Tag: ವಂದನಾ ಜೈನ್

  • ಮುಖಕ್ಕೆ ಮದ್ಯ ಎರಚಿದ ಸಂಜನಾ ವಿರುದ್ಧ ಎಫ್‍ಐಆರ್

    ಮುಖಕ್ಕೆ ಮದ್ಯ ಎರಚಿದ ಸಂಜನಾ ವಿರುದ್ಧ ಎಫ್‍ಐಆರ್

    ಬೆಂಗಳೂರು: ಹಳೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಎಂಬಂತೆ ಡ್ರಗ್ ಕೇಸ್ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮಾಡೆಲ್ ವಂದನಾ ಜೈನ್ ದೂರಿನ್ವಯ  ಕೋರ್ಟ್ ಆದೇಶದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಏನಿದು ಪ್ರಕರಣ?
    2019 ರಲ್ಲಿ ಲ್ಯಾವೆಲ್ಲಿ ರಸ್ತೆಯ ಕ್ಲಬ್‍ನಲ್ಲಿ ವಂದನಾ ಜೈನ್ ಸ್ನೇಹಿತನೊಂದಿಗೆ ಮಾತುಕತೆ ವೇಳೆ ಸಂಜನಾ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಈ ವೇಳೆ ಅವಾಚ್ಯ ಶಬ್ಧಗಳನ್ನು ಬಳಸದಂತೆ ವಂದನಾ ಜೈನ್ ಸೂಚನೆ ನೀಡಿದ್ದಾರೆ. ಬಳಿಕ ವಂದನಾ ಮುಖಕ್ಕೆ ಮಧ್ಯ ಎರಚಿ ಸಂಜನಾ ಹಲ್ಲೆ ಮಾಡಿದ್ದಾರೆ. ಇದರಿಂದ ವಂದನಾ ಜೈನ್ ಕಣ್ಣಿಗೆ ಗಾಯವಾಗಿದೆ. ಘಟನೆ ಬಳಿಕ ಸಂಜನಾ ವಂದನಾಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

  • ಕ್ರಿಕೆಟಿಗನ ಜೊತೆಗಿನ ಸಂಬಂಧದ ಹೇಳಿಕೆಯೇ ಸಂಜನಾಗೆ ಮುಳುವಾಯ್ತಾ?

    ಕ್ರಿಕೆಟಿಗನ ಜೊತೆಗಿನ ಸಂಬಂಧದ ಹೇಳಿಕೆಯೇ ಸಂಜನಾಗೆ ಮುಳುವಾಯ್ತಾ?

    ಬೆಂಗಳೂರು: ಬಾಲಿವುಡ್ ನಿರ್ಮಾಪಕಿ ವಂದನಾ ಹಾಗೂ ಕ್ರಿಕೆಟಿಗ ಅಮಿತ್ ಮಿಶ್ರಾ ಸಂಬಂಧವನ್ನ ಪ್ರಸ್ತಾಪಿಸಿ ನೀಡಿದ್ದ ಹೇಳಿಕೆಯೇ ಸಂಜನಾ ಗಲ್ರಾನಿಯನ್ನು ಸಂಕಷ್ಟಕ್ಕೆ ತಳ್ಳುತ್ತಾ ಅನ್ನೋ ಅನುಮಾನವೊಂದು ಎದ್ದಿದೆ.

    ಹೌದು. ಸ್ಯಾಂಡಲ್ ವುಡ್ ನಟಿ ಸಂಜನಾ ವಿರುದ್ಧ ನಿರ್ಮಾಪಕಿ 4 ಕೋಟಿ ಮಾನನಷ್ಟ ಮೊಕದ್ದೊಮೆ ಹೂಡಿದ್ದಾರೆ. ವಂದನಾ ಹಾಗೂ ಅಮಿತ್ ಮಿಶ್ರಾ ಸಂಬಂಧವನ್ನ ಪ್ರಸ್ತಾಪಿಸಿ ನೀಡಿದ್ದ ಹೇಳಿಕೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

    ಈ ಅನುಮಾನಕ್ಕೆ ಪುಷ್ಠಿ ಎಂಬಂತೆ ಸಂಜನಾ ಗಲ್ರಾನಿ ಮಾಧ್ಯಮಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಪತ್ರದಲ್ಲಿ ಪ್ರಮುಖವಾಗಿ ಗೌರವಾನ್ವಿತ ಕ್ರಿಕೆಟಿಗ ವಿಚಾರ ಪ್ರಸ್ತಾಪದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ನಿರ್ಮಾಪಕಿ ವಂದನಾ ಹಾಗೂ ಕ್ರಿಕೆಟಿಗ ಸಂಬಂಧದ ಬಗ್ಗೆ ಗೂಗಲ್ ನಲ್ಲಿ ಸಾಕಷ್ಟು ಸುದ್ದಿಗಳಿವೆ. ಅದನ್ನು ನಾನು ಪ್ರಸ್ತಾಪಿಸಿ ಅಂದು ಹೇಳಿಕೆ ನೀಡಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಸಂಜನಾ ವಿರುದ್ಧ 4 ಕೋಟಿ ರೂ. ಮಾನನಷ್ಟ ಮೊಕದ್ದಮೆ

    ಅಷ್ಟೇ ಅಲ್ಲದೆ ವಂದನಾ ಬಿಡುಗಡೆ ಮಾಡಿರುವ ವಿಡಿಯೋ ಸಂಪೂರ್ಣವಾಗಿ ಸುಳ್ಳು ಆರೋಪಗಳಾಗಿವೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಮಾಧ್ಯಮಗಳು ಯಾವುದೇ ಕಾರಣಕ್ಕೂ ನಿರ್ಮಾಪಕಿ ವಂದನಾ ಹೇಳಿಕೆ ವಿಚಾರವಾಗಿ ನನ್ನನ್ನು ಸಂಪರ್ಕಿಸ ಬೇಡಿ ಎಂದು ಸ್ಪಷ್ಟನೆ ಪತ್ರದಲ್ಲಿ ಖಾರವಾಗಿಯೇ ಉಲ್ಲೇಖ ಮಾಡಿದ್ದಾರೆ.

