Tag: ವಜಾ

  • Breaking: ಹಾಸ್ಟೆಲ್ ಹುಡುಗರಿಗೆ ಸಿಕ್ಕ ಜಯ: ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ

    Breaking: ಹಾಸ್ಟೆಲ್ ಹುಡುಗರಿಗೆ ಸಿಕ್ಕ ಜಯ: ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ

    ನುಮತಿ ಇಲ್ಲದೇ ತಮ್ಮ ಫೋಟೋ ಮತ್ತು ವಿಡಿಯೋವನ್ನು ಹಾಸ್ಟೇಲ್ ಹುಡುಗರು ಬೇಕಾಗಿದ್ದರೆ (Hostel Hudugaru Bekagiddare) ಚಿತ್ರತಂಡ ಬಳಸಿಕೊಂಡಿದೆ ಎಂದು ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದರು ಮೋಹಕ ತಾರೆ ರಮ್ಯಾ (Ramya). ತಮ್ಮ  ಅನುಮತಿ ಇಲ್ಲದೇ ಫೋಟೋ ಮತ್ತು ವಿಡಿಯೋ ಬಳಸಿಕೊಂಡಿದ್ದಕ್ಕೆ ಪರಿಹಾರವಾಗಿ ಒಂದು ಕೋಟಿ ರೂಪಾಯಿ ನೀಡಬೇಕು ಎಂದು ನೋಟಿಸ್ ನಲ್ಲಿ ತಿಳಿಸಿದ್ದರು.

    ನಿನ್ನೆ ಕೋರ್ಟ್ ಮುಂದೆ ಬಂದಿದ್ದ ಈ ವಿಚಾರಣೆಯನ್ನು ಒಂದು ದಿನ ಮುಂದಕ್ಕೆ ಹಾಕಿ, ಮತ್ತೆ ಇಂದು ವಿಚಾರಣೆ ನಡೆಸಿತು ಮಾನ್ಯ ನ್ಯಾಯಾಲಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್ ಹುಡುಗರಿಗೆ ಜಯ ಸಿಕ್ಕಿದ್ದು, ರಮ್ಯಾ ಸಲ್ಲಿಸಿದ್ದ  ಅರ್ಜಿಯನ್ನು (Application) ಮಾನ್ಯಾ ನಾಯಾಲಯ ವಜಾಗೊಳಿಸಿದೆ. ಇದನ್ನೂ ಓದಿ:ರಮ್ಯಾ ಬದಲು ರಚಿತಾ ರಾಮ್: ಎರಡು ಬಾರಿ ರಮ್ಯಾ ಸ್ಥಾನ ತುಂಬಿದ ರಚ್ಚು

    ಕೋರ್ಟ್ (Court) ನಲ್ಲಿಇಂದು ನಡೆದ ವಿಚಾರಣೆಯಲ್ಲಿ ಹಾಸ್ಟೆಲ್ ಹುಡುಗರ ಪರ ಆದೇಶ ಹೊರ ಬಂದಿದ್ದು, ನಾಳೆ ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಆಗಲಿದೆ. ಹಾಸ್ಟೆಲ್ ಹುಡುಗರ ಪರ ವಕೀಲ ವೇಲನ್ ಅವರು ವಾದ ಮಾಡಿದ್ದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯವು, ರಮ್ಯಾ ಹಾಕಿದ್ದ ಕೇಸ್ ತೆರವುಗೊಳಿಸಿ, ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

     

    ರಮ್ಯಾ ಸೇರಿದಂತೆ ಅನೇಕ ಸ್ಟಾರ್ ನಟ-ನಟಿಯರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿಗಂತ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ. ರಮ್ಯಾ ಕೂಡ ಈ ಸಿನಿಮಾದಲ್ಲಿ ಉಪನ್ಯಾಸಕಿಯ ಪಾತ್ರ ಮಾಡಿದ್ದರು. ಅದು ಅತಿಥಿ ಪಾತ್ರವಾಗಿತ್ತು. ಈ ಪಾತ್ರದ ವಿರುದ್ದವೇ ಅವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆ ಪ್ರಾರಂಭಿಸಿದ ಮೆಟಾ – 4,000 ನುರಿತ ಉದ್ಯೋಗಿಗಳು ಟಾರ್ಗೆಟ್

    ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆ ಪ್ರಾರಂಭಿಸಿದ ಮೆಟಾ – 4,000 ನುರಿತ ಉದ್ಯೋಗಿಗಳು ಟಾರ್ಗೆಟ್

    ವಾಷಿಂಗ್ಟನ್: ವಿಶ್ವದ ಅತಿ ದೊಡ್ಡ ಸಾಮಾಜಿಕ ನೆಟ್‌ವರ್ಕಿಂಗ್ ಕಂಪನಿ ಮೆಟಾ (Meta) ಬುಧವಾರದಿಂದ ಮತ್ತೊಂದು ಸುತ್ತು ಉದ್ಯೋಗಿಗಳನ್ನು (Employees) ಸಾಮೂಹಿಕವಾಗಿ ವಜಾಗೊಳಿಸಲು (Layoff) ಸಿದ್ಧವಾಗಿದೆ. ಈ ಬಾರಿಯ ವಜಾ ಪ್ರಕ್ರಿಯೆ ಫೇಸ್‌ಬುಕ್, ವಾಟ್ಸಪ್ ಹಾಗೂ ಇನ್‌ಸ್ಟಾಗ್ರಾಮ್‌ನ ಸುಮಾರು 4,000ಕ್ಕೂ ಅಧಿಕ ನುರಿತ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.

