Tag: ವಕ್ಫ್‌ ನೋಟಿಸ್‌

  • ವಕ್ಫ್ ಆಸ್ತಿ ಭೂಕಬಳಿಕೆ ಹೆಚ್ಚಿದ್ದಕ್ಕೆ ಬಿಜೆಪಿಯಿಂದ ಹೆಚ್ಚು ನೋಟಿಸ್ ನೀಡಲಾಗಿದೆ – ಕುಮಾರ್ ಬಂಗಾರಪ್ಪ

    ವಕ್ಫ್ ಆಸ್ತಿ ಭೂಕಬಳಿಕೆ ಹೆಚ್ಚಿದ್ದಕ್ಕೆ ಬಿಜೆಪಿಯಿಂದ ಹೆಚ್ಚು ನೋಟಿಸ್ ನೀಡಲಾಗಿದೆ – ಕುಮಾರ್ ಬಂಗಾರಪ್ಪ

    ಬೀದರ್: ಅಂದು ಬೆಂಗಳೂರಿನಲ್ಲಿ ವಕ್ಫ್ ಆಸ್ತಿ ಭೂ ಕಬಳಿಕೆ ಹೆಚ್ಚಾಗಿತ್ತು ಹೀಗಾಗಿ ಬಿಜೆಪಿಯಿಂದ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಆಗಿನ ವಿಧಾನ ಮಂಡಳ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ (Kumar Bangarappa) ಹೇಳಿದರು.

    ಗಡಿ ಜಿಲ್ಲೆಯಲ್ಲಿ ಬಿಜೆಪಿ (BJP) ರೆಬಲ್ಸ್ ಟೀಂ ಇಂದಿನಿಂದ (ನ.25) ವಕ್ಫ್ ವಿರುದ್ಧ ಹೋರಾಟ ಆರಂಭಿಸಿದೆ. ವಕ್ಫ್ ಹಠಾವೋ ಭಾರತ್ ದೇಶ್ ಬಚಾವೋ’ ಘೋಷವಾಕ್ಯದಡಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ತಂಡ ಹೋರಾಟ ನಡೆಸಿದೆ. ಈ ವೇಳೆ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು.ಇದನ್ನೂ ಓದಿ: ಸುತ್ತಿಗೆಯಿಂದ ತಲೆಗೆ ಹೊಡೆದು ಮಗನಿಂದಲೇ ತಂದೆಯ ಹತ್ಯೆ

    `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಮೊದಲು ಬೆಂಗಳೂರಿನಲ್ಲಿ ವಕ್ಫ್ ಆಸ್ತಿ ಭೂ ಕಬಳಿಕೆ ಹೆಚ್ಚಾಗಿತ್ತು ಹೀಗಾಗಿ ಬಿಜೆಪಿ ಸರ್ಕಾರ ಹೆಚ್ಚು ನೋಟಿಸ್‌ಗಳನ್ನು ನೀಡಿದೆ. ಅದರಲ್ಲಿಯೂ ವಾಣಿಜ್ಯ ಉದ್ದೇಶಕ್ಕಾಗಿ, ರಸ್ತೆಗಾಗಿ, ಹೋಟೆಲ್ ನಿರ್ಮಾಣ ಮಾಡಲು ವಕ್ಫ್ ಆಸ್ತಿಯನ್ನು ಕಬಳಿಕೆ ಮಾಡಿದವರಿಗೆ ನೋಟಿಸ್ ನೀಡಲಾಗಿದೆ. ಇನ್ನೂ ಕಾಂಗ್ರೆಸ್ ಸಮಯದಲ್ಲಿ ಅವರು ನೋಟಿಸ್ ನೀಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ಈ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಜಿ.ಎಂ ಸಿದ್ದೇಶ್ವರ್, ಹೊಳಲ್ಕೆರೆ ಚಂದ್ರಪ್ಪ ಸೇರಿ ಹಲವರು ಹೋರಾಟದಲ್ಲಿ ಭಾಗಿಯಾಗಿದ್ದರು.ಇದನ್ನೂ ಓದಿ: ಸಂಭಲ್ ಹಿಂಸಾಚಾರ ನಡೆದಾಗ ನಾನು ಬೆಂಗಳೂರಿನಲ್ಲಿದ್ದೆ: ಎಸ್‌ಪಿ ಸಂಸದನ ಸ್ಪಷ್ಟನೆ