  • ಅವಳು ಮಾಡಿದ್ದು ಮಾಡಲಿ, ನಾನು ಅವಳಷ್ಟು ಚೀಪ್ ಅಲ್ಲ: ವಂದನಾ ಜೈನ್

    ಅವಳು ಮಾಡಿದ್ದು ಮಾಡಲಿ, ನಾನು ಅವಳಷ್ಟು ಚೀಪ್ ಅಲ್ಲ: ವಂದನಾ ಜೈನ್

    ಬೆಂಗಳೂರು: ಸಂಜನಾ ಮತ್ತು ವಂದನಾ ಕಿರಿಕ್ ಪಾರ್ಟಿ ಕೇಸ್ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಇಂದು ಪೊಲೀಸ್ ಠಾಣೆಗೆ ಸಂಜನಾ ಗಲ್ರಾನಿ ದೂರಿಗೆ ಪ್ರತಿಕ್ರಿಯೆ ನೀಡಿದ ವಂದನಾ ನಾನು ಈ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

    ಸಂಜನಾ ದೂರನ್ನು ಕೊಟ್ಟರೆ ಕೊಡಲಿ. ನಿಜವಾಗಿ ಹೇಳಬೇಕು ಅಂದರೆ ಅವಳಿಗೆ ದೂರು ನೀಡಲು ಯಾವುದೇ ವಿಚಾರ ಇಲ್ಲ. ದೂರು ಕೊಡಬೇಕು ಅಂದಿದ್ರೆ ಅವತ್ತೇ ದೂರನ್ನು ಕೊಡಬೇಕಿತ್ತು. ಈಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರು ನೀಡುವುದಕ್ಕೆ ಓಡಾಡುತ್ತಿದ್ದಾಳೆ ಎಂದು ವಂದನಾ ಕಿಡಿಕಾರಿದರು. ಇದನ್ನು ಓದಿ: ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ?

    ಹಲ್ಲೆ ಮಾಡಿದ್ದು ಅವಳು ಕಿತ್ತಾಡಿದ್ದು ಅವಳು, ನಾನು ದೂರು ಕೊಟ್ಟೆ ಎನ್ನುವ ಕಾರಣಕ್ಕೆ ಸಂಜನಾ ಕೂಡ ದೂರನ್ನು ನೀಡುತ್ತಿದ್ದಾಳೆ. ಈ ವೇಳೆ ನಾನು ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಂದನಾ, ನಾನು ಮಾಡದ ತಪ್ಪಿಗೆ ಸಂಜನಾ ತುಂಬಾ ಚೀಪ್ ಆಗಿ ಮಾತನಾಡುತ್ತಿದ್ದಾಳೆ. ನಾನು ಅವಳ ರೀತಿಯಲ್ಲ ಎಂದು ತಿಳಿಸಿದ್ದಾರೆ.

  • ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ?

    ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ?

    ಬೆಂಗಳೂರು: ನಟಿ ಸಂಜನಾ ಗಲ್ರಾನಿ ಮತ್ತು ವಂದನಾ ಜೈನ್ ನಡುವಿನ ಗಲಾಟೆ ಪ್ರಕರಣ ಠಾಣೆಯ ಮೆಟ್ಟಿಲು ಹತ್ತಿದ್ದಾಗಿದೆ. ಹೋಟೆಲ್ ನಲ್ಲಿ ನಡೆದ ಗಲಾಟೆಗೆ ವಂದನಾ ಜೈನ್ ನೀಡಿದ್ದ ದೂರಿಗೆ, ಸಂಜನಾ ಪ್ರತಿದೂರು ನೀಡಿದ್ದು ಈಗ ರಾಜಿಯಾಗಲು ಮುಂದಾಗಿದ್ದಾರೆ.

    ಡಿಸಿಪಿಯವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಂಜನಾ, ನನಗೆ ಇದನ್ನೆಲ್ಲಾ ಮುಂದುವರಿಸಬೇಕು ಎಂಬ ಆಸೆಯಿಲ್ಲ. ಆಕೆ ಕೊಟ್ಟಿರುವ ದೂರನ್ನು ವಾಪಸ್ ತೆಗೆದುಕೊಂಡರೆ ನಾನು ವಾಪಸ್ ತೆಗೆದುಕೊಳ್ಳುತ್ತೇನೆ. ನಾನು ವಿಸ್ಕಿ ಬಾಟಲ್ ನಲ್ಲಿ ಹೊಡೆದೆ ಎಂದರೆ ನಮ್ಮ ನಿರ್ಮಾಪಕರು, ನಿರ್ದೇಶಕರು ನನ್ನ ಬಗ್ಗೆ ಏನೆಂದುಕೊಳ್ಳಬೇಕು ಎಂದು ಹೇಳುವ ಮೂಲಕ ನಾನು ರಾಜಿಗೆ ರೆಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.

    ಆಕೆಯೇ ಗಲಾಟೆ ಶುರು ಮಾಡಿ ಬಾಯಿಗೆ ಬಂದಂತೆ ಬೈದಿರೋದು. ನನ್ನ ರಕ್ಷಣೆಗೆ ಇರಲಿ ಎಂದು ಏಳು ನಿಮಿಷದ ವಿಡಿಯೋ ಮಾಡಿಟ್ಟುಕೊಂಡಿದ್ದೇನೆ. ಫೋಟೋ ತೆಗೆಯಬೇಕು ಎಂದು ಬಂದು ಗಲಾಟೆ ಮಾಡಿದ್ದಾಳೆ. ಅವಳ ಜೊತೆ ನಾನು ಯಾವತ್ತೂ ಹೋಟೆಲ್‍ಗೂ ಹೋಗಿಲ್ಲ. ನನಗೆ ಇದೆಲ್ಲವನ್ನೂ ಮುಂದುವರಿಸಿ ಪ್ರಚಾರ ತೆಗೆದುಕೊಳ್ಳಬೇಕು ಎಂದು ಇಷ್ಟವಿಲ್ಲ. ಒಂದು ಪಕ್ಷ ವಂದನಾ ದೂರು ವಾಪಸ್ ಪಡೆದರೆ ನಾನು ದೂರು ವಾಪಸ್ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