    ಕಳೆದ ತಿಂಗಳು ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಏಪ್ರಿಲ್‌ನಲ್ಲಿ ಕಂಪನಿಯ ಸುಮಾರು 10,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಇದೀಗ ಮೆಟಾ ವಜಾ ಪ್ರಕ್ರಿಯೆ ಪ್ರಾರಂಭಿಸಲು ಮುಂದಾಗಿದ್ದು, ಈ ವಾರದೊಳಗೆ 4,000 ಕ್ಕೂ ಅಧಿಕ ನುರಿತ ಉದ್ಯೋಗಿಗಳನ್ನೇ ವಜಾಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ: ಟ್ವಿಟ್ಟರ್‌ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್‌ ಸ್ಪಷ್ಟನೆ

    ಕಂಪನಿ ತನ್ನ ತಾಂತ್ರಿಕ ತಂಡದಲ್ಲಿನ ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗೆ ಈ ಬಗೆಗಿನ ಮಾಹಿತಿಯನ್ನು ತಿಳಿಸಲು ಪ್ರಾರಂಭಿಸಿದೆ. ನಮ್ಮ ತಂಡದ ಗಾತ್ರವನ್ನು ಸುಮಾರು 10,000 ಉದ್ಯೋಗಿಗಳಿಗೆ ಸೀಮಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ.

    ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯ ಶೇ.13 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಸುಮಾರು 11,000 ಉದ್ಯೋಗಿಗಳನ್ನು ಮೆಟಾ ಮೊದಲ ಬಾರಿಗೆ ವಜಾಗೊಳಿಸಿತ್ತು. ಇದೀಗ ಮತ್ತೆ ಕಂಪನಿ ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

  • ಡಿಸ್ನಿಯಲ್ಲೂ ಶುರುವಾಯ್ತು ಜಾಬ್ ಕಟ್ – ಮುಂದಿನ 4 ದಿನದಲ್ಲಿ 7,000 ಉದ್ಯೋಗಿಗಳು ವಜಾ

    ವಾಷಿಂಗ್ಟನ್: ವಿಶ್ವದಾದ್ಯಂತ ಅನೇಕ ಕಂಪನಿಗಳು ವೆಚ್ಚ ಕಡಿತ ಹಾಗೂ ಇತರ ಕಾರಣಗಳನ್ನು ನೀಡಿ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿರುವುದು (Layoff) ಇತ್ತೀಚೆಗೆ ನಡೆಯುತ್ತಲೇ ಇದೆ. ಇದೀಗ ಪ್ರಸಿದ್ಧ ಮನರಂಜನಾ ಸಂಸ್ಥೆ ಡಿಸ್ನಿ (Disney) ಕೂಡಾ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲು ಮುಂದಾಗಿದೆ.

    ಕಂಪನಿ ಸುಮಾರು 5.5 ಬಿಲಿಯನ್ ಡಾಲರ್ ವೆಚ್ಚ ಕಡಿತ ಮಾಡುವ ಸಲುವಾಗಿ ಮೊದಲ ಸುತ್ತಿನ ವಜಾವನ್ನು ಕಾರ್ಯಗತಗೊಳಿಸಲು ಮುಂದಾಗಿದೆ. ಇದು ಈ ವಾರದಲ್ಲಿ ಜಾರಿಗೆ ಬರಲಿದ್ದು, ಸುಮಾರು 7,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಮತ್ತೆ ಚೀನಾಗೆ ಮರಳಿದ ಜಾಕ್ ಮಾ

    ವರದಿಗಳ ಪ್ರಕಾರ ಡಿಸ್ನಿ ಎಂಟರ್ಟೈನ್ಮೆಂಟ್, ಡಿಸ್ನಿ ಪಾರ್ಕ್ಸ್, ಅನುಭವ ಹಾಗೂ ಉತ್ಪನ್ನ, ಕಾರ್ಪೊರೇಟ್ ಸೇರಿದಂತೆ ಸಂಸ್ಥೆಯ ಹಲವು ಪ್ರಮುಖ ವಿಭಾಗಗಳ ಮೇಲೆ ಈ ವಜಾ ಪ್ರಕ್ರಿಯೆ ಪರಿಣಾಮ ಬೀರಲಿದೆ. ಸದ್ಯ ಈ ಬಾರಿ ಇಎಸ್‌ಪಿಎನ್‌ನ ಉದ್ಯೋಗಿಗಳ ಮೇಲೆ ಇದು ಪ್ರಭಾವ ಬೀರುವುದಿಲ್ಲ ಎನ್ನಲಾಗಿದ್ದು, ಮುಂದಿನ ವಜಾ ಪ್ರಕ್ರಿಯೆಗಳಲ್ಲಿ ಅಲ್ಲಿನ ಉದ್ಯೋಗಿಗಳನ್ನೂ ಕಡಿತಗೊಳಿಸಲಾಗುತ್ತದೆ ಎಂದು ಊಹಿಸಲಾಗಿದೆ.

