ಬೆಳಗಾವಿ: ಜಿಲ್ಲೆಯಲ್ಲಿ ಇಂದು ವಂದೇ ಭಾರತ್ ರೈಲು (Vandre Bharat Train) ಉದ್ಘಾಟನೆ ಮಾಡುತ್ತೇನೆ. ಕೆಲ ದಿನಗಳ ನಂತರ ಮತ್ತೊಂದು ರೈಲು ಬೆಳಗಾವಿಗೆ ಬರಲಿದೆ ಎಂದು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ (V Somanna) ಹೇಳಿದರು.
ಉದ್ಘಾಟನೆಗೂ ಮುನ್ನ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) 7 ರೈಲು ಉದ್ಘಾಟನಾ ಮಾಡಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಕೊಲ್ಹಾಪುರ-ಪುಣೆ ರೈಲು ಉದ್ಘಾಟನೆ ಮಾಡುತ್ತೇನೆ. ಬೆಳಗಾವಿಯಲ್ಲಿ ಪುಣೆಯಿಂದ ವಂದೇ ಭಾರತ್ ರೈಲು ರಿಸಿವ್ ಮಾಡುತ್ತೇನೆ ಎಂದರು.ಇದನ್ನೂ ಓದಿ: ಮಲೆನಾಡು ಸ್ಲೀಪರ್ ಸೆಲ್‌ಗಳ ತಾಣವಾಗ್ತಿದೆ – ಭಯೋತ್ಪಾದಕ ಕೃತ್ಯ ಎಸಗಲು ಇಲ್ಲಿ ತರಬೇತಿ ನೀಡಲಾಗ್ತಿದೆ: ಸಿ.ಟಿ ರವಿ ಬಾಂಬ್
ತಾಂತ್ರಿಕ ಸಮಸ್ಯೆ ನೆಪವೊಡ್ಡಿ ಬೆಳಗಾವಿ- ಬೆಂಗಳೂರು ವಂದೇ ಭಾರತ್ ರೈಲು ತಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈಗ ಬೆಳಗಾವಿಗೆ ಮಂಜೂರಾಗಿದ್ದ ವಂದೇ ಭಾರತ್ ರೈಲು ಹುಬ್ಬಳ್ಳಿಗೆ ವಿಸ್ತರಣೆ ಮಾಡಲಾಗಿದೆ. ನಾನು ಬಂದು ಮೂರು ತಿಂಗಳು ಆಗಿದೆ. ಹಳೆಯದನ್ನು ಕೆದಕಿ ಕೆಲಸ ಮಾಡಲು ಆಗಲ್ಲ. ಬೆಳಗಾವಿಗೆ ಇಂದು ವಂದೇ ಭಾರತ್ ರೈಲು ಉದ್ಘಾಟನಾ ಮಾಡುತ್ತೇನೆ. ಕೆಲ ದಿನಗಳಲ್ಲಿ ಮತ್ತೊಂದು ರೈಲು ಬೆಳಗಾವಿಗೆ ಬರಲಿದೆ ಎಂದಿದ್ದಾರೆ.ಇದನ್ನೂ ಓದಿ: ಶಾಲೆಯಿಂದ ಮರಳುವಾಗ 5ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್
ಇದಾದ ಬಳಿಕ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಬಗ್ಗೆ ಚರ್ಚೆ ಮಾಡಿದ್ದೀವಿ. ಹಿಂದೆ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಮೋದಿಯವರು ಹಳೆಯದು ಏನಾಯಿತು ಎಂದು ಕೆದಕಬಾರದು ಎಂದು ಮನವರಿಕೆ ಮಾಡಿದ್ದಾರೆ ಎಂದು ಸಮಜಾಯಿಷಿ ನೀಡಿದರು. ದಿ.ಸುರೇಶ ಅಂಗಡಿ ಇದ್ದ ಸಂದರ್ಭದಲ್ಲಿ ಬೆಳಗಾವಿ- ಹುಬ್ಬಳ್ಳಿ ನೇರ ರೈಲು ವಿಚಾರ ಮಾತನಾಡಿದ್ದಾರೆ. ನೇರ ರೈಲು ಮಾಡಲು ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ.
ಬೆಳಗಾವಿ-ಮುಂಬೈಗೆ ನೇರ ರೈಲು ವಿಚಾರವಾಗಿ ಮಾತನಾಡಿ, ಈ ಬಗ್ಗೆ ಕುಳಿತು ಮಾತನಾಡೋಣ. ಜನ ಸಾಮಾನ್ಯರಿಗೆ ಅನುಕೂಲಕ್ಕೆ ಏನು ಬೇಕು ಎಲ್ಲವನ್ನು ಮಾಡುತ್ತೇವೆ. ಸವದತ್ತಿ-ಬೆಳಗಾವಿಗೆ ರೈಲು ಬಿಡುವ ವಿಚಾರ ಈ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಚರ್ಚೆ ಮಾಡಿದ್ದರು. ಸರ್ವೇ ಕಾರ್ಯ ಮಾಡಲು ಸೂಚನೆ ನೀಡಿದ್ದೇನೆ. ಸರ್ವೇ ವರದಿ ಬಂದ ಮೇಲೆ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.