    ಪತ್ರ ಬರೆದು ಮನವಿ
    ಹೋಟೆಲ್ ನಲ್ಲಿ ನಡೆದಿರುವ ಘಟನೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ನನಗೆ ಇಷ್ಟ ಇಲ್ಲ. ದಯವಿಟ್ಟು ಮಾಧ್ಯಮ ಮಿತ್ರರು ಪ್ರಕರಣವನ್ನು ದೊಡ್ಡದು ಮಾಡುವ ಆಗತ್ಯ ಇಲ್ಲ. ಪ್ರಕರಣವನ್ನ ಇಲ್ಲೇ ಬಿಟ್ಟು ಬಿಡುವಂತೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಸಂಜನಾ ಗರ್ಲಾನಿ ನನ್ನನ್ನ ದೂಷಿಸುತ್ತಿರುವ ಮಹಿಳೆಯ ಬಳಿ ಯಾವುದೇ ಪುರಾವೆಗಳಿಲ್ಲ. ಪತ್ರದಲ್ಲಿ ವಿವರಿಸಲು ಆಗದೇ ಇರುವಂತಹ ಪದಗಳನ್ನು ಬಳಸಿ ನನ್ನ ತಾಯಿ ಹಾಗೂ ಕುಟುಂಬಕ್ಕೆ ನಿಂದನೆ ಮಾಡಿದ್ದಾಳೆ. ನನ್ನ ಜೀವನ ಹಾಳು ಮಾಡುವುದಕ್ಕೆ ಅವಳು ಹವಣಿಸುತ್ತಿದ್ದಾಳೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

    ಭಾರತದ ಪ್ರಮುಖ ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನು ಮದುವೆ ಆಗುವುದಾಗಿ ಬ್ಲಾಕ್ ಮೇಲ್ ಮಾಡಿ ಪ್ರಚಾರ ಗಿಟ್ಟಿಸಿಕೊಂಡ ಹಾಗೇ ನನ್ನ ಗುರಿಯಾಗಿ ಪ್ರಚಾರ ಮಾಡುತ್ತಿದ್ದಾಳೆ ಎಂದು ವಂದನಾ ಹೆಸರು ಹೇಳದೆ ಕಿಡಿಕಾರಿದರು. ಇದನ್ನು ಓದಿ: ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ: ಸಂಜನಾ ಗಲ್ರಾನಿ

    ಘಟನೆಯಿಂದ ನನ್ನ ತಾಯಿ ನೊಂದು ಹೋಗಿದ್ದಾರೆ. ನನಗೆ ಮುಂದಿನ ವರ್ಷ ಸ್ಯಾಂಡಲ್‍ವುಡ್ ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಿವೆ. ಅವುಗಳನ್ನು ನೋಡಿಕೊಂಡರೆ ಸಾಕು ಈ ರೀತಿ ಅಗ್ಗದ ಕೊಳಕು ಪ್ರಚಾರ ಬೇಡ. ನಾನು ಈ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದೇನೆ. ದಯವಿಟ್ಟು ನನ್ನನ್ನ ಬೆಂಬಲಿಸಿ ಎಂದು ಪತ್ರದ ಮೂಲಕ ಸಂಜನಾ ಗಲ್ರಾನಿ ಮನವಿ ಮಾಡಿಕೊಂಡಿದ್ದಾರೆ.

  • ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ: ಸಂಜನಾ ಗಲ್ರಾನಿ

    ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ: ಸಂಜನಾ ಗಲ್ರಾನಿ

    ಬೆಂಗಳೂರು: ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಎಲ್ ಹನಿಟ್ರ್ಯಾಪ್ ಪ್ರಕರಣದಲ್ಲಿ ನಿಮ್ಮ ಮತ್ತು ವಂದನಾ ಜೈನ್ ಹೆಸರು ಕೇಳಿ ಬರುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿ ಕೆಪಿಎಲ್ ಅಂದ್ರೇನು ಗೊತ್ತಿಲ್ಲ. ಕೆಪಿಎಲ್ ಕರ್ನಾಟಕ ಪ್ರೀಮಿಯರ್ ಲೀಗ್ ಅಂತಾ ಗೊತ್ತಾಗಿದ್ದೇ ಇವತ್ತು ಎಂದು ಹೇಳಿದ್ದಾರೆ.

    ನನಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೊತ್ತು. ಕೆಪಿಎಲ್ ಮೂಲಕ ವಂದನಾ ನನಗೆ ಪರಿಚಯವಿಲ್ಲ. ಆಕೆಯ ಜೊತೆ ಯಾವ ಗೆಳೆತನವೂ ನನಗೆ ಇಲ್ಲ. ಆಕೆ ನಿನ್ನ ಬಿಡೋದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ನನಗೆ ಜೀವ ಭಯವಿದೆ ಎಂದು ಸಂಜನಾ ತಿಳಿಸಿದ್ದಾರೆ.

