Tag: ವಕೀಲೆ

  • ತಮಿಳುನಾಡಿನ ರೆಸಾರ್ಟ್‌ನಲ್ಲಿ ಬೆಂಗ್ಳೂರು ಕಾರ್ಪೋರೇಟರ್ ಅರೆಸ್ಟ್

    ತಮಿಳುನಾಡಿನ ರೆಸಾರ್ಟ್‌ನಲ್ಲಿ ಬೆಂಗ್ಳೂರು ಕಾರ್ಪೋರೇಟರ್ ಅರೆಸ್ಟ್

    ಬೆಂಗಳೂರು: ಯುವ ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೋರೇಟರೊಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

    ಎ. ನಾರಾಯಣಪುರದ ಕಾರ್ಪೋರೇಟರ್ ವಿ. ಸುರೇಶ್ ನನ್ನು ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ. ತಮಿಳುನಾಡಿನ ಸೇಲಂ ಬಳಿಯ ಎರ್ರಾಕಾಡ್ ರೆಸಾರ್ಟ್ ನಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

    ಕಾರ್ಪೋರೇಟರ್ ಸುರೇಶ್, ಮೃತ ವಕೀಲೆ ಧರಣಿ ಕುಟುಂಬಕ್ಕೆ ಕಿರುಕುಳ ನೀಡಿರುವ ಆರೋಪ ಹೊತ್ತಿದ್ದನು. ಕಳೆದ ಮೂರು ದಿನಗಳಿಂದ ಈ ಕೇಸಿಗೆ ಸಂಬಂಧಿಸಿದಂತೆ ವಿ.ಸುರೇಶ್‍ಗಾಗಿ ಸಿಐಡಿ ಪೊಲೀಸರು ಬಲೆ ಬೀಸಿದ್ದರು. ಆದರೆ ಪೊಲೀಸರ ಕಣ್ಣಿಗೆ ಕಾಣದೆ ಆರೋಪಿ ತಮಿಳುನಾಡಿನ ಸೇಲಂ ಬಳಿಯಿರುವ ಎರ್ರಾಕಾಡ್ ಎಂಬ ರೆಸಾರ್ಟ್ ನಲ್ಲಿ ಅಡಗಿ ಕೂತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಐಡಿ ಪೊಲೀಸರು ತಮಿಳುನಾಡಿಗೆ ತೆರಳಿ ಆರೋಪಿಯನ್ನು ಬಂಧಿಸಿ ಕರೆ ತಂದಿದ್ದಾರೆ.

    ವಿಚಾರಣೆ ಬಳಿಕ ವೈದ್ಯಕೀಯ ಪರೀಕ್ಷೆಗೆಂದು ಪೊಲೀಸರು ಸುರೇಶ್‍ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ನಂತರ ರಾತ್ರಿ ಸುಮಾರು 1.00 ಗಂಟೆಗೆ ಕೊರಮಂಗಲದಲ್ಲಿ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರು ಪಡಿಸಿದ್ದರು. ಸದ್ಯಕ್ಕೆ ಆರೋಪಿಗೆ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ್ದಾರೆ.

    ಕೆಲ ತಿಂಗಳ ಹಿಂದೆ ಮನೆಯೊಂದರಲ್ಲಿ ವಕೀಲೆ ಧರಣಿ ನೇಣು ಬಿಗಿದುಕೊಂಡ ರೀತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಕೇಸಿಗೆ ಸಂಬಂಧಿಸಿದಂತೆ ಈವರೆಗೂ 11 ಜನ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

  • ‘ಕೈ’ ಕಾರ್ಪೊರೇಟರ್ ಕಿರುಕುಳಕ್ಕೆ ಮಹಿಳಾ ಅಡ್ವೊಕೇಟ್ ಆತ್ಮಹತ್ಯೆ – ತಿಂಗಳಾದ್ರೂ ಆರೋಪಿ ಬಂಧನವಿಲ್ಲ

    ‘ಕೈ’ ಕಾರ್ಪೊರೇಟರ್ ಕಿರುಕುಳಕ್ಕೆ ಮಹಿಳಾ ಅಡ್ವೊಕೇಟ್ ಆತ್ಮಹತ್ಯೆ – ತಿಂಗಳಾದ್ರೂ ಆರೋಪಿ ಬಂಧನವಿಲ್ಲ

