ಪಾಟ್ನಾ: ನಡುರಸ್ತೆಯಲ್ಲೇ ವಕೀಲನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ.
ಸಾರ್ವಜನಿಕರ ಎದುರೇ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ರಾಜ್ಯದಲ್ಲಿ ಒಂದು ವಾರದಲ್ಲಿ ನಡೆದ ಮೂರನೇ ಕೊಲೆ ಇದಾಗಿದೆ. ಪಾಟ್ನಾದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತವಾಗಿದೆ.
ವಕೀಲ ಜಿತೇಂದ್ರ ಕುಮಾರ್ ಅವರನ್ನು ಗುಂಡು ಹಾರಿಸಿ ಕೊಲ್ಲಲಾಯಿತು. ಕನಿಷ್ಠ ಮೂರು ಗುಂಡುಗಳನ್ನು ಹಾರಿಸಿ ದಾಳಿಕೋರರು ಪರಾರಿಯಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿಕೋರರನ್ನು ಗುರುತಿಸಲು ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಗಂಭೀರ ಗಾಯಗೊಂಡಿದ್ದ ವಕೀಲನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ದಾಳಿ ನಡೆದಾಗ ಜಿತೇಂದ್ರ ಕುಮಾರ್ ರಸ್ತೆ ಬದಿಯ ಅಂಗಡಿಯಲ್ಲಿ ಚಹಾ ಕುಡಿಯಲು ಹೋಗಿದ್ದಾಗ ಘಟನೆ ನಡೆದಿದೆ. ಅಪರಾಧ ನಡೆದ ಸ್ಥಳದಿಂದ ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಈ ವಾರದ ಆರಂಭದಲ್ಲಿ ಬಿಹಾರದ ಪ್ರಮುಖ ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆಯಾಗಿತ್ತು. ಇವರ ಬೆನ್ನಲ್ಲೇ ಪಶುವೈದ್ಯ ಮತ್ತು ರೈತರಾಗಿದ್ದ ಬಿಜೆಪಿ ನಾಯಕ ಸುರೇಂದ್ರ ಕೆವಾತ್ ಅವರನ್ನು ಸಹ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಎಸ್‌ಡಿಆರ್‌ಎಫ್, ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ. ಗುರುವಾರ ಸುಭಾಷ್ ಪಾಟಣಕರ ಪತ್ತೆಗಾಗಿ ಆಗ್ರಹಿಸಿ ಪೋಲಿಸರ ವಿರುದ್ಧ ವಕೀಲರು ಪ್ರತಿಭಟನೆ ನಡೆಸಿದ್ದರು.
ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸುವಂತೆ ವಕೀಲರು ಆಗ್ರಹಿಸಿದ್ದಾರೆ. ಅಥಣಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಬೆಂಗಳೂರು: ಕೋರ್ಟ್ ಆವರಣದಲ್ಲೇ ವಕೀಲರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆನೇಕಲ್ ಗಡಿ ಹೊಸೂರಿನಲ್ಲಿ ನಡೆದಿದೆ.
ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನ ನಡೆದಿದೆ. ಕಣ್ಣನ್, ಕೋರ್ಟ್ ಆವರಣದಲ್ಲಿ ಹಲ್ಲೆಗೊಳಗಾದ ವಕೀಲ. ಆನಂದ್ ಎಂಬಾತ ಮಚ್ಚಿನಿಂದ ಕೊಚ್ಚಿ ಹಲ್ಲೆ ಮಾಡಿದ್ದಾನೆ. ಅನೈತಿಕ ಸಂಬಂಧ ಹಿನ್ನೆಲೆ ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ.
ಪೊಲೀಸ್ ಠಾಣೆ, ನ್ಯಾಯಾಲಯ ಹಾಗೂ ಹೊಸೂರು ಒಂದೇ ಕಡೆ ಇದ್ದ ಜಾಗ. ಇಂತಹ ಸ್ಥಳದಲ್ಲೇ ವಕೀಲನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ಸ್ಥಳಕ್ಕೆ ಹೊಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ವಕೀಲ ಕಣ್ಣನ್ ಮೇಲೆ ಹಲ್ಲೇ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಹಲ್ಲೆ ಖಂಡಿಸಿ ರಸ್ತೆಯಲ್ಲಿ ಕುಳಿತು ವಕೀಲರು ಪ್ರತಿಭಟನೆ ಮಾಡಿದ್ದಾರೆ. ಆರೋಪಿಗೆ ತಕ್ಕ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇ ಗೌಡಗೆ (Advocate Devaraje Gowda) ಜಾಮೀನು ಮಂಜೂರು ಆಗಿದೆ.