    ಇದೇ ವೇಳೆ ವಿಸ್ಕಿ ಬಾಟೆಲ್ ನಲ್ಲಿ ನಾನು ಹೊಡೆದ ಎಂದು ಹೇಳಿದವರು ಯಾರು? ಯಾವ ಆಧಾರ ಇದೆ ನಿಮ್ಮ ಬಳಿ? ನಾನು ಎಲ್ಲಿ ವಿಸ್ಕಿ ಬಾಟಲ್‍ನಿಂದ ಹೊಡೆದೆ. ನಿಮ್ಮ ಬಳಿ ಏನಾದರೂ ಸಿಸಿಟಿವಿ ಇದ್ಯಾ ಎಂದರು. ಇದಕ್ಕೆ ಸಂಜನಾ ಗಲ್ರಾಣಿ ವಿಸ್ಕಿ ಬಾಟೆಲ್ ನಲ್ಲಿ ಹೊಡೆದರು ಅಂತಾ ವಂದನಾರೇ ಹೇಳಿದ್ದು ಎಂದು ಮಾಧ್ಯಮದವರು ಹೇಳಿದಾಗ, ನಾನೇನು ಕುಡಿದು ತೂರಾಡುತ್ತಿದ್ನಾ ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದಾರೆ. ಇದನ್ನು ಓದಿ: ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

    ನಾನು ಗಲಾಟೆಯಾದಾಗ ಕುಡಿದಿರಲಿಲ್ಲ. ಇನ್ನು ವಿಸ್ಕಿ ಬಾಟೆಲ್ ನಿಂದ ಹೊಡೆಯೋದು ಎಲ್ಲಿಂದ ಬಂತು? ನಾನು ನನ್ನ ಕಾರ್ ಬಳಿ ಹೋಗುವಾಗ ತೂರಾಡ್ಕೊಂಡು ಹೋಗುವ ವೀಡಿಯೊವನ್ನು ಅವರೇ ಬಿಟ್ಟಿದ್ದಾರಲ್ಲ. ಸ್ಟಿಫ್ ಆಗಿ ನನ್ನ ಕಾರಿಗೆ ಹೋಗಿದ್ದೇನೆ. ಆಕೆಗೆ ಪ್ರಚಾರದ ಹುಚ್ಚಿಂದ ನನ್ನ ಮೇಲೆ ಇಲ್ಲಸಲ್ಲದ ದೂರು ಹೊರಿಸಿದ್ದಾಳೆ ಎಂದು ವಂದನಾ ಜೈನ್ ವಿರುದ್ಧ ಗಲ್ರಾನಿ ಗರಂ ಆಗಿದ್ದಾರೆ.

  • ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

    ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

    ಬೆಂಗಳೂರು: ನಟಿ ಸಂಜನಾ ಗಲ್ರಾನಿ ಮತ್ತು ನಿರ್ಮಾಪಕಿ ವಂದನಾ ಜೈನ್ ನಡುವಿನ ಗಲಾಟೆ ಪ್ರಕರಣ ಮುಂದುವರಿದಿದೆ. ಇಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಅವರನ್ನು ಭೇಟಿಯಾದ ಸಂಜನಾ, ಘಟನೆಯ ಬಗ್ಗೆ ವಿವರಣೆ ನೀಡಿದರು. ಅಲ್ಲದೆ ನಿರ್ಮಾಪಕಿ ವಂದನಾ ಜೈನ್ ವಿರುದ್ಧ ಪ್ರತಿ ದೂರು ಕೂಡ ದಾಖಲು ಮಾಡಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜನಾ, ನಾನು ವಿಸ್ಕಿ ಬಾಟೆಲ್ ನಿಂದ ಹೊಡೆದಿಲ್ಲ. ಯಾರು ಆ ರೀತಿಯಾಗಿ ನಿಮಗೆ ಹೇಳಿದ್ದು ಎಂದು ಪ್ರಶ್ನಿಸಿದರು. ನನ್ನ ತಾಯಿಯನ್ನ ನಿಂದನೆ ಮಾಡಿದಾಗ ಸುಮ್ಮನಿರಬೇಕಿತ್ತಾ? ಆಕೆಗೆ ಪ್ರಚಾರದ ಹುಚ್ಚು ಹಿಡಿದಿದೆ. ಅವಳೇ ಸುಮ್ಮನೆ ಗಲಾಟೆ ಮಾಡ್ಕೊಂಡು ಬಂದಿದ್ದು. ನಾನು ಐದಾರು ಭಾಷೆಗಳಲ್ಲಿ ನಟಿಸುತ್ತಿದ್ದೇನೆ. ಮುಂದಿನ ವರ್ಷ ಏಳೆಂಟು ಸಿನಿಮಾಗಳು ರಿಲೀಸ್ ಆಗುತ್ತವೆ. ಆಕೆ ನಿರ್ಮಾಪಕಿಯೇ ಅಲ್ಲ, ಯಾವ ಸಿನಿಮಾ ನಿರ್ಮಾಣ ಮಾಡಿದ್ದಾಳೆ ಹೇಳಿ ಎಂದು ಗರಂ ಆದರು.

    ಆಕೆಯ ಇತಿಹಾಸ ಏನಿದೆ ಗೊತ್ತಾ, ಆಕೆ ಎಂಇಪಿ ಪಕ್ಷದ ನೌಹಿರಾ ಶೇಖ್ ಜೊತೆ ಗುರುತಿಸಿಕೊಂಡಿದ್ದಳು. ಜನರಿಗೆ ಟೋಪಿ ಹಾಕಿದವರ ಜೊತೆ ಇದ್ದಾಳೆ. ನನ್ನನ್ನು ಕೂಡ ಎಂಇಪಿಗೆ ಜಾಯಿನ್ ಆಗುವಂತೆ ಬಲವಂತ ಮಾಡಿದ್ದಳು. ಆದರೆ ನಾನು ಒಪ್ಪಿರಲಿಲ್ಲ ಎಂದು ಸಂಜನಾ ಅವರು ವಂದನಾ ವಿರುದ್ಧ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಸಂಜನಾ ಏನ್ ಮಾಡ್ತಾಳೋ ಮಾಡ್ಲಿ, ನಾನು ಕಾನೂನು ಕ್ರಮ ಕೈಗೊಳ್ಳುವೆ: ವಂದನಾ ಜೈನ್

