Tag: ವಕ್ಫ್ ಬೋರ್ಡ್

  • ಜಮೀರ್‌ ಪ್ರಭಾವ ಬಳಸಿ ಚಿತ್ರದುರ್ಗದಲ್ಲಿ 6 ಎಕ್ರೆ ಖಬರ್‌ಸ್ಥಾನ ಜಮೀನು ಕಬಳಿಕೆ- ವಕ್ಫ್ ಮಾಜಿ ಅಧ್ಯಕ್ಷನ ವಿರುದ್ಧವೇ ಆಕ್ರೋಶ

    ಜಮೀರ್‌ ಪ್ರಭಾವ ಬಳಸಿ ಚಿತ್ರದುರ್ಗದಲ್ಲಿ 6 ಎಕ್ರೆ ಖಬರ್‌ಸ್ಥಾನ ಜಮೀನು ಕಬಳಿಕೆ- ವಕ್ಫ್ ಮಾಜಿ ಅಧ್ಯಕ್ಷನ ವಿರುದ್ಧವೇ ಆಕ್ರೋಶ

    ಚಿತ್ರದುರ್ಗ: ಇಲ್ಲಿಯವರೆಗೆ ಮಠ,ಮಂದಿರ, ರೈತರು ಹಾಗು ಸರ್ಕಾರದ ಜಮೀನುಗಳನ್ನು ವಕ್ಫ್ ಕಬಳಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿತ್ತು. ಈಗ ವಕ್ಫ್ ಬೋರ್ಡ್‌ನ (Waqf Board) ಮಾಜಿ ರಾಜ್ಯಾಧ್ಯಕ್ಷರೊಬ್ಬರು ಮುಸ್ಲಿಂ ಸಮುದಾಯದ ಖಬರ್‌ಸ್ಥಾನ ಜಾಗವನ್ನೇ ಕಬಳಿಸಿದ್ದಾರೆಂಬ ಗಂಭೀರ ಆರೋಪ ಚಿತ್ರದುರ್ಗದಲ್ಲಿ (Chitradurga) ಕೇಳಿಬಂದಿದೆ.

    ಚಿತ್ರದುರ್ಗದ ಅಗಸನಕಲ್ಲು ಬಡಾವಣೆಯ ನಿವಾಸಿಯಾಗಿರುವ ವಕ್ಫ್ ಬೋರ್ಡ್ ಮಾಜಿ ರಾಜ್ಯಾಧ್ಯಕ್ಷ ಅನ್ವರ್ ಪಾಷಾ ಅವರು ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರ ಆಪ್ತರಾಗಿದ್ದಾರೆ. ಹೀಗಾಗಿ ಅನ್ವರ್ ಪಾಷಾ ಸಚಿವರ ಪ್ರಭಾವ ಬಳಸಿ, ಚಿತ್ರದುರ್ಗದ ಮುಸ್ಲಿಂ ಸಮುದಾಯದ ಖಬರ್‌ಸ್ಥಾನಗೆ ಮಂಜೂರಾಗಿದ್ದ ಆರು ಎಕರೆ ಜಾಗದಲ್ಲಿ ಅವರ ಮನೆ ಹಾಗು ಕಾಲೇಜೊಂದನ್ನು ನಿರ್ಮಾಣ ಮಾಡಿದ್ದಾರೆಂದು ಸಮುದಾಯದ ಮುಖಂಡರಾದ ಅಜ್ಮಲ್ ಹಾಗೂ ಇಂತಿಯಾಜ್ ಆರೋಪಿಸಿದ್ದಾರೆ. ಇದನ್ನೂ ಓದಿ: ಸಂತ ಚಿನ್ಮಯ್ ಕೃಷ್ಣದಾಸ್‌ ವಿರುದ್ಧ ದೇಶದ್ರೋಹದ ಕೇಸ್‌ – ಬಾಂಗ್ಲಾದಲ್ಲಿ ಇಸ್ಕಾನ್ ಬ್ಯಾನ್‌ ಆಗುತ್ತಾ?

    ಸರ್ಕಾರ ಸಮುದಾಯದ ಖಬರ್‌ಸ್ಥಾನಗೆ ನೀಡಿದ್ದ ಜಾಗವನ್ನು ಅನ್ವರ್ ಕಬಳಿಸಿದ್ದಾರೆಂದು ಮುಸ್ಲಿಂ ವೇದಿಕೆ ಅಧ್ಯಕ್ಷ ಅಜ್ಮಲ್ ಆರೋಪಿಸಿದ್ದಾರೆ. ಹಾಗೆಯೇ ವಕ್ಫ್ ಬೋರ್ಡ್ ನಿರ್ದೇಶಕರಾಗಿರುವ ಅನ್ವರ್ ಪಾಷಾ ಈ ಹಿಂದೆ ವಕ್ಫ್ ಬೋರ್ಡ್‌ಗೆ ರಾಜ್ಯಾಧ್ಯಕ್ಷರಾಗಿದ್ದು, ರಾಜಕೀಯ ಹಾಗೂ ಅಧಿಕಾರದ ಪ್ರಭಾವದಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಖಬರ್‌ಸ್ಥಾನ ಹಾಗೂ ರಸ್ತೆಯನ್ನು ಒತ್ತುವರಿ ಮಾಡಿದ್ದಾರೆ. ಬಳಿಕ ನಿರುಪಯುಕ್ತ ಖರಾಬು ಜಮೀನಾದ ಬೆಟ್ಟಗುಡ್ಡವಿರುವ ಜಮೀನಿನನ್ನು ಖಬರ್‌ಸ್ಥಾನ ಜಾಗವೆಂದು ಗುರುತಿಸಿ, ಸಮುದಾಯಕ್ಕೆ ವಂಚಿಸಿದ್ದಾರೆ ಎಂಬ ಆರೋಪವನ್ನು ಯುವ ವೇದಿಕೆ ಮುಖಂಡ ಇಂತಿಯಾಜ್ ಮಾಡಿದ್ದಾರೆ. ಇದನ್ನೂ ಓದಿ: ಕೋಮು ವೈಷಮ್ಯದ ಪೋಸ್ಟ್ – ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅರೆಸ್ಟ್

    ಈ ಸಂಬಂಧ ಚಿತ್ರದುರ್ಗದ ನಗರ ಠಾಣೆಗೆ ಮಿನರ್ವ ಫೌಂಡೇಷನ್ ಹಾಗೂ ಮುಸ್ಲಿಂ ವೇದಿಕೆ ಮುಖಂಡರಾದ ಅಜ್ಮಲ್, ಇಂತಿಯಾಜ್, ಮುನ್ನ ನೇತೃತ್ವದಲ್ಲಿ ದೂರು ನೀಡಿದ್ದಾರೆ. ಈ ಖಬರ್‌ಸ್ಥಾನ ಮತ್ತು ಪಕ್ಕದ ರಸ್ತೆಯನ್ನು ಸಹ ಅನ್ವರ್ ಒತ್ತುವರಿ ಮಾಡಿದ್ದಾರೆ. ಹೀಗಾಗಿ ಈ ಜಮೀನಿನ ಸಂಬಂಧ ಸರ್ಕಾರ ಕೂಡಲೇ ಸರ್ವೆ ನಡೆಸಿ, ಖಬರ್‌ಸ್ಥಾನ ಜಾಗ ಉಳಿಸುವಂತೆ ಹೋರಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಸೇತುವೆಯಿಂದ ಕಾರು ಉರುಳಿದ ಕೇಸ್‌ – ಎಫ್‌ಐಆರ್‌ ದಾಖಲು, ತನಿಖೆ ಎದುರಿಸುತ್ತಿದೆ ಗೂಗಲ್‌ ಮ್ಯಾಪ್ಸ್‌

