ಕಾರವಾರ: 2017ರಲ್ಲಿ ನಡೆದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಕರಾವಳಿಯಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿ ಬರಲು ಕಾರಣವಾದ ಪರೇಶ್ ಮೇಸ್ತಾ ಘಟನೆ ಬಿಜೆಪಿಗೆ ರಾಜ್ಯದಲ್ಲಿ ಅತೀ ಹೆಚ್ಚು ಮತ ಬರಲು ಕಾರಣವಾಗಿತ್ತು.
ಹಿಂದುತ್ವದ ಹೆಸರು ಹೇಳಿಕೊಂಡು ಪರೇಶ್ ಮೇಸ್ತಾ ಸಾವಿಗೆ ಕಾರಣರಾದವರನ್ನು ಶಿಕ್ಷಿಸುತ್ತೇವೆ ಎಂದು ಹೇಳಿಕೊಂಡಿದ್ದ ಬಿಜೆಪಿ ಇದೀಗ ಪರೇಶ್ ಮೇಸ್ತಾ ಪ್ರಕರಣದಲ್ಲಿ ಆರೋಪಿಯಾದವನಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನವನ್ನು ನೀಡಿದೆ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಅಜಾದ್ ಅಣ್ಣಿಗೇರಿಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಇದೀಗ ಜಿಲ್ಲೆಯಲ್ಲಿ ಬಿಜೆಪಿ ಧೋರಣೆಗೆ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯರಿಂದ ನಾವು ರಾಷ್ಟ್ರಭಕ್ತಿ ಪಾಠ ಕಲಿಯೋ ಅವಶ್ಯಕತೆ ಇಲ್ಲ: ಆರಗ ಜ್ಞಾನೇಂದ್ರ
ಸಚಿವೆ ಶಶಿಕಲಾ ಜೊಲ್ಲೆಯಿಂದ ಆಯ್ಕೆ:
ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಆರೋಪಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಕುದ್ದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅಜಾದ್ ಅಣ್ಣಿಗೇರಿಯನ್ನು ಆಯ್ಕೆ ಮಾಡಿದ್ದಾರೆ. ಆಯ್ಕೆ ಬಳಿಕ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹಾಗಾಗಿ ವಕ್ಫ್ ಬೋರ್ಡ್ ಪದಾಧಿಕಾರಿಗಳನ್ನು ಬದಲಿಸುವಂತೆ ಸಚಿವರಿಗೆ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮೊಹಮ್ಮದ್ ಅನೀಸ್ ಪತ್ರ ಬರೆದಿದ್ದು ಈತನನ್ನು ಆಯ್ಕೆ ಮಾಡಿದ್ದರಿಂದ ಬಿಜೆಪಿ ಮುಖಂಡರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಾಗಾಗಿ ಜಿಲ್ಲಾ ಉಪಾಧ್ಯಕ್ಷ ಸ್ಥಾನವನ್ನು ಬದಲಿಸುವಂತೆ ಕೋರಿಕೊಂಡಿದ್ದಾರೆ. ಇದನ್ನೂ ಓದಿ: ಈಗ ಚುನಾವಣೆ ನಡೆದರೆ ಎನ್‌ಡಿಎಗೆ 286, ಕರ್ನಾಟಕದಲ್ಲಿ ಬಿಜೆಪಿಗೆ 13 ಸ್ಥಾನ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಈದ್ಗಾ ವಿವಾದದ ಬಗ್ಗೆ ವರ್ಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿಯನ್ನು ಬಿಬಿಎಂಪಿ ವಜಾ ಮಾಡಿದ್ದು, ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ ಎಂದು ಜಂಟಿ ಆಯುಕ್ತ ಶ್ರೀನಿವಾಸ್ ಆದೇಶ ಹೊರಡಿಸಿದ್ದಾರೆ.
ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಈ ಹಿಂದೆ ಚಾಮರಾಜಪೇಟೆ ಆಟದ ಮೈದಾನವನ್ನು ವರ್ಕ್ಫ್ ಬೋರ್ಡ್ ಹೆಸರಿಗೆ ಖಾತೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಈ ಅರ್ಜಿಯನ್ನು ವಜಾಗೊಳಿಸಿದ್ದು, ಬಿಬಿಎಂಪಿ ದಾಖಲೆಗಳಲ್ಲಿ ಈ ಆಸ್ತಿಯನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಆಸ್ತಿಯೆಂದು ನಮೂದಿಸಲು ಸೂಚನೆ ನೀಡಿದೆ. ವರ್ಕ್ಫ್ ಬೋರ್ಡ್ ಆಸ್ತಿಯ ಬಗ್ಗೆ ಹಕ್ಕು ಸ್ಥಾಪಿಸಬೇಕಿದ್ದಲ್ಲಿ ಕಂದಾಯ ಇಲಾಖೆ ಬಳಿ ವ್ಯವಹರಿಸಬೇಕು ಎಂದು ತಿಳಿಸಿದರು.