  • ಬಳ್ಳಾರಿಯಲ್ಲೂ ವಕ್ಫ್ ವಿವಾದ – ರೈತರ ಪಿತ್ರಾರ್ಜಿತ ಆಸ್ತಿಗೆ ನೋಟಿಸ್‌

    ಬಳ್ಳಾರಿಯಲ್ಲೂ ವಕ್ಫ್ ವಿವಾದ – ರೈತರ ಪಿತ್ರಾರ್ಜಿತ ಆಸ್ತಿಗೆ ನೋಟಿಸ್‌

    ಬಳ್ಳಾರಿ: ವಕ್ಫ್ ಆಸ್ತಿ ವಿವಾದ (Waqf Land Row) ಇದೀಗ ಬಳ್ಳಾರಿಗೂ (Ballari) ಹಬ್ಬಿದೆ. ಬಳ್ಳಾರಿ (Ballari) ತಾಲೂಕಿನ ಬೊಮ್ಮನಹಾಳ ಗ್ರಾಮದ 10ಕ್ಕೂ ಅಧಿಕ ರೈತರಿಗೆ ವಕ್ಫ್‌ ಬೋರ್ಡ್‌ ನೋಟಿಸ್‌ ನೀಡಿದೆ.

    ಹೇಮರೆಡ್ಡಿ, ಸಿದ್ದುಗೌಡ ಸೇರಿದಂತೆ ಹತ್ತಕ್ಕೂ ಹೆಚ್ಚು ರೈತರಿಗೆ ವಕ್ಫ್‌ ನೋಟಿಸ್‌ (Waqf Notice) ಬಂದಿದೆ. ಸದ್ಯ ನೋಟಿಸ್‌ ಬಂದಿರುವ ರೈತರ ಜಮೀನುಗಳು ಎರಡು ತಲೆಮಾರುಗಳಿಂದ ಒಂದೇ ಕುಟುಂಬಕ್ಕೆ ಸೇರಿದೆ. ಇದನ್ನೂ ಓದಿ: ಕಾಂಗ್ರೆಸ್‌ ಅಮಿಷಕ್ಕೆ ಬಲಿಯಾದರೆ ಮುಂದೆ ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯಲ್ಲ: ತೇಜಸ್ವಿ ಸೂರ್ಯ

    ಪಿತ್ರಾರ್ಜಿತ ಜಮೀನುಗಳಿಗೂ ನೋಟಿಸ್‌ ಬಂದಿರುವ ಕಾರಣ ರೈತರು ಬೆಂಗಳೂರಿನಲ್ಲಿರುವ ವಕ್ಫ್ ಇಲಾಖೆಗೆ ಹೋಗಿ ಬಂದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ರೈತರು ಎಲ್ಲಿ ನಮ್ಮ ಜಮೀನು ಏನಾಗಬಹುದು ಎಂಬ ಆತಂಕದಲ್ಲಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ನಿಲ್ಲದ ವಕ್ಫ್ ಅವಾಂತರ – ಹಿಂದೂ ಅಷ್ಟೇ ಅಲ್ಲ, ಮುಸ್ಲಿಮರ ಪಹಣಿಯಲ್ಲೂ ವಕ್ಫ್!

    ಬೊಮ್ಮನಹಾಳ ಗ್ರಾಮದ 13 ಎಕರೆ ಜಮೀನಿಗೆ ವಕ್ಪ್ ಬೋರ್ಡ್ 2023ರ ಆಗಸ್ಟ್‌ನಲ್ಲಿ ನೋಟಿಸ್‌ ನೀಡಿದೆ. ವಕ್ಪ್‌ ನೋಟಿಸ್‌ ನೋಡಿ ರೈತರು ಕಂಗಾಲಾಗಿದ್ದಾರೆ. ಪಿತ್ರಾರ್ಜಿತ ಆಸ್ತಿಗೆ ಈ ರೀತಿ ನೋಟಿಸ್‌ ನೀಡಿದರೆ ಹೇಗೆ? ನಮ್ಮ ಆಸ್ತಿಗಾಗಿ ನಾವು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆಕ್ರೋಶ ಹೊರಹಾಕಿ ಆಗಿರುವ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.