    ಇಷ್ಟು ಮಾತ್ರವಲ್ಲದೆ ಕ್ರಿಕೆಟಿಗ ಅಮಿತ್ ಮಿಶ್ರಾ ಅವರು ಈಕೆಯಿಂದಲೇ ತಂಡದಿಂದ ಕೈ ಬಿಡುವಂತೆ ಆಯಿತು. ಈಕೆಯೇ ಗಲಾಟೆ ಮಾಡಿ ಕಂಪ್ಲೆಂಟ್ ಕೊಟ್ಟಿದ್ದಾರೆ.. ರಾತ್ರಿ ಎರಡು ಗಂಟೆಯಲ್ಲಿ ಪೊಲೀಸರು ಫೋನ್ ಮಾಡಿ ಕರೆಯುತ್ತಾರೆ. ರಾತ್ರಿಯ ಹೊತ್ತು ಹೆಣ್ಣು ಮಕ್ಕಳನ್ನ ವಿಚಾರಣೆ ಮಾಡಬಹುದಾ..? ನೀನ್ಯಾರಾದರೆ ಏನು ಬರಬೇಕು ಅಂತ ಪೊಲೀಸರು ದಬಾಯಿಸುತ್ತಾರೆ. ಇದೆಲ್ಲವನ್ನೂ ಡಿಸಿಪಿಯವರಿಗೆ ತಿಳಿಸಿದ್ದೀನಿ ಎಂದು ಸಂಜನಾ ಗಲ್ರಾನಿ ತಿಳಿಸಿದರು.

  • ಸಂಜನಾ ಏನ್ ಮಾಡ್ತಾಳೋ ಮಾಡ್ಲಿ, ನಾನು ಕಾನೂನು ಕ್ರಮ ಕೈಗೊಳ್ಳುವೆ: ವಂದನಾ ಜೈನ್

    ಸಂಜನಾ ಏನ್ ಮಾಡ್ತಾಳೋ ಮಾಡ್ಲಿ, ನಾನು ಕಾನೂನು ಕ್ರಮ ಕೈಗೊಳ್ಳುವೆ: ವಂದನಾ ಜೈನ್

    ಚಿಕ್ಕಬಳ್ಳಾಪುರ: ಸಂಜನಾ ಏನು ಮಾಡುತ್ತಾಳೋ ಮಾಡಲಿ ನಾನು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವೆ ಅಂತ ನಿರ್ಮಾಪಕಿ ವಂದನಾ ಜೈನ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಕೇರಳದಲ್ಲಿರುವ ವಂದನಾ ಜೈನ್ ಮೊಬೈಲ್ ಮೂಲಕ ಪ್ರತಿಕ್ರಿಯಿಸಿ, ಸಂಜನಾ ದಿನಕ್ಕೊಂದು ರೀತಿ ಆಟ ಆಡಿದರೆ ಜನ ನೋಡುತ್ತಿರುತ್ತಾರೆ. ಆಟ ಅದರೂ ಆಡಲಿ, ನನ್ನ ಮೇಲೆ ಕಂಪ್ಲೇಂಟ್ ಆದರೂ ಕೊಡಲಿ. ಏನಾದ್ರೂ ಮಾಡಲಿ, ನಾನು ಬೆಂಗಳೂರಿಗೆ ಬಂದು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ. ನಾನು ಈಗಾಗಲೇ ಸಂಜನಾ ವಿರುದ್ಧ ದೂರು ನೀಡಿದ್ದೇನೆ. ಪೊಲೀಸ್ ಠಾಣೆ ಮುಂದೆ ಹೋಗಿ ಸಂಜನಾ ನಿಂತ ಮಾತ್ರಕ್ಕೆ ಕಂಪ್ಲೇಂಟ್ ಆಗೋದಿಲ್ಲ. ಕಂಪ್ಲೇಂಟ್ ಯಾರದ್ದು ಆಗಬೇಕೋ ಅವರದ್ದೇ ಆಗೋದು. ಆಕೆ ಏನ್ ಮಾಡಿದ್ಲು ಅನ್ನೋದರ ಸಾಕ್ಷಿ ಕೊಟ್ಟು ಕಂಪ್ಲೇಂಟ್ ಕೊಟ್ಟಿದ್ದೇನೆ. ಅಕೆಗೂ ಕಂಪ್ಲೇಂಟ್ ಕೊಡೋಕೆ ಕಾರಣ ಇದ್ದರೆ ಕೊಡಲಿ. ಸಂಜನಾ ಮಾಡಿದ ವರ್ತನೆಯಿಂದಲೇ ನಾನು ಆ ದಿನ ರಾತ್ರಿ ಪೊಲೀಸರಿಗೆ ಕರೆ ಮಾಡಿದೆ ಎಂದಿದ್ದಾರೆ.

    ಗಲಾಟೆ ಆದ ದಿನ ರಾತ್ರಿ ನನ್ನ ಫ್ರೆಂಡ್ ಜೊತೆ ಮಾತಾಡುತ್ತಿದ್ದಳು. ಆಗ ನನ್ನ ಫ್ರೆಂಡ್ ನೀವಿಬ್ಬರೂ ಯಾಕೆ ಮಾತಾಡಲ್ಲ ಅಂದರು. ಆಗ ತಕ್ಷಣ ಅಕೆ ನನ್ನ ಮೇಲೆ ವೈಯಕ್ತಿಕವಾಗಿ ನಿಂದಿಸೋಕೆ ಆರಂಭಿಸಿದಳು. ಆಗ ನಾನು ಇದು ಪಬ್ಲಿಕ್ ಪ್ಲೇಸ್ ಹೀಗೆಲ್ಲಾ ಮಾತಾಡಬೇಡ ಅಂತ ಹೇಳಿದೆ. ಈ ವೇಳೆ ಸಂಜನಾ ಕೈಯಲ್ಲಿದ್ದ ಡ್ರಿಂಕ್‍ನ್ನ ಬಿಸಾಡಿದಳು. ಇದನ್ನ ಸ್ವತಃ ಸಂಜನಾ ನೇ ಹೇಳ್ತಾ ಇದ್ದಾಳೆ. ಹಾಗಾಗಿ ಅಕೆ ಮಾಡಿದ್ದನ್ನ ಒಪ್ಪಿಕೊಂಡಿದ್ದಾಳೆ. ಸಂಜನಾಗೆ ನನ್ನ ಮೇಲೆ ಯಾಕೆ ಅಷ್ಟೊಂದು ಕೋಪ ಅಂತ ಸಂಜನಾನೇ ಹೇಳಬೇಕು. ಕಾರಣ ಇಲ್ಲದೆ ಯಾವ ಕಾರಣಕ್ಕೆ ಸಂಜನಾ ಯಾಕೆ ಆ ರೀತಿ ನಡೆದುಕೊಳ್ತಾ ಇದ್ದಾಳೋ ನನಗೆ ಗೊತ್ತಿಲ್ಲ. ನನಗೆ ಪ್ರಚಾರ ಪಡೆದುಕೊಳ್ಳೋಕೆ ಸಂಜನಾ ರೀತಿ ಬರಲ್ಲ. ನನಗೆ ಪ್ರಚಾರ ಪಡೆದುಕೊಳ್ಳಬೇಕಾದರೆ ಬೇರೆ ದಾರಿಗಳಿವೆ. ನಾವು ಸ್ನೇಹಿತರಾಗಿದ್ದವರು. ಸಂಜನಾ ಈ ನಡೆಯಿಂದ ನನಗೆ ಬೇಜಾರಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಲಾಟೆಯಾಗಿಲ್ಲ, ಸಾಕ್ಷಿಗೆ ನನ್ನ ಬಳಿ ವಿಡಿಯೋ ಇದೆ: ಸಂಜನಾ ಸ್ಪಷ್ಟನೆ