    ಮೊದಲ ಸುತ್ತಿನ ವಜಾ ಪ್ರಕ್ರಿಯೆ ಈ ವಾರದ ಒಳಗಾಗಿ ನಡೆಯಲಿದ್ದು, ಬಳಿಕ ಏಪ್ರಿಲ್‌ನಲ್ಲಿ ಇನ್ನೂ ಹೆಚ್ಚಿನ ಉದ್ಯೋಗಿಗಳನ್ನು ತೆಗೆದುಹಾಕಲಾಗುತ್ತದೆ ಎಂದು ಕಂಪನಿ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಮೆಮೋದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಸಂಚಾರ ದಟ್ಟಣೆ ನಿವಾರಣೆಗೆ ಪ್ಲಾನ್- ಇದೇ ವರ್ಷ ತಲೆ ಎತ್ತಲಿವೆ 5 ಫ್ಲೈಓವರ್‌ಗಳು!

  • ಅಮೆಜಾನ್‌ನಲ್ಲಿ 2ನೇ ಸುತ್ತಿನ ವಜಾ ಪ್ರಕ್ರಿಯೆ ಆರಂಭ – 3 ತಿಂಗಳೊಳಗೆ 27 ಸಾವಿರ ಮಂದಿ ಮನೆಗೆ

    ಅಮೆಜಾನ್‌ನಲ್ಲಿ 2ನೇ ಸುತ್ತಿನ ವಜಾ ಪ್ರಕ್ರಿಯೆ ಆರಂಭ – 3 ತಿಂಗಳೊಳಗೆ 27 ಸಾವಿರ ಮಂದಿ ಮನೆಗೆ

    ವಾಷಿಂಗ್ಟನ್: ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ಈ ವರ್ಷದ 2ನೇ ಸುತ್ತಿನ ಉದ್ಯೋಗಿಗಳ ಕಡಿತವನ್ನು ಘೋಷಿಸಿದೆ. ಕಳೆದ ಬಾರಿ 18,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದ ಅಮೆಜಾನ್ ಈ ಬಾರಿ 9,000 ಉದ್ಯೋಗಿಗಳನ್ನು (Employees) ವಜಾಗೊಳಿಸುವುದಾಗಿ (Layoffs) ಹೇಳಿದೆ.

    ಅಮೆಜಾನ್ ಸಿಇಒ ಆಂಡಿ ಜಾಸ್ಸಿ ತನ್ನ ಉದ್ಯೋಗಿಗಳಿಗೆ ಪತ್ರ ಬರೆದು, ವಜಾಗೊಳಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ ಕಳೆದ 3 ತಿಂಗಳುಗಳಿಂದ ಕಂಪನಿ 27,000ಕ್ಕೂ ಅಧಿಕ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದೆ. ಇದು ಕಂಪನಿಯ ಇತಿಹಾಸದಲ್ಲೇ ಅತಿ ದೊಡ್ಡ ವಜಾ ಆಗಿದೆ.

    ಅನಿಶ್ಚಿತ ಆರ್ಥಿಕತೆ ಹಾಗೂ ಭವಿಷ್ಯದ ಕಾರಣದಿಂದ ಕಂಪನಿ ತನ್ನ ವೆಚ್ಚಗಳನ್ನು ಹೆಚ್ಚು ಸುವ್ಯವಸ್ಥಿತವಾಗಿಡಲು ಯೋಜಿಸುತ್ತಿದೆ. ಇದರ ಪರಿಣಾಮವಾಗಿ ಕಂಪನಿಯ ಕೆಲ ಸ್ಥಾನಗಳನ್ನು ತೆಗೆದುಹಾಕಲಾಗುತ್ತಿದೆ. ಈ ಹಿಂದೆ ಘೋಷಿಸಲಾಗಿದ್ದ 18,000 ಉದ್ಯೋಗಿಗಳ ವಜಾದೊಂದಿಗೆ 9,000 ಉದ್ಯೋಗಿಗಳ ಕಡಿತವನ್ನೂ ಮಾಡಲಾಗುತ್ತಿದೆ ಎಂದು ಆಂಡಿ ಜಾಸ್ಸಿ ತಮ್ಮ ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಐಫೋನ್‌ ತಯಾರಿಸುವ ಫಾಕ್ಸ್‌ಕಾನ್ ಸೇರಿ 18 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ

    ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗಾಗಿ ಕಂಪನಿ ಪಾವತಿ, ಆರೋಗ್ಯ ವಿಮೆಯ ಪ್ರಯೋಜನ ಹಾಗೂ ಬಾಹ್ಯ ಉದ್ಯೋಗ ನಿಯೋಜನೆಗೆ ಬೆಂಬಲ ಸೇರಿದಂತೆ ಹಲವು ಭರವಸೆಗಳನ್ನೂ ನೀಡಲಾಗಿದೆ. ಆದರೆ ಇತ್ತೀಚೆಗೆ ವಿಶ್ವದ ಜನಪ್ರಿಯ ಬೃಹತ್ ಕಂಪನಿಗಳು ಈ ರೀತಿ ಉದ್ಯೋಗ ಕಡಿತಗಳನ್ನು ನಡೆಸುತ್ತಿರುವುದು ಭಾರೀ ಆತಂಕ ಮೂಡಿಸುತ್ತಿದೆ.