ಈದ್ಗಾ ಮೈದಾನಕ್ಕೂ ವಕ್ಫ್ ಬೋರ್ಡ್‌ಗೂ ಯಾವುದೇ ಸಂಬಂಧ ಇಲ್ಲ. ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಸ್ಪಷ್ಟಪಡಿಸಿದ ಅವರು, ವಕ್ಫ್ ಬೋರ್ಡ್ ಹಕ್ಕು ಸಾಧಿಸಲು ಯಾವುದೇ ದಾಖಲೆ ಇಲ್ಲ. ಇದರಿಂದಾಗಿ ಈ ಆಟದ ಮೈದಾನವನ್ನು ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಎಂದು ನಮೂದಿಸಲು ಬಿಬಿಎಂಪಿ ಸೂಚನೆ ನೀಡಿದೆ. ಇಡೀ ಆಟದ ಮೈದಾನ ಇನ್ಮುಂದೆ ಕಂದಾಯ ಇಲಾಖೆಗೆ ಸೇರಿದ ಆಸ್ತಿಯಾಗಿದ್ದು, ದಾಖಲೆಗಳನ್ನು ಪರಿಶೀಲಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಜಾಗತಿಕ ಹೂಡಿಕೆದಾರರ ಸಮಾವೇಶ: ಟೋಕಿಯೋ ಕನ್ನಡ ಬಳಗಕ್ಕೆ ನಿರಾಣಿ ಆಹ್ವಾನ
ಈದ್ಗಾ ಮೈದಾನ ಕಂದಾಯ ಇಲಾಖೆಯ ಸ್ವತ್ತು ಎಂದು ಆದೇಶ ಹಿನ್ನೆಲೆಯಲ್ಲಿ ಚಾಮರಾಜಪೇಟೆ ನಾಗರಿಕರ ವೇದಿಕೆಯಿಂದ ಜನರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು. ಈ ವಿಚಾರವಾಗಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಸಂಚಾಲಕ ಮಾತನಾಡಿ, ಚಾಮರಾಜಪೇಟೆಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಸರ್ಕಾರದ ಆದೇಶ ಹರ್ಷ ತಂದಿದೆ. ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಈದ್ಗಾ ಮೈದಾನದಲ್ಲಿ ಆಚರಣೆ ಮಾಡಲಾಗುತ್ತೆ. ಈ ಆದೇಶ ಚಾಮರಾಜಪೇಟೆಯ ಜನರ ಗೆಲುವಾಗಿದೆ ಎಂದ ಅವರು, 10ನೇ ನಾಲ್ವಡಿ ಕೃಷ್ಣರಾಜ ಒಡೆಯರ ಆಟದ ಮೈದಾನ ಎಂದು ಹೆಸರು ಇಡುವಂತೆ ಒತ್ತಾಯ ಮಾಡಿದರು. ಇದನ್ನೂ ಓದಿ: ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆ
Live Tv
[brid partner=56869869 player=32851 video=960834 autoplay=true]
ಧಾರವಾಡ: ಭೋಗಸ್ ಬೋರ್ಡ್ ಆಗಿರುವ ವಕ್ಫ್ ಬೋರ್ಡ್ ಅನ್ನು ರದ್ದು ಮಾಡಬೇಕು. ಮೊದಲು ಮದರಸಾಗಳಲ್ಲಿ ಓದುತ್ತಿರುವವರನ್ನು ಹೊರಗಾಕಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಅಲ್ಲದೆ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ದೇವಸ್ಥಾನ ಅನ್ನೋ ದಾಖಲೆ ಹೊರಬಿದ್ದಿದೆ. ಅದು ದೇವಸ್ಥಾನ ಅನ್ನೋದಕ್ಕೆ ಸಾಕ್ಷಿಯಾಗಿ ದಾಖಲೆ ದೊರೆತಿದೆ. ಅಲ್ಲಿ ನಾಗರ ಚಿಹ್ನೆ, ಕಲ್ಯಾಣಿ, ಗರುಡ ಚಿಹ್ನೆಯೂ ಇದೆ. ಅದರ ಜೊತೆಗೆ ಟಿಪ್ಪು ಸುಲ್ತಾನನೇ ಕೆಡವಿದ್ದು ಅನ್ನೋದಕ್ಕೆ ಮತ್ತೊಂದು ಪೂರಕ ದಾಖಲೆ ಸಿಕ್ಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಠ್ಯ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ಸರ್ಕಾರದಿಂದ ಸಾಂಸ್ಕೃತಿಕ ಅತ್ಯಾಚಾರ: ಡಿಕೆಶಿ
ಮೂಡಲ ಆಂಜನೇಯ ದೇವಸ್ಥಾನದ `ಸುಪ್ರಭಾತ’ ಅನ್ನೋ ಪುಸ್ತಕ ಈಗ ಪತ್ತೆಯಾಗಿದೆ. ಅದರಲ್ಲಿ ಎಲ್ಲ ಮಾಹಿತಿಯೂ ದಾಖಲಾಗಿದೆ. 70 ವರ್ಷಗಳ ಹಿಂದೆ ಪ್ರಕಟವಾದ ಈ ಪುಸ್ತಕದಲ್ಲಿ ಆಂಜನೇಯ ದೇವಸ್ಥಾನದ ಚಿತ್ರ ಇದೆ. ಅಲ್ಲದೆ ದೇವಸ್ಥಾನದಿಂದ ನಾರಾಯಣ ಮೂರ್ತಿ ಎನ್ನುವವರ ಕೈ ಕತ್ತರಿಸಿ, ಅಲ್ಲಿದ್ದ ಮೂರ್ತಿಯನ್ನ ನೀರಿನ ಗುಂಡಿಯಲ್ಲಿ ಎಸೆದಿದ್ದಾರೆ. ಇದೆಲ್ಲವೂ ದಾಖಲೆಯಾಗಿದೆ ಮತ್ತೇನು ಬೇಕು. ಈ ದಾಖಲೆಗಳನ್ನೇ ಆಧಾರವಾಗಿಟ್ಟುಕೊಂಡು ಪರಿಶೀಲನೆ ಮಾಡಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.
ಟಿಪ್ಪು ಸುಲ್ತಾನ್ 7 ಕೊಪ್ಪರಿಗೆ ಚಿನ್ನಾಭರಣ ಕದ್ದು ಅದರಿಂದಲೇ ಮಸೀದಿ ಕಟ್ಟಿದ್ದಾನೆ. ವಿಜಯನಗರದ ತಿಮ್ಮಣ್ಣ ನಾಯಕ ಅದನ್ನ ಕಟ್ಟಿದ ಅನ್ನೋ ಉಲ್ಲೇಖ ಇದೆ ಎಂದು ಹೇಳಿದ್ದಾರೆ.
ಬೆಂಗಳೂರು: ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಯಾವ ಆಧಾರದಲ್ಲಿ ತೀರ್ಪು ಕೊಟ್ಟಿದೆ ಎಂಬುದು ಗೊತ್ತಿಲ್ಲ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಫಿ ಸಅದಿ ತಿಳಿಸಿದ್ದಾರೆ.
ಸಂವಿಧಾನಬದ್ಧವಾಗಿ ಕಾನೂನು ಹೋರಾಟ ಮಾಡಲಾಗುವುದು. ಹೆಣ್ಣು ಹಿಜಬ್ ಧರಿಸುವ ಬಗ್ಗೆ ಕುರಾನ್‌ನಲ್ಲಿ ಸ್ಪಷ್ಟ ಉಲ್ಲೇಖವಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಉಲೆಮಾ ಒಕ್ಕೂಟದಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್ ಐತಿಹಾಸಿಕ ತೀರ್ಪು
ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ಮುಖ್ಯವಾಗಿದೆ. ಷರಿಯತ್ ಬದ್ಧವಾಗಿ ಅವರಿಗೆ ಶಿಕ್ಷಣ ಸಿಗಬೇಕಿದೆ. ಹೀಗಾಗಿ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಲಕ್ನೋ: ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಸೋಮವಾರ ದಾಸ್ನಾ ದೇವಸ್ಥಾನದ ಮಹಂತ್ ನರಸಿಂಹ ಆನಂದ ಸರಾವತಿ ಅವರು ರಿಜ್ವಿ ಅವರಿಗೆ ಔಪಚಾರಿಕವಾಗಿ ಹಿಂದೂ ಧರ್ಮದ ದೀಕ್ಷೆಯನ್ನು ನೀಡಿದ್ದಾರೆ.