ದೇವರಾಜೇ ಗೌಡ ಅವರು ಜಾಮೀನು ಕೋರಿ ಹೈಕೋರ್ಟ್‍ಗೆ (Highcourt) ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ.ಜಿ ಉಮಾ ಅವರಿದ್ದ ಏಕಸದಸ್ಯ ಪೀಠ ಜಾಮೀನು ನೀಡಿ ಇಂದು ಆದೇಶ ನೀಡಿದೆ.
ಏನಿದು ಪ್ರಕರಣ?: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಬಿಡುಗಡೆ ಮಾಡಿರುವ ಆರೋಪ ಎದುರಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಮಹಿಳೆಯೊಬ್ಬರ ಮೇಲೆ ದೇವರಾಜೇ ಗೌಡ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್‍ಡ್ರೈವ್ ಪ್ರಕರಣವು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಬಿಜೆಪಿ ಮುಖಂಡ ದೇವರಾಜೇಗೌಡ ಮತ್ತು ಮಾಜಿ ಸಂಸದ ಎಲ್‍ಆರ್ ಶಿವರಾಮೇಗೌಡ (Shivarame Gowda) ಮಾತಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ವೈರಲ್ ಆಗಿದೆ.
ಎಸ್‍ಐಟಿಯವರು ಮಾಹಿತಿ ಕೇಳಿದ್ರೆ, ಡಿಕೆ ಶಿವಕುಮಾರ್ ಬಗ್ಗೆ ಏನು ಹೇಳಬೇಡ ಎಂದು ಎಲ್ ಆರ್ ಶಿವರಾಮೇಗೌಡ, ದೇವರಾಜೆಗೌಡ ಗೌಡಗೆ ಹೇಳುತ್ತಾರೆ. ಈ ಆಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ.
ಆಡಿಯೋದಲ್ಲಿ ಏನಿದೆ..?:
ದೇವರಾಜೇಗೌಡ: ನಮಗೆ ನೋಟಿಸ್ ಕೊಡ್ತಾರಾ ಅಣ್ಣ ಎಸ್‍ಐಟಿಯವರು
ಶಿವರಾಮೇಗೌಡ: ಕೊಡ್ತಾರೆ…ಕೊಡ್ತಾರೆ…ಕೊಡ್ತಾರೆ…
ದೇವರಾಜೆಗೌಡ: ಅಲ್ಲಿ ಏನು ಮಾತಾಡೋದು ಅಣ್ಣ ಬೇರೆ…?
ಶಿವರಾಮೇಗೌಡ: ಎಸ್‍ಐಟಿ ಅವರು ನೋಟಿಸ್ ಕೊಟ್ಟಾಗಲು ಡಿಕೆ ಬಗ್ಗೆ ಚಕಾರ ಎತ್ತಬೇಡ….
ದೇವರಾಜೆಗೌಡ: ಸರಿ ಸರಿ ಅಣ್ಣ….
ಶಿವರಾಮೇಗೌಡ: ನಾನ್ ಇವತ್ತಿಂದ ಹೋರಾಟ ಮಾಡ್ತಿಲ್ಲ..
ದೇವರಾಜೆಗೌಡ: ಹೌದಾ ಅಣ್ಣ
ಶಿವರಾಮೇಗೌಡ: ಈ ಕೃತ್ಯಗಳೆಲ್ಲಾ ಕಡಿಮೆ ಮಾಡಬೇಕು.. ನಮ್ಮ ತಾಲೂಕು ಕ್ಲೀನ್ ಆಗಬೇಕು ಅಂತಾ ನಾನು ಬಹಳ ದಿವಸದಿಂದ ಹೋರಾಟ ಮಾಡ್ತಾ ಇದ್ದೀನಿ… ವೀಡಿಯೋ ಬಿಟ್ಟಿರೋದು ಫೇಸ್‍ಬುಕ್‍ನಲ್ಲಿ.. ನಾನು ಹೋರಾಟ ಮಾಡ್ತಾ ಇದ್ದೀನಿ… ಕೋರ್ಟ್‍ನಲ್ಲೂ ಅವರ ವಿರುದ್ದವಾಗಿ ಹೋರಾಟ ಮಾಡಿದ್ದೀನಿ.. ಇದು ಬಿಟ್ರೆ ಬೇರೆ ಚರ್ಚೆನೆ ಇಲ್ಲ ಅಂತಾ ಹೇಳು….