    ಕಾರಣ ಇಲ್ಲದೆ ಸಂಜನಾ ಯಾಕೆ ಹೀಗೆ ಮಾಡಿತಿದ್ದಾಳೋ ಅರ್ಥ ಆಗ್ತಾ ಇಲ್ಲ. ಜನ ನನಗೆ ಮೆಸೇಜ್ ಮಾಡ್ತಾ ಇದ್ದಾರೆ. ಆಕೆ ನಡೆದುಕೊಳ್ಳುತ್ತಿರುವ ರೀತಿ ಸರಿ ಇಲ್ಲ. ನಿಮ್ಮ ನಡೆ ಸರಿ ಇದೆ. ಆಕೆಯನ್ನ ಬಿಡಬೇಡಿ ಅಂತ ಹಲವರು ಮೆಸೇಜ್ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ; ಎಣ್ಣೆ ಕಿಕ್‍ನಲ್ಲಿ ಗಲಾಟೆ ಮಾಡ್ಕೊಂಡ್ರಾ ಸಂಜನಾ ಗಲ್ರಾನಿ?

    ನಾನು ನ್ಯೂ ಇಯರ್ ಸೆಲೆಬ್ರೇಷನ್ ಗೆ ಅಂತ ಕೇರಳಕ್ಕೆ ಬಂದಿದ್ದೇನೆ. ಆದರೆ ಈ ಗಲಾಟೆ ಹಿನ್ನೆಲೆಯಲ್ಲಿ ಈಗ ಬೆಂಗಳೂರಿಗೆ ವಾಪಾಸ್ ಆಗ್ತೀನಿ ಬಂದ ನಂತರ ಮಾಧ್ಯಮಗಳಿಗೆ ಸಂಪೂರ್ಣ ಮಾಹಿತಿ ಕೊಡುತ್ತೇನೆ ಎಂದು ಹೇಳಿದರು.

  • ಗಲಾಟೆಯಾಗಿಲ್ಲ, ಸಾಕ್ಷಿಗೆ ನನ್ನ ಬಳಿ ವಿಡಿಯೋ ಇದೆ: ಸಂಜನಾ ಸ್ಪಷ್ಟನೆ

    ಗಲಾಟೆಯಾಗಿಲ್ಲ, ಸಾಕ್ಷಿಗೆ ನನ್ನ ಬಳಿ ವಿಡಿಯೋ ಇದೆ: ಸಂಜನಾ ಸ್ಪಷ್ಟನೆ

    – ನನಗೆ ಇಂತಹ ಕೆಟ್ಟ ಪಬ್ಲಿಸಿಟಿ ಬೇಡ

    ಬೆಂಗಳೂರು: ನಗರದ ಸ್ಟಾರ್ ಹೋಟೆಲ್‍ನಲ್ಲಿ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಜೊತೆಗೆ ನಡೆದ ಗಲಾಟೆಯ ವಿಚಾರವನ್ನು ನಟಿ ಸಂಜನಾ ಗಲ್ರಾನಿ ತಳ್ಳಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ನನ್ನ ಹೆಸರು ಹಾಳು ಮಾಡಲು ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ಸ್ಪಷ್ಟನೆ ನೀಡಿರುವ ನಟಿ ಸಂಜನಾ, ಈಗ ರೂಮರ್ಸ್ ಆಗಿರುವುದು ಸುಳ್ಳು. ನಾನು ಹಾಗೂ ನನ್ನ ಗೆಳತಿ ವಂದನಾ ಜೈನ್ ಮಧ್ಯೆ ಏನೋ ಸಣ್ಣ ಪುಟ್ಟ ಗಲಾಟೆ, ವಾದ ಆಯ್ತು. ಅವರೇನೋ ಜೋಷ್‍ನಲ್ಲಿ ಪೊಲೀಸ್ ಸ್ಟೇಷನ್‍ಗೆ ಹೋದರು. ನಡೆದಿದ್ದು ಅಷ್ಟೇ. ಈ ವೇಳೆ ನನ್ನ ಅಣ್ಣ ಅಲ್ಲೇ ಇದ್ದರು. ಅವರು ಎಲ್ಲವನ್ನೂ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದರು.

