Tag: ವಕ್ಫ ಬೋರ್ಡ್

  • ವಕ್ಫ್ ಆಸ್ತಿ ವಿವಾದ – ವರ್ಷದ ಹಿಂದೆಯೇ ಪ್ರಧಾನಿ ಗಮನ ಸೆಳೆಯಲು ಯತ್ನ

    ವಕ್ಫ್ ಆಸ್ತಿ ವಿವಾದ – ವರ್ಷದ ಹಿಂದೆಯೇ ಪ್ರಧಾನಿ ಗಮನ ಸೆಳೆಯಲು ಯತ್ನ

    ಧಾರವಾಡ: ಒಂದು ವರ್ಷದ ಹಿಂದೆಯೇ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಧಾನಿ ಮೋದಿ (PM Narendra Modi) ಗಮನ ಸೆಳೆಯಲು ಯತ್ನಿಸಿರುವ ಸನ್ನಿವೇಶ ತಡವಾಗಿ ಬೆಳಿಕಿಗೆ ಬಂದಿದೆ.

    ಹೌದು. ಧಾರವಾಡದ (Dharwad) ಉಪ್ಪಿನಬೆಟಗೇರಿ (Uppinbetageri) ಗ್ರಾಮದ ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ಬುದ್ನಿ ಎಂಬುವವರು ಕಳೆದ ವರ್ಷ ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬರುವುದನ್ನು ತಡೆಯುವಂತೆ ಆಗ್ರಹಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.ಇದನ್ನೂ ಓದಿ: ಆರ್‌.ಆರ್‌ ನಗರ ದರ್ಶನ್ ನಿವಾಸದ ಬಳಿ ಪೊಲೀಸರ ಬಿಗಿ ಭದ್ರತೆ – ನಾಳೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ

    ಉಪ್ಪಿನಬೆಟಗೇರಿ ಗ್ರಾಮದ ಅನೇಕ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಹೆಸರು ಉಲ್ಲೇಖಿಸಲಾಗಿತ್ತು. ಇದಕ್ಕಾಗಿ ರೈತರು ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದಾಗಿ ಕೃಷ್ಣಪ್ಪ ಪ್ರಧಾನಿ ಮೋದಿ ಗಮನಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.

    ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬರುವುದನ್ನು ತಡೆಯುವಂತೆ ಆಗ್ರಹಿಸಿ ಹಾಗೂ ಯಾವ ಮಾನದಂಡದ ಮೇಲೆ ಹೀಗೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿ ಕೃಷ್ಣಪ್ಪ ಪತ್ರ ಬರೆದಿದ್ದರು. 2023ರ ನ.28ರಂದು ಪ್ರಧಾನಿಗೆ ಪತ್ರ ಕಳುಹಿಸಿದ್ದರು. ಡಿ.2ರಂದು ಪತ್ರ ಪ್ರಧಾನಿ ಕಚೇರಿ ತಲುಪಿದ್ದು, ಡಿ.8ರಂದು ಕೃಷ್ಣಪ್ಪಗೆ ಪಿಎಂ ಕಚೇರಿಯಿಂದ ಕರೆ ಬಂದಿತ್ತು. ಪತ್ರ ಬರೆದು, ದೂರು ಕೊಡುತ್ತಿರುವುದು ನೀವೆನಾ? ಎಂದು ಸಿಬ್ಬಂದಿ ಪ್ರಶ್ನಿಸಿ, ಖಚಿತಪಡಿಸಿಕೊಂಡಿದ್ದರು. ಜೊತೆಗೆ ನಿಮ್ಮ ದೂರು ಪ್ರಧಾನಿಗಳ ಗಮನಕ್ಕೆ ತರುವುದಾಗಿ ಸಿಬ್ಬಂದಿ ತಿಳಿಸಿದ್ದರು.

    ಇದೀಗ ಮತ್ತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ವಿವಾದ ಬುಗಿಲೆದ್ದಿದೆ.ಇದನ್ನೂ ಓದಿ: 2 ದಿನಗಳಿಂದ ನಾಪತ್ತೆಯಾಗಿದ್ದ 50ರ ಮಹಿಳೆಯ ಮೃತದೇಹ 6 ತುಂಡುಗಳಾಗಿ ಪತ್ತೆ

  • ಮದರಸಾಗಳಲ್ಲೂ ಡ್ರೆಸ್ ಕೋಡ್ ಜಾರಿ

    ಮದರಸಾಗಳಲ್ಲೂ ಡ್ರೆಸ್ ಕೋಡ್ ಜಾರಿ

    ಡೆಹ್ರಾಡೂನ್: ಉತ್ತರಾಖಂಡದ ಎಲ್ಲಾ ಮದರಸಾಗಳಲ್ಲಿ (Madrassas) ಇನ್ಮುಂದೆ ಡ್ರೆಸ್ ಕೋಡ್‌ಗಳು (Dress code) ಜಾರಿಗೆ ಬರಲಿದೆ ಎಂದು ಉತ್ತರಾಖಂಡ (Uttarakhand) ವಕ್ಫ್ ಬೋರ್ಡ್ (Waqf Board) ತಿಳಿಸಿದೆ.

    ಈ ಬಗ್ಗೆ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಮಾತನಾಡಿ, ಉತ್ತರಾಖಂಡ ವಕ್ಫ್ ಬೋರ್ಡ್‌ನಲ್ಲಿ ನೋಂದಣಿಯಾಗಿರುವ 103 ಮದರಸಾಗಳಲ್ಲಿ ಸಮವಸ್ತ್ರ ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತರಲಾಗುತ್ತದೆ. ಅಷ್ಟೇ ಅಲ್ಲದೇ ಮದರಸಾವು ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ತರಗತಿಗಳು ನಡೆಯಲಿದ್ದು, ಅಲ್ಲಿಯೂ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಸಹ ಪರಿಚಯಿಸಲಾಗುವುದು ಎಂದು ಹೇಳಿದರು.

    ರಾಜ್ಯದ ಎಲ್ಲಾ ಮದರಸಾಗಳನ್ನು ಸಮೀಕ್ಷೆ ಮಾಡಲು ರಾಜ್ಯ ಸರ್ಕಾರವು ಶೀಘ್ರದಲ್ಲೇ ಸಮಿತಿಯನ್ನು ರಚಿಸುವ ನಿರೀಕ್ಷೆಯಿದೆ. ಆಧುನಿಕ ಶಾಲೆಗಳ ಮಾದರಿಯಲ್ಲಿ ಮದರಸಾಗಳನ್ನು ನಡೆಸಲು ಸಹ ಸಿದ್ಧತೆ ನಡೆದಿದ್ದು, ಮೊದಲ ಹಂತದಲ್ಲಿ 7 ಮದರಸಾಗಳನ್ನು ಆಧುನಿಕರಣಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಡೆಹ್ರಾಡೂನ್‌ನಲ್ಲಿ ಎರಡು, ಉಧಮ್ ಸಿಂಗ್ ನಗರದಲ್ಲಿ ಎರಡು, ಹರಿದ್ವಾರದಲ್ಲಿ ಎರಡು ಮತ್ತು ನೈನಿತಾಲ್‌ನಲ್ಲಿ ಒಂದು ಮದರಸಾವನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಇತ್ತೀಚೆಗೆ ಮದರಸಾಗಳಿಗೆ ನೀಡಿದ ಅನುದಾನವನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಎಂಬ ಆರೋಪದ ನಡುವೆ ಮದರಸಾಗಳ ಸಮೀಕ್ಷೆ ನಡೆಸುವ ಅಗತ್ಯವನ್ನು ಒತ್ತಿ ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]