ದೇವರಾಜೆಗೌಡ: ಸರಿ ಸರಿ ಅಣ್ಣ..
ಈ ಹಿಂದೆ ಡಿಕೆ ಶಿವಕುಮಾರ್ ಹಾಗೂ ಶಿವರಾಮೇ ಗೌಡ ಮಾತನಾಡಿದ್ದರು ಎನ್ನಲಾದ ಆಡಿಯವನ್ನು ದೇವರಾಜೇ ಗೌಡರೇ ರಿಲೀಸ್ ಮಾಡಿದ್ದರು. ಇದೀಗ ಮತ್ತೊಂದು ಆಡಿಯೋ ವೈರಲ್ ಆಗುವ ಮೂಲಕ ಪ್ರಕರನವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ದೇವರಾಜೇ ಗೌಡ ಪೊಲೀಸ್ ವಶಕ್ಕೆ: ಇತ್ತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇವರಾಜೇಗೌಡ ವಿರುದ್ಧ ಏಪ್ರಿಲ್ 1ರಂದು ಹೊಳೆನರಸೀಪುರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅವರು ಪ್ರಮುಖ ಮಾಹಿತಿದಾರರಾದ್ದರಿಂದ ಅದು ಇತ್ತೀಚೆಗೆ ಬೆಳಕಿಗೆ ಬಂದಿದೆ.
ಪ್ರಜ್ವಲ್ ರೇವಣ್ಣ ಅವರು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಕಳೆದ ವರ್ಷ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದ ದೇವರಾಜೇಗೌಡ, ಹಾಸನದಿಂದ ಜೆಡಿಎಸ್ ಸಂಸದರಿಗೆ ಲೋಕಸಭೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದರು. ಅಲ್ಲದೇ ಪ್ರಜ್ವಲ್ ಲೈಂಗಿಕ ಕಿರುಕುಳದ ವೀಡಿಯೋಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ರಾಜ್ಯದ ಕಾಂಗ್ರೆಸ್ ನಾಯಕರನ್ನು ದೂಷಿಸಿದ್ದರು.
ಬೀದರ್: ವಕೀಲನ ಮೇಲೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿ ಬೀದರ್ (Bidar) ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಜಮೀನು ಖರೀದಿ ಮಾಡುವ ವಿಚಾರಕ್ಕೆ ಹಲ್ಲೆ ಮಾಡಿದ ಒಟ್ಟು ಆರು ಜನ ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದು, ಪರಾರಿಯಾಗಿರುವ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅರೆಸ್ಟ್ ಆಗಲೇಬೇಕು: ಜೋಶಿ
ಕೃತ್ಯಕ್ಕೆ ಬಳಸಿದ್ದ ಕಾರು, ಖಾರದ ಪುಡಿ ಹಾಗೂ ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಐದು ಲಕ್ಷ ರೂ. ಹಣ ನೀಡಿ ಜಮೀನು ಮಾಲೀಕ ಕೊಲೆಗೆ ಸುಪಾರಿ ನೀಡಿದ್ದು, ಆರು ಜನ ಆರೋಪಿಗಳು ಬೀದರ್ ಜಿಲ್ಲೆಯವರಾಗಿದ್ದಾರೆ. ವಕೀಲನ ಕೊಲೆಗೆ ಸುಪಾರಿ ಕೊಟ್ಟವರು ನಾಪತ್ತೆಯಾಗಿದ್ದಾರೆ.
ಏಪ್ರಿಲ್ 28 ರಂದು ಕಣ್ಣಿಗೆ ಖಾರದ ಪುಡಿ ಹಾಕಿ ಜಾಬ್ ಶೆಟ್ಟಿ ಎಂಬ ವಕೀಲನ ಮೇಲೆ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಕೊಲೆಗೆ ಯತ್ನ ಮಾಡಿದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರಿಗೆ ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜೆಪಿ ನಡ್ಡಾ ವಿರುದ್ಧ ದೂರು-ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು
ನೋಟಿಸ್‌ನಲ್ಲೇನಿದೆ..?: ತಮ್ಮ ಅಂಗಡಿಯಿಂದ ಖರೀದಿಸಿದ್ದ ಬೂಟುಗಳು ಹರಿದಿದ್ದರಿಂದ ತನ್ನ ಸೋದರಳಿಯನ ಮದುವೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದು, ನಾನು ಕಾನ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕಾಯಿತು ಎಂದು ನೋಟಿಸ್‌ನಲ್ಲಿ ತ್ರಿಪಾಠಿ ತಿಳಿಸಿದ್ದಾರೆ.
