Tag: ವಂದನಾ

  • ಸಂಜನಾ ವಿರುದ್ಧ 4 ಕೋಟಿ ರೂ. ಮಾನನಷ್ಟ ಮೊಕದ್ದಮೆ

    ಸಂಜನಾ ವಿರುದ್ಧ 4 ಕೋಟಿ ರೂ. ಮಾನನಷ್ಟ ಮೊಕದ್ದಮೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಮತ್ತು ಬಾಲಿವುಡ್ ನಿರ್ಮಾಪಕಿ ವಂದನಾ ಗಲಾಟೆ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಇದೀಗ ವಂದನಾ 4 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಸಂಜನಾ ವಿರುದ್ಧ ದಾಖಲು ಮಾಡಿದ್ದಾರೆ.

    ಸಂಜನಾ ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ. ಆವತ್ತು ಅವರು ಮಾಡಿದ ಗಲಾಟೆಯಿಂದ ನನ್ನ ಕಣ್ಣಿನ ಮೇಲೆ ಗಾಯವಾಗಿದೆ. ಅದಕ್ಕೆ ಸಂಬಂಧಿಸಿದಂತೆ ನಾನು ದೂರು ನೀಡಿದ್ದೀನಿ. ದೂರಿನ ಬಗ್ಗೆ ಸುದ್ದಿ ಪ್ರಸಾರವಾದಾಗ ಸಂಜನಾ ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ. ನನ್ನ ವೈಯಕ್ತಿಕ ವಿಚಾರಗಳನ್ನೆಲ್ಲ ಸಾರ್ವಜನಿಕವಾಗಿ ಬಹಿರಂಗವಾಗಿ ಮಾತನಾಡಿದ್ದಾರೆ. ಇದರಿಂದ ನನಗೆ ಅವಮಾನವನ್ನೂ ಮಾಡಿದ್ದಾರೆ ಎಂದು ನಾಲ್ಕು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದನ್ನೂ ಓದಿ:  ಅವಳು ಮಾಡಿದ್ದು ಮಾಡಲಿ, ನಾನು ಅವಳಷ್ಟು ಚೀಪ್ ಅಲ್ಲ: ವಂದನಾ ಜೈನ್

    ಅಷ್ಟೇ ಅಲ್ಲದೆ ಸಂಜನಾಗೆ ಲೀಗಲ್ ನೋಟಿಸ್ ಸಹ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಸಂಜನಾ ಮಾಡಿದ ಆರೋಪಗಳಿಗೆ ವಂದನಾ ಉತ್ತರವನ್ನು ನೀಡಿದ್ದಾರೆ. 8 ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿರುವ ವಂದನಾ, ಸಂಜನಾ ಆರೋಪಗಳಿಗೆಲ್ಲ ಪ್ರತ್ಯುತ್ತರವನ್ನು ನೀಡಿದ್ದಾರೆ. ಇದನ್ನೂ ಓದಿ: ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

    ಏನಿದು ಪ್ರಕರಣ?
    ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಮತ್ತು ಸ್ಯಾಂಡಲ್‍ವುಡ್ ನಟಿ ಸಂಜನಾ ಇಬ್ಬರು ಸ್ನೇಹಿತರಾಗಿದ್ದರು. ಹೀಗೆ ಇಬ್ಬರೂ ಸ್ಟಾರ್ ಹೋಟೆಲಿನಲ್ಲಿ ಪಾರ್ಟಿ ಮಾಡುತ್ತಿದ್ದರು. ಒಂದೇ ಟೇಬಲ್‍ನಲ್ಲಿ ಕುಳಿತು ಕುಡಿಯುತ್ತಾ ಇದ್ದ ಇಬ್ಬರ ಮಧ್ಯೆ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಮಾತು ಅತಿರೇಕಕ್ಕೆ ಹೋಗಿದ್ದೇ ತಡ, ಇಬ್ಬರೂ ಪರಸ್ಪರ ಕೆಟ್ಟ ಮಾತುಗಳಿಂದ ಬೈದುಕೊಂಡಿದ್ದಾರೆ.