    ಇನ್ನು ಈ ಸಂಬಂಧ ಸಮುದಾಯದ ಯುವಕನಾದ ಇಂತಿಯಾಜ್, ಅನ್ವರ್ ಪಾಷಾ ವಿರುದ್ಧ ವೀಡಿಯೊ ವೈರಲ್ ಮಾಡಿದ್ದರು. ಈ ಯುವಕನ ಹೋರಾಟಕ್ಕೆ ಸಾಥ್ ನೀಡಿರುವ ಸಮಾಜದ ಮುಖಂಡರು ಸಹ ಖಬರ್‌ಸ್ಥಾನ ಹಾಗೂ ಸಾರ್ವಜನಿಕ ರಸ್ತೆ ಒತ್ತುವರಿ ಸಂಬಂಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರು ಯೋಗೇಶ್ವರ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಸುರೇಶ್ ಬಾಬು ಸಲಹೆ

  • ನಮ್ಮ ಅವಧಿಯಲ್ಲಿ ರೈತರಿಗೆ ವಕ್ಫ್ ನೋಟಿಸ್ ಕೊಟ್ಟವರ ವಿರುದ್ಧವೂ ಕ್ರಮ ಆಗಲಿ: ಆರ್.ಅಶೋಕ್

    ನಮ್ಮ ಅವಧಿಯಲ್ಲಿ ರೈತರಿಗೆ ವಕ್ಫ್ ನೋಟಿಸ್ ಕೊಟ್ಟವರ ವಿರುದ್ಧವೂ ಕ್ರಮ ಆಗಲಿ: ಆರ್.ಅಶೋಕ್

    -`ಕೈ’ ನಾಯಕರು ವಕ್ಫ್ ಭೂಮಿ ಒತ್ತುವರಿ ಮಾಡಿ ಮಾರಿಕೊಂಡಿದ್ದರು ಎಂದು ಆರೋಪ

    ಬೆಂಗಳೂರು: ನಮ್ಮ ಅವಧಿಯಲ್ಲಿ ರೈತರಿಗೆ ನೋಟಿಸ್ ಕೊಟ್ಟಿದ್ದ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಲಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ (BJP) ಅವಧಿಯಲ್ಲಿ ಹೆಚ್ಚು ವಕ್ಫ್ ನೋಟಿಸ್ ಕೊಟ್ಟಿದ್ದ ವಿಚಾರವಾಗಿ ಮಾತನಾಡಿ, ನಮ್ಮ ಸರ್ಕಾರದ ಅವಧಿಯಲ್ಲಿ ಅನ್ವರ್ ಮಾನ್ಪಾಡಿ ವರದಿಯನ್ನು ಆಧರಿಸಿ ನಾವು ನೋಟಿಸ್ ಕೊಟ್ಟಿದ್ದೇವು. ಈ ವರದಿಯಲ್ಲಿ ಬಹಳಷ್ಟು ಕಾಂಗ್ರೆಸ್‌ನ (Congress) ದೊಡ್ಡ ದೊಡ್ಡ ನಾಯಕರು, ಕೇಂದ್ರ, ರಾಜ್ಯಗಳ ನಾಯಕರು ವಕ್ಫ್ ಭೂಮಿ ಒತ್ತುವರಿ ಮಾಡಿಕೊಂಡು ಮಾರಾಟ ಮಾಡಿಕೊಂಡಿದ್ದರು. ಇಂಥವರಿಗೆ ನಾವು ನೋಟಿಸ್ ಕೊಟ್ಟಿರಬಹುದು. ಕಾಂಗ್ರೆಸ್‌ನವರು ವಕ್ಫ್ ಬೋರ್ಡ್‌ನಲ್ಲಿ ಅಕ್ರಮ ಆಗಿದೆ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಈಗ ಇರುವ ವಿಚಾರ ಕಾಂಗ್ರೆಸ್ ರೈತರಿಗೆ ನೋಟಿಸ್ ಕೊಟ್ಟಿದ್ದಾರೆ ಎಂದರು.ಇದನ್ನೂ ಓದಿ: ಕೊನೆಗೂ ರಿಲೇಷನ್‌ಶಿಪ್‌ ಬಗ್ಗೆ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ

    ನಮ್ಮ ಅವಧಿಯಲ್ಲಿ ತಪ್ಪಾಗಿದ್ದರೂ ಕ್ರಮ ಆಗಲಿ. ಕಾಂಗ್ರೆಸ್ ಅವಧಿಯಲ್ಲಿ ತಪ್ಪಾಗಿದ್ದರೂ ಕ್ರಮ ಆಗಲಿ. ನಾವೇನು ಅಧಿಕಾರಿಗಳ ರಕ್ಷಣೆ ಮಾಡುತ್ತಿಲ್ಲ. ನಮ್ಮ ಅವಧಿಯಲ್ಲಿ ಅಥವಾ ಕಾಂಗ್ರೆಸ್ ಅವಧಿಯಲ್ಲಿ ಅಧಿಕಾರಿಗಳು ತಪ್ಪಾಗಿ ವಕ್ಫ್ ನೋಟಿಸ್ ಕೊಟ್ಟಿದ್ದರೆ ಕ್ರಮ ಆಗಲಿ. ಈಗ ಪ್ರಶ್ನೆಯಾಗಿರುವುದು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆದರೆ ಇದು ತಪ್ಪು. ಕಾಂಗ್ರೆಸ್ ಅವಧಿಯಲ್ಲಿ ರೈತರಿಗೆ ನೋಟಿಸ್ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮಾನ್ಪಾಡಿ ವರದಿಯಲ್ಲಿ ಕಾಂಗ್ರೆಸ್ ನಾಯಕರು ಒತ್ತುವರಿ ಮಾಡಿಕೊಂಡಿದ್ದರರು. ಅದಕ್ಕೆ ನೋಟಿಸ್ ಕೊಟ್ಟಿದ್ದೇವೆ. ನಮ್ಮ ಕಾಲದಲ್ಲಿ ರೈತರಿಗೆ ನೋಟಿಸ್ ಕೊಟ್ಟಿದ್ದರೆ ಅದೂ ತಪು ಎಂದು ಕಿಡಿಕಾರಿದರು.