ಏನಿದು ಘಟನೆ..?: ವೃತ್ತಿಯಲ್ಲಿ ವಕೀಲರಾಗಿರುವ ತ್ರಿಪಾಠಿಯವರು ಕಳೆದ ವರ್ಷ ನವೆಂಬರ್ 21 ರಂದು ಸಲ್ಮಾನ್ ಹುಸೇನ್ ಅವರ ಅಂಗಡಿಯಿಂದ ಶೂಗಳನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆರು ತಿಂಗಳ ವಾರಂಟಿಯೊಂದಿಗೆ ಪ್ರತಿಷ್ಠಿತ ಬ್ರಾಂಡ್‌ನ ಶೂಗಳು ಎಂದು ಅಂಗಡಿಯವನು ಹೇಳಿದ್ದಾನೆ. ಆದರೆ ಈ ಶೂಗಳು ಕೆಲವೇ ದಿನಗಳಲ್ಲಿ ಹರಿದುಹೋಗಿವೆ. ಈ ಕಾರಣದಿಂದ ತನ್ನ ಸೋದರಳಿಯನ ಮದುವೆಗೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ನನಗೆ ಮಾನಸಿಕ ಒತ್ತಡ ಉಂಟಾಗಿದೆ. ಪರಿಣಾಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ತ್ರಿಪಾಠಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಕೇಸ್ – ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಅಂಗಡಿ ಮಾಲೀಕನಿಗೆ ನೋಟಿಸ್: ಜನವರಿ 19ರಂದು ಅಂಗಡಿಯವರಿಗೆ ನೋಟಿಸ್ ಕಳುಹಿಸಿದ್ದು (Lawyer Given Notice To shop Owner), ಅದರಲ್ಲಿ ಚಿಕಿತ್ಸೆಗೆ 2,100 ರೂ. ಖರ್ಚಾಗಿದ್ದು, ಖರೀದಿಸಿದ ಶೂಗೆ 1,200 ರೂ. ನೀಡಿದ್ದೇನೆ. ಹೀಗಾಗಿ ನನಗೆ 10 ಸಾವಿರ ನೀಡುವಂತೆ ತ್ರಿಪಾಠಿ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಅಂಗಡಿ ಮಾಲೀಕ ಪರಿಹಾರ ನೀಡಲು ವಿಫಲವಾದರೆ ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.
ಆರೋಪ ನಿರಾಕರಿಸಿದ ಮಾಲೀಕ: ಇತ್ತ ಅಂಗಡಿಯ ಮಾಲೀಕ ಸಲ್ಮಾನ್ ಹುಸೇನ್ ಅವರು ತ್ರಿಪಾಠಿ ತಮ್ಮ ಅಂಗಡಿಯಿಂದ ಶೂಗಳನ್ನು ಖರೀದಿಸಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಆದರೆ ಅವರು ಪ್ರತಿಷ್ಠಿತ ಬ್ರಾಂಡ್‌ನ ಶೂಗಳನ್ನು ನೀಡಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತ್ರಿಪಾಠಿಯವರು 50% ರಿಯಾಯಿತಿಯಲ್ಲಿ ಶೂಗಳನ್ನು ಖರೀದಿಸಿದ್ದಾರೆ. ಆರು ತಿಂಗಳೊಳಗೆ ಶೂನ ಅಡಿಭಾಗವು ಹಾನಿಗೊಳಗಾಗುವುದಿಲ್ಲ ಎಂದು ಹೇಳಿದ್ದೆ. ಅದರಂತೆ ಏನೂ ಆಗಿಲ್ಲ. ಅವರು ಬಲವಂತವಾಗಿ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಸಂಬಂಧ ನನ್ನ ಮೇಲೆ ಅವರು ಮಾಡುತ್ತಿರುವ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.
ಕಲಬುರಗಿ: ಕೋರ್ಟ್‌ಗೆ (Court) ತೆರಳುತ್ತಿದ್ದ ವೇಳೆ ವಕೀಲರೊಬ್ಬರನ್ನು (Lawyer) ಕೆಲ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.