ಹಿಂದೂ ಧರ್ಮವನ್ನು ಸ್ವೀಕರಿಸಿರುವ ರಿಜ್ವಿ ಅವರಿಗೆ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ವೇಳೆ ಮಾತನಾಡಿದ ಅವರು, ಹಿಂದೂ ಧರ್ಮ ವಿಶ್ವದ ಶುದ್ಧ ಧರ್ಮವಾಗಿದೆ. 1992 ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ದಿನ ಡಿಸೆಂಬರ್ 6. ಹೀಗಾಗಿ ಈ ಪವಿತ್ರ ದಿನದಂತೆ ಹಿಂದೂ ಧರ್ಮಕ್ಕೆ ಮತಾಂತರವಾಗಲು ಆಯ್ಕೆ ಮಾಡಿಕೊಂಡಿದ್ದೆ. ಇಂದಿನಿಂದ ನಾನು ಹಿಂದೂ ಧರ್ಮಕ್ಕಾಗಿ ಕೆಲಸ ಮಾಡುತ್ತೇನೆ. ಮುಸ್ಲಿಮರ ಮತಗಳು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಅವರು ಕೇವಲ ಹಿಂದೂಗಳನ್ನು ಸೋಲಿಸಲು ತಮ್ಮ ಮತಗಳನ್ನು ಚಲಾಯಿಸುತ್ತಾರೆ ಎಂದು ಹೇಳಿದ್ದಾರೆ
ಈಗಾಗಲೇ ರಿಜ್ವಿ ಉಯಿಲು ಬರೆದಿದ್ದಾರೆ. ತನ್ನ ಮೃತ ದೇಹವನ್ನು ಸಾಂಪ್ರದಾಯಿಕ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ಮಾಡಬೇಕು ಮತ್ತು ಮರಣದ ನಂತರ ಹೂಳಬಾರದು. ಗಾಜಿಯಾಬಾದ್‌ನ ದಾಸ್ನಾ ದೇವಸ್ಥಾನದ ಹಿಂದೂ ಧರ್ಮದರ್ಶಿ ನರಸಿಂಹ ಆನಂದ ಸರಾವತಿ ಅವರು ಅಂತ್ಯಸಂಸ್ಕಾರ ನಡೆಸಬೇಕು ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನಾನು ಇನ್ನು ಮುಂದೆ ಕಣ್ಣೀರು ಹಾಕಲ್ಲ: ಎಚ್‍ಡಿಕೆ
ಈ ಹಿಂದೆ ಭಯೋತ್ಪಾದನೆ ಮತ್ತು ಜಿಹಾದ್‌ಗೆ ಪ್ರಚೋದನೆ ನೀಡುತ್ತದೆ ಎಂದು ಆರೋಪಿಸಿ ಕುರಾನ್‌ನಿಂದ 26 ಸಾಲನ್ನು ತೆಗೆದು ಹಾಕುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರದಿಂದ ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿದ್ದರು. ಸುಪ್ರೀಂ ಕೋರ್ಟ್ ಅರ್ಜಿಯನ್ನು ಕ್ಷುಲ್ಲಕವೆಂದು ಪರಿಗಣಿಸಿ 50 ಸಾವಿರ ರೂ. ದಂಡವನ್ನು ಹಾಕಿ ಕುರಾನ್‌ನಿಂದ ಯಾವುದೇ ಸಾಲನ್ನು ತೆಗೆಯುವುದಿಲ್ಲ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ಆದೇಶದ ಬಳಿಕ ವಾಸಿಂ ರಿಜ್ವಿ 26 ಸಾಲನ್ನು ಕೈಬಿಟ್ಟು ಹೊಸ ಕುರಾನ್ ರಚಿಸಿದ್ದರು. ಇದನ್ನೂ ಓದಿ: ಸೇನಾ ವಾಹನಗಳಿಗೆ ಬೆಂಕಿ ಹಚ್ಚಿದ್ದಕ್ಕೆ ಆತ್ಮ ರಕ್ಷಣೆಗೆ ಗುಂಡಿನ ದಾಳಿ
ಈ ಹಿಂದೆ ವಿಡಿಯೋ ಬಿಡುಗಡೆ ಮಾಡಿದ್ದ ರಿಜ್ವಿ, ಹಲವಾರು ಮೂಲಭೂತ ಇಸ್ಲಾಮಿಕ್ ಸಂಘಟನೆಗಳು ತನ್ನ ಹತ್ಯೆಗೆ ಸಂಚು ರೂಪಿಸಿವೆ. ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದರು.
ಬೆಂಗಳೂರು: ರಾಜ್ಯದ ವಕ್ಫ್ ಬೋರ್ಡ್ ಅಧ್ಯಕ್ಷ, ಮುಸ್ಲಿಂ ಸಮಾಜ ಹಿರಿಯ ನಾಯಕ ಡಾ.ಮೊಹಮ್ಮದ್ ಯೂಸುಫ್ ಇಂದು ಮುಂಜಾನೆ ನಿಧನರಾಗಿದ್ದಾರೆ.
ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಯೂಸುಫ್ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಆಸ್ಪತ್ರೆಯಲ್ಲಿ ಬೆಳಗ್ಗೆ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ನಿಧನಕ್ಕೆ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಕರ್ನಾಟಕ ವಕ್ಫ್ ಬೋರ್ಡ್ ರಾಜ್ಯ ಅಧ್ಯಕ್ಷರು, ಸಮಾಜದ ಮುಖಂಡರೂ ಆಗಿದ್ದ ಜನಾಬ್ ಡಾ. ಮೊಹಮ್ಮದ್ ಯೂಸುಫ್ ರವರು ವಿಧಿವಶರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ದೇವರು ಅವರಿಗೆ ಸದ್ಗತಿಯನ್ನು ಕರುಣಿಸಲಿ, ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
ಕರ್ನಾಟಕ ವಕ್ಫ್ ಬೋರ್ಡ್ ರಾಜ್ಯ ಅಧ್ಯಕ್ಷರು, ಸಮಾಜದ ಮುಖಂಡರೂ ಆಗಿದ್ದ ಜನಾಬ್ ಡಾ. ಮೊಹಮ್ಮದ್ ಯೂಸುಫ್ ರವರು ವಿಧಿವಶರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ದೇವರು ಅವರಿಗೆ ಸದ್ಗತಿಯನ್ನು ಕರುಣಿಸಲಿ, ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ರಾಜ್ಯದ ವಕ್ಫ್ ಬೋರ್ಡ್ ಅಧ್ಯಕ್ಷರಾದ ಶ್ರೀ ಮಹಮ್ಮದ್ ಯೂಸುಫ್ ಅವರ ನಿಧನದ ಸುದ್ದಿ ದುಃಖಕರ.