    2022ರಲ್ಲಿ 11,000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಫೇಸ್‌ಬುಕ್ ಕಳೆದ ವಾರವಷ್ಟೇ ಮತ್ತೆ 10,000 ಸಿಬ್ಬಂದಿಯನ್ನು ತೆಗೆದುಹಾಕುವುದಾಗಿ ಹೇಳಿದೆ. ಈ ಮೂಲಕ ಫೇಸ್‌ಬುಕ್ 2ನೇ ಸುತ್ತಿನ ವಜಾಗೆ ಕೈ ಹಾಕಿದ್ದು, ಅಮೆಜಾನ್ ಕೂಡಾ ಇಂತಹದ್ದೇ ತೀರ್ಮಾನಕ್ಕೆ ಬಂದಿದೆ. ಇದನ್ನೂ ಓದಿ: Breaking- ಉರಿಗೌಡ ನಂಜೇಗೌಡ ಬಗ್ಗೆ ಟ್ವೀಟ್: ನಟ ಚೇತನ್ ಬಂಧನ

  • ಯುರೋಪ್‌ನಲ್ಲಿ ಗೂಗಲ್ ಉದ್ಯೋಗಿಗಳ ಸಾಮೂಹಿಕ ವಜಾ- ಕಚೇರಿಯಲ್ಲಿ ಪ್ರತಿಭಟನೆ

    ಯುರೋಪ್‌ನಲ್ಲಿ ಗೂಗಲ್ ಉದ್ಯೋಗಿಗಳ ಸಾಮೂಹಿಕ ವಜಾ- ಕಚೇರಿಯಲ್ಲಿ ಪ್ರತಿಭಟನೆ

    ಬರ್ನ್: ಗೂಗಲ್ (Google) ಕಂಪನಿ ಉದ್ಯೋಗಿಗಳ (Employees) ಸಾಮೂಹಿಕ ವಜಾ (Layoff) ಮುಂದುವರಿಸಿದ್ದು, ಇದೀಗ 200 ಉದ್ಯೋಗಿಗಳನ್ನು ವಜಾಗೊಳಿಸಿರುವ ಹಿನ್ನೆಲೆ ಸ್ವಿಟ್ಜರ್‌ಲೆಂಡ್‌ನ (Switzerland) ಜ್ಯೂರಿಯಲ್ಲಿರುವ ಕಂಪನಿಯ ಕಚೇರಿಯಲ್ಲಿ ಉದ್ಯೋಗಿಗಳು ಕೆಲಸವನ್ನು ನಿಲ್ಲಿಸಿ, ಪ್ರತಿಭಟನೆ ನಡೆಸಿದ್ದಾರೆ.

    ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ ಜನವರಿಯಲ್ಲಿ ಪ್ರಪಂಚದಾದ್ಯಂತ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಇದು ಜಾಗತಿಕವಾಗಿ ಶೇ.9 ರಷ್ಟು ಕಂಪನಿಯ ಉದ್ಯೋಗಿಗಳಿಗೆ ಸಮವಾದ ಸಂಖ್ಯೆಯಾಗಿದೆ. ಇದೀಗ ಗೂಗಲ್ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.

    ಸುಮಾರು 5,000 ಉದ್ಯೋಗಿಗಳಿರುವ ಗೂಗಲ್‌ನ ಜ್ಯೂರಿ ಕಚೇರಿಯಲ್ಲಿ ಕಳೆದ ತಿಂಗಳು ಉದ್ಯೋಗಿಗಳನ್ನು ಕಡಿತಗೊಳಿಸುವುದರ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗೆ ಬೆಂಬಲಿಸಿ ಇತರ ಉದ್ಯೋಗಿಗಳು ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಉದ್ಯೋಗಿಗಳಿಗೆ ಈಗ ಬೋನಸ್ ಇಲ್ಲ, ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆಪಲ್

    ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವಲ್ಲಿ ಪಾರದರ್ಶಕತೆಯನ್ನು ತೋರ್ಪಡಿಸಲಾಗುತ್ತಿಲ್ಲ. ಕಂಪನಿ ಪ್ರತಿ ವರ್ಷ ಭಾರೀ ಲಾಭ ಗಳಿಸುತ್ತಿರುವ ಸಮಯದಲ್ಲಿಯೂ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ಅವರಲ್ಲಿ ನಿರಾಸೆ ಮೂಡಿಸಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಉದ್ಯೋಗಿಗಳನ್ನು ಕಡಿತಗೊಳಿಸುತ್ತಿರುವುದರ ಬಗ್ಗೆ ಗೂಗಲ್ ವಕ್ತಾರರು, ಕಂಪನಿಯು ಅಗತ್ಯಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಹಿನ್ನೆಲೆ ಕಡಿತಗೊಳಿಸಲು ಮುಂದಾಗಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ – ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳ ನರಳಾಟ

  • ಮತ್ತೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಮೆಟಾ

    ಮತ್ತೆ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಮೆಟಾ

    ವಾಷಿಂಗ್ಟನ್: ಫೇಸ್‌ಬುಕ್ (Facebook) ಹಾಗೂ ಇನ್‌ಸ್ಟಾಗ್ರಾಮ್‌ನ (Instagram) ಮಾತೃಕಂಪನಿ ಮೆಟಾ (Meta), ಮತ್ತೆ ತನ್ನ ಉದ್ಯೋಗಿಗಳನ್ನು (Employees) ಕಡಿತಗೊಳಿಸಲು ಯೋಜಿಸಿದೆ. ಈ ವಾರದಲ್ಲಿ ಮೆಟಾ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲಿದೆ (Layoff) ಎಂದು ವರದಿಯಾಗಿದೆ.