ವೀರಣ್ಣ ಗೌಡ ಹತ್ಯೆಯಾದ ವಕೀಲ. ಇಂದು ಬೆಳಗ್ಗೆ ವೀರಣ್ಣ ಗೌಡ ಅವರನ್ನು ಹಂತಕರು ಶ್ರೀ ಗಂಗಾ ಅಪಾರ್ಟ್ಮೆಂಟ್‌ನಲ್ಲಿ ಕೊಲೆ ಮಾಡಿದ್ದಾರೆ. ಕೋರ್ಟ್‌ಗೆ ತೆರಳುತ್ತಿದ್ದ ವೇಳೆ ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ. ಜಮೀನು ವಿವಾದಕ್ಕೆ (Land Dispute) ಸಂಬಂಧಿಸಿದಂತೆ ವೀರಣ್ಣ ಗೌಡ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಹಮಾಸ್ ಜೊತೆ ಗುಂಡಿನ ಚಕಮಕಿ; ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಸಾವು
ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಹತ್ಯೆಗೆ ಸಂಬಂಧಿಸಿದಂತೆ 6 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ನೀಲಕಂಠ ಪೊಲೀಸ್ ಪಾಟೀಲ್, ವಿಜಯಕುಮಾರ್, ಸಿದ್ದಣ್ಣಗೌಡ, ಸಿದ್ರಾಮ್, ಅವ್ವಣ್ಣ, ಗುರು ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಲಾರಿ, ಟಾಟಾ ಏಸ್ ನಡುವೆ ಡಿಕ್ಕಿ – ನಾಲ್ವರ ದುರ್ಮರಣ, ಓರ್ವನ ಸ್ಥಿತಿ ಗಂಭೀರ
ಚಂಡೀಗಢ: ಪಂಜಾಬ್‌ನ (Punjab) ಹೃದಯಭಾಗದಲ್ಲಿರುವ ರೋಪಾರ್‌ನ ಗ್ಯಾನಿ ಜೈಲ್ ಸಿಂಗ್ ನಗರ ಎಂಬ ಶಾಂತ ಪಟ್ಟಣದಲ್ಲಿ ಒಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ನಗರದ ಖ್ಯಾತ ವಕೀಲನೊಬ್ಬ (Lawyer) ತನ್ನ ವೃದ್ಧ ತಾಯಿಗೆ (Mother) ಮನಬಂದಂತೆ ಥಳಿಸಿ ಅಮಾನವೀಯವಾಗಿ ನಡೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆರೆಹೊರೆಯವರು ಘಟನೆಯನ್ನು ತಿಳಿದು ಬೆಚ್ಚಿಬಿದ್ದಿದ್ದಾರೆ.
ವೃದ್ಧ ಮಹಿಳೆ ಆಶಾರಾಣಿ (73) ತನ್ನ ಮಗ, ಸೊಸೆ ಹಾಗೂ ಮೊಮ್ಮಗನೊಂದಿಗೆ ಪಂಜಾಬ್‌ನ ರೂಪ್‌ನಗರದಲ್ಲಿ ವಾಸವಿದ್ದರು. ಚೆನ್ನಾಗಿ ಓದಿಸಿ, ಲಾಯರ್ ಆಗುವವರೆಗೆ ಪೋಷಿಸಿದ ತಾಯಿಗೇ ಮಗನಾದ ಅಂಕುರ್ ವರ್ಮಾ ನಿರ್ದಯವಾಗಿ ಪದೇ ಪದೇ ಥಳಿಸಿದ್ದಾನೆ. ಈ ಕೃತ್ಯಕ್ಕೆ ವೃದ್ಧೆಯ ಸೊಸೆ ಹಾಗೂ ಮೊಮ್ಮಗನೂ ಸಾಥ್ ನೀಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ.
ಆಶಾರಾಣಿ ಅವರ ಪತಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಇದಾದ ಬಳಿಕ ವೃದ್ಧೆಗೆ ಮಗ ಹಾಗೂ ಸೊಸೆ ದೈಹಿಕ ಹಿಂಸೆ ನೀಡುತ್ತಿದ್ದರು. ಅವರ ಈ ಎಲ್ಲಾ ಕೃತ್ಯಗಳು ತಾಯಿಯ ಕೊಠಡಿಯಲ್ಲಿ ಮಗನೇ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನು ಕಂಡುಹಿಡಿಯುವಲ್ಲಿ ವೃದ್ಧೆಯ ಮಗಳಾದ ದೀಪಶಿಖಾ ಯಶಸ್ವಿಯಾಗಿದ್ದಾರೆ. ತನ್ನ ಸಹೋದರನ ಕೃತ್ಯ ಕಣ್ಣಾರೆ ಕಂಡು ದೀಪಶಿಖಾ ದಿಗ್ಬ್ರಮೆಗೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬಿಎಂಟಿಸಿಗೆ ಇಬ್ಬರು ಬಲಿ
ವೀಡಿಯೋದಲ್ಲೇನಿದೆ?