    ಐಎಎಸ್ ಅಧಿಕಾರಿ ಕೈವಾಡಿ ಕೇಳಿ ದಿಗ್ಭ್ರಮೆ ಆಗಿದೆ:
    ಮುಡಾ (MUDA) ಕಚೇರಿಯಿಂದ ಐಎಎಸ್ ಅಧಿಕಾರಿ 144 ಫೈಲುಗಳನ್ನು ತೆಗೆದುಕೊಂಡು ಹೋಗಿರುವ ವಿಚಾರವಗಿ, ಈ ವಿಚಾರ ನಮಗೆ ದಿಗ್ಭ್ರಮೆ ಮೂಡಿಸಿದೆ. ಬೈರತಿ ಸುರೇಶ್ ಅವರು ಎಷ್ಟು ಫೈಲ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಗೊತ್ತಿಲ್ಲ. ಅದಕ್ಕೂ ಮುಂಚೆ ಐಎಎಸ್ ಅಧಿಕಾರಿಯೊಬ್ಬರು ಮುಡಾ ಫೈಲ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅಂದರೆ ರಾಜ್ಯದಲ್ಲಿ ಆಡಳಿತ ಯಾವ ಮಟ್ಟಕ್ಕೆ ಬಂದಿದೆ? ಅಧಿಕಾರಿಗಳೇ ಮುಡಾ ಅಕ್ರಮದಲ್ಲಿ ರಕ್ಷಣೆಗೆ ಮುಂದಾಗಿರುವುದು ಸರಿಯಲ್ಲ. ಈ ಪ್ರಕರಣ ಸಿಬಿಐಗೆ ತನಿಖೆಗೆ ಕೊಡಬೇಕು ಎಂದು ಆಗ್ರಹಿಸುತ್ತೇನೆ. ಮುಡಾ ಅಕ್ರಮ ಈ ರಾಜ್ಯ ಕಂಡ ದೊಡ್ಡ ಹಗರಣ. ಸಿಎಂ, ಮತ್ತವರ ಕುಟುಂಬ ಶಾಮೀಲಾಗಿದ್ದಾರೆ. 14 ಸೈಟುಗಳಷ್ಟೇ ಅಲ್ಲ ಬಡವರ ಸೈಟುಗಳನ್ನು ಕೂಡ ಲೂಟಿ ಮಾಡಲಾಗಿದೆ. ಮುಡಾದಲ್ಲಿ 3-4 ಸಾವಿರ ಕೋಟಿ ರೂ. ಅಕ್ರಮ ಆಗಿದೆ. ಐಎಎಸ್ ಅಧಿಕಾರಿಗಳು ಮಾಡಿರುವ ತಪ್ಪನ್ನು ಸರಿಪಡಿಸಲು ದಾಖಲೆ ತಿದ್ದಿರುತ್ತಾರೆ. ವೈಟ್ನರ್ ಹಾಕಿ, ದಾಖಲೆಗಳನ್ನು ಮಾಯ ಮಾಡಿರುತ್ತಾರೆ. ಇದನ್ನು ಸಿಬಿಐ ತನಿಖೆಗೆ ಒಳಪಡಿಸಿದರೆ ಆದರೆ ಇನ್ನಷ್ಟು ಹಗರಣಗಳು ಹೊರಗೆ ಬರುತ್ತದೆ ಎಂದು ತಿಳಿಸಿದರು.

    ಇನ್ನೂ ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿ, ಫಲಿತಾಂಶದಿಂದ ನಮ್ಮ ಮೇಲೆ, ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಹಿಂದೆ ನಮ್ಮ ಸರ್ಕಾರ ಇದ್ದಾಗ 18 ಉಪಚುನಾವಣೆ ಗೆದ್ದಿದ್ದೇವು. ನಂತರ ಸಾರ್ವತ್ರಿಕ ಚುನಾವಣೆ ಸೋತಿದ್ದೇವು. ಈ ಫಲಿತಾಂಶ ಕಾಂಗ್ರೆಸ್ ಅಕ್ರಮಗಳಿಗೆ ಕ್ಲೀನ್‌ಚಿಟ್ ಅಲ್ಲ. ಅದೇ ಬೇರೆ ಇದೇ ಬೇರೆ, ಉಪಚುನಾವಣೆ ಸ್ಥಳೀಯ ವಿಚಾರಗಳ ಮೇಲೆ ನಡೆದಿದೆ. ಇದು ರಾಜ್ಯದ ತೀರ್ಪಲ್ಲ. ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಸ್ಲಿಂ ವೋಟುಗಳು ಬರದೇ ಸೋಲಾಯ್ತು ಎಂಬ ನಿಖಿಲ್ ಹೇಳಿಕೆ ವಿಚಾರವಾಗಿ, ನಿಖಿಲ್ ಸತ್ಯವನ್ನೇ ಹೇಳಿದ್ದಾರೆ. ಬೂತ್‌ಗಳಲ್ಲಿ ಬೆರಳೆಣಿಕೆಯಷ್ಟು ಮುಸ್ಲಿಂ ಮತಗಳು ಜೆಡಿಎಸ್‌ಗೆ ಬಂದಿದೆ. ಆ ಸಮುದಾಯ ನಿಖಿಲ್‌ನನ್ನು ಸೋಲಿಸಲು ಮತ ಹಾಕಿಲ್ಲ. ಉಳಿದ ಸಮುದಾಯಗಳೂ ಒಟ್ಟಾಗಿ ಮತ ಚಲಾಯಿಸಿಲ್ಲ. ಮಹಾರಾಷ್ಟ್ರದಲ್ಲಿ ಆದಂತೆ ಒಟ್ಟಾಗಿ ಆಗಲಿಲ್ಲ. ಇಲ್ಲಿ ಮುಸ್ಲಿಂ ಸಮುದಾಯ ಒಟ್ಟಾಗಿ ಉಳಿದ ಸಮುದಾಯ ಒಟ್ಟಾಗಲಿಲ್ಲ. ಮುಸ್ಲಿಂ ಸಮುದಾಯದ ಥರ ಉಳಿದ ಸಮುದಾಯಗಳೂ ನಿಖಿಲ್ ಪರ ಒಟ್ಟಾಗಿ ನಿಲ್ಲಬೇಕಿತ್ತು ಎಂದು ಹೇಳಿದರು.ಇದನ್ನೂ ಓದಿ: ಸಂಸತ್‌ ಚಳಿಗಾಲದ ಅಧಿವೇಶನ – ಸುಗಮ ಕಲಾಪಕ್ಕೆ ವಿಪಕ್ಷಗಳಿಗೆ ಮೋದಿ ಮನವಿ

  • ವಕ್ಫ್‌ ಪ್ರತಿಭಟನೆ ನಡೆಯುವ ಮುನ್ನವೇ ಬಾಗಲಕೋಟೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

    ವಕ್ಫ್‌ ಪ್ರತಿಭಟನೆ ನಡೆಯುವ ಮುನ್ನವೇ ಬಾಗಲಕೋಟೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

    ಬಾಗಲಕೋಟೆ: ವಕ್ಫ್‌ ಬೋರ್ಡ್‌ (Waqf Board) ವಿರುದ್ಧದ ಪ್ರತಿಭಟನೆ ನಡೆಯುವ ಮುನ್ನವೇ ಬಾಗಲಕೋಟೆ ಬಿಜೆಪಿಯಲ್ಲಿ (Bagalkot BJP) ಭಿನ್ನಮತ ಸ್ಫೋಟಗೊಂಡಿದೆ.

    ಇಂದು ಕರ್ನಾಟಕ ಬಿಜೆಪಿ ರಾಜ್ಯವ್ಯಾಪಿ ವಕ್ಫ್ ವಿರುದ್ಧ  ನಮ್ಮ ಭೂಮಿ ನಮ್ಮ ಹಕ್ಕು ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನೆ ಆಗಮಿಸಿದ ಹಾಲಿ ಎಂಎಲ್‌ಸಿ ಪಿಹೆಚ್ ಪೂಜಾರ (MLC PH Pujar), ಮಾಜಿ ಎಂಎಲ್ ಎ ವೀರಣ್ಣ ಚರಂತಿಮಠ (Veeranna Charantimath) ಬೆಂಬಲಿಗರು ಬಿಜೆಪಿ ಕಾರ್ಯಾಲಯದಲ್ಲಿ ಪರಸ್ಪರ ವಾಗ್ವಾದ ನಡೆಸಿದ್ದಾರೆ.

