Tag: ವಂಶ ಸಿಂಗ್

  • ಸಾಕ್ಸ್ ಮಾರುತ್ತಿದ್ದ ಬಾಲಕನಿಗೆ ಸಿಎಂ ಕರೆ

    ಸಾಕ್ಸ್ ಮಾರುತ್ತಿದ್ದ ಬಾಲಕನಿಗೆ ಸಿಎಂ ಕರೆ

    ಚಂಢೀಗಢ: ಹತ್ತವರ್ಷದ ಬಾಲಕನೊಬ್ಬ ಶಾಲೆ ತ್ಯಜಿಸಿ, ರಸ್ತೆಗಳಲ್ಲಿ ಸಾಕ್ಸ್ ಮಾರುತ್ತಿರುವ ವೀಡಿಯೋವೊಂದು ಪಂಜಾಬ್‍ನಲ್ಲಿ ಹರಿದಾಡುತ್ತಿತ್ತು. ಇದರ ಬೆನ್ನಲ್ಲೇ ಬಾಲಕ ವಂಶ ಸಿಂಗ್‍ಗೆ ಅಚ್ಚರಿಯೊಂದು ಕಾದಿತ್ತು.

    ಸ್ವತಃ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬಾಲಕನಿಗೆಕರೆ ಮಾಡಿ ನೀನು ಮತ್ತೆ ಶಾಲೆಗೆ ಸೇರಿಕೊ ನಿನ್ನ ವಿದ್ಯಾಭ್ಯಾಸ ಖರ್ಚನ್ನು ಪೂರ್ಣವಾಗಿ ಸರ್ಕಾರ ಹೊತ್ತುಕೊಳ್ಳುತ್ತದೆ. ನಿನ್ನ ಕುಟುಂಬಕ್ಕೆ ತಕ್ಷಣಕ್ಕೆ 2 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದರು.

    ಬಾಲಕನ ತಂದೆಯೂ ಜೀವನ ನಿರ್ವಹಣೆಗೆ ಸಾಕ್ಸ್ ಮಾರುತ್ತಾರೆ. ವಂಶ ಸಿಂಗ್‍ಗೆ ಮೂವರು ಸಹೋದರಿಯರು, ಒಬ್ಬ ಸಹೋದರ ಇದ್ದಾನೆ. ಬಾಲಕನಿಗೆ ಈ ಮಟ್ಟದ ಜನಪ್ರಿಯತೆ ಬರಲೂ ಒಂದು ಕಾರಣವಿದೆ. ಪ್ರಾಮಾಣಿಕತೆ ಇವನಿಗೆ ಇಂತಹ ಒಂದು ದೊಡ್ಡ ಮಟ್ಟದ ಸಾಹಯ ಸಿಗಲು ಕಾರಣವಾಗಿದೆ. ಸಾಕ್ಸ್ ಬೆಲೆಗಿಂತ 50 ರೂ. ಹೆಚ್ಚು ಕೊಡುತ್ತೇನೆಂದರೂ, ವಂಶ ಸಿಂಗ್ ತೆಗೆದುಕೊಳ್ಳಲು ಒಪ್ಪುತ್ತಿರಲಿಲ್ಲ. ಇದನ್ನು ಇಡೀ ರಾಜ್ಯವೇ ಗೌರವಿಸಿದೆ.