    ಬೆಂಗಳೂರು: ನಗರದ ನಾರಾಯಣಪುರ ವಾರ್ಡ್ ನ ಕಾಂಗ್ರೆಸ್ ಕಾರ್ಪೊರೇಟರ್ ಸುರೇಶ್ ಕಿರುಕುಳಕ್ಕೆ ಮಹಿಳಾ ಅಡ್ವೊಕೇಟ್ ಧರಣಿ ಆತ್ಮಹತ್ಯೆ ಮಾಡಿಕೊಂಡು ತಿಂಗಳಾಗಿದೆ. ಆದರೂ ಇದೂವರೆಗೂ ಕಾರ್ಪೊರೇಟರ್ ನ ಬಂಧನವಾಗಿಲ್ಲ.

    ಡಿಸೆಂಬರ್ 31 ರಂದು ಧರಣಿ (25) ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇನ್ನೂ ಕಾರ್ಪೊರೇಟರ್ ನನ್ನು ಬಂಧಿಸಲಾಗಿಲ್ಲ.

    ಉದಯನಗರದಲ್ಲಿ ಅಡ್ವೊಕೇಟ್ ಧರಣಿ 10*20 ಅಳತೆಯ ಜಾಗದಲ್ಲಿ ತಾಯಿಯ ಜೊತೆ ವಾಸವಾಗಿದ್ದರು. ಧರಣಿ ಮನೆ ರಸ್ತೆಗೆ ಸಮೀಪವಿದ್ದರಿಂದ ಅಕ್ಕಪಕ್ಕದ ಮನೆಯವರು ಕೂಡ ಗಲಾಟೆ ಮಾಡುತ್ತಿದ್ದರು. ಇದೇ ನೆಪದಲ್ಲಿ ಕಾರ್ಪೊರೇಟರ್ ಸುರೇಶ್ ಹಾಗೂ ಬೆಂಗಲಿಗರು ಧರಣಿ ಕುಟುಂಬಸ್ಥರಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಹಲ್ಲೆ ಕೂಡ ಮಾಡಿದ್ದರು ಎಂದು ಮೃತ ಧರಣಿ ತಾಯಿ ಆರೋಪ ಮಾಡಿ ಮಹಾದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಒಟ್ಟು 17 ಜನರ ಮೇಲೆ ಎಫ್‍ಐಆರ್ ಕೂಡ ದಾಖಲಿಸಿಕೊಂಡಿದ್ದರು.

    ಮೃತ ಧರಣಿ ಕುಟುಂಬದ ಬೆಂಬಲಕ್ಕೆ ನಿಂತಿದ್ದ ಆಲ್ ಇಂಡಿಯಾ ಅಡ್ವೊಕೇಟರ್ಸ್ ಅಸೋಸಿಯೇಷನ್, ಡಿಜಿಪಿ ನೀಲಮಣಿ ರಾಜು ಹಾಗೂ ಎರಡು ಬಾರಿ ಗೃಹ ಸಚಿವ ಎಂಬಿ ಪಾಟೀಲ್‍ರನ್ನ ಭೇಟಿ ಮಾಡಿ ದೂರು ನೀಡಿದ್ದಾರೆ. ಆದರೂ ಕಾರ್ಪೊರೇಟರ್ ಬಂಧನವಾಗಿಲ್ಲ. ಕಾರ್ಪೊರೇಟರ್ ನ ಬಂಧನಕ್ಕೆ ಪ್ರತಿಭಟನೆ ಮಾಡಿದ್ರೂ ಪೊಲೀಸರು ಕ್ಯಾರೇ ಎಂದಿಲ್ಲ. ಈ ಮೂಲಕ ಪೊಲೀಸರು ರಾಜಕಾರಣಿಗಳ ಜೊತೆ ಸೇರಿಕೊಂಡು ಹಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ತಾಯಿ ಆರೋಪಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಕೀಲೆ ಮೇಲೆ ಅತ್ಯಾಚಾರ ಯತ್ನ ಪ್ರಕರಣ- ಆರೋಪಿಯನ್ನು ಬಂಧಿಸಿದ ಪೊಲೀಸರು