    ವಿಶ್ವದ ಅತಿ ದೊಡ್ಡ ಸಾಮಾಜಿಕ ನೆಟ್‌ವರ್ಕಿಂಗ್ ಕಂಪನಿಯಾಗಿರುವ ಮೆಟಾ ಕಳೆದ ವರ್ಷ ನವೆಂಬರ್‌ನಲ್ಲಿ ಸುಮಾರು ಶೇ.13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಸುಮಾರು 11,000 ಉದ್ಯೋಗಿಗಳನ್ನು ಕಂಪನಿ ಮೊದಲ ಬಾರಿಗೆ ವಜಾಗೊಳಿಸಿತ್ತು. ಇದೀಗ ಮತ್ತೆ ಉದ್ಯೋಗಿಗಳನ್ನು ಕಡಿತಗೊಳಿಸಲು ಕಂಪನಿ ಯೋಜಿಸಿದ್ದು, ಇದು ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

    ಮೂಲಗಳ ಪ್ರಕಾರ, ವಜಾಗೊಳಿಸುವ ಪ್ರಕ್ರಿಯೆ ಈ ವಾರದಲ್ಲಿಯೇ ಪ್ರಾರಂಭವಾಗಿ ಮುಂದಿನ ವಾರದಲ್ಲಿ ಅದು ಕೊನೆಗೊಳ್ಳುವ ಸಾಧ್ಯತೆಯಿದೆ. ಕಂಪನಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮಾರ್ಕ್ ಜುಕರ್‌ಬರ್ಗ್ ತಮ್ಮ 3ನೇ ಮಗುವಿಗೆ ಪೋಷಕ ರಜೆ ತೆಗೆದುಕೊಳ್ಳಲಿದ್ದು, ಇದಕ್ಕೂ ಮುನ್ನ ಈ ಎಲ್ಲಾ ಪ್ರಕ್ರಿಯೆಗಳು ಕೊನೆಗೊಳ್ಳಲಿದೆ ಎನ್ನಲಾಗಿದೆ. ಇದನ್ನೂ ಓದಿ: 1,300 ಉದ್ಯೋಗಿಗಳ ಬಳಿಕ ಅಧ್ಯಕ್ಷನನ್ನೂ ವಜಾಗೊಳಿಸಿದ ಜೂಮ್ ಕಂಪನಿ

    ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಮೆಟಾ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ಕಂಪನಿ ಉದ್ಯೋಗಿಗಳ ಕಾರ್ಯಕ್ಷಮತೆಯ ಬಗ್ಗೆ ವಿಮರ್ಶೆ ಮಾಡಿದ್ದು, ಇದು ಉದ್ಯೋಗಿಗಳನ್ನು ವಜಾಗೊಳಿಸಲು ಕಾರಣ ಎನ್ನಲಾಗುತ್ತಿದೆ. ಮಾತ್ರವಲ್ಲದೇ ಕೆಲ ಉದ್ಯೋಗಿಗಳಿಗೆ ಕಾರ್ಯಕ್ಷಮತೆಯ ಬಗ್ಗೆ ಕಡಿಮೆ ರೇಟಿಂಗ್‌ಗಳನ್ನು ನೀಡಿದ್ದು, ಅವರಲ್ಲಿ ಹೆಚ್ಚಿನವರು ಉದ್ಯೋಗ ತೊರೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾದ ಬಿಸಿಗಾಳಿ – ಬೇಸಿಗೆ ಗೈಡ್‌ಲೈನ್ಸ್ ಹೊರಡಿಸಿದ ಆರೋಗ್ಯ ಇಲಾಖೆ

  • 1,300 ಉದ್ಯೋಗಿಗಳ ಬಳಿಕ ಅಧ್ಯಕ್ಷನನ್ನೂ ವಜಾಗೊಳಿಸಿದ ಜೂಮ್ ಕಂಪನಿ

    1,300 ಉದ್ಯೋಗಿಗಳ ಬಳಿಕ ಅಧ್ಯಕ್ಷನನ್ನೂ ವಜಾಗೊಳಿಸಿದ ಜೂಮ್ ಕಂಪನಿ

    ವಾಷಿಂಗ್ಟನ್: ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಜೂಮ್ (Zoom) ತನ್ನ ಅಧ್ಯಕ್ಷ ಗ್ರೆಗ್ ಟಾಂಬ್ (Greg Tomb) ಅವರನ್ನು ವಜಾಗೊಳಿಸಿದೆ.

    ಟಾಂಬ್ 2022ರ ಜೂನ್ ತಿಂಗಳಿನಲ್ಲಿ ಜೂಮ್‌ಗೆ ಸೇರ್ಪಡೆಯಾಗಿದ್ದರು. ಇತ್ತೀಚೆಗಷ್ಟೇ ಕಂಪನಿ ತನ್ನ 1,300 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಕಂಪನಿ 10 ತಿಂಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೇರಿದ್ದ ಟಾಂಬ್‌ರನ್ನು ಹಠಾತ್ತನೆ ವಜಾಗೊಳಿಸಿದೆ. ಇದೀಗ ಜೂಮ್‌ನ ಮುಂದಿನ ಅಧ್ಯಕ್ಷ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