    ಪಿಹೆಚ್ ಪೂಜಾರ ಬೆಂಬಲಿಗರು ಬಂದರೆ ನಾವು ಪ್ರತಿಭಟನೆಗೆ ಬರುವುದಿಲ್ಲ ವೀರಣ್ಣ ಚರಂತಿಮಠ ಬೆಂಬಲಿಗರು ಹೇಳಿದರೆ ನಾವು ಬಂದೇ ಬರುತ್ತೇವೆ ಎಂದು ಹಾಲಿ ಪರಿಷತ್‌ ಸದಸ್ಯ ಪಿ ಹೆಚ್ ಪೂಜಾರ ಬೆಂಬಲಿಗರು ಪಟ್ಟ ಹಿಡಿದಿದ್ದಾರೆ. ಇದನ್ನೂ ಓದಿ: ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಭಾರತೀಯ ನೌಕಾಪಡೆ ಜಲಾಂತರ್ಗಾಮಿ – ಇಬ್ಬರು ಮೀನುಗಾರರು ನಾಪತ್ತೆ

     

    ಎರಡು ಬಣಗಳ ನಡುವಿನ ತಿಕ್ಕಾಟ ಜೋರಾಗುತ್ತಿದ್ದಂತೆ ಗೊಂದಲ ಸರಿಪಡಿಸಲು ಬಿಜೆಪಿ ಮುಖಂಡರ ಕಚೇರಿಯಲ್ಲಿ ಸಭೆ ನಡೆಸಿದರು. ಎರಡು ಬಣಗಳ ಜೊತೆ ಮಾತನಾಡಿದರೂ ಯಾವುದೇ ಫಲ ಸಿಗಲಿಲ್ಲ.

    ಅಂತಿಮವಾಗಿ ಬಾಗಲೋಟೆಯ ಡಿಸಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ವೀರಣ್ಣ ಚರಂತಿಮಠ ಬೆಂಬಲಿಗರು ಭಾಗವಹಿಸಿದರೆ ಪಿ ಹೆಚ್ ಪೂಜಾರ ಬೆಂಬಲಿಗರು ಬಿಜೆಪಿ ಕಚೇರಿಯಲ್ಲೇ ಉಳಿದರು.

     

  • ಅಪ್ಪ, ಮಕ್ಕಳು ಒಬ್ಬೊರನ್ನ ಕೈ ಬಿಡ್ತಾರೆ, ಇದೇ ದಂಧೆ ಮಾಡ್ತಾರೆ – ಮತ್ತೆ ಸಿಡಿದ ಯತ್ನಾಳ್‌

    ಅಪ್ಪ, ಮಕ್ಕಳು ಒಬ್ಬೊರನ್ನ ಕೈ ಬಿಡ್ತಾರೆ, ಇದೇ ದಂಧೆ ಮಾಡ್ತಾರೆ – ಮತ್ತೆ ಸಿಡಿದ ಯತ್ನಾಳ್‌

    ಹುಬ್ಬಳ್ಳಿ: ಅಪ್ಪ-ಮಕ್ಕಳಿಬ್ಬರು ಒಬ್ಬೊರನ್ನ ಕೈ ಬಿಡ್ತಾರೆ, ಇದೇ ದಂಧೆ ಮಾಡ್ತಾರೆ. ವಕ್ಫ್ ಬೋರ್ಡ್ ಬಗ್ಗೆ ಕಾಳಜಿ ಇಲ್ಲ. ಮುಡಾ, ವಾಲ್ಮೀಕಿ ಹಗರಣಗಳ ಬಗ್ಗೆ ಕಾಳಜಿ ಇಲ್ಲ. ಅವರ ಕಾಳಜಿ ಸಿಎಂ ಹೇಗೆ ಆಗಬೇಕು? ಅಪ್ಪನ ಹಾಗೇ ಹೇಗೆ ಲೂಟಿ ಮಾಡಬೇಕು ಅಂತ ಅಷ್ಟೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಮತ್ತೊಮ್ಮೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗುಡುಗಿದ್ದಾರೆ.

    ಹುಬ್ಬಳ್ಳಿಯಲ್ಲಿ ಜನ ಜಾಗೃತಿ ತಂಡದಲ್ಲಿ ಪ್ರತಾಪ್ ಸಿಂಹ ಕೈ ಬಿಟ್ಟ ವಿಚಾರವಾಗಿ ಮಾತನಾಡಿದ ಅವರು, ಈ ತಿಂಗಳ 25 ರಿಂದ ಡಿ.25 ರ ತನಕ ಜನ ಜಾಗೃತಿ ಮಾಡುತ್ತೇವೆ.

    ನಮ್ಮನ್ನು ನೋಡಿ ಅವರದ್ದು ಮೂರು ತಂಡ ಮಾಡಿದ್ದಾರೆ. ಅದಕ್ಕೆ ಡೆಟ್ ಇಲ್ಲ ಏನು ಇಲ್ಲ ಅವ್ವ-ಇಲ್ಲ ಅಪ್ಪ ಇಲ್ಲ. ಯತ್ನಾಳ್ ಮಾಡಿದ್ದಾರೆ ಅಂತ ಅವರದ್ದು ಒಂದು ಟೀಮ್ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ 2,021 ಬಿಪಿಎಲ್ ಕಾರ್ಡುಗಳು ಎಪಿಎಲ್‌ಗೆ ಮಾರ್ಪಾಡು

    ಮಾಜಿ ಸಚಿವ ರೇಣುಕಾಚಾರ್ಯ ಕುರಿತು ಪ್ರಶ್ನೆ ಮಾಡಿದಕ್ಕೆ, ಅಂತವನ ಹೆಸರು ಯಾಕೆ ತೆಗೆದುಕೊಳ್ಳತ್ತಿರಿ. ಒಳ್ಳೆಯ ರಾಜಕಾರಣಿಗಳ ಸಂದರ್ಶನ ಮಾಡಿ ಹಾದಿ, ಬಿದಿ ಹಂದಿ, ಪಂದಿಗೆಲ್ಲಾ ಯಾಕೆ ಮಾತನಾಡುತ್ತಿರಿ? ಇಂತದಕ್ಕೆಲ್ಲಾ  ಪ್ರತಿಕ್ರಿಯೆ ನೀಡೋದಿಲ್ಲಾ ಎಂದು ಕಿಡಿಕಾರಿದರು.