    ವಕೀಲೆ ಮೇಲೆ ಅತ್ಯಾಚಾರ ಯತ್ನ ಪ್ರಕರಣ- ಆರೋಪಿಯನ್ನು ಬಂಧಿಸಿದ ಪೊಲೀಸರು

    ಬೆಂಗಳೂರು: ವಕೀಲೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ರಾಜೇಶ್ ಸಿಂಗ್ ಬಂಧಿತ ಆರೋಪಿ. ರಾಜೇಶ್ ಸಿಂಗ್ ಮೂಲತಃ ಉತ್ತರ ಪ್ರದೇಶ ನಿವಾಸಿಯಾಗಿದ್ದು, ಘಟನೆ ಬಳಿಕ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ.

    ಏನಿದು ಪ್ರಕರಣ?
    ಜನವರಿ 25ರ ತಡರಾತ್ರಿ 11:50 ಸುಮಾರಿಗೆ ವಕೀಲೆ ಕಾರ್ಯ ನಿಮಿತ್ತ ತಡರಾತ್ರಿವರೆಗೂ ತಮ್ಮ ಕಚೇರಿಯಲ್ಲಿ ಉಳಿದಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ರಾಜೇಶ್ ಕಚೇರಿಯಿಂದ ಹೊರಟು ಪಾರ್ಕಿಂಗ್‍ಗೆ ಬಂದು ಲೈಟ್ಸ್ ಆಫ್ ಮಾಡಿದ್ದನು. ಆಗ ವಕೀಲೆ ಮೊಬೈಲ್ ಟಾರ್ಚ್ ಹಾಕಿ ಹೊರಗೆ ಬಂದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಅಲ್ಲಿ ಪ್ರತ್ಯಕ್ಷನಾಗಿ ವಕೀಲೆಯನ್ನು ದುರುಗುಟ್ಟಿ ನೋಡಿ ಡೋರ್ ಲಾಕ್ ಮಾಡಿ ಟಾರ್ಚ್ ಆಫ್ ಮಾಡಿದ್ದನು.

    ಬಳಿಕ ಆರೋಪಿ ವಕೀಲೆಯನ್ನು ಕೆಳಗಡೆ ಬೀಳಿಸಿ ತಲೆ ಭಾಗವನ್ನು ಒತ್ತಿದ್ದನು. ಆರೋಪಿ ವಕೀಲೆಯ ಎದೆ, ಕೈ ಹಾಗೂ ಮೈ ಭಾಗವನ್ನು ಮುಟ್ಟಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದನು. ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾಗ ವಕೀಲೆ ಜೋರಾಗಿ ಕೂಗಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354,354(ಬಿ) ಅಡಿ ಕೇಸ್ ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆಕ್ಯೂರಿಟಿ ಗಾರ್ಡ್​​ನಿಂದ ವಕೀಲೆ ಮೇಲೆ ಅತ್ಯಾಚಾರಕ್ಕೆ ಯತ್ನ

    ಸೆಕ್ಯೂರಿಟಿ ಗಾರ್ಡ್​​ನಿಂದ ವಕೀಲೆ ಮೇಲೆ ಅತ್ಯಾಚಾರಕ್ಕೆ ಯತ್ನ

    ಬೆಂಗಳೂರು: ಸೆಕ್ಯೂರಿಟಿ ಗಾರ್ಡ್ ವಕೀಲೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನ ಅಶೋಕನಗರದಲ್ಲಿ ನಡೆದಿದೆ.

    ವಕೀಲೆ ಕಾರ್ಯ ನಿಮಿತ್ತ ತಡರಾತ್ರಿವರೆಗೂ ತಮ್ಮ ಕಚೇರಿಯಲ್ಲಿ ಉಳಿದಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಕಚೇರಿಯಿಂದ ಹೊರಟು ಪಾರ್ಕಿಂಗ್‍ಗೆ ಬಂದು ಲೈಟ್ಸ್ ಆಫ್ ಮಾಡಿದ್ದಾನೆ. ಬಳಿಕ ಸೆಕ್ಯೂರಿಟಿ ಗಾರ್ಡ್ ವಕೀಲೆಯ ಮೈ ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಸೆಕ್ಯೂರಿಟಿ ಗಾರ್ಡ್ ಮೈ ಮುಟ್ಟುತ್ತಿದ್ದಂತೆ ವಕೀಲೆ ಭಯದಿಂದ ಕೂಗಿದ್ದಾರೆ. ಬಳಿಕ ಸೆಕ್ಯೂರಿಟಿ ಗಾರ್ಡ್ ಅಲ್ಲಿಂದ ಪರಾರಿ ಆಗಿದ್ದಾನೆ. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸೆಕ್ಯೂರಿಟಿ ಗಾರ್ಡ್ ನನ್ನು ಹುಡುಕುತ್ತಿದ್ದಾರೆ.