    ನನ್ನ ವಿರುದ್ಧ ಯಾರದರು ಏನಾದ್ರೂ ಮಾತನಾಡಿದರೆ ಆ ವಿಡಿಯೋ ಸೇಫ್ಟಿಗೆ ಅಂತ ಇದೆ. ಸುಮ್ಮನೆ ಆ ವಿಡಿಯೋವನ್ನು ತೆಗೆದು ಬಿಟ್ಟು, ಈ ಕಥೆಯಲ್ಲಿ ಮಸಾಲ ಹಾಕುವ ಅವಶ್ಯಕತೆ ನನಗಿಲ್ಲ. ಇಂತಹ ಪಬ್ಲಿಸಿಟಿ ನನಗೆ ಬೇಕಾಗಿಲ್ಲ. ನಾನು ನನ್ನ ಮನೆಯಲ್ಲಿ ಆರಾಮಾಗಿ ಇದ್ದೇನೆ ಎಂದು ಹೇಳಿದ್ದಾರೆ.

    ನನ್ನ ಗೆಳತಿ ಹಾಗೂ ನಾನು ಯಾರ ಜೊತೆ ಜಗಳವಾಡಿದ್ದೆವೋ ಅವರು ತಮ್ಮ ಮನೆಯಲ್ಲಿ ಆರಾಮಾಗಿದ್ದಾರೆ. ಕಥೆ ಮುಗಿದು ಹೋಯಿತು. ಈ ಕಥೆಯನ್ನ ಮುಂದುವರಿಸುವುದು ಬೇಡ. ಏನಾಯಿತು, ಯಾಕಾಯ್ತು ಎನ್ನುವ ವಿಚಾರ ಬೇಡ. ನಾವು ಇಬ್ಬರೂ ಸ್ನೇಹಿತೆಯರು, ಸಣ್ಣ-ಪುಟ್ಟ ವಾದ ಮಾಡುತ್ತೇವೆ ಅಷ್ಟೇ. ಅದು ನಮ್ಮ ಮಧ್ಯದಲ್ಲೇ ನಡೆದಿದ್ದು ಅಲ್ವಾ? ಎಲ್ಲವನ್ನೂ ಪಬ್ಲಿಕ್‍ನಲ್ಲಿ ತಂದು ಕೊಡುವುದು, ಬಂದು ಹೇಳುವಂತದ್ದು ಏನಿದೆ ಎಂದು ಪ್ರಶ್ನಿಸಿದರು.

    ನಾವು ಕಲಾವಿದರಾಗಿರುವುದರಿಂದ ನಮಗೆ ವೈಯಕ್ತಿಕ ಜೀವನ ಇಲ್ವಾ? ಸಮಾಜ ಕಾಳಜಿ ನಮಗೂ ಇದೆ. ಹೀಗಾಗಿ ನಾವು ಈ ವಿಷಯದಲ್ಲಿ ಇಲ್ಲ. ನಾವಿಬ್ಬರು ಆರಾಮಾಗಿ, ಖುಷಿಯಿಂದಲೇ ಇದ್ದೇವೆ. ನನಗೆ ಇಂತಹ ಕೆಟ್ಟ ಪಬ್ಲಿಸಿಟಿ ಬೇಡ. ದಯವಿಟ್ಟು ಇದರಿಂದ ನನ್ನನ್ನು ಆಚೆ ಇಡಿ ಎಂದು ಸಂಜನಾ ಹೇಳಿದರು.

    ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟಿ ಸಂಜನಾ, ದೂರು ದಾಖಲಾಗಿರುವ ಪ್ರತಿಯನ್ನು ನನಗೆ ಕೊಡಿ. ನನ್ನ ಹೆಸರು ಕೆಡಿಸಲು ಹೀಗೆ ಮಾಡುತ್ತಿದ್ದಾರೆ. ರೂಮರ್ಸ್ ಹರಬೇಡಿ, ನನ್ನ ಹಾಗೂ ವಂದನಾ ಜೈನ್ ಮಧ್ಯೆ ವಾದ ಆಗಿದೆ. ಆದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೆ. ಎಫ್‍ಐಆರ್ ಪ್ರತಿ ತೋರಿಸಲಿ ಎಂದು ಅಸಮಾಧಾನ ಹೊರ ಹಾಕಿದರು.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಚೇತನ್ ಸಿಂಗ್ ಅವರು, ಸಂಜನಾ ಅವರು ಸ್ನೇಹಿತೆ ವಂದನಾ ಜೈನ್ ಜೊತೆಗೆ ಡಿಸೆಂಬರ್ 24ರಂದು ರಾತ್ರಿ ಹಳೇ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಸಂಜನಾ ಅಸಭ್ಯವಾಗಿ ವರ್ತಿಸಿದ್ದಾರೆ ಹಾಗೂ ಗಲಾಟೆ ಮಾಡಿ ಮಾಡಿದ್ದಾರೆ ಎಂದು ವಂದನಾ ಜೈನ್ ಹೇಳಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ. ಕೋರ್ಟ್ ನಿಂದ   ತನಿಖೆಗೆ ಆದೇಶ ಬಂದರೆ ತನಿಖೆ ಮುಂದುವರಿಸುತ್ತೇವೆ ಎಂದರು.

    ಹೋಟೆಲಿನಲ್ಲಿ ಏನಾಯ್ತು? 
    ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಅವರಿಗೆ ಬೆಂಗಳೂರು ಅಂದರೆ ಬಹಳ ಇಷ್ಟ. ಹೀಗಾಗಿ ಬೆಂಗಳೂರಿನಲ್ಲಿಯೇ ಕಾಲ ಕಳೆಯುತ್ತಿದ್ದ ಅವರಿಗೆ ಸ್ಯಾಂಡಲ್‍ವುಡ್ ನಟಿ ಸಂಜನಾ ಜೊತೆ ಸ್ನೇಹವಾಗಿದೆ. ಹೀಗೆ ಇಬ್ಬರೂ ಸ್ಟಾರ್ ಹೋಟೆಲ್‍ನಲ್ಲಿ ಪಾರ್ಟಿ ಮಾಡುತ್ತಿದ್ದರು. ಒಂದೇ ಟೇಬಲ್‍ನಲ್ಲಿ ಕುಳಿತು ಕುಡಿಯುತ್ತಾ ಇದ್ದ ಇಬ್ಬರ ಮಧ್ಯೆ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಮಾತು ಅತಿರೇಕಕ್ಕೆ ಹೋಗಿದ್ದೇ ತಡ, ಇಬ್ಬರೂ ಪರಸ್ಪರ ಕೆಟ್ಟ ಮಾತುಗಳಿಂದ ಬೈದುಕೊಂಡರು.