ಸಂತ್ರಸ್ತೆಯ ಮೊಮ್ಮಗ ಮೊದಲು ಆಶಾರಾಣಿ ಅವರ ಹಾಸಿಗೆ ಮೇಲೆ ನೀರು ಸುರಿಯುವುದು ಕಂಡುಬಂದಿದೆ. ನಂತರ ವೃದ್ಧೆ ಹಾಸಿಗೆ ಒದ್ದೆ ಮಾಡಿದ್ದಾಗಿ ಹೆತ್ತವರಿಗೆ ದೂರು ನೀಡಿದ್ದಾನೆ. ನಂತರ ಆರೋಪಿ ಅಂಕುರ್ ಹಾಗೂ ಆತನ ಪತ್ನಿ ಸುಧಾ ಹಾಸಿಗೆಯನ್ನು ಪರಿಶೀಲಿಸಿದ್ದಾರೆ. ವೃದ್ಧ ತಾಯಿಯೇ ಹಾಸಿಗೆ ಒದ್ದೆ ಮಾಡಿದ್ದಾಗಿ ಭಾವಿಸಿ ಅಂಕುರ್ ಆಕೆಗೆ ಹಾಸಿಗೆ ಮೇಲೆ ಮಲಗಿದ್ದಾಗಲೇ ಪದೇ ಪದೇ ಹಲ್ಲೆ ಮಾಡಿದ್ದಾನೆ. ಆಕೆಯ ಬೆನ್ನಿಗೆ ಪದೇ ಪದೇ ಗುದ್ದಿದ್ದು ಮಾತ್ರವಲ್ಲದೇ ನಿಮಿಷಗಳವರೆಗೆ ನಿರಂತರವಾಗಿ ಕಪಾಳಮೋಕ್ಷವೂ ಮಾಡಿದ್ದಾನೆ. ಆಕೆಯ ಕೂದಲನ್ನು ನಿರ್ದಯವಾಗಿ ಎಳೆದಾಡುವ ಭಯಾನಕ ದೃಶ್ಯಗಳು ವೀಡಿಯೋದಲ್ಲಿ ಕಾಣಿಸಿಕೊಂಡಿದೆ.
ಸಹೋದರ ತಾಯಿ ಮೇಲೆ ಎಸಗಿದ್ದ ದೈಹಿಕ ಕಿರುಕುಳವನ್ನು ಅರಿತ ದೀಪಶಿಖಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಪೊಲೀಸ್ ತಂಡ ಮತ್ತು ಎನ್‌ಜಿಒ ಅಧಿಕಾರಿಗಳು ಶನಿವಾರ ಘಟನಾ ಸ್ಥಳ ತಲುಪಿ ವೃದ್ಧೆಯನ್ನು ರಕ್ಷಿಸಿದ್ದಾರೆ. ಈ ವೇಳೆ ಆರೋಪಿಗಳು ತಾಯಿಯ ಮಾನಸಿಕ ಸ್ಥಿತಿ ಸರಿಯಿಲ್ಲ, ನಾವು ಆಕೆಯ ಆರೈಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಇದೀಗ ಸಿಸಿಟಿವಿ ಸಾಕ್ಷಿಯ ಆಧಾರದ ಮೇಲೆ ಪೊಲೀಸರು ವಕೀಲ ಅಂಕುರ್ ವರ್ಮಾನನ್ನು ಬಂಧಿಸಿದ್ದಾರೆ. ಆಸ್ತಿಯನ್ನು ಸುಲಿಗೆ ಮಾಡಲು ಸ್ವಯಂಪ್ರೇರಿತರಾಗಿ ಗಾಯಗೊಳಿಸುವುದು, ಅಕ್ರಮ ಬಂಧನ ಮತ್ತು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆಯ ಸೆಕ್ಷನ್ 24ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಅಪರಿಚಿತರಿಂದ ಗುಂಡಿನ ದಾಳಿ – ಅಂಗಡಿ ಮಾಲೀಕ ಸ್ಥಳದಲ್ಲೇ ಸಾವು
ಬೆಂಗಳೂರು: ಉದ್ಯಮಿಗೆ ವಂಚನೆ ಪ್ರಕರಣದಲ್ಲಿ (Fraud Case) ಅಭಿನವ ಹಾಲಶ್ರೀ (Abhinava Halashree) ಸ್ವಾಮೀಜಿ ಅರೆಸ್ಟ್ ಬೆನ್ನಲ್ಲೇ, ಮೈಸೂರಿನ (Mysuru) ವಕೀಲರೊಬ್ಬರು (Lawyer) ಹಿರೇಹಡಗಲಿಯ ಮಠಕ್ಕೆ (Mutt) 56 ಲಕ್ಷ ರೂ. ಹಣ ತಂದಿಟ್ಟಿದ್ದಾರೆ. ಈ ಹಣದ ಮೂಲ ಯಾವುದು? ಎಲ್ಲಿಂದ ಬಂತು ಎನ್ನುವ ಬಗ್ಗೆ ವಕೀಲ ಪ್ರಣವ್ ಪ್ರಸಾದ್ ಡಿಸಿಪಿಯವರಿಗೆ (DCP) ಪತ್ರ ಬರೆದಿದ್ದಾರೆ.