    ಟಾಂಬ್ ಉದ್ಯಮಿ ಹಾಗೂ ಈ ಹಿಂದೆ ಗೂಗಲ್‌ನಲ್ಲೂ ಕಾರ್ಯನಿರ್ವಹಿಸಿದ್ದಾರೆ. ಜೂಮ್ ಕಂಪನಿ 2011ರಲ್ಲಿ ಸ್ಥಾಪನೆಯಾಗಿದ್ದು, ಕೋವಿಡ್ ಕಾಲದಲ್ಲಿ ಭಾರೀ ಪ್ರಗತಿ ಸಾಧಿಸಿತ್ತು. ಲಾಕ್‌ಡೌನ್ ವೇಳೆ ಕಂಪನಿಗಳ ಮೀಟಿಂಗ್ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಜೂಮ್ ಅತ್ಯಂತ ಉಪಯುಕ್ತವಾಗಿತ್ತು. ಇದೀಗ ಲಾಕ್‌ಡೌನ್ ಕಳೆದು, ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಕಂಪನಿಯನ್ನು ಆರ್ಥಿಕವಾಗಿ ನಿಭಾಯಿಸಲು ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ. ಇದನ್ನೂ ಓದಿ: ಚೀನಾದಿಂದ ಬೆಂಗಳೂರಿಗೆ ಶಿಫ್ಟ್ – ಸ್ಥಾಪನೆಯಾಗಲಿದೆ ಐಫೋನ್ ತಯಾರಿಕಾ ಘಟಕ, 1 ಲಕ್ಷ ಮಂದಿಗೆ ಉದ್ಯೋಗ

    ಕಳೆದ ತಿಂಗಳು ಕಂಪನಿ ತನ್ನ ಶೇ.15ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಇದರ ಪ್ರಕಾರ, ಕಂಪನಿಯ ಸುಮಾರು 1,300 ಉದ್ಯೋಗಿಗಳನ್ನು ಜೂಮ್ ಇತ್ತೀಚೆಗೆ ವಜಾಗೊಳಿಸಿದೆ. ಇದನ್ನೂ ಓದಿ: ಇಂದಿನಿಂದ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ: ಸುಧಾಕರ್

  • ‘ಪಠಾಣ್’ ಚಿತ್ರಕ್ಕೆ ಮತ್ತೊಂದು ಜಯ :  ಹಾಡು ನಿರ್ಬಂಧಕ್ಕೆ ಸಲ್ಲಿಸಿದ್ದ ಅರ್ಜಿ ವಜಾ

    ‘ಪಠಾಣ್’ ಚಿತ್ರಕ್ಕೆ ಮತ್ತೊಂದು ಜಯ : ಹಾಡು ನಿರ್ಬಂಧಕ್ಕೆ ಸಲ್ಲಿಸಿದ್ದ ಅರ್ಜಿ ವಜಾ

    ಸೆನ್ಸಾರ್ ಪ್ರಮಾಣ ಪತ್ರ ಇಲ್ಲದೇ ಪಠಾಣ್ (Pathan) ಚಿತ್ರದ ಬೇಷರಮ್ (Besharam) ಹಾಡು (Song) ಮತ್ತು ಟೀಸರ್ ಅನ್ನು ಯೂಟ್ಯೂಬ್‌‌ನಲ್ಲಿ ಬಿಡುಗಡೆ ಮಾಡಿದ್ದು ಅವುಗಳ ಪ್ರಸಾರ ನಿರ್ಬಂಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಹಾರಾಷ್ಟ್ರ ಸಿಟಿ ಸಿವಿಲ್ ಕೋರ್ಟ್ (Court) ವಜಾ ಮಾಡಿದೆ. ಸುರೇಶ್ ಪಾಟೀಲ್ ಎಂಬುವವರು ಸಲ್ಲಿಸಿದ್ದ ಅರ್ಜಿ (Application) ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಜೆ.ಡಿ.ಪಟೇಲ್, ತಾತ್ಕಾಲಿಕ ಪರಿಹಾರವನ್ನು ನೀಡದಿದ್ದರೆ ಫಿರ್ಯಾದಿದಾರರಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ, ಪ್ರಾಥಮಿಕ ಪ್ರಕರಣ ದಾಖಲಾಗದ ಹಿನ್ನಲೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಪಠಾಣ್ ಚಿತ್ರದ ಹಾಡುಗಳನ್ನು U/A ಸರ್ಟಿಫಿಕೇಟ್ ಇಲ್ಲದೇ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲಾಗುತ್ತಿದೆ ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಸಿನಿಮಾಟೋಗ್ರಫಿ ಕಾಯ್ದೆಯ 38ನೇ ನಿಯಮದ ಪ್ರಕಾರ ಅಂತಹ ಪ್ರಮಾಣಪತ್ರವನ್ನು ತೋರಿಸುವುದು ಕಡ್ಡಾಯವಾಗಿದೆ ಎಂದು ಅರ್ಜಿದಾರರ ಪರ ವಾದಿಸಲಾಯಿತು. ಇದನ್ನೂ ಓದಿ:`ಬಿಗ್ ಬಾಸ್’ ಖ್ಯಾತಿಯ ಅಕ್ಷತಾ ಕುಕ್ಕಿ ಮದುವೆ ಡೇಟ್ ಫಿಕ್ಸ್