    ಈ ವೇಳೆ ಸಿಟ್ಟಿಗೆದ್ದ ಸಂಜನಾ ಅವರು ವಂದನಾರಿಗೆ ಹೊಡೆಯಲು ಮುಂದಾಗಿದ್ದು, ತನ್ನ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ವಂದನಾ ಮೇಲೆ ಬಿಸಾಕಿದ್ದಾರೆ. ನಟಿ ಬಿಸಾಡಿದ ವೇಗಕ್ಕೆ ಗ್ಲಾಸ್ ನಿರ್ಮಾಪಕಿಯ ಹಣೆಗೆ ಬಂದು ಬಡಿದಿದೆ. ಇದಾದ ಬಳಿಕ ನಿರ್ಮಾಪಕಿಯು ನಟಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ನಿರ್ಮಾಪಕಿ ಗರಂ ಆಗಿದ್ದನ್ನು ಕಂಡ ಸಂಜನಾ ಫುಲ್ ಸೈಲೆಂಟ್ ಆಗಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ರಾಜಿ ಪಂಚಾಯ್ತಿ ಮಾಡಿಸಿಕೊಂಡರು.

  • ಎಣ್ಣೆ ಕಿಕ್‍ನಲ್ಲಿ ಗಲಾಟೆ ಮಾಡ್ಕೊಂಡ್ರಾ ಸಂಜನಾ ಗಲ್ರಾನಿ?

    ಎಣ್ಣೆ ಕಿಕ್‍ನಲ್ಲಿ ಗಲಾಟೆ ಮಾಡ್ಕೊಂಡ್ರಾ ಸಂಜನಾ ಗಲ್ರಾನಿ?

    ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಗಲಾಟೆ ಮಾಡಿಕೊಂಡ್ರಾ ಎಂಬ ಪ್ರಶ್ನೆಯೊಂದು ಎದ್ದಿದೆ.

    ಹೌದು. ನಗರದ ಸ್ಟಾರ್ ಹೋಟೆಲ್‍ನಲ್ಲಿ ನಟಿ ಸಂಜನಾ ಗಲ್ರಾನಿ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಮಧ್ಯೆ ಜಗಳವಾಗಿದ್ದು, ಗಲಾಟೆ ತಾರಕಕ್ಕೇರಿ ಸಂಜನಾ ನಿರ್ಮಾಪಕಿ ಮೇಲೆ ಗ್ಲಾಸ್ ನಿಂದ ಹೊಡೆದಿದ್ದಾರೆ. ಈ ಸಂಬಂಧ ನಿರ್ಮಾಪಕಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಬಳಿಕ ರಾಜಿ ಪಂಚಾಯ್ತಿ ಮಾಡಿಕೊಂಡು ಕೇಸನ್ನು ಹಿಂಪಡೆದುಕೊಂಡಿದ್ದಾರೆ.

    ಹೋಟೆಲಿನಲ್ಲಿ ಏನಾಯ್ತು?
    ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಅವರಿಗೆ ಬೆಂಗಳೂರು ಅಂದರೆ ಬಹಳ ಇಷ್ಟ. ಹೀಗಾಗಿ ಬೆಂಗಳೂರಿನಲ್ಲಿಯೇ ಕಾಲ ಕಳೆಯುತ್ತಿದ್ದ ಅವರಿಗೆ ಸ್ಯಾಂಡಲ್‍ವುಡ್ ನಟಿ ಸಂಜನಾ ಜೊತೆ ಸ್ನೇಹವಾಗಿದೆ. ಹೀಗೆ ಇಬ್ಬರೂ ಸ್ಟಾರ್ ಹೋಟೆಲ್‍ನಲ್ಲಿ ಪಾರ್ಟಿ ಮಾಡುತ್ತಿದ್ದರು. ಒಂದೇ ಟೇಬಲ್‍ನಲ್ಲಿ ಕುಳಿತು ಕುಡಿಯುತ್ತಾ ಇದ್ದ ಇಬ್ಬರ ಮಧ್ಯೆ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಮಾತು ಅತಿರೇಕಕ್ಕೆ ಹೋಗಿದ್ದೇ ತಡ, ಇಬ್ಬರೂ ಪರಸ್ಪರ ಕೆಟ್ಟ ಮಾತುಗಳಿಂದ ಬೈದುಕೊಂಡರು.

    ಈ ವೇಳೆ ಸಿಟ್ಟಿಗೆದ್ದ ಸಂಜನಾ ಅವರು ವಂದನಾರಿಗೆ ಹೊಡೆಯಲು ಮುಂದಾಗಿದ್ದು, ತನ್ನ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ವಂದನಾ ಮೇಲೆ ಬಿಸಾಕಿದ್ದಾರೆ. ನಟಿ ಬಿಸಾಡಿದ ವೇಗಕ್ಕೆ ಗ್ಲಾಸ್ ನಿರ್ಮಾಪಕಿಯ ಹಣೆಗೆ ಬಂದು ಬಡಿದಿದೆ. ಇದಾದ ಬಳಿಕ ನಿರ್ಮಾಪಕಿಯು ನಟಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ನಿರ್ಮಾಪಕಿ ಗರಂ ಆಗಿದ್ದನ್ನು ಕಂಡ ಸಂಜನಾ ಫುಲ್ ಸೈಲೆಂಟ್ ಆಗಿದ್ದು, ಪೊಲೀಸ್ ಠಾಣೆಗೆ ಹೋಗಿ ರಾಜಿ ಪಂಚಾಯ್ತಿ ಮಾಡಿಸಿಕೊಂಡಿದ್ದಾರೆ.