ಇಷ್ಟು ಮಾತ್ರವಲ್ಲದೇ ಹಣದ ಕುರಿತು ಪ್ರಣವ್ ಪ್ರಸಾದ್ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಡಿಸಿಪಿಯವರಿಗೆ ಪ್ರಣವ್ ಪ್ರಸಾದ್ ಬರೆದ ಪತ್ರದಲ್ಲಿ (Letter) ಮಠಕ್ಕೆ ಹಣ ಬಂದ ಬಗ್ಗೆ ಉಲ್ಲೇಖವಾಗಿದ್ದು, ಪತ್ರದಲ್ಲಿನ ಸಂಪೂರ್ಣ ಸಾರಾಂಶ ಇಲ್ಲಿದೆ. ಇದನ್ನೂ ಓದಿ: ಕಾಂತರಾಜು ವರದಿ ಸರ್ಕಾರ ಸ್ವೀಕಾರ ಮಾಡುತ್ತದೆ: ಶಿವರಾಜ್ ತಂಗಡಗಿ
ಪತ್ರದಲ್ಲಿ ಏನಿದೆ?
ಪ್ರಣವ್ ಪುಸಾದ್ 53 ವರ್ಷ, ಆದ ನಾನು ಮೈಸೂರಿನನಲ್ಲಿ ನೆಲೆಸಿದ್ದು ವಕೀಲ ವೃತ್ತಿ ಮಾಡಿಕೊಂಡಿರುತ್ತೇನೆ. ಚೈತ್ರ ಕುಂದಾಪುರ ಪಕರಣದಲ್ಲಿ ಸುದ್ದಿಯಲ್ಲಿರುವ ಅಭಿನವ ಹಾಲಶ್ರೀ ಸ್ವಾಮಿಜಿಗಳು ನನಗೂ ಮತ್ತು ನನ್ನ ಕುಟುಂಬಸ್ಥರಿಗೂ ಪರಿಚಯವಿದ್ದು, ಕಳೆದ ಎಂಟು ತಿಂಗಳಿನಿಂದ ನಮ್ಮ ಒಡನಾಟದಲ್ಲಿ ಇದ್ದರು. ಇದನ್ನೂ ಓದಿ: ಅವೈಜ್ಞಾನಿಕ ವಾರಬಂದಿ ಪದ್ಧತಿ ರದ್ದು ಮಾಡಿ ರೈತರ ಹಿತ ಕಾಪಾಡಬೇಕು: ರಾಜೂ ಗೌಡ
ಇವರು ನಮ್ಮ ಮನೆಗೆ ಬರುವುದು, ಆಶೀರ್ವಚನ ನೀಡುವುದು, ಪ್ರಸಾದ ಸ್ವೀಕರಿಸುವುದು ಮಾಡುತ್ತಾ ಬಂದಿದ್ದರು. ಹೀಗಾಗಿ ಇವರ ಬಗ್ಗೆ ನನಗೆ ವಿಶ್ವಾಸ ಹಾಗೂ ಗೌರವ ಇತ್ತು. ಇವರು ನಿಜವಾದ ಧರ್ಮಭೀರು ಸ್ವಾಮೀಜಿ ಎಂದು ನಾವು ಇದುವರೆಗೆ ನಂಬಿದ್ದೆವು. ಆದರೆ, ಮಾಧ್ಯಮಗಳಲ್ಲಿ ವರದಿಯಾದ ವಿಚಾರ ನೋಡಿ ನಮಗೆ ಆಘಾತವಾಯಿತು. ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ಸದಾ ಸ್ವಾಮೀಜಿಯ ಜೊತೆಗೆ ನಮ್ಮ ಮನೆಗೆ ಬರುತ್ತಿದ್ದ ಚಾಲಕ ರಾಜು ಎಂಬಾತ ನಾಲ್ಕು ದಿನಗಳ ಹಿಂದೆ ನಮ್ಮ ಕಚೇರಿಗೆ ಬಂದಿದ್ದ. ಅಂದು ಅವನು ಒಂದು ಬ್ಯಾಗನ್ನು ಬಿಟ್ಟು ಹೋಗಿದ್ದ. ಯಾವುದೋ ಲಗೇಜ್ ಇರಬೇಕೆಂದು ನಾವು ಸುಮ್ಮನಾಗಿದ್ದೆವು. ಇದನ್ನೂ ಓದಿ: ಶಿವಕುಮಾರ್ ಒಬ್ಬ ನೀರಿನ ಕಳ್ಳ, ಆಯೋಗ್ಯ: ಈಶ್ವರಪ್ಪ ಕಿಡಿ