ರಾಜ್ಯದ ವಕ್ಫ್ ಬೋರ್ಡ್ ಅಧ್ಯಕ್ಷರಾದ ಶ್ರೀ ಮಹಮ್ಮದ್ ಯೂಸುಫ್ ಅವರ ನಿಧನದ ಸುದ್ದಿ ದುಃಖಕರ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಬಂಧು ಬಳಗದ ವರೆಲ್ಲರಿಗೂ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಶ್ರೀರಾಮುಲು ಸಂತಾಪ ಸೂಚಿಸಿದ್ದಾರೆ.
– ರಾಜ್ಯದಲ್ಲಿ ಒಟ್ಟು 25 ಮಂದಿ ಬಿಡುಗಡೆ
– ಮೊದಲ ಬಾರಿಗೆ ಮಂಡ್ಯ, ಗದಗದಲ್ಲಿ ಕೊರೊನಾ ಪತ್ತೆ
– 4,030 ಐಸೋಲೇಷನ್ ಬೆಡ್‍ಗಳು ಸಿದ್ಧ
ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ಪ್ರಕರಣಗಳು ಕೇಳಿ ಬಂದಿದ್ದರಿಂದ ಮಸೀದಿಗೆ ಬರಲೇಬಾರದು. ಅಷ್ಟೇ ಅಲ್ಲದೆ ಗೇಟ್ ಹತ್ತಿರಕ್ಕೂ ಬಿಡಬಾರದು ಅಂತ ವಕ್ಫ್ ಬೋರ್ಡ್ ನಿಂದ ಆದೇಶವಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಒಟ್ಟು 175 ಕೊರೊನಾ ಸೋಂಕಿತರಿದ್ದಾರೆ. ಮಂಗಳವಾರ ಸಂಜೆಯ ಸಿಕ್ಕ ಮಾಹಿತಿ ಪ್ರಕಾರ ಒಂದೇ ದಿನದಲ್ಲಿ 12 ಜನರಿಗೆ ಪಾಸಿಟಿವ್ ಬಂದಿದೆ. ವಿದೇಶದಿಂದ ಬಂದವರೆಲ್ಲರ ಹೋಂ ಕ್ವಾರಂಟೈನ್ ಮುಕ್ತಾಯವಾಗಿದೆ. ಈಗ ಯಾರು ಹೋಂ ಕ್ವಾರಂಟೈನ್‍ನಲ್ಲಿ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಅವರ ಮೇಲೆ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ 9 ಡೆಡಿಕೇಟ್ ಕೋವಿಡ್-19 ಹಾಸ್ಪಿಟಲ್‍ಗಳು ಇದ್ದವು. ಈಗ ಮತ್ತೆ 8 ಆಸ್ಪತ್ರೆಗಳು ಸೇರ್ಪಡೆ ಆಗಿದ್ದು, ಒಟ್ಟು 17 ಆಸ್ಪತ್ರೆಗಳು ಕೋವಿಡ್ ಹಾಸ್ಪಿಟಲ್‍ಗಳಾಗಿವೆ. ರಾಜ್ಯದಲ್ಲಿ 4,030 ಐಸೋಲೇಷನ್ ಬೆಡ್‍ಗಳನ್ನು ಸಿದ್ಧಪಡಿಕೊಳ್ಳಲಾಗಿದೆ, 494 ಐಸಿಯುಗಳು ಇವೆ ಎಂದು ಹೇಳಿದರು.
ಭಟ್ಕಳ, ನಂಜನಗೂಡು, ಗೌರಿಬಿದನೂರು ಹಾಟ್‍ಸ್ಪಾಟ್‍ನಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಸೋಂಕು ಪೀಡಿತ ಪ್ರದೇಶದಲ್ಲಿ ಯಾರಿಗಾದ್ರೂ ಪ್ಲೂನಂತಹ ಲಕ್ಷಣ ಕಂಡುಬಂದರೆ ಅವರಿಗೆ ರ‍್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ. ಆಹಾರಧಾನ್ಯ ದಾಸ್ತುನು ಇದೆ. ಎಲ್ಲೂ ಕೊರತೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಲಾಕ್‍ಡೌನ್ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಡಾ.ದೇವಿಶೆಟ್ಟಿ, ಜಯದೇವ ಮಂಜುನಾಥ್ ಬಳಿ ನಾವು ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಗದಗ ಹಾಗೂ ಕಲಬುರಗಿಯ ವ್ಯಕ್ತಿಗಳಿಗೆ ಕೊರೊನಾ ಪಾಸಿಟಿವ್ ವಿಚಾರವಾಗಿ ಮಾತನಾಡಿ ಸಚಿವರು, ಈಗಾಗಲೇ ಉಸಿರಾಟದ ತೊಂದರೆಯಿದ್ದವರ ಸ್ಯಾಂಪಲ್ಸ್ ಕಲೆಕ್ಟ್ ಮಾಡಿದ್ವಿ. ಆಗ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈಗ ವೈದ್ಯಕೀಯ ತನಿಖೆ ಶುರುಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಇಂದು 12 ಹೊಸ ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ಮಂಡ್ಯದಲ್ಲಿ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮಕ್ಕೆ ಹೋದವರ ನಿರ್ಲಕ್ಷ್ಯದಿಂದ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಪ್ರಾಥಮಿಕ ಸಂಪರ್ಕದಲ್ಲಿರುವವರಿಗೂ ಕೊರೊನಾ ಪಾಸಿಟಿವ್ ಕಂಡು ಬರುತ್ತಿದೆ.
ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ನಿಜಾಮುದ್ದೀನ್‍ಗೆ ಹೋಗಿ ಬಂದವರ ಸಂಪರ್ಕದಲ್ಲಿರುವವರಿಗೆ ಕೊರೊನಾ ಸೋಂಕು ತಗಲಿದ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ನಿಜಾಮುದ್ದೀನ್‍ಗೆ ಹೋಗಿ ಬಂದವರು ಸರಿಯಾಗಿ ಕ್ವಾರಂಟೈನ್ ಆಗದ ಪರಿಣಾಮ ಈಗ ಅವರ ಜೊತೆ ಸಂಪರ್ಕದಲ್ಲಿದ್ದವರಿಗೂ ಕೊರೋನಾ ಭೀತಿ ಉಂಟಾಗಿದೆ.
ಕೊರೊನಾ ಸೋಂಕಿತರ ವಿವರಗಳು ರೋಗಿ 164 – 33 ವರ್ಷದ ಪುರುಷನಾಗಿದ್ದು, ಬಾಗಲಕೋಟೆಯ ಮುಧೋಳ್ ನಿವಾಸಿ. ಮಾರ್ಚ್ 13 ರಿಂದ 18ರವರೆಗೆ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದ್ಯಕ್ಕೆ ಬಾಗಲಕೋಟೆಯ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 165 – 41 ವರ್ಷದ ಮಹಿಳೆಯಾಗಿದ್ದು ಬಾಗಲಕೋಟೆ ನಿವಾಸಿಯಾಗಿದ್ದಾರೆ. ಇವರು 125ರ ಸೋಂಕಿತ ರೋಗಿಯ ನೆರೆಹೊರೆಯವರು. ಬಾಗಲಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗಿ 166 – 80 ವರ್ಷ ವೃದ್ಧೆಯಾಗಿದ್ದು, ಗದಗ ನಿವಾಸಿ ಜಿಲ್ಲೆಯವರಾಗಿದ್ದಾರೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ, ಸೋಂಕಿತರ ಜೊತೆ ಸಂಪರ್ಕವೂ ಇಲ್ಲ. ಆದರೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ ಬಂದಿದೆ. ಗದಗ ಆಸ್ಪತ್ರೆಯಲ್ಲಿ ಪ್ರತ್ಯೇಕವಾದ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 167 – 29 ವರ್ಷದ ಪುರುಷನಾಗಿದ್ದು, ಬೆಂಗಳೂರು ನಗರದ ನಿವಾಸಿ. ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 168 – 50 ವರ್ಷದ ವ್ಯಕ್ತಿ ಬೆಂಗಳೂರು ನಗರದ ನಿವಾಸಿಯಾಗಿದ್ದು, ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ರೋಗಿ 169 – 35 ವರ್ಷದ ಬೆಂಗಳೂರು ನಗರದ ನಿವಾಸಿಯಾಗಿದ್ದು, ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ರೋಗಿ 170 – 68 ವರ್ಷ ವೃದ್ಧನಾಗಿದ್ದು, ಬೆಂಗಳೂರಿನ ಬಿಬಿಎಂಪಿ ನಿವಾಸಿಯಾಗಿದ್ದಾರೆ. ದುಬೈನಿಂದ ಬಂದಿರುವ ಇತಿಹಾಸವಿದೆ. ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 171 – 32 ವರ್ಷದ ಪುರುಷನಾಗಿದ್ದು, ಮಂಡ್ಯ ನಿವಾಸಿ. ಇವರು ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದ 134, 135, 136, 137 ಮತ್ತು 138 ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 172 – 36 ವರ್ಷದ ಪುರುಷನಾಗಿದ್ದು, ಮಂಡ್ಯ ನಿವಾಸಿ. ಇವರು ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದ 134, 135, 136, 137 ಮತ್ತು 138 ಕೊರೊನಾ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 173 – 65 ವರ್ಷದ ವ್ಯಕ್ತಿ, ಮಂಡ್ಯ ನಿವಾಸಿ. ನಿಜಾಮುದ್ದೀನ್ ಕಾರ್ಯಕ್ರಮಕ್ಕೆ ಹೋಗಿದ್ದ 134, 135, 136, 137 ಮತ್ತು 138 ಸೋಂಕಿತರ ಜೊತೆ ಸಂಪರ್ಕದಲ್ಲಿದ್ದರು. ಸದ್ಯಕ್ಕೆ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 174 – 28 ವರ್ಷದ ಮಹಿಳೆಯಾಗಿದ್ದು, ಕಲಬುರಗಿ ನಿವಾಸಿಯಾಗಿದ್ದಾರೆ. ಕೊರೊನಾ ರೋಗಿ 124 ಸೋಂಕಿತರ ಸಂಪರ್ಕದಲ್ಲಿದ್ದರು. ಅಲ್ಲದೇ ಈ ರೋಗಿಯ ಸೊಸೆಯಾಗಿದ್ದಾರೆ. ಸದ್ಯಕ್ಕೆ ಕಲಬುರಗಿಯ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.
ರೋಗಿ 175 – 57 ವರ್ಷದ ಪುರುಷನಾಗಿದ್ದು, ಕಲಬುರಗಿ ನಿವಾಸಿ. ಟ್ರಾವೆಲ್ ಹಿಸ್ಟರಿ ಇರದೇ ಇದ್ದರೂ ಅತಿ ಹೆಚ್ಚು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಲಬುರಗಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗದಗ ಹಾಗೂ ಕಲಬುರಗಿಯ ಎರಡು ಹೊಸ ಪ್ರಕರಣದಿಂದ ಆರೋಗ್ಯ ಇಲಾಖೆಗೆ ಆತಂಕ ಶುರುವಾಗಿದೆ. ಯಾಕೆಂದರೆ ಗದಗ ಹಾಗೂ ಕಲಬುರ್ಗಿ ಇಬ್ಬರು ಸೋಂಕಿತರಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲ, ಸೋಂಕಿತರ ಜೊತೆ ಸಂಪರ್ಕವೂ ಇಲ್ಲ. ಆದರೂ ಉಸಿರಾಟದ ತೊಂದರೆ ಮತ್ತು ಶ್ವಾಸಕೋಶ ಸಮಸ್ಯೆ ಇದೆ. ಇಂತಹವರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಮೂಲಕ ಉಸಿರಾಟದ ತೊಂದರೆ ಇರುವವರಿಗೆ ಅತೀ ಬೇಗ ಕೊರೊನಾಗೆ ತುತ್ತಾಗುತ್ತಿರುವ ಪ್ರಕರಣ ಕಂಡುಬರುತ್ತಿದೆ.
