದವು. ಅಲ್ಲಿಂದ 18ನೆಯ ಶತಮಾನದ ಮಧ್ಯಭಾಗದವರೆಗೆ ಭಾರತವು ವಜ್ರದ ಏಕೈಕ ಉತ್ಪಾದಕ ರಾಷ್ಟ್ರವಾಗಿತ್ತು. ನಂತರ ಇಲ್ಲಿನ ನಿಕ್ಷೇಪಗಳು ಬರಿದಾಗತೊಡಗಿ ಬ್ರೆಜಿಲ್‌ನಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾಗಿ, ಅಲ್ಲಿ ಉತ್ಪಾದನೆ ಆರಂಭವಾಯಿತು. 1870ರ ದಶಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ವಜ್ರದ ಅದಿರು ಪತ್ತೆಯಾದ ಮೇಲೆ ವಜ್ರೋದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆಯಿತು. ಈಗ ಅಲ್ಲಿ ಮಾತ್ರವಲ್ಲದೆ ಕೆನಡಾ, ಜಿಂಬಾಬ್ವೆ, ಅಂಗೋಲ ಮತ್ತು ರಷ್ಯಾಗಳಲ್ಲಿ ಸಹ ವಜ್ರದ ಗಣಿಗಳಿವೆ. ಇಲ್ಲಿನ ಸಿಗುವ ವಜ್ರಗಳನ್ನು ಭಾರತಕ್ಕೆ ಕಳುಹಿಸಿ ಅಲಂಕರಿಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ವಜ್ರದ ಹರಳುಗಳನ್ನು ವಿನ್ಯಾಸಗೊಳಿಸಲು ಭಾರತದ ಗುಜರಾತ್ ರಾಜ್ಯ ಫೇಮಸ್ ಆಗಿದೆ. ವಜ್ರಗಳನ್ನು ವಿನ್ಯಾಸಗೊಳಿಸಿ ಆಭರಣಗಳಾಗಿ ರೂಪಿಸಿ ಒದಗಿಸುವ ಕಾರ್ಯವನ್ನು ಭಾರತದಲ್ಲಿ ಸುಮಾರು 25 ಕಂಪನಿಗಳು ಮಾಡುತ್ತಿವೆ.
ನೈಸರ್ಗಿಕ-ಕೃತಕ ವಜ್ರಗಳ ನಡುವಿನ ವ್ಯತ್ಯಾಸ?
ಎಷ್ಟೇ ಆಗಲಿ.. ನೈಸರ್ಗಿಕ ವಜ್ರವೇ ಬೇರೆ, ಕೃತಕ ವಜ್ರವೇ ಬೇರೆ ಎಂದು ವಾದಿಸುವವರು ಇದ್ದಾರೆ. ಆದರೆ ಇವೆರಡರ ನಡುವೆ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಎರಡೂ ರೀತಿಯ ವಜ್ರಗಳನ್ನೂ ಒಂದೇ ಮೂಲಧಾತುಗಳಿಂದ ರೂಪಿಸಲಾಗುತ್ತದೆ. ಅಸಲಿ ವಜ್ರ ಹಾಗೂ ಲ್ಯಾಬ್‌ಗಳಲ್ಲಿ ತಯಾರಿಸುವ ವಜ್ರಗಳ ನಡುವಿನ ವ್ಯತ್ಯಾಸವನ್ನು ಪತ್ತೆಹಚ್ಚಲು ಸಾಧ್ಯವಾಗುವುದೇ ಇಲ್ಲ. ವಜ್ರವನ್ನು ಪ್ರಾಮಾಣೀಕರಿಸುವ ಯಾವ ಸಂಸ್ಥೆಗಳೂ ಇಲ್ಲ. ಇದನ್ನೂ ಓದಿ: PublicTV Explainer: ಟರ್ಕಿಯಲ್ಲೇ ಹೆಚ್ಚು ಭೂಕಂಪ ಯಾಕೆ? – ಇಲ್ಲಿದೆ ವೈಜ್ಞಾನಿಕ ಕಾರಣ..
ಕೃತಕ ವಜ್ರದಿಂದ ಸಿಗುವ ಪ್ರಯೋಜನವಾದರೂ ಏನು?
ವಜ್ರಗಳಂತಹ ದುಬಾರಿ ಹರಳಿಗಾಗಿ ಗಣಿಗಾರಿಕೆ ನಡೆಸಿ, ಭೂಮಿ ಹಾಗೂ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ. ಭೂಮಿಯನ್ನು ಅಗೆದು, ಬೃಹತ್ ಗಣಿಗಾರಿಕೆ ಮಾಡುವುದರಿಂದ ಮಾಲಿನ್ಯ ಹೆಚ್ಚಾಗುತ್ತದೆ. ಮಾತ್ರವಲ್ಲದೇ ಈ ವೇಳೆ ಅದೆಷ್ಟೋ ಕಾರ್ಮಿಕರ ಬಲಿಯಾಗುತ್ತದೆ. ಆದರೆ ಲ್ಯಾಬ್‌ಗಳಲ್ಲಿ ತಯಾರಿಸಲಾಗುವ ವಜ್ರಗಳಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇದು ನಿಸರ್ಗಕ್ಕೆ ಬಹು ದೊಡ್ಡ ಕೊಡುಗೆಯಾಗಲಿದೆ.
ಕೃತಕ ವಜ್ರಗಳ ಬೆಲೆ ಎಷ್ಟು?