ಅದಾದ ನಂತರ ಕರೆ ಮಾಡಿದ ಚಾಲಕ ರಾಜು, ಆ ಬ್ಯಾಗನ್ನು ಮೈಸೂರಿನ ಯಾರಿಗೋ ಕೊಡಲು ಹೇಳಿದ್ದರು. ಜೊತೆಗೆ ವಕೀಲರಿಗೆ ಒಂದಷ್ಟು ಬ್ಯಾಗ್ ತಲುಪಿಸಲು ಹೇಳಿದ್ದರು. ಆದರೆ ಆ ವಕೀಲರು ನನಗೆ ಸಿಗದ ಕಾರಣ ಆ ಬ್ಯಾಗನ್ನು ನಿಮ್ಮ ಕಚೇರಿಯಲ್ಲಿ ಇಟ್ಟಿದ್ದೇನೆ ಎಂದರು. ಕೂಡಲೇ ಅವನನ್ನು ಗದರಿಸಿ ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಸೂಚನೆ ಕೊಟ್ಟೆ. ಅದಾದ ನಂತರ ಆ ಬ್ಯಾಗ್‌ನಿಂದ ನಾಲ್ಕು ಲಕ್ಷ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಉಳಿದ ಹಣವನ್ನು ದಯಮಾಡಿ ನಮ್ಮ ಮಠದ ಪೂಜಾರಿ ಹಾಲಸ್ವಾಮಿಯವರಿಗೆ ತಲುಪಿಸಿ ಎಂದು ಸ್ವಾಮೀಜಿಯವರು ಹೇಳಿದ್ದಾರೆ ಎಂದು ಹೇಳಿದ. ಆ ಬ್ಯಾಗನ್ನು ತೆಗೆದುಕೊಂಡು ಹೋಗಲು ಅವರಿಗೆ ಹಲವು ಬಾರಿ ಹೇಳಿದ. ಮೂರ್ನಾಲ್ಕು ದಿನವಾದರೂ ಅವರು ಯಾರು ಈ ಕಡೆ ತಲೆಹಾಕಲಿಲ್ಲ. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಒಗ್ಗಟ್ಟು, ಸರ್ವಪಕ್ಷ ಸಂಸದರ ಬೆಂಬಲ: ಡಿಕೆಶಿ
ಸ್ವಾಮೀಜಿ ಹೇಳಿದಂತೆ ಮಠದಲ್ಲಿ ಹಾಲಸ್ವಾಮಿ ಎಮಬವರಿಗೆ ಈ ಹಣವನ್ನು ಇಂದು ಬೆಳಗ್ಗೆ ತಲುಪಿಸಿ ಬಂದಿರುತ್ತೇನೆ. ಈ ಸ್ವಾಮೀಜಿಯವರ ವ್ಯವಹಾರಗಳಿಗೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ತಮ್ಮ ಗಮನಕ್ಕೆ ಈ ವಿಚಾರಗಳನ್ನು ತರುತ್ತಿದ್ದು, ಈ ವಿಚಾರಗಳು ಮುಂದಿನ ತನಿಖೆಗೆ ಅನುಕೂಲವಾಗುವುದು ಎಂಬ ಉದ್ದೇಶದಿಂದ ಹಂಚಿಕೊಳ್ಳುತ್ತಿದ್ದೇನೆ. ನನಗೆ ಜೀವ ಭಯವಿದ್ದು ರಕ್ಷಣೆ ನೀಡಬೇಕೆಂದು ಡಿಸಿಪಿಯವರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾವೇರಿ ವಿಚಾರವಾಗಿ CWMA ಆದೇಶಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದೇವೆ: ಸಿಎಂ ಸಿದ್ದರಾಮಯ್ಯ