    ಇದಕ್ಕೆ ಚಿತ್ರ ತಂಡದ ಪರ ವಾದ ಮಂಡಿಸಿದ ವಕೀಲರು, ಚಿತ್ರದ ನಿರ್ಮಾಣ ಸಂಸ್ಥೆಯು, ಯೂಟ್ಯೂಬ್ ಅಥವಾ ಯಾವುದೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಚಲನಚಿತ್ರದ ಜಾಹೀರಾತನ್ನು ಪ್ರಕಟಿಸುವಾಗ ಅಂತಹ ಪ್ರಮಾಣಪತ್ರವನ್ನು ತೋರಿಸುವ ಅಗತ್ಯವಿಲ್ಲ, ಸಿನಿಮಾಟೋಗ್ರಫಿ ಆಕ್ಟ್, 1953 ರ ಅಡಿಯಲ್ಲಿ ಪ್ರಮಾಣೀಕರಣದ ಅವಶ್ಯಕತೆಯು ಚಲನಚಿತ್ರದ ಥಿಯೇಟ್ರಿಕಲ್ ವಿವರಣೆಗೆ ಸೀಮಿತವಾಗಿದೆ ಎಂದು ವಾದಿಸಲಾಯಿತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 18 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲಿದೆ amazon

    18 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಲಿದೆ amazon

    ವಾಷಿಂಗ್ಟನ್: ಇ-ಕಾಮರ್ಸ್ ಕಂಪನಿ ಅಮೆಜಾನ್ (Amazon) ತನ್ನ ಉದ್ಯೋಗಿಗಳಿಗೆ (Employees) ಆಘಾತಕರ ಸುದ್ದಿ ನೀಡಿದೆ. ಕಂಪನಿ ಬರೋಬ್ಬರಿ 18,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ (Layoff) ತಿಳಿಸಿದೆ.

    ಕಂಪನಿ ಕಳೆದ ವರ್ಷ ನವೆಂಬರ್‌ನಲ್ಲಿ ತನ್ನ ಸುಮಾರು 10,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ತಿಳಿಸಿತ್ತು. ಆದರೆ ಈ ಹಿಂದೆ ಯೋಜಿಸಿದಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗುತ್ತಿದೆ.

    ಅನಿಶ್ಚಿತ ಆರ್ಥಿಕತೆ ಹಾಗೂ ಕೋವಿಡ್ ಸಂದರ್ಭದಲ್ಲಿ ಮಾಡಿಕೊಂಡಿದ್ದ ಅಧಿಕ ನೇಮಕಾತಿ ಅಂಶವನ್ನು ಉಲ್ಲೇಖಿಸಿ ಅಮೆಜಾನ್ ಉದ್ಯೋಗಿಗಳ ವಜಾ ನಿರ್ಧಾರವನ್ನು ಕೈಗೊಂಡಿದೆ. ನವೆಂಬರ್‌ನಲ್ಲಿ ಮಾಡಿಕೊಂಡಿದ್ದ ಕಡತವನ್ನು ಇಂದು ನಾವು ಹಂಚಿಕೊಳ್ಳುತ್ತಿದ್ದೇವೆ, ಕಂಪನಿಯಿಂದ 18,000 ಉದ್ಯೋಗಿಗಳನ್ನು ತೆಗೆದುಹಾಕುತ್ತಿದ್ದೇವೆ ಎಂದು ಸಿಇಒ ಆಂಡಿ ಜಾಸ್ಸಿ ಬುಧವಾರ ತಿಳಿಸಿರುವುದಾಗಿ ವರದಿಯಾಗಿದೆ.

    ಉದ್ಯೋಗಿಗಳನ್ನು ತೆಗೆದುಹಾಕುತ್ತಿರುವ ನಿರ್ಧಾರ ಅವರನ್ನು ಕಷ್ಟಕ್ಕೆ ದೂಡುತ್ತದೆ ಎಂಬುದು ನಮಗೆ ತಿಳಿದಿದೆ. ಆದರೆ ನಾವು ಈ ಪ್ರಕ್ರಿಯೆಯನ್ನು ಲಘುವಾಗಿ ತಗೆದುಕೊಳ್ಳುತ್ತಿಲ್ಲ. ನಾವು ವಜಾಗೊಳಿಸುತ್ತಿರುವವರಿಗೆ ಬೆಂಬಲ ನೀಡುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಅವರಿಗೆ ಪ್ರತ್ಯೇಕ ಪಾವತಿ, ಆರೋಗ್ಯ ವಿಮೆಯ ಪ್ರಯೋಜನಗಳು, ಬಾಹ್ಯ ಉದ್ಯೋಗ ನಿಯೋಜನೆಗೆ ಬೆಂಬಲ ನೀಡುವ ಪ್ಯಾಕೇಜ್ ಅನ್ನು ಒದಗಿಸುವುದಾಗಿ ಜಾಸ್ಸಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ವಜ್ರ ಬಸ್ ಪ್ರಯಾಣಿಕರಿಗೆ ಶಾಕ್ – ದರ ಹೆಚ್ಚಳ

    ವಜಾಗೊಳ್ಳುತ್ತಿರುವ ಹೆಚ್ಚಿನ ಉದ್ಯೋಗಿಗಳು ಯುರೋಪ್‌ನವರಾಗಿದ್ದಾರೆ. ಜನವರಿ 18ರಂದು ವಜಾಗೊಳ್ಳುತ್ತಿರುವವರಿಗೆ ಈ ಬಗ್ಗೆ ತಿಳಿಸಲಿದ್ದೇವೆ. ನಮ್ಮ ತಂಡದ ಸದಸ್ಯರೊಬ್ಬರು ಈ ಬಗ್ಗೆ ಮಾಹಿತಿ ಸೋರಿಕೆ ಮಾಡಿರುವುದರಿಂದ ಈ ವಿಚಾರವನ್ನು ಹಠಾತ್ತನೆ ಘೋಷಣೆ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.