ಈಗ ದೇಶದ ಎಲ್ಲಾ ಕಡೆ ಎನ್‌ಆರ್‌ಸಿ( ರಾಷ್ಟ್ರೀಯ ಪೌರತ್ವ ನೋಂದಣಿ) ಮತ್ತು ಪೌರತ್ವ ಕಾಯ್ದೆಯದ್ದೇ ಚರ್ಚೆ. ಇದರ ಬಗ್ಗೆ ಪರ-ವಿರೋಧ ಚರ್ಚೆ, ಟೀಕೆ ಜೋರಾಗಿ ನಡೆಯುತ್ತಿರುವಾಗಲೇ ಕರ್ನಾಟಕ ಸರ್ಕಾರ ಸದ್ದಿಲ್ಲದೇ ಒಂದು ಕೆಲಸಕ್ಕೆ ಕೈ ಹಾಕಿದೆ. ಅದೇನೆಂದ್ರೆ ಪರ-ವಿರೋಧಗಳು ಏನೇ ಇರಲಿ, ಈ ವಿಚಾರದ ಸುತ್ತ ಗಿರಕಿ ಹೊಡೆಯುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ದಾಖಲೆಗಳನ್ನು ಸರಿ ಮಾಡಿಸಿಕೊಳ್ಳುವ ಅಭಿಯಾನಕ್ಕೆ ಕೈಹಾಕಿದೆ. ಏನಪ್ಪಾ ಇದು, ಎನ್‌ಆರ್‌ಸಿ, ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ ಜಾರಿಗೆ ತರುತ್ತಿರೋದು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ. ರಾಜ್ಯದಲ್ಲಿರುವುದೂ ಬಿಜೆಪಿ ಸರ್ಕಾರ. ಇದು ಹೇಗಪ್ಪಾ ಸಾಧ್ಯ ಅಂತಾ ನಿಮಗೆ ಆಶ್ಚರ್ಯ ಆಗಲೇಬೇಕು. ಹೌದು, ಇದು ಅಚ್ಚರಿಯಾದ್ರೂ ನಿಜ.
ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಮುಸ್ಲಿಂ ಧರ್ಮೀಯರನ್ನು ಹೊರಗಿಟ್ಟು ಬಿಜೆಪಿ ಸರ್ಕಾರ ಧರ್ಮ ಬೇಧ ಮಾಡುತ್ತಿದೆ ಎಂದು ವಿರೋಧ ಪಕ್ಷಗಳೆಲ್ಲಾ ಬೀದಿಗೆ ಬಂದಿದೆ. ಜೊತೆಗೆ ಮುಸ್ಲಿಂ ಸಮುದಾಯದ ಬಹುತೇಕ ಮಂದಿ ಕೂಡಾ ಇದನ್ನು ವಿರೋಧಿಸುತ್ತಿದ್ದಾರೆ. ಸಹಜವಾಗಿ ಈ ವಿಚಾರದಲ್ಲಿ ರಾಜಕೀಯ ಇದೆ ಅನ್ನೋದ್ರಲ್ಲಿ ಸಂಶಯವಿಲ್ಲ. ಪ್ರಣಾಳಿಕೆಯ ಭರವಸೆಯನ್ನು ಈಡೇರಿಸ್ತಿರೋ ಬಿಜೆಪಿ, ತನ್ನ ಮತಬ್ಯಾಂಕ್ ಗಟ್ಟಿ ಮಾಡಿ ಸಂದೇಶವೊಂದನ್ನು ರವಾನಿಸುತ್ತಾ ಇರುವುದಂತೂ ಸತ್ಯ. ಅದೇ ರೀತಿ ನಾವು ಮುಸ್ಲಿಂ ಸಮುದಾಯದ ಪರ ಎಂದು ಬಿಂಬಿಸುತ್ತಾ ಕಾಂಗ್ರೆಸ್, ಎಡಪಕ್ಷ ಸೇರಿದಂತೆ ಇನ್ನಿತರ ಪಕ್ಷಗಳು ಕಾಯ್ದೆ ತಿದ್ದುಪಡಿ ವಿರೋಧಿಸಿ ತನ್ನ ಮತ ಬ್ಯಾಂಕ್ ಪರ ನಿಲ್ಲುತ್ತಿದೆ. ಆದರೆ ಈ ಕಾಯ್ದೆ ಇಲ್ಲಿನ ಮುಸ್ಲಿಮರಿಗೆ ಸದ್ಯಕ್ಕೇನೂ ಅಪಾಯವಿಲ್ಲ, ಆದ್ರೆ ಭವಿಷ್ಯದಲ್ಲಿ ಇದು ಖಂಡಿತಾ ಮುಸ್ಲಿಂ ಸಮುದಾಯಕ್ಕೆ ಅಪಾಯಕಾರಿ ಎಂಬ ವಿಶ್ಲೇಷಣೆಯೂ ಇದೆ. ಬೇರೆ ದೇಶದಿಂದ ಬಂದಿದ್ದಾರೆ ಎನ್ನಲಾಗಿರುವ ಮುಸ್ಲಿಮರಿಗೆ ಮಾತ್ರ ಅನ್ವಯವಾಗುತ್ತದೆ ಎಂಬ ಕಾರಣಕ್ಕೆ ಇಲ್ಲಿನ ಮುಸ್ಲಿಮರು ಸದ್ಯಕ್ಕೆ ನಿಟ್ಟುಸಿರು ಬಿಡಬಹುದು.