    ಕುದುರೆ ವ್ಯಾಪಾರದ ಬಗ್ಗೆ ವಿಜಯೇಂದ್ರ ಮತ್ತು ಡಿಕೆ ಶಿವಕುಮಾರ್‌ಗೆ ಮಾತ್ರ ಗೊತ್ತು. ಯಾರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳಲಿ. ಜವಾಬ್ದಾರಿ ಹುದ್ದೆಯಲ್ಲಿ ಇದ್ದವರು ಬೇಕಾಬಿಟ್ಟಿಯಾಗಿ ಮಾತನಾಡಬಾರದು. ಹಾಗೆ ಮಾತನಾಡುವುದಕ್ಕೆ ಸಿಎಂ ಬಳಿ ಏನು ಸಾಕ್ಷಿಯಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಚಿವ ಕೆ.ಜೆ ಜಾರ್ಜ್ ಪುತ್ರನ ಅರಣ್ಯದೊಳಗಿನ ಜಮೀನಿಗೆ ದಾರಿ ಬಂದ್‌ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

    ಕುದುರೆ ವ್ಯಾಪಾರದ ಬಗ್ಗೆ ಸಿಎಂ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯಿಂದ ಯಾರು 50 ಕೋಟಿ ರೂ. ಕೋಡ್ತಾರೆ ಹಾಗಿದ್ರೆ ನಿಮ್ಮ ಗುಪ್ತಚರ ಇಲಾಖೆಯ ಅಧಿಕಾರಗಳು ಏನು ಮಾಡುತ್ತಿದ್ದಾರೆ. ಇದನ್ನು ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ ದೇವ್ರಾಣೆ ಮಾಡಿ ಹೇಳುತ್ತೇವೆ ಆಪರೇಷನ್ ನಮಗೆ ಅವಶ್ಯಕತೆ ಇಲ್ಲ. ವಿರೋಧ ಪಕ್ಷದಲ್ಲೆ ಕೂರುತ್ತೆವೆ. ಐವತ್ತು ಆರವತ್ತು ಜನ ತಂದು ನಾವು ಸರ್ಕಾರ ಮಾಡಿದ್ರೆ ನಾವು ಅವರಪ್ಪನಿಗಿಂತ ಭ್ರಷ್ಟರಾಗುತ್ತೆವೆ. ನಾವು ಬೇಕಿದ್ದರೆ ಚುನಾವಣೆಗೆ ಹೋಗುತ್ತೇವೆ. ಒಂದು ವೇಳೆ ಬಿಜೆಪಿಯಲ್ಲಿ ಆಪರೇಷನ್ ಮಾಡುತ್ತಿದ್ದರೂ ಅದಕ್ಕೆ ಬೆಂಬಲ ನೀಡುವುದಿಲ್ಲ. ಜನರ ಮತ್ತು ವಾಲ್ಮೀಕಿ ಹಣ ಲೂಟಿ ಮಾಡಿರುವ ಅಯ್ಯೋಗರ ಜೊತೆಗೆ ನಾವು ಸರ್ಕಾರ ಮಾಡುವುದಿಲ್ಲ ಎಂದಿದ್ದಾರೆ.

    ಜಮೀರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ವೈಯಕ್ತಿಕ ಟೇಕೆ ಮಾಡಬಾರದು ಯಾರ ಬಣ್ಣ ಕೆಂಪೋ ಯಾರ ಬಣ್ಣ ಕಪ್ಪೋ, ರಾಜಕೀಯವಾಗಿ ಎದುರಿಸಿ. ಧೈರ್ಯ ಇದ್ರೆ ಹೋಗಿ ಜನರ ಮುಂದೆ ಹೇಳಬೇಕು. ಕರಿ, ಬಳಿ ಮಾತನಾಡೋದು ಸರಿಯಲ್ಲಾ, ವರ್ಣ ಜಾತಿ ನಿಂದನೆ ಮಾಡಬಾರದು ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ದೂರು – ನಡ್ಡಾ, ಖರ್ಗೆಯಿಂದ ಸ್ಪಷ್ಟನೆ ಕೇಳಿದ ಚುನಾವಣಾ ಆಯೋಗ

  • ಮುಸ್ಲಿಂ ಸಮುದಾಯದ ಕುರಿತು ಪ್ರಚೋದನಕಾರಿ ಹೇಳಿಕೆ – ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್

    ಮುಸ್ಲಿಂ ಸಮುದಾಯದ ಕುರಿತು ಪ್ರಚೋದನಕಾರಿ ಹೇಳಿಕೆ – ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್

    ಶಿವಮೊಗ್ಗ: ಸುದ್ದಿಗೋಷ್ಠಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (K.S Eshwarappa) ವಿರುದ್ಧ ಜಯನಗರ ಪೊಲೀಸ್ (Police) ಠಾಣೆಯಲ್ಲಿ ಸುಮೋಟೋ ಕೇಸ್ (ಸ್ವಯಂಪ್ರೇರಿತ ಪ್ರಕರಣ) ದಾಖಲಾಗಿದೆ.

    ರೈತರಿಗೆ ವಕ್ಫ್ ಬೋರ್ಡ್ (Waqf Board) ನೋಟಿಸ್ ನೀಡಿದ್ದ ವಿವಾದದ ಬಗ್ಗೆ ನಗರದಲ್ಲಿ (Shivamogga) ನ.13 ರಂದು ಅವರು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ, ಮುಸ್ಲಿಮರ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದರು. ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳಬೇಕಾಗುತ್ತದೆ. ಹೇಗೆ ಆದರೆ ಮುಸಲ್ಮಾನರಿಗೆ ರಸ್ತೆಯಲ್ಲಿ ಹುಡುಕಿ ಹುಡುಕಿ ಹೊಡೆಯುತ್ತಾರೆ. ಮುಸ್ಲಿಮರನ್ನು ಕೊಲ್ಲುವಂತಹ ದಿನ ಬರುತ್ತದೆ ಎಂದು ಹೇಳಿದ್ದರು.

    ಇದೇ ವೇಳೆ, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ವಿಚಾರವಾಗಿ ಮಾತನಾಡಿ, ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ಹಿಂದೂಸ್ಥಾನ ಏನು ಪಾಕಿಸ್ತಾನ ಮಾಡಲು ಹೊರಟ್ಟಿದ್ದೀರಾ? ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುತ್ತಾರೆ. ಬಾಂಗ್ಲಾದೇಶದಲ್ಲಿ ಹಲ್ಲೆ, ಕೊಲೆ ಆಯ್ತು. ಬಾಂಗ್ಲಾದೇಶದ ಪ್ರಧಾನಿಗೆ ಭಾರತದಲ್ಲಿ ರಕ್ಷಣೆ ಕೊಟ್ಟು ಇಟ್ಟಿದ್ದೇವೆ. ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆಯಾಯ್ತು. ಭಾರತದಲ್ಲಿಯೂ ಮುಸ್ಲಿಮರು ಈ ರೀತಿ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದ್ದರು.

    ಕಾಂಗ್ರೆಸ್‍ನವರು ವೋಟಿಗಾಗಿ ಭಾರತವನ್ನೇ ಮತಾಂತರ ಮಾಡಲು ಹೊರಟ್ಟಿದ್ದಾರೆ. ನೇರಾ ನೇರ ಖಂಡನೆ ಮಾಡಬೇಕು. ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ಅವರ ಮೀಸಲಾತಿ ಕಿತ್ತುಕೊಳ್ಳಲು ಹೊರಟ್ಟಿದ್ದಾರೆ. ಹಿಂದೂ ಸಮಾಜ ದಂಗೆ ಎದ್ದರೆ ಈ ಸರ್ಕಾರ, ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದರು.