    2020ರ ಆರಂಭದಿಂದ 2022ರ ಆರಂಭದ ನಡುವೆ ಅಮೆಜಾನ್ ತನ್ನ ಉದ್ಯೋಗಿಳನ್ನು ಜಾಗತಿಕವಾಗಿ ದ್ವಿಗುಣಗೊಳಿಸಿತ್ತು. ಕೋವಿಡ್ ಸಂದರ್ಭದಲ್ಲಿ ವಿತರಕರ ಬೇಡಿಕೆ ಹೆಚ್ಚಿದ್ದರಿಂದ ಇದನ್ನು ಪೂರೈಸಲು ಚಿಲ್ಲರೆ ವ್ಯಾಪಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡಿತ್ತು. ಕಂಪನಿ ಸೆಪ್ಟೆಂಬರ್ ಅಂತ್ಯದ ವೇಳೆಗೆ 15.40 ಲಕ್ಷ ಉದ್ಯೋಗಿಗಳನ್ನು ಹೊಂದಿತ್ತು. ಇದನ್ನೂ ಓದಿ: 1,337 ಕೋಟಿ ಪೈಕಿ ಶೇ.10 ರಷ್ಟು ದಂಡವನ್ನು ಠೇವಣಿ ಇಡಿ – ಗೂಗಲ್‌ಗೆ NCALT ಆದೇಶ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬರೋಬ್ಬರಿ 11,000 ಉದ್ಯೋಗಿಗಳನ್ನು ವಜಾಗೊಳಿಸಿದ ಮೆಟಾ

    ವಾಷಿಂಗ್ಟನ್: ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್ ಫೇಸ್‌ಬುಕ್‌ನ (Facebook) ಮಾತೃ ಕಂಪನಿ ಮೆಟಾ (Meta) ತನ್ನ ಕಂಪನಿಯ ಶೇ.13 ರಷ್ಟು ಅಂದರೆ 11 ಸಾವಿರಕ್ಕೂ ಹೆಚ್ಚು ಉದ್ಯೋಗಿಳನ್ನು (Employees) ವಜಾಗೊಳಿಸಿದೆ (layoffs).

    ಈ ಬಗ್ಗೆ ತಿಳಿಸಿರುವ ಮೆಟಾದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮಾರ್ಕ್ ಜುಕರ್‌ಬರ್ಗ್ (Mark Zuckerberg), ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ನಿರ್ಧಾರಕ್ಕೆ ಹೇಗೆ ಬಂದಿದ್ದೇವೆ ಎಂಬುದಕ್ಕೆ ನಾನು ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಬಯಸುತ್ತೇನೆ. ಈ ನಿರ್ಧಾರ ಎಲ್ಲರಿಗೂ ಕಷ್ಟ ತಂದಿದೆ ಎಂಬುದು ನನಗೆ ತಿಳಿದಿದೆ. ವಜಾಗೊಳಗಾಗುತ್ತಿರುವವರ ಬಗ್ಗೆ ನಾನು ವಿಷಾದಿಸುತ್ತೇನೆ ಎಂದಿದ್ದಾರೆ.

    2004 ರಲ್ಲಿ ಫೇಸ್‌ಬುಕ್ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕಂಪನಿಯಲ್ಲಿ ನಡೆದಿರುವ ವಜಾದ ಪ್ರಕ್ರಿಯೆಯಲ್ಲಿ ಇದು ಅತ್ಯಂತ ದೊಡ್ಡ ಮಟ್ಟದ್ದಾಗಿದೆ. ಸುಮಾರು 87 ಸಾವಿರ ಉದ್ಯೋಗಿಗಳು ಇರುವ ಫೇಸ್‌ಬುಕ್‌ನಲ್ಲಿ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ್ದರೂ, ಹೊಸ ನೇಮಕಾತಿಯನ್ನು ನಡೆಸಲು ಸಿದ್ಧವಾಗಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ರಷ್ಯಾ ಆಕ್ರಮಣದಿಂದ ನಾಶವಾದ ವಿಶ್ವದ ದೈತ್ಯ ವಿಮಾನ ಮರು ನಿರ್ಮಾಣಕ್ಕೆ ಉಕ್ರೇನ್ ಚಿಂತನೆ

    ಕಂಪನಿ ಆರ್ಥಿಕ ಕುಸಿತ ಹಾಗೂ ಹೆಚ್ಚಿನ ಸ್ಪರ್ಧೆಗಳಿಂದಾಗಿ ಜಾಹೀರಾತುಗಳ ನಷ್ಟವನ್ನು ಅನುಭವಿಸುತ್ತಿದ್ದು, ದೊಡ್ಡ ಮಟ್ಟದಲ್ಲಿ ವಜಾ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ. ಆದರೂ ಹೊಸ ಉದ್ಯೋಗಿಗಳಿಗೆ ನೇಮಕಾತಿಯನ್ನು 2023ರ ಮಾರ್ಚ್ ವರೆಗೆ ತಡೆಹಿಡಿಯಲಾಗಿದ್ದು, ಬಳಿಕ ಅದನ್ನು ವಿಸ್ತರಿಸಲಾಗುತ್ತದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಡಿಗ್ರಿ ಬಳಿಕ ಮುಂದೇನು? – ಪಬ್ಲಿಕ್ ಟಿವಿ ವಿದ್ಯಾ ಮಂದಿರಕ್ಕೆ ಬನ್ನಿ

    Live Tv
    [brid partner=56869869 player=32851 video=960834 autoplay=true]