ಆದ್ರೆ ಎನ್‌ಆರ್‌ಸಿ ಜಾರಿಗೆ ತಂದರೆ ಅಕ್ರಮವಾಗಿ ವಲಸೆ ಬಂದ ಎಲ್ಲಾ ಮುಸ್ಲಿಮರ ಜೊತೆಗೆ ಇಲ್ಲಿರುವ ಮೂಲ ನಿವಾಸಿ ಮುಸ್ಲಿಮರ ಬುಡಕ್ಕೂ ಬರುತ್ತೆ ಎಂಬ ಆತಂಕ ಸಮುದಾಯದಲ್ಲಿ ಇರುವುದಂತೂ ಸತ್ಯ. ದಾಖಲೆ ಸರಿ ಇಲ್ಲ ಅನ್ನೋ ಕಾರಣಕ್ಕೆ ಇಲ್ಲಿನ ಮುಸ್ಲಿಮರು ಪೌರತ್ವ ಕಳೆದುಕೊಳ್ಳಬಹುದು ಅಥವಾ ಸೌಲಭ್ಯ ವಂಚಿತರಾಗಬಹುದು, ಅತಂತ್ರರಾಗಬಹುದು ಎಂಬುದು ಆತಂಕಕ್ಕೆ ಮೂಲಕಾರಣ. ಪರಿಸ್ಥಿತಿ ಹೀಗಿರುವಾಗ ಮೂಲ ಭಾರತೀಯರೇ ಆಗಿರುವ ಮುಸ್ಲಿಮರು ನಿಜವಾಗಿಯೂ ಏನು ಮಾಡಬೇಕು ಎಂಬ ಅರಿವಿಲ್ಲದೇ ಗೊಂದಲದಲ್ಲಿರುವಾಗ, ಕರ್ನಾಟಕದ ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯಕ್ಕೊಂದು ಸಂದೇಶ ರವಾನಿಸಿದೆ. ಅದೇನಪ್ಪಾ ಅಂದ್ರೆ, ಕೇಂದ್ರ ಸರ್ಕಾರ ಎನ್‌ಆರ್‌ಸಿಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, 2012ರ ರಾಷ್ಟ್ರೀಯ ಜನಗಣತಿಗೂ ಮುನ್ನ, ರಾಷ್ಟ್ರೀಯ ಜನಸಂಖ್ಯಾ ದಾಖಲೆಗಳನ್ನು ಮಾಡಲು 2020ರಲ್ಲಿ ಗಣತಿ ಮಾಡಲಿದೆ. ಹೀಗಾಗಿ ಮುಂದಿನ ವರ್ಷ ನಡೆಯುವ ಈ ಮಾಹಿತಿ ಸಂಗ್ರಹದ ಗಣತಿ ಸಂದರ್ಭದಲ್ಲಿ ದಾಖಲೆ ರಹಿತ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ, ಕೆಲವು ಕನಿಷ್ಠ ದಾಖಲೆಗಳನ್ನು ಮಾಡಿಕೊಳ್ಳುವ ಅಭಿಯಾನಕ್ಕೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮುನ್ನುಡಿ ಬರೆದಿದೆ. ಕಳೆದ ನವೆಂಬರಿನಲ್ಲೇ ಸುತ್ತೋಲೆ ಹೊರಡಿಸಿರುವ ವಕ್ಫ್ ಬೋರ್ಡ್, ರಾಜ್ಯದ ಎಲ್ಲಾ ಮಸೀದಿಗಳಿಗೆ ಕೆಲವು ನಿರ್ದಿಷ್ಟ ಸೂಚನೆಗಳನ್ನು ನೀಡಿದೆ.
ಸುಮಾರು 35,000 ಆಸ್ತಿಗಳಿಗೆ ಸರಿಸುಮಾರು 32,000 ಮಸೀದಿಗಳು ವಕ್ಫ್ ವ್ಯಾಪ್ತಿಗೊಳಪಟ್ಟಿದ್ದು, ಎಲ್ಲಾ ಮಸೀದಿಗಳು ತಮ್ಮ ಮೊಹಲ್ಲಾ ವ್ಯಾಪ್ತಿಯ ಮುಸ್ಲಿಂ ಸಮುದಾಯದವರ ಮಾಹಿತಿ, ದಾಖಲೆಗಳನ್ನು ಕಡ್ಡಾಯವಾಗಿ ಸಂಗ್ರಹಿಸಿ ಇಡುವಂತೆ ಸೂಚಿಸಿದೆ. ಎಲ್ಲಾ ಮಸೀದಿಗಳ ಮೂಲಕ ಮುಸ್ಲಿಂ ಸಮುದಾಯದವರಿಗೆ ಕೆಲವು ಅಗತ್ಯ ದಾಖಲೆಗಳ ಬಗ್ಗೆ ಜಾಗೃತಿ ನೆರವು ನೀಡಬೇಕು. ಅಗತ್ಯವಿರುವ ಕಡೆ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಅರಿವು ಮೂಡಿಸಬೇಕು. ನಗರಪ್ರದೇಶದ ಮಸೀದಿಗಳು ಸಮುದಾಯದವರ ದಾಖಲೆ ಮಾಹಿತಿಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಇಡಬೇಕು. ಹೊರಗಿನವರು ಯಾರು? ಸ್ಥಳೀಯರು ಯಾರು? ಅಪರಿಚಿತರು ಯಾರು ಮತ್ತು ಯಾವಾಗ ಎಲ್ಲಿಂದ ವಲಸೆ ಬಂದಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿದರೆ ಮುಂದಿನ ದಿನಗಳಲ್ಲಿ ಜನಗಣತಿಗಾಗಿ ಅಥವಾ ಇನ್ನಿತರ ಕಾರ್ಯಗಳಿಗೆ ಸರ್ಕಾರದ ಪ್ರತಿನಿಧಿಗಳು ಬಂದಾಗ ಸಹಕಾರಿಯಾಗಲಿದೆ ಎಂಬುದು ವಕ್ಫ್ ಸುತ್ತೋಲೆಯ ಮೂಲ ಉದ್ದೇಶ.
ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಹಲವು ಕಡೆ ಸೂಕ್ತ ದಾಖಲೆಗಳಿಲ್ಲದೇ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ವಕ್ಫ್ ಮಂಡಳಿ ಗಮನಿಸಿದೆ. ಸಮುದಾಯಾದ ಅನಕ್ಷರಸ್ಥರು, ಅರಿವಿನ ಕೊರತೆಯಿಂದ ಸರಿಯಾಗಿ ದಾಖಲೆಗಳನ್ನು ಇಟ್ಟುಕೊಂಡಿಲ್ಲ. ಮಳೆ, ಅತಿವೃಷ್ಟಿ, ಪ್ರವಾಹ, ಪ್ರಕೃತಿ ವಿಕೋಪಗಳ ಪರಿಣಾಮ ದಾಖಲೆ ಕಳೆದುಕೊಂಡವರೂ ಇದ್ದಾರೆ. ಮತದಾರರ ಗುರುತಿನ ಚೀಟಿ ಇಲ್ಲದೇ ಮತದಾನದಿಂದ ವಂಚಿತರಾಗುತ್ತಿರುವ ಬಗ್ಗೆ ಇತ್ತೀಚೆಗೆ ಸಾಕಷ್ಟು ದೂರುಗಳಿವೆ. ಹೀಗಿರುವಾಗ ಸರ್ಕಾರದ ದಾಖಲೆಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಮೊಹಲ್ಲಾ ಮಸೀದಿಗಳು, ಸ್ವಯಂಸೇವಾ ಸಂಸ್ಥೆಗಳು ನೆರವಾಗಬೇಕು ಎನ್ನುವುದು ವಕ್ಫ್ ಮಂಡಳಿಯ ಆಶಯ. ಈ ಬಗ್ಗೆ ಸಮುದಾಯದ ಸುಶಿಕ್ಷಿತರು, ಜಾಗೃತಿಗೆ ಕೈಜೋಡಿಸಿದರೆ ಸೌಲಭ್ಯವಂಚಿತ ಹಾಗೂ ಅಭದ್ರತೆ ಕಾಡುತ್ತಿರುವ ಹಿಂದುಳಿದ ಸಮುದಾಯಕ್ಕೆ ಸಹಕಾರಿಯಾಗುವುದರಲ್ಲಿ ಅನುಮಾನವೇ ಇಲ್ಲ.