    ಅವರ ಈ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ ಎಂಬ ಕಾರಣದಿಂದ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

  • Waqf Board Case: ಎಎಪಿ ಶಾಸಕ ಅಮಾನತುಲ್ಲಾ ಖಾನ್‌ಗೆ ಜಾಮೀನು

    Waqf Board Case: ಎಎಪಿ ಶಾಸಕ ಅಮಾನತುಲ್ಲಾ ಖಾನ್‌ಗೆ ಜಾಮೀನು

    ನವದೆಹಲಿ: ದೆಹಲಿ ವಕ್ಫ್ ಬೋರ್ಡ್ (Delhi Waqf Board) ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ (Amanatullah Khan) ಅವರನ್ನು ಬಿಡುಗಡೆ ಮಾಡುವಂತೆ ರೋಸ್ ಅವೆನ್ಯೂ ನ್ಯಾಯಾಲಯವು ಆದೇಶಿಸಿದೆ. ಅವರ ವಿರುದ್ಧ ಸಲ್ಲಿಸಲಾದ ಆರೋಪಪಟ್ಟಿಯನ್ನು ಸ್ವೀಕರಿಸಲು ನಿರಾಕರಿಸಿದೆ.

    ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಖಾನ್ ವಿರುದ್ಧ ಮುಂದುವರೆಯಲು ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಯಾವುದೇ ಅನುಮತಿ ಇಲ್ಲ. ಆದ್ದರಿಂದ ಚಾರ್ಜ್‌ಶೀಟ್ ನಿರಾಕರಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಒಂದು ಲಕ್ಷ ರೂ. ಜಾಮೀನು ಬಾಂಡ್ ಮತ್ತು ಅಂತಹ ಮೊತ್ತದ ಒಂದು ಶ್ಯೂರಿಟಿಯ ಮೇಲೆ ಖಾನ್ ಅವರನ್ನು ತಕ್ಷಣವೇ ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. ಇದನ್ನೂ ಓದಿ: ನಕ್ಸಲರು ಊಟ ಮಾಡಿದ್ದ ಮನೆಗೆ ಎಎನ್‍ಎಫ್ ತಂಡ ಭೇಟಿ – ಚುರುಕುಗೊಂಡ ಕೂಂಬಿಂಗ್

    ಅಮಾನತುಲ್ಲಾ ಖಾನ್ ಅವರು ದೆಹಲಿ ವಕ್ಫ್ ಬೋರ್ಡ್‌ನಲ್ಲಿ ಭ್ರಷ್ಟಾಚಾರದ ಮೂಲಕ ಗಳಿಸಿದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಇಡಿ ಅಕ್ಟೋಬರ್ 29 ರಂದು 110 ಪುಟಗಳ ಮೊದಲ ಪೂರಕ ಪ್ರಾಸಿಕ್ಯೂಷನ್ ದೂರನ್ನು (ಇಡಿ ಚಾರ್ಜ್‌ಶೀಟ್‌ಗೆ ಸಮನಾಗಿರುತ್ತದೆ) ಸಲ್ಲಿಸಿತ್ತು. ಚಾರ್ಜ್‌ಶೀಟ್‌ನಲ್ಲಿ ಮರಿಯಮ್ ಸಿದ್ದಿಕಿ ಎಂಬುವರನ್ನು ಹೆಸರಿಸಲಾಗಿತ್ತು. ಅವರು ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಇ.ಡಿ ಅವರನ್ನು ಬಂಧಿಸಿಲ್ಲ. ಸಿದ್ದಿಕಿ ವಿರುದ್ಧ ಮುಂದುವರಿಯಲು ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಆಕೆಯನ್ನು ಬಿಡುಗಡೆ ಮಾಡಿದೆ. ಅಮಾನತುಲ್ಲಾ ಖಾನ್ ಅವರನ್ನು ಸೆಪ್ಟಂಬರ್ 2ರಂದು ಅವರ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಇಡಿ ಬಂಧಿಸಿತ್ತು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಲ್ಲಿ ಭಾರತ ಗಮನಾರ್ಹ ಸಾಧನೆ – 24.2 GW ಸಾಮರ್ಥ್ಯ ವೃದ್ಧಿ: ಜೋಶಿ

  • ವಕ್ಫ್ ಬೋರ್ಡ್ ವಿರುದ್ಧ ತಿರುಗಿ ಬಿದ್ದ ಅಥಣಿಯ 60 ಮುಸ್ಲಿಂ ಕುಟುಂಬಗಳು

    ವಕ್ಫ್ ಬೋರ್ಡ್ ವಿರುದ್ಧ ತಿರುಗಿ ಬಿದ್ದ ಅಥಣಿಯ 60 ಮುಸ್ಲಿಂ ಕುಟುಂಬಗಳು

    – ನೋಟಿಸ್‌ ರದ್ದು ಪಡಿಸದೇ ಇದ್ದರೆ ಅಹೋರಾತ್ರಿ ಧರಣಿಯ ಎಚ್ಚರಿಕೆ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ (Athani) ತಾಲೂಕಿನ ಅನಂತಪುರ ಗ್ರಾಮದಲ್ಲಿ ವಕ್ಫ್ ಬೋರ್ಡ್ (Waqf Board) ವಿರುದ್ಧ ಈಗ ಮುಸ್ಲಿಂ ಸಮುದಾಯವೇ (Muslim Community) ತಿರುಗಿಬಿದ್ದಿದೆ.

    ಅನಂತಪುರ ಗ್ರಾಮದ ದರ್ಗಾದಲ್ಲಿ ಸಭೆ ಮಾಡಿದ ರೈತರು, ಕಾಗವಾಡ ಹಾಗೂ ಅಥಣಿ ಶಾಸಕರಿಗೆ ಬರುವ ನವೆಂಬರ್‌ 25ರ ಒಳಗಾಗಿ ಅನಂತಪುರ, ಬಳ್ಳಿಗೇರಿ ಗ್ರಾಮದ 60 ಕ್ಕೂ ಅಧಿಕ ಜನ ರೈತರ ಜಮೀನಿನ (Farmers Land) ಪಹಣಿಯಲ್ಲಿ ನೊಂದಣಿಯಾದ ವಕ್ಫ್‌ ಹೆಸರು ತೆರವುಗೊಳಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸಿ ಹೋರಾಟ ಮಾಡುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಬಳ್ಳಾರಿಯಲ್ಲೂ ವಕ್ಫ್ ವಿವಾದ – ರೈತರ ಪಿತ್ರಾರ್ಜಿತ ಆಸ್ತಿಗೆ ನೋಟಿಸ್‌

     

    60ಕ್ಕೂ ಹೆಚ್ಚು ಮುಸ್ಲಿಂ ಹಾಗೂ ಇನ್ನುಳಿದ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. 2018 ರಲ್ಲಿ ರೈತರ ಜಾಗದ ಪಹಣಿಯಲ್ಲಿ ಇದ್ದಕ್ಕಿದ್ದಂತೆ ವಕ್ಫ್ ಎಂದು ಸೇರ್ಪಡೆಯಾಗಿದೆ ಎಂದು ದೂರಿದ್ದಾರೆ. ವಕ್ಫ್ ಹೆಸರು ಸೇರ್ಪಡೆಯಿಂದ ಸಾಲ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರ ಯೋಜನೆಯಿಂದ ನಾವು ವಂಚಿತರಾಗಿದ್ದೇವೆ. ಆದಷ್ಟು ಬೇಗನೆ ಪಹಣಿಯಲ್ಲಿ ವಕ್ಫ್ ಹೆಸರು ತೆರವು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಇಲ್ಲಿಯವರೆಗೆ ತಹಶೀಲ್ದಾರ್ ಕಚೇರಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಅವಧಿಯಲ್ಲಿ ನೀಡಲಾದ ನೋಟಿಸ್ ಮರಳಿ ಪಡೆಯಲು ತಿಳಿಸಿದ್ದಾರೆ. ಆದರೆ ಈ ಹಿಂದೆ ನೋಟಿಸ್‌ ಬಂದಿರುವ ನಮ್ಮ ಪಾಡೇನು? ನಾವು ಯಾರನ್ನು ಕೇಳಬೇಕು? ನಮಗೆ ನ್ಯಾಯ ಕೊಡಿಸುವವರು ಯಾರು ಎಂದು ಪ್ರಶ್ನಿಸಿದರು.

    ಸಭೆಯಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಿನ ಅನೇಕ ಗ್ರಾಮಗಳ 60 ಕ್ಕೂ ಅಧಿಕ ಜನ ರೈತರು ಸಭೆ ಮಾಡಿ ನ. 25 ರವರೆಗೆ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಅವರಿಗೆ ಗಡುವು ನೀಡಿದ್ದಾರೆ. ಇಬ್ಬರು ಶಾಸಕರು ಸ್ಪಂದಿಸದೇ ಇದ್ದರೆ ಅಹೋರಾತ್ರಿ ಧರಣಿ ಮಾಡುವುದಾಗಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

     

  • ಐತಿಹಾಸಿಕ ಸೋಮೇಶ್ವರ ದೇವಸ್ಥಾನ ವಕ್ಫ್‌ಗೆ ಪರಭಾರೆ ಆರೋಪ; ವಕ್ಫ್ ಬೋರ್ಡ್, ಸರ್ಕಾರದ ವಿರುದ್ಧ ಪ್ರತಿಭಟನೆ

    ಐತಿಹಾಸಿಕ ಸೋಮೇಶ್ವರ ದೇವಸ್ಥಾನ ವಕ್ಫ್‌ಗೆ ಪರಭಾರೆ ಆರೋಪ; ವಕ್ಫ್ ಬೋರ್ಡ್, ಸರ್ಕಾರದ ವಿರುದ್ಧ ಪ್ರತಿಭಟನೆ

    ಗದಗ: ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ (Waqf Board) ಭೂ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ವಕ್ಫ್ ಬೋರ್ಡ್ ವಿರುದ್ಧ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ರೈತರು ಸೇರಿಕೊಂಡು ಗದಗ-ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು, ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

    6ನೇ ವಿಕ್ರಮಾದಿತ್ಯನ ಕಾಲದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ (Someshwara Temple) ಜಮೀನು ವಕ್ಫ್‌ಗೆ ಸೇರಿಸುವ ಹುನ್ನಾರ ನಡೆಸಿದ್ದಾರೆ. ಇದು ಸಂಸ್ಕೃತ ವಿಶ್ವವಿದ್ಯಾಲಯ ಕೇಂದ್ರವಾಗಿತ್ತು. ಕವಿ ಚಾಮರಸಾ ಬರೆದ ಪ್ರಭುಲಿಂಗಲೀಲೆ ಪುರಾಣ ಇದೇ ದೇವಸ್ಥಾನದಲ್ಲಿ ಬರೆದಿರುವ ಇತಿಹಾಸವಿದೆ. ಅಂತಹ ಐತಿಹಾಸಿಕ ದೇವಸ್ಥಾನದ ಭೂಮಿಯನ್ನು ವಕ್ಫ್‌ಗೆ ಪರಭಾರೆ ಮಾಡಲು ಹೊರಟಿರುವುದು ಖಂಡನೀಯ. ಇದನ್ನೂ ಓದಿ: ಮಹಿಳೆಯರಿಗೆ ಫ್ರೀ ಬಸ್‌ ಕೊಟ್ಟರು, ಪಾಪ ಪುರುಷರಿಗೆ ಏನ್‌ ಮಾಡಿದ್ರು? – ಸರ್ಕಾರಕ್ಕೆ ನಟಿ ತಾರಾ ಪ್ರಶ್ನೆ

    ಗೆಜೆಟ್‌ನಲ್ಲಿ ಸೋಮೇಶ್ವರ ದೇವಸ್ಥಾನಕ್ಕೆ ಸೇರಿದ ಸರ್ವೆ ನಂ.562 ರ 12 ಎಕರೆ 22 ಗುಂಟೆ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ. ಈ ಎಲ್ಲದರಿಂದ ಆಕ್ರೋಶಕ್ಕೆ ಒಳಗಾದ ಜನರು ರಾಜ್ಯ ಹೆದ್ದಾರಿ ತಡೆದು ವಕ್ಫ್ ಬೋರ್ಡ್, ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹಾಗೂ ರಾಜ್ಯ ಸರ್ಕಾರದ ವಿರುಧ್ಧ ಧಿಕ್ಕಾರ ಕೂಗಿದರು. ನಡು ರಸ್ತೆಯಲ್ಲೇ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ – ತಾಯಿ, ಮಗಳಿಗೆ ಗಂಭೀರ ಗಾಯ

    ಗಂಟೆ ಗಟ್ಟಲೆ ರಸ್ತೆ ತಡೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತವು. ಕೆಲಕಾಲ ವಾಹನ ಸವಾರರು ಪರದಾಡಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಬಂದ ಗದಗ ತಹಶೀಲ್ದಾರ್‌ಗೆ ಸ್ಥಳಿಯರು ತರಾಟೆಗೆ ತೆಗೆದುಕೊಂಡರು. ಸೋಮೇಶ್ವರ ದೇವಸ್ಥಾನದ ಜಾಗ ವಕ್ಫ್ ಹೇಗೆ ಆಯಿತು? ಶೀಘ್ರದಲ್ಲೇ ಇದನ್ನು ರದ್ದು ಮಾಡದಿದ್ದರೆ ಉಗ್ರವಾದ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬೀದಿ ನಾಯಿ ಜೊತೆ ಅಸಭ್ಯ ವರ್ತನೆ – ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

    ಈ ವೇಳೆ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಧರ್ ಕುಲಕರ್ಣಿ ಸೇರಿದಂತೆ ಅನೇಕ ಸಂಘಟಿಕರು, ಸೋಮೇಶ್ವರ ದೇವಸ್ಥಾನ ಆಡಳಿತ ಮಂಡಳಿಯವರು, ರೈತರು ಉಪಸ್ಥಿತರಿದ್ದರು. ಇದನ್ನೂ ಓದಿ: ಸೆಟ್ಟೇರಿತು ರಾಘು ಶಿವಮೊಗ್ಗ ನಿರ್ದೇಶನದ ಹೊಸ ಸಿನಿಮಾ-‘ದಿ ಟಾಸ್ಕ್’ನಲ್ಲಿ ನವಪ್ರತಿಭೆಗಳ ಸಂಗಮ

  • ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ – ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಸ್ವಾಮೀಜಿ ವಿರುದ್ಧ ಎಫ್‌ಐಆರ್

    ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ – ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಸ್ವಾಮೀಜಿ ವಿರುದ್ಧ ಎಫ್‌ಐಆರ್

    – ವಕ್ಫ್ ಪ್ರತಿಭಟನೆಯಲ್ಲಿ ಮಾತನಾಡಿದ್ದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    ಗುಲ್ಬರ್ಗಾ: ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ ಎಂದು ವಕ್ಫ್ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ (Marularadhya Swamiji) ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.ಇದನ್ನೂ ಓದಿ: ಬೆಂಗಳೂರಲ್ಲಿ ಹೊಸ ಮನೆಗಳಿಗೆ ‘ಗ್ರೇ ವಾಟರ್ ರೀಸೈಕ್ಲಿಂಗ್’ ಕಡ್ಡಾಯಕ್ಕೆ ಜಲಮಂಡಳಿ ಚಿಂತನೆ – ಏನಿದು ಯೋಜನೆ?