    ದೂರಿನಲ್ಲಿ ಏನಿದೆ?
    ನಾನು ಶುಕ್ರವಾರ ರಾತ್ರಿ ಸುಮಾರು 9.30ಕ್ಕೆ ಆಫೀಸ್ ಕೆಲಸ ಮಾಡುತ್ತಿದ್ದಾಗ ಅದೇ ಬಿಲ್ಡಿಂಗ್ ಸೆಕ್ಯೂರಿಟಿ ಗಾರ್ಡ್(ಹೆಸರು ಗೊತ್ತಿಲ್ಲ) ಆಫೀಸ್‍ವೊಳಗೆ ಬಂದಿದ್ದಾನೆ. ಬಳಿಕ ರಾತ್ರಿ ಸುಮಾರು 11.50ಕ್ಕೆ ಆಫೀಸ್‍ವೊಳಗೆ ಲೈಟ್ಸ್ ಆಫ್ ಆಗಿತ್ತು. ಆಗ ನಾನು ಮೊಬೈಲ್ ಟಾರ್ಚ್ ಹಾಕಿ ಹೊರಗೆ ಬಂದೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಅಲ್ಲಿ ಪ್ರತ್ಯಕ್ಷನಾಗಿ ದುರುಗುಟ್ಟಿ ನೋಡಿ ಡೋರ್ ಲಾಕ್ ಮಾಡಿ ಟಾರ್ಚ್ ಆಫ್ ಮಾಡಿದ್ದಾನೆ. ಬಳಿಕ ಆರೋಪಿ ನನಗೆ ಕೆಳಗೆ ಬೀಳಿಸಿ ತಲೆ ಭಾಗವನ್ನು ಒತ್ತಿದ್ದು, ಆಗ ಆತ ಕುಡಿದಂತೆ ಅನಿಸಿತ್ತು. ಆರೋಪಿ ತನ್ನ ಎದೆ, ಕೈ ಹಾಗೂ ಮೈ ಭಾಗವನ್ನು ಮುಟ್ಟಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ನಾನು ಆಗ ಜೋರಾಗಿ ಕೂಗಾಡಿದ್ದರಿಂದ ಆತ ಅಲ್ಲಿಂದ ಪರಾರಿ ಆಗಿದ್ದಾನೆ ಎಂದು ವಕೀಲೆ ದೂರಿನಲ್ಲಿ ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ ಕಾರ್ಪೋರೇಟರ್ ಕಿರುಕುಳಕ್ಕೆ ಬೇಸತ್ತು ವಕೀಲೆ ಆತ್ಮಹತ್ಯೆ?

    ಕಾಂಗ್ರೆಸ್ ಕಾರ್ಪೋರೇಟರ್ ಕಿರುಕುಳಕ್ಕೆ ಬೇಸತ್ತು ವಕೀಲೆ ಆತ್ಮಹತ್ಯೆ?

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ಕಿರುಕುಳ ತಾಳಲಾರದೇ ಎ. ನಾರಾಯಣಪುರ ವಾರ್ಡ್ ನಲ್ಲಿ ವಕಿಲೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಧರಣಿ ಆತ್ಮಹತ್ಯೆ ಮಾಡಿಕೊಂಡ ವಕೀಲೆ. ನಗರದ ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಎ. ನಾರಾಯಣಪುರ ವಾರ್ಡ್ ಕಾರ್ಪೋರೇಟರ್ ಆಗಿರುವ ಸುರೇಶ್ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಈ ಕಿರುಕುಳದಿಂದ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ದೇವಿ ಆರೋಪಿಸಿದ್ದಾರೆ.