ಎನ್‌ಆರ್‌ಸಿ ಬಗ್ಗೆ ಪರ ವಿರೋಧಗಳು, ಪ್ರತಿಭಟನೆ ಬಹಿಷ್ಕಾರದ ಮಾತುಗಳು ಏನೇ ಇರಲಿ, ತಮ್ಮ ಅಗತ್ಯ ದಾಖಲೆಗಳನ್ನು ಸರಿಯಾಗಿ ಮಾಡಿಸಿಕೊಂಡು ಇಟ್ಟುಕೊಂಡರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಡೆಯಬಹುದು. ಪ್ರತಿ ಚುನಾವಣೆ ಸಂದರ್ಭದಲ್ಲೂ ವೋಟರ್ ಐಡಿ ಇಲ್ಲ ಎಂಬ ಕಾರಣಕ್ಕೆ ಮತದಾನದಿಂದ ವಂಚಿತರಾದಾಗ ಕೂಗಾಟ, ವಾಗ್ವಾದ ಪ್ರತಿಭಟನೆ ಆಕ್ರೋಶ ವ್ಯಕ್ತವಾಗುತ್ತಿರುವುದು ಹಲವು ಬಾರಿ ವರದಿಯಾಗಿದೆ. ಆದ್ರೆ ಏನೇ ಕೂಗಾಡಲಿ ಅವರಿಗೆಲ್ಲಾ ಮತದಾನಕ್ಕೆ ತಕ್ಷಣ ಅವಕಾಶ ಕೊಡಿಸಿದ ಉದಾಹರಣೆ ಇಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕೀಯ ಪಕ್ಷಗಳು ನಂತರ ಮುಂದಿನ ಚುನಾವಣೆವರೆಗೂ ಕಣ್ಮರೆಯಾಗುತ್ತವೆ. ಮತ್ತೆ ಅವಕಾಶ ವಂಚಿತರಾಗೋದು ಮಾತ್ರ ಆ ಮುಗ್ಧ ಜನರು. ಹೀಗಾಗಿ ಎನ್‌ಆರ್‌ಸಿ ಜಾರಿಯಾಗುತ್ತೋ ಬಿಡುತ್ತೋ, ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಏನೆಲ್ಲಾ ಮಾಡ್ತಾರೋ ಮಾಡಲಿ. ಅಲ್ಪಸಂಖ್ಯಾತ ಸಮುದಾಯದ ಜನತೆ ದಾಖಲೆಗಳನ್ನು ಮಾಡಿಸಿಕೊಂಡು ಜಾಣತನ ಮೆರೆಯಬೇಕು. ಯಾಕೆಂದರೆ, ನಾವು ಎನ್‌ಆರ್‌ಸಿ ವಿರೋಧಿಸ್ತೀವಿ, ದಾಖಲೆ ನೀಡಿ ನಾನು ಪ್ರಜೆ ಎಂದು ಸಾಬೀತು ಮಡಲ್ಲ ಎಂದು ಭಾಷಣ ಬಿಗಿಯುವ ಎಲ್ಲಾ ಮಹಾನುಭಾವರುಗಳ ಬಳಿ ಎಲ್ಲಾ ದಾಖಲೆಗಳು ಸರಿಯಾಗಿಯೇ ಇರುತ್ತವೆ. ಆದರೆ, ಅವರ ಭಾಷಣ ಕೇಳಿ ಚಪ್ಪಾಳೆ ತಟ್ಟಿ ಮನೆಗೆ ಹೋಗುವ ಮುಗ್ಧ ಜನರ ಬುಡಕ್ಕೆ ಬಂದಾಗ ಇವರು ಯಾರೂ ಇರುವುದಿಲ್ಲ. ಮತ್ತೆ ಬೀದಿಗೆ ಬರುವುದು ಆ ಮುಗ್ಧ ಸೌಲಭ್ಯವಂಚಿತರೇ. ಆದ್ದರಿಂದ ಈ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಪಕ್ಷಗಳ ಲಾಭ ನಷ್ಟ ಲೆಕ್ಕಾಚಾರದಲ್ಲಿ ಜನಸಾಮಾನ್ಯರು ಬಲಿಪಶುಗಳಾಗುತ್ತಾರೆ.
ಹಾಗಾಗಿ ರಾಜಕೀಯ ಕಾರಣಗಳಿಗಾಗಿ ನಡೆಯುವ ಈ ಎಲ್ಲಾ ಪರ ವಿರೋಧ ಪ್ರಹಸನಗಳಿಂದ ಮುಗ್ಧ ಜನರು ಬಲಿಪಶುಗಳಾಗುವುದನ್ನು ತಪ್ಪಿಸಲು ಪ್ರಜ್ಞಾವಂತರು ದಾಖಲೆಗಳಿಲ್ಲದೇ ಪರದಾಡುತ್ತಿರುವ ಈ ಬಡಜನರ ನೆರವಿಗೆ ಬರಬೇಕಾದ್ದು ಇಂದಿನ ಅಗತ್ಯತೆ. ಆದ್ದರಿಂದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸೂಚಿಸಿರುವಂತೆ ಎಲ್ಲಾ ಮಸೀದಿ, ಮೊಹಲ್ಲಾಗಳ ಪ್ರಜ್ಞಾವಂತರು ಯಾವುದೇ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಕಿವಿಕೊಡದೇ ದಾಖಲೆವಂಚಿತ ಮುಸ್ಲಿಂ ಸಮುದಾಯದ ಬಡವರ್ಗಕ್ಕೆ ನೆರವಾಗುವುದು ಎಲ್ಲಾ ದೃಷ್ಟಿಯಿಂದಲೂ ಒಳಿತು.