ನೈಸರ್ಗಿಕ ವಜ್ರಗಳಿಗಿಂತ ಲ್ಯಾಬ್‌ಗಳಲ್ಲಿ ತಯಾರಿಸಲಾಗುವ ವಜ್ರಗಳ ಬೆಲೆ ಶೇ.50 ರಷ್ಟು ಕಡಿಮೆ ಇದೆ. ಇದೀಗ ಪರಿಸರ ಸಂವೇದನೆಯ ಉತ್ಪನ್ನಗಳನ್ನು ಖರೀದಿಸಲು ವಿಶ್ವದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದ್ದರಿಂದ ಕೃತಕ ವಜ್ರಗಳಿಗೆ ಬೇಡಿಕೆಯೂ ನಿಧಾನವಾಗಿ ಹೆಚ್ಚಲಿದೆ.
ಕೃತಕ ವಜ್ರಕ್ಕೆ ಕೇಂದ್ರ ಬಜೆಟ್‌ನಲ್ಲಿ ಉತ್ತೇಜನ:
ನೈಸರ್ಗಿಕ ವಜ್ರದ ಥರವೇ ಕಾಣುವ ಹಾಗೂ ಅದೇ ಗುಣಮಟ್ಟ ಹೊಂದಿರುವ ಲ್ಯಾಬ್ ನಿರ್ಮಿತ ವಜ್ರದ ಸಂಶೋಧನೆ ಹಾಗೂ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಯೋಗಾಲಯಗಳಲ್ಲಿ ಕೃತಕವಾಗಿ ವಜ್ರ ತಯಾರಿಕೆ ಬಗ್ಗೆ ಯಾವುದಾದರೂ ಒಂದು ಐಐಟಿಯಲ್ಲಿ ಐದು ವರ್ಷ ಸಂಶೋಧನೆ ನಡೆಸಲು ಅನುದಾನ ಒದಗಿಸಲಾಗುವುದು ಎಂದು ಬಜೆಟ್ ಮಂಡನೆ ವೇಳೆ ಘೋಷಿಸಲಾಗಿದೆ. ಆಮದಿನ ಮೇಲೆ ಅವಲಂಬಿತರಾಗದೇ ದೇಶದಲ್ಲೇ ಕಡಿಮೆ ವೆಚ್ಚದಲ್ಲಿ ಲ್ಯಾಬ್ ನಿರ್ಮಿತ ವಜ್ರಗಳನ್ನು ರೂಪಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಲಿವೆ. ದೇಶದ ವಜ್ರದ ರಾಜಧಾನಿ ಎನಿಸಿಕೊಂಡಿರುವ ಗುಜರಾತ್‌ನ ಸೂರತ್‌ನಲ್ಲಿ ಲ್ಯಾಬ್ ನಿರ್ಮಿಸುವ ಉದ್ದೇಶವಿದೆ. ಲ್ಯಾಬ್ ನಿರ್ಮಿತ ವಜ್ರ ನಿರ್ಮಾಣಕ್ಕೆ 15ರಿಂದ 30 ದಿನಗಳ ಸಮಯ ಹಿಡಿಯಲಿದೆ. ಇದನ್ನೂ ಓದಿ: PublicTV Explainer: ಕ್ಷಣ ಕಾಲ ನಿಂತು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಾ ಭೂಮಿ? – ಭೂಗರ್ಭದ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು
Live Tv
[brid partner=56869869 player=32851 video=960834 autoplay=true]
ಮುಂಬೈ: ಕೋಟ್ಯಂತರ ರೂ. ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ ವಜ್ರ ಉದ್ಯಮಿ ನೀರವ್ ಮೋದಿ(Nirav Modi) ಸಂಬಂಧಿಸಿದ ಆಸ್ತಿಯನ್ನು ಹರಾಜು(Auction) ಹಾಕಲು ಸಾಲ ವಸೂಲಾತಿ ನ್ಯಾಯಮಂಡಳಿ-1(DRT-1) ಮುಂದಾಗಿದೆ.
ಪುಣೆಯ ಅಪಾರ್ಟ್‌ಮೆಂಟ್‌ನಲ್ಲಿರುವ 398 ಚದರ ಮೀಟರ್ ಮತ್ತು 396 ಚದರ ಮೀಟರ್ ಅಳತೆಯನ್ನು ಹೊಂದಿರುವ ಫ್ಲ್ಯಾಟ್ ಮಾರಾಟಕ್ಕೆ ಸಿದ್ಧತೆ ನಡೆದಿದೆ.
ಏನಿದು ಪ್ರಕರಣ?
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ(Punjab National Bank) 13 ಸಾವಿರ ಕೋಟಿ ರೂ. ವಂಚಿಸಿದ ಆರೋಪ ನೀರವ್ ಮೋದಿ ಮೇಲಿದೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ(Mehul Choksi) ವಿರುದ್ಧ ಕೂಡ ಸಿಬಿಐ, ಇಡಿ ಪ್ರಕರಣ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ತನಿಖಾ ಸಂಸ್ಥೆಗಳು ಮುಟ್ಟುಗೋಲು ಹಾಕಿದೆ.
ನೀರವ್ ಮೋದಿ ಲಂಡನ್‌ನಲ್ಲಿ ನೆಲೆಸಿದ್ದರೆ ಮೆಹುಲ್ ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನೆಲೆಸಿದ್ದಾರೆ. ಇಬ್ಬರನ್ನು ಭಾರತಕ್ಕೆ ಕರೆ ತರಲು ಕಾನೂನು ಹೋರಾಟ ನಡೆಯುತ್ತಿದೆ.
Live Tv
[brid partner=56869869 player=32851 video=960834 autoplay=true]