    ತಾಯಿಯ ಆರೋಪ ಏನು?
    ಧರಣಿಗೆ ಕಾರ್ಪೋರೇಟರ್ ಸುರೇಶ್ ಮನೆಯ ಮುಂಭಾಗದ ಜಾಗದ ವಿಚಾರವಾಗಿ ಕಳೆದ 4 ತಿಂಗಳಿನಿಂದ ಕಿರುಕುಳ ಕೊಡುತ್ತಿದ್ದರು. ಅಲ್ಲದೇ ಕಾರ್ಪೋರೇಟರ್ ಬೆಂಬಲಿಗರಿಂದಲೂ ಹಲ್ಲೆ ಮಾಡಿ, ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದರು ಎಂದು ದೇವಿ ಅವರು ಆರೋಪಿಸಿದ್ದಾರೆ.

    ಸುರೇಶ್ ಕಿರುಕುಳದಿಂದಲೇ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ನನಗೆ ನ್ಯಾಯ ನೀಡಿ ಎಂದು ದೇವಿ ಅವರು ಅಂಗಲಾಚಿದ್ದಾರೆ. ಅಲ್ಲದೇ ಧರಣಿ ಸಾವಿಗೆ ಕಾರ್ಪೋರೇಟರ್ ನೇರ ಹೊಣೆ ಎಂದು ವಕೀಲರ ಸಂಘ ಆರೋಪಿಸಿದೆ. ಸೋಮವಾರ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಮುಂಭಾಗದಲ್ಲಿ ಸುರೇಶ್ ಅಟ್ಟಹಾಸದ ವಿರುದ್ಧ ಪ್ರತಿಭಟನೆಯೂ ನಡೆಸಿದ್ದಾರೆ.

    ಈ ಹಿಂದೆಯೂ ಸುರೇಶ್ ಕಿರುಕುಳದ ಬಗ್ಗೆ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದಾದ ಬಳಿಕ ಪದೇ ಪದೇ ಧರಣಿ ಮನೆಗೆ ಹೋಗುತ್ತಿದ್ದ ಸುರೇಶ್ ಗಲಾಟೆ ಮಾಡಿ ಬರುತ್ತಿದ್ದ ಎಂದು ಆರೋಪಿಸಿದ್ದಾರೆ.

    ಆತ್ಮಹತ್ಯೆ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾದ ಬಳಿಕ ಸುರೇಶ್ ನಾಪತ್ತೆಯಾಗಿದ್ದು, ಫೋನ್ ಸ್ವಿಚ್ ಆಫ್ ಆಗಿದೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಧರಣಿ ಸಹೋದರ, ಕಾರ್ಪೋರೇಟರ್ ಮೇಲೆ ದೂರು ನೀಡಿದ ಕಾರಣ ನಮ್ಮ ಮನೆಗೆ ವಿದ್ಯುತ್, ನೀರಿನ ಸಂಪರ್ಕ ಕಡಿತಗೊಳಿಸಲಾಯಿತು. ಪಾಲಿಕೆ ಸದಸ್ಯ ಎನ್ನುವ ಕಾರಣಕ್ಕೆ ಅಕ್ಕಪಕ್ಕದ ಮನೆಯವರು ಏನು ಮಾಡಲಾಗದೇ ಕೈ ಚೆಲ್ಲಿದ್ದರು. ಅಲ್ಲದೇ ನಮ್ಮ ಮೇಲೆಯೇ ದೂರು ದಾಖಲಿಸಿ ನಮ್ಮ ತಾಯಿ, ಸಹೋದರಿಯನ್ನು ಠಾಣೆಯಲ್ಲೇ ಇರಿಸಿದ್ದರು. ಈ ವೇಳೆ ಸಹೋದರಿ ಸ್ನೇಹಿತರ ಸಹಾಯ ಪಡೆದು ಜಾಮೀನು ಪಡೆದು ಹೊರ ಬಂದಿದ್ದರು. ಪೊಲೀಸರು ಕೂಡ ಕಾರ್ಪೋರೇಟರ್ ಬೆಂಬಲಕ್ಕೆ ನಿಂತಿದ್ದರು ಎಂದು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಚೇರಿಯಲ್ಲೇ ಮಹಿಳಾ ವಕೀಲೆಯ ಮೇಲೆ ಹಿರಿಯ ವಕೀಲನಿಂದ ಅತ್ಯಾಚಾರ!