    ಈ ವೇಳೆ ಸಿಟ್ಟಿಗೆದ್ದ ಸಂಜನಾ ಅವರು ವಂದನಾರಿಗೆ ಹೊಡೆಯಲು ಮುಂದಾಗಿದ್ದು, ತನ್ನ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ವಂದನಾ ಮೇಲೆ ಬಿಸಾಕಿದ್ದಾರೆ. ನಟಿ ಬಿಸಾಡಿದ ವೇಗಕ್ಕೆ ಗ್ಲಾಸ್ ನಿರ್ಮಾಪಕಿಯ ಹಣೆಗೆ ಬಂದು ಬಡಿದಿದೆ. ಇದಾದ ಬಳಿಕ ನಿರ್ಮಾಪಕಿಯು ನಟಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಳಿಕ ರಾಜಿ ಪಂಚಾಯ್ತಿ ಮಾಡಿಕೊಂಡು ಕೇಸನ್ನು ಹಿಂಪಡೆದುಕೊಂಡಿದ್ದಾರೆ.

  • ಜಡೆ ಜಗಳಕ್ಕೆ ಬ್ರೇಕ್ – ಸಂಜನಾ, ವಂದನಾ ಫುಲ್ ಸೈಲೆಂಟ್

    ಜಡೆ ಜಗಳಕ್ಕೆ ಬ್ರೇಕ್ – ಸಂಜನಾ, ವಂದನಾ ಫುಲ್ ಸೈಲೆಂಟ್

    ಬೆಂಗಳೂರು: ನಟಿ ಸಂಜನಾ ಮತ್ತು ನಿರ್ಮಾಪಕಿ ವಂದನಾ ಇಬ್ಬರು ಕೂಡ ಪಬ್ ಒಂದರಲ್ಲಿ ಕುಡಿದು ಪರಸ್ಪರ ಕಿತ್ತಾಡಿಕೊಂಡಿದ್ದರು. ಒಬ್ಬರ ನಡೆತೆ ಮೇಲೆ ಮತ್ತೊಬ್ಬರು ಆರೋಪವನ್ನು ಮಾಡಿಕೊಂಡಿದ್ದರು. ಆದರೆ ಈಗ ಆ ಜಗಳಕ್ಕೆ ಇಬ್ಬರು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.

    ಯುಬಿ ಸಿಟಿ ಬಳಿಯ ಪಬ್ ಒಂದರಲ್ಲಿ ಸ್ಯಾಂಡಲ್‍ವುಡ್ ನಟಿ ಸಂಜನಾ, ನಿರ್ಮಾಪಕಿ ವಂದನಾ ಮೇಲೆ ವಿಸ್ಕಿ ಗ್ಲಾಸ್ ಅನ್ನು ಬಿಸಾಡಿದ್ದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ಸಂಜನಾ ಕೂಡ ವಂದನಾ ಮೇಲೆ ದೂರು ನೀಡಿದ್ದರು.  ಇದನ್ನು ಓದಿ: ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ?

    ಇಬ್ಬರು ಜಿದ್ದಿಗೆ ನಿಂತವರಂತೆ ಇದ್ದರೂ ಕೊನೆಗೆ ಪ್ರಕರಣದಿಂದ ಇಬ್ಬರೂ ಹಿಂದೆ ಸರಿಯುತ್ತಿದ್ದಾರೆ. ಸಂಜನಾ ದೂರು ನೀಡಿದ ಕೆಲವೇ ಗಂಟೆಗಳಲ್ಲಿ ತಮ್ಮ ಟ್ವಿಟ್ಟರ್ ಅಕೌಂಟ್‍ನಲ್ಲಿ ನಾನು ಪ್ರಕರಣಕ್ಕೆ ಇತ್ಯರ್ಥ ಹಾಡುತ್ತೇನೆ ಎಂದಿದ್ದರು. ಬಳಿಕ ವಂದನಾ ಕೂಡ ಸುದ್ದಿಗೋಷ್ಟಿ ನಡೆಸುತ್ತೇನೆ. ಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಹೇಳಿ ಈಗ ಸೈಲೆಂಟ್ ಆಗಿದ್ದಾರೆ.

    ಇಬ್ಬರೂ ಬಾಟಲಿಯಲ್ಲಿ ಬಡಿದಾಡಿಕೊಂಡು ಈಗ ಫುಲ್ ಸೈಲೆಂಟ್ ಆಗಿದ್ದಾರೆ. ಸದ್ಯಕ್ಕೆ ಜಡೆ ಜಗಳಕ್ಕೆ ಬ್ರೇಕ್ ಬಿದ್ದಿದೆ.