Tag: ವಕ್ಫ್‌ ಬಿಲ್‌

  • ಬುಧವಾರ ವಕ್ಫ್‌ ಬಿಲ್‌ ಮಂಡನೆ – ಬಿಲ್‌ ಪಾಸ್‌ ಆಗುತ್ತಾ? ಲೋಕಸಭೆಯಲ್ಲಿ ಬಲಾಬಲ ಹೇಗಿದೆ?

    ಬುಧವಾರ ವಕ್ಫ್‌ ಬಿಲ್‌ ಮಂಡನೆ – ಬಿಲ್‌ ಪಾಸ್‌ ಆಗುತ್ತಾ? ಲೋಕಸಭೆಯಲ್ಲಿ ಬಲಾಬಲ ಹೇಗಿದೆ?

    ನವದೆಹಲಿ: ವಿಪಕ್ಷಗಳು ಮತ್ತು ಮುಸ್ಲಿಮರ (Muslims) ವಿರೋಧದ ನಡುವೆ ಲೋಕಸಭೆಯಲ್ಲಿ (Lokasabha) ಬುಧವಾರ ವಕ್ಫ್ ತಿದ್ದುಪಡಿ ಮಸೂದೆ (Waqf Act Amendment Bill ಮಂಡನೆ ಆಗಲಿದೆ. ಮಧ್ಯಾಹ್ನ 12:15ಕ್ಕೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಸೂದೆ ಮಂಡಿಸಲಿದ್ದಾರೆ.

    ವಕ್ಫ್ ಮಸೂದೆ ಮೇಲಿನ ವಿಸ್ತೃತ ಚರ್ಚೆಗಾಗಿ 8 ಗಂಟೆ ಮೀಸಲು ಇಡಲಾಗಿದೆ. ಈ ಮಸೂದೆಯನ್ನು ಎನ್‌ಡಿಎ (NDA) ಒಕ್ಕೂಟದ 298 ಸಂಸದರು ಬೆಂಬಲಿಸುವ ಸಾಧ್ಯತೆ ಇದೆ. ನಾಳೆಯೇ ವೋಟಿಂಗ್ ನಡೆಯೋ ಸಾಧ್ಯತೆ ಹೆಚ್ಚಿರುವ ಕಾರಣ ಎನ್‌ಡಿಎಯ ಎಲ್ಲಾ ಸಂಸದರು ಕಡ್ಡಾಯವಾಗಿ ಕಲಾಪಕ್ಕೆ ಬರಬೇಕೆಂದು ಆಯಾ ಪಕ್ಷಗಳು ವಿಪ್‌ ಜಾರಿ ಮಾಡಿದೆ. ಇದನ್ನೂ ಓದಿ: ಗ್ಯಾರಂಟಿ ಸರ್ಕಾರದಿಂದ ಶಾಕ್‌ – ಡೀಸೆಲ್‌ ದರ 2 ರೂ. ಏರಿಕೆ

    ಇಂದು ವಕ್ಫ್ ಬಿಲ್ ಮೇಲಿನ ಚರ್ಚೆಗೆ ಸಮಯ ನಿಗದಿ ಮಾಡಲು ಸ್ಪೀಕರ್ ಕರೆದಿದ್ದ ಬಿಎಸಿ ಸಭೆಯಲ್ಲೂ, ಕಡಿಮೆ ಸಮಯ ಎಂದು ಹೇಳಿ ವಿಪಕ್ಷಗಳು ಆಕ್ಷೇಪ ಎತ್ತಿ ಸಭೆಯನ್ನು ಬಹಿಷ್ಕರಿಸಿದ್ದವು. ವಿಪಕ್ಷಗಳ ಧೋರಣೆಗೆ ಕಿರಣ್ ರಿಜಿಜು ಆಕ್ರೋಶ ಹೊರಹಾಕಿದ್ದಾರೆ.

    ವಕ್ಫ್ ಬಿಲ್ ಪಾಸ್ ಆಗುತ್ತಾ?
    * ಲೋಕಸಭೆ ಸದಸ್ಯ ಬಲ – 543
    * ಅನುಮೋದನೆಗೆ 272 ಸದಸ್ಯರ ಬೆಂಬಲ ಅಗತ್ಯ
    * ಎನ್‌ಡಿಎ ಸಂಖ್ಯಾಬಲ 298
    * INDIA ಒಕ್ಕೂಟದ ಸಂಖ್ಯಾಬಲ 233
    * ತಟಸ್ಥ ಸಂಸದರು- 11 ಇದನ್ನೂ ಓದಿ: ವಕ್ಫ್ ತಿದ್ದುಪಡಿ ಬಿಲ್‌ಗೆ ಕೇಂದ್ರ ಸಿದ್ಧತೆ – ಈಗ ಏನಿದೆ? ಏನು ಬದಲಾಗಲಿದೆ?

    ವಕ್ಫ್ ಬಿಲ್ ಪರ
    ಬಿಜೆಪಿ – 240, ಟಿಡಿಪಿ – 16, ಜೆಡಿಯು – 12, ಶಿಂಧೆ ಶಿವಸೇನೆ – 07, ಎಲ್‌ಜೆಪಿ – 05, ಅಪ್ನ ದಳ್ – 01

    ವಕ್ಫ್ ಬಿಲ್ ವಿರುದ್ಧ
    ಕಾಂಗ್ರೆಸ್ – 99, ಎಸ್‌ಪಿ – 37, ಟಿಎಂಸಿ – 29, ಡಿಎಂಕೆ – 22, ಎಐಎಂಐಎ – 01, ಎನ್‌ಸಿಪಿ (ಎಸ್‌ಪಿ ) – 08