    ಕಚೇರಿಯಲ್ಲೇ ಮಹಿಳಾ ವಕೀಲೆಯ ಮೇಲೆ ಹಿರಿಯ ವಕೀಲನಿಂದ ಅತ್ಯಾಚಾರ!

    ನವದೆಹಲಿ: ಹಿರಿಯ ವಕೀಲನೊಬ್ಬ ತನ್ನ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ವಕೀಲೆ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಸಾಕೇತ್ ನ್ಯಾಯಾಲಯದ ಬಳಿ ಇರುವ ಕಚೇರಿಯಲ್ಲೇ ಹಿರಿಯ ವಕೀಲ ತನ್ನ ಬಳಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಅತ್ಯಾಚಾರ ಮಾಡಿದ್ದಾನೆ ಎಂದು ದಕ್ಷಿಣ ದೆಹಲಿಯ ಉಪ ಪೊಲೀಸ್ ಆಯುಕ್ತರಾದ ರೊಮಿಲಾ ಬಾನಿಯಾರವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಭಾನುವಾರ ಸಂಜೆ ಸಂತ್ರಸ್ತೆ ಮಹಿಳೆಯು ತನ್ನ ಹಿರಿಯ ವಕೀಲ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

    ಘಟನೆ ಸಂಬಂಧ 50 ವರ್ಷ ವಯಸ್ಸಿನ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ನಿವಾಸಿಯಾಗಿದ್ದು, ಅತ್ಯಾಚಾರ ಎಸಗಿದ ಕಚೇರಿಯನ್ನು ಈಗಾಗಲೇ ಬಂದ್ ಮಾಡಲಾಗಿದೆ. ಅಲ್ಲದೇ ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಯನ್ನು ವಿಚಾರಣೆಯ ನಂತರ ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾವುದು ಎಂದು ಪೊಲೀಸರು ತಿಳಿಸಿದ್ದಾರೆ.

  • KSRTC ಬಸ್ ಗೆ ಕಾರ್ ಡಿಕ್ಕಿ – ಯುವ ವಕೀಲೆ ದುರ್ಮರಣ

    KSRTC ಬಸ್ ಗೆ ಕಾರ್ ಡಿಕ್ಕಿ – ಯುವ ವಕೀಲೆ ದುರ್ಮರಣ

    ಮಂಗಳೂರು: ಕೆಎಸ್‍ಆರ್ ಟಿಸಿ ಬಸ್ ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಯುವ ವಕೀಲೆಯೊಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಗಾಯತ್ರಿ(23) ಎಂದು ಗುರುತಿಸಲಾಗಿದೆ. ಬಂಟ್ವಾಳದ ಕುಳಗ್ರಾಮದ ನಿವಾಸಿಯಾಗಿರೋ ಇವರು ಮಂಗಳೂರಿನಲ್ಲಿ ವಕೀಲರೊಬ್ಬರ ಬಳಿ ತರಬೇತಿ ಪಡೆಯುತ್ತಿದ್ದರು. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಶನಿವಾರ ಮಧ್ಯಾಹ್ನ ಕೆಎಸ್ಆರ್  ಟಿಸಿ ಬಸ್ ಸುಳ್ಯಪದವುನಿಂದ ಪುತ್ತೂರು ಕಡೆಗೆ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಆರ್ಯಾಪು ಗ್ರಾಮದ ಸಂಪ್ಯ ಮಸೀದಿ ಬಳಿ ಎದುರುಗಡೆಯಿಂದ ಅತಿ ವೇಗದಿಂದ ಬರುತ್ತಿದ್ದ ಬಿಳಿ ಬಣ್ಣದ ವ್ಯಾಗನಾರ್ ಕಾರ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರ್ ಚಾಲಕ ಯೋಗಿಶ್ ಹಾಗೂ ಗಾಯತ್ರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಗಾಯತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಕಾರಿನ  ಮುಂದಿನ ಭಾಗ ನಜ್ಜುಗುಜ್ಜಾಗಿದೆ.

    ಕಾರ್ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯಿಂದಾಗಿ ಈ ಅಪಘಾತ ಸಂಭವಿಸಿದೆ ಅಂತ ಹೇಳಲಾಗುತ್ತಿದೆ. ಈ ಘಟನೆ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.