    ರಾಜ್ಯಾದ್ಯಂತ ವಕ್ಫ್ ನೋಟಿಸ್ (Waqf Notice) ವಿವಾದ ಬುಗಿಲೆದ್ದಿತ್ತು. ಪರಿಣಾಮ ಜಿಲ್ಲೆಯಲ್ಲಿ ವಕ್ಫ್ ಹಠಾವೋ ದೇಶ ಬಚಾವೋ ಎಂದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ಪೊಲೀಸರ ಮುಂದೆಯೇ, ‘ಜೀವ ಕೊಡುವುದಕ್ಕೂ, ಜೀವ ತೆಗೆಯುವುದಕ್ಕೂ ಸಿದ್ಧರಿದ್ದೀವಿ ಹುಷಾರ್.. ಯುವಕರ ಮನೆಯಲ್ಲಿ ತಲ್ವಾರ್ ಇವೆ. ಎಲ್ಲರ ಮನೆಯಲ್ಲಿ ಎಲ್ಲ ಇದೆ. ಯಾರ್ ಬರುತ್ತಾರೆ ಅವರನ್ನು ತಲ್ವಾರ್‌ನಿಂದ ಕಡಿಯುತ್ತೇವೆ. ಇನ್ಮುಂದೆ ನಾವು ಮಕ್ಕಳ ಕೈಯಲ್ಲಿ ಪೆನ್ನು ಕೊಡುವುದರ ಬದಲು ತಲ್ವಾರ್ ಕೊಡೋಣ’ ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದರು.

    ಸ್ವಾಮೀಜಿಯ ಹೇಳಿಕೆಯ ಆಧಾರದ ಮೇಲೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಕಾಯಿದೆ 299, 353/2 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶವಿಟ್ಟುಕೊಂಡಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ: ಬೆಂಗಳೂರಿಗರಿಗೆ ನೇಪಾಳಿ ಕಳ್ಳರ ಕಂಟಕ – ಮನೆಗೆಲಸ, ಸೆಕ್ಯೂರಿಟಿ ರೂಪದಲ್ಲಿ ಎಂಟ್ರಿ

  • ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು: ಸಿ.ಟಿ.ರವಿ

    ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು: ಸಿ.ಟಿ.ರವಿ

    – ವಕ್ಫ್ ಬೋರ್ಡ್ ಅನ್ನೋದು ಆಧುನಿಕ ಭಸ್ಮಾಸುರ ಎಂದ ಎಂಎಲ್‌ಸಿ

    ಚಿಕ್ಕಮಗಳೂರು: ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದು ದತ್ತಮಾಲಾ ಧರ್ಮ ಸಭೆಯಲ್ಲಿ ವಕ್ಫ್ ವಿರುದ್ಧ ಸಿ.ಟಿ.ರವಿ ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ದತ್ತಮಾಲಾ ಧರ್ಮ ಸಭೆಯಲ್ಲಿ ವಕ್ಫ್ ವಿರುದ್ಧ ಮಾತನಾಡಿದ ಅವರು, ವಕ್ಫ್ ಬೋರ್ಡ್ ಅನ್ನೋದು ಆಧುನಿಕ ಭಸ್ಮಾಸುರ. ವೋಟಿನ ಆಸೆಗೆ ಅವರಿಗೆ ನಮ್ಮವರೇ ವರ ಕೊಟ್ಟರು. ಹಿಂದಿನ ಭಸ್ಮಾಸುರನಂತೆ ಇಂದಿನ ಭಸ್ಮಾಸುರ ಎಲ್ಲರ ತಲೆ ಮೇಲೆ ಕೈ ಇಡಲು ಬಂದಿದ್ದಾನೆ. ಭಗವಂತ ಮತ್ತೊಮ್ಮೆ ಮೋಹಿನಿ ರೂಪದಲ್ಲಿ ಭಸ್ಮಾಸುರನನ್ನ ನಾಶ ಮಾಡಬೇಕಾದ ಅವಶ್ಯಕತೆ ಇದೆ. ಆ ಭಸ್ಮಾಸುರ ವರ ಕೊಟ್ಟ ಶಿವನನ್ನೇ ಅಟ್ಟಿಸಿಕೊಂಡು ಹೋದನಂತೆ. ಆಗ ವಿಷ್ಣು ಮೋಹಿನಿ ರೂಪ ತಾಳಿ ಭಸ್ಮಾಸುರನನ್ನ ನಾಶ ಮಾಡಿದ ಕಥೆ ಕೇಳಿದ್ದೇವೆ. ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ಮಂಡ್ಯ| ನಿಷೇಧಾಜ್ಞೆ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ

    ವಕ್ಫ್ ಬೋರ್ಡಿಗೆ (Waqf Board) ಪರಮಾಧಿಕಾರವಿದೆ, ದೇಶ-ಜಗತ್ತಿನ ಯಾವ ಆಸ್ತಿಯನ್ನಾದರೂ ನಮ್ಮದು ಅನ್ನಬಹುದು. ಒಮ್ಮೆ ಘೋಷಣೆ ಮಾಡಿಕೊಂಡರೆ ಅಲ್ಲಾಗೆ ಸೇರಿದ್ದು ಅಂತಾರೆ. ಬಲಿ ಚಕ್ರವರ್ತಿ ವಿಷ್ಣುವಿನ ಅವತಾರದ ವಾಮನನಿಗೆ ಆ ಕಾಲದಲ್ಲೇ ದಾನ ಕೊಟ್ಟಿದ್ದಾನೆ. ಮತ್ತೆ ದಾನ ಕೊಡಬೇಕು ಅಂದರೆ ವಿಷ್ಣುವಿನ ಅವತಾರದ ವಾಮನನೇ ಬಂದು ಕೊಡಬೇಕು. ಇಡೀ ಭೂಮಂಡಲವೇ ಮಹಾ ವಿಷ್ಣುಗೆ ಸೇರಿದ್ದು. ಮಹಾವಿಷ್ಣು ಎಲ್ಲಿವರೆಗೆ ಇನ್ನೊಬ್ಬರಿಗೆ ಭೂಮಿ ಕೊಡಲ್ವೋ ಅಲ್ಲಿವರೆಗೂ ಅದು ಸನಾತನ ಧರ್ಮೀಯರದ್ದು. ಸನಾತನ ಧರ್ಮದಿಂದ ದೂರ ಹೋದವರಿಗೆ ಭೂಮಿ ಮೇಲೆ ಬದುಕುವ ಹಕ್ಕಿದೆ ಅಷ್ಟೆ. ದಶಾವತಾರ, ದೇವನೊಬ್ಬ ನಾಮ ಹಲವು, ಬಹುದೇವತಾರಾಧನೆ ಬಗ್ಗೆ ನಂಬಿಕೆ ಇಟ್ಟಿದ್ದಾರೋ ಅವರಿಗೆ ಮಾತ್ರ ವಾರಸುದಾರಿಕೆ ಇದೆ ಎಂದು ಹೇಳಿದರು. ಇದನ್ನೂ ಓದಿ: 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟ ಡೆಲ್ಲಿ ಗಣೇಶ್ ನಿಧನ